ನಾಲೆಗೆ ಬಿದ್ದ ಬಸ್ : ಆರು ಜನರ ದುರ್ಮರಣ

ನಾಲೆಗೆ ಬಿದ್ದ ಬಸ್ : ಆರು ಜನರ ದುರ್ಮರಣ

ಹೂಗ್ಲಿ (ಪಶ್ಚಿಮ ಬಂಗಾಲ): ಜಿಲ್ಲೆಯ ಹರಿಪಾಲ ಗ್ರಾಮದಲ್ಲಿ ಬಸ್ಸೊಂದು ನಾಲೆಗೆ ಬಿದ್ದ ಪರಿಣಾಮವಾಗಿ ಆರು ಜನರು ಸಾವಿಗೀಡಾಗಿದ್ದು, ಇತರ 20 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ  ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಹಾರ ಕಾರ್ಯಾಚರಣೆ ನಡೆದಿದೆ. ಹೆಚ್ಚಿನ ವಿವರಗಳು ಇನ್ನೂ ಬರಬೇಕಿದೆ. Mahantesh Yallapurmathhttp://Udayanadu.com

ಮಹಾರಾಷ್ಟ್ರದಲ್ಲಿ ಇನ್ನು ಮನೆ ಮನೆಗೆ ಮದ್ಯ !!

ಮಹಾರಾಷ್ಟ್ರದಲ್ಲಿ ಇನ್ನು ಮನೆ ಮನೆಗೆ ಮದ್ಯ !!

ಮುಂಬೈ: ಮನೆ ಮನೆಗೆ ನೀರು, ಸಿಲಿಂಡರ್ ತಲುಪಿಸುವ ವ್ಯವಸ್ಥೆ ಬಗ್ಗೆ ನೀವೆಲ್ಲ ಕೇಳಿದ್ದೀರಿ, ಅನುಭವಿಸಿದ್ದೀರಿ. ಆದರೆ, ಇದೀಗ ಮಹಾರಾಷ್ಟ್ರ ಸರಕಾರವು ಇನ್ನು ಮುಂದೆ ಮನೆ ಮನೆಗೆ ಮದ್ಯ ಪೂರೈಸುವ ವಿಶೇಷ ಯೋಜನೆಯೊಂದನ್ನು ಜಾರಿಗೆ ತರಲಿದೆ ! ಹೌದು, ಮಹಾರಾಷ್ಟ್ರದ ಅಬಕಾರಿ ಸಚಿವ ಚಂದ್ರಶೇಖರ್ ಭವಾನ್ಕುಲೆ ಇಂತಹ ಯೋಜನೆಯೊಂದನ್ನು ಜಾರಿಗೊಳಿಸುವ ಕುರಿತಂತೆ ಇಂದು ಹೇಳಿಕೆ ನೀಡಿದ್ದಾರೆ. ಕುಡಿದು ವಾಹನ ಚಾಲನೆ ಮಾಡುವಾಗಿನ ಅಪಘಾತಗಳನ್ನು ತಡೆಯಲು ಈ ವಿನೂತನ ಯೋಜನೆ ಜಾರಿಮಾಡಲಾಗುತ್ತಿದೆ ಎಂದೂ ಸಚಿವರು ಸಮರ್ಥಿಸಿಕೊಂಡಿದ್ದಾರೆ. ಮನೆ ಮನೆಗೆ ಮದ್ಯ […]

ಕೇಂದ್ರ ಸಚಿವ ಎಂ.ಜೆ. ಅಕ್ಬರ್ ರಾಜೀನಾಮೆ

ಕೇಂದ್ರ ಸಚಿವ ಎಂ.ಜೆ. ಅಕ್ಬರ್ ರಾಜೀನಾಮೆ

ಹೊಸದಿಲ್ಲಿ: ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ.ಜೆ. ಅಕ್ಬರ್ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪತ್ರಕರ್ತೆಯೊಬ್ಬರು ಮಾಡಿರುವ ಆರೋಪ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತಲ್ಲದೇ ಅವರು ಆರಂಭಿಸಿರುವ ಮಿ ಟೂ ಅಭಿಯಾನ ಬಹಳಷ್ಟು ಜನಪ್ರಿಯ ಪುರುಷರ ಕಾಮುಕ ವರ್ತನೆಯು ಬಹಿರಂಗಗೊಳ್ಳಲು ಅವಕಾಶ ಕಲ್ಪಿಸಿತ್ತು. Mahantesh Yallapurmathhttp://Udayanadu.com

ಹಾಡಹಗಲೇ ಬ್ಯಾಂಕಿಗೆ ನುಗ್ದಿ ದರೋಡೆ: ಗುಂಡಿಕ್ಕಿ ಕ್ಯಾಶಿಯರ್ ಹತ್ಯೆ !

ಹಾಡಹಗಲೇ ಬ್ಯಾಂಕಿಗೆ ನುಗ್ದಿ ದರೋಡೆ: ಗುಂಡಿಕ್ಕಿ ಕ್ಯಾಶಿಯರ್ ಹತ್ಯೆ !

ಹೊಸದಿಲ್ಲಿ: ಹಾಡಹಗಲೇ ಇಲ್ಲಿಯ ರಾಷ್ಟ್ರೀಕೃತ ಬ್ಯಾಂಕೊಂದಕ್ಕೆ ನುಗ್ಗಿದ ದರೋಡೆಕೋರರು ಕ್ಯಾಶಿಯರ್ ನನ್ನು ಹತ್ಯೆಗೈದು ದರೋಡೆ ನಡೆಸಿದ್ದಾರೆ. ಖೈರಾ ಪ್ರದೇಶದಲ್ಲಿರುವ ಕಾರ್ಪೋರೇಶನ್ ಬ್ಯಾಂಕಿಗೆ ನುಗ್ಗಿದ 6 ಕ್ಕೂ ಹೆಚ್ಚು ಜನರಿದ್ದ ದರೋಡೆಕೋರರು, ಸೆಕ್ಯೂರಿಟಿ ಮತ್ತು ಜನರಿಗೆ ಗನ್ ತೋರಿಸಿ ಬೆದರಿಕೆ ಹಾಕಿದರು. ಪ್ರತಿರೋಧ ವ್ಯಕ್ತಪಡಿಸಿದ ಕ್ಯಾಶಿಯರ್ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ ದರೋಡೆಕೋರನೊಬ್ಬ ಪಿಸ್ತೂಲಿನಿಂದ ಯದ್ವಾ ತದ್ವಾ ಗುಂಡು  ಹಾರಿಸುತ್ತಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾದ್ಲಿ ಸೆರೆಯಾಗಿದೆ. Mahantesh Yallapurmathhttp://Udayanadu.com

ಬಾಲಕಿ ಮೇಲೆ ಅತ್ಯಾಚಾರ, ಕೊಲೆ: ಅಪರಾಧಿಗೆ 17 ರಂದು ಗಲ್ಲು!

ಬಾಲಕಿ ಮೇಲೆ ಅತ್ಯಾಚಾರ, ಕೊಲೆ: ಅಪರಾಧಿಗೆ 17 ರಂದು ಗಲ್ಲು!

ಇಸ್ಲಾಮಾಬಾದ (ಪಾಕಿಸ್ತಾನ): ಪಾಕಿಸ್ತಾನ ಪಂಜಾಬ್ ಪ್ರದೇಶದ ಕಾಸೂರ್ ನಲ್ಲಿ ಏಳು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಆರೋಪದಲ್ಲಿ ಶಿಕ್ಷೆಗೊಳಗಾಗಿರುವ ಇಮ್ರಾನ್ ಅಲಿಯನ್ನು ಅಕ್ಟೋಬರ್ 17 ರಂದು ಗಲ್ಲಿಗೇರಿಸಲಾಗುತ್ತಿದೆ. ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ ವಿಶೇಷ ಭಯೋತ್ಪಾದನೆ ನಿಗ್ರಹ ದಳವು ಶುಕ್ರವಾರ ಕಪ್ಪು ವಾರಂಟ್ ಜಾರಿಗೊಳಿಸಿದೆ. ನಿಗದಿತ ದಿನಾಂಕದಂದು ಅಪರಾಧಿಗೆ ಶಿಕ್ಷೆ ವಿಧಿಸಲಾಗುವುದು ಎಂದು ನ್ಯಾಯಾಧೀಶ ಶೇಖ್ ಸಜ್ಜಾದ ಅಹ್ಮದ ತಿಳಿಸಿರುವುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ. ಕಸೂರು ನಿವಾಸಿ ಬಾಲಕಿ ಕಳೆದ ಜನೇವರಿಯಲ್ಲಿ  ಟ್ಯೂಷನ್ […]

ಹಳಿ ದಾಟುವಾಗ ರೈಲು ಹಾಯ್ದು ಐವರ ದುರ್ಮರಣ !

ಹಳಿ ದಾಟುವಾಗ ರೈಲು ಹಾಯ್ದು ಐವರ ದುರ್ಮರಣ !

ಕೈಮೂರ (ಬಿಹಾರ): ರೈಲಿನಿಂದ ಇಳಿದು ಹಳಿ ದಾಟುತ್ತಿದ್ದ ವೇಳೆ ಮತ್ತೊಂದು ರೈಲಿಗೆ ಸಿಲುಕಿ ಐವರು ಸಾವಿಗೀಡಾಗಿರುವ ದಾರುಣ ಘಟನೆ ಬಿಹಾರದ ಭಾಬುವಾ ನಿಲ್ದಾಣದಲ್ಲಿ ನಿನ್ನೆ ಸಂಜೆ ನಡೆದಿದೆ. ವಾರಾಣಾಸಿ-ರಾಂಚಿ ರೈಲಿನಲ್ಲಿ ಪ್ರಯಾಣಿಸಿ ಭಾಬುವಾ ನಿಲ್ದಾಣಕ್ಕೆ ಬಂದಿಳಿದ ಮೂವರು ಮಹಿಳೆಯರು , ಒಂದು ಮಗು ಸೇರಿದಂತೆ ಐವರು, ಹಳಿ ದಾಟುತ್ತಿದ್ದ ಸಂದರ್ಭದಲ್ಲಿ ನಿಲ್ದಾಣದಲ್ಲಿ ನಿಲುಗಡೆಯಾಗದ ಹೌರಾ-ಲಾಲ್ ಕಾನ್  ಸೂಪರ್ ಫಾಸ್ಟ್ ಎಕ್ಸಪ್ರೆಸ್ ರೈಲಿಗೆ ಸಿಲುಕಿ ದಾರುಣವಾಗಿ ಸಾವಿಗೀಡಾದರು ಎಂದು ಮೂಲಗಳು ತಿಳಿಸಿವೆ. ಘಟನೆ ಕುರಿತಂತೆ ಹೆಚ್ಚಿನ ವಿವರಗಳು ಬರಬೇಕಿದೆ. […]

ಶಬರಿಮಲೈಗೆ ಬರುವ ಮಹಿಳೆಯರನ್ನು ಸೀಳಬೇಕು ಎಂದ ಮಲಯಾಳಿ ನಟ !!

ಶಬರಿಮಲೈಗೆ ಬರುವ ಮಹಿಳೆಯರನ್ನು ಸೀಳಬೇಕು ಎಂದ ಮಲಯಾಳಿ ನಟ !!

ಕೊಲ್ಲಂ (ಕೇರಳ): ಶಬರಿಮಲೈನ ಸುಪ್ರಸಿದ್ಧ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಬರುವ ಮಹಿಳೆಯರನ್ನು  ಸೀಳಿ ಹಾಕಬೇಕು ಎಂದು ಮಲಯಾಳಂ ನಟ ಕೊಲ್ಲಂ ತುಳಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೇರಳದ ಕೊಲ್ಲಂ ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ  ಅವರು  ಈ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಹೊಸ ಚರ್ಚೆಗೆ ಗ್ರಾಸ ಒದಗಿಸಿದ್ದಾರೆ. ಹಾಗೆ ಸೀಳಿದ ದೇಹದ ಅರ್ಧ ಭಾಗವನ್ನು ದೆಹಲಿಗೆ ಕಳಿಸಬೇಕು, ಇನ್ನರ್ಧ ಭಾಗವನ್ನು ಕೇರಳ ಸಿಎಂ ಕಳಿಸಬೇಕು ಎಂದೂ ತುಳಸಿ ಸಲಹೆ ನೀಡಿದ್ದಾರೆ. ಶಬರಿಮಲೈ ದೇಗುಲ ಪ್ರವೇಶಕ್ಕೆ ಮಹಿಳೆಯರನ್ನು ನಿಷೇಧಿಸುವುದು […]

ಆಸ್ಪತ್ರೆಯಲ್ಲೇ ಸಂಪುಟ ಸಭೆ ಕರೆದ ಗೋವಾ ಸಿಎಂ !

ಆಸ್ಪತ್ರೆಯಲ್ಲೇ ಸಂಪುಟ ಸಭೆ ಕರೆದ ಗೋವಾ ಸಿಎಂ !

ಹೊಸದಿಲ್ಲಿ:ಅನಾರೋಗ್ಯಕ್ಕೆ ತುತ್ತಾಗಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ , ಆಸ್ಪತ್ರೆಯಲ್ಲಿಯೇ ಸಚಿವ ಸಂಪುಟ ಕರೆದಿದ್ದಾರೆ ! ಸೆಪ್ಟೆಂಬರ್ 15 ರಂದು ಪರಿಕ್ಕರ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯ ಇದೇ ಮೊದಲ ಬಾರಿ ಸಂಪುಟ ಸಭೆ ಕರೆದಿದ್ದಾರೆ. ಶುಕ್ರವಾರ ನಡೆಯಲಿರುವ ಈ ಸಭೆಯಲ್ಲಿ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ, ಗೋವಾ ಫಾರ್ವರ್ಡ್ ಪಾರ್ಟಿ ಜತೆಗೆ ದೋಸ್ತಿ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಯಲಿದೆ. ದೋಸ್ತಿ ಪಕ್ಷಗಳಿಗೆ ಯಾವ ಸಚಿವ ಸ್ಥಾನಗಳನ್ನು ನೀಡಬೇಕು ಎಂಬ ಕುರಿತಂತೆಯೂ […]

ಆ ಬಸ್ ದುರಂತದಲ್ಲಿ ಸತ್ತವರು ಬರೋಬ್ಬರಿ 50 ಮಂದಿ !!

ಆ ಬಸ್ ದುರಂತದಲ್ಲಿ ಸತ್ತವರು ಬರೋಬ್ಬರಿ 50 ಮಂದಿ !!

ನೈರೋಬಿ (ಕೇನ್ಯಾ): ನೈರೋಬಿ ಪಶ್ಚಿಮ ಭಾಗದಲ್ಲಿ ಬುಧವಾರ ಸಂಭವಿಸಿದ ಬಸ್ ದುರಂತದಲ್ಲಿ ಏಳು ಮಕ್ಕಳೂ ಸೇರಿದಂತೆ ಬರೋಬ್ಬರಿ 50 ಮಂದಿ ಸಾವಿಗೀಡಾಗಿದ್ದಾರೆ ! ನೈರೋಬಿಯಿಂದ ಕಿಸುಮು ಪೋರ್ಟ್ ಸಿಟಿಗೆ ಬಸ್ಸು ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕೆಳಕ್ಕೆ ಉರುಳಿ ಬಿದ್ದು ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ಸಿಎನ್ ಎನ್ ಸುದ್ದಿಜಾಲಕ್ಕೆ ತಿಳಿಸಿದ್ದಾರೆ. ಬಸ್ ದುರಂತದಲ್ಲಿ ಸಾವನ್ನಪ್ಪಿರುವವರಿಗೆ ಶ್ರದ್ಧಾಂಜಲಿ ಅರ್ಪಿಸಿರುವ ಕೇನ್ಯಾ ಅಧ್ಯಕ್ಷ ಉಹುರು ಕೇನ್ಯಾಟ್ಟಾ, ಗಾಯಗೊಂಡವರು ಬೇಗನೆ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. Mahantesh Yallapurmathhttp://Udayanadu.com

ಮಿನಿ ಬಸ್ ಅಪಘಾತ: ಸಚಿವರ ಸಹೋದರ ಸೇರಿ ಮೂವರ ಸಾವು

ಮಿನಿ ಬಸ್ ಅಪಘಾತ: ಸಚಿವರ ಸಹೋದರ ಸೇರಿ ಮೂವರ ಸಾವು

ಸಿಮ್ಲಾ (ಹಿಮಾಚಲ ಪ್ರದೇಶ): ಸಿಮ್ಲಾದ ಕಾಸುಂಪ್ತಿಯಿಂದ ರೋಹ್ರುಗೆ ತೆರಳುತ್ತಿದ್ದ ಮಿನಿ ಬಸ್ಸೊಂದು ಅಪಘಾತಕ್ಕೀಡಾಗಿ, ಸಚಿವರೊಬ್ಬರ ಸಹೋದರ ಸೇರಿದಂತೆ ಮೂವರು ಸಾವಿಗೀಡಾಗಿದ್ದು, ಇತರ ಹತ್ತು ಮಂದಿ ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ ಚಾಯಿಲಾ ಬಜಾರ್ ಸೇತುವೆ ಬಳಿ ಸಂಭವಿಸಿದ ಈ ಅಪಘಾತದಲ್ಲಿ ಹಿಮಾಚಲ ಪ್ರದೇಶದ ಶಿಕ್ಷಣ ಸಚಿವ ಸುರೇಶ ಭಾರದ್ವಾಜ ಅವರ ಸಹೋದರ ನಿತ್ಯಾನಂದ ಸೇರಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. Mahantesh Yallapurmathhttp://Udayanadu.com