ಗೊಡಚಿ ಗ್ರಾಮದಲ್ಲಿ ಹಗಲು ರಾತ್ರಿ ಉರಿಯುವ ಬೀದಿ ದೀಪಗಳು

ಗೊಡಚಿ ಗ್ರಾಮದಲ್ಲಿ ಹಗಲು ರಾತ್ರಿ ಉರಿಯುವ ಬೀದಿ ದೀಪಗಳು

ರಾಮದುರ್ಗ: ರಾಜ್ಯದಲ್ಲಿ ವಿದ್ಯುತ್ ಕೊರತೆ ಇದ್ದು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಣ್ಮುಚ್ಛಾಲೆ ಸಾಮಾನ್ಯವಾಗಿದೆ. ಇಂಥದರಲ್ಲಿ ತಾಲೂಕಿನ ಗೊಡಚಿ ಗ್ರಾಮದಲ್ಲಿ ಹಗಲು ರಾತ್ರಿ  ಬೀದಿ ದೀಪ ಉರಿಯುತ್ತಿವೆ.  ಗೊಡಚಿ ಗ್ರಾಮದ ಪಂಚಾಯಿತಿ ಅಧಿಕಾರಿ ಮತ್ತು ಕೆಪಿಟಿಸಿಎಲ್ ಸಿಬ್ಬಂದಿಗೆ ಈ ಬಗ್ಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಹಗಲು ರಾತ್ರಿ ವಿದ್ಯುತ್ ದೀಪ ಉರಿಯುವುದು ನಿಂತಿಲ್ಲ. ವಿದ್ಯುತ್ ಪೋಲಾಗುವುದು ನಿರಂತರವಾಗಿದೆ. ಈ ಬಗ್ಗೆ ತೀವ್ರ ಕ್ರಮ ಜರುಗಿಬೇಕೆಂದು  ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.  udayanadu2016

ವಿಜಯಪುರ: 70 ಲೀಟರ್ ಕಳ್ಳಬಟ್ಟಿ ಸಾರಾಯಿ ವಶ, ಒಬ್ಬನ ಬಂಧನ

ವಿಜಯಪುರ: 70 ಲೀಟರ್ ಕಳ್ಳಬಟ್ಟಿ ಸಾರಾಯಿ ವಶ, ಒಬ್ಬನ ಬಂಧನ

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮುಳವಾಡ ತಾಂಡಾದಲ್ಲಿ 87 ಸಾವಿರ ರೂ ಮೌಲ್ಯದ  ಕಳ್ಳಬಟ್ಟಿ ಸಾರಾಯಿಯನ್ನು ಬುಧವಾರ ಅಬಕಾರಿ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದು ಒಬ್ಬನನ್ನು ಬಂಧಿಸಿದ್ದಾರೆ.  ಅಬಕಾರಿ ಉಪವಿಭಾಗ ಅಧೀಕ್ಷಕ ಜಗದೀಶ ಇನಾಮಾದಾರ ನೇತೃತ್ವದಲ್ಲಿ ನಡೆದ  ಕಾರ್ಯಚರಣೆಯಲ್ಲಿ ಆರೋಪಿ  ರಾಮಸಿಂಗ ತೋಟಪ್ಪ ಚವ್ಹಾಣ   ಎಂಬುವನನ್ನು ಬಂಧಿಸಿದ್ದು, 70 ಲೀಟರ್ ಕಳ್ಳಬಟ್ಟಿ ಸಾರಾಯಿ  ಮತ್ತು  2  ದ್ವಿಚಕ್ರ ವಾಹನಗಳನ್ನು ಜಪ್ತಿಮಾಡಿದ್ದಾರೆ.  ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  udayanadu2016

ರೈತರ ಸಾಲ ಮನ್ನಾ ಮಿತಿ ಹೆಚ್ಚಿಸಬೇಕು: ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಒತ್ತಾಯ

ರೈತರ ಸಾಲ ಮನ್ನಾ ಮಿತಿ ಹೆಚ್ಚಿಸಬೇಕು: ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಒತ್ತಾಯ

ಅಥಣಿ: ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿರುವುದು ಸ್ವಾಗತಾರ್ಹವಾಗಿದೆ. ಆದರೆ 50 ಸಾವಿರ ರೂ. ಮಿತಿಯಲ್ಲಿ ಸಾಲ ಮನ್ನಾ ಮಾಡಿದರೆ ಕೆಲವೇ ರೈತರಿಗೆ ಉಪಯೋಗವಾಗುತ್ತದೆ. ಬೇರೆ ರಾಜ್ಯಗಳಲ್ಲಿ 1-2 ಲಕ್ಷ ರೂ.ವರೆಗೂ ಸಾಲ ಮನ್ನಾ ಮಾಡಲಾಗಿದ್ದು, ರಾಜ್ಯ ಸರ್ಕಾರವೂ ಸಾಲ ಮನ್ನಾ ಮಿತಿ ಹೆಚ್ಚಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ  ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅಥಣಿಯಲ್ಲಿ ಸುದ್ದಿಗಾರರಿಗೆ ಬುಧವಾರ ಮಧ್ಯಾಹ್ನ ಪ್ರತಿಕ್ರಿಯೆ ನೀಡಿರುವ ಅವರು, ಸಹಕಾರಿ ಬ್ಯಾಂಕುಗಳಲ್ಲಿರುವ ರೈತರ ಸಾಲ ಮನ್ನಾ ಮಾಡಿದರೆ ಕೆಲವೆ ರೈತರಿಗೆ ಉಪಯೋಗವಾಗಲಿದೆ. ರಾಷ್ಟ್ರೀಕೃತ […]

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಬಿಜೆಪಿ ಜವಾಬ್ದಾರಿ: ಶಾಸಕ ಕೋನರೆಡ್ಡಿ

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಬಿಜೆಪಿ ಜವಾಬ್ದಾರಿ: ಶಾಸಕ ಕೋನರೆಡ್ಡಿ

ಬೆಂಗಳೂರು: ರಾಜ್ಯದ  ರೈತರ ಸಾಲ ಮನ್ನಾ ಘೋಷಣೆ ಸ್ವಾಗತಾರ್ಹ.ಕೇಂದ್ರ ಸರ್ಕಾರ ಸಹ ಕೂಡಲೇ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ರೈತರ  ಸಾಲ ಮನ್ನಾ ಮಾಡಬೇಕು. ರಾಜ್ಯ ಬಿಜೆಪಿಗೆ ಈ ಕುರಿತು ಹೆಚ್ಚಿನ ಜವಾಬ್ದಾರಿ ಇದೆ ಎಂದು ಜೆಡಿಎಸ್ ಶಾಸಕ ಎನ್.ಹೆಚ್. ಕೋನರೆಡ್ಡಿ ಹೇಳಿದ್ದಾರೆ. ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯೆ ನೀಡಿರುವ ಅವರು, ರೈತರ ಸಾಲ ಮನ್ನಾಕ್ಕಾಗಿ ರಾಜ್ಯ ಸರ್ಕಾರದ ಮೇಲೆ ಜೆಡಿಎಸ್ ನವರು ಒತ್ತಡ ತಂದಿದ್ದೆವು. ಬರೀ ಬಿಜೆಪಿಯವರಿಂದ ಒತ್ತಾಯ ಆಗಿಲ್ಲ. ಜೆಡಿಎಸ್ ಸಹ ರೈತರ ಪರವಾಗಿದೆ, […]

ರೈತರ ಸಾಲ ಮನ್ನಾ: ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಣೆ

ರೈತರ ಸಾಲ ಮನ್ನಾ: ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಣೆ

ಬೆಂಗಳೂರು: ರಾಜ್ಯದ ರೈತರು ಸಹಕಾರಿ ಬ್ಯಾಂಕ್ ಗಳಲ್ಲಿನ 50 ಸಾವಿರ ರೂ. ವರೆಗಿನ ಸಾಲ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ವಿಧಾನಸಭೆಯಲ್ಲಿ ಬುಧವಾರ ತಿಳಿಸಿದ್ದಾರೆ. ರೈತರ ಅಲ್ಪಾವಧಿ, ಮಧ್ಯಮಾವಧಿ ಬೆಳೆಗಳ  ಸಾಲಮನ್ನಾ  ಮಾಡಲಾಗುವುದು.  ಜೂನ್ 20 ರ ವರೆಗಿನ ಸಾಲದಲ್ಲಿ 50,000 ರೂ.ವರೆಗೆ ಮನ್ನಾ ಮಾಡಲಾಗುವುದು  ಎಂದು  ಸಿದ್ದರಾಮಯ್ಯ ಹೇಳಿದ್ದಾರೆ.  ಸಾಲ ಮನ್ನಾದಿಂದ 23 ಲಕ್ಷ ರಾಜ್ಯದ ರೈತರಿಗೆ ಅನುಕೂಲವಾಗಲಿದೆ. ರಾಜ್ಯ ಸರ್ಕಾರದ ಬೊಕ್ಕಸಕ್ಕೆ 8,165 ಕೋಟಿ ರು ಹೊರೆಯಾಗಲಿದೆ ಎಂದು ಅವರು […]

ಬಂಟ್ವಾಳ: ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಹಿಂಸಾಚಾರ, ಒಬ್ಬ ಯುವಕನ ಹತ್ಯೆ

ಬಂಟ್ವಾಳ: ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಹಿಂಸಾಚಾರ, ಒಬ್ಬ ಯುವಕನ ಹತ್ಯೆ

ಬಂಟ್ವಾಳ: ಕಲ್ಲಡ್ಕ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷನ ಹತ್ಯೆ ನಂತರದ ಗಲಭೆ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮದಲ್ಲಿ ಹಿಂಸಾಚಾರ ಮುಂದುವರಿದಿದೆ.  ನಿಷೇಧಾಜ್ಞೆ ಇದ್ದರೂ ಗ್ರಾಮದಲ್ಲಿ  ಒಬ್ಬ ಯುವಕನನ್ನು ದುಷ್ಕರ್ಮಿಗಳು  ಮಾರಕಾಸ್ತ್ರಗಳಿಂದ ಕೊಚ್ಚಿ ಬುಧವಾರ  ಹತ್ಯೆ ಮಾಡಿದ್ದಾರೆ. ಮಲ್ಲೂರು ನಿವಾಸಿ ಕಲಾಯಿ ಆಶ್ರಫ್ ನ ಮೇಲೆ ಬೆಂಜನಪದವಿನ ಕೆನರಾ ಕಾಲೇಜು ಬಳಿ ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೊಲೆಯಾದ ಕಲಾಯಿ ಆಶ್ರಪ್ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದವು. ಜಿಲ್ಲೆಯ […]

ರಾಜ್ಯದಲ್ಲಿ 2500 ಹೊಸ ಕುಡಿಯುವ ನೀರಿನ ಘಟಕಗಳ ಸ್ಥಾಪನೆ: ನಂಜಯ್ಯನಮಠ

ರಾಜ್ಯದಲ್ಲಿ 2500 ಹೊಸ ಕುಡಿಯುವ ನೀರಿನ ಘಟಕಗಳ ಸ್ಥಾಪನೆ: ನಂಜಯ್ಯನಮಠ

ಶಿವಮೊಗ್ಗ:  ರಾಜ್ಯದಲ್ಲಿ ಇನ್ನೂ ಹೊಸದಾಗಿ 2500 ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷ ಎಸ್ ಜಿ  ನಂಜಯ್ಯನ ಮಠ ಅವರು ತಿಳಿಸಿದರು. ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ  ಬುಧವಾರ ನಡೆದ  ಜಿಲ್ಲೆಯ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ,  ಜಿಲ್ಲೆಯಲ್ಲೂ ಕುಡಿಯುವ ನೀರಿನ ಹೊಸ ಘಟಕಗಳ ಅವಶ್ಯಕತೆ ಇದ್ದಲ್ಲಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.   ಕಳೆದ ಮೂರು ವರ್ಷದಿಂದ ನಿರೀಕ್ಷಿತ […]

ನ್ಯಾಯಾಂಗ ನಿಂದನೆ ಪ್ರಕರಣ: ನ್ಯಾ.ಕರ್ಣನ್ ಬಂಧನ, ಸುಪ್ರೀಂ ತೀರ್ಪಿನಂತೆ 6 ತಿಂಗಳು ಜೈಲು

ನ್ಯಾಯಾಂಗ ನಿಂದನೆ ಪ್ರಕರಣ: ನ್ಯಾ.ಕರ್ಣನ್ ಬಂಧನ, ಸುಪ್ರೀಂ ತೀರ್ಪಿನಂತೆ 6 ತಿಂಗಳು ಜೈಲು

ಹೊಸದಿಲ್ಲಿ: ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಕೋಲ್ಕತಾ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಸಿ ಎಸ್ ಕರ್ಣನ್ ಅವರು ಮಧ್ಯಂತರ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನೂ ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು, ಪೊಲೀಸರು  ತಮಿಳುನಾಡಿನ ಕೊಯಮತ್ತೂರಿನಲ್ಲಿ ಕರ್ಣನ್ ಅವರನ್ನು ಮಂಗಳವಾರ ಬಂಧಿಸಿದ್ದಾರೆ.  ಕೋಲ್ಕತಾದ ಪ್ರೆಸೆಡೆನ್ಸಿ ಜೈಲಿಗೆ  ಬುಧವಾರ ನ್ಯಾ.ಕರ್ಣನ್ ಅವರನ್ನು ಕರೆದೊಯ್ಯಲಾಗುತ್ತದೆ. ಸುಪ್ರೀಂಕೋರ್ಟ್ ಮೇ 9 ರಂದು ಕರ್ಣನ್‌ಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿತ್ತು. ಕರ್ಣನ್ ನಾಪತ್ತೆಯಾಗಿದ್ದರು. ಸೇವೆಯಿಂದ ನಿವೃತ್ತರಾದ ದಿನವೂ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಪೊಲೀಸರು ಕರ್ಣನ್ ಅವರಿಗಾಗಿ ತೀವ್ರ ಹುಡುಕಾಟ […]

ಮನಸ್ಸು, ದೇಹ ಶುಚಿಗೊಳಿಸುವುದೇ ಯೋಗ: ನಿರ್ಭಯಾನಂದ ಸ್ವಾಮಿ

ಮನಸ್ಸು, ದೇಹ ಶುಚಿಗೊಳಿಸುವುದೇ ಯೋಗ: ನಿರ್ಭಯಾನಂದ ಸ್ವಾಮಿ

ಕಲಬುರಗಿ: ಜಗತ್ತಿಗೆ ಭಾರತ ನೀಡಿದ ದೊಡ್ಡ ಕೊಡುಗೆ ಎಂದರೆ ಯೋಗ ಆಗಿದ್ದು, ಯೋಗದಿಂದ ಮನಸ್ಸು ಮತ್ತು ದೇಹ ಶುಚಿಯಾಗಿರಿಸಿಕೊಳ್ಳಲು,  ಆರೋಗ್ಯ ಪೂರ್ಣ ಜೀವನ ನಡೆಸಲು ಸಾಧ್ಯ  ಎಂದು ವಿಜಯಪುರ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮಿಜಿ ಹೇಳಿದರು. ಕಲಬುರಗಿ ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಸಮುದಾಯ ಭವನದಲ್ಲಿ ಜೂ.21ರಂದು ಬೆಳಗ್ಗೆ (ಬುಧವಾರ) ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಆಶೀರ್ವಚನ ನೀಡಿದರು. ಕಲಬುರಗಿಯ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ […]

ಸೌದಿ ರಾಜಕುಮಾರ ನಾಗಿ ಮೊಹ್ಮದ್‌ ಬಿನ್ ಸಲ್ಮಾನ್: ರಾಜ ಸಲ್ಮಾನ ಘೋಷಣೆ

ಸೌದಿ ರಾಜಕುಮಾರ ನಾಗಿ ಮೊಹ್ಮದ್‌ ಬಿನ್ ಸಲ್ಮಾನ್: ರಾಜ ಸಲ್ಮಾನ ಘೋಷಣೆ

  ರಿಯಾದ್‌: ಸೌದಿ ಆರೇಬಿಯಾದ ರಾಜ ಸಲ್ಮಾನ್, ತಮ್ಮ ಪುತ್ರ ಮೊಹ್ಮದ್‌ ಬಿನ್ ಸಲ್ಮಾನ್ ಅವರನ್ನು ಸೌದಿ ದೇಶದ ರಾಜಕುಮಾರ ಮತ್ತು ತನ್ನ ವಾರಸುರಾರನ್ನಾಗಿ ಘೋಷಿಸಿದ್ದಾರೆ.   ಬುಧವಾರ ಈ ಮಹತ್ವದ ಬೆಳವಣಿಗೆ ಬಗ್ಗೆ  ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸೌದಿ ಯುವರಾಜನಾಗಿದ್ದ ರಾಜ ಸಲ್ಮಾನ್ ಸಹೋದರ ನಯಿಫ್‌ ಬಿನ್ ಅಬ್ದುಲ್ ಅಜೀಜ್ ಅಲ್ ಸಾದ್‌ ಅವರ ಪುತ್ರ ಮೊಹ್ಮದ್ ಬಿನ್ ನಯಿಫ್ ಅವರನ್ನು ತೊಲಗಿಸಿರುವ ರಾಜ ಸಲ್ಮಾನ್ ತಮ್ಮ ಪುತ್ರ ಮೊಹ್ಮದ್‌ ಬಿನ್ ಸಲ್ಮಾನ್ ಅವರನ್ನು ವಾರಸುದಾರರನ್ನಾಗಿ ಘೋಷಿಸಿದ್ದಾರೆ. […]