ಅಬ್ಬಾ, ಆ ಧ್ವಜದ ಉದ್ದ ಎಷ್ಟಿತ್ತು ಗೊತ್ತಾ?!

ಅಬ್ಬಾ, ಆ ಧ್ವಜದ ಉದ್ದ ಎಷ್ಟಿತ್ತು ಗೊತ್ತಾ?!

ಸೂರತ್ (ಗುಜರಾತ್):  ಇಡೀ ದೇಶ 72 ನೇ ಸ್ವಾತಂತ್ರೋತ್ಸವ ಸಂಭ್ರಮದಲ್ಲಿ ಮುಳುಗೇಳುತ್ತಿರುವ ನಡುವೆಯೇ ಗುಜರಾತ್ ನ ಸೂರತ್ ಪಟ್ಟಣದಲ್ಲಿ ದೇಶದಲ್ಲಿಯೇ ಅತಿ   ಉದ್ದನೆಯ ಧ್ವಜವೊಂದು ಅನಾವರಣಗೊಂಡಿದೆ. ಬರೋಬ್ಬರಿ 1100 ಅಡಿ ಉದ್ದ, 9 ಅಡಿ ಅಗಲದ ಧ್ವಜವನ್ನು ಸಾವಿರಾರು ಜನರು ಇಂದು ಹಾರಿಸುವ ಮೂಲಕ ಗಮನ ಸೆಳೆದರು. ಅಗರವಾಲ್ ವಿಕಾಸ ಟ್ರಸ್ಟ್ ಆಯೋಜಿಸಿದ್ದ ಶಾನ್ -ಇ-ತಿರಂಗಾ 5  ಕಿ.ಮೀ.  ರ್ಯಾಲಿಯಲ್ಲಿ  ಸಾವಿರಾರು ಜನರು ಭಾಗವಹಿಸಿದ್ದರು. ನಾನಾ ಧರ್ಮ-ಜಾತಿಯ ಜನಗಳು ಒಂದೆಡೆ ಸೇರಿ ಧರ್ಮಕ್ಕಿಂತ ರಾಷ್ಟ್ರೀಯತೆ ದೊಡ್ಡದು ಎಂಬ […]

ಹುರುಳಿಲ್ಲದ ಮೋದಿ ಭಾಷಣ: ಸುರ್ಜಿವಾಲಾ ಕಟುಟೀಕೆ

ಹುರುಳಿಲ್ಲದ ಮೋದಿ ಭಾಷಣ: ಸುರ್ಜಿವಾಲಾ ಕಟುಟೀಕೆ

ಹೊಸದಿಲ್ಲಿ: 72 ನೇ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಯಾವುದೇ ಹುರುಳಿರಲಿಲ್ಲ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ರಣದೀಪ ಸುರ್ಜಿವಾಲೆ ಟೀಕಿಸಿದ್ದಾರೆ. ಪ್ರಧಾನಿಯವರು ರಫಾಲೆ ಹಗರಣ, ಛತ್ತೀಸಗಡದ ಪಿಡಿಎಸ್ ಹಗರಣ, ಡೋಕಲಮ್ ನಲ್ಲಿ ಚೀನಾದ ಅತಿಕ್ರಮಣ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ದ್ವೇಷದ ವಾತಾವರಣ ಮೊದಲಾದ ಅಂಶಗಳ ಬಗ್ಗೆ ಪ್ರಧಾನಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಲೇ ಇಲ್ಲ ಎಂದೂ ಸುರ್ಜಿವಾಲೆ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಅಧಿಕಾರಾವಧಿಯ ಕಡೆಯ ಭಾಷಣದಲ್ಲಾದರೂ ಅವರು ಸತ್ಯವನ್ನು […]

ಸೆ. 25 ರಿಂದ ಪ್ರಧಾನಮಂತ್ರಿ ಜನ ಆರೋಗ್ಯ ಅಭಿಯಾನ: ಮೋದಿ ಘೋಷಣೆ

ಸೆ. 25 ರಿಂದ ಪ್ರಧಾನಮಂತ್ರಿ ಜನ ಆರೋಗ್ಯ ಅಭಿಯಾನ: ಮೋದಿ ಘೋಷಣೆ

ಹೊಸದಿಲ್ಲಿ: “ಪ್ರಧಾನ ಮಂತ್ರಿ ಜನ ಆರೋಗ್ಯ ಅಭಿಯಾನ “ವು ಸೆಪ್ಟೆಂಬರ್ 25 ರಿಂದ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಈ ವರ್ಷಾರಂಭದಲ್ಲಿ ಕೇಂದ್ರ ಸರಕಾರ ಘೋಷಿಸಿದ್ದ ಆರೋಗ್ಯ ಕಾಳಜಿ ನೀತಿಯ ಆಯುಷ್ಮಾನ ಭಾರತ ದ ಒಂದು ಭಾಗವಾಗಿ ಈ ಅಭಿಯಾನ ಆರಂಭವಾಗಲಿದೆ. ರಾಜಧಾನಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಈ ದೇಶದ ಬಡ ಜನರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಯೋಜನೆ ನೆರವಾಗಲಿದೆ ಎಂದು  ಹೇಳಿದರು. ದೇಶದ 50 ಕೋಟಿ […]

ಕುಟುಂಬಕ್ಕೆ ಎರಡೇ ಮಕ್ಕಳು ಕಾನೂನು ಜಾರಿಗೆ ಬರಲಿ

ಕುಟುಂಬಕ್ಕೆ ಎರಡೇ ಮಕ್ಕಳು ಕಾನೂನು ಜಾರಿಗೆ ಬರಲಿ

ಹೊಸದಿಲ್ಲಿ: ಪ್ರತಿ ಕುಟುಂಬಕ್ಕೆ ಇಬ್ಬರೇ ಮಕ್ಕಳು ಎಂಬ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿ 125 ಸಂಸದರು ರಾಷ್ಟ್ರಪತಿ ಕೋವಿಂದ ಅವರಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಲಿಖಿತ ಮನವಿಪತ್ರಕ್ಕೆ ಸಹಿ ಹಾಕಿರುವ ಸಂಸದರು ಚೀನಾ ದೇಶದಲ್ಲಿ ಇಂತಹ ಕಾನೂನು ಜಾರಿಯಲ್ಲಿದ್ದು, ಜನಸಂಖ್ಯೆ ನಿಯಂತ್ರಣಕ್ಕೆ ಭಾರತದಲ್ಲಿಯೂ ಕಾನೂನು ಜಾರಿ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. Mahantesh Yallapurmathhttp://Udayanadu.com

ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ ವಿಧಿವಶ

ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ ವಿಧಿವಶ

  ಕೋಲ್ಕತ್ತಾ: ಲೋಕಸಭೆಯ ಮಾಜಿ ಸ್ಪೀಕರ್ ಸೋಮನಾತ ಚಟರ್ಜಿ (89) ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಚಟರ್ಜಿ ಅವರನ್ನು ಹೃದಯಾಘಾತ ಹಾಗೂ ಕಿಡ್ನಿ ವೈಫಲ್ಯಕ್ಕಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಅವರು ನಿಧನಹೊಂದಿದರು. 2004-2009 ರ ಅವರು ಲೋಕಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. Mahantesh Yallapurmathhttp://Udayanadu.com

ಮದರಸಾದಲ್ಲಿ ವಿದ್ಯುತ್ ಸ್ಪರ್ಷ: 20 ವಿದ್ಯಾರ್ಥಿಗಳಿಗೆ ಗಾಯ

ಮದರಸಾದಲ್ಲಿ ವಿದ್ಯುತ್ ಸ್ಪರ್ಷ: 20 ವಿದ್ಯಾರ್ಥಿಗಳಿಗೆ ಗಾಯ

ಅಮ್ರೋಹಾ (ಉತ್ತರ ಪ್ರದೇಶ): ಹೈ ಟೆನ್ಷನ್ ವೈರ್ ಬಿದ್ದ ಪರಿಣಾಮ ಉತ್ತರ ಪ್ರದೇಶದ ಅಮ್ರೋಹಾದ ಮದರಸಾವೊಂದರ 20 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಸಾವುಗಳು ಸಂಭವಿಸಿಲ್ಲ, ಯಾರಿಗೂ ಗಂಭೀರ ಗಾಯಗಳೂ ಆಗಿಲ್ಲ. ಚಿಕ್ಕ ಪುಟ್ಟ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. 23 ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಮುಂದೆ ಇಂತಹ ದುರ್ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಮಂತಕುಮಾರ್ ತಿಳಿಸಿದ್ದಾರೆ. Mahantesh Yallapurmathhttp://Udayanadu.com

ಶಾಲೆಗೆ ಹೋಗಬೇಕೆಂದರೆ ಈ ಮಕ್ಕಳು ನದಿ ದಾಟಲೇಬೇಕು !

ಶಾಲೆಗೆ ಹೋಗಬೇಕೆಂದರೆ ಈ ಮಕ್ಕಳು ನದಿ ದಾಟಲೇಬೇಕು !

ರಜೌರಿ (ಜಮ್ಮು-ಕಾಶ್ಮೀರ): ಸೇತುವೆಯೇ ಇಲ್ಲದ ಕಾರಣ ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ಲಾಧೋಟೆ ನದಿಯನ್ನು ಅಪಾಯಕಾರಿಯಾಗಿಯೇ ದಾಟಿಕೊಂಡು ನೂರಾರು ವಿದ್ಯಾರ್ಥಿಗಳು ಶಾಲೆ ತಲುಪಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಮಳೆಗಾಲದಲ್ಲಿ ನದಿ ತುಂಬಿ ಹರಿಯುವ ಕಾರಣ ನದಿ ದಾಟಲಾಗದೇ ಎಷ್ಟೋ ಸಂದರ್ಭದಲ್ಲಿ ಶಾಲೆಗೆ ಚಕ್ಕರ ಹೊಡೆಯಬೇಕಾಗುತ್ತದೆ. Mahantesh Yallapurmathhttp://Udayanadu.com

ಅಟಲ್ ಆರೋಗ್ಯದಲ್ಲಿ ಏರುಪೇರು

ಅಟಲ್ ಆರೋಗ್ಯದಲ್ಲಿ ಏರುಪೇರು

ಹೊಸದಿಲ್ಲಿ: ಬಿಜೆಪಿಯ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಈಗ ಹದಗೆಟ್ಟಿದ್ದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಮಾಜಿ ಪ್ರಧಾನಿಯನ್ನು ಕೇಂದ್ರ ಸಚಿವ ರಾಜನಾಥಸಿಂಗ್ ನಿನ್ನೆ ರಾತ್ರಿ ಭೇಟಿ ಮಾಡಿದರು. Mahantesh Yallapurmathhttp://Udayanadu.com

ಜಂತಿನ ಮಾತ್ರೆ ಸೇವಿಸಿದ ಶಾಲಾ ಮಕ್ಕಳು ಅಸ್ವಸ್ಥ !

ಜಂತಿನ ಮಾತ್ರೆ ಸೇವಿಸಿದ ಶಾಲಾ ಮಕ್ಕಳು ಅಸ್ವಸ್ಥ !

ಸಂಭಾಳ (ಉತ್ತರ ಪ್ರದೇಶ): ಜಂತು ಹುಳುವಿಗಾಗಿನ ‘ಅಲ್ಬೆಂಡೇಜೋಲ್ ‘ ಮಾತ್ರೆ ತೆಗೆದುಕೊಂಡಿದ್ದರಿಂದ ಏಳು ಮಕ್ಕಳು ಅಸ್ವಸ್ಥರಾದ ಘಟನೆ ಸಂಭಾಳ ಜಿಲ್ಲೆಯಲ್ಲಿ ಸಂಭವಿಸಿದೆ. ಅಂಗನವಾಡಿ ಕೇಂದ್ರದ ಮಕ್ಕಳಿಗೆ ಜಂತಿನ ಮಾತ್ರೆ ನೀಡಲಾಗಿತ್ತು. ಅದನ್ನು ಸೇವಿಸಿದ ಮೇಲೆ ಮಕ್ಕಳ ಹೊಟ್ಟೆ ನೋವೆಂದು ಬಳಲತೊಡಗಿದರು. ತಕ್ಷಣ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದ ಸಿಬ್ಬಂದಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಮಾತ್ರೆ ತೆಗೆದುಕೊಂಡ ಮೇಲೆ 8-9 ಮಕ್ಕಳಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಅಮಿತಾ ಸಿಂಗ್ ತಿಳಿಸಿದ್ದಾರೆ. (ಎಎನ್ ಐ) […]

ಜಗಳವಾಡಿದ ಸಹಪಾಠಿಗೆ 8 ನೇ ಕ್ಲಾಸ್ ವಿದ್ಯಾರ್ಥಿ ಏನು ಮಾಡಿದ ಗೊತ್ತಾ?

ಜಗಳವಾಡಿದ ಸಹಪಾಠಿಗೆ 8 ನೇ ಕ್ಲಾಸ್ ವಿದ್ಯಾರ್ಥಿ ಏನು ಮಾಡಿದ ಗೊತ್ತಾ?

ಛಟರಪುರ (ಮಧ್ಯಪ್ರದೇಶ): ತನ್ನೊಡನೆ ಜಗಳ ಮಾಡಿದ ಸಹಪಾಠಿಗೆ ಎಂಟನೇ ತರಗತಿ ಬಾಲಕನೊಬ್ಬ ಹರಿತವಾದ ಚಾಕುವಿನಿಂದ ಇರಿದಿದ್ದು ಆತ ತೀವ್ರವಾಗಿ ಗಾಯಗೊಂಡಿದ್ದಾನೆ. ಛಟರಪುರದ ಸನ್ಮತಿ ವಿದ್ಯಾಮಂದಿರದಲ್ಲಿ ಈ ಘಟನೆ ಶನಿವಾರ ಸಂಭವಿಸಿದ್ದು, ಗಾಯಗೊಂಡಿರುವ ವಿದ್ಯಾರ್ಥಿ ಸ್ಥಿತಿ ಗಂಭೀರವಾಗಿದೆ. ಪ್ರಕರಣದ ಹೆಚ್ಚಿನ ವಿವರಗಳು ಇನ್ನೂ ಬರಬೇಕಿದೆ.   Mahantesh Yallapurmathhttp://Udayanadu.com

1 2 3 208