ಕಮಿಷನ್ ಸರ್ಕಾರ ಸಾಕು, ಮಿಶನ್ ಸರ್ಕಾರ ಬೆಂಬಲಿಸಿ: ಮೈಸೂರಲ್ಲಿ ಪ್ರಧಾನಿ ಮೋದಿ ಮನವಿ

ಕಮಿಷನ್ ಸರ್ಕಾರ ಸಾಕು, ಮಿಶನ್ ಸರ್ಕಾರ ಬೆಂಬಲಿಸಿ: ಮೈಸೂರಲ್ಲಿ ಪ್ರಧಾನಿ ಮೋದಿ ಮನವಿ

ಮೈಸೂರು:ಕರ್ನಾಟಕದಲ್ಲಿ ಕಮಿಷನ್ ಸರ್ಕಾರ ಬೇಕಾ ಇಲ್ಲವೇ ಮಿಶನ್ ಸರ್ಕಾರ ಬೇಕಾ ಎಂಬುದನ್ನು ನಿರ್ಧರಿಸುವ ಸಮಯ ಬಂದಿದೆ. ಈ ಸಲವಾದರೂ ಬಿಜೆಪಿ ಗೆಲ್ಲಿಸಿ ನವಕರ್ನಾಟಕ ನಿರ್ಮಾಣಕ್ಕೆ ಸಹಕರಿಸಿ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ತವರು ಮೈಸೂರಿನಲ್ಲಿ ಭಾವಿ ಮತದಾರರಿಗೆ ಮೋಡಿ ಮಾಡಲು ಪ್ರಯತ್ನಿಸಿದರು. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ತಮಗೆ ತೊಡಿಸಿದ ಮೈಸೂರು ಪೇಟ ತೊಟ್ಟುಕೊಂಡೇ  ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ ಅವರು, […]

ಅಥಣಿ ಮಾತ್ರವಲ್ಲ, ಕರ್ನಾಟಕದ ಬಹು ಕಡೆ ಕಾಂಗ್ರೆಸ್’ಗೆ ಜಯಭೇರಿ: ಶಾಸಕ ಸತೀಶ ಜಾರಕಿಹೊಳಿ ವಿಶ್ವಾಸ

ಅಥಣಿ ಮಾತ್ರವಲ್ಲ, ಕರ್ನಾಟಕದ ಬಹು ಕಡೆ ಕಾಂಗ್ರೆಸ್’ಗೆ  ಜಯಭೇರಿ: ಶಾಸಕ ಸತೀಶ ಜಾರಕಿಹೊಳಿ ವಿಶ್ವಾಸ

ಶಾಸಕರು ಹೇಳಿದ್ದೇನು? ಅಥಣಿಯಿಂದ  3 ದಿನಗಳ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ 24ರಿಂದ ಆರಂಭ ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾಗಿ ಐಗಳಿ ಕ್ರಾಸ್ ನಿಂದ ಅಥಣಿ ಮೂಲಕ ತಿಕೋಟಾವರೆಗೆ 5 ಸಾವಿರ ಬೈಕ್ ರ್ಯಾಲಿ ಅಥಣಿಯ ಬೃಹತ್ ಸಮಾವೇಶದಲ್ಲಿ 2 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ರಾಹುಲ್ ಗಾಂಧಿ ಸಂವಾದ, ರೋಡ್ ಶೋ ಫೆ.25ರಂದು ವಿಜಯಪುರ, ಬಾಗಲಕೋಟೆ,  26ರಂದು ರಾಮದುರ್ಗ, ಹುಬ್ಬಳ್ಳಿಯಲ್ಲಿ ಸಮಾವೇಶ ಮಾನವ ಬಂಧುತ್ವ ವೇದಿಕೆಯಿಂದ ಮರೆ ಮಾಚಿದ ಇತಿಹಾಸವನ್ನು […]

ಶುದ್ಧ ಕನ್ನಡ ಬಳಕೆ ಹೇಳಿಕೆಯಿಂದ ನೋವಾಗಿದ್ದರೆ ಕನ್ನಡಿಗರ ಕ್ಷಮೆ ಕೇಳುವೆ: ಸಚಿವ ಅನಂತಕುಮಾರ್ ಹೆಗಡೆ

ಶುದ್ಧ ಕನ್ನಡ ಬಳಕೆ ಹೇಳಿಕೆಯಿಂದ ನೋವಾಗಿದ್ದರೆ ಕನ್ನಡಿಗರ ಕ್ಷಮೆ ಕೇಳುವೆ: ಸಚಿವ ಅನಂತಕುಮಾರ್ ಹೆಗಡೆ

ಬೆಂಗಳೂರು:ಕರ್ನಾಟಕದಲ್ಲಿ ಶುದ್ಧ ಕನ್ನಡ ಭಾಷೆ ಬಳಕೆಯಾಗುತ್ತಿಲ್ಲ ಎಂಬ ತಮ್ಮ ಅಭಿಪ್ರಾಯಗಳ ಕುರಿತಂತೆ  ತನ್ನ ಹೇಳಿಕೆಗಳನ್ನು ತಿರುಚಿ ಅಪಪ್ರಚಾರ ಮಾಡಲಾಗುತ್ತಿದೆ. ನಮ್ಮ ಭಾಷೆ ಎಂದಿಗೂ ನಮ್ಮ ನೆಲದಲ್ಲಿ ವಿಜೃಂಭಿಸುತ್ತಿರಬೇಕು ಎಂಬ ಉದ್ದೇಶವಿಟ್ಟುಕೊಂಡು ಈ ಹೇಳಿಕೆ ನೀಡಿದ್ದೆ. ಇದರಿಂದ ಕನ್ನಡಿಗರಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುವೆ ಎಂದು  ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಈ ಕುರಿತಂತೆ ತಮ್ಮ ಸ್ಪಷ್ಟ ನಿಲುವನ್ನು ತಿಳಿಸಿದ್ದು,  ಪುತ್ತೂರಿನ ಕಾಲೇಜಿನ ಕಾರ್ಯಕ್ರಮದಲ್ಲಿ  ಮಾತನಾಡಿದ್ದಕ್ಕೆ ಇಷ್ಟೊಂದು ಅಸಮಾಧಾನ ವ್ಯಕ್ತವಾಗುತ್ತದೆಯೆಂದು […]

ಪುಟ್ಟಣ್ಣಯ್ಯ ನಿಧನಕ್ಕೆ ಮುಖ್ಯಮಂತ್ರಿ ಸೇರಿ ರಾಜಕೀಯ ಗಣ್ಯರ ಶೋಕ

ಪುಟ್ಟಣ್ಣಯ್ಯ ನಿಧನಕ್ಕೆ ಮುಖ್ಯಮಂತ್ರಿ ಸೇರಿ ರಾಜಕೀಯ ಗಣ್ಯರ ಶೋಕ

ಬೆಂಗಳೂರು:ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅವರ ನಿಧನಕ್ಕೆ ರಾಜಕೀಯ ನಾಯಕರು, ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಸೇರಿ ಹಿರಿಯ ರಾಜಕೀಯ ಧುರೀಣರು, ಗಣ್ಯರು  ಪುಟ್ಟಣ್ಣಯ್ಯ ಅವರ ರೈತ ಪರ ಕಾಳಜಿ, ಹೋರಾಟವನ್ನು ನೆನೆದು ಸಂತಾಪ ಸೂಚಿಸಿದ್ದಾರೆ. ರೈತ ಹೋರಾಟಗಾರ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಸಾವಿನ ಸುದ್ದಿ ದಿಗ್ಭ್ರಮೆ ಉಂಟು ಮಾಡಿದೆ. ರೈತ ಚಳುವಳಿಯ ಒಬ್ಬ ಧೀಮಂತ ನಾಯಕ ಕಣ್ಮರೆಯಾಗಿದ್ದಾರೆ.  […]

ಶಾಸಕ ಪುಟ್ಟಣ್ಣಯ್ಯ ನಿಧನಕ್ಕೆ ಶಾಸಕ ಸತೀಶ ಜಾರಕಿಹೊಳಿ ತೀವ್ರ ಶೋಕ

ಶಾಸಕ ಪುಟ್ಟಣ್ಣಯ್ಯ ನಿಧನಕ್ಕೆ ಶಾಸಕ ಸತೀಶ ಜಾರಕಿಹೊಳಿ ತೀವ್ರ ಶೋಕ

ಬೆಳಗಾವಿ: ಸರ್ವೋದಯ ಪಕ್ಷದ ಶಾಸಕ,  ಹಿರಿಯ ರೈತ ಹೋರಾಟಗಾರ ಕೆ.ಎಸ್.ಪುಟ್ಟಣ್ಣಯ್ಯ  ಅವರ ನಿಧನಕ್ಕೆ  ಎಐಸಿಸಿ ಕಾರ್ಯದರ್ಶಿ, ಶಾಸಕ ಸತೀಶ ಜಾರಕಿಹೊಳಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ರೈತರ ದನಿಯಾಗಿದ್ದ, ಪುಟ್ಟಣಯ್ಯ ಜನಪರ ಚಳವಳಿಯ ಮುಂಚೂಣಿ ನಾಯಕರಾಗಿದ್ದರು. ವಿಧಾನಸಭೆಯ ಒಳಗೆ, ಹೊರಗೆ ಜನರ ಪರ ದನಿಯಾಗಿದ್ದರು. ಸರ್ವೋದಯ  ಪಕ್ಷದ ಕಾರ್ಯಾಧ್ಯಕ್ಷರಾಗಿ, ರೈತಪರ ಸಮಸ್ಯೆಗಳಿಗೆ ಪರಿಹಾರ ರೂಪಿಸುವಲ್ಲಿ ಶ್ರಮಿಸುತ್ತಿದ್ದರು.  ರೈತರ  ಸಂಘಟನೆಯಲ್ಲಿ  ತೊಡಗಿಸಿಕೊಂಡಿದ್ದರು. ಪುಟ್ಟಣ್ಣಯ್ಯ ಅವರ ನಿಧನದಿಂದ  ಸಮರ್ಥ ನಾಯಕನೊಬ್ಬನನ್ನು ಕಳೆದುಕೊಂಡಂತಾಗಿದೆ ಎಂದು  ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಹ್ಯಾರಿಸ್ ಪುತ್ರನನ್ನು ಹೊಗಳಿದ್ದು ನಿಜ, ಆದರೆ ಆತ ಹಲ್ಲೆ ಮಾಡಿದ್ದು ದೊಡ್ಡ ತಪ್ಪು: ಪ್ರಕಾಶ್ ರೈ

ಹ್ಯಾರಿಸ್ ಪುತ್ರನನ್ನು ಹೊಗಳಿದ್ದು ನಿಜ, ಆದರೆ ಆತ ಹಲ್ಲೆ ಮಾಡಿದ್ದು ದೊಡ್ಡ ತಪ್ಪು:  ಪ್ರಕಾಶ್ ರೈ

ಬೆಂಗಳೂರು: ಯಾರನ್ನಾದರೂ ಹೊಗಳುವ ವಿಚಾರದಲ್ಲಿ ಹುಷಾರಾಗಿರಬೇಕು. ಒಂದು ಒಳ್ಳೆಯ ಕೆಲಸ ಮಾಡಿದ್ದಕ್ಕೆ ಅಂದು ನಾನು ನಲಪಾಡ್‌‌ನನ್ನು ಹೊಗಳಿದ್ದೆ. ಆದರೆ  ಆತ ವಿದ್ವತ್‌ ಅವರ ಮೇಲೆ ಹಲ್ಲೆ ಮಾಡಿರುವುದು ತುಂಬಾ ತಪ್ಪು. ನನಗೆ  ನನ್ನ ತಪ್ಪಿನ ಅರಿವಾಗಿದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ತಿಳಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಶಾಸಕ ಹ್ಯಾರಿಸ್ ಪುತ್ರ  ಮೊಹಮ್ಮದ್‌ ನಲಪಾಡ್ ಹ್ಯಾರಿಸ್‌‌ ಅವರನ್ನು ಪ್ರಕಾಶ್ ರೈ ಹಾಡಿ ಹೊಗಳಿದ ವಿಡಿಯೋ ತುಣುಕುಗಳು ದೃಶ್ಯ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದಂತೆಯೇ […]

ಮನಸ್ಸಿನ ದೌರ್ಬಲ್ಯವೇ ಮೂಢನಂಬಿಕೆಗಳಿಗೆ ಮೂಲ: ಹುಲಿಕಲ್ ನಟರಾಜ್

ಮನಸ್ಸಿನ ದೌರ್ಬಲ್ಯವೇ ಮೂಢನಂಬಿಕೆಗಳಿಗೆ ಮೂಲ: ಹುಲಿಕಲ್ ನಟರಾಜ್

ಬೆಳಗಾವಿ:ಮನಸ್ಸಿನ ವರ್ತನೆಗಳೇ ಮೂಢನಂಬಿಕೆಗಳಿಗೆ ಮೂಲವಾಗಿವೆ. ಆತಂಕ, ಭಯ, ನಕಾರಾತ್ಮಕ ಭಾವನೆ ತುಂಬಿಕೊಂಡ ದುರ್ಬಲ ಮನಸ್ಸಿನಲ್ಲಿ ದೆವ್ವ, ಭೂತ, ಪಿಶಾಚಿಗಳು ಸಹಜವಾಗಿ ಮನೆ ಮಾಡುತ್ತವೆ. ನಮ್ಮ ಆಲೋಚನೆಗಳನ್ನು ಸಕಾರಾತ್ಮವಾಗಿರಿಸಿಕೊಂಡರೆ, ನಮ್ಮನ್ನು ನಾವು ಗೆಲ್ಲುವ ಪ್ರಯತ್ನ ಮಾಡಿದರೆ  ದೆವ್ವ, ಪಿಶಾಚಿ, ಭೂತಗಳಿಗೆ ಅವಕಾಶವೇ ಇಲ್ಲ ಎಂದು ಪವಾಡ ಬಯಲು ಕಾರ್ಯಕ್ರಮದ ರೂವಾರಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಉಪಾಧ್ಯಕ್ಷ ಹುಲಿಕಲ್ ನಟರಾಜ್ ಹೇಳಿದ್ದಾರೆ.  ಯಮಕನಮರಡಿಯಲ್ಲಿ ಮಾನವ ಬಂಧುತ್ವ ವೇದಿಕೆಯ ಆಶ್ರಯದಲ್ಲಿ ರವಿವಾರ ಸಂಜೆ ನಡೆಯಲಿರುವ ಪವಾಡ ಬಯಲು ಕಾರ್ಯಕ್ರಮಕ್ಕೂ ಮುನ್ನ […]

ದೇಶದ ನಿಜವಾದ ಇತಿಹಾಸ ತಿಳಿಸುವ ಪ್ರಯತ್ನ ತುರ್ತು ಅಗತ್ಯವಾಗಿದೆ: ಶಾಸಕ ಸತೀಶ ಜಾರಕಿಹೊಳಿ

ದೇಶದ ನಿಜವಾದ ಇತಿಹಾಸ ತಿಳಿಸುವ ಪ್ರಯತ್ನ ತುರ್ತು ಅಗತ್ಯವಾಗಿದೆ: ಶಾಸಕ ಸತೀಶ ಜಾರಕಿಹೊಳಿ

ಬೀದರ್: ದೇಶದ ನಿಜವಾದ ಇತಿಹಾಸ ತಿಳಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಕಳೆದ ನಾಲ್ಕು ವರ್ಷಗಳ ಹಿಂದೆ ಮಾನವ ಬಂಧುತ್ವ ವೇದಿಕೆ ಚಳವಳಿ ಆರಂಭಿಸಲಾಗಿದ್ದು, ರಾಜ್ಯಾದ್ಯಂತ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.  ಬಸವಣ್ಣನ ಕಲ್ಯಾಣ  ನಾಡು ಬೀದರ್ ನಲ್ಲೂ ಈ ಚಳವಳಿ ಯಶಸ್ವಿಯಾಗಿದೆ. ಯುವಕರು ಬುದ್ಧ, ಬಸವ, ಅಂಬೇಡ್ಕರ್ ಅವರ ಅಭಿಮಾನಿಗಳಾದರೆ ಸಮಾಜದಲ್ಲಿ ಬದಲಾವಣೆ ಸುಲಭ ಸಾಧ್ಯ  ಎಂದು  ಎಐಸಿಸಿ ಕಾರ್ಯದರ್ಶಿ, ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.  ಡಾ.ಬಿ.ಆರ್.ಅಂಬೇಡ್ಕರ್ ಯುಥ್ ಬ್ರಿಗೇಡ್, ಮಾನವ ಬಂಧುತ್ವ ವೇದಿಕೆ ಸಂಯುಕ್ತವಾಗಿ 69ನೇ […]

ಹ್ಯಾರಿಸ್ ಪುತ್ರನಿಂದ ಹಲ್ಲೆ ಪ್ರಕರಣ: ಕಾನೂನು ಕ್ರಮ ಕೈಗೊಳ್ಳುವಂತೆ ಸಿಎಂ ಖಡಕ್ ಸೂಚನೆ

ಹ್ಯಾರಿಸ್ ಪುತ್ರನಿಂದ  ಹಲ್ಲೆ ಪ್ರಕರಣ: ಕಾನೂನು ಕ್ರಮ ಕೈಗೊಳ್ಳುವಂತೆ ಸಿಎಂ ಖಡಕ್ ಸೂಚನೆ

ಬೆಂಗಳೂರು:ಶಾಸಕ ಎನ್‍.ಎ. ಹ್ಯಾರಿಸ್ ಪುತ್ರ  ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪು ಮಾಡಿದವರು ಯಾರೇ ಆಗಿದ್ದರೂ ಶಿಕ್ಷೆ ನೀಡಬೇಕು ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಪ್ರಕರಣದ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಪ್ಪು ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಪೊಲೀಸ್ ಅಧಿಕಾರಿಗಳು  ತಕ್ಷಣ ಕ್ರಮ ಜರುಗಿಸಬೇಕು ಎಂದು ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಕಬ್ಬನ್‍ ಪಾರ್ಕ್ ಠಾಣೆಯಲ್ಲಿ ಪ್ರಕರಣ […]

ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ: ಕಾಂಗ್ರೆಸ್ ನಿಂದ ಶಾಸಕ ಹ್ಯಾರಿಸ್ ಪುತ್ರ ಉಚ್ಚಾಟನೆ

ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ: ಕಾಂಗ್ರೆಸ್ ನಿಂದ ಶಾಸಕ ಹ್ಯಾರಿಸ್ ಪುತ್ರ ಉಚ್ಚಾಟನೆ

ಬೆಂಗಳೂರು:ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಗಳ ಹಿನ್ನೆಲೆಯಲ್ಲಿ ಶಾಂತಿನಗರ ಕ್ಷೇತ್ರದ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಹಾಗೂ ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ಅವರನ್ನು ಕಾಂಗ್ರೆಸ್ ನಿಂದ ಉಚ್ಛಾಟಿಸಲಾಗಿದೆ.  ಮೊಹಮ್ಮದ್ ನಲಪಾಡ್ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದ್ದರೂ ಪೊಲೀಸರು ಈವರೆಗೆ ಯಾರನ್ನೂ ಬಂಧಿಸಿಲ್ಲ. ಯುಬಿ ಸಿಟಿಯ ಫೆಗ್ರಿ ಕೆಫೆ ರೆಸ್ಟೋರೆಂಟ್ ನಲ್ಲಿ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ  ಮೊಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್ ಎಂಬ ಯುವಕನಿಗೆ ಮನಬಂದಂತೆ ಥಳಿಸಿದ್ದಾರೆ ಎಂದು […]

1 2 3 192