ಕೆಪಿಸಿಸಿಗೆ ಹೊಸ ಅಧ್ಯಕ್ಷರ ಆಯ್ಕೆಗೆ ಹೊಸದಿಲ್ಲಿಯಲ್ಲಿ ಕಾಂಗ್ರೆಸ್ ನಾಯಕರ ಸಭೆ

ಬೆಳಗಾವಿ: ಕೆಪಿಸಿಸಿಗೆ ಹೊಸ ಅಧ್ಯಕ್ಷರ ಆಯ್ಕೆಗೆ  ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಹೊಸದಿಲ್ಲಿಯಲ್ಲಿ ಸೋಮವಾರ ಬೆಳಗ್ಗೆ ಸಭೆ ಆರಂಭವಾಗಿದ್ದು,  ಕೆಪಿಸಿಸಿ ಅಧ್ಯಕ್ಷರ ನೇಮಕ ಘೋಷಣೆಗೆ ಕ್ಷಣ ಗಣನೆ ಶುರುವಾಗಿದೆ. ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಸೋಮವಾರ ತೆರೆ ಬೀಳಲಿದ್ದು, ಮಂಗಳವಾರ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಡಿ.ಕೆ. ಶಿವಕುಮಾರ್, ಕೆ.ಜೆ. ಜಾರ್ಜ್‌, ಹೆಚ್.ಕೆ. ಪಾಟೀಲ್, ಎಂ.ಬಿ. […]

ಮರುಡಾಂಬರೀಕರಣಗೊಂಡ ಕಳಪೆ ರಸ್ತೆ: ಶಾಸಕ ಸತೀಶ ತ್ವರಿತ ಕ್ರಮಕ್ಕೆ ದೇವಗಿರಿ ಗ್ರಾಮಸ್ಥರ ಮೆಚ್ಚುಗೆ

ಬೆಳಗಾವಿ: ಡಾಂಬರೀಕರಣಗೊಂಡ ಕೆಲವೇ ದಿನಗಳಲ್ಲಿ ಕಿತ್ತು  ಹೋಗಿದ್ದ ಯಮಕನಮರಡಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ದೇವಗಿರಿ ಗ್ರಾಮದ 1 ಕಿ.ಮೀ. ರಸ್ತೆ ಕಾಮಗಾರಿಯನ್ನು ಸಂಪೂರ್ಣ ತೆಗೆಯಿಸಿ ಮರು ಡಾಂಬರೀಕರಣಗೊಳಿಸಲಾಗಿದೆ. ಗ್ರಾಮ ವಿಕಾಸ ಯೋಜನೆಯಡಿ ಶಾಸಕರ ನಿಧಿಯ 37.5 ಲಕ್ಷ ರೂ. ವೆಚ್ಚದಲ್ಲಿ ದೇವಗಿರಿ ರಸ್ತೆ ಕಾಮಗಾರಿ ನಿರ್ವಹಿಸಲಾಗಿತ್ತು. ಈ ರಸ್ತೆಯ ಕಳಪೆ ನಿರ್ವಹಣೆ ಬಗ್ಗೆ ಹಲವು ದೂರುಗಳು ಕೇಳಿ ಬಂದಿದ್ದರಿಂದ ಶಾಸಕ ಸತೀಶ ಜಾರಕಿಹೊಳಿ ಖುದ್ದಾಗಿ ದೇವಗಿರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಕಳಪೆ ಕಾಮಗಾರಿ ಕೈಗೊಂಡ ಗುತ್ತಿಗೆದಾರ […]

ಕೇರಳ ಕಾಂಗ್ರೆಸ್ ಕಾರ್ಯಕರ್ತರಿಂದ ಕರು ಹತ್ಯೆ: ರಾಹುಲ ಗಾಂಧಿ ಖಂಡನೆ

ಕೇರಳ ಕಾಂಗ್ರೆಸ್ ಕಾರ್ಯಕರ್ತರಿಂದ ಕರು ಹತ್ಯೆ: ರಾಹುಲ ಗಾಂಧಿ ಖಂಡನೆ

  ಹೊಸದಿಲ್ಲಿ: ಪಶು ಮಾರುಕಟ್ಟೆಯಲ್ಲಿ ಹತ್ಯೆಯ ಉದ್ದೇಶಕ್ಕಾಗಿ ಪ್ರಾಣಿಗಳ ಮಾರಾಟ ನಿಷೇಧಿಸಿರುವ ಕೇಂದ್ರದ ಆದೇಶದ ವಿರುದ್ಧ ಕೇರಳದ ಯುವ ಕಾಂಗ್ರೆಸ್ ಕಾರ್ಯಕರ್ತರು ಎಮ್ಮೆ ಕರುವೊಂದನ್ನು ಸಾರ್ವಜನಿಕವಾಗಿ ಶಿರಚ್ಛೇದ ಮಾಡಿ ಹತ್ಯೆ ಮಾಡುವ ಮೂಲಕ ಪ್ರತಿಭಟನೆಯನ್ನು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ  ರಾಹುಲ ಗಾಂಧಿ ಖಂಡಿಸಿದ್ದಾರೆ.    ಕೇಂದ್ರ ಆದೇಶದ ವಿರುದ್ಧ ಕೇರಳದ ಕಣ್ಣೂರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು. ಪ್ರತಿಭಟನೆಯಲ್ಲಿ ಎಮ್ಮೆ ಕರುವೊಂದನ್ನು ಸಾರ್ವಜನಿಕ ಸ್ಥಥಳದಲ್ಲಿ ಹತ್ಯೆ ಮಾಡಿದ್ದರು. ಈ ತರಹದ ಕ್ರೂರ ಕೃತ್ಯಕ್ಕೆ ಆಕ್ರೋಶಗಳು ವ್ಯಕ್ತವಾಗಿವೆ. ಪ್ರಕರಣ ಸಂಬಂಧ […]

ನಾಲ್ಕು ದೇಶಗಳ ಪ್ರವಾಸಕ್ಕೆ ತೆರಳಿದ ಪ್ರಧಾನಿ

ನಾಲ್ಕು ದೇಶಗಳ ಪ್ರವಾಸಕ್ಕೆ ತೆರಳಿದ ಪ್ರಧಾನಿ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನಾಲ್ಕು ದೇಶಗಳ ಪ್ರವಾಸಕ್ಕೆ ಇಲ್ಲಿಂದ ಸೋಮವಾರ ತೆರಳಿದ್ದಾರೆ. ಜರ್ಮನಿ, ಸ್ಪೇನ್, ರಷ್ಯಾ ಮತ್ತು ಫ್ರಾನ್ಸ್ ದೇಶಗಳಿಗೆ ಪ್ರಧಾನಿ ಭೇಟಿ ನೀಡಲಿದ್ದು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳಲಿದ್ದಾರೆ. ದ್ವಿಪಕ್ಷೀಯ ವ್ಯಾಪಾರ ಮತ್ತು ವಾಣಿಜ್ಯ, ಆರ್ಥಿಕ ಸಹಕಾರ ಮತ್ತು  ಭಯೋತ್ಪಾದನೆ  ನಿಗ್ರಹದ ಬಗ್ಗೆ  ಮಹತ್ವದ ಚರ್ಚೆಗಳು ಈ ಸಂದರ್ಭದಲ್ಲಿ ನಡೆಯಲಿವೆ ಎಂದು  ವಿದೇಶಾಂಗ ವ್ಯವಹಾರಗಳ ವಕ್ತಾರ ಗೋಪಾಲ್ ಬಗ್ಲೇ  ಟ್ವಿಟ್ ಮಾಡಿದ್ದಾರೆ. ಜರ್ಮನಿಯಲ್ಲಿ,  4 ನೇ ಇಂಡೋ-ಜರ್ಮನ್  ಸರ್ಕಾರದ ಸಮಾಲೋಚನೆಯಲ್ಲಿ ಭಾಗವಹಿಸುವ ಮೋದಿ  ಜರ್ಮನ್ ಚಾನ್ಸೆಲರ್ ಏಂಜೆಲಾ […]

ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಬಿಜೆಪಿ ಸರ್ಕಾರ ವಿಫಲ : ಕಾಂಗ್ರೆಸ್ ಆರೋಪ

ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಬಿಜೆಪಿ ಸರ್ಕಾರ ವಿಫಲ : ಕಾಂಗ್ರೆಸ್ ಆರೋಪ

ಹೊಸದಿಲ್ಲಿ: ಉತ್ತರಪ್ರದೇಶದಲ್ಲಿ  ಕಾನೂನು ಮತ್ತು ಸುವ್ಯವಸ್ಥೆ ಬಿಕ್ಕಟ್ಟು ಪರಿಹರಿಸುವಲ್ಲಿ  ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ  ಸರ್ಕಾರ ವಿಫಲವಾಗಿದೆ, ದಲಿತರ ಮತ್ತು ಅಲ್ಪ ಸಂಖ್ಯಾತರ ರಕ್ಷಣೆಯ ಬಗ್ಗೆಯೂ  ರಾಜ್ಯ ಸರ್ಕಾರಕ್ಕೆ ಅರಿವಿಲ್ಲ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ಈ ಕುರಿತು ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿರುವ ಅವರು, ದಲಿತರು ಮತ್ತು ಅಲ್ಪಸಂಖ್ಯಾತರ  ಸುರಕ್ಷತೆಯನ್ನು ನಿಭಾಯಿಸುವಲ್ಲಿ ಮುಖ್ಯಮಂತ್ರಿ ಯೋಗಿ ಅವರ  ಅಜ್ಞಾನ ಬಯಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, […]

ಖಾನಾಪುರದಲ್ಲಿ ಅಸಲಿಗಿಂತ ನಕಲಿ ವೈದ್ಯರೇ ಹೆಚ್ಚು..!

ಖಾನಾಪುರದಲ್ಲಿ ಅಸಲಿಗಿಂತ ನಕಲಿ ವೈದ್ಯರೇ ಹೆಚ್ಚು..!

ಖಾನಾಪುರ: ಭಾರತೀಯ ಸಂಸ್ಕೃತಿಯಲ್ಲಿ ‘ವೈದ್ಯೋ ನಾರಾಯಣೋ ಹರಿಃ’ ಅರ್ಥಾತ್ ರೋಗಿಗಳಿಗೆ ಉಪಚಾರ ನೀಡುವ ವೈದ್ಯ ಸಾಕ್ಷಾತ್ ಹರಿ ನಾರಾಯಣನಿಗೆ ಸಮಾನನಾದವ ಎಂಬ ನಾಣ್ಣುಡಿಯಿದೆ. ಒಂದು ಜೀವವನ್ನು ಉಳಿಸುವ ಹಾಗೂ ರೋಗಿಗಳಿಗೆ ಉಪಚರಿಸುವ ಮಹತ್ಕಾರ್ಯವಾದ ವೈದ್ಯವೃತ್ತಿಯನ್ನು ಪ್ರಾರಂಭಿಸಲು ಹಗಲು ರಾತ್ರಿ ಶೃದ್ಧೆಯಿಂದ ಅಭ್ಯಸಿಸಿ ಹವಲು ವರ್ಷ ಅವಧಿಯ ಎಂಬಿಬಿಎಸ್, ಬಿಹೆಚ್‍ಎಂಎಸ್, ಬಿಎಎಂಎಸ್, ಬಿಡಿಎಸ್ ಸೇರಿದಂತೆ ವೃತ್ತಿಪರ ಶಿಕ್ಷಣವನ್ನು ಕಲಿತು ನಂತರ ಕೆಲದಿನಗಳ ಕಾಲ ನುರಿತ ವೈದ್ಯರ ಬಳಿ ಅಥವಾ ಆರೋಗ್ಯ ಕೇಂದ್ರಗಳಲ್ಲಿ ತರಬೇತಿಯನ್ನು ಪಡೆಯುವ ಅವಶ್ಯಕತೆಯಿದೆ. ಇದಾದ ನಂತರ […]

ಕೇಂದ್ರದಲ್ಲಿ ಮೂರು ವರ್ಷ ಆಡಳಿತ ನಡೆಸಿದ ಬಿಜೆಪಿ ಸಾಧನೆ ಶೂನ್ಯ: ಬಸವರಾಜ್

ಕೇಂದ್ರದಲ್ಲಿ ಮೂರು ವರ್ಷ ಆಡಳಿತ ನಡೆಸಿದ ಬಿಜೆಪಿ ಸಾಧನೆ ಶೂನ್ಯ: ಬಸವರಾಜ್

ದಾವಣಗೆರೆ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ 3 ವರ್ಷದ ಆಡಳಿತ ಮುಗಿಸಿದರು  ಸರ್ಕಾರದ ಸಾಧನೆ ಶೂನ್ಯ ಎಂದು ರೇಷ್ಮೆ ಉದ್ಯಮಗಳ ನಿಗಮದ ಮಾಜಿ ಅಧ್ಯಕ್ಷ ಡಿ. ಬಸವರಾಜ್ ಹೇಳಿದರು. ನಗರದಲ್ಲಿ ರವಿವಾರ ಸುದ್ದಿಗೋಷ್ಠಿ ಮಾತನಾಡಿದ ಅವರು,  ಪ್ರಧಾನಿಯವರು ಮನ್ ಕಿ ಬಾತ್‍ನಲ್ಲಿ ಸುಳ್ಳು ಹೇಳಿಕೆ, ಭರವಸೆ ನೀಡುತ್ತಿದ್ದು, ಮೊದಲು ಮನ್ ಕಿ ಬಾತ್ ಕಾರ್ಯಕ್ರಮವನ್ನು ನಿಷೇದ ಮಾಡಬೇಕು. ಬಣ್ಣದ ಮಾತುಗಳಿಂದ ಜನರನ್ನು ಮರಳು ಮಾಡಿ ಮತ ಪಡೆದು ಅಧಿಕಾರಕ್ಕೆ ಬಂದು  ನೀಡಿದ ಯಾವುದೇ ಭರವಸೆ […]

ಬೆಳಗಾವಿ: ರೈಲು ಹಳಿಗೆ ಬಿದ್ದು ಯುವತಿ ಆತ್ಮಹತ್ಯೆ

ಬೆಳಗಾವಿ: ರೈಲು ಹಳಿಗೆ ಬಿದ್ದು ಯುವತಿ ಆತ್ಮಹತ್ಯೆ

ಬೆಳಗಾವಿ: ಇಲ್ಲಿಯ ಟಿಳಕವಾಡಿಯ ಮೂರನೇ ಗೇಟ್ ಬಳಿ ಯುವತಿಯೊಬ್ಬಳು ರವಿವಾರ ಮಧ್ಯಾಹ್ನ ರೇಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳನ್ನು ಮಚ್ಚೆ ಗ್ರಾಮದ ನಿವಾಸಿ ನಿಶಾ ಪಾಟೀಲ (20) ಎಂದು ಗುರುತಿಸಲಾಗಿದೆ. ಈಕೆ ಗೋಗಟೆ ಕಾಲೇಜಿನಲ್ಲಿ ಪದವಿ ತರಗತಿ ವಿದ್ಯಾರ್ಥಿನಿ ಎಂದು ಗೊತ್ತಾಗಿದೆ.  ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರ್ಕಾರದ ಯೋಜನೆ ಸದುಪಯೋಗ ಪಡೆದುಕೊಳ್ಳಿ: ಬಸವಪ್ರಭು ಸ್ವಾಮೀಜಿ

ಸರ್ಕಾರದ ಯೋಜನೆ ಸದುಪಯೋಗ ಪಡೆದುಕೊಳ್ಳಿ: ಬಸವಪ್ರಭು ಸ್ವಾಮೀಜಿ

ದಾವಣಗೆರೆ: ಸಮುದಾಯದ ಎಲ್ಲರೂ ಸಂಘಟಿತರಾಗುವ ಮೂಲಕ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು  ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು. ನಗರದ ಎಂಸಿಸಿ ಬಿ ಬ್ಲಾಕ್‍ನ ಪಟ್ಟಸಾಲಿ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಉದ್ಘಾಟನೆ ಹಾಗೂ ವಾರ್ಷಿಕ ಮಹಾಸಭೆಯ ಕಾರ್ಯಕ್ರಮದಲ್ಲಿ  ಸಾನ್ನಿದ್ಯವಹಿಸಿ ಮಾತನಾಡಿದ ಅವರು, ಸಮಾಜ ಬಾಂಧವರು ಶೈಕ್ಷಣಿಕವಾಗಿ, ರಾಜಕೀಯವಾಗಿ ಬೆಳೆಯುವ ಮೂಲಕ ಒಗ್ಗಟ್ಟಿನಿಂದ ಸರ್ಕಾರದಿಂದ ಸಿಗುವ ಯೋಜನೆ  ಪಡೆದುಕೊಳ್ಳಿ. ಸಮಾಜದಲ್ಲಿ ಹಿಂದುಳಿದ ವರ್ಗದವರನ್ನು ಸಾಮಾಜಿಕವಾಗಿ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೊಳಿಸಲಾಗುತಿದೆ.   ಪ್ರತಿಯೊಬ್ಬರು  ಸಂಘಟಿತವಾಗುವ ಮೂಲಕ ನೊಂದವರ, ಬಡವರ  ಕಣ್ಣೀರು […]

ದಾವಣಗೆರೆ: ಅಭಿಮಾನಿಗಳಿಂದ ರೆಬೆಲ್ ಸ್ಟಾರ್ ಅಂಬರೀಶ್ 65ನೇ ಹುಟ್ಟುಹಬ್ಬ ಆಚರಣೆ

ದಾವಣಗೆರೆ: ಅಭಿಮಾನಿಗಳಿಂದ ರೆಬೆಲ್ ಸ್ಟಾರ್ ಅಂಬರೀಶ್ 65ನೇ ಹುಟ್ಟುಹಬ್ಬ ಆಚರಣೆ

  ಹುಟ್ಟುಹಬ್ಬ ಪ್ರಯುಕ್ತ ಅಭಿಮಾನಿಗಳಿಂದ  ಸಾರ್ವಜನಿಕರಿಗೆ ಅನ್ನಸಂತರ್ಪನೆ ಕಾರ್ಯಕ್ರಮ ದಾವಣಗೆರೆ: ನಗರದ ಜಯದೇವ ವೃತ್ತದಲ್ಲಿ ಭಾನುವಾರ ರೆಬಲ್‍ಸ್ಟಾರ್ ಅಂಬರೀಶ್ ಅಭಿಮಾನಿಗಳ ಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಸಂಯುಕ್ತಾಶ್ರದಲ್ಲಿ ರೆಬಲ್‍ಸ್ಟಾರ್ ಅಂಬರೀಶ್ 65ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಇದೇ ವೇಳೆ ಮಧ್ಯ ಕರ್ನಾಟಕದ ರಾಜ್ಯ ಕಾರ್ಯಕಾರಿ ಸಮಿತಿಗೆ ಅವಿರೋಧವಾಗಿ ಆಯ್ಕೆಯಾಗಿರುವ ಸದಸ್ಯರುಗಳಿಗೆ ಚಿತ್ರದುರ್ಗದ ಬಂಜಾರ ಗುರುಪೀಠದ ಸೇವಾಲಾಲ್ ಸರ್ದಾರ್ ಸ್ವಾಮೀಜಿ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಗುರುತಿನ ಚೀಟಿ ವಿತರಣೆ ಮಾಡಿದರು. ನಂತರ ಹುಟ್ಟುಹಬ್ಬದ […]