ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನ ಜಿಎಸ್ ಟಿಗೆ ಮೋದಿ ಹೊಸ ವ್ಯಾಖ್ಯಾನ

ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನ ಜಿಎಸ್ ಟಿಗೆ ಮೋದಿ ಹೊಸ ವ್ಯಾಖ್ಯಾನ

ಹೊಸದಿಲ್ಲಿ:ರಾಷ್ಟ್ರದ ಹಿತಾಸಕ್ತಿ ದೃಷ್ಟಿಯಲ್ಲಿಟ್ಟುಕೊಂಡು ಎಲ್ಲ ಪಕ್ಷಗಳ ಜತೆ ಚರ್ಚಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಒಗ್ಗೂಡಿ ಬಲವಾಗಿ ಬೆಳೆಯೋಣ (ಗ್ರೋವಿಂಗ್ ಸ್ಟ್ರಾಂಗರ್ ಟುಗೇದರ್ ) ಆಧಾರದ ಮೇಲೆ ಜಿಎಸ್ ಟಿ ಜಾರಿಗೊಳಿಸಲಾಗಿದ್ದು, ಒಗ್ಗಟ್ಟಾಗಿ ಬೆಳೆಯುವುದು ನಮ್ಮ ಉದ್ದೇಶ ಎಂದು ಪ್ರಧಾನಿ ಮೋದಿ ಹೇಳಿದರು. ಸಂಸತ್ತಿನ ಮುಂಗಾರು ಅಧಿವೇಶನ ಕಲಾಪ ಆರಂಭವಾಗುವ ಮುನ್ನ ಸುದ್ದಿಗಾರರೊಂದಿಗೆ ಮೋದಿ ಮಾತನಾಡಿದರು. ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಿದೆ. ದೇಶದ ಜನರ ಹಿತವನ್ನು ಉದ್ದೇಶವಾಗಿಟ್ಟುಕೊಂಡು ಸಂಸದರು, ಸಚಿವರು ಅಧಿವೇಶನ ಕಲಾಪದಲ್ಲಿ ಭಾಗವಹಿಸುತ್ತಾರೆ ಎಂಬ ವಿಶ್ವಾಸ […]

ಆಸ್ತಿ ವಿವಾದ: ಸೋದರನಿಂದ ಮನೆಗೆ ಬೆಂಕಿ, ಒಂದೇ ಕುಟುಂಬದ ನಾಲ್ವರ ಸಜೀವ ದಹನ

ಆಸ್ತಿ ವಿವಾದ: ಸೋದರನಿಂದ ಮನೆಗೆ ಬೆಂಕಿ, ಒಂದೇ ಕುಟುಂಬದ ನಾಲ್ವರ ಸಜೀವ ದಹನ

ಬಿಹಾರ: ಆಸ್ತಿ ಹಂಚಿಕೆ ವಿವಾದದ ಹಿನ್ನೆಲೆ ಸೋದರನ ಮನೆಗೆ ಬೆಂಕಿ ಇಟ್ಟ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ಘಟನೆ ಕಟಿಯಾರ್ ನಲ್ಲಿ ರವಿವಾರ ರಾತ್ರಿ ನಡೆದಿದೆ. ಕೇದಾರ್‍ನಾಥ್(45), ಆತನ ಪತ್ನಿ ಪ್ರತಿಮಾದೇವಿ (40), ಮಕ್ಕಳಾದ ಸೋನುಕುಮಾರಿ(18) ಹಾಗೂ ಡಿಂಪಲ್‍ಕುಮಾರಿ  ಮೃತ ದುರ್ದೈವಿಗಳು.  ಕೇದಾರ್‍ನಾಥ್ ಹಾಗೂ ಆತನ ಸಹೋದರರ ನಡುವೆ ಆಸ್ತಿ ಹಂಚಿಕೆ ವಿಚಾರವಾಗಿ ಕಲಹ ಉಂಟಾಗಿತ್ತು. ರಾತ್ರಿ ಕೇದಾರ್‍ನಾಥ್ ಕುಟುಂಬದವರು ಮಲಗಿದ್ದಾಗ ಆತನ ಸಹೋದರ ಮನೆಗೆ ಬೀಗ ಹಾಕಿ ಬೆಂಕಿ ಹಚ್ಚಿದ್ದಾನೆ. ಘಟನಾ ಸ್ಥಳಕ್ಕೆ […]

ಮೀರಾಕುಮಾರ ಪರ ಮತ ಚಲಾವಣೆ: ಎನ್ ಸಿಪಿ ನಾಯಕ ಪ್ರಫುಲ್ ಪಟೇಲ್ ಸ್ಪಷ್ಟನೆ

ಮೀರಾಕುಮಾರ ಪರ ಮತ ಚಲಾವಣೆ: ಎನ್ ಸಿಪಿ ನಾಯಕ ಪ್ರಫುಲ್ ಪಟೇಲ್ ಸ್ಪಷ್ಟನೆ

ಎನ್ ಸಿಪಿ ಕೋವಿಂದ್ ಗೆ ಬೆಂಬಲ ವಿಸ್ತರಿಸಿದ ವರದಿಯನ್ನು ತಳ್ಳಿ ಹಾಕಿದ ಪಟೇಲ ಮುಂಬೈ:  ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್ ಸಿಪಿ)  ಎನ್ ಡಿಎ ರಾಷ್ಟ್ರಪತಿ  ಅಭ್ಯರ್ಥಿ ರಾಮನಾಥ ಕೋವಿಂದ್ ಅವರ ಪರವಾಗಿ ಮತ ಚಲಾಯಿಸಿದ  ವರದಿಗಳನ್ನು ಎನ್ ಸಿಪಿ  ನಾಯಕ ಪ್ರಫುಲ್ ಪಟೇಲ ತಳ್ಳಿಹಾಕಿದ್ದಾರೆ. ವಿಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ ಅವರಿಗೆ  ಬೆಂಬಲ ನೀಡಿರುವುದಾಗಿ ಎನ್ ಸಿಪಿ ಅಧ್ಯಕ್ಷ   ಶರದ್ ಪವಾರ ಆರಂಭದಲ್ಲೇ ಘೋಷಿಸಿದ್ದಾರೆ. ಆದ್ದರಿಂದ ಕೋವಿಂದ್ ಪರ ಮತ ಚಲಾವಣೆಯ  ವರದಿಗಳು ಆಧಾರರಹಿತವಾದುದು.  […]

ಒಡಿಶಾ:ಗೋವುಗಳಿಗೆ ಥಳಿತ, ರಕ್ಷಿಸಲು ಮುಂದಾದ ಪ್ರವಾಸಿಗರ ಮೇಲೆ ಹಲ್ಲೆ

ಒಡಿಶಾ:ಗೋವುಗಳಿಗೆ ಥಳಿತ, ರಕ್ಷಿಸಲು ಮುಂದಾದ ಪ್ರವಾಸಿಗರ ಮೇಲೆ ಹಲ್ಲೆ

ಒಡಿಶಾ:  ರಾಯಘಡ್‌ನಲ್ಲಿ ಗೋವುಗಳನ್ನು  ಮನ ಬಂದಂತೆ  ಥಳಿಸುತ್ತಿದ್ದನ್ನು ಪ್ರಶ್ನಿಸಿದ ತೆಲಂಗಾಣದ ಪ್ರವಾಸಿಗರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಹೈದರಾಬಾದ್‌‌ನ ಟೆಕ್ಕಿ ಬಿ.ವೆಂಕಟೇಶ್ವರಂ ಸೇರಿ 7 ಜನ ಪ್ರವಾಸಿಗರು ಹಲ್ಲೆಗೊಳಗಾದವರು. ಒಡಿಶಾಗೆ ಪ್ರವಾಸಕ್ಕೆಂದು ತೆರಳಿದ್ದರು. ಈ ವೇಳೆ ರಾಯಘಡ್‌ ಜಿಲ್ಲೆಯಲ್ಲಿ ಗುಂಪೊಂದು ಸುಮಾರು 500 ಗೋವುಗಳನ್ನು ಬೆತ್ತದಿಂದ ಥಳಿಸುತ್ತಾ ಸಾಗಸುತ್ತಿದ್ದರು.  ಇದನ್ನು ನೋಡಿದ ತೆಲಂಗಾಣದ ಪ್ರವಾಸಿಗರು ಗೋವುಗಳನ್ನು ರಕ್ಷಿಸಲು ಮುಂದಾಗಿದ್ದಾಗ   ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ಘಟನೆ ನಂತರ ರಾಯಗಡ್‌ನ ಜಿಲ್ಲಾಧಿಕಾರಿ ಗುಹಾ ಪೂನಂ ತಾಪಸ್ ಕುಮಾರ್‌ ಅವರನ್ನು […]

ಭಾರತದ 14 ನೇ ರಾಷ್ಟ್ರಪತಿ ಆಯ್ಕೆಗೆ ದೇಶದ 32 ಮತಗಟ್ಟೆಗಳಲ್ಲಿ ಚುರುಕಿನ ಮತದಾನ

ಭಾರತದ 14 ನೇ ರಾಷ್ಟ್ರಪತಿ ಆಯ್ಕೆಗೆ ದೇಶದ 32 ಮತಗಟ್ಟೆಗಳಲ್ಲಿ ಚುರುಕಿನ ಮತದಾನ

ಹೊಸದಿಲ್ಲಿ: ಭಾರತದ 14 ನೇ ರಾಷ್ಟ್ರಪತಿ ಆಯ್ಕೆಗಾಗಿ ದೇಶದ 32 ಮತಗಟ್ಟೆಗಳಲ್ಲಿ ಮತದಾನ ಸೋಮವಾರ ಬೆಳಗ್ಗೆ 10ಗಂಟೆಗೆ ಆರಂಭವಾಗಿದೆ. ಎನ್‌ಡಿಎ ಮೈತ್ರಿಕೂಟದ ರಾಮನಾಥ್‌ ಕೋವಿಂದ್‌ ಹಾಗೂ ಯುಪಿಎ ಕೂಟದ ಮೀರಾ ಕುಮಾರ್‌ ಚುನಾವಣೆ ಕಣದಲ್ಲಿದ್ದಾರೆ. ಹೊಸದಿಲ್ಲಿಯ ಸಂಸತ್‌ ಭವನದ ಮತಗಟ್ಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಹಕ್ಕು ಚಲಾಯಿಸಿದರು.  ಮತದಾನಕ್ಕಾಗಿ ಸಂಸದರು, ಶಾಸಕರು ಸರದಿ ಸಾಲಿನಲ್ಲಿ ನಿಂತಿದ್ದರು. ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಆಡಳಿತಾವಧಿ ಜು. 24ಕ್ಕೆ ಪೂರ್ಣಗೊಳ್ಳಲಿದೆ. ಚುನಾವಣೆ ಮತಗಳ ಎಣಿಕೆ […]

ಭಾರತದ 14ನೇ ರಾಷ್ಟ್ರಪತಿ ಆಯ್ಕೆಗೆ ಜು.17ರಂದು ಚುನಾವಣೆ

ಭಾರತದ 14ನೇ ರಾಷ್ಟ್ರಪತಿ ಆಯ್ಕೆಗೆ ಜು.17ರಂದು ಚುನಾವಣೆ

ಹೊಸದಿಲ್ಲಿ: ಭಾರತದ 14ನೇ ರಾಷ್ಟ್ರಪತಿ ಆಯ್ಕೆಗೆ ಜು.17ರಂದು ಚುನಾವಣೆ ನಡೆಯಲಿದ್ದು, ಮತದಾನಕ್ಕೆ ಸಿದ್ಧತೆ ಪೂರ್ಣಗೊಂಡಿದೆ.   ಚುನಾವಣ ಕಣದಲ್ಲಿ ಎನ್‌ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್‌ ಅವರಿಗೆ ಬಹುಮತದ ಬಲವಿದ್ದು,   ಯುಪಿಎ ಅಭ್ಯರ್ಥಿಯಾಗಿ ಕಣದಲ್ಲಿರುವ ಮೀರಾಕುಮಾರ್‌ ಮತದಾರರ ಮನವೊಲಿಸಲು ಎಲ್ಲ ಪ್ರಯತ್ನ ನಡೆಸಿದ್ದಾರೆ. ರಾಷ್ಟ್ರಪತಿ ಆಯ್ಕೆಗಾಗಿ  4852 ಸಂಸದರು ಮತ್ತು ಶಾಸಕರು ಮತ ಚಲಾವಣೆ ಮಾಡಲಿದ್ದಾರೆ. ಮತದಾರರ ಮತ ಮೌಲ್ಯ 10,98,903 ಆಗಿದ್ದು, ಚುನಾವಣ ಗೆಲ್ಲಲು ಮತ ಮೌಲ್ಯದ ಅರ್ಧ ದಾರಿಯನ್ನು ಕ್ರಮಿಸಬೇಕಿದ್ದು, ಶೇ.63ರಷ್ಟು ಮೌಲ್ಯದ ಮತಗಳನ್ನು ಗಳಿಸಬೇಕು.  ಒಟ್ಟು […]

ಜಮ್ಮು ಕಾಶ್ಮೀರ ಬಳಿ ಅಮರನಾಥ ಯಾತ್ರಿಗಳ ಬಸ್ ಕಂದಕಕ್ಕೆ ಉರುಳಿ 16 ಸಾವು

ಜಮ್ಮು ಕಾಶ್ಮೀರ ಬಳಿ ಅಮರನಾಥ ಯಾತ್ರಿಗಳ ಬಸ್ ಕಂದಕಕ್ಕೆ ಉರುಳಿ 16 ಸಾವು

ಶ್ರೀನಗರ: ಅಮರನಾಥ್‌ ಯಾತ್ರಿಗಳು ತೆರಳುತ್ತಿದ್ದ ಬಸ್‌ ಜಮ್ಮು-ಕಾಶ್ಮೀರದ ರಾಮ್ಬಾನ್‌ ಜಿಲ್ಲೆಯ ಹೆದ್ದಾರಿ ಬಳಿ ರವಿವಾರ  ಕಂದಕಕ್ಕೆ  ಉರುಳಿದ್ದು, 16 ಯಾತ್ರಿಕರು ಮೃತಪಟ್ಟಿದ್ದಾರೆ. ದುರ್ಘಟನೆಯಲ್ಲಿ  35 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಭದ್ರತಾ ಸಿಬ್ಬಂದಿ ಧಾವಿಸಿದ್ದು,   ರಕ್ಷಣಾ ಕಾರ್ಯ ಚುರುಕುಗೊಂಡಿದೆ. Views: 97

ಗೋ ರಕ್ಷಣೆ ಹೆಸರಲ್ಲಿ ಹಿಂಸಾಚಾರ ನಡೆಸಿದರೆ ಕಠಿಣ ಕ್ರಮ: ಪ್ರಧಾನಿ ಮೋದಿ ಸೂಚನೆ

ಗೋ ರಕ್ಷಣೆ ಹೆಸರಲ್ಲಿ ಹಿಂಸಾಚಾರ ನಡೆಸಿದರೆ ಕಠಿಣ ಕ್ರಮ: ಪ್ರಧಾನಿ ಮೋದಿ ಸೂಚನೆ

 ಹೊಸದಿಲ್ಲಿ: ಗೋ ರಕ್ಷಣೆ ಹೆಸರಲ್ಲಿ ಹಿಂಸಾಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದುಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರಗಳಿಗೆ  ಸೂಚನೆ ನೀಡಿದ್ದಾರೆ. ಹೊಸದಿಲ್ಲಿಯಲ್ಲಿ ಸರ್ವಪಕ್ಷ ನಾಯಕರ ಸಭೆಯಲ್ಲಿ ಪ್ರಧಾನಿ ಮೋದಿ ರವಿವಾರ ಪಾಲ್ಗೊಂಡು ಚರ್ಚಿಸಿದ ನಂತರ ಈ ಸೂಚನೆ ನೀಡಿದ್ದಾರೆ ಎಂದು  ಕೇಂದ್ರ ಸಚಿವರಾದ ಅನಂತ್ ಕುಮಾರ್ ಹಾಗೂ ಮುಕ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.   ಗೋರಕ್ಷಣೆ ಹೆಸರಲ್ಲಿ ಹಿಂಸಾಚಾರಕ್ಕಿಳಿಯುವುದನ್ನು  ಕೇಂದ್ರ ಸರ್ಕಾರ ಸಹಿಸುವುದಿಲ್ಲ. ಹಿಂಸಾಚಾರಿಗಳ ವಿರುದ್ಧ ಸೂಕ್ತ ಕ್ರಮ ಹಾಗೂ ತನಿಖೆ ನಡೆಸುವುದಾಗಿ […]

ಬಿಹಾರದ ಮೈತ್ರಿಕೂಟದಲ್ಲಿ ಭಿನ್ನಮತ: ಲಾಲು ಪ್ರಸಾದ್, ನಿತೀಶ್ ಪ್ರತ್ಯೇಕ ಸಭೆ

ಬಿಹಾರದ ಮೈತ್ರಿಕೂಟದಲ್ಲಿ ಭಿನ್ನಮತ: ಲಾಲು ಪ್ರಸಾದ್,  ನಿತೀಶ್ ಪ್ರತ್ಯೇಕ ಸಭೆ

    ಹೊಸದಿಲ್ಲಿ: ಬಿಹಾರದ ಮೈತ್ರಿಕೂಟದಲ್ಲಿ ಭಿನ್ನಮತ ತಾರಕಕ್ಕೇರಿದ್ದು, ನಿತ್ಯವೂ ಒಂದಿಲ್ಲೊಂದು ವಿವಾದಗಳು ತಲೆ ಎತ್ತುತ್ತಲೇ ಇವೆ.  ರಾಷ್ಟ್ರಪತಿ ಚುನಾವಣೆ ಮತ್ತು ಉಪಮುಖ್ಯಮಂತ್ರಿ ಸ್ಥಾನಕ್ಕೆ ತೇಜಸ್ವಿ ಯಾದವ  ರಾಜೀನಾಮೆ ಕುರಿತು ಚರ್ಚಿಸಲು  ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ನಿತೀಶ್ ಕುಮಾರ್ ಪ್ರತ್ಯೇಕ ಸಭೆ  ಕರೆದಿದ್ದಾರೆ.    ಆರ್ ಜೆಡಿ ಶಾಸಕರೊಂದಿಗೆ ಈ ಇಬ್ಬರೂ ನಾಯಕರು ಪ್ರತ್ಯೇಕವಾಗಿ ಚರ್ಚಿಸಲಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ. ಈ ನಡುವೆ  ಲಾಲು ಪ್ರಸಾದ್ ಯಾದವ್ ಪ್ರತಿಕ್ರಿಯೆ ನೀಡಿತೇಜಸ್ವಿ ಯಾದವ್ ಉಪಮುಖ್ಯಮಂತ್ರಿ […]

ಚೀನಾ ಗಡಿ ವಿವಾದ: ವಿಪಕ್ಷಗಳಿಗೆ ಸರ್ಕಾರದಿಂದ ಮಾಹಿತಿ

ಚೀನಾ ಗಡಿ ವಿವಾದ: ವಿಪಕ್ಷಗಳಿಗೆ ಸರ್ಕಾರದಿಂದ ಮಾಹಿತಿ

ಹೊಸದಿಲ್ಲಿ: ಡೋಕ್ಲಾಮ್ ಗಡಿ ವಿವಾದ ಹಾಗೂ ಕಾಶ್ಮೀರದಲ್ಲಿನ ಉದ್ವಿಗ್ನ ಪರಿಸ್ಥಿತಿ ಕುರಿತು ಚರ್ಚಿಸಲು ಗೈರು ಹಾಜರಾಗಿದ್ದ  ಪ್ರತಿಪಕ್ಷಗಳ ಮುಖಂಡರಿಗೆ ಶನಿವಾರ ಕೇಂದ್ರ ಸರ್ಕಾರ ವಿವರಣೆ ನೀಡಿದ್ದು, ಸಲಹೆ ಸೂಚನೆ ಪರಿಗಣಿಸಿ ಮುಂದಿನ ಹೆಜ್ಜೆ ಇಡುವುದಾಗಿ ತಿಳಿಸಿದೆ.     ಕೇಂದ್ರ ಸರ್ಕಾರ ಶುಕ್ರವಾರ ಕರೆದಿದ್ದ ಸಭೆಯಲ್ಲಿ 14  ಪ್ರತಿಪಕ್ಷಗಳ ನಾಯಕರು ಮಾತ್ರ ಪಾಲ್ಗೊಂಡಿದ್ದರು. ಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಗೃಹ ಸಚಿವ ರಾಜನಾಥ ಸಿಂಗ್, ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರು 14 ವಿರೋಧ ಪಕ್ಷಗಳ […]