ಉತ್ತರಪ್ರದೇಶ: ಸೈಕಲ್ ರಿಕ್ಷಾದಲ್ಲಿ ಮಹಿಳೆ ಶವ ಆಸ್ಪತ್ರೆಗೆ ಸಾಗಿಸಿದ ಪೊಲೀಸ್‍

ಉತ್ತರಪ್ರದೇಶ: ಸೈಕಲ್ ರಿಕ್ಷಾದಲ್ಲಿ ಮಹಿಳೆ ಶವ ಆಸ್ಪತ್ರೆಗೆ ಸಾಗಿಸಿದ ಪೊಲೀಸ್‍

ಉತ್ತರಪ್ರದೇಶ: ಫಿರೋಜಾಬಾದ್‌ನಲ್ಲಿ ರೈಲಿಗೆ  ಸಿಲುಕಿ ಮೃತ ಪಟ್ಟ ಮಹಿಳೆ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರೈಲ್ವೆ ಪೊಲೀಸ ಸಿಬ್ಬಂದಿಯೊಬ್ಬ ಸೈಕಲ್ ರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸಿದ ಘಟನೆ ನಡೆದಿದೆ. ರೈಲು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟಿದ್ದಳು.  ತಲೆ ತಗ್ಗಿನಿಂದ ರಕ್ತಸ್ರಾವವಾಗುತ್ತಿತ್ತು ಶವವನ್ನು ಬಟ್ಟೆಯಲ್ಲಿ ಸುತ್ತಿ ಸೈಕಲ್ ರಿಕ್ಷಾ ಮೂಲಕ ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾನೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಪೊಲೀಸ್‌ ಅಧಿಕಾರಿ, ಕೆಳ ದರ್ಜೆಯ ಸಿಬ್ಬಂದಿಯಾಗಿದ್ದರಿಂದ ಆತ ರಿಕ್ಷಾದಲ್ಲಿ ಶವ ಸಾಗಿಸಿದ್ದಾನೆ ಎಂದು ತಿಳಿಸಿದ್ದಾರೆ. ಹಿರಿಯ ಅಧಿಕಾರಿಗಳು ಈ ಬಗ್ಗೆ […]

ಹಲ್ಲೆ, ಅಮಾಯಕರ ಹತ್ಯೆ ತಡೆಯಲು ನಿಗಾ ಇಡಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ಹಲ್ಲೆ, ಅಮಾಯಕರ ಹತ್ಯೆ ತಡೆಯಲು ನಿಗಾ ಇಡಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ಹೊಸದಿಲ್ಲಿ:  ದೇಶದಲ್ಲಿ ಗುಂಪುಗಳಿಂದ ಹಲ್ಲೆ ಮತ್ತು ಹತ್ಯೆಯ ಪ್ರಕರಣಗಳು ಹೆಚ್ಚುತ್ತಿದ್ದು, ವ್ಯವಸ್ಥೆಯ ಬಗ್ಗೆ ಅಮಾಯಕ ಜನತೆ ನಂಬಿಕೆ ಕಳೆದುಕೊಳ್ಳತೊಡಗಿದ್ದಾರೆ.  ನರಹತ್ಯೆ ಮತ್ತು ಹಿಂಸೆ ತಡೆಯಲು ನಿಗಾ ಇಡುವುದರ ಜತೆಗೆ ಜತೆಗೆ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಶನಿವಾರ ನಡೆದ  ನ್ಯಾಷನಲ್ ಹೆರಾಲ್ಡ್ ಜಾಲತಾಣ ಪುನಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜನಸಮೂಹದ ಅತಿ ಉನ್ಮಾದಕ್ಕೆ ತಡೆ ಹಾಕಬೇಕು. ಶೋಷಣೆ ನಿಲ್ಲಿಸಬೇಕು. ವ್ಯವಸ್ಥೆಯ ಬಗ್ಗೆ ನಂಬಿಕೆ ಬರುವಂತೆ, ಜನತೆಯ ವಿಶ್ವಾಸ […]

ಗುಂಪುಗಳಿಂದ ಹಿಂಸೆ,ಹತ್ಯೆ: ರಕ್ತ ಕುದಿಯುವಂತೆ ಮಾಡುತ್ತಿವೆ – ಪ್ರಿಯಾಂಕಾ ಗಾಂಧಿ

ಗುಂಪುಗಳಿಂದ ಹಿಂಸೆ,ಹತ್ಯೆ: ರಕ್ತ ಕುದಿಯುವಂತೆ ಮಾಡುತ್ತಿವೆ – ಪ್ರಿಯಾಂಕಾ ಗಾಂಧಿ

  ಹೊಸದಿಲ್ಲಿ:  ಶಾಂತಿ ಭದ್ರತೆ ಹೆಸರಿನಲ್ಲಿ ಕೆಲ ಗುಂಪುಗಳಿಂದ ರಾಷ್ಟ್ರದಲ್ಲಿ ನಡೆಯುತ್ತಿರುವ ಹಿಂಸಾಚಾರ, ಹಲ್ಲೆ, ಹತ್ಯೆ ಘಟನೆಗಳು ನನ್ನ ರಕ್ತವನ್ನು ಕುದಿಯುವಂತೆ ಮಾಡುತ್ತಿವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ದೆಹಲಿಯಲ್ಲಿ ಶನಿವಾರ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮರು ಲೋಕಾರ್ಪಣೆ ಸಮಾರಂಭ ನಡೆಯಿತು. ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಪಾಲ್ಗೊಂಡಿದ್ದರು.  ಈ ಕಾರ್ಯಕ್ರಮದ ಹೊರಗಡೆ ಮಾತನಾಡಿದ ಪ್ರಿಯಾಂಕಾ ಗಾಂಧಿ, ನಾನು ಯಾವಾಗ ಟಿವಿ, ಇಂಟರ್‌ನೆಟ್‌ಗಳಲ್ಲಿ ಶಾಂತಿ ಭದ್ರತೆ ಹೆಸರಿನಲ್ಲಿ ನಡೆಯುವ ಹಿಂಸಾಚಾರ, ಹಲ್ಲೆ, […]

ಜಾರ್ಖಂಡ್: ಗೋರಕ್ಷಣೆ ಹೆಸರಿನಲ್ಲಿ ನರಹತ್ಯೆ: ಬಿಜೆಪಿ ನಾಯಕ ಸೇರಿ ಇಬ್ಬರ ಬಂಧನ

ಜಾರ್ಖಂಡ್: ಗೋರಕ್ಷಣೆ ಹೆಸರಿನಲ್ಲಿ ನರಹತ್ಯೆ: ಬಿಜೆಪಿ ನಾಯಕ ಸೇರಿ ಇಬ್ಬರ ಬಂಧನ

ರಾಮಗಢ (ಜಾರ್ಖಂಡ್): ವಾಹನದಲ್ಲಿ  ಗೋಮಾಂಸ ಸಾಗಣೆ ಮಾಡುತ್ತಿದ್ದಾನೆಂದು ಶಂಕಿಸಿ ಜಾರ್ಖಂಡ್ ರಾಜ್ಯದ ರಾಮಗಢ ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ನಡೆದ ಅಲಿಮುದ್ದೀನ್ ಅಕಾ ಅಸ್ಗರ್ ಅಲಿ ಮುಸ್ಲಿಂ ವ್ಯಕ್ತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಬಿಜೆಪಿ ನಾಯಕನನ್ನು  ಪೊಲೀಸರು ಭಾನುವಾರ ಬಂಧಿಸಿದ್ದಾರೆ.    ನಿತ್ಯಾನಂದ್ ಮಹೋತೊ ಬಂಧಿತ ಬಿಜೆಪಿ ನಾಯಕ ಸೇರಿದಂತೆ ಇನ್ನು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಸಂತೋಷ್ ಸಿಂಗ್ ಎಂದು ಗುರುತಿಸಲಾಗಿದೆ.    ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯಾಗಿರುವ ಛೋಟು ರಾಣಾ ಎಂಬ ಆರೋಪಿ ರಾಮಗಢ್ […]

ಉತ್ತರ ಪ್ರದೇಶ: ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಮೇಲೆ ನಾಲ್ಕನೇ ಬಾರಿ ಆ್ಯಸಿಡ್ ದಾಳಿ

ಉತ್ತರ ಪ್ರದೇಶ: ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಮೇಲೆ ನಾಲ್ಕನೇ ಬಾರಿ ಆ್ಯಸಿಡ್ ದಾಳಿ

ಲಖನೌ:  ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಅಪರಾಧಗಳು ಮತ್ತು ಮಹಿಳೆಯರ ಮೇಲೆ ದಾಳಿ ತಡೆಯುವಲ್ಲಿ ಪೊಲೀಸ್ ಇಲಾಖೆ  ಮತ್ತೇ  ವಿಫಲವಾಗಿದ್ದು,  9 ವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆಯೊಬ್ಬರ ಮೇಲೆ ನಾಲ್ಕನೇ ಬಾರಿಗೆ ಆ್ಯಸಿಡ್ ದಾಳಿ ಮಾಡಲಾಗಿದೆ. ಉತ್ತರ ಪ್ರದೇಶದ ಲಖನೌನ ಅಲಿಗಂಜ್ ನಲ್ಲಿರುವ ತನ್ನ ಹಾಸ್ಟೆಲ್ ನಲ್ಲಿ ತಂಗಿದ್ದ ವೇಳೆಯಲ್ಲಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ. ಮಹಿಳೆ ನೀರು ತರಲು ಎಂದು ಹಾಸ್ಟೆಲ್ ಸಮೀಪದ ಬೋರ್ ವೆಲ್ ಬಂದಾಗ ಈ ದಾಳಿ ಮಾಡಲಾಗಿದೆ. […]

ದೇಶದ ದಕ್ಷತೆ ಮತ್ತು ಪಾವಿತ್ರ್ಯತೆಯನ್ನು ರಕ್ಷಿಸುವುದು ನಮ್ಮ ಗುರಿ: ಸೋನಿಯಾ ಗಾಂಧಿ

ದೇಶದ ದಕ್ಷತೆ ಮತ್ತು ಪಾವಿತ್ರ್ಯತೆಯನ್ನು ರಕ್ಷಿಸುವುದು ನಮ್ಮ ಗುರಿ: ಸೋನಿಯಾ ಗಾಂಧಿ

  ನ್ಯಾಷನಲ್ ಹೆರಾಲ್ಡ್ ಜಾಲತಾಣದ ಪುನರಾರಂಭ ಕಾರ್ಯಕ್ರಮದಲ್ಲಿ   ಹೊಸದಿಲ್ಲಿ: ಸರ್ವಾಧಿಕಾರದ ಬೆದರಿಕೆಗಳು ಹೆಚ್ಚುತ್ತಿರುವ ಮೂಲಕ ಭಾರತ ಗುರುತಿಸಿಕೊಳ್ಳುತ್ತಿದೆ.ಇಂತಹ ವಾತಾವರಣದ ಮಧ್ಯೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ  ದೇಶದ ಪೂರ್ವಜರಿಂದ ರೂಪಿಸಲ್ಪಟ್ಟ ವೈವಿಧ್ಯತೆ ಮತ್ತು ಸಹಬಾಳ್ವೆಗಳ ಕಲ್ಪನೆಗಳನ್ನು ಕಾಪಾಡಿಕೊಳ್ಳುವ ಗುರಿ ಹೊಂದಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.   ಅವರು ಇಂದು ಹೊಸದಿಲ್ಲಿಯಲ್ಲಿ ನ್ಯಾಷನಲ್ ಹೆರಾಲ್ಡ್ ಜಾಲತಾಣದ ಪುನರಾರಂಭ ಕಾರ್ಯಕ್ರಮದಲ್ಲಿ ಮಾತನಾಡಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.   ದುಷ್ಕೃತ್ಯದ ಪಡೆಗಳ ಅಸಹಿಷ್ಣುತೆ, ಹಿಂಸಾಚಾರಗಳಿಂದ […]

ಭಾರತವನ್ನು ಲೂಟಿ ಮಾಡಿದವರು ಈಗ ಮತ್ತೆ ಪಾವತಿಸಲಿದ್ದಾರೆ: ಪ್ರಧಾನಿ ಮೋದಿ

ಭಾರತವನ್ನು ಲೂಟಿ ಮಾಡಿದವರು ಈಗ ಮತ್ತೆ ಪಾವತಿಸಲಿದ್ದಾರೆ: ಪ್ರಧಾನಿ ಮೋದಿ

ಹೊಸದಿಲ್ಲಿ: ಇಂದಿನಿಂದ ದೇಶಾದ್ಯಂತ ಸೇವಾ ಮತ್ತು ಸರಕು ತೆರಿಗೆ (ಜಿಎಸ್‌ಟಿ) ಜಾರಿಯಾಗಿದೆ.  ಈ ಹಿನ್ನೆಲೆ ಪ್ರಧಾನಿ ಮೋದಿ ಜಿಎಸ್‌ಟಿ ಕುರಿತು ಭಾಷಣ ಮಾಡಿದ್ದಾರೆ. ಹೊಸದಿಲ್ಲಿಯ ಇಂದಿರಾ ಗಾಂಧಿ ಒಳಾಂಗಣ ಸ್ಟೇಡಿಯಂನಲ್ಲಿ ಐಸಿಎಐ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತನಾಡಿ, ಈ ಹಿಂದೆ ಭಾರತವನ್ನು ಲೂಟಿ ಮಾಡಿದವರು ಈಗ ಮತ್ತೆ ಪಾವತಿಸಲಿದ್ದಾರೆಂದು ಹೇಳಿದರು ಜಿಎಸ್‌ಟಿ ಜಾರಿಯಿಂದ ಅರ್ಥ ಜಗತ್ತಿನಲ್ಲಿ ಹೊಸ ಯುಗ ಆರಂಭವಾಗಿದೆ ಎಂದ ಮೋದಿ, ದೇಶಾದ್ಯಂತ ಸಾಮಾನ್ಯ ಜನರ ಮೇಲೆ ಗುಡ್‌ ಸಿಂಪಲ್‌ ತೆರಿಗೆ ಬೀಳಿಲಿದೆ ಎಂದರು. ಭಾರತದ […]

ರಾಷ್ಟ್ರಪತಿ ಚುನಾವಣೆ: ಕೆಪಿಸಿಸಿ ಕಚೇರಿಯಲ್ಲಿ ಮೀರಾ ಕುಮಾರ ಮತ ಯಾಚನೆ

ರಾಷ್ಟ್ರಪತಿ ಚುನಾವಣೆ: ಕೆಪಿಸಿಸಿ ಕಚೇರಿಯಲ್ಲಿ ಮೀರಾ ಕುಮಾರ ಮತ ಯಾಚನೆ

ದೇವೇಗೌಡರು ಬೆಂಬಲ ಸೂಚಿಸಿದ್ದು ತುಂಬಾ ಖುಷಿಯಾಗಿದೆ: ಮೀರಾ ಕುಮಾರ ಬೆಂಗಳೂರು: ರಾಷ್ಟ್ರಪತಿ ಚುನಾವಣೆಯಲ್ಲಿ ಆತ್ಮಸಾಕ್ಷಿ ಮತಗಳು ಬಿದ್ದರೆ ನನ್ನ ಗೆಲುವು ಖಚಿತ. ನಾನು ಹರಕೆಯ ಕುರಿಯೂ ಅಲ್ಲ, ಇದು ದಲಿತರಿಬ್ಬರ ಚುನಾವಣೆಯೂ ಅಲ್ಲ ಎಂದು ಯುಪಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ ಮೀರಾಕುಮಾರ್ ಹೇಳಿದ್ದಾರೆ. ರಾಷ್ಟ್ರಪತಿ ಚುನಾವಣೆ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿರುವ ಮೀರಾ ಕುಮಾರ,  ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಸದ ಮತ್ತು ಶಾಸಕರ ಬೆಂಬಲ ಕೋರಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತಾನು ಮತ್ತು ರಾಮನಾಥ್ ಕೋವಿಂದ್ ಸ್ಪರ್ಧಿಸುತ್ತಿದ್ದಂತೆ […]

ವಿಶ್ವಸಂಸ್ಥೆಯ ಶಾಂತಿಸ್ಥಾಪನೆ ನಿಧಿಗೆ ಭಾರತದಿಂದ 5ಲಕ್ಷ ಡಾಲರ್‌ ನೆರವು

ವಿಶ್ವಸಂಸ್ಥೆಯ ಶಾಂತಿಸ್ಥಾಪನೆ ನಿಧಿಗೆ ಭಾರತದಿಂದ 5ಲಕ್ಷ ಡಾಲರ್‌ ನೆರವು

ಹೊಸದಿಲ್ಲಿ: ಸಂಘರ್ಷ ಪೀಡಿತ ರಾಷ್ಟ್ರಗಳಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ  ವಿಶ್ವಸಂಸ್ಥೆಯ ಶಾಂತಿಸ್ಥಾಪನೆ ನಿಧಿಗೆ ಭಾರತ ಈಗ 5ಲಕ್ಷ ಅಮೆರಿಕಾ ಡಾಲರ್‌ ನೆರವು ನೀಡಿದೆ. ವಿಶ್ವಸಂಸ್ಥೆಯ ಶಾಂತಿಸ್ಥಾಪನೆ ನಿಧಿಗೆ ಭಾರತ 2005ರ ಡಿಸೆಂಬರ್‌‌ನಲ್ಲಿ ಖಾಯಂ ಸದಸ್ಯತ್ವ  ಪಡೆದಿದೆ. ಇಲ್ಲಿಯವರೆಗೆ ವಿಶ್ವಸಂಸ್ಥೆಗೆ 5 ಮಿಲಿಯನ್‌ ಅಮೆರಿಕಾ ಡಾಲರ್‌ ಕೊಡುಗೆ ನೀಡಿದೆ. ಶಾಂತಿಸ್ಥಾಪನೆ ನಿಧಿಯನ್ನು ಸಂಘರ್ಷ ಪೀಡಿತ ರಾಷ್ಟ್ರಗಳಲ್ಲಿ ಶಾಂತಿ ಸ್ಥಾಪಿಸಲು ಬಳಸಲಾಗುತ್ತದೆ. udayanadu2016

ಉತ್ತರ ಪ್ರದೇಶ: ಮೂರು ಪ್ರತ್ಯೇಕ ಗುಂಪು ಘರ್ಷಣೆ, 25 ಜನರಿಗೆ ಗಾಯ

ಉತ್ತರ ಪ್ರದೇಶ: ಮೂರು ಪ್ರತ್ಯೇಕ ಗುಂಪು ಘರ್ಷಣೆ, 25 ಜನರಿಗೆ ಗಾಯ

ಉತ್ತರ ಪ್ರದೇಶ:  ಮುಜಾರ್’ಫರ್ ನಗರದ ಹಾಗೂ ಶಾಮ್ಲಿ ಜಿಲ್ಲೆಗಳಲ್ಲಿ ಶುಕ್ರವಾರ   ಮೂರು ಪ್ರತ್ಯೇಕ ಗುಂಪು ಘರ್ಷಣೆ ನಡೆದಿದ್ದು,  ಘರ್ಷಣೆಯಲ್ಲಿ 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೆಹ್ತಾಬ್ ಮತ್ತು ಅಶು ಎಂಬ ಯುವಕರು ರಸ್ತೆಯಲ್ಲಿ ನಡೆದುಕೊಂಡು ಹೋಗತ್ತಿದ್ದ ಯುವತಿಯನ್ನು ಚುಡಾಯಿಸಿದ್ದಾರೆ. ಯುವತಿ ಸಂಬಂಧಿಕರಿಗ ತಿಳಿಸಿದ್ದು, ಮುಜಾಫರ್ ನಗರದ ಹಶೀಂಪುರ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಈ ವೇಳೆ 13 ಜನ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.  ಗ್ರಾಮದಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. […]