ಪಿಯುಸಿ ಫಲಿತಾಂಶ: ಕೊಪ್ಪಳ 20ನೇ ಸ್ಥಾನಕ್ಕೆ

9628 ವಿದ್ಯಾರ್ಥಿಗಳ ಪೈಕಿ 6080 ಉತ್ತೀರ್ಣ ಶೇ. 63.15 ರಷ್ಟು ಫಲಿತಾಂಶ ಕೊಪ್ಪಳ: ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಕೊಪ್ಪಳ ಜಿಲ್ಲೆಯು ಕಳೆದ ಬಾರಿಗಿಂತ ಸ್ವಲ್ಪ ಸುಧಾರಣೆಕಂಡಿದ್ದು, ಕಳೆದ ವರ್ಷ 26 ಸ್ಥಾನಕ್ಕಿದ್ದ ಜಿಲ್ಲೆಯು ಈ ವರ್ಷ 20ನೇ ಸ್ಥಾನಕ್ಕೆ ಬಂದಿದ್ದು, ಪರೀಕ್ಷೆಗೆ ಹಾಜರಾದ 9628 ಒಟ್ಟು ವಿದ್ಯಾರ್ಥಿಗಳಲ್ಲಿ 6080 ವಿದ್ಯಾಥಿಗಳು ಪಾಸಾಗಿದ್ದು, ಶೇ. 63.15 ರಷ್ಟು ಫಲಿತಾಂಶ ಬಂದಿದೆ. ಕಳೆದ ಬಾರಿ ಶೇ.63.04 ರಷ್ಟು ಫಲಿತಾಂಶ ಮೂಲಕ ಕೊಪ್ಪಳ ಜಿಲ್ಲೆ ರಾಜ್ಯದಲ್ಲಿ 26 ನೇ ಸ್ಥಾನದಲ್ಲಿತ್ತು. ಆದರೆ, […]

ನಕಲಿ ಮತದಾನವೇ ನನ್ನ ಸೋಲಿಗೆ ಕಾರಣ, ಈ ಬಾರಿ ಎಚ್ಚರದಿಂದಿರಿ -ಮಾಜಿ ಶಾಸಕ ಆರ್.ವಿ.ನಾಯಕ

ನಕಲಿ ಮತದಾನವೇ ನನ್ನ ಸೋಲಿಗೆ ಕಾರಣ, ಈ ಬಾರಿ ಎಚ್ಚರದಿಂದಿರಿ  -ಮಾಜಿ ಶಾಸಕ ಆರ್.ವಿ.ನಾಯಕ

ಸುರಪುರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲು ನಕಲಿ ಮತದಾನದಿಂದಾಗಿದೆ,ಈಬಾರಿಯ ಲೋಕಸಭಾ ಚುಣಾವಣೆಯಲ್ಲಿ ಅಂತ ನಕಲಿ ಮತದಾನ ನಡೆಯದಂತೆ ಕಾರ್ಯಕರ್ತರು ಎಚ್ಚರಿಕೆ ವಹಿಸುವಂತೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು. ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ ಅವರ ಪರವಾಗಿ ಸುರಪುರ ಮತ ಕ್ಷೇತ್ರದ ದೇವತ್ಕಲ್ ಜಿಲ್ಲಾ ಪಂಚಾಯತ ವ್ಯಾಪ್ತಿಯ ಕವಡಿಮಟ್ಟಿ, ಶೇಳ್ಳಗಿ, ಮುಷ್ಠಹಳ್ಳಿ, ದೇವಾಪೂರ, ಅರಳಹಳ್ಳಿ, ಶಾಂತಪೂರ ಗ್ರಾಮಗಳಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿ, ಕೇಂದ್ರ ಸರಕಾರ ಅಧಿಕಾರಕ್ಕೆ […]

ದೃಶ್ಯಕಲೆಯಲ್ಲಿ ಮಾನವ ಶಾಸ್ತ್ರೀಯ ಗುಣವಿದೆ:ಸತ್ಯಂಪೇಟೆ

ದೃಶ್ಯಕಲೆಯಲ್ಲಿ ಮಾನವ ಶಾಸ್ತ್ರೀಯ ಗುಣವಿದೆ:ಸತ್ಯಂಪೇಟೆ

ಕಲಬುರಗಿ: ಪ್ರತಿಭೆಯ ಜೊತೆಗೆ ಪ್ರಯತ್ನ ಕೂಡ ಅಗತ್ಯ. ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮತನವನ್ನು ಮೆರೆಯಬೇಕು ಎಂದು ಲಲಿತಾಕಲಾ ಅಕಾಡೆಮಿ ಸದಸ್ಯ ಮಹ್ಮದ್ ಅಯಾಜುದ್ದೀನ್ ಪಟೇಲ್ ಹೇಳಿದರು. ಲಿಯೊನಾರ್ಡೊ ಡ ವಿಂಚಿ ಜನುಮ ದಿನದ ಅಂಗವಾಗಿ ಇಲ್ಲಿನ ದೃಶ್ಯಕಲಾ ಸಾಂಸ್ಕೃತಿಕ ಸಂಸ್ಥೆ ನಗರದ ಕನ್ನಡ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ದೃಶ್ಯಕಲಾ ದಿನಾಚರಣೆ ಆರನೆ ವಾರ್ಷಿಕ ಚಿತ್ರ-ಶಿಲ್ಪಕಲಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕಲೆ ದೃಷ್ಟಿಯಿಂದ ಕಲ್ಬುರ್ಗಿ ಅತ್ಯಂತ ಹಾಟೆಸ್ಟ್ ಸಿಟಿ. ಇಲ್ಲಿ ಬಿಸಿಲು ಪ್ರಖರತೆ ಇರುವಂತೆ ಕಲೆ ಕೂಡ […]

ಮಂಡ್ಯದಲ್ಲಿ ಅಬ್ಬರದ ಪ್ರಚಾರ ನಡೆಸಿದ ನಟ ದರ್ಶನಗೆ ಐಟಿ ಶಾಕ್..!

ಮಂಡ್ಯದಲ್ಲಿ ಅಬ್ಬರದ ಪ್ರಚಾರ ನಡೆಸಿದ ನಟ ದರ್ಶನಗೆ ಐಟಿ ಶಾಕ್..!

ಮೈಸೂರು: ನಟ ದರ್ಶನ ಫಾರ್ಮ್ ಹೌಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಲ್ಲಿನ ಟಿ. ನರಸೀಪುರನಲ್ಲಿರುವ ನಟ ದರ್ಶನ ಫಾರ್ಮ್ ಹೌಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ನಡೆಸುತ್ತಿರುವ ದರ್ಶನಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಪರಿಶೀಲನೆ ಬಳಿಕ ಐಟಿ ಅಧಿಕಾರಿಗಳಿಗೆ ಯಾವುದೇ ಹಣ ಸಿಕ್ಕಿಲ್ಲ. ಕೆಲ ದಾಖಲೆಗಳನ್ನು ಮಾತ್ರ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. Views: 253

ಮೂಡಲಗಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರಿಂದ ಪಾದಯಾತ್ರೆ: ಸಾಧುನವರ ಪರ ಮತಯಾಚನೆ

ಮೂಡಲಗಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರಿಂದ ಪಾದಯಾತ್ರೆ: ಸಾಧುನವರ ಪರ ಮತಯಾಚನೆ

ಮೂಡಲಗಿ: ಅರಭಾಂವಿ ಮತ ಕ್ಷೇತ್ರದ ಮೂಡಲಗಿ ಪಟ್ಟಣದಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಸಭೆ ಸೋಮವಾರ ನಡೆಸಲಾಯಿತು. ನಂತರ ಪಟ್ಟಣದಲ್ಲಿ ಪಾದಯಾತ್ರೆ ಮೂಲಕ ಬೆಳಗಾವಿ ಲೋಕಸಭೆ ಮೈತ್ರಿ ಅಭ್ಯರ್ಥಿ ವ್ಹಿ.ಎಸ್. ಸಾಧುನವರ ಪರ ಮತಯಾಚಿಸಲಾಯಿತು. ಇದಕ್ಕೂ ಮುನ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ 127 ನೇ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮೈತ್ರಿ ಮುಖಂಡರಾದ ಪ್ರಕಾಶ ಬಾಗೇವಾಡಿ, ಎಸ್.ಆರ್.ಸೋನಾಲ್ಕರ್, ಸಣ್ಣಕ್ಕಿ ಸೇರಿದಂತೆ ನೂರಾರು ಇತರರು ಇದ್ದರು. Views: 285

ಮಾನವ ಬಂಧುತ್ವ ವೇದಿಕೆಯಿಂದ ಅರಟಾಳದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ 128ನೇಜಯಂತಿ ಆಚರಣೆ

ಮಾನವ ಬಂಧುತ್ವ ವೇದಿಕೆಯಿಂದ ಅರಟಾಳದಲ್ಲಿ  ಡಾ.ಬಿ.ಆರ್ ಅಂಬೇಡ್ಕರ್ 128ನೇಜಯಂತಿ ಆಚರಣೆ

ಅಥಣಿ: ಅರಟಾಳ ಗ್ರಾಮದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ 128ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಗ್ರಾಪಂ ಕಾರ್ಯದರ್ಶಿ ಗಡಾದೆ, ಗ್ರಾಪಂ ಕ್ಲರ್ಕ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಿದರು. ಮಾನವ ಹಕ್ಕುಗಳ ಹೋರಾಟಗಾರರಾದ ಡಾ.ಗೌತಮ ಬನಸೋಡೆ ಮಾತನಾಡಿ, ಡಾ.ಬಾಬಾಸಾಹೇಬ ಅಂಬೇಡ್ಕರ ರವರ ಕೊಡುಗೆ ಅಪಾರ. ಜನರು ಮೂಢನಂಬಿಕೆಯಿಂದ ಹೊರಬಂದು ವೈಚಾರಿಕತೆಯಡೆ ಸಾಗಬೇಕು ಎಂದು ಹೇಳಿದರು. ಆನಂದ , ಹಣಮಂತ ಪಾಟೀಲ, ಯಶೋಧರ ಕಾಂಬಳೆ, ಸಾಗರ ಕಾಂಬಳೆ, ಮಲ್ಲಿಕಾರ್ಜುನ […]

ಶಾಸಕಿ ಅಂಜಲಿ ನಿಂಬಾಳ್ಕರ್ ಕಾರು ಅಪಘಾತ: ಸಣ್ಣಪುಟ್ಟ ಗಾಯ

ಬೆಳಗಾವಿ: ಖಾನಾಪುರ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಕಾರು ಮಹಾರಾಷ್ಟ್ರದಲ್ಲಿ ಅಪಘಾತವಾಗಿದ್ದು ಪ್ರಾಣಾಪಾಯದಿಂದ ಪಾರುಗೊಂಡಿದ್ದಾರೆ. ಲೋಕಸಭೆಗೆ ಪ್ರಚಾರಾರ್ಥ ನಾಂದೇಡ್ ಗೆ ತೆರಳುತ್ತಿದ್ದ ಸಮಯದಲ್ಲಿ ಸೋಲಾಪುರ ಸಮೀಪ ಕಾರು ಅಪಘಾತವಾಗಿದೆ. ಶಾಸಕಿಗೆ ತಲೆಗೆ ಸಣ್ಣ ಪುಟ್ಟ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನ ಚಾಲಕ ಮತ್ತು ಗನ್ ಮ್ಯಾನ್ ಗೂ ಸಣ್ಣಪುಟ್ಟ ಗಾಯಗಳಾಗಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. Views: 288

ನಾಳಿನ ಗೋಕಾಕ ಬಿಜೆಪಿ ಸಮಾವೇಶದಲ್ಲಿ ಹತ್ತು ಸಾವಿರ ಕಾರ್ಯಕರ್ತರು ಭಾಗಿ: ಬಾಲಚಂದ್ರ ಜಾರಕಿಹೊಳಿ‌ ಮಾಹಿತಿ

ಗೋಕಾಕ : ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಅವರ ಪ್ರಚಾರಾರ್ಥವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನಾಳೆ ದಿ.13 ರಂದು ಗೋಕಾಕ ನಗರಕ್ಕೆ ಆಗಮಿಸಲಿದ್ದಾರೆಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ. ಇಲ್ಲಿಯ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ಕಾರ್ಯಕ್ರಮದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದ ಅವರು, ಲೋಕಸಭಾ ಚುನಾವಣೆ ನಿಮಿತ್ಯ ನಡೆಯುವ ಗೋಕಾಕ ಮತ್ತು ಅರಭಾವಿ ಮತಕ್ಷೇತ್ರಗಳ ಪ್ರಚಾರ ಸಭೆಯಲ್ಲಿ ಸುಮಾರು 10 ಸಾವಿರ ಕಾರ್ಯಕರ್ತರು ಭಾಗಿಯಾಗಲಿದ್ದಾರೆಂದು […]

ನನ್ನ ಸೋಲಿಸಲು ಪ್ರಯತ್ನಿಸುವವರಿಗೆ ನೀವೇ ಸರಿಯಾದ ಉತ್ತರ ನೀಡಿ: ಮತದಾರರಿಗೆ ಖರ್ಗೆ ಕರೆ

ನನ್ನ ಸೋಲಿಸಲು ಪ್ರಯತ್ನಿಸುವವರಿಗೆ ನೀವೇ ಸರಿಯಾದ ಉತ್ತರ ನೀಡಿ:  ಮತದಾರರಿಗೆ ಖರ್ಗೆ ಕರೆ

ಕಲಬುರಗಿ: ಸಂಸದನಾಗಿ ನಾನು ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದ್ದೇನೆ‌. ಮಾಡಿದ ಕೆಲಸಕ್ಕೆ ಈಗ ಕೂಲಿ ಕೇಳುತ್ತಿದ್ದೇನೆ. ನನಗೆ ಮತದ ಕೂಲಿ ನೀಡುವ ಮೂಲಕ ಮತ್ತೆ ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ ಎಂದು ಕಲಬುರಗಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದರು. ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಲಬುರಗಿ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇಎಸ್ಐಸಿ ಆಸ್ಪತ್ರೆ, ಜರ್ಮನ್ ಸಹಯೋಗದೊಂದಿಗೆ ಸ್ಕಿಲ್ […]