ಪಶ್ಚಿಮ ಬಂಗಾಳ: ಹಣ ಒಡವೆ ದೋಚಿ, ಒಂಟಿ ಮಹಿಳೆ ಅತ್ಯಾಚಾರ

ಪಶ್ಚಿಮ ಬಂಗಾಳ: ಹಣ ಒಡವೆ ದೋಚಿ, ಒಂಟಿ ಮಹಿಳೆ ಅತ್ಯಾಚಾರ

ಪಶ್ಚಿಮ ಬಂಗಾಳ: ಡೈಮಂಡ್‍ ಹಾರ್ಬರ್‍ದಲ್ಲಿ ಬುಧವಾರ ತಡರಾತ್ರಿ ಇಬ್ಬರು ದುಷ್ಕರ್ಮಿಗಳು  ಒಂಟಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಮನೆ ದರೋಡೆ ಮಾಡಿದ ಘಟನೆ ನಡೆದಿದೆ. ಮನೆಯಲ್ಲಿ ಮಹಿಳೆ ಒಬ್ಬಳೆ ಇರುವುದನ್ನು ಗಮನಿಸಿದ ಬಂದೂಕುದಾರಿಗಳಿಬ್ಬರು ಮನೆಗೆ ನುಗ್ಗಿ  ಹಣ, ಒಡವೆ ದೋಚಿ ಬಳಿಕ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ.  ಈ ವೇಳೆ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದು, ಗಸ್ತು ತಿರುಗುತ್ತಿದ್ದ ಪೊಲೀಸರು ಸ್ಥಳಕ್ಕೆ  ದೌಡಾಯಿಸಿ ಒಬ್ಬನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ, ಇನ್ನೊಬ್ಬ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಡೈಮಂಡ್‍ […]

ಮಧ್ಯಪ್ರದೇಶ: ಮಂದಸೌರ್ ಗೆ ಸಿಎಂ ಚೌಹಾನ ಭೇಟಿ, ಪರಿಹಾರ ಚೆಕ್ ವಿತರಣೆ

ಮಧ್ಯಪ್ರದೇಶ:  ಮಂದಸೌರ್ ಗೆ  ಸಿಎಂ ಚೌಹಾನ ಭೇಟಿ, ಪರಿಹಾರ  ಚೆಕ್ ವಿತರಣೆ

  ಮಂದಸೌರ:  ಮಂದಸೌರನಲ್ಲಿ ನಡೆದ ರೈತರ ಹೋರಾಟದಲ್ಲಿ ಪೋಲಿಸರು ನಡೆಸಿದ ಗೋಲಿಬಾರಕ್ಕೆ ಹತ್ಯೆಯಾದ ರೈತರ ಕುಟುಂಬಗಳಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್  ಬುಧವಾರದಂದು ಭೇಟಿ ನೀಡಿ ಸಾಂತ್ವನ ಹೇಳಿ ಒಂದು ಕೋಟಿ ಪರಿಹಾರ ಧನ ಚೆಕ್ ವಿತರಿಸಿದರು.  ಕಳೆದ ಜೂನ್ 1ರಿಂದ ಸಾಲ ಮನ್ನಾ ಹಾಗೂ ಬೆಳೆಗೆ ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಗೋಲಿ ನಡೆಸಿದ ಪರಿಣಾಮ ಆರು ರೈತರು ಮೃತಪಟ್ಟಿದ್ದರು. ಮೃತ ರೈತರ ಕುಟುಂಬಕ್ಕೆ ರಾಜ್ಯ ಸರ್ಕಾರ […]

ರಾಜಸ್ಥಾನ: ಬಿಜೆಪಿ ಶಾಸಕ ಮಗನ ಮೇಲೆ ಹಲ್ಲೆ, ಐದು ಪೊಲೀಸರು ಅಮಾನತು

ರಾಜಸ್ಥಾನ: ಬಿಜೆಪಿ ಶಾಸಕ ಮಗನ ಮೇಲೆ ಹಲ್ಲೆ, ಐದು ಪೊಲೀಸರು ಅಮಾನತು

  ಟೋಂಕ್:  ರಾಜಸ್ಥಾನದ ಟೋಂಕ್ ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಶಾಸಕ ಅಜಿತ್ ಸಿಂಗ್ ಅವರ ಪುತ್ರನನ್ನು ಹಲ್ಲೆ ಮಾಡಿದ ಪಿಎಸ್ಐ ಸೇರಿದಂತೆ ಐದು ಪೊಲೀಸರು ಅಮಾನತುಗೊಳಿಸಲಾಗಿದೆ. ದೇವಸ್ಥಾನಕ್ಕೆ ಸೇರಿದ ಅಂಗಡಿಗಳ ವಿವಾದಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸುವಂತೆ ಶಾಸಕ ಸಿಂಗ್ ಅವರ ಪುತ್ರ ವಿಶಾಲ್  ಪೊಲೀಸ್ ಠಾಣೆಗೆ ಬಂದಾಗ ಪೊಲೀಸರು ಹೊಡೆದಿದ್ದಾರೆ ಎಂದು ಆರೋಪದ ಮೇಲೆ ಅಮನಾತು ಮಾಡಲಾಗಿದೆ.  ವಿಶಾಲ್ ಮತ್ತು  ಸ್ಥಳೀಯ ನಗರ ಪುರಸಭೆಯ ನಾಯಕರನ್ನು ಪೊಲೀಸರು ಹೊಡೆದಿದ್ದಾರೆ ಮತ್ತು ಅವರ ಮೊಬೈಲ್ ಗಳನ್ನು […]

ಮಧ್ಯಪ್ರದೇಶ: ಇಂದು ಮಂದಸೌರಗೆ ಸಿಎಂ ಚೌಹಾನ್ ಭೇಟಿ , ಕರ್ಪ್ಯೂ ತೆರವು

ಮಧ್ಯಪ್ರದೇಶ: ಇಂದು ಮಂದಸೌರಗೆ ಸಿಎಂ ಚೌಹಾನ್ ಭೇಟಿ , ಕರ್ಪ್ಯೂ ತೆರವು

ಮಂದಸೌರ:   ಮಂದಸೌರನಲ್ಲಿ ನಡೆದ ರೈತರ ಹೋರಾಟದಲ್ಲಿ ಪೋಲಿಸರು ನಡೆಸಿದ ಗೋಲಿಬಾರಕ್ಕೆ ಹತ್ಯೆಯಾದ ರೈತರ ಕುಟುಂಬಗಳಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಬುಧವಾರದಂದು ಭೇಟಿ ನೀಡಲಿದ್ದಾರೆ. ಮುಖ್ಯಮಂತ್ರಿ ಭೇಟಿ  ಮುಂಚಿತವಾಗಿ  ಪೋಲಿಸ್ ಇಲಾಖೆ  ಹಿಂಸಾತ್ಮಕ ಪ್ರದೇಶದಿಂದ ಕರ್ಪ್ಯೂ ತೆರವುಗೊಳಿಸಿದೆ .  ಸಾಲ ಮನ್ನಾ ಬೇಡಿಕೆ ಮತ್ತು ಬೆಳೆಗಳಿಗೆ ಉತ್ತಮ ಬೆಲೆಗಾಗಿ ಹೋರಾಟ ನಡೆಸುತ್ತಿರುವ ಮಧ್ಯಪ್ರದೇಶದ ರೈತರಿಗೆ ಮಂದಸೌರ ಜಿಲ್ಲಾ ಹೋರಾಟದ ಕೇಂದ್ರಬಿಂದುವಾಗಿದೆ, ಹೋರಾಟದ ಸಂದರ್ಭದಲ್ಲಿ, ಆರು ರೈತರನ್ನು ಪೊಲೀಸರು  ಹತ್ಯೆ ಮಾಡಿದ್ದರಿಂದ,  ಸಿಎಂ ಶಿವರಾಜ ಸಿಂಗ ಚೌಹಾನ್ […]

ರೈತರ ಸಾಲ ಮನ್ನಾ: ಜುಲೈನಿಂದ ಜಾರಿಗೊಳಿಸದಿದ್ದರೆ ‘ದೊಡ್ಡ ಹೆಜ್ಜೆ’ ಇಡಬೇಕಾಗುತ್ತದೆ, ಸರ್ಕಾರಕ್ಕೆ ಠಾಕ್ರೆ ಎಚ್ಚರಿಕೆ

ರೈತರ ಸಾಲ ಮನ್ನಾ:  ಜುಲೈನಿಂದ ಜಾರಿಗೊಳಿಸದಿದ್ದರೆ ‘ದೊಡ್ಡ ಹೆಜ್ಜೆ’ ಇಡಬೇಕಾಗುತ್ತದೆ,  ಸರ್ಕಾರಕ್ಕೆ  ಠಾಕ್ರೆ  ಎಚ್ಚರಿಕೆ

ಮುಂಬೈ: ಮಹಾರಾಷ್ಟ್ರ ರಾಜ್ಯದ  ರೈತರ ಸಾಲಗಳನ್ನು ಮುಂದಿನ ಜೂಲೈ  ತಿಂಗಳಿನಿಂದ  ಪೂರ್ತಿಯಾಗಿ ಜಾರಿಗೆ ತರದಿದ್ದರೆ ಮಹಾರಾಷ್ಟ್ರದ ಬಿಜೆಪಿ ನೇತೃತ್ವದ  ಸರ್ಕಾರದ  ವಿರುದ್ಧ  ನಮ್ಮ ಪಕ್ಷ “ದೊಡ್ಡ ಹೆಜ್ಜೆಯನ್ನು” ತೆಗೆದುಕೊಳ್ಳಲಿದೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ  ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮಗಳಿಗೆ ಮಾತನಾಡಿದ ಠಾಕ್ರೆ, “ನಾನು ಜುಲೈ ತನಕ  ರೈತರ ಸಾಲ ಮನ್ನಾ ಜಾರಿಗೆ ತರುವ ಸಮಯವನ್ನು ನೀಡಿದ್ದೇನೆ ಒಂದು ವೇಳೆ ಅವರು ಅದನ್ನು ಮಾಡಲು ಸಾಧ್ಯವಾಗದಿದ್ದರೆ,  ಒಂದು ದೊಡ್ಡ ಹೆಜ್ಜೆಯನ್ನು ತೆಗೆದುಕೊಳ್ಳಲಾಗುವುದು” ಎಂದು ಹೇಳಿದರು. ನಮ್ಮ  ಬೇಡಿಕೆ […]

500 ರೂ. ಮುಖಬೆಲೆಯ ಹೊಸ ನೋಟು ಬಿಡುಗಡೆಗೊಳಿಸಿದ ಆರ್‌ಬಿಐ

500 ರೂ. ಮುಖಬೆಲೆಯ ಹೊಸ ನೋಟು ಬಿಡುಗಡೆಗೊಳಿಸಿದ ಆರ್‌ಬಿಐ

ಹೊಸದಿಲ್ಲಿ:   ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಮಂಗಳವಾರ 500 ರೂ. ಮುಖಬೆಲೆಯ ಹೊಸ ನೋಟು ಬಿಡುಗಡೆ ಮಾಡಿದೆ.  ಈಗ ಚಲಾವಣೆಯಲ್ಲಿರುವ  500 ರೂ. ನೋಟು ಎಂದಿನಂತೆ ಚಲಾವಣೆಯಲ್ಲಿ ಇರಲಿದೆ. ನೋಟುಗಳ ವಿನ್ಯಾಸ ಒಂದೇ ತೆರನಾಗಿದೆ ಎಂದು ಈಗಿರುವ 500 ರೂ. ನೋಟು ಎಂದಿನಂತೆಯೇ ಚಲಾವಣೆಯಲ್ಲಿರಲಿದೆ. ಹಳೆ ಹಾಗೂ ಹೊಸ ನೋಟುಗಳ ವಿನ್ಯಾಸ ಒಂದೇ ರೀತಿಯಾಗಿದೆ ಎಂದು   ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.   ಹೊಸ ನೋಟಿನಲ್ಲಿ ಆರ್‌ಬಿಐ ಗವರ್ನರ್ ಉರ್ಜಿತ್ ಪಟೇಲ್ ಸಹಿಯ ಜೊತೆಗೆ […]

ಮದುವೆ ನೋಂದಣಿ ಕಡ್ಡಾಯ ಮಾಡಲು ಉತ್ತರ ಪ್ರದೇಶ ಸರ್ಕಾರ ನಿರ್ಧಾರ

ಮದುವೆ ನೋಂದಣಿ ಕಡ್ಡಾಯ ಮಾಡಲು ಉತ್ತರ ಪ್ರದೇಶ ಸರ್ಕಾರ ನಿರ್ಧಾರ

ಲಕನೌ:  ಉತ್ತರಪ್ರದೇಶ ಸರಕಾರ  ಎಲ್ಲಾ ಸಮುದಾಯಗಳಿಗೆ ಮದುವೆ ನೋಂದಣಿ ಕಡ್ಡಾಯ ಮಾಡಲು ನಿರ್ಧರಿಸಿದೆ. ಈ ಯೋಜನೆಯನ್ನು ಮಹಿಳಾ ಕಲ್ಯಾಣ ಇಲಾಖೆಯಿಂದ ರಚಿಸಲಾಗುತ್ತಿದ್ದು,  ತಮ್ಮ ಮದುವೆಯನ್ನು ನೋಂದಾಯಿಸಿಕೊಳ್ಳದವರು, ಸರ್ಕಾರಿ ಯೋಜನೆಗಳ ಪ್ರಯೋಜನಗಳಿಂದ ವಂಚಿತರಾಗಿರುತ್ತಾರೆ.  ಮತ್ತು  ಮುಂದಿನ ರಾಜ್ಯ ವಿಧಾನಸಭೆಯ ಅಧಿವೇಶನದಲ್ಲಿ ಜಾರಿ ತರಲು ಸಾಧ್ಯವಿದೆ ಎಂದು ರಾಜ್ಯದ ಅಧಿಕೃತ  ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರವು  ಎಲ್ಲ ಸಮುದಾಯಗಳನ್ನು ಈ ಪ್ರಸ್ತಾವನೆಯಲ್ಲಿ  ಸೇರಿಕೊಳ್ಳಲು ತೀರ್ಮಾನಿಸಿದೆ. ಸುಪ್ರೀಂ ಕೋರ್ಟ್ ಆದೇಶದ […]

ಮೇ 9 ರಿಂದ ನಾಪತ್ತೆಯಾಗಿದ್ದ ನ್ಯಾಯಮೂರ್ತಿ ಕರ್ಣನ್ ಬಂಧನ

ಮೇ 9 ರಿಂದ ನಾಪತ್ತೆಯಾಗಿದ್ದ ನ್ಯಾಯಮೂರ್ತಿ ಕರ್ಣನ್ ಬಂಧನ

ಕೋಲ್ಕತಾ : ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ 6 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿರುವ ಕೋಲ್ಕತಾ ಹೈಕೋರ್ಟ್‌ನ ನ್ಯಾಯಾಧೀಶ ಸಿ.ಎಸ್‌.ಕರ್ಣನ್‌ ಅವರನ್ನು ಬಂಧಿಸುವಲ್ಲಿ ಪಶ್ಚಿಮ ಬಂಗಾಳ ಪೋಲಿಸರು ಯಶಸ್ವಿಯಾಗಿದ್ದಾರೆ. ಮೇ 9 ರಿಂದ ನಾಪತ್ತೆಯಾಗಿದ್ದ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿದ್ದಾರೆ. ಕೋಲ್ಕತ್ತ ಹೈಕೋರ್ಟ್ ನ್ಯಾಯಮೂರ್ತಿ ಸಿ ಎಸ್ ಕರ್ಣನ್ ಅವರಿಗೆ ಸುಪ್ರೀಂ ಕೋರ್ಟ್ 6 ತಿಂಗಳು ಜೈಲು ಶಿಕ್ಷೆ ವಿಧಿಸಿತ್ತು. ನ್ಯಾಯಮೂರ್ತಿ ಸಿ.ಎಸ್.ಕರ್ಣನ್‌‌ ಸುಪ್ರೀಂಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿಗಳಿಗೇ ಸೆಡ್ಡು ಹೊಡೆದಿದ್ದರು. ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಜೆ.ಎಸ್.ಖೇಹರ್ […]

ಗೋ ಹತ್ಯೆ ನಿಷೇಧ: ಮೇಘಾಲಯ ವಿಧಾನಸಭೆ ಪ್ರಸ್ತಾವನೆ ಬೆಂಬಲಿಸಿದ ಕಾಂಗ್ರೆಸ್

ಗೋ ಹತ್ಯೆ ನಿಷೇಧ: ಮೇಘಾಲಯ ವಿಧಾನಸಭೆ ಪ್ರಸ್ತಾವನೆ ಬೆಂಬಲಿಸಿದ ಕಾಂಗ್ರೆಸ್

ಹೊಸದಿಲ್ಲಿ:  ಜಾನುವಾರುಗಳ  ವಧೆ,  ಮಾರಾಟ ನಿಷೇಧಿಸಿರುವ  ಕೇಂದ್ರದ ನಿರ್ಧಾರದ ವಿರೋಧದಲ್ಲಿ  ಮೇಘಾಲಯ ವಿಧಾನಸಭೆ ಮಂಡಿಸಿರುವ ಪ್ರಸ್ತಾವನೆಯನ್ನು ಬೆಂಬಲಿಸಿದ ಕಾಂಗ್ರೆಸ್  ಜನರ ಆಹಾರದ ಹವ್ಯಾಸವನ್ನು ಸರ್ಕಾರ ಪ್ರಭಾವಿಸಬಾರದು ಮತ್ತು ಜನರ ಸ್ವಾಯತ್ತತೆಯನ್ನು ಗೌರವಿಸಬೇಕು ಎಂದು ಕಾಂಗ್ರೆಸ್ ಹೇಳಿದೆ. “ಈಶಾನ್ಯ ರಾಜ್ಯಗಳೆಲ್ಲವೂ ಆರಂಭದಿಂದಲೂ ಕೇಂದ್ರ ಸರ್ಕಾರ ಜನರು ತಿನ್ನುವ ವಸ್ತುಗಳ ಮೇಲೆ ನಿಷೇಧ ಮಾಡಬಾರದೆಂದು ಪ್ರಸ್ತಾಪಿಸುತ್ತಿವೆ, ಏನು ತಿನ್ನಬಾರದು ಮತ್ತು ಏನು ತಿನ್ನಬೇಕೆಂಬುದು ಕೇಂದ್ರ ಸರ್ಕಾರದ ಕಾರ್ಯಸೂಚಿ ಅಲ್ಲ.ಅವರು ಅದನ್ನು ರಾಜ್ಯ ಸರ್ಕಾರಕ್ಕೆ ಬಿಡಬೇಕು. ಜನರ ಆಹಾರ ಪದ್ಧತಿಯಲ್ಲಿ  ಸರ್ಕಾರವು ನೀತಿ […]

ರಾಜನಾಥ ಸಿಂಗ್ ಭೇಟಿ ಸಮಯದಲ್ಲಿ ಮಿಜೋರಾಂನಲ್ಲಿ ಬೀಫ್ ಪಾರ್ಟಿ

ರಾಜನಾಥ ಸಿಂಗ್ ಭೇಟಿ ಸಮಯದಲ್ಲಿ ಮಿಜೋರಾಂನಲ್ಲಿ ಬೀಫ್ ಪಾರ್ಟಿ

ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ಭದ್ರತೆ ಕುರಿತಂತೆ  ಮಿಜೋರಾಂಗೆ ಭೇಟಿ  ಐಝಾಲ್: ಕೇಂದ್ರ ಸರ್ಕಾರದ  ವಧೆಗಾಗಿ  ಮಾರುಕಟ್ಟೆಯಲ್ಲಿ ಜಾನುವಾರು ಮಾರಾಟ ನಿಷೇಧ ಕಾಯ್ದೆಗೆ ಮಿಜೋರಾಂನಲ್ಲಿ ತೀವ್ರ ಸ್ವರೂಪದ ಆಕ್ರೋಶ ವ್ಯಕ್ತವಾಗಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭೇಟಿ ನೀಡಿದ ಸಮಯದಲ್ಲಿ ಬೀಫ್ ಪಾರ್ಟಿ ನಡೆಸಿ ಕೇಂದ್ರದ ವಿರುದ್ಧ ಪ್ರತಿಭಟನೆ ಸೋಮವಾರ ನಡೆದಿದೆ .   ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ಭದ್ರತೆ ಕುರಿತಂತೆ ಸೇನೆಯ ಅಧಿಕಾರಿಗಳೊಂದಿಗೆ  ಚರ್ಚೆ ನಡೆಸಲು ಮಿಜೋರಾಂನಲ್ಲಿರುವ ರಾಜಭವನಕ್ಕೆ ಭೇಟಿ ನೀಡಿದ್ದ  ವೇಳೆ ಸಮೀಪದಲ್ಲಿರುವ ವನಪಾ ಹಾಲದಲ್ಲಿ ಕೂಡಿದ […]