ಕತಾರ್ ದೇಶಕ್ಕೆ ನಿರ್ಬಂಧ: ಭಾರತೀಯ ಪ್ರಜೆಗಳ ರಕ್ಷಣೆಗೆ ಸರ್ಕಾರ ಸಿದ್ಧ – ಸುಷ್ಮಾ ಸ್ವರಾಜ್

ಕತಾರ್ ದೇಶಕ್ಕೆ ನಿರ್ಬಂಧ: ಭಾರತೀಯ ಪ್ರಜೆಗಳ ರಕ್ಷಣೆಗೆ ಸರ್ಕಾರ ಸಿದ್ಧ – ಸುಷ್ಮಾ ಸ್ವರಾಜ್

ಹೊಸದಿಲ್ಲಿ: ಅರಬ್ ರಾಷ್ಟ್ರಗಳ ಒಕ್ಕೂಟದಿಂದ ಆರ್ಥಿಕ ನಿರ್ಬಂಧನೆಗೆ ಒಳಗಾಗಿರುವ ಕತಾರ  ದೇಶದಲ್ಲಿರುವ ಭಾರತೀಯರ ನಾಗರಿಕರ ರಕ್ಷಣೆಗೆ ಅಗತ್ಯವಿರುವ ಕ್ರಮಗಳನ್ನು ಭಾರತ ಸರ್ಕಾರ ಮಾಡುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.   ಕತಾರ್ ನಲ್ಲಿರುವ ಭಾರತೀಯ ರಾಯಭಾರಿಯೊಂದಿಗೆ ಭಾರತ ಸರ್ಕಾರ ನಿರಂತರ ಸಂಪರ್ಕದಲ್ಲಿದೆ, ನಮ್ಮ ಜನರ ರಕ್ಷಣೆಗೆ ಭಾರತ ಸರ್ಕಾರ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸುಷ್ಮಾ ಸ್ವರಾಜ್ ಸಾಮಾಜಿಕ ಜಾಲತಾಣ ಟ್ವೀಟ್ ಮುಖಾಂತರ ಭರವಸೆ ನೀಡಿದ್ದಾರೆ.    ಕತಾರ್ ದೇಶದಲ್ಲಿರುವ ಭಾರತೀಯ ಪ್ರಜೆಯೊಬ್ಬರು ಕತಾರ್ ನಲ್ಲಿರುವ […]

ಅಪಘಾತ: ಬೈಕ್ ಸವಾರ ಗಂಭೀರ ಗಾಯ, ಆಟೋಚಾಲಕನಿಗೆ ಸಾರ್ವಜನಿಕರಿಂದ ಗೂಸಾ

ಅಪಘಾತ: ಬೈಕ್ ಸವಾರ ಗಂಭೀರ ಗಾಯ, ಆಟೋಚಾಲಕನಿಗೆ ಸಾರ್ವಜನಿಕರಿಂದ ಗೂಸಾ

ದಾವಣಗೆರೆ: ನಗರದ ಪಿಬಿ ರಸ್ತೆ ಸಂಗೋಳ್ಳಿ ರಾಯಣ್ಣ ವೃತ್ತದ ಬಳಿ ಆಟೋ  ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ನಡದಿದೆ. ವೆಂಕಟೇಶ್ (50) ಗಾಯಗೊಂಡ ಬೈಕ್ ಸವಾರ. ಆಟೋ ಚಾಲಕನ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದ್ದು, ಕುಪತಗೊಂಡ  ಸಾರ್ವಜನಿಕರು  ಆಟೋ ಚಾಲಕಗೆ ಗೂಸಾ ನೀಡಿದ್ದಾರೆ. ಸಮಯಕ್ಕೆ ಸರಿಯಾಗಿ ಆಂಬುಲೇನ್ಸ್ ಬಾರದ ಕಾರಣ ಆಟೋದಲ್ಲಿ ಗಾಯಾಳನ್ನು ಆಸ್ಪತ್ರೆಗೆ ಸಾಗಿಸಿದ ಸಾರ್ವಜನಿಕರು. ಘಟನಾ ಸ್ಥಳಕ್ಕೆ ಟ್ರಾಫೀಕ್ ಪೊಲೀಸರು  ಭೇಟಿ  ನೀಡಿ ಪರಿಶೀಲನೆ ನಡಸಿದ್ದಾರೆ. udayanadu2016

ವಿಜಯಪುರ: ಹೊಂಡದಲ್ಲಿ ಬಿದ್ದು ಇಬ್ಬರು ಸಹೋದರರ ಸಾವು

ವಿಜಯಪುರ: ಹೊಂಡದಲ್ಲಿ ಬಿದ್ದು ಇಬ್ಬರು ಸಹೋದರರ ಸಾವು

ವಿಜಯಪುರ: ತಾಲೂಕಿನ ತೊಣಶ್ಯಾಳ ಪುನರ್ವಸತಿ ಕೇಂದ್ರದ ಬಳಿ ನೀರಿನ ಹೊಂಡದಲ್ಲಿ ಬಿದ್ದು ಇಬ್ಬರು ಸಹೋದರರು ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ಶಿವಪ್ಪ ಪೂಜಾರಿ ಅವರ ಮಕ್ಕಳಾದ ದರ್ಶನ ಪೂಜಾರಿ(11) ಲಕ್ಷ್ಮಣ ಪೂಜಾರಿ(9) ಮೃತ ಸಹೋದರರು.  ಆಟ ಆಡುತ್ತಿದ್ದಾಗ ಹೊಂಡದಲ್ಲಿ ಬಿದ್ದಿದ್ದ ಟೈರ್ ನ್ನು ಎತ್ತಿಕೊಳ್ಳಲು ಹೋದಾಗ  ಕಾಲು ಜಾರಿ ಘಟನೆ ಸಂಭವಿಸಿದೆ. ಮುಗಿಲು ಮುಟ್ಟಿದ ಪೋಷಕರ ಆಕ್ರಂದಣ. ಈ ಕುರಿತು ಬಬಲೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗದೆ. udayanadu2016

ಹಮಾಲ ಕಾಲನಿಯಲ್ಲಿ 1.75 ಕೋಟಿ ರೂ.ಲೂಟಿ-ರೈತ ಸಂಘ ಆರೋಪ,

ಹಮಾಲ ಕಾಲನಿಯಲ್ಲಿ 1.75 ಕೋಟಿ ರೂ.ಲೂಟಿ-ರೈತ ಸಂಘ ಆರೋಪ,

ತಹಸೀಲ್ದಾರ್ ಮೌನಕ್ಕೆ ಜನರ  ಆಕ್ರೋಶ ಮುದ್ದೇಬಿಹಾಳ : ಕಡು ಬಡವರಿಗೆ ಮನೆ ಕೊಡುವಂತೆ ಎಷ್ಟೋ ಬಾರಿ ಪುರಸಭೆಗೆ ಮನವಿ ಪತ್ರ ಸಲ್ಲಿಸಿದ್ದರೂ ಪ್ರಯೋಜನವಾಗುತ್ತಿಲ್ಲ.ವಸತಿ ಹೀನರಿಗೆ ಏಳು ದಿನದಲ್ಲಿ ಮನೆ ಅಥವಾ ಖಾಲಿ ಜಾಗೆ ಕೊಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ತಹಸೀಲ್ದಾರ್‍ಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು. ಪಟ್ಟಣದ ತಹಸೀಲ್ದಾರ್ ಕಛೇರಿಗೆ ಆಗಮಿಸಿದ ಸದಸ್ಯರು, ಬಡವರಿಗೆ ಸರಕಾರದಿಂದ ಮನೆ ಥವಾ ಖಾಲಿ ಜಾಗೆ ಕೊಡುವಂತೆ ಆದೇಶವಾಗಿದ್ದರೂ ಕೊಡುತ್ತಿಲ್ಲ.ಸಿರಿವಂತರ ಹೆಸರಿನಲ್ಲಿ ಆಶ್ರಯ ಮನೆಗಳು […]

ರಾಷ್ಟ್ರಪತಿ ಸ್ಥಾನಕ್ಕೆ ಮೀರಾಕುಮಾರ್ ಸಮರ್ಥ ಅಭ್ಯರ್ಥಿ: ಶಾಸಕ ಬಿ.ಆರ್.ಪಾಟೀಲ

ರಾಷ್ಟ್ರಪತಿ ಸ್ಥಾನಕ್ಕೆ ಮೀರಾಕುಮಾರ್ ಸಮರ್ಥ ಅಭ್ಯರ್ಥಿ: ಶಾಸಕ ಬಿ.ಆರ್.ಪಾಟೀಲ

ಕಲಬುರಗಿ: ಲೋಕಸಭೆ ಸ್ಪೀಕರ್ ಆಗಿ, ಸಂಸದರಾಗಿ ಕೆಲಸ ಮಾಡಿ ಅನುಭವ ಇರುವ ಮೀರಾಕುಮಾರ್  ಸಮರ್ಥ ನಾಯಕಿಯಾಗಿದ್ದು,  ರಾಷ್ಟ್ರಪತಿ ಚುನಾವಣೆಯಲ್ಲಿ ಅವರನ್ನೇ ಬೆಂಬಲಿಸಬೇಕು ಎಂಬುದು ತಮ್ಮ ನಿಲುವು ಎಂದು ಶಾಸಕ ಬಿ.ಆರ್‍.ಪಾಟೀಲ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಪಾಟೀಲ್,  ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಬೆಂಬಲಿತ ಅಭ್ಯರ್ಥಿ ಮೀರಾಕುಮಾರ್‌ ಅವರಿಗೆ ಬೆಂಬಲ ನೀಡುತ್ತಿರುವುದು ನನ್ನ ವೈಯಕ್ತಿಕ ನಿಲುವು ಎಂದರು. ಬಿಹಾರ ಸಿಎಂ ನಿತೀಶಕುಮಾರ್ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಮನಾಥ್‌ ಕೋವಿಂದ್ ಅವರ ಬೆಂಬಲಕ್ಕೆ ನಿಂತಿದ್ದಾರೆ.  ನಿತೀಶಕುಮಾರ್ ಅವರನ್ನು ಪರ್ಯಾಯ […]

ಜೀವನದಲ್ಲಿ ಸುಖವಾಗಿರಲು ಗಿಡಮರ ಬೆಳೆಸಿ: ಗವಿಸಿದ್ದೇಶ್ವರ ಸ್ವಾಮೀಜಿ

ಜೀವನದಲ್ಲಿ ಸುಖವಾಗಿರಲು ಗಿಡಮರ ಬೆಳೆಸಿ: ಗವಿಸಿದ್ದೇಶ್ವರ ಸ್ವಾಮೀಜಿ

ಕೊಪ್ಪಳ: ಪ್ರತಿಯೊಬ್ಬರೂ ಜೀವನದಲ್ಲಿ ಸುಖವಾಗಿರಲು ಗಿಡ ಮರಗಳನ್ನು ಬೆಳೆಸಿ ಎಂದು ಕೊಪ್ಪಳ ಅಭಿನವ ಗವಸಿದ್ದೇಶ್ವರ ಸ್ವಾಮೀಜಿ ಹೇಳಿದರು. ನಗರದ ನಂದಿಶ್ವರ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ದಮ೯ಸ್ಥಳ ಮಂಜುನಾಥ ಸ್ವ ಸಹಾಯ ಸಂಘದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ  ಮಾತನಾಡಿದರು. ಎಲ್ಲರೂ ಒಂದೊಂದು ಗಿಡ ನೆಟ್ಟರೆ ಸಾಕು. ಉತ್ತಮ ಜೀವನ ಸಾಗಿಸಬಹುದು. ಅದರ ಜೊತೆಗೆ ಸರಿಯಾದ ಗಾಳಿ, ಆರೋಗ್ಯವನ್ನು ಕಂಡುಕೊಳ್ಳಬಹುದು ಎಂದು ಹೇಳಿದರು. ನಗರಸಭೆ ಸದಸ್ಯ ಶರಣಪ್ಪ […]

ಚುನಾವಣೆ ಖರ್ಚು ವೆಚ್ಚದ ತಪ್ಪು ಮಾಹಿತಿ: ಶಾಸಕತ್ವ ಅನರ್ಹಗೊಳಿಸಿ ಆಯೋಗ ಆದೇಶ

ಚುನಾವಣೆ ಖರ್ಚು ವೆಚ್ಚದ ತಪ್ಪು ಮಾಹಿತಿ: ಶಾಸಕತ್ವ ಅನರ್ಹಗೊಳಿಸಿ ಆಯೋಗ ಆದೇಶ

ಹೊಸದಿಲ್ಲಿ:  2008ರ ವಿಧಾನಸಭೆ ಚುನಾವಣೆಯ ಖರ್ಚು ವೆಚ್ಚಗಳ ಬಗ್ಗೆ ತಪ್ಪು ಮಾಹಿತಿ ನೀಡಿದ ಮಧ್ಯಪ್ರದೇಶದ ಮಿಶ್ರಾ ದಾತೀಯಾ ಕ್ಷೇತ್ರದ ಶಾಸಕ,  ಹಿರಿಯ ಸಚಿವ ನರೋತ್ತಂ ಮಿಶ್ರಾ ಅವರ ಶಾಸಕತ್ವವನ್ನು ಚುನಾವಣಾ ಆಯೋಗ ಅನರ್ಹಗೊಳಿಸಿದೆ. ಮೂರು ವರ್ಷಗಳವರೆಗೆ ಚುನಾವಣೆಯಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿದೆ. ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಆಪ್ತರೂ ಆಗಿರುವ ಮಿಶ್ರಾ ವಿರುದ್ಧ ಕಾಂಗ್ರೆಸ್‌ ಮುಖಂಡ ರಾಜೇಂದ್ರ ಭಾರ್ತಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು 2013ರ ಜನವರಿ 15ರಂದು […]

ವಿಜಯಪುರ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ, ಕೊಲೆ ಶಂಕೆ

  ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕೊಲ್ಹಾರ ಪಟ್ಟಣದಲ್ಲಿ  ನೇಣು ಬಿಗಿದ ಸ್ಥಿತಿಯಲ್ಲಿ  ಮಹಿಳೆಯ ಶವ ಶನಿವಾರ  ಪತ್ತೆಯಾಗಿದೆ.  ಕಲ್ಪನಾ ಶೇಖರ ಪಡಸಲಗಿ (23) ಮಹಿಳೆ ಶವ ಅವರ ಮನೆಯಲ್ಲಿಯೇ ಪತ್ತೆಯಾಗಿದ್ದು, ಕೊಲೆ ಮಾಡಿ ನಂತರ ನೇಣಿಗೆ ಹಾಕಿರುವ ಶಂಕೆ ವ್ಯಕ್ತವಾಗಿದೆ.  ಮಹಿಳೆಯ ಪತಿ ಮತ್ತು ಅತ್ತಿಗೆ ಮೇಲೆ ಪೋಷಕರು ಆರೋಪ ಮಾಡಿದ್ದು, ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  udayanadu2016

ರಾಷ್ಟ್ರಪತಿ ಚುನಾವಣೆ ದಿನವಾದ ಜು.17ರಂದೇ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ

ರಾಷ್ಟ್ರಪತಿ ಚುನಾವಣೆ ದಿನವಾದ ಜು.17ರಂದೇ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ

ಹೊಸದಿಲ್ಲಿ: ರಾಷ್ಟ್ರಪತಿ ಚುನಾವಣೆಗೆ ನಿಗದಿಯಾಗಿರುವ ಜುಲೈ 17ರಂದು ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದೆ. ಜುಲೈ 17 ರಿಂದ ಆಗಸ್ಟ್ 11ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ ನಡೆಸಲು ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಶಿಫಾರಸು ಮಾಡಿದೆ. ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ರಾಮನಾಥ್ ಕೋವಿಂದ್  ಶುಕ್ರವಾರ ನಾಮಪತ್ರ ಸಲ್ಲಿಸಿದ ಬಳಿಕ ಸಿಸಿಪಿಎ ಸಭೆ ನಡೆದಿದೆ.  ಗೃಹ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ನಡೆದ ಸಿಸಿಪಿಎ ಸಭೆಯಲ್ಲಿ ಜುಲೈ 17ರಿಂದ ಅಧಿವೇಶನ ಆರಂಭಿಸುವ ಕುರಿತು ನಿರ್ಧರಿಸಲಾಗಿದೆ […]

ಇಂಡಿ: ಬಸ್ ನಿಲ್ದಾಣದಲ್ಲಿ ಪತ್ತೆಯಾದ ಒಂದು ದಿನದ ಹೆಣ್ಣು ಮಗು ರಕ್ಷಣೆ

ಇಂಡಿ: ಬಸ್ ನಿಲ್ದಾಣದಲ್ಲಿ ಪತ್ತೆಯಾದ ಒಂದು ದಿನದ ಹೆಣ್ಣು ಮಗು ರಕ್ಷಣೆ

ಇಂಡಿ:ವಿಜಯಪುರ  ಜಿಲ್ಲೆಯ ಇಂಡಿ ಬಸ್ ನಿಲ್ದಾಣದಲ್ಲಿ ಆಗ ತಾನೆ ಹುಟ್ಟಿದ ಹೆಣ್ಣು ಮಗುವೊಂದನ್ನು ಶನಿವಾರ ಬೆಳಗ್ಗೆ ಬಿಟ್ಟು ಹೋಗಿದ್ದು ಅಶಕ್ತ ಸ್ಥಿತಿಯಲ್ಲಿರುವ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹೆಣ್ಣು ಮಗುವನ್ನು ಯುವ ಸಂಘಟನೆಯೊಂದರ ಕಾರ್ಯಕರ್ತರು ಮತ್ತು ಸ್ಥಳೀಯರು ರಕ್ಷಣೆ ಮಾಡಿದ್ದು ಇಂಡಿ ತಾಲೂಕಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಟ್ಟು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.  ಒಂದು ದಿನದ ಹೆಣ್ಣು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.  udayanadu2016