ದಿ. 28 ರಂದು ಬೈಲಹೊಂಗಲ ಬಂದ್ ಕರೆ ನೀಡಿದ ಬಿಜೆಪಿ

ದಿ. 28 ರಂದು ಬೈಲಹೊಂಗಲ ಬಂದ್ ಕರೆ ನೀಡಿದ ಬಿಜೆಪಿ

ಬೈಲಹೊಂಗಲ: ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ, ಬಿಜೆಪಿ ರಾಜ್ಯ ಘಟಕ ಬಂದ್ ಕರೇ ನೀಡಿದ ಹಿನ್ನಲೆಯಲ್ಲಿ ಜಿಲ್ಲಾ ಭಾಜಪ ಗ್ರಾಮೀಣ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ ಅವರ ನೇತ್ರತ್ವದಲ್ಲಿ ದಿ. 28 ರಂದು ಬೈಲಹೊಂಗಲ ಬಂದ್ ಕರೆ ನೀಡಲಾಗಿದೆ ಎಂದು ಮಂಡಲ ಅಧ್ಯಕ್ಷ ಮಡಿವಾಳಪ್ಪ ಹೋಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರು ಅಧಿಕಾರ ವಹಿಸಿ 24 ಘಂಟೆಗಳಲ್ಲಿ ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವದಾಗಿ ಚುನಾವಣಾ ಪೂವ೯ದಲ್ಲಿ ರೈತರಿಗೆ […]

ಗೋಕಾಕ: ನಗರ ಸಭೆ ಸದಸ್ಯ ಬಸವರಾಜ ಮುಳಗುಂದ ನಿಧನ

ಗೋಕಾಕ: ನಗರ ಸಭೆ ಸದಸ್ಯ ಬಸವರಾಜ ಮುಳಗುಂದ ನಿಧನ

ಗೋಕಾಕ: ನಗರದ ಶಿಂಧಿಗಾರ ಗಲ್ಲಿಯ ನಿವಾಸಿ ಆರ್ಯ-ಈಡಿಗ ಸಮಾಜದ ಮುಖಂಡ ಹಾಗೂ ನಗರ ಸಭೆಯ ಸದಸ್ಯ ಬಸವರಾಜ ಕೃಷ್ಣಪ್ಪ ಮುಳಗುಂದ(52) ಶನಿವಾರದಂದು ಮಧ್ಯಾಹ್ನ ಹೃದಯಘಾತದಿಂದ ನಿಧನರಾದರು. ಮೃತರು ತಾಯಿ, ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ಅಂತ್ಯಕ್ರೀಯೆಯು ನಗರದ ಸಾರ್ವಜನಿಕ ಸಶ್ಮಾನದಲ್ಲಿ ದಿ. 27 ರಂದು ಮುಂಜಾನೆ 9 ಗಂಟೆಗೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. udayanadu2016

ದಿ. 28 ರಂದು ಗೋಕಾಕ ಸಂಪೂರ್ಣ ಬಂದ್: ಬಿಜೆಪಿ

ದಿ. 28 ರಂದು ಗೋಕಾಕ ಸಂಪೂರ್ಣ ಬಂದ್: ಬಿಜೆಪಿ

ಗೋಕಾಕ: ಇದೇ ಸೋಮವಾರ 28 ರಂದು ರೈತರ ಸಂಪೂರ್ಣ ಸಾಲ ಮನ್ನಾಗೆ ಆಗ್ರಹಿಸಿ ಗೋಕಾಕ ವಿಧಾನ ಸಭಾ ಕ್ಷೇತ್ರ ಸಂಪೂರ್ಣ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ಬಿಜೆಪಿನಗರ ಹಾಗೂ ಗ್ರಾಮೀಣ ಘಟಕಗಳ ಅಧ್ಯಕ್ಷರುಗಳಾದ ವಿರುಪಾಕ್ಷಿ ಯಲಿಗಾರ ಹಾಗೂ ಶಶಿಧರ ದೇಮಶಟ್ಟಿ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೊಟ್ಟ ಮಾತಿನಂತೆ ರೈತರ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕಗಳ ಸಂಪೂರ್ಣ ಸಾಲಮನ್ನಾ ಮಾಡಲು ಒತ್ತಾಯಿಸಿ […]

ಹಿಂದೂ ಮೂಲಭೂತವಾದಿಗಳು ಈ ದೇಶವನ್ನು ಬಹುತ್ವದ ಭಾರತವನ್ನಾಗಿರಲು ಬಿಡುತ್ತಿಲ್ಲ: ಓಲ್ಗಾ

ಹಿಂದೂ ಮೂಲಭೂತವಾದಿಗಳು ಈ ದೇಶವನ್ನು ಬಹುತ್ವದ ಭಾರತವನ್ನಾಗಿರಲು ಬಿಡುತ್ತಿಲ್ಲ: ಓಲ್ಗಾ

ಧಾರವಾಡ: ಭಾರತ ದೇಶ ಬಹಳ ದೊಡ್ಡ ದೇಶ. ಈ ದೇಶಕ್ಕೆ ಅಷ್ಟೇ ದೊಡ್ಡದಾದ ಇತಿಹಾಸವೂ ಇದೆ. ನಮ್ಮ ದೇಶದ ಸ್ವಾತಂತ್ರ್ಯಹೋರಾಟ ಬೇರೆ ದೇಶದ ರೀತಿ ಕೇವಲ ರಾಜಕೀಯ ಹೋರಾಟವಾಗಿರಲಿಲ್ಲ. ರಾಜಕೀಯ ಹೋರಾಟದ ಜೊತೆ ಜೊತೆಗೆ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹೋರಾಟವಾಗಿತ್ತು ಎಂದು ಜಸ್ಟೀಸ್ ನಾಗಮೋಹನದಾಸ್ ಹೇಳಿದರು. ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹಮ್ಮಿಕೊಂಡಿರುವ ಮೇ ಸಾಹಿತ್ಯ ಮೇಳದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಬಂದಾಗ ಇದು ಹಿಂದೂ ರಾಷ್ಟ್ರವಾಗಬೇಕು ಎನ್ನುವ ಆಗ್ರಹಗಳು ಬಂದವು. ಆದರೆ ಇದನ್ನು ಹಾಗೆ […]

ಕನ್ನಡ ನಾಡು ನುಡಿಯ ರಕ್ಷಣೆಗೆ ಎಲ್ಲರೂ ಬದ್ಧರಾಗಿ:ಡಾ. ಚಂದ್ರಶೇಖರ ಕಂಬಾರ

ಕನ್ನಡ ನಾಡು ನುಡಿಯ ರಕ್ಷಣೆಗೆ ಎಲ್ಲರೂ ಬದ್ಧರಾಗಿ:ಡಾ. ಚಂದ್ರಶೇಖರ ಕಂಬಾರ

ಶಹಾಪುರ:ಸಂಪತ್ ಭರಿತವಾದ ಹಾಗೂ ಐತಿಹಾಸಿಕ ಭವ್ಯ ಪರಂಪರೆ ಹಿನ್ನೆಲೆಯುಳ್ಳ ಕನ್ನಡ ನಾಡು ನುಡಿ ರಕ್ಷಣೆಗೆ ಎಲ್ಲರೂ ಬದ್ಧರಾಗಿರಬೇಕೆಂದು ಹಿರಿಯ ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ & ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ॥ ಚಂದ್ರಶೇಖರ ಕಂಬಾರ ಹೇಳಿದರು ನಿನ್ನೆ ಸಂಜೆ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ರಾಯಚೂರಿನ ಕಲಾ ಸಂಕುಲ ಸಂಸ್ಥೆಯ ವತಿಯಿಂದ ಏರ್ಪಡಿಸಿರುವ ಕನ್ನಡ ನಾಡು ನುಡಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು . ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಕರ್ನಾಟಕ ಕುಲಪುರೋಹಿತ […]

ನೀರಿಗಾಗಿ ಹೆದ್ದಾರಿ ಬಂದ್ ಮಾಡಿದ ರೋಣ ಗ್ರಾಮಸ್ಥರು

ನೀರಿಗಾಗಿ ಹೆದ್ದಾರಿ ಬಂದ್ ಮಾಡಿದ ರೋಣ ಗ್ರಾಮಸ್ಥರು

ಗಜೇಂದ್ರಗಡ: ಕುಡಿಯುವ ನೀರಿನ ಸಮರ್ಪಕ ಸರಬರಾಜಿಗೆ ಆಗ್ರಹಿಸಿ ರೋಣ ಪಟ್ಟಣದ ಶಿವಪೇಟೆ‌ ನಿವಾಸಿಗಳು ಪ್ರತಿಭಟನೆ ನಡೆಸಿದರು. ಶನಿವಾರ ಇಲ್ಲಿನ‌ ರೋಣ ರಾಜ್ಯ ಹೆದ್ದಾರಿ ಬಂದ್ ಮಾಡಿ ರಸ್ತೆ ತಡೆ ನಡೆಸಿದ ನಿವಾಸಿಗಳು ನೀರು ಪೂರೈಸುವಂತೆ ಒತ್ತಾಯಿಸಿ ಪುರಸಭೆ / ಪಟ್ಟಣಪಂಚಾಯಿತಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಇದರಿಂದಾಗಿ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರು ಪರದಾಡುವಂತಾಯಿತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು ಈ ವೇಳೆ ಮಾತನಾಡಿದ ಮುಖಂಡರು ಕಳೆದ ಎಂಟು ತಿಂಗಳಿನಿಂದ ಈ […]

ವಿವಿಧ ಬೇಡಿಕೆಗಳ ಈಡೇರಿಸಲು ಕುಮಾರಸ್ವಾಮಿ ಸೇನೆ ಒತ್ತಾಯ

ವಿವಿಧ ಬೇಡಿಕೆಗಳ ಈಡೇರಿಸಲು ಕುಮಾರಸ್ವಾಮಿ ಸೇನೆ ಒತ್ತಾಯ

ಸುರಪುರ: ತಾಲ್ಲೂಕಿನಲ್ಲಿಯ ಎಸ್.ಸಿ ಮತ್ತು ಎಸ್.ಟಿ ಸಮುದಾಯದ ಕುಟಂಬಗಳಿಗೆ ಸಿಗಬೇಕಾದ ಹಲವು ಯೋಜನೆಗಳನ್ನು ಸರಿಯಾಗಿ ತಲುಪಿಸದೆ ಕೆಬಿಜೆಎನ್‍ಎಲ್ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ವೆಂಕೋಬ ದೊರೆ ಆರೋಪಿಸಿದರು. ಸೇನೆಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿ,ಕೃಷ್ಣಾ ಭಾಗ್ಯ ಜಲ ನಿಗಮ ಇಲಾಖೆಯು ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿಯ ಎಸ್.ಸಿ ಮತ್ತು ಎಸ್.ಟಿ ಸಮುದಾಯದ ರೈತರ ಹೊಲಗಳಲ್ಲಿ ಬೋರವೆಲ್‍ಗಳನ್ನು ಕೊರೆಯಿಸಲಾಗಿದೆ.ಆದರೆ ಹಲವು ವರ್ಷಗಳಿಂದ ಈ ಬೋರವೆಲ್ ಗಳಿಗೆ ವಿದ್ಯೂತ್ ಸಂಪರ್ಕ ಕಲ್ಪಿಸಿಲ್ಲ,ಪಯಪಲೈನ್ […]

ಕುಮಾರಸ್ವಾಮಿ ಸಿಎಂ ಆಗಲು 11 ವರ್ಷಗಳ ಬಳಿಕ ಚಪ್ಪಲಿ ಧರಿಸಿದ ಅಭಿಮಾನಿ!:

ಕುಮಾರಸ್ವಾಮಿ ಸಿಎಂ ಆಗಲು 11 ವರ್ಷಗಳ ಬಳಿಕ ಚಪ್ಪಲಿ ಧರಿಸಿದ ಅಭಿಮಾನಿ!:

ಕುಮಾರಸ್ವಾಮಿ ಸಿಎಂ ಆಗಲು 11 ವರ್ಷಗಳ ಬಳಿಕ ಚಪ್ಪಲಿ ಧರಿಸಿದ ಅಭಿಮಾನಿ!: ಕಲಬುರಗಿ : ಎಚ್. ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವರೆಗೂ ಚಪ್ಪಲಿ ಹಾಕುವುದಿಲ್ಲ ಎಂದು ಶಪಥ ತೊಟ್ಟಿದ್ದ ಹೆಚ್‌ಡಿಕೆ ಅಭಿಮಾನಿ ಬರೋಬ್ಬರಿ 11 ವರ್ಷಗಳ ಬಳಿಕ ಚಪ್ಪಲಿ ಧರಿಸಲು ಆರಂಭಿಸಿದ್ದಾರೆ. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದ ಫಕ್ರುದ್ದೀನ್ ಚಾಂಗಲೆರ ಎಂಬ ಅಭಿಮಾನಿ, ಕಳೆದ 2007ರಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿದಿದ್ದ ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗುವರೆಗೆ ಚಪ್ಪಲಿ ಹಾಕುವುದಿಲ್ಲ ಎಂದು ಶಪಥ ಮಾಡಿದ್ದರು. ಇದೀಗ 11 […]

ಸಚಿವ ಸಂಪುಟ ಸೇರಲು ಜೆಡಿಎಸ್‌ ಶಾಸಕರ ಲಾಬಿ!

ಸಚಿವ ಸಂಪುಟ ಸೇರಲು ಜೆಡಿಎಸ್‌ ಶಾಸಕರ ಲಾಬಿ!

ಕಲಬುರಗಿ: ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬೆನ್ನಲ್ಲೆ ಅವರ ಸಚಿವ ಸಂಪುಟ ಸೇರಲು ಜೆಡಿಎಸ್ ಶಾಸಕರು ಲಾಬಿ ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಗುರುಮಿಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಪರವಾಗಿ ಜಿಲ್ಲಾ ಜೆಡಿಎಸ್ ಇಂದು ಬ್ಯಾಟಿಂಗ್ ಮಾಡಿದೆ.  ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ದೇವೇಗೌಡರು ಹಾಗೂ ಇತರರು, ಹಲವು ದಶಕಗಳಿಂದ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದ ಗುರಮಿಠಕಲ್ ಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕೊಡಬೇಕು. ಜಿಲ್ಲಾ ಜನತಾ ದಳದ ಅಧ್ಯಕ್ಷ ಬಸವರಾಜ […]

ಹಳಿ ದಾಟುತ್ತಿದ್ದ ವೃದ್ಧೆ ರೈಲಿಗೆ ಬಲಿ

ಹಳಿ ದಾಟುತ್ತಿದ್ದ ವೃದ್ಧೆ ರೈಲಿಗೆ ಬಲಿ

ಕಲಬುರಗಿ: ಹಳಿ ದಾಟಲು ಹೋಗಿ ರೈಲಿಗೆ ಸಿಲುಕಿ ವೃದ್ಧೆಯೊಬ್ಬಳು ಮೃತಪಟ್ಟ ಘಟನೆ ಜಿಲ್ಲೆಯ  ಶಹಾಬಾದ ರೈಲು ನಿಲ್ದಾಣದಲ್ಲಿ ಶುಕ್ರವಾರ ನಡೆದಿದೆ. ಗೂಡ್ಸ್ ರೈಲಿಗೆ ಸಿಲುಕಿ 75 ವರ್ಷದ ವಯೋವೃದ್ದೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಜೇವರ್ಗಿಯಿಂದ ಬಸ್ ಮೂಲಕ ಶಹಾಬಾದಗೆ ಆಗಮಿಸಿರುವ ಅಜ್ಜಿ ಬೆಳಿಗ್ಗೆ ಶಹಾಬಾದಗೆ ಆಗಮಿಸಿರುವ ಬಗ್ಗೆ ಆಕೆಯ ಬಳಿ ಬಸ್ ಟಿಕೆಟ್ ಲಭ್ಯವಿದೆ. ಮೃತ ಅಜ್ಜಿ ಯಾರು ? ಎಲ್ಲಿಯವರು ? ಅನ್ನೋ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ವಾಡಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. udayanadu2016

1 2 3 666