ಅಕ್ರಮ ಆಸ್ತಿ ಗಳಿಕೆ: ನಾಲ್ವರು ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಹೊತ್ತಿದ್ದ ಅಧಿಕಾರಿಗಳ ಮನೆ ಮೇಲೆ  ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ನಡೆಸಿದ್ದು, ದಾಖಲೆ ಪತ್ರಗಳ ಪರಿಶೀಲನೆ ಕೈಗೊಂಡಿದ್ದಾರೆ.  ಬೆಂಗಳೂರಿನ  ನಾಲ್ಕು ಕಡೆ ಒಂದೇ ಕಾಲಕ್ಕೆ  ಈ ದಾಳಿ ನಡೆದಿದೆ. ಪೂರ್ವ ವಲಯದ  ಮೇಯೋ ಹಾಲ್ ಬಿಬಿಎಂಪಿಯ ಹೆಚ್ಚುವರಿ ಆಯುಕ್ತ ಡಾ. ಕೆ.ಸಿ. ಯತೀಶ್‌ಕುಮಾರ್, ಕೆಪಿಟಿಸಿಎಲ್‌ನ ನಿರ್ದೇಶಕ ಹೆಚ್ ನಾಗೇಶ್,  ನಾಗರಭಾವಿಯ ವಿನಾಯಕ ಲೇಔಟ್‌ನ ರಾಮನಗರ ತಹಸೀಲ್ದಾರ್ ರಘು ಮೂರ್ತಿ,  ತಾಂತ್ರಿಕ ‌ಶಿಕ್ಷಣ ಇಲಾಖೆಯ ಸೂಪರಿಟೆಂಡೆಂಟ್ ರಾಮಕೃಷ್ಣ ರೆಡ್ಡಿ ಮನೆ […]

ಕಾವೇರಿ ವಿವಾದದಲ್ಲಿ ನಾರಿಮನ್ ಸಲಹೆ ಪಡೆದು ತೀರ್ಮಾನ: ಸಿದ್ದರಾಮಯ್ಯ

ಕಾವೇರಿ ವಿವಾದದಲ್ಲಿ ನಾರಿಮನ್ ಸಲಹೆ ಪಡೆದು ತೀರ್ಮಾನ: ಸಿದ್ದರಾಮಯ್ಯ

     ಬೆಂಗಳೂರು: ಕಾವೇರಿ ವಿವಾದದಲ್ಲಿ ರಾಜ್ಯದ ಪರ ವಕೀಲ ಪಾಲಿ ನಾರಿಮನ್ ಅವರನ್ನು ರಾಜ್ಯದ ನಿಯೋಗ ವಾರದೊಳಗೆ ಭೇಟಿ ಮಾಡಲಿದ್ದು, ಆ ನಂತರ ಮುಂದಿನ  ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.    ಕಾವೇರಿ ಕೊಳ್ಳದ ನಿರ್ವಹಣೆಗೆ ಪರಿಣತರ ತಂಡ ರಚಿಸುವ ಕುರಿತು ವಿಧಾನಮಂಡಲದ ಉಭಯ ಸದನಗಳ ಸರ್ವ ಪಕ್ಷ ನಾಯಕರ ಸಭೆಯಲ್ಲಿ ಚರ್ಚಿಸಲಾಗಿದೆ.  ನಿಯೋಗದೊಂದಿಗೆ ರಾಜ್ಯದ ವಕೀಲ ಫಾಲಿ ಎಸ್‌. ನಾರಿಮನ್‌ ಅವರನ್ನು ಮುಂದಿನ ವಾರ ಭೇಟಿ ಮಾಡಿ ಮಾತುಕತೆ ನಡೆಸಲಾಗುವುದು. ಆ ನಂತರ […]

ಸೇಡಂನಲ್ಲಿ ಬುದ್ಧ ಪೂರ್ಣಿಮೆ ಆಚರಣೆ

ಸೇಡಂನಲ್ಲಿ ಬುದ್ಧ ಪೂರ್ಣಿಮೆ ಆಚರಣೆ

ಸೇಡಂ: ನಗರದಲ್ಲಿ ಗೌತಮ ಬುದ್ಧ ಪೂರ್ಣಿಮೆಯನ್ನು ಆಚರಿಸಲಾಯಿತು. ವೈಶಾಖ ಪೂರ್ಣಿಮೆ ದಿನ ಗೌತಮ ಬುದ್ಧ ಜ್ಞಾನೋದಯವಾದ ದಿನವಾಗಿದೆ. ಬೌದ್ಧರಿಗೆ ಈ ದಿನ ಪವಿತ್ರವಾದ ಹಬ್ಬವಾಗಿದೆ.  ಮನುಷ್ಯ ಮನುಷ್ಯನಾಗಿ ಬಾಳುವುದು ಮತ್ತು ಜೀವನದ ನಿಜ ಸ್ಥಿತಿ ಅರಿಯುವುದು, ಕರುಣೆ, ಮೈತ್ರಿಯಿಂದ  ಬಾಳುವುದು ಬುದ್ಧ ಪೂರ್ಣಿಮೆಯ ಉದ್ದೇಶಗಳು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ)  ಜಿಲ್ಲಾ ಉಪಾಧ್ಯಕ್ಷ  ಹುಳುಗೋಳಕಾರ್ ಹೇಳಿದರು. ಮುಖಂಡರು ಮತ್ತು ಹಿರಿಯ ನಾಯಕರು ಇದ್ದರು. 

ಕಣಿವೆ ರಾಜ್ಯದಲ್ಲಿ ಭಾರತೀಯ ಸೇನಾಧಿಕಾರಿಯನ್ನು ಅಪಹರಿಸಿ ಗುಂಡಿಟ್ಟು ಕೊಂದ ಉಗ್ರರು

ಕಣಿವೆ ರಾಜ್ಯದಲ್ಲಿ ಭಾರತೀಯ ಸೇನಾಧಿಕಾರಿಯನ್ನು ಅಪಹರಿಸಿ ಗುಂಡಿಟ್ಟು ಕೊಂದ ಉಗ್ರರು

  ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ಸೇನಾಧಿಕಾರಿ ಉಮರ್ ಫಯಾಜ್ ಮೃತದೇಹ ಮತ್ತೆಯಾಗಿದ್ದು, ದೇಹಕ್ಕೆ ಹಲವು ಬಾರಿ ಗುಂಡಿಕ್ಕಲಾಗಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಉಮರ್ ಫಯಾಜ್ ಅವರು  ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಈ ವೇಳೆ ಅವರು ಏಕಾಂಗಿಯಾಗಿದ್ದ ಸಂದರ್ಭದಲ್ಲಿ ಉಗ್ರರು ಅವರನ್ನು ಅಪಹರಿಸಿದ್ದಾರೆ. ಬಳಿಕ ಅವರನ್ನು ಗುಂಡಿಟ್ಟು ಕೊಂದು ಶೋಪಿಯಾನ್ ನಲ್ಲಿ ಬಿಸಾಡಿ  ಹೋಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಕಣಿವೆ ರಾಜ್ಯ ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಕುಟುಂಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ […]

ಹಾವೇರಿ ನಗರಸಭೆಯಲ್ಲಿ ಕೋಲಾಹಲ, ಹಾಲಿ ಪೌರಾಯುಕ್ತ ನಿರ್ಗಮನ

ಹಾವೇರಿ ನಗರಸಭೆಯಲ್ಲಿ ಕೋಲಾಹಲ, ಹಾಲಿ ಪೌರಾಯುಕ್ತ ನಿರ್ಗಮನ

ಹಾವೇರಿ: ಆಡಳಿತ ಮಂಡಳಿಗೆ ಅಗೌರವ ತೋರಿದ್ದಲ್ಲದೇ, ಆಡಳಿತ ಮಂಡಳಿಯ ಅಧ್ಯಕ್ಷೆ ಹಾಗೂ ಸದಸ್ಯರೂ ಕರೆದ ಸಂದರ್ಭದಲ್ಲಿ ನಾನು ನಿಮ್ಮ ಗುಲಾಮನಲ್ಲ, ನಿಮ್ಮ ಮಾತು ಕೇಳುವುದಿಲ್ಲ ಎಂದು ಹೇಳಿ, ಸದಸ್ಯರಮಾತಿಗೆ ಕವಡೆಕಾಸಿನ ಕಿಮ್ಮತ್ತು ನೀಡದೇ,ಚರಂಡಿ ಸ್ವಚ್ಛತೆ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯುತ್ತಿದ್ದ ಸ್ಥಳಗಳಲ್ಲಿ ಪೋಟೋ ತಗೆದುಕೊಂಡು ಕೇವಲ ವಾಟ್ಸ್‍ಪ್‍ಗಳಲ್ಲಿ ಪೋಟೋಗಳನ್ನು ಹಾಕುತ್ತ ಆಡಳಿತ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿದ್ದ ನಗರಸಭೆಯ ಪೌರಾಯುಕ್ತ ಶಂಕರ ಅವರು ಮಂಗಳವಾರ ನಡೆದ ನಗರಸಭೆಯ ತುರ್ತುಸಭೆಯಲ್ಲಿ ಸದಸ್ಯರ ವಾಗ್ದಾಳಿಗೆ ಗುರಿಯಾಗಿ ನಗರಸಭೆಯ ಪೌರಾಯುಕ್ತ ಹುದ್ದೆಯಿಂದ ನಿರ್ಗಮಿಸಿದ ಘಟನೆ […]

ಅಪಘಾತದಲ್ಲಿ ಆಂಧ್ರಪ್ರದೇಶ ಸಚಿವರ ಪುತ್ರನ ದುರ್ಮರಣ

ಅಪಘಾತದಲ್ಲಿ ಆಂಧ್ರಪ್ರದೇಶ ಸಚಿವರ ಪುತ್ರನ ದುರ್ಮರಣ

ಹೈದರಾಬಾದ್: ಭೀಕರ ಅಪಘಾತದಲ್ಲಿ ಆಂಧ್ರ ಪ್ರದೇಶ ಸಚಿವ ಡಾ. ಪಿ ನಾರಾಯಣ ಅವರ ಪುತ್ರ ಮತ್ತು ಆತನ ಸ್ನೇಹಿತ ರಾಜಾ ರವಿಚಂದ್ರ ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ.  ಆಂಧ್ರ ಪ್ರದೇಶ ಸಚಿವ ಡಾ.ಪಿ ನಾರಾಯಣ ಅವರ ಪುತ್ರ ನಿಷಿತ್ ಹಾಗೂ ಆತನ ಸ್ನೇಹಿತ ರಾಜಾ ರವಿಚಂದ್ರ ಸಾವನ್ನಪ್ಪಿದ್ದಾರೆ. ಹೈದರಾಬಾದ್ ನ ಪ್ರತಿಷ್ಟಿತ ಜುಬಿಲಿ ಹಿಲ್ಸ್ ನಲ್ಲಿರುವ ರೋಡ್ ನಂಬರ್ 36ರಲ್ಲಿ ಅಪಘಾತ  ಸಂಭವಿಸಿದ್ದು, ನಿಷಿತ್ ಪ್ರಯಾಣಿಸುತ್ತಿದ್ದ ಬೆಂಜ್ ಕಾರು ವೇಗವಾಗಿ ಬಂದು ಮೆಟ್ರೋ ಪಿಲ್ಲರ್ ಗೆ ಗುದ್ದಿದೆ. […]

ಕುಲಭೂಷಣ್ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಿದ ಅಂತರಾಷ್ಟ್ರೀಯ ನ್ಯಾಯಾಲಯ – ಪಾಕಗೆ ಮುಖಭಂಗ

ಕುಲಭೂಷಣ್ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಿದ ಅಂತರಾಷ್ಟ್ರೀಯ ನ್ಯಾಯಾಲಯ – ಪಾಕಗೆ ಮುಖಭಂಗ

ನವದೆಹಲಿ: ವಿಯೆನ್ನಾ ಒಪ್ಪಂದ ಪ್ರಕಾರ ಜಾಧವ್ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕೆ ಪಾಕ್ ಯಾವುದೇ ರೀತಿಯ ಅವಕಾಶ ನೀಡಿಲ್ಲ ಅಂತಾರಾಷ್ಟ್ರೀಯ ನ್ಯಾಯಾಲಯದಿಂದ ಮುಂದಿನ ಸೂಚನೆ ಬರುವವರೆಗೆ ಜಾಧವ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ಕೋರ್ಟ್ ಸೂಚಿಸಿದೆ.   ಭಾರತದ ನಿವೃತ್ತ ಸೇನಾಧಿಕಾರಿ ಕುಲಭೂಷಣ್ ಜಾಧವ್ ಗೆ ಪಾಕಿಸ್ತಾನ ವಿಧಿಸಿದ್ದ ಗಲ್ಲು ಶಿಕ್ಷೆಗೆ ಅಂತರಾಷ್ಟ್ರೀಯ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇದರಿಂದ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ.   ಕುಲಭೂಷಣ್ ಜಾಧವ್ ಮೇಲೆ ಪಾಕಿಸ್ತಾನ ಬೇಹುಗಾರಿಕೆ ಆರೋಪ ಹೊರಿಸಿ ಮಿಲಿಟರಿ ಕೋರ್ಟ್​ನಲ್ಲಿ ಗಲ್ಲುಶಿಕ್ಷೆ […]

ಗೋಕಾಕ: ಗೋಸಬಾಳ ಗ್ರಾಮದಲ್ಲಿ ನಿರುಪಯುಕ್ತ ತೆರೆದ ಕೊಳವೆ ಬಾವಿಗಳನ್ನು ಮುಚ್ಚಲು ಜಾಗೃತಿ ಜಾಥಾ

ಗೋಕಾಕ: ಗೋಸಬಾಳ ಗ್ರಾಮದಲ್ಲಿ ನಿರುಪಯುಕ್ತ ತೆರೆದ ಕೊಳವೆ ಬಾವಿಗಳನ್ನು ಮುಚ್ಚಲು ಜಾಗೃತಿ ಜಾಥಾ

ಗೋಕಾಕ: ಗ್ರಾಮಸ್ಥರು ನಿರುಪಯುಕ್ತ ತೆರೆದ ಕೊಳವೆ ಭಾಂವಿಗಳನ್ನು ಮುಚ್ಚುವಂತೆ ಅರಿವು ಮೂಡಿಸುವಂತಹ ಕಾರ್ಯವನ್ನು ಮಾಡಬೇಕು ಎಂದು ಗೋಸಬಾಳ ಗ್ರಾ.ಪಂ ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ ಹೇಳಿದರು. ಅವರು ಮಂಗಳವಾರದಂದು ತಾಲೂಕಿನ ಗೋಸಬಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿಗೆ ಝಂಜರವಾಡ ಗ್ರಾಮದಲ್ಲಿ ಜರುಗಿದ ಅನಾಹುತದಿಂದಾಗಿ ಮಗುವಿನ ಪ್ರಾಣವನ್ನೇ ತೆತ್ತ ತೆರೆದ ಕೊಳವೆ ಬಾವಿಯ ಪ್ರಕರಣವು ಬೇರೆಕಡೆ ನಡೆಯಬಾರದು ಎಂಬ ಸದುದ್ದೇಶದಿಂದ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರಲ್ಲದೇ ನಿರುಪಯುಕ್ತ […]

ಅರಭಾವಿ ಕ್ಷೇತ್ರದಲ್ಲಿ ಯಡಿಯೂರಪ್ಪ ಕಾರ್ಯಕ್ರಮಕ್ಕೆ ಶಾಸಕ ಬಾಲಚಂದ್ರ ಗೈರು 

ಅರಭಾವಿ ಕ್ಷೇತ್ರದಲ್ಲಿ ಯಡಿಯೂರಪ್ಪ ಕಾರ್ಯಕ್ರಮಕ್ಕೆ ಶಾಸಕ ಬಾಲಚಂದ್ರ ಗೈರು 

ಬೆಳಗಾವಿಯಲ್ಲಿ  ಬಿಜೆಪಿ ಬೇಗುದಿ ಬಹಿರಂಗ ಬೆಳಗಾವಿ: ಗೋಕಾಕ ತಾಲೂಕಿನ  ಅರಭಾವಿ ಮತಕ್ಷೇತ್ರದ ಹಳ್ಳೂರು ಗ್ರಾಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಪಾಲ್ಗೊಂಡಿದ್ದ ಸಭೆಯಲ್ಲಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೈರು ಹಾಜರಿ ರಾಜಕೀಯ ಊಹಾಪೋಹಗಳಿಗೆ ಎಡೆಮಾಡಿದೆ.  ಮನೋನ್ಮಯಿ ಮಹಾಸಂಸ್ಥಾನ ಪೀಠದ ಉದ್ಘಾಟನೆ ಮತ್ತು ವಿಶ್ವನಾಥ ಮಂದಿರದ ಅಡಿಗಲ್ಲು ಸಮಾರಂಭದಲ್ಲಿ ಪಾಲ್ಗೊಳ್ಳಲು ಮಂಗಳವಾರ ಹಳ್ಳೂರು ಗ್ರಾಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗಮಿಸಿದ್ದರು. ಮಾರ್ಗ ಮಧ್ಯೆ ಕಲ್ಲೋಳಿ ಗ್ರಾಮದಲ್ಲಿ ಕಾರ್ಯಕರ್ತರು ಯಡಿಯೂರಪ್ಪ ಅವರಿಗೆ ಸ್ವಾಗತ ನೀಡಿ ಸತ್ಕರಿಸಿ ಬೀಳ್ಕೊಟ್ಟಿದ್ದರು. ಆದರೆ […]

ಕಲ್ಲೋಳಿಯಲ್ಲಿ ಯಡಿಯೂರಪ್ಪಗೆ ಸ್ವಾಗತ, ಸನ್ಮಾನ

ಕಲ್ಲೋಳಿಯಲ್ಲಿ ಯಡಿಯೂರಪ್ಪಗೆ ಸ್ವಾಗತ, ಸನ್ಮಾನ

ಘಟಪ್ರಭಾ : ಗೋಕಾಕ ತಾಲೂಕಿನ ಹಳ್ಳೂರ ಗ್ರಾಮದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಂಗಳವಾರ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಕಲ್ಲೋಳಿಯಲ್ಲಿ ಕಾರ್ಯಕರ್ತರು ಸ್ವಾಗತಿಸಿ ಸತ್ಕರಿಸಿದರು. ಕಲ್ಲೋಳಿಯ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಎದುರು ಗೋಕಾಕದಿಂದ ಹಳ್ಳೂರ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭ ಬಿ.ಎಸ್. ಯಡಿಯೂರಪ್ಪ ಅವರನ್ನು ಸ್ವಾಗತಿಸಿ ಸತ್ಕರಿಸಿ ಬೀಳ್ಕೊಡಲಾಯಿತು. ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಸುಭಾಷ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಮಾದರ ಹಾಗೂ ಬಿಜೆಪಿ ಪದಾಧಿಕಾರಿಗಳು ಯಡಿಯೂರಪ್ಪ ಅವರಿಗೆ ಹೂಮಾಲೆ ಹಾಕಿ, ಫಲಪುಷ್ಟ ನೀಡಿ ಬೆಳ್ಳಿಯ […]