ಇಟಲಿಯಲ್ಲಿ ಸೇತುವೆ ಕುಸಿದು 35 ಜನರ ದುರ್ಮರಣ !

ಇಟಲಿಯಲ್ಲಿ ಸೇತುವೆ ಕುಸಿದು 35 ಜನರ ದುರ್ಮರಣ !

ಜಿನೋವಾ (ಇಟಲಿ): ಇಟಲಿಯ ಜಿನೋವಾ ನಗರದಲ್ಲಿ ಮಂಗಳವಾರ ರಾತ್ರಿ ಮೊರಾಂಡಿ ಮೋಟರ್ ವೇ ಸೇತುವೆಯ ಒಂದು ಭಾಗ  ಇದ್ದಕ್ಕಿದ್ದಂತೆಯೇ ಕುಸಿದ ಪರಿಣಾಮ ಕನಿಷ್ಠ 35 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ! ಈ ಘಟನೆಯಲ್ಲಿ ಹದಿಮೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಇಟಾಲಿಯನ್ ನಾಗರಿಕ ರಕ್ಷಣಾ ಪಡೆಯ ಮುಖ್ಯಸ್ಥ  ಎಂಜಿಲೋ ಬೊರ್ರೆಲ್ಲಿ ತಿಳಿಸಿದ್ದಾರೆ. ಸೇತುವೆ ಮೇಲೆ ಸಂಚರಿಸುತ್ತಿದ್ದ 30 ಕ್ಕೂ ಹೆಚ್ಚು ವಾಹನಗಳು ಹಾಗೂ ಕೆಲವು ಭಾರೀ ವಾಹನಗಳು ಹಾನಿಗೊಳಗಾಗಿವೆ. […]

ನೇಪಾಳ: ಭೂಕುಸಿತಕ್ಕೆ ಎಂಟು ಬಲಿ

ಕಠ್ಮಂಡು (ನೇಪಾಳ):ಉತ್ತರ ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ ಎಂಟು ಜನರು ಸಾವಿಗೀಡಾಗಿದ್ದು, ಸಿಲುಕಿರುವ ಇನ್ನಷ್ಟು ಜನರಿಗಾಗಿ ಹುಡುಕಾಟ ನಡೆದಿದೆ. ಒಂದು ಕಾಂಕ್ರೀಟ್ ಮನೆ, ಮೂರು ಹೋಟೆಲ್ ಗಳು ಹಾಗೂ ನಾಲ್ಕು ವಾಹನಗಳು ಭೂಕುಸಿತಕ್ಕೆ ಬಲಿಯಾಗಿವೆ ಎಂದು ರಾಷ್ಟ್ರೀಯ ಸಮಾಚಾರ ಸಮಿತಿ ವರದಿ ಮಾಡಿದೆ. Views: 230

ಸೌದಿ ಅರೇಬಿಯಾ: ಮಹಿಳೆಯರು ಇನ್ನು ವಾಹನ ಓಡಿಸಬಹುದು !

ಸೌದಿ ಅರೇಬಿಯಾ: ಮಹಿಳೆಯರು ಇನ್ನು ವಾಹನ ಓಡಿಸಬಹುದು !

ರಿಯಾದ್ ( ಸೌದಿ ಅರೇಬಿಯಾ): ಮಹಿಳೆಯರಿಗೆ ವಾಹನ  ಚಾಲನೆ ನಿರ್ಬಂಧವನ್ನು ಹಿಂತೆಗೆದ ಬೆನ್ನಲ್ಲೇ ಸೌದಿ ಅರೇಬಿಯಾದಲ್ಲಿ ಯುವತಿಯರು ಇದೀಗ ಬಿಜಿ ರಸ್ತೆಗಳಲ್ಲಿ ವಾಹನ ಓಡಾಟ ಶುರುಮಾಡಿದ್ದಾರೆ. ದಶಕಗಳ  ಕಾಲ ಮಹಿಳೆಯರಿಗೆ ವಾಹನ ಚಾಲನೆ ನಿಷೇಧಿಸಿದ್ದ ಸರಕಾರ, ಇದೀಗ ನಿಷೇಧ ಹಿಂದಕ್ಕೆ ಪಡೆದು ಚಾಲನಾ ಪರವಾನಗಿ ಕೊಡಲು ಶುರುಮಾಡುತ್ತಿದ್ದಂತೆಯೇ ಖುಷಿಯಾಗಿರುವ ಮಹಿಳೆಯರು, ಇಷ್ಟು ದಿನ ಹಿಂದಿನ ಸೀಟಿನಲ್ಲಿ ಕೂತು ಬೇಜಾರಾಗಿತ್ತು. ಈಗ ಚಾಲಕರ ಸೀಟಿನಲ್ಲಿ ಕೂತುಕೊಳ್ಳುವುದು ಖುಷಿ ಕೊಡುತ್ತಿದೆ ಎನ್ನುತ್ತಿದ್ದಾರೆ. ಸೌದಿ ಅರೇಬಿಯಾದ ಹೊರಗೆ ಮಾತ್ರ ವಾಹನ ಚಲಾಯಿಸುತ್ತಿದ್ದ […]

ಅತಿಯಾದ ಮಾನಸಿಕ ಒತ್ತಡ ನಿಮ್ಮ ದೃಷ್ಟಿಯನ್ನೇ ಕಳೆಯಬಹುದು !

ಅತಿಯಾದ ಮಾನಸಿಕ  ಒತ್ತಡ ನಿಮ್ಮ ದೃಷ್ಟಿಯನ್ನೇ ಕಳೆಯಬಹುದು !

ವಾಷಿಂಗ್ ಟನ್ ಡಿ.ಸಿ. (ಯು ಎಸ್ ಎ): ನಿಮಗೆ ಗೊತ್ತೇ ? ಮಾನಸಿಕ ಒತ್ತಡ ಅತಿಯಾದರೆ ನೀವು ದೃಷ್ಟಿಯನ್ನೇ ಕಳೆದುಕೊಂಡು ಬಿಡಬಹುದು ! ಗ್ಲುಕೋಮಾ, ಮಧುಮೇಹ, ವಯಸ್ಸು ಇನ್ನೂ ಮೊದಲಾದ ಕಾರಣಗಳಿಂದ ದೃಷ್ಟಿ ದೋಷ ಉಂಟಾಗುವ ಜತೆಗೆ ಮಾನಸಿಕ ಒತ್ತಡವೂ ದೃಷ್ಟಿ ಕಳೆದುಕೊಳ್ಳುವಿಕೆಗೆ ಕಾರಣವಾಗಬಹುದು ಎಂದು ಅಧ್ಯಯನದಿಂದ ತಿಳಿದುಬಂದಿದೆ ಎಂದು ಸಂಶೋಧಕ ಬರ್ನಾರ್ಡ್ ಸಬೆಲ್ ತಿಳಿಸಿದ್ದಾರೆ. ನಿರಂತರ ಮಾನಸಿಕ ಒತ್ತಡದಿಂದ ನರಗಳು ಮತ್ತು ಮೆದುಳಿನ ಮೇಲೆ ತೀವ್ರ ಪರಿಣಾಮ ಉಂಟಾಗಿ ದೃಷ್ಟಿಯ ಮೇಲೂ ಪರಿಣಾಮವಾಗುತ್ತದೆ ಎಂದು ಸಂಶೋಧನೆಯಲ್ಲಿ […]

ಚಾಕು ಇರಿತ: 9 ಶಾಲಾಮಕ್ಕಳ ಸಾವು

ಚಾಕು ಇರಿತ: 9 ಶಾಲಾಮಕ್ಕಳ ಸಾವು

ನ್ಯೂಯಾರ್ಕ : ಚೀನಾದ ಶಾಂಕ್ಷಿ ಪ್ರದೇಶದ  ಮಾಧ್ಯಮಿಕ ಶಾಲೆಯೊಂದರಲ್ಲಿ ಒಂಬತ್ತು ಮಕ್ಕಳನ್ನು ಚಾಕುವಿನಿಂದ  ಇರಿದು ಕೊಂದ ಪ್ರಕರಣ ನಡೆದಿದೆ. ಈ ಸಂಬಂಧ ಶಂಕಿತನೊಬ್ಬನನ್ನು ಬಂಧಿಸಲಾಗಿದ್ದು, ಘಟನೆಯಲ್ಲಿ ಹನ್ನೆರಡು ಮಕ್ಕಳು ಗಾಯಗೊಂಡಿದ್ದಾರೆ. ಮೃತರಲ್ಲಿ ಏಳು ಬಾಲಕಿಯರಿದ್ದು, ಇಬ್ಬರು ಬಾಲಕರದ್ದಾರೆ. Views: 287

24 ಗಂಟೆಗಳಲ್ಲಿ 26 ಉಗ್ರರ ಹತ್ಯೆ

24 ಗಂಟೆಗಳಲ್ಲಿ 26 ಉಗ್ರರ ಹತ್ಯೆ

ಕಾಬೂಲ್ ( ಅಫ್ಘಾನಿಸ್ತಾನ): ಕಳೆದ 24 ಗಂಟೆಗಳಲ್ಲಿ ಅಫಘನ್ ವಾಯುಪಡೆ ಮತ್ತು ಭದ್ರತಾ ಪಡೆ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ 26 ಜನ  ಉಗ್ರರನ್ನು ಹತ್ಯೆಗಯ್ಯಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಖಾಕ್-ಎ-ಸಫೇದ್ ಮತ್ತು ಬಾಲಾಬುಲುಕ ಜಿಲ್ಲೆಗಳಲ್ಲಿ ಹತರಾದ 26 ಜನ ರಲ್ಲಿ  12 ಜನರು ತಾಲಿಬಾನ್ ಉಗ್ರರು ಎಂದು ರಕ್ಷಣಾ ಸಚಿವಾಲಯದ ವಕ್ತಾರ ಮೊಹ್ಮದ ರಾದ್ಮನೀಷ ಹೇಳಿರುವುದಾಗಿ ಟೋಲೋ ಸುದ್ದಿ ಸಂಸ್ಥೆ ವರದಿ ಮಾಡಿದೆ. (ಮೂಲ;  ಎಎನ್ ಐ) Views: 190

ಈ ಮಂಗಳಮುಖಿ ಈಗ ಟಿವಿ ಆ್ಯಂಕರ್ !!

ಈ ಮಂಗಳಮುಖಿ ಈಗ ಟಿವಿ  ಆ್ಯಂಕರ್ !!

ಲಾಹೋರ್ (ಪಾಕಿಸ್ತಾನ):ಮಂಗಳಮುಖಿಯೊಬ್ಬಳನ್ನು ಟಿವಿ ಆ್ಯಂಕರ್ ಆಗಿ ನೇಮಕ ಮಾಡಿಕೊಳ್ಳುವ ಮೂಲಕ  ಇತಿಹಾಸ  ಸೃಷ್ಟಿಸಿದ್ದೇವೆ ಎಂದು ಪಾಕಿಸ್ತಾನದ ಸ್ಥಳೀಯ ಟಿವಿ ಚಾನೆಲ್ ವೊಂದು ಹೇಳಿಕೊಂಡಿದೆ. “ಕೊಹೆನೂರ ನ್ಯೂಸ್ ‘ ಸಂಸ್ಥೆಯು ತನ್ನ ಹತ್ತನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಚಾನೆಲ್ ರಿಲಾಂಚಿಂಗ್ ಕಾರ್ಯಕ್ರಮವನ್ನು ಇತ್ತೀಚೆಗೆ ಅದ್ಧೂರಿಯಾಗಿ ಹಮ್ಮಿಕೊಂಡಿತ್ತು. ಪಾಕಿಸ್ತಾನದ  ಇತಿಹಾಸದಲ್ಲಿಯೇ ಮೊದಲ ಬಾರಿ ಮಂಗಳಮುಖಿ ಮಾರ್ವಿಕಾ  ಮಲಿಕ್ ಎಂಬ ನ್ಯೂಸ್ ಆ್ಯಂಕರ್ ನೇಮಕ ಮಾಡಿಕೊಳ್ಳಲಾಗಿದೆ ಎಂದು ಚಾನೆಲ್ ಪ್ರಕಟಿಸಿತು. ಮಲಿಕ್ ಪತ್ರಿಕೋದ್ಯಮ ವಿಭಾಗದಲ್ಲಿ ಪದವಿ ಪಡೆದುಕೊಂಡಿದ್ದು, ಈ ಪತ್ರಿಕೋದ್ಯಮ ಸ್ನಾತಕೋತ್ತರ ಪ್ರವೇಶಕ್ಕಾಗಿ […]

ಅಫ್ಘನ: 63 ಉಗ್ರರ ಹತ್ಯೆ

ಅಫ್ಘನ: 63 ಉಗ್ರರ ಹತ್ಯೆ

ಕಾಬೂಲ್ (ಅಫಘಾನಿಸ್ತಾನ):  ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ  ಸಂಘಟನೆಯ 14 ಜನರೂ ಸೇರಿದಂತೆ ಒಟ್ಟು 63 ಉಗ್ರರನ್ನು ಅಫಘಾನ್ ಭದ್ರತಾ ಪಡೆಗಳು ಕೊಂದು ಹಾಕಿವೆ. ನಂಗಾರಹರ,  ಉರ್ಜಗಾನ್, ಫರಾಹ್, ಕಂದಹಾರ್, ಪಾಕ್ತಿಯಾ ಪ್ರದೇಶಗಳಲ್ಲಿ ಶನಿವಾರ ಕಾರ್ಯಾಚರಣೆ ಆರಂಭಿಸಿದ ಭದ್ರತಾ ಪಡೆಗಳು 24 ಗಂಟೆಗಳಲ್ಲಿ 63 ಉಗ್ರರನ್ನು ಕೊಂದು ಹಾಕಿವೆ ಎಂದು  ತೋಲೋ  ಸುದ್ದಿ ಸಂಸ್ಥೆ ತಿಳಿಸಿದೆ. ಈ ಸಂದರ್ಭದಲ್ಲಿ ಸಾಕಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ಭದ್ರತಾ ಪಡೆಗಳು ವಶಕ್ಕೆ ತೆಗೆದುಕೊಂಡಿವೆ. (ಮೂಲ :  ಎಎನ್ ಐ) Views: 226

ಪ್ರದರ್ಶನಕ್ಕೆ ಬಂತು ಆರು ಲಕ್ಷ ರೂ. ಚಾಕೋಲೇಟ್ !!

ಪ್ರದರ್ಶನಕ್ಕೆ ಬಂತು ಆರು ಲಕ್ಷ ರೂ.  ಚಾಕೋಲೇಟ್ !!

ಒಬಿಡೋಸ್ (ಪೋರ್ಚುಗಲ್): ವಿಶ್ವದ  ಅತಿ ದುಬಾರಿ ಚಾಕೋಲೇಟ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಬಾನ್ ಬಾನ್ ಪೋರ್ಚುಗಲ್ ನ  ಒಬಿಡೋಸ್ ನಲ್ಲಿ ನಡೆಯುತ್ತಿರುವ  ಅಂತಾರಾಷ್ಟ್ರೀಯ ಚಾಕೋಲೇಟ್ ಮೇಳದಲ್ಲಿ ಪ್ರದರ್ಶಿಸಲಾಗುತ್ತಿದ್ದು, ಚಾಕೋಲೇಟ್ ಪ್ರಿಯರು ಪುಳಕಗೊಂಡಿದ್ದಾರ. ಅಂದಾಜು 23 ಕ್ಯಾರೆಟ್ ಸುವರ್ಣಲೇಪಿತ ಚಾಕೋಲೇಟಿಗ ಗ್ಲೋರಿಯಸ್ ಎಂದು ಹೆಸರಿಸಲಾಗಿದ್ದು   ಇದರ ಬೆಲೆ 7,728  ಯರೋ (6 ಲಕ್ಷ ರೂ !) ಎಂದು ಅಂದಾಜಿಸಲಾಗಿದೆ. ಕೇವಲ ಒಂದು ಸಾವಿರದಷ್ಟು ಚಾಕೋಲೇಟ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ  ನಾಲ್ಕೈದು ಬಗೆಗಳಿವೆ ಎಂದು ಹೇಳಲಾಗಿದೆ. ಈ […]

ಲಂಡನ್ ರಾಣಿಯ ಹುಟ್ಟುಹಬ್ಬಕ್ಕೆ ಅದ್ಧೂರಿ ಸಿದ್ಧತೆ !

ಲಂಡನ್ ರಾಣಿಯ  ಹುಟ್ಟುಹಬ್ಬಕ್ಕೆ ಅದ್ಧೂರಿ ಸಿದ್ಧತೆ !

ಲಂಡನ್ (ಯು.ಕೆ): ರಾಣಿ ಎಲಿಜೆಬೆತ್ (2 ನೇ) ರ ಹುಟ್ಟು ಹಬ್ಬಕ್ಕೆ ಭರ್ಜರಿ ಸಿದ್ಧತೆ ನಡೆದಿದ್ದು, ಖ್ಯಾತ ಸಂಗೀತಜ್ಞರೂ ಸೇರಿದಂತೆ ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಲಂಡನ್ ನ ರಾಯಲ್ ಅಲ್ರ್ಬರ್ಟ್ ಹಾಲ್ ನಲ್ಲಿ ಏಪ್ರಿಲ್ 22 ರಂದು ನಡೆಯಲಿರುವ  ಅದ್ಧೂರಿ ಕಾರ್ಯಕ್ರಮದಲ್ಲಿ ಪಾಪ್ ರಾಣಿ ಕೈಲಿ ಮಿಂಗ್, ಬ್ರಿಟಿಷ್ ಗಾಯಕ   ಅನ್ನೆ ಮಾರೀ ಅಲ್ಲದೇ ರಾಕ್  ಸ್ಟಾರ್ ಸ್ಟಿಂಗ್, ಪಾಪ್ ಸ್ಟಾರ್ ಮೆಂಡೇಸ್  ಹಾಗೂ ಸಂಗೀತಗಾರ ಶಾಗೀ ಮತ್ತು ಇತರ  ಗಣ್ಯಾತಿ ಗಣ್ಣರು ಪಾಲ್ಗೊಳ್ಳುವರು. Views: 265

1 2 3 6