ದಾವಣಗೆರೆ: ಅವೈಜ್ಞಾನಿಕವಾಗಿ ಟೋಲ್ ದರ ವಸೂಲಿ, ಸಾರ್ವಜನಿಕರಿಂದ ಸಚಿವರಿಗೆ ಮನವಿ

ದಾವಣಗೆರೆ: ತಾಲೂಕಿನ ಹೆಬ್ಬಾಳ್ ಟೋಲ್‍ಗೇಟ್‍ನಲ್ಲಿ ಟೋಲ್ ದರವನ್ನು ಅವೈಜ್ಞಾನಿಕವಾಗಿ ನಿಗದಿಪಡಿಸಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಿದರು. ನೂರಾರು ಸಾರ್ವಜನಿಕರು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಟೋಲ್‍ಗೇಟ್‍ನಲ್ಲಿ ಈ ಹಿಂದೆ ದಾವಣಗೆರೆ ವಾಹನಗಳಿಗೆ 35 ರು. ಇದ್ದು, ಇದೀಗ ದಿಢೀರನೆ 75 ರು. ಏರಿಕೆ ಮಾಡಲಾಗಿದೆ. ಈ ಕ್ರಮ ಅವೈಜ್ಞಾನಿಕವಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ದರ ಏರಿಕೆ ಬಗ್ಗೆ ಸಾರ್ವಜನಿಕರು ಆಕ್ಷೇಪಿಸಿದರೆ ಅಲ್ಲಿನ […]

ಗುಂಪು ಚರ್ಚೆಯಲ್ಲಿ ಸಂವಿಧಾನಕ್ಕೆ ಅವಮಾನ: ಸುವರ್ಣ ನ್ಯೂಸ್ ಚಾನೆಲ್ ವಿರುದ್ದ ದೂರು ದಾಖಲು

ಶಹಾಪೂರ: ಸುವರ್ಣ ನ್ಯೂಸ್ ಚಾನೆಲ್ ನ ಗುಂಪು ಚರ್ಚೆಯಲ್ಲಿ ಭಾರತ ಸಂವಿಧಾನವೇನೂ ಪರಮ ಪವಿತ್ರವಲ್ಲ ಎಂಬ ಅರ್ಥದಲ್ಲಿ  ಸಂವಿಧಾನದ ವಿರುದ್ಧ ಹೇಳಿಕೆ ನೀಡಿರುವ ಬಿಜೆಪಿಯ ಗೋ.ಮಧುಸೂದನ್  ಮತ್ತು ಸುವರ್ಣ ನ್ಯೂಸ್ ಚಾನಲ್ ನ ಅಜೀತ್ ಹನುಕ್ಕನವರ ವಿರುದ್ಧ ಶಹಾಪೂರ ನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಿಸಲಾಗಿದೆ. ದಲಿತ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಸಮುದಾಯದ ಸಂವಿಧಾನ ಪ್ರೇಮಿಗಳು, ಪ್ರಗತಿಪರ ಚಿಂತಕರು ನಗರದ ಪ್ರವಾಸಿ ಮಂದಿರ ದಿಂದ ಪ್ರತಿಭಟನಾ ಮೆರೆಣಿಗೆ ಮೂಲಕ ಠಾಣೆಗೆ  ಆಗಮಿಸಿ ಈ ಸಂಬಂಧ […]

ಕೆಪಿಎಂಇ ಕಾಯ್ದೆ ಅಂಶಗಳ ಬಗ್ಗೆ ಆಕ್ಷೇಪ: ಉಪವಾಸ ನಡೆಸಲು ವೈದ್ಯರ ನಿರ್ಧಾರ

ಬೆಳಗಾವಿ: ಕೆಪಿಎಂಇ ಕಾಯ್ದೆಯಲ್ಲಿನ ಕೆಲವು ಅಂಶಗಳನ್ನು ತೆಗೆದು ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ತನ್ನ ಸ್ಪಷ್ಟ ನಿಲುವು ಪ್ರಕಟಿಸದ ಹಿನ್ನೆಲೆಯಲ್ಲಿ ಖಾಸಗಿ ವೈದ್ಯರು ಮಂಗಳವಾರದಿಂದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.  ಈ ವಿಷಯವನ್ನು  ಐಎಂಎ ಅಧ್ಯಕ್ಷ ಡಾ.ರವೀಂದ್ರ ಸೋಮವಾರ ಮಧ್ಯಾಹ್ನ ತಿಳಿಸಿದ್ದು, ವೈದ್ಯರ ಸಂಘದೊಂದಿಗೆ ಚರ್ಚಿಸಿ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ  ಎಂದು ತಿಳಿಸಿದ್ದಾರೆ.  ವಿಧಾನಮಂಡಲದಲ್ಲಿ ಮಸೂದೆ ಮಂಡನೆಗೂ ಮೊದಲು ವೈದ್ಯರೊಂದಿಗೆ ಇನ್ನೊಮ್ಮೆ ಸಮಾಲೋಚನೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಭರವಸೆ ನೀಡಿದರು. ಆದರೆ […]

ಬೆಳಗಾವಿ ಜಿಲ್ಲೆಯ ನಾಯಕರು ಎಂಇಎಸ್ ಗುಲಾಮರು: ಖಾನಪ್ಪನವರ ಆರೋಪ

ನಾಡಹಿತ ಮರೆತು ವೋಟ್‍ಬ್ಯಾಂಕ ರಾಜಕೀಯ ಮಾಡಿದರೆ ಜಿಲ್ಲೆಯ ರಾಜಕೀಯ ನಾಯಕರಿಗೆ ಲಾಠಿ ಸೇವೆ: ಎಚ್ಚರಿಕೆ ಗೋಕಾಕ: ಬೆಳಗಾವಿ ಜಿಲ್ಲೆಯ ರಾಜಕೀಯ ನಾಯಕರು ನಾಡದ್ರೋಹಿ ಎಂಇಎಸ್ ಮುಖಂಡರ ಗುಲಾಮರಂತೆ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಪ್ರತಿ ವರ್ಷ ಕರಾಳ ದಿನ ಮತ್ತು ಮಹಾಮೇಳಾವ ನಡೆಸಲು ಅನುಮತಿ ನೀಡುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಆಕ್ರೋಶ ವ್ಯಕ್ತಪಡಿಸಿದರು.  ತಾಲೂಕಿನ ಅರಭಾವಿ ಗ್ರಾಮದಲ್ಲಿ ರವಿವಾರ ನೂತನ ಕ.ರ.ವೇ ಶಾಖೆ ಉದ್ಘಾಟಿಸಿ […]

ಲಿಂಗಾಯತ ತತ್ವ ಪ್ರಣಾಳಿಕೆ ಪುಸ್ತಕದಲ್ಲಿ ಲಗ್ನ ಪತ್ರಿಕೆ ಮುದ್ರಿಸಿ ಹಂಚಿದ ಪಾಲಕರು

ಬಸವತತ್ವದಡಿ ಹಸೆ ಮಣಿಗೆ ಏರಲಿದ್ದಾರೆ ನವ ಜೋಡಿಗಳು ಹಾವೇರಿ: ಪ್ರೊ. ಟಿ.ಆರ್.ಚಂದ್ರಶೇಖರ ಅವರ ಬರೆದ ಲಿಂಗಾಯತ ತತ್ವ ಪ್ರಣಾಳಿಕೆ ಎಂಬ ಪುಸ್ತಕದಲ್ಲಿ ಲಗ್ನ ಪತ್ರಿಕೆ ಮುದ್ರಿಸಿ, ಬಸವತತ್ವದಡಿಯಲ್ಲಿ ಸರಳ ವಿವಾಹಕ್ಕೆ ಮುಂದಾಗುವ ಮೂಲಕ ಕಾವ್ಯಾ ಹಾಗೂ ಅಶೋಕ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆಯಲಿದ್ದಾರೆ ಎಂದು ಪ್ರಗರಪರ ಚಿಂತಕ ಬಸವರಾಜ ಸೂಳಿಬಾಳಿ ತಿಳಿಸಿದರು. ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ರಾಣಿಬೇನ್ನೂರು ನಗರದ ಶೇಖಪ್ಪ ಕೊಪ್ಪದ ಹಾಗೂ ಭಾಗ್ಯ ಎಂಬ ದಂಪತಿಗಳು ಬಸವಣ್ಣನವರ […]

ಆಯ ತಪ್ಪಿ ಬಾತ್ ರೂಂನಲ್ಲಿ ಬಿದ್ದ ಮಾಜಿ ಸಚಿವ

ಹಾವೇರಿ: ಮಾಜಿ ಸಚಿವರೊಬ್ಬರು, ಮುಖ ತೊಳೆಯಲು ಆಯ ತಪ್ಪಿ ಬಿದ್ದ ಘಟನೆ ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದಿದೆ. ಹೇಗಪ್ಪ ಲಮಾಣಿ ಎಂಬ ಮಾಜಿ ಸಚಿವರು ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆಯಲು ತಂಗಿದ್ದಾಗ, ಬಾತ್ ರೂಂ ನಲ್ಲಿ ಮುಖ ತೊಳೆಯಲು ಹೋದಾಗ, ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿ ಬಾತ್ ರೂಂ ನಲ್ಲಿ ಕುಸಿದು ಬಿದ್ದಿದ್ದಾರೆ. ಅರೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಚಿವರು ಬಾತ್ ರೂಂ ನಿಂದ ಹೊರಗೆ ಬರದಿದ್ದಾಗ, ಸಚಿವರ ಸಂಬಂಧಿಕರು ಬಾತ್ ಬಾಗಿಲು ಬಡಿದು ವಿಚಾರಿಸಿದಾಗ ಘಟನೆ […]

ಪಾಂಡವಪುರ ಪುರಸಭೆ ಉಪಾಧ್ಯಕ್ಷರಾಗಿ ಕೌಸಲ್ಯ ಆಯ್ಕೆ

ಪಾಂಡವಪುರ : ಪಾಂಡವಪುರ ಪುರಸಭೆಯ ನೂತನ ಉಪಾಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಕೌಸಲ್ಯ ರಾಜಶೇಖರ್ ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿದ್ದ ಎಚ್.ವಿ.ರಾಧಾಮಣಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ಈ ಸ್ಥಾನ ತೆರವಾಗಿತ್ತು. ಸೋಮವಾರ ನಡೆದ ಚುನಾವಣೆಯಲ್ಲಿ ಕೌಸಲ್ಯ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯೂ ಆಗಿದ್ದ ತಹಸಿಲ್ದಾರ್ ಡಿ.ಹನುಮಂತರಾಯಪ್ಪ ಕೌಸಲ್ಯ ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಸಂಸದ ಅಭಿನಂದನೆ : ನೂತನ ಉಪಧ್ಯಕ್ಷರಾಗಿ ಆಯ್ಕೆಯಾದ ಕೌಸಲ್ಯ ರಾಜಶೇಖರ್ ಅವರನ್ನು ಸಂಸದ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು. ನಂತರ ಮಾತನಾಡಿದ ಅವರು ಪುರಸಭೆಯ […]

2018 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ಭಾಗ್ಯ : ಜಿಲ್ಲಾಧ್ಯಕ್ಷ ಸಿ.ಸಿ ಪಾಟೀಲ ಭವಿಷ್ಯ

ಗಜೇಂದ್ರಗಡ: ಕ್ಷೇತ್ರದ ಶಾಸಕರು ಹಾಗೂ ಅವರ ಪುತ್ರನ ನಡೆಯಿಂದ ಜನತೆ ರೋಸಿ ಹೋಗಿದ್ದು, ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ, ಬಿಜೆಪಿಗೆ ಅಧಿಕಾರ ಭಾಗ್ಯ ನೀಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಸಿ ಪಾಟೀಲ ಭವಿಷ್ಯ ನುಡಿದರು. ಪಟ್ಟಣದ ಹಿರೇ ಬಜಾರದ ವೀರುಪಾಕ್ಷೇಶ್ವರ ದೇಗುಲ ಆವರಣದಲ್ಲಿ ಭಾನುವಾರ ಸಂಜೆ ನಡೆದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಸಚಿವರು, ಶಾಸಕರ ಪುತ್ರಾಡಳಿತ ಮಿತಿ ವೀರಿದೆ. ಮರಳು ಮಾಫಿಯಾವನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟು ಕೊಂಡು ಅಧಿಕಾರ ಚಲಾಯಿಸುತ್ತಿದ್ದಾರೆ. ಇನ್ನೊಂದೆಡೆ […]

ಫಿಲಿಪ್ಪೈನ್ಸ್ ರಾಜಧಾನಿ ಮನಿಲಾದಲ್ಲಿ 3 ದಿನಗಳ 31ನೇ ಅಷಿಯಾನ್ ಶೃಂಗಸಭೆ ಆರಂಭ

31ನೇ ಅಷಿಯಾನ್ ಸಭೆಯಲ್ಲಿ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಟ್ರಂಪ್, ಜಪಾನ್ ಪ್ರಧಾನಿ ಶಿಂಜೋ ಅಬೆ ಸೇರಿ ವಿಶ್ವದ ಪ್ರಮುಖ ನಾಯಕರು ಭಾಗಿ  ಮನಿಲಾ: ಫಿಲಿಪ್ಪೈನ್ಸ್ ರಾಜಧಾನಿ ಮನಿಲಾದಲ್ಲಿ ಮೂರು ದಿನಗಳ  31ನೇ ಅಷಿಯಾನ್ (ಅಸೋಸಿಯೇಷನ್ ಆಫ್ ಸೌಥ್ ಈಸ್ಟ್ ಏಷ್ಯಾ ನೇಶನ್ಸ್ ) ಶೃಂಗಸಭೆ ಸೋಮವಾರ ವಿದ್ಯುಕ್ತವಾಗಿ ಆರಂಭಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜಪಾನ್ ಪ್ರಧಾನಿ ಶಿಂಜೋ ಅಬೆ ಸೇರಿದಂತೆ ವಿಶ್ವದ ಪ್ರಮುಖ ನಾಯಕರು ಪಾಲ್ಗೊಂಡಿದ್ದಾರೆ.   ಮೊದಲ ದಿನ ಪ್ರಧಾನಿ […]

ಬೆಳಗಾವಿ: ಅಗಲಿದ ಗಣ್ಯರ ಸಾಧನೆ ಸ್ಮರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಮಾಜಿ ಸಚಿವ ಖಮರುಲ್ ಇಸ್ಲಾಂ, ಅಂತಾರಾಷ್ಟ್ರೀಯ ಖ್ಯಾತಿಯ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು.ಆರ್.ರಾವ್, ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಸೇರಿದಂತೆ ನಿಧನ ಹೊಂದಿದ ಗಣ್ಯ ವ್ಯಕ್ತಿಗಳಿಗೆ ವಿಧಾನ ಸಭೆಯಲ್ಲಿ ಸಂತಾಪ ಸಲ್ಲಿಸಲಾಯಿತು. ಸೋಮವಾರ ವಿಧಾನಸಭೆ ಅಧಿವೇಶನ ಆರಂಭವಾದ ತಕ್ಷಣ ಸಭಾಧ್ಯಕ್ಷ  ಕೆ.ಬಿ.ಕೋಳಿವಾಡ ಅವರು ನಿಧನ ಹೊಂದಿದ 14 ಮಂದಿ ಗಣ್ಯರ ಸಂತಾಪ ಸೂಚನೆ ನಿಲುವಳಿಯನ್ನು ಮಂಡಿಸಿದರು. ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಮಾಜಿ ಸಚಿವ ಖಮರುಲ್ ಇಸ್ಲಾಂ, ಹಾಲಿ ವಿಧಾನಸಭಾ ಸದಸ್ಯ ಎಸ್.ಚಿಕ್ಕಮಾದು, ವಿಧಾನ […]