ಅನಂತಕುಮಾರ್ ನಮಗೆ ಮಾರ್ಗದರ್ಶಕರಾಗಿದ್ದರು: ಶ್ರೀಕಾಂತ ಕುಲಕರ್ಣಿ

ಅನಂತಕುಮಾರ್ ನಮಗೆ ಮಾರ್ಗದರ್ಶಕರಾಗಿದ್ದರು: ಶ್ರೀಕಾಂತ ಕುಲಕರ್ಣಿ

ಜಮಖಂಡಿ: ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನಕ್ಕೆ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಅನಂತಕುಮಾರ್ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರು ನಮಗೆಲ್ಲ ಮಾರ್ಗದರ್ಶಕರಾಗಿದ್ದರು ಎಂದು ಹೇಳಿದರು. ನಗರದ ಎಪಿಎಂಸಿ ಮಂಗಲ ಕಾರ್ಯಾಲಯದಲ್ಲಿ ಇಂದು ಮಧ್ಯಾಹ್ನ 3 ಘಂಟೆಗೆ ಸಾರ್ವಜನಿಕ ಶ್ರಧ್ಧಾಂಜಲಿ ಸಭೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಆದರ್ಶ ರೂಗಿಮಠ, ಅಜಯ್ ಕಡಪಟ್ಟಿ, ಪ್ರವೀಣ ಕಲ್ಯಾಣಿ, ನಾಗರಾಜ ತಂಗಡಗಿ ಸೇರಿ ಬಿಜೆಪಿಯ ಕಾರ್ಯಕರ್ತರು ಇದ್ದರು.

ಗ್ರಾಪಂ ಕಂಪ್ಯೂಟರ್ ಆಪರೇಟರ್ ಮೇಲೆ ಹಲ್ಲೆ: ಪ್ರಕರಣ ದಾಖಲು

ಗ್ರಾಪಂ ಕಂಪ್ಯೂಟರ್ ಆಪರೇಟರ್ ಮೇಲೆ ಹಲ್ಲೆ: ಪ್ರಕರಣ ದಾಖಲು

ಸುರಪುರ: ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳ ತಾಂತ್ರಿಕ ಕೆಲಸ ಮಾಡಿಕೊಡುವಂತೆ ಒತ್ತಾಯಿಸಿ  ಕಂಪ್ಯೂಟರ್ ಆಪರೇಟರ್ ಅಬ್ದುಲ್ ಕರೀಂ ಎಂಬುವವರ ಮೇಲೆ ಮೂವರು  ಹಲ್ಲೆ ನಡೆಸಿ ಕೈ ಮುರಿದಿರುವ ಘಟನೆ ತಾಲೂಕಿನ ಅಮ್ಮಾಪುರ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಶನಿವಾರ ಬೆಳಗ್ಗೆ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯ ನಂತರ ಮನೆಗೆ ಹೋದಾಗ ನನಗೆ ನಮ್ಮ ಪಿಡಿಒ ಕರೆ ಮಾಡಿ ಶೌಚಾಲಯವೊಂದರೆ ಬಿಲ್ ಮಾಡಲು ಅಧ್ಯಕ್ಷರಿಂದ ಕಡತಕ್ಕೆ ಸಹಿ ಮಾಡಿಸಿಕೊಂಡು ಬರಲು ಹೇಳಿದ್ದರು. ಮಲ್ಲು ಅದ್ದಗಲ್, ನರಸಪ್ಪ ಮತ್ತು ಮಾನಪ್ಪ ಯಳವಾರ ಎಂಬ […]

ಕ.ಸಾ.ಪ ಮೂಡಲಗಿ ತಾಲೂಕಾ ಅಧ್ಯಕ್ಷರಾಗಿ ಸಿದ್ರಾಮ ದ್ಯಾಗಾನಟ್ಟಿ ನೇಮಕ

ಕ.ಸಾ.ಪ ಮೂಡಲಗಿ ತಾಲೂಕಾ ಅಧ್ಯಕ್ಷರಾಗಿ ಸಿದ್ರಾಮ ದ್ಯಾಗಾನಟ್ಟಿ ನೇಮಕ

ಮೂಡಲಗಿ : ನೂತನ ಮೂಡಲಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನಾಗಿ ಸಾಹಿತಿ ಶ್ರೀ ಸಿದ್ರಾಮ ದ್ಯಾಗಾನಟ್ಟಿಯವರನ್ನು,ಬೆಳಗಾವಿ ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಮೂಡಲಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸಿದ್ರಾಮ ದ್ಯಾಗಾನಟ್ಟಿಯವರು ನೂತನ ತಾಲೂಕಾಕ.ಸಾ.ಪ ಕಾರ್ಯಕಾರಿಣಿ ಸದಸ್ಯರನ್ನು ಕೆಳಗಿನಂತೆ ನೇಮಕ ಮಾಡಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪದಾಧಿಕಾರಿಗಳು :-ಪೂಜ್ಯ ಶ್ರೀ ಶ್ರೀ ಶ್ರೀಪಾದಬೋಧಸ್ವಾಮಿಗಳು ಗೌರವಾಧ್ಯಕ್ಷರು, ಮುರಗೇಶ ಬ. ಗಾಡವಿ ಕೋಶಾಧ್ಯಕ್ಷರು, ಬಸವರಾಜ ಪ. […]

ಜಮಖಂಡಿ ಉಪ ಚುನಾವಣೆ: 1 ನಾಮಪತ್ರ ತಿರಸ್ಕೃತ, 7 ಅಭ್ಯರ್ಥಿಗಳು ಕಣದಲ್ಲಿ

ಜಮಖಂಡಿ ಉಪ ಚುನಾವಣೆ: 1 ನಾಮಪತ್ರ ತಿರಸ್ಕೃತ, 7 ಅಭ್ಯರ್ಥಿಗಳು ಕಣದಲ್ಲಿ

ಜಮಖಂಡಿ: ಜಮಖಂಡಿ ಉಪ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿದ್ದರಿಂದ ಒಂದು ನಾಮಪತ್ರ ತಿರಸ್ಕೃತಗೊಂಡಿದ್ದು, ಅಂತಿಮವಾಗಿ 7 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. 2 ನಾಮಪತ್ರಗಳು ವಾಪಸ್ಸಾತಿಯಾಗಿದ್ದು, ಒಂದು ನಾಮಪತ್ರ ತಿರಸ್ಕೃತವಾಗಿದೆ. ಬಿಜೆಪಿಯಿಂದ ಶ್ರೀಕಾಂತ ಕುಲಕರ್ಣಿ, ಕಾಂಗ್ರೆಸನಿಂದ ಆನಂದ ನ್ಯಾಮಗೌಡ, ಪ್ರಜಾ ಪರಿವರ್ತನಾ ಪಾರ್ಟಿಯಿಂದ ಪರಶುರಾಮ ಮಹಾರಾಜನವರ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕದಿಂದ ಯಮನಪ್ಪ ಗುಣದಾಳ, ಪಕ್ಷೇತರರಾಗಿ ಸಂಗಮೇಶ ಚಿಕ್ಕನರಗುಂದ, ಮುಸ್ತಫಾ ಜಾಗೀರದಾರ, ಅಮರೋಜ ಡಿ ಮೆಲೊ, ರವಿ ಶಿವಪ್ಪ ಪಡಸಲಗಿಕಣದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಜೆ. […]

ಸಿಡಿಲು ಬಡಿದು ಮೃತ ಕುಟುಂಬಕ್ಕೆ ಪರಿಹಾರ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಸಿಡಿಲು ಬಡಿದು ಮೃತ ಕುಟುಂಬಕ್ಕೆ ಪರಿಹಾರ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಕಳೆದ ದಿ.16 ರಂದು ಸಂಜೆ ಸುರಿದ ಭಾರಿ ಗುಡುಗು ಸಿಡಿಲಿನ ಮಳೆಯಿಂದ ಸಿಡಿಲು ಬಡಿದು ಮೃತಪಟ್ಟ ತಾಲೂಕಿನ ತಪಸಿ ಗ್ರಾಮದ ವಾರೆಪ್ಪ ನಾಗಪ್ಪ ಕಟ್ಟಿಕಾರ ಹಾಗೂ ಬಿಲಕುಂದಿ ಗ್ರಾಮದ ಶೋಭಾ ಅವ್ವಣ್ಣಾ ಕಳ್ಳಿಗುದ್ದಿ ಅವರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ.ಗಳ ಪರಿಹಾರ ಧನವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿತರಿಸಿದರು. ನಂತರ ಮಾತನಾಡಿದ ಅವರು, ಮೃತಪಟ್ಟ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಸಿಡಿಲು ಬಡಿದು ಮೃತಪಟ್ಟ ಕುಟುಂಬಗಳಿಗೆ ಒಟ್ಟು 10 ಲಕ್ಷ ರೂ.ಗಳು […]

ಸದೃಡ ಆರೋಗ್ಯಕ್ಕೆ ಸ್ವಚ್ಚತೆ ಬಹುಮುಖ್ಯ-ಸುಜಾತಾ ಹಿರೇಮಠ

ಸದೃಡ ಆರೋಗ್ಯಕ್ಕೆ ಸ್ವಚ್ಚತೆ ಬಹುಮುಖ್ಯ-ಸುಜಾತಾ ಹಿರೇಮಠ

ಬೈಲಹೊಂಗಲ: ನಮ್ಮ ಮನೆಯ ಪರಿಸರವನ್ನು ಹೇಗೆ ಸ್ವಚ್ಚವಾಗಿ ಇಟ್ಟುಕೊಳ್ಳುತ್ತೇವೆ ಅದೇ ರೀತಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಚತೆಯಿಂದ ಕಂಡಾಗ ಮಾತ್ರ ಸದೃಡ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವೆಂದು ಕಲ್ಪವೃಕ್ಷ ಮಾದರಿ ಶಾಲೆಯ ಸಂಚಾಲಕಿ ಸುಜಾತಾ ಹಿರೇಮಠ ಹೇಳಿದರು. ಶನಿವಾರ ಪಟ್ಟಣದಲ್ಲಿ ಕಲ್ಪವೃಕ್ಷ ಮಾದರಿ ಶಾಲೆಯ ವಿದ್ಯಾರ್ಥಿಗಳು ಪೊರಕೆ ಹಿಡಿದು ಸ್ವಚ್ಚತೆಯಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಅವರು ಸಾರ್ವಜನಿಕ ಸ್ಥಳಗಳಲ್ಲಿ ಮನೋ ಇಚ್ಚೆವಾಗಿ ಕಸ ಕಡ್ಡಿ ಚೆಲ್ಲುವದರಿಂದ ರೋಗರುಜೀನಗಳ ತಾಣವಾಗಿ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ದುಡಿದ ಹಣವನ್ನು ಆಸ್ಪತ್ರೆಗೆ […]

ಋಷಿ ಮುನಿಗಳು ಆಯುರ್ವೇದಿಕ ಪದ್ದತಿಯನ್ನು ಮೈಗೂಡಿಸಿಕೊಂಡಿದ್ದರು-ಬಾಬಾಸಾಹೇಬ ಪಾಟೀಲ

ಋಷಿ ಮುನಿಗಳು ಆಯುರ್ವೇದಿಕ ಪದ್ದತಿಯನ್ನು ಮೈಗೂಡಿಸಿಕೊಂಡಿದ್ದರು-ಬಾಬಾಸಾಹೇಬ ಪಾಟೀಲ

ಬೈಲಹೊಂಗಲ: ಪುರಾತನ ಕಾಲದಲ್ಲಿ ಋಷಿ ಮುನಿಗಳು ಆಯುರ್ವೇದಿಕ ಪದ್ದತಿಯನ್ನು ಮೈಗೂಡಿಸಿಕೊಂಡಿದ್ದರಿಂದ ನೂರಾರು ವರ್ಷಗಳ ಕಾಲ ಬದಕುತ್ತಿದ್ದರು ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಆಯುರ್ವೇದಿಕ ಔಷಧಿ ಬಳಕೆ ಮಾಡುವದು ಇಂದು ಅತ್ಯವಶ್ಯವಾಗಿದೆ ಎಂದು ಮಾಜಿ ಜಿಪಂ ಸದಸ್ಯ ಬಾಬಾಸಾಹೇಬ ಪಾಟೀಲ ಹೇಳಿದರು. ಶನಿವಾರ ತಾಲೂಕಿನ ನೇಗಿನಹಾಳ ಗ್ರಾಮದ ಗ್ರಾಮ ಪಂಚಾಯತ್ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಆಯುರ್ವೇಧಿಕ, ಹೋಮಿಯೋಪಥಿಕ, ಅಲೋಪಥಿಕ ಪದ್ದತಿಗಳು ತನ್ನದೇ ಆದ ವೈಶಿಷ್ಟ್ಯವನ್ನು ಮೆರೆದಿದ್ದು ಜನಸಾಮಾನ್ಯರ ಔಷಧಿಯ ವಿಧಾನಗಳಲ್ಲಿಯೂ […]

ಎಪಿಎಂಸಿ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆ: ಯಾವುದೇ ಗೊಂದಲ ಇಲ್ಲ ಎಂದ ಸಚಿವ ಜಾರಕಿಹೊಳಿ !

ಎಪಿಎಂಸಿ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆ: ಯಾವುದೇ ಗೊಂದಲ ಇಲ್ಲ ಎಂದ ಸಚಿವ ಜಾರಕಿಹೊಳಿ !

ಬೆಳಗಾವಿ-: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯ ಅಧ್ಯಕ್ಷ -ಉಪಾಧ್ಯಕ್ಷರ ಚುನಾವಣೆಯಲ್ಲಿ ಪಿಎಲ್ ಡಿ ಬ್ಯಾಂಕಿನ ವಿಷಯದಲ್ಲಿ ಆದಂತಹ ತಪ್ಪು ನಿರ್ಣಯ ಆಗುವುದಿಲ್ಲ ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಅಕ್ಟೋಬರ್ 15 ರಂದು ನಡೆಯಲಿರುವ ಎಪಿಎಂಸಿ ಅಧ್ಯಕ್ಷ -ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರೂ ಆಗಿರುವ ರಮೇಶ ಜಾರಕಿಹೊಳಿ ಇಲ್ಲಿನ ಸರ್ಕೀಟ್ ಹೌಸ್ ನಲ್ಲಿ ಸದಸ್ಯರ ಮಹತ್ವದ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ , ಎಂ.ಇ.ಎಸ್. ಹಾಗೂ ಇತರೆ ಸದಸ್ಯರು ಉತ್ತಮ ನಿರ್ಧಾರ […]

ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುವೆ ಬಸವಂತರೆಡ್ಡಿ ಸಾಹು

ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುವೆ ಬಸವಂತರೆಡ್ಡಿ ಸಾಹು

ಶಹಾಪುರ: ಶಹಾಪುರ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುವ ಅದಕ್ಕಾಗಿ ತಾವೆಲ್ಲರೂ ಸಹಕಾರ ನೀಡಬೇಕೆಂದು ನೂತನವಾಗಿ ಆಯ್ಕೆಯಾದ ಶಹಾಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಬಸವಂತರೆಡ್ಡಿ ಸಾಹು ಹೇಳಿದರು. ಸ್ವಗ್ರಾಮವಾದ ಹತ್ತಿಗೂಡೂರು ಗ್ರಾಮದಲ್ಲಿ ಕಲಾನಿಕೇತನ ಟ್ರಸ್ಟ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮಾಜಿ ಶಾಸಕರಾದ ಸಾವೂರು ಶಿವಣ್ಣನವರ ಮೊಮ್ಮಗನಾದ ನಾನು ಅವರ ಗೌರವಕ್ಕೆ ಧಕ್ಕೆ ಬಾರದಂತೆ ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂಬ ಹಂಬಲ ನನ್ನಲ್ಲಿದೆ. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ನೀಡಿ ಜವಾಬ್ದಾರಿಯನ್ನು ಹೆಚ್ಚಿಸಿರುವ ನನ್ನ ಎಲ್ಲ […]

ವಚನ ಸಾಹಿತ್ಯ ಬದುಕಿನ ಬೆಳಕು

ವಚನ ಸಾಹಿತ್ಯ ಬದುಕಿನ ಬೆಳಕು

ಸತ್ಯ ಚರಿತೆ ರಚನೆಯಲ್ಲಿ.. ವಚನಜ್ಯೋತಿ ಯಾತ್ರೆ ಸಮಾರೋಪ ಸಮಾರಂಭ ಕಲಬುರಗಿ: ವಚನ ನಮ್ಮೆಲ್ಲರ ಬದುಕಿನ ಬೆಳಕು. ಕಲ್ಯಾಣದ ಅಂಗಳದಲ್ಲಿ ಶರಣರ ಬದುಕಿನ ಅನುಭಾವದ ಮೂಸೆಯಿಂದ ಒಡಮೂಡಿದ ವಚನಗಳನ್ನು ಪಚನ ಮಾಡಿಕೊಂಡಲ್ಲಿ ಬದುಕು ಸುಂದರವಾದ ಜೇನುಗೂಡು ಆಗಬಲ್ಲುದು ಎಂದು ಬೆಂಗಳೂರು ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ  ಹೇಳಿದರು. ನಗರದ ಶ್ರೀಗುರು ನಾಗಲಿಂಗೇಶ್ವರ ಪದವಿಪೂರ್ವ ಕಾಲೇಜಿನಲ್ಲಿ  ರವಿವಾರ ನಡೆದ ಶರಣ ಲಿಂಗಣ್ಣ ಸತ್ಯಂಪೇಟೆ ಹಾಗೂ ಸಿದ್ರಾಮಪ್ಪ ಬಾಲಪ್ಪಗೋಳ್ ಸ್ಮರಣಾರ್ಥ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ತಿಂಗಳ ಪರ್ಯಂತ ಹಮ್ಮಿಕೊಂಡಿದ್ದ ಸತ್ಯ […]