ಕಾನೂನುಬಾಹಿರವಾಗಿ ಸಾಕುತ್ತಿದ್ದ 7 ತಿಂಗಳು ಹೆಣ್ಣು ಮಗು ವಶಕ್ಕೆ

ಕಾನೂನುಬಾಹಿರವಾಗಿ ಸಾಕುತ್ತಿದ್ದ 7 ತಿಂಗಳು ಹೆಣ್ಣು ಮಗು ವಶಕ್ಕೆ

ಕಲಬುರಗಿ: ತನ್ನ ಏಳು ತಿಂಗಳ ಹೆಣ್ಣು ಮಗುವನ್ನು ರಕ್ಷಿಸಿ ವಶಕ್ಕೆ ಒಪ್ಪಿಸುವಂತೆ ಇಲ್ಲಿನ ನಿವಾಸಿಗಳಾದ ರೇಖಾ ಪ್ರೇಮಕುಮಾರ ನೀಡಿದ ದೂರಿನ ಅನ್ವಯ ಮಗುವನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಶ್ರೀ. ಸಿ. ವಿ.ರಾಮನ್, ಗ್ರಾಮೀಣ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಶ್ರೀ. ಪ್ರವೀಣ ಕುಮಾರ, ಚೈಲ್ಡ್ ಲೈನ್ ಕೋಲ್ಯಾಬ್ ಕೇಂದ್ರ ಡಾನ ಬಾಸ್ಕೊ ಸಂಸ್ಥೆಯ ನಿದೇ೯ಶಕರಾದ ಫಾದರ್ ಸಜಿತ್ ಜಾಜ೯, ಎಸ್.ಎಸ್.ಎಲ್.ಕಾನೂನು ಮಹಾವಿದ್ಯಾಲಯದ ಚೈಲ್ಡ್ ಲೈನ್ ನೋಡಲ್ ಕೇಂದ್ರದ ಜಿಲ್ಲಾ ಸಂಯೋಜಕರು ಶ್ರೀ. […]

ಕೆ.ಆರ್. ರಮೇಶ ಕುಮಾರ ವಿಧಾನಸಭೆ ನೂತನ ಸ್ಪೀಕರ್

ಕೆ.ಆರ್. ರಮೇಶ ಕುಮಾರ ವಿಧಾನಸಭೆ ನೂತನ  ಸ್ಪೀಕರ್

ಬೆಂಗಳೂರು: ವಿಧಾನಸಭೆಯ ನೂತನ ಸ್ಪೀಕರ ಆಗಿ  ಶ್ರೀನಿವಾಸಪುರ ಶಾಸಕ ಕೆ.ಆರ್. ರಮೇಶ ಕುಮಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಮಾಜಿ ಸಿಎಂ ಸಿದ್ಧರಾಮಯ್ಯ  ರಮೇಶಕುಮಾರ ಹೆಸರನ್ನು ಸೂಚಿಸಿದ್ದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅನುಮೋದಿಸಿದರು.  ಸಿಎಂ ಕುಮಾರಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪ ಅವರು ರಮೇಶ ಕುಮಾರ ಅವರನ್ನು ಪೀಠಕ್ಕೆ ಕರೆದುಕೊಂಡು ಶುಭ ಹಾರೈಸಿದರು. ಹಂಗಾಮಿ ಸ್ಪೀಕರ್ ಕೆ. ಜಿ. ಬೋಪಯ್ಯ ಸ್ಪೀಕರ್ ಸ್ಥಾನವನ್ನು ತೆರವುಗೊಳಿಸಿದರು.  ಇದಕ್ಕು ಮೊದಲು ಬಿಜೆಪಿ ಪಕ್ಷದಿಂದ ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದ ಸುರೇಶ ಕುಮಾರ ಅವರು ನಾಮಪತ್ರವನ್ನು ಹಿಂದಕ್ಕೆ ಪಡೆದ […]

ಶಾಸಕಾಂಗ ಸಭೆಗೆ ಡಿಕೆಶಿ ಗೈರು: ಕುಮಾರಸ್ವಾಮಿಗೆ ಟೆನ್ಶನ್

ಶಾಸಕಾಂಗ ಸಭೆಗೆ ಡಿಕೆಶಿ ಗೈರು: ಕುಮಾರಸ್ವಾಮಿಗೆ ಟೆನ್ಶನ್

ಬೆಂಗಳೂರು: ವಿಶ್ವಾಸಮತ ಯಾಚನೆಗೆ ಮುನ್ನ ನಡೆಯುತ್ತಿರುವ ಕಾಂಗ್ರೆಸ್ ಶಾಸಕಾಂಗದ ಸಭೆಯಲ್ಲಿ ಅತೃಪ್ತ ಡಿ.ಕೆ.ಶಿವಕುಮಾರ ಗೈರಾಗಿದ್ದಾರೆ.  12.15 ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆಗೆ ಮುಹೂರ್ತ್ ಫಿಕ್ಸ್ ಆಗಿದ್ದು ಶಾಸಕರಿಗೆ ಸೂಚನೆಗಳನ್ನು ನೀಡಲು ಸಿಎಲ್ ಪಿ ನಾಯಕ ಸಿದ್ಧರಾಮಯ್ಯ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆಸಲಾಗುತ್ತಿದೆ.  ಆದರೆ ಈ ಮಹತ್ವದ ಸಭೆಗೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಗೈರಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.  ಹೈಕಮಾಂಡ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದ ಸಚಿವ ಡಿಕೆಶಿಗೆ ಸೋನಿಯಾ ಗಾಂಧಿ ಎಚ್ಚರಿಕೆ ನೀಡಿ ಹೀಗೆಲ್ಲಾ ಮಾಡಬೇಡಿ ಎಂದು […]

ಚಿಕ್ಕೋಡಿ: ಸಾಲ ತಿರಿಸಲಾಗದೇ ರೈತ ನೇಣಿಗೆ ಶರಣು

ಚಿಕ್ಕೋಡಿ: ಸಾಲ ತಿರಿಸಲಾಗದೇ ರೈತ ನೇಣಿಗೆ ಶರಣು

ಚಿಕ್ಕೋಡಿ: ಕೃಷಿ ಬೇಸಾಯಕ್ಕಾಗಿ ಮಾಡಿದ ಸಾಲ ತೀರಿಸಲಾಗದೇ ರೈತನೊಬ್ಬ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಮೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಬಸ್ಸಪ್ಪಾ ಸಿದ್ದಪ್ಪಾ ಲಕಾಟೆ(36) ಎಂಬುವನೇ ಆತ್ಮಹತ್ಯೆಗೆ ಶರಣಾದ ರೈತ. ವಿವಿಧ ಸಂಘ-ಸಂಸ್ಥೆಗಳಲ್ಲಿ ಸಾಲ ಮಾಡಿಕೊಂಡಿದ್ದನೆನ್ನಲಾಗಿದ್ದು, ಸತತ ಬರಗಾಲದಿಂದ ಬೆಳೆಯೂ ಸರಿಯಾಗಿ ಬಾರದೇ ಮಾಡಿದ ಸಾಲ ತೀರಿಸಲಾಗದೇ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಕುರಿತು ಚಿಕ್ಕೋಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. udayanadu2016

ಶಾಲಾ ಪ್ರಾರಂಭೋತ್ಸವ, ಅಕ್ಷರಜಾತ್ರೆಯಲ್ಲಿ ಪಾಲ್ಗೊಳ್ಳಲು ಬಿಇಒ ಎ.ಸಿ ಗಂಗಾಧರ ಸೂಚನೆ

ಶಾಲಾ ಪ್ರಾರಂಭೋತ್ಸವ, ಅಕ್ಷರಜಾತ್ರೆಯಲ್ಲಿ ಪಾಲ್ಗೊಳ್ಳಲು ಬಿಇಒ ಎ.ಸಿ ಗಂಗಾಧರ ಸೂಚನೆ

ಮೂಡಲಗಿ: 2018-19 ನೇ ಶೈಕ್ಷಣಿಕ ವರ್ಷಾರಂಭವಾಗಿದ್ದು ಮೂಡಲಗಿ ವಲಯ ವ್ಯಾಪ್ತಿಯ ಎಲ್ಲ ಶಾಲೆಗಳು ಸ್ವಚ್ಛತೆ, ಸಣ್ಣಪುಟ್ಟ ದುರಸ್ಥಿ, ಮಕ್ಕಳ ದಾಖಲಾತಿ, ಹಾಜರಾತಿ ಕುರಿತು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ಸಮುದಾಯ, ಎಸ್.ಡಿ.ಎಮ್.ಸಿ, ಚುನಾಯಿತ ಪ್ರತಿನಿಧಿಗಳು ಅಗತ್ಯಕ್ರಮಕೈಗೊಂಡು ಶಾಲಾ ಪ್ರಾರಂಭೋತ್ಸವ ಹಾಗೂ ಅಕ್ಷರಜಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ಮೂಡಲಗಿ ಬಿ.ಇ.ಒ ಎ.ಸಿ ಗಂಗಾಧರ ತಿಳಿಸಿದ್ದಾರೆ. ಅವರು ಪಟ್ಟನದ ಬಿ.ಆರ್.ಸಿ ಕಛೇರಿಯಲ್ಲಿಜರುಗಿದ ಬಿ.ಆರ್.ಪಿ, ಸಿ.ಆರ್.ಪಿ ಇ.ಸಿ.ಓ, ಐ.ಇ.ಆರ್.ಟಿಯವರ ಶಾಲಾ ಪ್ರಾರಂಭೋತ್ಸವ ಹಾಗೂ ಅಕ್ಷರ ಬಂಡಿಕಾರ್ಯಕ್ರಮದಕುರಿತ ಸಭೆಯಲ್ಲಿ ಮಾತನಾಡಿದರು.ಮೇ 28 ರಂದು ಶಾಲಾ ಸ್ವಚ್ಛತೆ ಹಾಗೂ […]

ಶಾಂಭವಿ ಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಮರೆಯಲಾಗದ ಕ್ಷಣ:ನಟಿ ಸುಧಾರಾಣಿ

ಶಾಂಭವಿ ಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಮರೆಯಲಾಗದ ಕ್ಷಣ:ನಟಿ ಸುಧಾರಾಣಿ

ಬೈಲಹೊಂಗಲ: ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿದ್ದು, ಪರಭಾಷಾ ಚಿತ್ರಕರಣಕ್ಕೆ ಸಾಕಷ್ಟು ಅನೂಕೂಲವಿದ್ದರೂ ಕನ್ನಡ ಚಿತ್ರರಂಗಕ್ಕಾಗಿ ಜೀವನವನ್ನೆ ಮುಡಪಾಗಿಟ್ಟಿದ್ದೇನೆ. ನನಗೆ ಶ್ರೀಗಳು ಶಾಂಭವಿ ಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ನನ್ನ ಜೀವನದಲ್ಲಿ ಎಂದು ಮರೆಯಲಾಗದ ಕ್ಷಣ ಚಿತ್ರ ನಟಿ ಸುಧಾರಾಣಿ ಹೇಳಿದರು. ಅವರು ಪಟ್ಟಣದ ಮುರಗೋಡ ರಸ್ತೆಯ ಶ್ರೀದುರ್ಗಾ ಪರಮೇಶ್ವರಿ 10 ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಸಂಜೆ ನಡೆದ 2018 ನೇ ಸಾಲಿನ ಶಾಂಭವಿ ಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ನಾನು […]

ಹಾವೇರಿ: ವೇತನಕ್ಕೆ ಆಗ್ರಹಿಸಿ ಪೌರ ಕಾರ್ಮಿಕರಿಂದ ಭಿಕ್ಷಾಟನೆ

ಹಾವೇರಿ: ವೇತನಕ್ಕೆ ಆಗ್ರಹಿಸಿ ಪೌರ ಕಾರ್ಮಿಕರಿಂದ ಭಿಕ್ಷಾಟನೆ

ಹಾವೇರಿ: ಕಳೆದ 10 ತಿಂಗಳ ಬಾಕಿ ಇರುವ ವೇತನ ನೀಡುವಂತೆ ಆಗ್ರಹಿಸಿ, ಪೌರ ಕಾರ್ಮಿಕರು ಭೀಕ್ಷಾಟನೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿದರು.  ಗುರುವಾರ ಜಿಲ್ಲೆಯ ಬಂಕಾಪುರ ಪಟ್ಟಣ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂಧಿಗಳು ತಮ್ಮ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಮಾತನಾಡಿದ ಪೌರ ಕಾರ್ಮಿಕರು, ತಮಗೆ ಪುರಸಭೆಯಿಂದ ಕಳೆದ 10 ತಿಂಗಳಿನಿಂದ ವೇತನ ನೀಡಿಲ್ಲ. ಪುರಸಭೆ ಅಧಿಕಾರಿಗಳನ್ನು ಕೇಳಿದರೆ, ಪುರಸಭೆಗೆ ಸಂಬಳ ನೀಡುವಷ್ಟು ತೆರಿಗೆ ಸಂಗ್ರಹವಾಗಿಲ್ಲ.ತೆರಿಗೆ ಆದ ಬಳಿಕ ನಿಮಗೆ ಸಂಬಳ ನೀಡಲಾಗುವ ಭರವಸೆ […]

ಹಾಲಪ್ಪ ಆಚಾರ್‌ಗೆ ಅನುಕಂಪದ ಗೆಲುವು: ಮಾಜಿ ಸಚಿವ ರಾಯರೆಡ್ಡಿ

ಹಾಲಪ್ಪ ಆಚಾರ್‌ಗೆ ಅನುಕಂಪದ ಗೆಲುವು: ಮಾಜಿ ಸಚಿವ ರಾಯರೆಡ್ಡಿ

ಬಿಜೆಪಿಯವರಿಂದ ಕೀಳು ಮಟ್ಟದ ರಾಜಕಾರಣ, ರಾಜಕೀಯ ವ್ಯವಸ್ಥೆ ಭ್ರಷ್ಟವಾಗಿದೆ.! ಕೊಪ್ಪಳ : ಜನ ನನ್ನ ಅಭಿವೃದ್ಧಿ ಕೆಲಸಗಳನ್ನು ನೋಡಲಿಲ್ಲ, ಬಿಜೆಪಿಯವರ ಕೀಳು ಮಟ್ಟದ ರಾಜಕಾರಣ ಮತ್ತು ಬಿಜೆಪಿ ಅಭ್ಯರ್ಥಿ ಪರ ಅನುಕಂಪದ ಅಲೆಯಲ್ಲಿ ತಮಗೆ ಸೋಲಾಯಿತು ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು. ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡ ನಂತರ ಮೊದಲಬಾರಿಗೆ ಪಟ್ಟಣದಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ಕಾರ್ಯಕರ್ತರ ಪರಾಮರ್ಶ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ತಾಲೂಕಿನಲ್ಲಿ ಜಾತಿ ರಾಜಕಾರಣ ಎಂದೂ ನಡೆಯುವುದಿಲ್ಲ. […]

ನಿಫಾ ವೈರಾಣು ಜ್ವರ ಹರಡದಂತೆ ಮುಂಜಾಗೃತ ಕ್ರಮ

ನಿಫಾ ವೈರಾಣು ಜ್ವರ ಹರಡದಂತೆ ಮುಂಜಾಗೃತ ಕ್ರಮ

ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಎಡಿಸಿ ಡಾ. ರುದ್ರೇಶ ಘಾಳಿ ಸೂಚನೆ ಕೊಪ್ಪಳ: ನಿಫಾ ವೈರಾಣು ಜ್ವರ ಇದೊಂದು ಹೊಸದಾಗಿ ಕಂಡುಬಂದ ವೈರಾಣು ಸೋಂಕು ಆಗಿದ್ದು, ಜಿಲ್ಲೆಯಲ್ಲಿ ಹರಡದಂತೆ ಮುಂಜಾಗೃತ ಕ್ರಮ ಕೈಗೊಳ್ಳುವುಂತೆ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ ಘಾಳಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಹಮ್ಮಿಕೊಳ್ಳಲಾದ ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದ ಅವರು ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರು, ಮಹಿಳಾ ಮತ್ತು ಮಕ್ಕಳ […]

ಶಾಸಕ ಭಯ್ಯಾಪುರ, ದರ್ಶನಾಪುರಗೆ ಸಚಿವ ಸ್ಥಾನ ನೀಡಲು ಆಗ್ರಹ

ಶಾಸಕ ಭಯ್ಯಾಪುರ, ದರ್ಶನಾಪುರಗೆ ಸಚಿವ ಸ್ಥಾನ ನೀಡಲು ಆಗ್ರಹ

ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ರಡ್ಡಿ ಸಮಾಜ ಅಧ್ಯಕ್ಷರಿಂದ ಪತ್ರ ಕೊಪ್ಪಳ : ವೀರಶೈವ ಲಿಂಗಾಯತ ರಡ್ಡಿ ಸಮಾಜವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿರುವ ಹಿರಿಯರಾದ ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪುರ ಹಾಗೂ ಶಹಪುರ ಶಾಸಕ ಶರಣಬಸಪ್ಪ ದರ್ಶನಾಪುರ ಅವರಿಗೆ ಸಚಿವ ಸ್ಥಾನ ನೀಡುವಂತೆ ಕರ್ನಾಟಕ ವೀರಶೈವ ಲಿಂಗಾಯತ ರಡ್ಡಿ ಸಮಾಜದ ರಾಜ್ಯಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಅವರು ಆಗ್ರಹಿಸಿದ್ದಾರೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರಿಗೆ ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ಗಣನೀಯ ಸಂಖ್ಯೆಯಲ್ಲಿರುವ […]