ಮೊಬೈಲ್ ಮಾತಿನ ಜಗಳ: ಯೋಧನ ಗುಂಡಿಗೆ ಸೇನಾ ಮೇಜರ್ ಬಲಿ

ಮೊಬೈಲ್ ಮಾತಿನ ಜಗಳ: ಯೋಧನ ಗುಂಡಿಗೆ ಸೇನಾ ಮೇಜರ್ ಬಲಿ

ಶ್ರೀನಗರ: ಮೊಬೈಲ್ ಬಳಕೆ ವಿಚಾರದಲ್ಲಿ ಪದೇ ಪದೆ ಆಕ್ಷೇಪ ಎತ್ತಿದ ಸೇನಾ ಮೇಜರ್‌ ನನ್ನು ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಯೋಧನೋರ್ವ ಗುಂಡಿಟ್ಟು ಕೊಲೆ ಮಾಡಿದ್ದಾನೆ.  ಕೊಲೆಯಾದವರು 8ನೇ ರಾಷ್ಟ್ರೀಯ ರೈಫಲ್ಸ್‌‌ನಲ್ಲಿ ಮೇಜರ್ ಆಗಿದ್ದ ಶೇಖರ್ ಥಾಪ.   ಉರಿ ಕ್ಷೇತ್ರದಲ್ಲಿನ ಯೋಧ  ಗುಂಡಿಟ್ಟು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕರ್ತವ್ಯದಲ್ಲಿದ್ದಾಗ ಈ ಯೋಧ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಎನ್ನಲಾಗಿದ್ದು, ಮೇಜರ್ ಶೇಖರ್ ಯೋಧನಿಗೆ ಮೊಬೈಲ್ ಬಳಸದಂತೆ ಎಚ್ಚರಿಸಿದ್ದರು. ಇದೇ ವಿಷಯದಲ್ಲಿ ಇಬ್ಬರ ನಡುವೆ ವಾದ ನಡೆದಿತ್ತು. ಕೋಪಗೊಂಡ ಯೋಧ ಮೇಜರ್‌ಗೆ […]

ದಲಿತರು, ಬಡವರ ಮೇಲೆ ದೌರ್ಜನ್ಯ ಖಂಡಿಸಿ ರಾಜ್ಯ ಸಭೆಯಲ್ಲಿ ಮಾಯಾವತಿ ಸಭಾತ್ಯಾಗ

ದಲಿತರು, ಬಡವರ ಮೇಲೆ ದೌರ್ಜನ್ಯ ಖಂಡಿಸಿ ರಾಜ್ಯ ಸಭೆಯಲ್ಲಿ ಮಾಯಾವತಿ ಸಭಾತ್ಯಾಗ

ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ನೀಡಲು ಬಿಎಸ್ಪಿ ನಾಯಕಿ ಮಾಯಾವತಿ ನಿರ್ಧಾರ ಹೊಸದಿಲ್ಲಿ: ಕೇಂದ್ರದ ಬಿಜೆಪಿ ಸರ್ಕಾರದ ಆಡಳಿತದಲ್ಲಿ ದಲಿತರಿಗೆ ರಕ್ಷಣೆ ಇಲ್ಲವಾಗಿದೆ, ರಾಜ್ಯಸಭೆಯಲ್ಲಿ ತಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಆರೋಪಿಸಿ ಬಿಎಸ್ಪಿ ನಾಯಕಿ ಮಾಯಾವತಿ ಮಂಗಳವಾರ ರಾಜ್ಯ ಸಭೆಯಲ್ಲಿ ಸಭಾತ್ಯಾಗ ಮಾಡಿದರಲ್ಲದೇ, ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದರು. ರಾಜ್ಯಸಭೆಯಲ್ಲಿ  ದಲಿತರು, ಬಡವರು, ಶೋಷಿತರು ದೇಶದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿದ ಮಾಯಾವತಿ, ದೇಶದಲ್ಲಿ ದಲಿತರು, ಬಡವರು, ರೈತರ ದನಿ ಅಡಗಿಸುವ ಹುನ್ನಾರ ನಡೆದಿದೆ. ಗೋರಕ್ಷಣೆ ಹೆಸರಿನಲ್ಲಿ […]

ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಗಾಂಧಿಗೆ ಬೆಂಬಲ: ಒಡಿಶಾ ಸಿಎಂ ನವೀನ್ ಪಟ್ನಾಯಕ

ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಗಾಂಧಿಗೆ ಬೆಂಬಲ:  ಒಡಿಶಾ ಸಿಎಂ ನವೀನ್ ಪಟ್ನಾಯಕ

ಹೊಸದಿಲ್ಲಿ: ವಿಪಕ್ಷ ಉಪರಾಷ್ಟ್ರಪತಿ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿಗೆ ಬಿಜು ಜನತಾ ದಳ ಬೆಂಬಲಿಸಲಿದೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ ಪಟ್ನಾಯಕ ಹೇಳಿದ್ದಾರೆ.  ಗಾಂಧಿ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಸೇರಿ 18 ವಿಪಕ್ಷಗಳು ಆಯ್ಕೆ ಮಾಡಿದ್ದಾರೆ.  ಗಾಂಧಿ ಅವರ ವಿರುದ್ಧ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ವೆಂಕಯ್ಯ ನಾಯ್ಡು ಅವರನ್ನು ಕಣಕ್ಕೆ ಇಳಿಸಿದೆ.  ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ.  ಅಗಸ್ಟ್ 5 ರಂದು ಉಪರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದೆ.  https://twitter.com/ANI_news/status/887195832075796480   -ANI   […]

ಉಪರಾಷ್ಟ್ರಪತಿ ಚುನಾವಣೆ: ನಾಮಪತ್ರ ಸಲ್ಲಿಸಿದ ವೆಂಕಯ್ಯ ನಾಯ್ಡು

ಉಪರಾಷ್ಟ್ರಪತಿ ಚುನಾವಣೆ:  ನಾಮಪತ್ರ ಸಲ್ಲಿಸಿದ ವೆಂಕಯ್ಯ ನಾಯ್ಡು

ಹೊಸದಿಲ್ಲಿ: ಎನ್ ಡಿಎ  ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾದ ವೆಂಕಯ್ಯ ನಾಯ್ಡು ಅವರು  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ   ಮಂಗಳವಾರ ಬೆಳಗ್ಗೆ 11.30 ಗಂಟೆಗೆ ಸಂಸತ್ ಭವನದಲ್ಲಿ  ನಾಮಪತ್ರ ಸಲ್ಲಿಸಿದರು. ಸೋಮವಾರ ನಡೆದ  ಎನ್ ಡಿಎ ಮೈತ್ರಿಕೂಟದ ಸಭೆಯಲ್ಲಿ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ವೆಂಕಯ್ಯ ನಾಯ್ಡು ಅವರನ್ನು ಆಯ್ಕೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ ಷಾ, ಹಿರಿಯ ನಾಯಕರಾದ  ಎಲ್. ಕೆ. ಅಡ್ವಾಣಿ, ಅಶೋಕ ಸಿಂಘಲ ಮತ್ತು ಇತರರು ಇದ್ದರು.  ಬಿಜೆಪಿಯಿಂದ ರಾಜ್ಯ ಮತ್ತು […]

ಬಾಲಗಂಗಾಧರ ತಿಲಕ್ ಅವರ ಮರಿಮೊಮ್ಮಗ ರೋಹಿತ ತಿಲಕ್ ವಿರುದ್ಧ ಅತ್ಯಾಚಾರ ಪ್ರಕರಣ!

ಬಾಲಗಂಗಾಧರ ತಿಲಕ್ ಅವರ ಮರಿಮೊಮ್ಮಗ  ರೋಹಿತ ತಿಲಕ್ ವಿರುದ್ಧ ಅತ್ಯಾಚಾರ ಪ್ರಕರಣ!

ಪುಣೆ:  ಅತ್ಯಾಚಾರ ಹಾಗೂ ಅನೈಸರ್ಗಿಕ ಸಂಭೋಗಕ್ಕೆ ಒತ್ತಾಯಿಸಿದ ಆರೋಪದ ಮೇಲೆ ಕಾಂಗ್ರೆಸ್‌ ಮುಖಂಡ ರೋಹಿತ್‌ ತಿಲಕ್‌ ವಿರುದ್ಧ  ಮಹಾರಾಷ್ಟ್ರದ ಪುಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕ ಬಾಲಗಂಗಾಧರ್‌ ತಿಲಕ್‌ ಅವರ ಮರಿ ಮೊಮ್ಮಗ ಆಗಿರುವ ರೋಹಿತ್‌ ತಿಲಕ್‌ 2014ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ  ಸೋತಿದ್ದರು. ಕಾಂಗ್ರೆಸ್‌ ಮುಖಂಡ ರೋಹಿತ್‌ ತಿಲಕ್‌ ಇವರು ಮಾಜಿ ಸಂಸದ ದಿ.ಜಯಂತ್ರೋ ತಿಲಕ್‌ ಅವರ ಮಗ. 2 ವರ್ಷಗಳಿಂದ ಪರಿಚಿತರಾಗಿರುವ 40 ವರ್ಷದ ಮಹಿಳೆಯೇ  ರೋಹಿತ್ […]

ಜವಳಿ ಸಚಿವೆ ಸ್ಮೃತಿ ಇರಾನಿಗೆ ಮಾಹಿತಿ ಮತ್ತು ಪ್ರಸಾರ ಖಾತೆ ಹೆಚ್ಚುವರಿ ಹೊಣೆ, ತೊಮರಗೆ ನಗರಾಭಿವೃಧ್ದಿ ಜವಾಬ್ದಾರಿ

ಜವಳಿ ಸಚಿವೆ ಸ್ಮೃತಿ ಇರಾನಿಗೆ ಮಾಹಿತಿ ಮತ್ತು ಪ್ರಸಾರ ಖಾತೆ ಹೆಚ್ಚುವರಿ ಹೊಣೆ, ತೊಮರಗೆ ನಗರಾಭಿವೃಧ್ದಿ ಜವಾಬ್ದಾರಿ

ವೆಂಕಯ್ಯ ನಾಯ್ಡು ರಾಜೀನಾಮೆ ನಂತರ ತೆರವಾಗಿದ್ದ ಖಾತೆ ಹೊಸದಿಲ್ಲಿ: ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿಗೆ ಮಾಹಿತಿ ಮತ್ತು ಪ್ರಸಾರ ಖಾತೆಯನ್ನು ಹೆಚ್ಚುವರಿ ಹೊರೆಯನ್ನಾಗಿ ನೀಡಲು ಕೇಂದ್ರ ಸರ್ಕಾರ ಮಂಗಳವಾರ ಘೊಷಿಸಿದೆ. ಸರ್ಕಾರ ನಗರಾಭಿವೃದ್ಧಿ ಸಚಿವರನ್ನಾಗಿ ನರೇಂದ್ರ ಸಿಂಗ್ ತೋಮರ ಅವರನ್ನು ನೇಮಕಮಾಡಿದೆ. ಸೋಮವಾರ ನಡೆದ  ಎನ್ ಡಿಎ ಮೈತ್ರಿಕೂಟದ ಸಭೆಯಲ್ಲಿ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಈ ಎರಡು ಖಾತೆಗಳನ್ನು ನಿರ್ಹಿಸುತ್ತಿದ್ದ  ವೆಂಕಯ್ಯ ನಾಯ್ಡು ಅವರನ್ನು ಆಯ್ಕೆ ಮಾಡಲಾಗಿತ್ತು. ಆದ್ದರಿಂದ ಸಚಿವ ಸ್ಥಾನಕ್ಕೆ ನಾಯ್ಡು ಅವರು ಇಂದು […]

ಡಿ.ರೂಪಾ ವರ್ಗಾವಣೆ, ರಾಜ್ಯ ಸರ್ಕಾರದ ನೀತಿ ಖಂಡಿಸಿ ಹೊಸದಿಲ್ಲಿಯಲ್ಲಿ ಬಿಜೆಪಿ ಪ್ರತಿಭಟನೆ

ಡಿ.ರೂಪಾ ವರ್ಗಾವಣೆ, ರಾಜ್ಯ ಸರ್ಕಾರದ ನೀತಿ ಖಂಡಿಸಿ ಹೊಸದಿಲ್ಲಿಯಲ್ಲಿ ಬಿಜೆಪಿ ಪ್ರತಿಭಟನೆ

ಹೊಸದಿಲ್ಲಿ: ಬೆಂಗಳೂರು ಪರಪ್ಪನ  ಅಗ್ರಹಾರ ಜೈಲಿನ ಭ್ರಷ್ಟಾಚಾರ ಬಯಲಿಗೆ ತಂದಿರುವ ಡಿಐಜಿ ಡಿ.ರೂಪಾ ವರ್ಗಾವಣೆ ಖಂಡಿಸಿ ಸಂಸತ್ ಭವನದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ರಾಜ್ಯದ ಬಿಜೆಪಿ ಸಂಸದರು ಮಂಗಳವಾರ ಬೆಳಗ್ಗೆ  ಸಾಂಕೇತಿಕ ಧರಣಿ ನಡೆಸಿ ಪ್ರತಿಭಟಿಸಿದರು.  ರಾಜ್ಯ ಸರ್ಕಾರ ಡಿಐಜಿ  ಡಿ.ರೂಪಾ ಅವರನ್ನು  ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ಈ ನಡೆಯಿಂದ ಮುಕ್ತ, ಪಾರದರ್ಶಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನಿರಾಕರಿಸಿದಂತೆ ಆಗಿದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ […]

ಸಚಿವ ಸ್ಥಾನಕ್ಕೆ ವೆಂಕಯ್ಯ ನಾಯ್ಡು ರಾಜೀನಾಮೆ

ಸಚಿವ ಸ್ಥಾನಕ್ಕೆ ವೆಂಕಯ್ಯ ನಾಯ್ಡು ರಾಜೀನಾಮೆ

  ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕ್ಷಣ ಗಣನೆ ಹೊಸದಿಲ್ಲಿ: ಎನ್ ಡಿಎ  ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾದ ವೆಂಕಯ್ಯ ನಾಯ್ಡು ಅವರು  ಕೇಂದ್ರ  ನಗರಾಭಿವೃದ್ಧಿ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ.  ಮಂಗಳವಾರ ಅವರು ನಾಮಪತ್ರ ಸಲ್ಲಿಸಿದ್ದಾರೆ. ಸೋಮವಾರ ನಡೆದ  ಎನ್ ಡಿಎ ಮೈತ್ರಿಕೂಟದ ಸಭೆಯಲ್ಲಿ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ವೆಂಕಯ್ಯ ನಾಯ್ಡು ಅವರನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿಯಿಂದ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ  ವಿವಿಧ ಸಾಂಸ್ಥಿಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ […]

ರದ್ದಾದ ನೋಟುಗಳ ಡೆಪಾಸಿಟ್‌ ಗೆ ಅವಕಾಶ ಇಲ್ಲ: ಸುಪ್ರೀಂ ಕೋರ್ಟ್ ಗೆ ಸರ್ಕಾರ ಸ್ಪಷ್ಟನೆ

ರದ್ದಾದ ನೋಟುಗಳ ಡೆಪಾಸಿಟ್‌ ಗೆ ಅವಕಾಶ ಇಲ್ಲ: ಸುಪ್ರೀಂ ಕೋರ್ಟ್ ಗೆ ಸರ್ಕಾರ ಸ್ಪಷ್ಟನೆ

ಹೊಸದಿಲ್ಲಿ: ರದ್ದಾದ ನೋಟುಗಳನ್ನು ಡೆಪಾಸಿಟ್‌ ಮಾಡಲು ಅವಕಾಶ ಸಾಧ್ಯವಿಲ್ಲ. ಕಪ್ಪುಹಣ ನಿರ್ಮೂಲನೆ  ಉದ್ದೇಶಕ್ಕೆ ಇದರಿಂದ ಹಿನ್ನಡೆಯಾಗಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸೋಮವಾರ ಸ್ಪಷ್ಟನೆ ನೀಡಿದೆ.   ಪ್ರಾಮಾಣಿಕರಿಗೆ ಹಳೆಯ ನೋಟುಗಳನ್ನು ಡೆಪಾಸಿಟ್ ಮಾಡಲು ಮತ್ತೊಂದು ಅವಕಾಶ ನೀಡಬಹುದೇ ಎಂದು ಸರ್ಕಾರಕ್ಕೆ  ಸುಪ್ರೀಂಕೋರ್ಟ್ ಕೇಳಿತ್ತು. ಇದಕ್ಕೆ ಕೇಂದ್ರ ಸರ್ಕಾರ ಉತ್ತರ ನೀಡಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಜುಲೈ 5 ರಂದು ಸುಪ್ರೀಂಕೋರ್ಟ್ ಸೂಚಿಸಿತ್ತು. ಕೇಂದ್ರ ಸರ್ಕಾರ ಸುಪ್ರೀಂಗೆ ಉತ್ತರ ನೀಡಿದೆ. […]

ಉಪರಾಷ್ಟ್ರಪತಿ ಚುನಾವಣೆಯ ಎನ್ ಡಿಎ ಅಭ್ಯರ್ಥಿಯಾಗಿ ವೆಂಕಯ್ಯ ನಾಯ್ಡು ಕಣಕ್ಕೆ

ಉಪರಾಷ್ಟ್ರಪತಿ ಚುನಾವಣೆಯ ಎನ್ ಡಿಎ ಅಭ್ಯರ್ಥಿಯಾಗಿ ವೆಂಕಯ್ಯ ನಾಯ್ಡು ಕಣಕ್ಕೆ

ಹೊಸದಿಲ್ಲಿ: ಉಪರಾಷ್ಟ್ರಪತಿ ಚುನಾವಣೆಯ ಎನ್ ಡಿಎ ಅಭ್ಯರ್ಥಿಯಾಗಿ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರನ್ನು ಕಣಕ್ಕಿಳಿಸಲು ಹೊಸದಿಲ್ಲಿಯಲ್ಲಿ ಸೋಮವಾರ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ. ವೆಂಕಯ್ಯ ನಾಯ್ಡು ಅವರು ಮಂಗಳವಾರ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.  ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸೋಮವಾರ ಸಂಜೆ ನಡೆದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಂಡು ಅಧಿಕೃತವಾಗಿ ಘೋಷಿಸಲಾಯಿತು.  ಎನ್ ಡಿಎ ಮೈತ್ರಿಕೂಟದ ಮುಖಂಡರೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ […]