7ನೇ ವೇತನ ಆಯೋಗದ ಶಿಫಾರಸುಗಳ ಜಾರಿ, ಏರ್ ಇಂಡಿಯಾ ಖಾಸಗೀಕರಣಕ್ಕೆ ಕೇಂದ್ರ ಸಂಪುಟ ಒಪ್ಪಿಗೆ

7ನೇ ವೇತನ ಆಯೋಗದ ಶಿಫಾರಸುಗಳ ಜಾರಿ, ಏರ್ ಇಂಡಿಯಾ ಖಾಸಗೀಕರಣಕ್ಕೆ ಕೇಂದ್ರ ಸಂಪುಟ ಒಪ್ಪಿಗೆ

ಹೊಸದಿಲ್ಲಿ: 7ನೇ ವೇತನ ಆಯೋಗದ ಶಿಫಾರಸುಗಳ ಜಾರಿ, ಏರ್ ಇಂಡಿಯಾ ಖಾಸಗೀರಕಣ ಸೇರಿ ಹಲವು ಮಹತ್ವದ ನಿರ್ಧಾರಗಳಿಗೆ ಕೇಂದ್ರ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ ಜೇಟ್ಲಿ ತಿಳಿಸಿದ್ದಾರೆ.  ಹೊಸದಿಲ್ಲಿಯಲ್ಲಿ ಬುಧವಾರ ಸಂಜೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಈ ಮಾಹಿತಿ ಬಹಿರಂಗಪಡಿಸಿದ್ದಾರೆ.  ಏರ್ ಇಂಡಿಯಾ ಸಂಸ್ಥೆಯಿಂದ ಬಂಡವಾಳ ಹಿಂದಕ್ಕೆ ಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹಂತ ಹಂತವಾಗಿ ಏರ್ ಇಂಡಿಯಾದಿಂದ ಬಂಡವಾಳ ಹಿಂದಕ್ಕೆ ಪಡೆಯಲಾಗುವುದು ಎಂದು ಜೇಟ್ಲಿ ತಿಳಿಸಿದರು. ಜು.1ರಿಂದ ಕೇಂದ್ರ ಸರ್ಕಾರಿ […]

1993 ಮುಂಬೈ ಬಾಂಬ್ ಬ್ಲಾಸ್ಟ್ ಮಾಸ್ಟರ್ ಮೈಂಡ್ ಮುಸ್ತಫಾ ದೊಸ್ಸಾ ಆಸ್ಪತ್ರೆಯಲ್ಲಿ ಸಾವು

1993 ಮುಂಬೈ ಬಾಂಬ್ ಬ್ಲಾಸ್ಟ್ ಮಾಸ್ಟರ್ ಮೈಂಡ್ ಮುಸ್ತಫಾ ದೊಸ್ಸಾ ಆಸ್ಪತ್ರೆಯಲ್ಲಿ ಸಾವು

  ಮುಂಬೈ: 1993 ಮುಂಬೈ ಸರಣಿ ಬಾಂಬ್ ಸ್ಪೋಟ್ ಮಾಸ್ಟರ್ ಮೈಂಡ್  ಮುಸ್ತಫಾ ದೋಸ್ಸಾ ಅನಾರೋಗ್ಯದಿಂದ ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಬುಧವಾರ ಸಾವನ್ನಪ್ಪಿದ್ದಾನೆ.    ಆರ್ಥೂರ ಕಾರಾಗೃಹದಲ್ಲಿದ್ದ   ಮುಸ್ತಪಾ ದೋಸ್ಸಾ ಎದೆನೋವಿನಿಂದ ಬಳಲುತ್ತಿದ್ದ, ಕೂಡಲೇ ಆತನನ್ನು ಚಿಕಿತ್ಸೆಗಾಗಿ ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.   1993ರ ಮುಂಬಯಿ ಸರಣಿ ಸ್ಫೋಟ  ಪ್ರಕರಣದಲ್ಲಿ ತಪ್ಪಿತಸ್ಥ  ಎಂದು  ಟಾಡಾ ಕೋರ್ಟ್ ಇತ್ತಿಚೀಗೆ ತೀರ್ಪು ನೀಡಿತ್ತು,  ಹೈಪರ್ ಟೆನ್ಸನ್ ಮತ್ತು ಡಯಾಬಿಟಿಸ್ ನಿಂದ ಬಳಲುತ್ತಿದ್ದ ದೊಸ್ಸಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.    […]

ಮುಸ್ಲಿಂ ವ್ಯಕ್ತಿ ಮನೆ ಮುಂದೆ ಸತ್ತ ಹಸು ಪತ್ತೆ: ಹಲ್ಲೆ ನಡೆಸಿ, ಮನೆಗೆ ಬೆಂಕಿ ಹಚ್ಚಿದ ಸ್ಥಳೀಯರು

ಮುಸ್ಲಿಂ ವ್ಯಕ್ತಿ ಮನೆ ಮುಂದೆ ಸತ್ತ ಹಸು ಪತ್ತೆ: ಹಲ್ಲೆ ನಡೆಸಿ, ಮನೆಗೆ ಬೆಂಕಿ ಹಚ್ಚಿದ ಸ್ಥಳೀಯರು

  ಗಿರಿದಿಹ್ (ಜಾರ್ಖಂಡ್): ಮುಸ್ಲಿಂ ವ್ಯಕ್ತಿ ಮನೆ ಮುಂದೆ ಸತ್ತ ಹಸುವೊಂದು ಪತ್ತೆಯಾದ ಹಿನ್ನಲೆಯಲ್ಲಿ  ಗೋಹತ್ಯೆ ಮಾಡಿದ್ದಾನೆಂದು ಶಂಕಿಸಿ ಮನೆಗೆ ಬೆಂಕಿ ಹಚ್ಚಿದ ಘಟನೆ ಜಾರ್ಖಂಡ್ ರಾಜ್ಯದ ಗಿರಿದಹ್ ಜಿಲ್ಲೆಯ ಬೇರಿಯಾ ಗ್ರಾಮದಲ್ಲಿ  ನಡೆದಿದೆ.   ಬುಧವಾರ ಬೇರಿಯಾ ಗ್ರಾಮದ ನಿವಾಸಿ ಉಸ್ಮಾನ್ ಅನ್ಸಾರಿ ಮನೆ ಮುಂದೆ ಸತ್ತ ಹಸುವೊಂದನ್ನು ಕಂಡ ಕೆಲ ಸ್ಥಳೀಯರು ಆತನೇ ಹಸುವನ್ನು ಕೊಂದಿದ್ದಾನೆಂದು ಅವನ ಮೇಲೆ ಮಾರಣಾಂತಿಕ  ಹಲ್ಲೆ ನಡೆಸಿದ್ದು, ಆತನ ಮನೆಗೆ ಬೆಂಕಿ ಹಚ್ಚಿದ್ದಾರೆ.   ಉಸ್ಮಾನ್ ಮೇಲೆ ದಾಳಿ ನಡೆಸಿದ […]

ಕಾಂಗ್ರೆಸ್, ಬಿಜೆಪಿಗೆ ಅನೈತಿಕ ರಾಜಕಾರಣವೇ ಬಂಡವಾಳ: ಮಾಜಿ ಪ್ರಧಾನಿ ದೇವೇಗೌಡ

ಕಾಂಗ್ರೆಸ್, ಬಿಜೆಪಿಗೆ ಅನೈತಿಕ ರಾಜಕಾರಣವೇ ಬಂಡವಾಳ: ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು: ಸ್ವಾರ್ಥಕ್ಕಾಗಿ ತುರ್ತು ಪರಿಸ್ಥಿತಿ ಘೋಷಿಸಿದ್ದ ಆಗಿನ ಪ್ರಧಾನಿ  ಇಂದಿರಾ ಗಾಂಧಿ ಪೊಲೀಸ್ ಶಕ್ತಿ ಬಳಸಿ  ಜಯಪ್ರಕಾಶ ನಾರಾಯಣ ಅವರನ್ನು ಅಪರಾಧಿಯ ಪಟ್ಟ ಕಟ್ಟಿದರು. ಕಾಂಗ್ರೆಸ್ ಮತ್ತು ಬಿಜೆಪಿ ಈ ಎರಡೂ ಪಕ್ಷಗಳಿಗೆಅನೈತಿಕ ರಾಜಕಾರಣವೇ ಬಂಡವಾಳ  ಎಂದು ಮಾಜಿ ಪ್ರಧಾನಿ ಹೆಚ್‍.ಡಿ. ದೇವೇಗೌಡ ಹೇಳಿದರು. ಲೋಕನಾಯಕ ಜೆ.ಪಿ. ವಿಚಾರ ವೇದಿಕೆ ಮತ್ತು ಯುನೈಟೆಡ್ ಲಾಯರ್ಸ್ ಫೋರಂ ಸಂಯುಕ್ತವಾಗಿ ತುರ್ತು ಪರಿಸ್ಥಿತಿ ವಿರೋಧಿ ದಿನದ ನಿಮಿತ್ತ  ಬೆಂಗಳೂರಿನ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ “ಭಾರತ ಪ್ರಜಾಪ್ರಭುತ್ವ, ಅಂದು-ಇಂದು”- ಒಂದು ಅವಲೋಕನ’ […]

ಗಾಂಧಿ ಸಮಾಧಿಗೆ ನಮಿಸಿ ರಾಷ್ಟ್ರಪತಿ ಚುನಾವಣೆಗೆ ಮೀರಾಕುಮಾರ ನಾಮಪತ್ರ

ಗಾಂಧಿ ಸಮಾಧಿಗೆ ನಮಿಸಿ  ರಾಷ್ಟ್ರಪತಿ ಚುನಾವಣೆಗೆ ಮೀರಾಕುಮಾರ ನಾಮಪತ್ರ

  ಹೊಸದಿಲ್ಲಿ: ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಮೀರಾಕುಮಾರ ರಾಜಘಾಟ್ ಗೆ ತೆರಳಿ ಮಹಾತ್ಮಾ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದ ಬಳಿಕ ಸಂಸತ್ ಭವನಕ್ಕೆ ಆಗಮಿಸಿ  ನಾಮಪತ್ರ ಸಲ್ಲಿಸಿದರು.     ಜುಲೈ 17 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ.   ಬುಧವಾರ ಬೆಳಗ್ಗೆ ಪಾರ್ಲಿಮೆಂಟ್ ಹೌಸ್‌ಗೆ ಬಂದು ಮೀರಾ ಕುಮಾರ್‌, ಇಲ್ಲಿನ ಲೋಕಸಭಾ ಕಾರ್ಯದರ್ಶಿ ಅವರಿಗೆ ನಾಮಪತ್ರ ಸಲ್ಲಿಸಿದರು.   ಮೀರಾ ಕುಮಾರ್‌ ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್‌ ಅಧಿನಾಯಕಿ […]

ವಿದೇಶ ಪ್ರವಾಸ ಮುಗಿಸಿ ಪ್ರಧಾನಿ ಮೋದಿ ತವರಿಗೆ: ನೆದರ್‌ಲ್ಯಾಂಡ್‌ನಲ್ಲಿ ಸೈಕಲ್ ಕಾಣಿಕೆ

ವಿದೇಶ ಪ್ರವಾಸ ಮುಗಿಸಿ ಪ್ರಧಾನಿ ಮೋದಿ ತವರಿಗೆ: ನೆದರ್‌ಲ್ಯಾಂಡ್‌ನಲ್ಲಿ ಸೈಕಲ್ ಕಾಣಿಕೆ

ಹೊಸದಿಲ್ಲಿ: ಮೂರು ದೇಶಗಳ ವಿದೇಶ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಬುಧವಾರ ಬೆಳಗ್ಗೆ ಸ್ವದೇಶಕ್ಕೆ ಮರಳಿದ್ದಾರೆ.  ಪ್ರಧಾನಿ ಮೋದಿ ಅವರಿಗೆ ನೆದರ್‌ಲ್ಯಾಂಡ್‌ ಪ್ರಧಾನಿ ಮಾರ್ಕ್‌ ರುಟ್ಟೆ  ಸೈಕಲ್‌ ಕಾಣಿಕೆ ನೀಡಿದ್ದು, ಮೋದಿ ಈ ಕಾಣಿಕೆಗೆ ಧನ್ಯವಾದ ಹೇಳಿದ್ದಾರೆ. ಮೊದಲಿಗೆ ಪೋರ್ಚುಗಲ್ ನಂತರ ಅಮೆರಿಕಾ, ನೆದರ್‌ಲ್ಯಾಂಡ್‌ ದೇಶಗಳ ಪ್ರವಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾರತದಿಂದ  ಜೂನ್ 24ರಂದು ತೆರಳಿದ್ದರು. ಪೋರ್ಚುಗಲ್‌ ನಂತರ ಅಮೆರಿಕಾಗೆ ತೆರಳಿದ್ದ ಪ್ರಧಾನಿ ಎರಡು ದಿನ ಅಮೆರಿಕಾದಲ್ಲಿದ್ದರು. 27ರಂದು ನೆದರ್‌ಲ್ಯಾಂಡ್‌ಗೆ ತೆರಳಿದ್ದರು. ನೆದರ್‌ಲ್ಯಾಂಡ್‌ ನಿಂದ […]

ರಾಷ್ಟ್ರಪತಿ ಚುನಾವಣೆ: ಮೀರಾ ಕುಮಾರರಿಂದ ಇಂದು ನಾಮಪತ್ರ ಸಲ್ಲಿಕೆ

ರಾಷ್ಟ್ರಪತಿ ಚುನಾವಣೆ: ಮೀರಾ ಕುಮಾರರಿಂದ ಇಂದು ನಾಮಪತ್ರ ಸಲ್ಲಿಕೆ

        ಹೊಸದಿಲ್ಲಿ:   ಯುಪಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಮಾಜಿ ಲೋಕಸಭೆ ಸ್ಪೀಕರ ಮೀರಾ ಕುಮಾರ  ಇಂದು ಬೆಳಿಗ್ಗೆ 11.30 ಗಂಟೆಗೆ ಸಂಸತ್ ಭವನದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.    ಜುಲೈ 17 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಬುಧವಾರ ಕೊನೆಯ ದಿನವಾಗಿದೆ.   ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಯೆಚೂರಿ ಸೇರಿದಂತೆ ಪ್ರತಿಪಕ್ಷಗಳ ನಾಯಕರ ನೇತೃತ್ವದಲ್ಲಿ ಮೀರಾ ಕುಮಾರ್ ಅವರು ನಾಮಪತ್ರ ನೀಡಲಿದ್ದಾರೆ.    ಇದೂವರೆಗೆ 24 […]

ಲೈಂಗಿಕ ಕಿರುಕುಳ: ಅತ್ಯಾಚಾರ ಪ್ರತಿರೋಧಿಸಿದ ಯುವತಿಯನ್ನು ಸುಟ್ಟು ಹಾಕಿದ ಕಾಮುಕ

ಲೈಂಗಿಕ ಕಿರುಕುಳ: ಅತ್ಯಾಚಾರ ಪ್ರತಿರೋಧಿಸಿದ ಯುವತಿಯನ್ನು ಸುಟ್ಟು ಹಾಕಿದ ಕಾಮುಕ

ಉತ್ತರ ಪ್ರದೇಶ: ಇಲ್ಲಿಯ ಶಹಿಗನೇಶ್ಪುರ್‍ದಲ್ಲಿ ಮನೆಯಲ್ಲಿ ಒಂಟಿಯಾಗಿದ್ದ ಯುವತಿಯೊಬ್ಬಳ  ಮೇಲೆ   ನೆರೆಮನೆಯ ಯುವಕ ಅತ್ಯಾಚಾರಕ್ಕೆ ಯತ್ನಿಸಿದ್ದು,  ಯುವತಿ ಇದಕ್ಕೆ  ಪ್ರತಿರೋಧಿಸಿದಾಗ ಅವಳನ್ನು ಜೀವಂತ ದಹನ ಮಾಡಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಹರೀಮ್ ಎಂಬಾತ ಕೃತ್ಯ ಎಸಗಿದವನು. ಮೊಬೈಲ್ ಚಾರ್ಜರ್‍ ಕೆಳುವ ನೆಪದಲ್ಲಿ ಯುವತಿ ಮನೆಗೆ ತೆರಳಿದ ಈತ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ಪ್ರತಿರೋಧಿಸಿ ಯುವತಿ ಆತನಿಗೆ ಥಳಿಸಿದ್ದಾಳೆ. ಇದರಿಂದ  ಕುಪಿತಗೊಂಡು ಯುವತಿ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಂಚಿದ್ದಾನೆ. ಗಾಯಗೊಂಡ ಯುವತಿಯನ್ನು […]

ಬದಲಾಗಲಿದೆ ಹಣಕಾಸು ವರ್ಷ: ನವೆಂಬರ್ ನಲ್ಲೇ ಬಜೆಟ್ ಮಂಡಿಸಲು ಕೇಂದ್ರ ಸಿದ್ಧತೆ

ಬದಲಾಗಲಿದೆ ಹಣಕಾಸು ವರ್ಷ: ನವೆಂಬರ್ ನಲ್ಲೇ  ಬಜೆಟ್ ಮಂಡಿಸಲು ಕೇಂದ್ರ ಸಿದ್ಧತೆ

ಹೊಸದಿಲ್ಲಿ: ಹಣಕಾಸು ವರ್ಷವನ್ನು ಜನವರಿಯಿಂದ ಡಿಸೆಂಬರ್‌ ಅವಧಿಗೆ ಬದಲಾಯಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದ್ದು,  2018ರಿಂದಲೇ ಈ ಬದಲಾವಣೆ ಮಾಡಲು ಚಿಂತನೆ ನಡೆದಿದೆ. ಹಾಗಾಗಿ ನವೆಂಬರ್‌ ತಿಂಗಳಲ್ಲೇ ವಾರ್ಷಿಕ ಬಜೆಟ್‌ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಗೊತ್ತಾಗಿದೆ. ಇದು ಕಾರ್ಯರೂಪಕ್ಕೆ ಬಂದರೆ 2018ರ ಹಣಕಾಸು ವರ್ಷ ಜನವರಿಯಿಂದಲೇ ಆರಂಭಗೊಳ್ಳಲಿದೆ.  ಪ್ರತಿವರ್ಷ ಫೆಬ್ರವರಿ ಕೊನೆಯಲ್ಲಿ ಬಜೆಟ್ ಮಂಡಿಸಲಾಗುತ್ತದೆ. 2017-18ರ ಬಜೆಟ್ ಅನ್ನು ಫೆ.1ರಂದು ಮಂಡಿಸಲಾಗಿತ್ತು. 2017-18ನೇ ಹಣಕಾಸು ವರ್ಷದಲ್ಲಿ ರೈಲ್ವೆ ಬಜೆಟ್ ಮತ್ತು ಜನರಲ್ ಬಜೆಟ್‌ಗಳೆರಡನ್ನೂ […]

ಹೊಸದಿಲ್ಲಿ: ಚಹಾ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ: ಐವರ ಸಾವು

ಹೊಸದಿಲ್ಲಿ: ಚಹಾ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ: ಐವರ ಸಾವು

ಹೊಸದಿಲ್ಲಿ: ಇಲ್ಲಿನ ಓಖ್ಲಾ ಪ್ರದೇಶದ ಚಹಾ ಅಂಗಡಿಯೊಂದರಲ್ಲಿ  ಸೋಮವಾರ ಬೆಳಗ್ಗೆ ಅನಿಲ ಸೋರಿಕೆಯಾಗಿ  ಸಿಲಿಂಡರ್  ಸ್ಫೋಟಗೊಂಡಿದ್ದು, 5 ವರ್ಷದ ಬಾಲಕಿ ಸೇರಿ ಐವರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಧಾವಿಸಿ ಕಾರ್ಯಾಚರಣೆ ಕೈಗೊಂಡರು. ಆದರೆ ಅಷ್ಟರಲ್ಲಿ ಅಂಗಡಿಯಲ್ಲಿನ ವಸ್ತುಗಳಿಗೆ ಬೆಂಕಿ ಹೊತ್ತಿಕೊಂಡು ಸುತ್ತಮುತ್ತಲಿನ ಪ್ರದೇಶಕ್ಕೂ ವ್ಯಾಪಿಸಿತ್ತು. ಅಗ್ನಿ ಆಕಸ್ಮಿಕದಲ್ಲಿ ಬೆಲೆ ಬಾಳುವ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಅಪಾರ ಹಾನಿಯಾಗಿದೆ.