ಯಡಿಯೂರಪ್ಪ, ಕೋರೆ ನೇತೃತ್ವದಲ್ಲಿ ಕೋರ್ ಸಭೆ : ಚುನಾವಣೆಗೆ ಬಿಜೆಪಿ ಸಿದ್ಧತೆ

ಯಡಿಯೂರಪ್ಪ, ಕೋರೆ ನೇತೃತ್ವದಲ್ಲಿ ಕೋರ್ ಸಭೆ : ಚುನಾವಣೆಗೆ ಬಿಜೆಪಿ ಸಿದ್ಧತೆ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಸ್ಥಿತಿಗತಿ ಅರಿಯಲು ಪ್ರವಾಸ ಕೈಗೊಂಡಿರುವ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸಂಸದ ಪ್ರಭಾಕರ ಕೋರೆ ಅವರ ಮನೆಯಲ್ಲಿ ಮಂಗಳವಾರ ಪಕ್ಷದ ಕೋರ್ ಸಮಿತಿ ಸಭೆ ನಡೆಸಲಿದ್ದಾರೆ ಎಂದು ಗೊತ್ತಾಗಿದೆ. ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಪಕ್ಷದ ನಾಯಕರು ಜಿಲ್ಲೆಯಲ್ಲಿ ಚುನಾವಣೆ ತಯಾರಿ ನಡೆಸಿರುವುದು ಕುತೂಹಲ ಕೆರಳಿಸಿದೆ. ಕೋರ್ ಸಮಿತಿ ಸಭೆಯಲ್ಲಿ ಸಂಸದ ಸುರೇಶ ಅಂಗಡಿ,  ಬಿಜೆಪಿ ಶಾಸಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಜಿಲ್ಲೆಯ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು […]

ನ್ಯಾಯಾಂಗ ನಿಂದನೆ: ಜು.10ರಂದು ಖುದ್ದು ಹಾಜರಿಗೆ ಆದೇಶ, ಮಲ್ಯಗೆ ಸುಪ್ರೀಂ ಸಂಕಷ್ಟ

ನ್ಯಾಯಾಂಗ ನಿಂದನೆ: ಜು.10ರಂದು ಖುದ್ದು ಹಾಜರಿಗೆ ಆದೇಶ, ಮಲ್ಯಗೆ ಸುಪ್ರೀಂ ಸಂಕಷ್ಟ

 ಹೊಸದಿಲ್ಲಿ: ಮದ್ಯದ ದೊರೆ ವಿಜಯ್ ಮಲ್ಯರಿಗೆ ಬ್ಯಾಂಕ್‌ ಸಾಲದ ಕೇಸ್‌ ಜೊತೆಗೆ ಹೊಸದಾಗಿ ನ್ಯಾಯಾಂಗ ನಿಂದನೆ ಕೇಸ್‌ ಎದುರಾಗಿದ್ದು, ಜುಲೈ 10ರಂದು ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿದೆ.  ಸಾಲದ ಸುಳಿಗೆ ಸಿಲುಕಿ ವಿದೇಶದಲ್ಲಿ ವಿಜಯ್ ಮಲ್ಯತಲೆಮರೆಸಿಕೊಂಡಿದ್ದಾರೆ. ಭಾರತದ ವಿವಿಧ ಬ್ಯಾಂಕ್‌ಗಳಿಗೆ 9,400 ಕೋಟಿ ರೂ. ಸಾಲ ಮರು ಪಾವತಿಸದೆ ವಂಚಿಸಿರುವ ಮಲ್ಯ ನ್ಯಾಯಾಲಯದ ಅದೇಶಗಳನ್ನು ಧಿಕ್ಕರಿಸಿದ್ದಾರೆ. ತಮ್ಮ ಆಸ್ತಿ ಕುರಿತು ತಪ್ಪು ಮಾಹಿತಿ ನೀಡಿ ಕೋರ್ಟ್ ದಿಕ್ಕು ತಪ್ಪಿಸಿದ್ದಾರೆ. ಆದ್ದರಿಂದ ಮಲ್ಯ ವಿರುದ್ಧ ಕೋರ್ಟ್‌ ಧಿಕ್ಕಾರ ಆರೋಪದಡಿ ಶಿಕ್ಷಿಸಬೇಕು ಎಂದು […]

ನ್ಯಾಯಾಂಗ ನಿಂದನೆ: ನ್ಯಾ.ಕರ್ಣನ್ ಗೆ 6 ತಿಂಗಳು ಜೈಲು ಶಿಕ್ಷೆ-ಸುಪ್ರೀಂ ತೀರ್ಪು

ನ್ಯಾಯಾಂಗ ನಿಂದನೆ: ನ್ಯಾ.ಕರ್ಣನ್ ಗೆ 6 ತಿಂಗಳು ಜೈಲು ಶಿಕ್ಷೆ-ಸುಪ್ರೀಂ ತೀರ್ಪು

ಹೊಸದಿಲ್ಲಿ: ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ  ಕೋಲ್ಕತ್ತ ಹೈಕೋರ್ಟ್ ನ್ಯಾಯಮೂರ್ತಿ ಸಿ ಎಸ್ ಕರ್ಣನ್ ಅವರಿಗೆ ಸುಪ್ರೀಂ ಕೋರ್ಟ್ 6 ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಮೂರ್ತಿ ಸಿ.ಎಸ್.ಕರ್ಣನ್‌‌ ಸುಪ್ರೀಂಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿಗಳಿಗೇ ಸೆಡ್ಡು ಹೊಡೆದಿದ್ದರು. ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಹಾಗೂ ಮತ್ತಿತರ 7 ಜನ ಸುಪ್ರೀಂ ಜಡ್ಜ್‌ಗಳಿಗೆ ತಲಾ 5 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿ ಸೋಮವಾರ  ಕರ್ಣನ್ ಆದೇಶ ಹೊರಡಿಸಿದ್ದರು.ಕರ್ಣನ್‌‌ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ […]

ಬೆಂಕಿ ಆಕಸ್ಮಿಕ: ಕೊಬ್ಬರಿ ಗೋದಾಮು ಭಸ್ಮ

ಬೆಂಕಿ ಆಕಸ್ಮಿಕ: ಕೊಬ್ಬರಿ ಗೋದಾಮು ಭಸ್ಮ

ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಮಾದಪುರದಲ್ಲಿ  ಆಕಸ್ಮಿಕ ಬೆಂಕಿ ತಗುಲಿ ಕೊಬ್ಬರಿ ಸಂಗ್ರಹಿಸಿದ ಗೋದಾಮು ಭಸ್ಮವಾಗಿದೆ. ಬೆಂಕಿ ಅನಾಹುತದಲ್ಲಿ ಸುಮಾರು ೩೫ ಕ್ವಿಂಟಲ್  ಭಸ್ಮವಾಗಿದ್ದು, ಗೋದಾಮು ಮಾದಪುರದ ಕೆ. ಎಂ.ಸುಧೀರ್ ಎಂಬುವವರಿಗೆ ಸೇರಿದೆ. ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದ ಬೆಂಕಿ ಹೊತ್ತಿಕೊಂಡು ಗೋದಾಮಿಗೆ ವ್ಯಾಪಿಸಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಭೇಟಿ ನೀಡಿದರು. udayanadu2016

ತಲಪರಿಗೆ ಮೂಲಕ ಕುಡಿಯುವ ನೀರಿಗಾಗಿ ಶಾಶ್ವತ ಪರಿಹಾರ ಕಂಡುಕೊಂಡ ಗ್ರಾಮ ಪಂಚಾಯತ.

ತಲಪರಿಗೆ ಮೂಲಕ ಕುಡಿಯುವ ನೀರಿಗಾಗಿ ಶಾಶ್ವತ ಪರಿಹಾರ ಕಂಡುಕೊಂಡ ಗ್ರಾಮ ಪಂಚಾಯತ.

ಎಂ.ಎನ್.ರಾಜೇಂದ್ರ ಮಧುಗಿರಿ: ಸತತ ಬರಗಾಲದಿಂದ ಕಂಗೆಟ್ಟಿದ್ದ ರೈತರ ಪಾಲಿಗೆ ಸ್ಥಳೀಯ ಶಾಸಕರು ಮತ್ತು ಕೇಂದ್ರ ಸರಕಾರದ ಯೋಜನೆಯೊಂದರಿಂದ ಜೀವ ಜಲದ ರಕ್ಷಣೆಗೆ ಪಂಚಾಯಾತಿಯೊಂದು ಮುಂದಾಗಿದ್ದು ಮೂಲೆ ಗುಂಪಾಗಿದ್ದ ತುಪರಿಗೆ ಇಂದು ಅಭಿವೃಧ್ದಿಯತ್ತಾ ಸಾಗಿದ್ದು ಕುಡಿಯುವ ನೀರಿಗಾಗಿ ಶಾಶ್ವತವಾದ ಪರಿಹಾರವನ್ನು ಕಂಡು ಕೊಂಡು ಗ್ರಾಮದ ಜನರಿಗೆ ಕೊಂಚ ನೀರಿನ ಭವಣೆಯನ್ನು ನೀಗಿಸುವತ್ತಾ ಮುಖಮಾಡಿದೆ. ಬೇಸಿಗೆ ಆರಂಭವಾದಗ ಕುಡಿಯುವ ನೀರಿನ ಅಭಾವ ಸರ್ವೆ ಸಾಮಾನ್ಯ ಸಕಾಲಕ್ಕೆ ಮಳೆ ಬೆಳೆÉಯಾಗದೆ ಮಳೆಗಾಗಿ ಬಾನಿನತ್ತ ರೈತರು ಮುಖ ಮಾಡಿದ್ದುಂಟು. ಇಂತಹ ಪರಿಸ್ಥಿತಿಯಲ್ಲಿ ತಾಲೂಕಿನ […]

ಬಗರ್ ಹುಕುಂ ಸಾಗುವಳಿ ಮನೆ ಹಕ್ಕುಪತ್ರ 3 ತಿಂಗಳೊಳಗೆ ನೀಡಿ: ಸಚಿವ ಕಾಗೋಡು ತಿಮ್ಮಪ್ಪ

ಬಗರ್ ಹುಕುಂ ಸಾಗುವಳಿ ಮನೆ ಹಕ್ಕುಪತ್ರ 3 ತಿಂಗಳೊಳಗೆ ನೀಡಿ: ಸಚಿವ ಕಾಗೋಡು ತಿಮ್ಮಪ್ಪ

ಹಾವೇರಿ: ಮೂರು ತಿಂಗಳೊಳಗಾಗಿ ಬಗರ್‍ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ ಹಾಗೂ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸರ್ಕಾರಿ ಜಾಗೆಯಲ್ಲಿ ಮನೆ ನಿರ್ಮಾಣ ಮಾಡಿಕೊಂಡವರಿಗೆ ಸಕ್ರಮಗೊಳಿಸಿ ಹಕ್ಕುಪತ್ರ ನೀಡಿ ಎಂದು ಎಲ್ಲ ತಹಸೀಲ್ದಾರ್ ಗಳಿಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಾಕೀತು ಮಾಡಿದರು. ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ  ಬರ ನಿರ್ವಹಣೆ ಹಾಗೂ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು ಸರ್ಕಾರಿ ಗೋಮಾಳ, ಹುಲ್ಲುಗಾವಲು ಪ್ರದೇಶದಲ್ಲಿ ಸರ್ಕಾರಿ ಕಚೇರಿ, ಅಂಗನವಾಡಿ ಹಾಗೂ ವಿದ್ಯುತ್ ಸ್ಟೇಷನ್, ಆಸ್ಪತ್ರೆ […]

ನೂತನ ರಸ್ತೆ ಕಾಮಗಾರಿಗೆ ಚಾಲನೆ

ನೂತನ ರಸ್ತೆ ಕಾಮಗಾರಿಗೆ ಚಾಲನೆ

ಹೊಳೆಹೊನ್ನೂರು: ಸಾರ್ವಜನಿಕ ಕಾರ್ಯಗಳನ್ನು ನಿರ್ವಹಿಸಲು ಸದಾ ಸಿದ್ದ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾರದಾ ಪೂರ್ಯಾನಾಯ್ಕ್ಕ್ ತಿಳಿಸಿದರು. ಹನುಮಂತಾಪುರ ಸಮೀಪದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡಿದ ಅವರು, ಹಳ್ಳಿ ಹಾಗೂ ನಗರ ಪ್ರದೇಶಗಳು ಉದ್ದಾರವಾಗಬೇಕಾದರೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ದಿ ಕಾರ್ಯಗಳಾಗಿವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿ ಕೆಲಸಗಳನ್ನು ನಡೆಸಲಾಗುವುದು ಎಂದರು. ಈ ಸಂದರ್ಭದಲ್ಲಿ ಪರಶುರಾಮ್, ಜಗದೀಶ್, ಬಿ ಚಂದ್ರೋಜಿರಾವ್, ಎಂ. ಚಂದ್ರಪ್ಪ, ಮಲ್ಲಮ್ಮ ನಾಗರಾಜ್, ಸಿದ್ದೋಜಿರಾವ್, […]

ರಾಜ್ಯ ಉಸ್ತುವಾರಿ ಸಭೆಯಲ್ಲಿ ಕಾಂಗ್ರೆಸ್ಸಿಗರಿಂದ ದೂರುಗಳ ಸುರಿಮಳೆ

ರಾಜ್ಯ ಉಸ್ತುವಾರಿ ಸಭೆಯಲ್ಲಿ ಕಾಂಗ್ರೆಸ್ಸಿಗರಿಂದ ದೂರುಗಳ ಸುರಿಮಳೆ

ಬೆಂಗಳೂರು:  ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿರುವ ಸಮಸ್ಯೆಗಳ ಬಗ್ಗೆ ಕೆಪಿಸಿಸಿ ಉಸ್ತುವಾರಿ ವೇಣುಗೋಪಾಲ್ ಅವರಿಗೆ  ಸೋಮವಾರ ದೂರುಗಳ ಸುರಿಮಳೆಯಾಗಿದೆ. ಕೆಪಿಸಿಸಿ ಉಸ್ತುವಾರಿ ವಹಿಸಿಕೊಂಡ ನಂತರ ಮೊದಲ ಬಾರಿ ಬೆಂಗಳೂರಿಗೆ ಸೋಮವಾರ ಬಂದಿಳಿದ ವೇಣುಗೋಪಾಲ್ ಅವರಿಗೆ ಕೆಲ ಹೊತ್ತಿನಲ್ಲಿಯೇ ರಾಜ್ಯ ಕಾಂಗ್ರೆಸ್ ನಲ್ಲಿರುವ ಭಿನ್ನಾಭಿಪ್ರಾಯಗಳ ಪರಿಚಯವಾಗಿದೆ. ಕಾಂಗ್ರೆಸ್ ಆಡಳಿತ, ಕೆಪಿಸಿಸಿ ಅಧ್ಯಕ್ಷರು, ರಾಜ್ಯದ ಸಚಿವರು ಮತ್ತು ಶಾಸಕರ ವರ್ತನೆ,  ಕಾಂಗ್ರೆಸ್ ನಲ್ಲಿರುವ ಇತರೆ ವಿದ್ಯಮಾನ ಮತ್ತಿತರ ಕಾಂಗ್ರೆಸ್  ಸಮಸ್ಯೆಗಳ ಬಗ್ಗೆ ಕೆಪಿಸಿಸಿ ಉಸ್ತುವಾರಿ ವೇಣುಗೋಪಾಲ್ ಅವರಿಗೆ ನಾಯಕರು, ಕಾರ್ಯಕರ್ತರು ದೂರುಗಳ […]

ವಿವಾದಿತ ಜಾಗದಲ್ಲಿ ಮಾಲ್ ನಿರ್ಮಾಣ: ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ವಿವಾದಿತ ಜಾಗದಲ್ಲಿ ಮಾಲ್ ನಿರ್ಮಾಣ: ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ದಾವಣಗೆರೆ: ಮಹಾನಗರ ಪಾಲಿಕೆಯವರು ವಿವಾದಿತ ಜಾಗದಲ್ಲಿ ಶಾಮನೂರು ಕುಟುಂಬದವರಿಗೆ ಮಾಲ್ ಹಾಗೂ ಮಿನಿ ಛತ್ರಗಳನ್ನು ನಿರ್ಮಾಣ ಮಾಡಲು ಅನುಮತಿ ನೀಡಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಮಹಾನಗರ ಪಾಲಿಕೆ ಮುಂದೆ ಪ್ರತಿಭಟನೆ ನಡೆಸಿದರು. ನಗರದ ಲಕ್ಷ್ಮಿಫೆಲೀರ್ ಮಿಲ್ ಬಳಿ ಶಾಮನೂರು ಕುಟುಂಬದವರು ಕಾಂಪೌಂಡ್ ಹಾಕಿಕೊಂಡಿರುವ ಜಾಗ ವಿವಾದದಿಂದ ಕೂಡಿದೆ.ಇಲ್ಲಿರುವ ಸಾರ್ವಜನಿಕ ರಸ್ತೆ ಹಾಗೂ ಪಾರ್ಕ್ ಗಳನ್ನು ಕಬಳಿಸಿ ಖಾಸಗಿ ಮಾಲ್ ನಿರ್ಮಾಣ ಮಾಡಲಾಗಿದೆ. ಈ ವಿಚಾರವಾಗಿ ಕಳೆದ ಎರಡು ವರ್ಷಗಳಿಂದಲೂ ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ ಹಾಗೂ ಹೋರಾಟ ನಡೆಸುತ್ತಿದ್ದೇವೆ. […]

ಕೇಂದ್ರ ರಾಜ್ಯ ಸರ್ಕಾರಕ್ಕೆ 1 ಲಕ್ಷ 65 ಸಾವಿರ ಮೆ.ಟನ್ ಆಹಾರ ಧಾನ್ಯ ನೀಡಿದ್ದರು ರಾಜ್ಯ ಸರ್ಕಾರ ಬೊಬ್ಬೆ ಹೊಡೆಯುತ್ತಿದೆ – ಬಿಎಸವೈ

ಕೇಂದ್ರ ರಾಜ್ಯ ಸರ್ಕಾರಕ್ಕೆ 1 ಲಕ್ಷ 65 ಸಾವಿರ ಮೆ.ಟನ್ ಆಹಾರ ಧಾನ್ಯ ನೀಡಿದ್ದರು ರಾಜ್ಯ ಸರ್ಕಾರ ಬೊಬ್ಬೆ ಹೊಡೆಯುತ್ತಿದೆ – ಬಿಎಸವೈ

ರಾಯಬಾಗ: ಅನ್ನ ಭಾಗ್ಯ ಯೋಜನೆ ಇದನ್ನು ಲಾಭ ಮಾಡಿಕೊಳ್ಳುತ್ತಿದ್ದಾರೆ. ಆದರೆ ಬಡವರು ನಿಜವಾದ ಸಂಗತಿಯನ್ನು ಅರಿಯಬೇಕು. ಕೇಂದ್ರ ಸರಕಾರ 1ಲಕ್ಷ 65ಸಾವಿರ ಮೆಟ್ರಿಕ್ ಟನ್ ಅಕ್ಕಿಯನ್ನು ಕೆ.ಜಿಗೆ 32 ರು. ಕೊಟ್ಟು ಖರೀದಿಸಿ ರಾಜ್ಯ ಸರಕಾರಕ್ಕೆ 3 ರು.ಗೆ ನೀಡಲಾಗುತ್ತಿದೆ. ಆದರೆ ರಾಜ್ಯ ಸರಕಾರ ಇದು ನಮ್ಮ ಯೋಜನೆ ಎಂದು ಬೊಬ್ಬೆ ಹೊಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು. ತಾಲೂಕಿನ ಕಂಕಣವಾಡಿ ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ಭಾರತೀಯ ಜನತಾ ಪಕ್ಷ ರಾಯಬಾಗ […]