ಅಲೆಮಾರಿ ಕುಟುಂಬಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ಅಲೆಮಾರಿ ಕುಟುಂಬಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ಶಿವಮೊಗ್ಗ: ನಗರದ ಸಹ್ಯಾದ್ರಿ ಕಾಲೇಜು ಸಮೀಪ ಬೈಪಾಸ್ ರಸ್ತೆ ಪಕ್ಕದ ಖಾಲಿ ಜಾಗದಲ್ಲಿ ಕಳೆದ ಹಲವು ವರ್ಷಗಳಿಂದ ವಾಸವಾಗಿರುವ ಅಲೆಮಾರಿ ಕುಟುಂಬಗಳು ತಮ್ಮನ್ನು ಒಕ್ಕಲೆಬ್ಬಿಸದಂತೆ ಆಗ್ರಹಿಸಿ ಮಂಗಳವಾರದಂದು ನಿರಂತರ ಸಂಸ್ಥೆ ಮತ್ತು ಅಲೆಮಾರಿ ಕುಟುಂಬಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದವು. ಕುವೆಂಪು ವಿಶ್ವವಿದ್ಯಾಲಯದ ಅಧಿಕಾರಿಗಳು ಸದರಿ ಜಾಗದಿಂದ ಖಾಲಿ ಮಾಡುವಂತೆ, ಎಚ್ಚರಿಕೆ ನೀಡುತ್ತಿದ್ದು, ಇದರಿಂದ ಅಲೆಮಾರಿ ಕುಟುಂಬಗಳ ಮಕ್ಕಳ ವಿದ್ಯಾಬ್ಯಾಸ ವಂಚಿತರಾಗಿ ಬೀದಿಪಾಲಾಗಬೇಕಾಗುತ್ತದೆ. ಅಲೆಮಾರಿ ಕುಟುಂಬಗಳಿಗೆ ಬದಲಿ ಸೂರಿನ ವ್ಯವಸ್ಥೆಯಾಗುವತನಕ ಈಗಿರುವ ಜಾಗದಲ್ಲೇ ನೆಲೆಸಲು […]

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ಒದಗಿಸಲು ಒತ್ತಾಯ ಪ್ರತಿಭಟನೆ

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ಒದಗಿಸಲು ಒತ್ತಾಯ ಪ್ರತಿಭಟನೆ

ದಾವಣಗೆರೆ: ಅಲ್ಪಸಂಖ್ಯಾತ ಸಮಾಜದ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ರಾಷ್ಟ್ರೀಯ ವಿದ್ಯಾರ್ಥಿ ವೇತನ ಯೋಜನೆಯಡಿ 2016-17ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ನೂರಾರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ, 9 ತಿಂಗಳು ಕಳೆದರೂ ಈವರೆಗೆ ವಿದ್ಯಾರ್ಥಿ ವೇತನ ದೊರೆತಿಲ್ಲ ಎಂದು ಪದಾಧಿಕಾರಿಗಳು ದೂರಿದರು. ವಿದ್ಯಾರ್ಥಿ ವೇತನಕ್ಕಾಗಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ ನಂತರ ಮೂರು ಹಂತದ ಪರಿಶೀಲನೆ ನಡೆದಿರುವ […]

ಬೆಂಗಳೂರಿನಲ್ಲಿ ಜೂನ್ 23,24,25ರಂದು ಮೂರು ದಿನಗಳ ಅಂತರಾಷ್ಟ್ರೀಯ ವಸ್ತುಪ್ರದರ್ಶನ

ಬೆಂಗಳೂರಿನಲ್ಲಿ ಜೂನ್  23,24,25ರಂದು ಮೂರು ದಿನಗಳ  ಅಂತರಾಷ್ಟ್ರೀಯ ವಸ್ತುಪ್ರದರ್ಶನ

ದಾವಣಗೆರೆ: ಬೆಂಗಳೂರಿನ ನೀಲಕಂಠ ರಸ್ತೆಯ ಕನ್ವೆನ್‍ಷನ್ ಸೆಂಟರ್‍ನಲ್ಲಿ ಫೋಟೋಗ್ರಾಫರ್ ಅಸೋಸಿಯೇಷನ್ ವತಿಯಿಂದ ಜೂನ್ 23,24,25ರಂದು ಮೂರು ದಿನಗಳ ಕಾಲ ಅಂತರಾಷ್ಟ್ರೀಯ ವಸ್ತುಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಫೋಟೋ ಗ್ರಾಫರ್ ಅಸೋಸಿಯೇಷನ್ ಸಂಘದ ಕಾರ್ಯದರ್ಶಿ ಪರಮೇಶ್ವರ್ ತಿಳಿಸಿದರು. ನಗರದ ರೋಟರಿ ಬಾಲಭವನದಲ್ಲಿ ಮಂಗಳವಾರ ಜಿಲ್ಲಾ ಫೋಟೋಗ್ರಾಫರ್ಸ್ ಮತ್ತು ವಿಡಿಯೋ ಗ್ರಾಫರ್ಸ್ ಸಂಘ ಹಾಗೂ ದಾವಣಗೆರೆ ತಾಲೂಕು ವೆಲ್‍ಫೇರ್ ಅಸೋಸಿಯೇಷನ್ ಹಾಗೂ ಕರ್ನಾಟಕ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ 5ನೇ ಅಂತರಾಷ್ಟ್ರೀಯ ವಸ್ತು ಪ್ರದರ್ಶನದ ಕುರಿತು ಪ್ರಚಾರಾಂದೋಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. […]

ಜೀತದಾಳಾಗಿ ದುಡಿಯುತ್ತಿದ್ದ 10 ವರ್ಷದ ಬಾಲಕಿಯ ರಕ್ಷಣೆ

ಜೀತದಾಳಾಗಿ ದುಡಿಯುತ್ತಿದ್ದ 10 ವರ್ಷದ ಬಾಲಕಿಯ ರಕ್ಷಣೆ

ದಾವಣಗೆರೆ : ನಗರದ ಉದ್ಯಮಿಯೊಬ್ಬರ ಮನೆಯಲ್ಲಿ ಜೀತದಾಳಾಗಿ ದುಡಿಯುತ್ತಿದ್ದ 10 ವರ್ಷದ ಬಾಲಕಿಯನ್ನು  ಮತ್ತು  ಚೈಲ್ಡ್ ಲೈನ್  ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಂಗಳವಾರ ರಕ್ಷಿಸಿದ್ದಾರೆ. ನಗರದ ಖಾಸಗಿ ಬಸ್ ನಿಲ್ದಾಣ ಮುಂಭಾಗ ಶಾಂತಿಪಾರ್ಕ್ ಸಮೀಪದ ಮನೆಯೊಂದರಲ್ಲಿ ಚಿಕ್ಕಮಗಳೂರು ಜಿಲ್ಲೆ ಲಂಬಾಣಿ ತಾಂಡದ ಬಾಲಕಿ ಕಾರ್ಮಿಕಳಾಗಿ ದುಡಿಯುತ್ತಿರುವ ಖಚಿತ ಮಾಹಿತಿ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ವಿಜಯಕುಮಾರ್ ಮತ್ತು ಇತರ ಅಧಿಕಾರಿಗಳನ್ನು ಒಳಗೊಂಡ ತಂಡ ಮಂಗಳವಾರ ಮಧ್ಯಾಹ್ನ ಮನೆಯ ಮೇಲೆ ದಾಳಿ ನಡೆಸಿದಾಗ ಬಾಲಕಿ ಬಟ್ಟೆ […]

ಶಾರ್ಟ ಸಕ್ರ್ಯೂಟ್ ನೆಯಲ್ಲಿಯ ವಸ್ತುಗಳ ಭಸ್ಮ

ಶಾರ್ಟ ಸಕ್ರ್ಯೂಟ್ ನೆಯಲ್ಲಿಯ ವಸ್ತುಗಳ ಭಸ್ಮ

ಪಾಂಡವಪುರ : ಶಾರ್ಟ್ ಸಕ್ರ್ಯೂಟ್ ಆದ ಪರಿಣಾಮ ಮನೆಯಲ್ಲಿನ ಬೆಲೆಬಾಳುವ ಟಿ.ವಿ. ಎಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ ಬೆಲೆ ಬಾಳುವ ಬಟ್ಟೆ ಮತ್ತು ಹಾಸಿಗೆಗಳು ಭಸ್ಮವಾದ ಘಟನೆ ಮಂಗಳವಾರ ಇಲ್ಲಿನ ಚಿಕ್ಕ ಮಸೀದಿ ಬೀದಿಯಲ್ಲಿ ನಡೆದಿದೆ. ಪಾಂಡವಪುರ ಪುರಸಭೆಯ ಮಾಜಿ ಸದಸ್ಯೆ ಅನುಸೂಯಮ್ಮ ಅವರ ಮನೆಯ ಮೇಲ್ಬಾಗದ ರೂಮನಲ್ಲಿ ಘಟನೆ ನಡೆದಿದೆ.ಈ ಬೆಂಕಿ ಅವಘಡಿನಲ್ಲಿ ಯಾವುದೆ ಸಾವು-ನೋವು ಸಂಭವಿಸಿಲ್ಲ.ಮೇಲ್ಭಾಗದ ರೂಮಿನಿಂದ ದಟ್ಟವಾದ ಹೊಗೆ ಬರುತ್ತಿದ್ದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಅನುಸೂಯಮ್ಮ ಮನೆಯವರಿಗೆ ವಿಷಯ ತಿಳಿಸಿದರು. ಕೂಡಲೇ ಮನೆಯ ವಿದ್ಯುತ್ […]

ಸಮುದಾಯ ಸಂಘಟನೆ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದ ಸಮಾವೇಶಕ್ಕೆ ನಿರ್ಧಾರ

ಸಮುದಾಯ ಸಂಘಟನೆ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದ ಸಮಾವೇಶಕ್ಕೆ ನಿರ್ಧಾರ

ಚಳ್ಳಕೆರೆ- ರಾಜ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಮಡಿವಾಳ ಸಮುದಾಯಕ್ಕೆ ಮೂಲಭೂತ ಸೌಕರ್ಯಗಳಿಲ್ಲದೆ ಹೀನಾಯ ಬದುಕು ಕಟ್ಟಿಕೊಂಡು ಸಮಾಜದ ತಿರಸ್ಕಂತ ತಳ ಸಮುದಾಯವಾಗಿ ಜೀವಿಸುತ್ತಿದೆ ಎಂದು ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಟಿ.ರಮೇಶ್ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಜನಜಾಗೃತಿ ಸಮ್ಮೇಳನ ಕುರಿತು ಏರ್ಪಡಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ದೇಶದ 17 ರಾಜ್ಯಗಳಲ್ಲಿ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿ ವರ್ಗಕ್ಕೆ ಸೇರ್ಪಡೆ ಮಾಡಿ ಸರ್ವತೋಮುಖ ಅಭಿವೃದ್ಧಿಗೆ ಅಲ್ಲಿನ ಜನಪ್ರತಿನಿಧಿಗಳು ಶ್ರಮಿಸುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಕಳೆದ ಹಲವಾರು […]

ವಿದ್ಯಾರ್ಥಿ ಸಂಘ ನಿರಂತರ ಚಟುವಟಿಕೆಗಳ ಕೇಂದ್ರ ವಾಗಿರಬೇಕು

ವಿದ್ಯಾರ್ಥಿ ಸಂಘ ನಿರಂತರ ಚಟುವಟಿಕೆಗಳ ಕೇಂದ್ರ ವಾಗಿರಬೇಕು

ಚಳ್ಳಕೆರೆ-ನಿರಂತರ ಚಟುವಟಿಕೆಯ ಕೇಂದ್ರವೇ ವಿದ್ಯಾರ್ಥಿ ಸಂಘ. ಈ ಸಂಘಟನೆ ಪ್ರತಿಯೊಬ್ಬ ವಿದ್ಯಾರ್ಥಿಯ ಹಿತವನ್ನು ಬಯಸುವಂತಾಗಬೇಕೆಂದು ಪಿವಿಎಸ್ ಶಿಕ್ಷಣ ಮಹಾವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಶಂಕರಪ್ಪ ತಿಳಿಸಿದರು. ಅವರು ಸೋಮವಾರ ಇಲ್ಲಿನ ಎನ್.ಜಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ಸಂಘ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿ ಸಂಘ ಶೈಕ್ಷಣಿಕ ಗುರಿಯ ಕಡೆ ಹೆಚ್ಚು ಗಮನ ಕೊಡಬೇಕು ಪ್ರತಿವರ್ಷವೂ ಎನ್. ಜಯಣ್ಣ ಕಾಲೇಜಿಗೆ ವಿವಿ ಮಟ್ಟದಲ್ಲಿ ರ್ಯಾಂಕ್ ಪಡೆಯುತ್ತಿರುವುದು ಸಂತಸ ವಿಷಯವಾಗಿದೆ ಎಂದರು. ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂ.ಆರ್.ನಾರಾಯಣಪ್ಪ ಮಾತನಾಡಿ, […]

ಮಳೆಗಾಗಿ ಎಲ್ಲರೂ ದೇವರಲ್ಲಿ ಪ್ರಾರ್ಥಿಸೋಣ-ಶಾಸಕ ಬಾಲಚಂದ್ರ ಜಾರಕಿಹೊಳಿ

ಮಳೆಗಾಗಿ ಎಲ್ಲರೂ ದೇವರಲ್ಲಿ ಪ್ರಾರ್ಥಿಸೋಣ-ಶಾಸಕ  ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಬರಗಾಲದಿಂದ ಜನತೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಎಲ್ಲರೂ ಮಳೆಗಾಗಿ ವರುಣ ದೇವನಲ್ಲಿ ಪ್ರಾರ್ಥಿಸಿಕೊಳ್ಳೋಣ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇಲ್ಲಿಗೆ ಸಮೀಪದ ಕಲಾರಕೊಪ್ಪ ಗ್ರಾಮದಲ್ಲಿ ಸೋಮವಾರ ಸಂಜೆ ಮಾಳಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಬಾರಿಯೂ ನಿರೀಕ್ಷೆಯಂತೆ ಮಳೆಯಾಗಿಲ್ಲ. ಇದರಿಂದ ಜನ ಹಾಗೂ ಜಾನುವಾರುಗಳಿಗೆ ತುಂಬ ಕಷ್ಟವಾಗಿದೆ. ಬರಗಾಲದಿಂದ ರೈತರು ಸಾಕಷ್ಟು ನೋವುಗಳನ್ನು ಅನುಭವಿಸುತ್ತಿದ್ದಾರೆ. ಮಳೆಯಾದರೆ ಉತ್ತಮ ಬೆಳೆ ಬರಲು ಸಾಧ್ಯವಾಗುತ್ತದೆ. ರೈತರು ಚೆನ್ನಾಗಿದ್ದರೆ ನಾವೆಲ್ಲ ಚೆನ್ನಾಗಿರುತ್ತೇವೆ. ಆದ್ದರಿಂದ […]

ಕಬಡ್ಡಿ ಲೀಗ್ ಪಂದ್ಯಾವಳಿ ತರಬೇತಿಗೆ ಚಾಲನೆ

ಕಬಡ್ಡಿ ಲೀಗ್ ಪಂದ್ಯಾವಳಿ ತರಬೇತಿಗೆ ಚಾಲನೆ

ಪಾಂಡವಪುರ : ಕ್ಯಾತನಹಳ್ಳಿ ಗ್ರಾಮದ ವಿವೇಕ ಮಂದಿರದಲ್ಲಿ ಸುಸಜ್ಜಿತ ರಬ್ಬರ್ ಮ್ಯಾಟ್ ಒಳಾಂಗಣ ಕ್ರೀಡಾಂಗಣದಲ್ಲಿ ಪಾಂಡವಪುರ ಗ್ರೀನ್ ಸ್ಟಾರ್  ಕಬಡ್ಡಿ ತಂಡದ ತರಬೇತಿ ಶಿಬಿರಕ್ಕೆ  ತಂಡದ ಮಾಲಿಕರೂ ಆದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ  ಮಂಗಳವಾರ ಚಾಲನೆ ನೀಡಿದರು. ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಗ್ರೀನ್ ಸ್ಟಾರ್ ಪಾಂಡವಪುರ ತಂಡದ ತರಬೇತಿ ಶಿಬಿರ ನಡೆಯಲಿದೆ. ಬಿಜಿಎಸ್ ಕಪ್ ಪ್ರಿಮಿಯರ್ ಕಬ್ಬಡಿ ಲೀಗ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಜಿಲ್ಲೆಯ ಫೆವರೇಟ್ ತಂಡವೆನಿಸಿದ ತಾಲೂಕಿನ ಕ್ರೀಡಾ ಗ್ರಾಮವೆಂದೇ ಪ್ರಸಿದ್ದಿ ಪಡೆದಿರುವ ಕ್ಯಾತನಹಳ್ಳಿ ಗ್ರಾಮದಲ್ಲಿ  ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಕೆ.ಎಸ್.ಪುಟ್ಟಣ್ಣಯ್ಯ ಅವರು, […]

ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ: ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ

ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ: ರಾಜ್ಯಾಧ್ಯಕ್ಷ  ಬಿ ಎಸ್ ಯಡಿಯೂರಪ್ಪ

ರಾಯಬಾಗ: ಕಾಂಗ್ರೇಸ್ ನೇತೃತ್ವದ ರಾಜ್ಯ ಸರಕಾರ ದೇಶದಲ್ಲಿಯೇ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಸರ್ವೇ ವರದಿಗಳು ಹೇಳುತ್ತಿವೆ ಇದಕ್ಕೆ ಮುಖ್ಯಮಂತ್ರಿಗಳು ಉತ್ತರ ನೀಡಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ  ಕಾಪಾಡಲು ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್.ಯಡಿಯೂರಪ್ಪ ಹೇಳಿದರು. ತಾಲೂಕಿನ ಕಂಕಣವಾಡಿ ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ಭಾರತೀಯ ಜನತಾ ಪಕ್ಷ ರಾಯಬಾಗ ತಾಲೂಕಾ ಘಟಕದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರಿ ಕಚೇರಿಗಳಲ್ಲಿ ಹಣವಿಲ್ಲದೇ ಯಾವದೇ ಕೆಲಸಗಳು ಆಗುವುದಿಲ್ಲ ಎಂಬ ವಾತಾವರಣದ ಪರಿಸ್ಥಿತಿ ನಿರ್ಮಾಣಗೊಂಡಿದೆ. ರಾಜ್ಯದ ಮಂತ್ರಿಗಳು […]