ಮಳೆಯ ಅಬ್ಬರಕ್ಕೆ ಕುಸಿದ ತರಕಾರಿ ಬೆಲೆ:ಇಕ್ಕಟ್ಟಿಗೆ ಸಿಲುಕಿದ ತರಕಾರಿ ಬೆಳೆಗಾರ

ಹುಬ್ಬಳ್ಳಿ: ರಾಜ್ಯದಲ್ಲಿ ಹಿಂಗಾರು ಮಳೆಯ ಅಬ್ಬರ ಜೋರಾಗಿ ಸಾಗಿದೆ,ಕಳೆದ ಒಂದು ತಿಂಗಳಿನಿಂದ ವರಣ ಅರ್ಭಟ ಮಿತಿಮಿರಿದೆ. ಮಳೆ ಆಗುತ್ತಿಲ್ಲಾ ಎನ್ನುವ ಜನರು ಮಳೆ ಸಾಕು ಸಾಕು ಎನ್ನುವ ರೀತಿಯಲ್ಲಿ ಮಳೆಯಾಗಿದ್ದು ರಾಜ್ಯದಲ್ಲಿನ ಮನುಜಸಂಕುಲದ ಮೇಲೆ ವಿಪರೀತವಾದ ಪರಿಣಾಮ ಬಿರಿದಂತಹ ಸನ್ನಿವೇಶಗಳನ್ನು ನೋಡಿದ್ದೇವೆ. ಹಿಂಗಾರು ಮಳೆ ಅನ್ನದಾತನ ಮೇಲೂ ಸಹ ವಿಪರಿತವಾದ ಪರಿಣಾಮ ಬಿರಿದೆ.ಇಷ್ಟು ದಿನ ಅಂದರೆ ಕಳೆದ ಒಂದು ತಿಂಗಳಿಂದ ತರಕಾರಿ ಬೆಲೆಯಲ್ಲಿ ಬಾರಿ ಏರಿತವಾಗಿತ್ತು,ಪ್ರತಿ ತರಕಾರಿ ಬೆಲೆಗೆ 40 ರಿಂದ 50 ರೂ ಗೆ ಏರಿತ್ತು […]

ಎಡ, ಬಲ ಮಾರ್ಗ ಜಾಲ ಮತ್ತು ಮಧ್ಯಮ ಮಾರ್ಗಿಗಳ ಅಹಂ

ಎಡ, ಬಲ ಮಾರ್ಗ ಜಾಲ ಮತ್ತು ಮಧ್ಯಮ ಮಾರ್ಗಿಗಳ ಅಹಂ

ಡಾ.ಎಂ. ಎಂ. ಕಲಬುರ್ಗಿ ಅವರ ಹತ್ಯೆಯ ನಂತರ ಧಾರವಾಡದ ಸಾಹಿತ್ಯ ಸಂಭ್ರಮ ಸಮಾವೇಶ ಹೆಸರಿನ ಕಾರ್ಪೊರೇಟ್ ಸಂಘಟನೆ ಕೋಮುವಾದಿ ಚಿಂತನೆಗೆ ವೇದಿಕೆ ಕಲ್ಪಿಸಿತು. ಮಧ್ಯಮಮಾರ್ಗ ಎಂಬ ಹಳೆಯ ಆದರೆ ಪ್ರತಿಗಾಮಿ ಚಿಂತನೆಗಳಿಗೆ ಸೂಕ್ಷ್ಮ ಸ್ತರದಲ್ಲಿ ಬೆಂಬಲಿಸುವ ಚಿಂತನಾ ಕ್ರಮವನ್ನು ನವೀಕರಿಸಿತು. ಆಳದಲ್ಲಿ ಅಂಥ ಚಿಂತನೆಯನ್ನು ಉಸಿರಾಡುತ್ತಿದ್ದ ಹಲವರು ಭಾರೀ ಹುರುಪಿನಿಂದ ಕ್ರಿಯಾಶೀಲರಾಗಿದ್ದಾರೆ. ಕೊಲ್ಲುವವರನ್ನೂ ಸಾಯುವವರನ್ನೂ , ಗೋಡ್ಸೆಯನ್ನೂ ಗಾಂಧಿಯನ್ನೂ , ಸಾವರ್ಕರ್ ಅವರನ್ನೂ ಅಂಬೇಡ್ಕರ್ ಅವರನ್ನೂ , ಎಡಪಂಥೀಯರನ್ನೂ ಬಲಪಂಥೀಯರನ್ನೂ ಒಂದೇ ತಕ್ಕಡಿಯ ಎರಡು ಪರಡಿಗಳಲ್ಲಿ ಕೂಡ್ರಿಸಿ […]

ಕನ್ನಡಿಗರ ಧರ್ಮ (ಕಾವ್ಯ ಲಹರಿ)

ಕನ್ನಡಿಗರ ಧರ್ಮ  (ಕಾವ್ಯ ಲಹರಿ)

ಲಕ್ಷ್ಮೀ ಹೆಬ್ಬಾಳ್ಕರ ಮೇಡಂ ಚುನಾವಣಾ ಟ್ರಿಕ್ಕು. . . ಸಮಸ್ತ ಕನ್ನಡಿಗರಿಗೆಲ್ಲ ಕೊಟ್ಟಿತು ದೊಡ್ಡ ಕಿಕ್ಕು ! ಪುಕ್ಕಟ್ಟೇ ಪ್ರಚಾರ ಪಡೆಯೋಕೆ ಮಾಡಿದ್ದು ಈ ಯಮ್ಮ ಸರ್ಕಸ್ಸು ! ನಿಜವಾಗಿ ಬಡವರ ಸೇವೇನಾದರೂ ಮಾಡಿದ್ದರೆ ಸಿಗುತ್ತಿತ್ತು ಸಕ್ಸಸ್ಸು ! ಬೆಳಗಾವಿಯಲ್ಲಿದ್ದೇ ಮಹಾರಾಷ್ಟ್ರಕ್ಕೆ ಜೈ  ಅನ್ನೋ . . . . ಮರಾಠಿ ಅವ್ರಿಗಿಂತ ಇಂಥವರೇ ಡೇಂಜರು ಇಂಥಾ ಊಸರವಳ್ಳಿ ರಾಜಕಾರಣಿಗಳಿಂದಲೇ ಬೆಳಗಾವಿಯಲ್ಲಿಂದು ಕನ್ನಡ ಭಾಷೆ ಬಂಜರು ಇನ್ನೂ ಮೇಲಾದರೂ ರಾಯಣ್ಣ ಚನ್ನಮ್ಮನಂಥವರನ್ನು ಆರಿಸಿ ತರೋದು ಧರ್ಮ. . […]

ನಗುವಿನ ಟಾನಿಕ್

ನಗುವಿನ ಟಾನಿಕ್

ಮದುವೆಯಾದ ಮರುದಿನವೇ ತಿಮ್ಮ ತನ್ನ ಪತ್ನಿಯನ್ನು ಹಿಡಿದು ಹೊಡೆಯತೊಡಗಿದ. ಪಕ್ಕದ ಮನೆಯವರು ಏಕೆ ಹೊಡೆಯುತ್ತಿರುವೆ? ಎಂದು ಕೇಳಿದರು.                                                                                     […]

ಕಲಾವಿದ ರಿಯಾಜ್ ಚೌಗಲಾ ಮೊದಲ ಅಲ್ಬಂ “ಆ ಝರಾ” ಆವಾಜ್ ಮೋಡಿ

ತಮ್ಮ ಸಿರಿ ಕಂಠದ ಮೂಲಕ  ರಾಜ್ಯ, ರಾಷ್ಟ್ರ ಮಟ್ಟದಲ್ಲಿ  ಹೆಸರಾಗಿರುವ ಗೋಕಾಕ ಮೂಲದ  ರಿಯಾಜ್ ಚೌಗಲಾ ಅವರ ಮೊದಲ ಅಲ್ಬಂ “ಆ ಝರಾ” ಬಿಡುಗಡೆಗೊಂಡ ನಾಲ್ಕು ದಿನಗಳಲ್ಲೇ ಸಂಗೀತ ರಸಿಕರ ಅಂಗಳದಲ್ಲಿ ಹಬ್ಬದ ಸಂಭ್ರಮ ಮೂಡಿಸಿದೆ. ಟ್ರ್ಯಾಕ್ ಇಲ್ಲದೆ  ಲೈವ್ ಸಂಗೀತ ಬಳಸಿ  ಈ ಅಲ್ಬಂನಲ್ಲಿ   ಚಿತ್ರಗೀತೆಗಳನ್ನು ಮರು ಸೃಷ್ಟಿಸಿರುವುದು  ವಿಶೇಷ. ಸತೀಶ ಶುಗರ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ  ಬಹುಮಾನ ಪಡೆದ ರಾಜ್ಯ, ರಾಷ್ಟ್ರದ ಪ್ರತಿಭಾವಂತ ಕಲಾವಿದರ ವಾದ್ಯ ಸಹಕಾರ, ಸಂಗೀತ ಸಂಯೋಜನೆಯಲ್ಲಿ ಜನಪ್ರಿಯ ಗಾಯಕರ ಕಂಠ […]

ಇಗೋ ಇಲ್ಲಿವೆ ತೇಜಸ್ವಿ ನುಡಿಗಳು, ಬೆಳಕಿನ ಕಿಡಿಗಳು

ಇಗೋ ಇಲ್ಲಿವೆ  ತೇಜಸ್ವಿ ನುಡಿಗಳು, ಬೆಳಕಿನ ಕಿಡಿಗಳು

ಕನ್ನಡ ಸಾಹಿತ್ಯ ಪರಂಪರೆಯ ಹೆಸರಾಂತ ಬರಹಗಾರರಲ್ಲಿ  ಪೂರ್ಣಚಂದ್ರ ತೇಜಸ್ವಿ ಅವರದು ದಿಟ್ಟ ಹೆಜ್ಜೆ, ಧೀರ ನಿಲುವು. ಕತೆ, ಕಾದಂಬರಿ, ವಿಜ್ಞಾನ, ಇತಿಹಾಸ, ಪರಿಸರ, ಭೂಗೋಳ ಹೀಗೆ ಅವರ ಬರೆಹದ ಹರವು ದೊಡ್ಡದು. ದೊಡ್ಡ ಪದಗಳನ್ನು ಬಳಸಿ ದೊಡ್ಡಸ್ತಿಕೆ ತೋರುವುದಕ್ಕಿಂತ ಹೇಳಬೇಕಾದುದನ್ನು ಸರಳ, ನೇರ ಶೈಲಿಯಲ್ಲಿ ಹೇಳುವುದು ತೇಜಸ್ವಿ ಶೈಲಿ ಎಂದು ಅವರನ್ನು ಓದಿದವರು ಹೇಳುತ್ತಲೇ ಇರುತ್ತಾರೆ. ತೇಜಸ್ವಿ ಮಾತುಗಳು ಎಂದರೆ ಬೆಂಕಿಯ ಕಿಡಿಗಳಲ್ಲ. ಅವು ತಣ್ಣಗೆ ಜುಳು ಜುಳು ಹರಿಯುವ ನೀರಿನ ತೊರೆ,  ಓದಿದವರನ್ನು ಮಾತುಗಳ ಅರ್ಥ […]

ಡೆಂಗ್ಯೂ: ಭಯ ಬೇಡ, ಇರಲಿ ಎಚ್ಚರ !

ಡೆಂಗ್ಯೂ:  ಭಯ ಬೇಡ, ಇರಲಿ ಎಚ್ಚರ !

ಡೆಂಗ್ಯೂ ಭಯ ಬೇಡ, ಆದರೆ ಎಚ್ಚರ ಇರಲಿ.  ಈ ಮಾತುಗಳು ನಿಮಗೆ ದಾರಿದೀಪವಾಗಬಹುದು. ಅದಕ್ಕಾಗಿ ಇಲ್ಲಿಯ ಮಾಹಿತಿಯ ಮೇಲೆ  ಒಮ್ಮೆ ಕಣ್ಣಾಡಿಸಿರಿ. ಸಾಮೂಹಿಕ ಜವಾಬ್ದಾರಿ ಮತ್ತು ಸಮುದಾಯದ ಆಸಕ್ತಿ,  ಆರೋಗ್ಯ ಇಲಾಖೆಯ ಜವಾಬ್ದಾರಿಯಿಂದ ಡೆಂಗ್ಯೂ ರೋಗ  ತಡೆ ಸಾಧ್ಯ. ಆದುದರಿಂದ ನಾವೆಲ್ಲ ಒಟ್ಟಾಗಿ ಕೈ ಜೋಡಿಸಿ ಈ ಮಹಾಮಾರಿಯನ್ನ ತಡೆಯೋಣ. ಡೆಂಗ್ಯೂ ಎಂಬ ಖಾಯಿಲೆಯು ವೈರಸ್ ನಿಂದ ಹರಡುವ ಒಂದು ಸೋಂಕು ರೋಗವಾಗಿದೆ, ರಚನೆಯಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸವಿರುವ DENV1, DENV2,DENV3, DENV4 ಎಂಬ 4 ವಿಧದ […]

ಯುದ್ಧ ಬೇಕು ಯುದ್ಧ: ಆದರೆ……ನನ್ನದೊಂದು ಸಣ್ಣ ಮನವಿ

ಯುದ್ಧ ಬೇಕು ಯುದ್ಧ: ಆದರೆ……ನನ್ನದೊಂದು ಸಣ್ಣ ಮನವಿ

ಯುದ್ಧ ಬೇಕು,ಯುದ್ಧ,  ಆದರೆ ನನ್ನ ಮನವಿಗೆ ಕಿವಿಗೊಡಿ ಪಾಕಿಸ್ತಾನವನ್ನು ಹಣಿಯಲು , ಭಯೋತ್ಪಾದನೆಯನ್ನು ಕೊನೆಗಾಣಿಸಲು , ನೆರೆಯ ಚೀನಾ ದೇಶದ  ಸೊಕ್ಕು ಮುರಿಯಲು, ಜಗತ್ತಿಗೆ ನಮ್ಮ ತಾಕತ್ತು ತೋರಿಸಲು. ಭಾರತ ವಿಶ್ವ ಶಕ್ತಿಯಾಗಲು,  ಜಗತ್ತಿಗೆ ಬೆಳಕನ್ನು ಹರಿಸಲು, ಮನುಕುಲಕ್ಕೆ ಮಾರ್ಗದರ್ಶನ ನೀಡಲು,  ನಮ್ಮ ಶಕ್ತಿಯತ್ತ ಜಗತ್ತನ್ನು ಹೊರಳಿಸಲು, ಆಧ್ಯಾತ್ಮದ ಶಕ್ತಿಯನ್ನು ಪಸರಿಸಲು,  ಯೋಗ ಶಕ್ತಿಯನ್ನು ಪರಿಚಯಿಸಲು, ರಾಮರಾಜ್ಯ ನಿರ್ಮಿಸಲು ನಮಗೀಗ ಯುದ್ಧವೊಂದೆ ಪರಿಹಾರ ಮತ್ತು ಅನಿವಾರ್ಯ. ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಸಾಧಿಸಲೇಬೇಕು. ಪಾಕಿಸ್ತಾನವನ್ನು ಹೊಸಕಿ […]

ಕನ್ನಡದ ಶರಣರನ್ನು ಲೋಕಕ್ಕೆ ಪರಿಚಯಿಸಿದ ವಚನ ಪಿತಾಮಹ ಫ.ಗು.ಹಳಕಟ್ಟಿ

ಕನ್ನಡದ ಶರಣರನ್ನು ಲೋಕಕ್ಕೆ ಪರಿಚಯಿಸಿದ ವಚನ ಪಿತಾಮಹ ಫ.ಗು.ಹಳಕಟ್ಟಿ

ಡಾ.ಫ.ಗು.ಹಳಕಟ್ಟಿ ಜನ್ಮದಿನಾಚರಣೆ ವಿಶೇಷ ಮಹಾಮಾನವತಾವಾದಿ ಬಸವಣ್ಣ ಸೇರಿ ಶರಣರು ಮತ್ತು ಅವರ ವಚನಗಳನ್ನು ಸಂಶೋಧಿಸಿ, ಸಂಗ್ರಹಿಸಿ ಲೋಕಕ್ಕೆ ಪರಿಚಯಿಸಿದ ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಕನ್ನಡ ನಾಡಿಗೆ ನೀಡಿದ ಕೊಡುಗೆ ದೊಡ್ಡದು. ಡಾ.ಹಳಕಟ್ಟಿ  ವಚನಗಳನ್ನು ತಾಳೆಗರಿಗಳಲ್ಲಿ ಓದಿ, ಸಂಶೋಧಿಸಿ, ಸಂಗ್ರಹಿಸಿಡದಿದ್ದರೆ ಬಸವಣ್ಣ ಸೇರಿ ಯಾವ ಶರಣರ ಮಾಹಿತಿಯೇ ಇರುತ್ತಿರಲಿಲ್ಲ. ಡಾ.ಹಳಕಟ್ಟಿ ದೈಹಿಕವಾಗಿ ಬದುಕಿದ್ದರೆ ಅವರಿಗೆ ಜುಲೈ 2ರಂದು 138ನೇ ಜನ್ಮದಿನ ಆಗಿರುತ್ತಿತ್ತು.ಆದರೆ ಡಾ.ಹಳಕಟ್ಟಿ  ಇಲ್ಲ. ಆದರೆ ಅವರು ಸಂಗ್ರಹಿಸಿದ ವಚನಗಳು ಲೋಕಕ್ಕೆ ತಿಳಿವಳಿಕೆಯ ತಿರುಳನ್ನು ತಿಳಿಸುತ್ತಲೇ ಇವೆ. […]

ಸಾಮಾಜಿಕ ಬದಲಾವಣೆಗೆ ಹಂಬಲಿಸಿದ ಕ್ರಾಂತಿಕಾರಿ ರಾಜ, ಛತ್ರಪತಿ ಶಾಹು ಮಹಾರಾಜ

ಸಾಮಾಜಿಕ ಬದಲಾವಣೆಗೆ ಹಂಬಲಿಸಿದ ಕ್ರಾಂತಿಕಾರಿ ರಾಜ, ಛತ್ರಪತಿ ಶಾಹು ಮಹಾರಾಜ

(ಸಮಾಜವನ್ನು ಮೂಢನಂಬಿಕೆಗಳಿಂದ ಬಿಡುಗಡೆಗೊಳಿಸಲು, ಗುಲಾಮಗಿರಿಯಿಂದ ಮುಕ್ತಗೊಳಿಸಲು, ಸ್ವಾತಂತ್ರ್ಯ, ಸಮಾನತೆಯ ಸಮಾಜ ಕಟ್ಟಲು ಜೀವನಪೂರ್ತಿ ಶ್ರಮಿಸಿದ ಕೊಲ್ಲಾಪುರದ ಶಾಹು ಮಹಾರಾಜ ಅವರ 144ನೇ ಜನ್ಮದಿನವನ್ನು ಜೂನ್ 26ರಂದು ದೇಶಾದ್ಯಂತ ಆಚರಿಸಲಾಗುತ್ತಿದೆ.  ಶಾಹು ಮಹಾರಾಜರು ದೇಶಕ್ಕೆ ನೀಡಿದ ದೊಡ್ಡ ಕೊಡುಗೆ ಎಂದರೆ  ಆದರ್ಶ ಸಮಾಜ ಮತ್ತು ಆದರ್ಶ ಆಡಳಿತದ ಪರಿಕಲ್ಪನೆ. ಕೇವಲ 47 ವರ್ಷ (1874-1922) ಬದುಕಿದರೂ ತಮ್ಮ ಬಹುಪಾಲು ಆಯುಷ್ಯವನ್ನು ಸಮಾಜದ ಎಲ್ಲ ವರ್ಗಗಳ ಒಳಿತಿಗಾಗಿ ಮುಡಿಪಿಟ್ಟರು. ಅಂತೆಯೇ ಶಾಹು ಮಹಾರಾಜರು ಜನ ಮಾನಸದಲ್ಲಿ ಅಮರರಾಗಿದ್ದಾರೆ. ಶಾಹು ಮಹಾರಾಜರು […]