ಯಾವ ಪಕ್ಷಕ್ಕೂ ಸೇರದ ‘ಪ್ರಜೆಗಳ ಅಭ್ಯರ್ಥಿ’ಯಾಗಿರುತ್ತೇನೆ: ಗೋಪಾಲಕೃಷ್ಣ ಗಾಂಧಿ

ಯಾವ ಪಕ್ಷಕ್ಕೂ ಸೇರದ ‘ಪ್ರಜೆಗಳ ಅಭ್ಯರ್ಥಿ’ಯಾಗಿರುತ್ತೇನೆ: ಗೋಪಾಲಕೃಷ್ಣ ಗಾಂಧಿ

ಚೆನ್ನೈ:  ಉಪರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾಗಿ ತಮ್ಮನ್ನು ಕಣಕ್ಕಿಳಿಸಲು 18 ವಿಪಕ್ಷಗಳು ಕೈಗೊಂಡಿರುವ ನಿರ್ಣಯಕ್ಕೆ  ಸಂತಸ ವ್ಯಕ್ತಪಡಿಸಿರುವ ಮಹಾತ್ಮಾ ಗಾಂಧಿ ಮೊಮ್ಮೊಗ  ಗೋಪಾಲಕೃಷ್ಣ ಗಾಂಧಿ ಅವರು, ತಾನು ಯಾವುದೇ ಪಕ್ಷಕ್ಕೆ ಸೇರದ ‘ಪ್ರಜೆಗಳ ಅಭ್ಯರ್ಥಿ’ ಎಂದು ಹೇಳಿದ್ದಾರೆ.  ಸದ್ಯ ದೇಶ  ಮಿನಿ ಬಿಕ್ಕಟ್ಟಿನಿಂದ  ಬಳಲುತ್ತಿದೆ. ಭಯೋತ್ಪಾದನೆ ಎಂಬ ಭೂತ ದೇಶವನ್ನು ಬಿಡದಂತೆ ಕಾಡುತ್ತಿದೆ. ಜನರು ಆತಂಕದಿಂದ ಬದುಕುವಂತಾಗಿದೆ. ಈ ಪರಿಸ್ಥಿತಿ ಬದಲಾಗಬೇಕು ಎಂಬುದು ಎಲ್ಲರ ಬಯಕೆ.  18 ವಿಪಕ್ಷಗಳು ತಮ್ಮನ್ನು   ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಒಮ್ಮತದಿಂದ ನಿರ್ಣಯ […]

ಯಾತ್ರಿಗಳ ಮೇಲೆ ದಾಳಿ: ಭಯೋತ್ಪಾದನೆ ಬೆದರಿಕೆ ಎದುರಿಸಲು ಒಗ್ಗಟ್ಟಕ್ಕಾಗಿ ಕಾಂಗ್ರೆಸ್ ಕರೆ

ಯಾತ್ರಿಗಳ ಮೇಲೆ ದಾಳಿ:  ಭಯೋತ್ಪಾದನೆ ಬೆದರಿಕೆ ಎದುರಿಸಲು ಒಗ್ಗಟ್ಟಕ್ಕಾಗಿ ಕಾಂಗ್ರೆಸ್ ಕರೆ

ದಾಳಿ ಕುರಿತು ಆರೋಪ-ಪ್ರತ್ಯಾರೋಪಗಳ ಆಟವನ್ನು  ಆಡಲು ನಾವು ಬಯಸುವುದಿಲ್ಲ – ಕಾಂಗ್ರೆಸ್ ಹೊಸದಿಲ್ಲಿ:ಜಮ್ಮು ಮತ್ತು ಕಾಶ್ಮೀರದ ಅನಾಂತನಾಗ ಜಿಲ್ಲೆಯಲ್ಲಿ ಅಮರನಾಥ್ ಯಾತ್ರಿಗಳ ಮೇಲೆ ಭಯೋತ್ಪಾದಕ ದಾಳಿಯನ್ನು  ಕಾಂಗ್ರೆಸ್ ಬುಧವಾರ ಖಂಡಿಸಿದೆ ಮತ್ತು ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸಲು ಒಗ್ಗಟ್ಟರಾಗಬೇಕೆಂದು ಕರೆ ನೀಡಿದೆ. “ಈ ದಾಳಿಯು ಖಂಡನೀಯ ಮತ್ತು ಅಸ್ಪಷ್ಟವಾದುದು.ಇದನ್ನು ಮಾಡಿದ ಭಯೋತ್ಪಾದಕರು ಹೇಡಿಗಳು.ಈ ದಾಳಿಯ ಕುರಿತು ಆರೋಪ-ಪ್ರತ್ಯಾರೋಪಗಳ ಆಟವನ್ನು  ಆಡಲು ನಾವು ಬಯಸುವುದಿಲ್ಲ,  ಭಯೋತ್ಪಾದನೆ ಭಾರತಕ್ಕೆ ದೊಡ್ಡ ಬೆದರಿಕೆ ಮತ್ತು ಸವಾಲು ಮತ್ತು ನಾವು ಇದನ್ನು ಒಟ್ಟಿಗೆ ಎದುರಿಸಬೇಕು” […]

ಯಾತ್ರಿಗಳ ಮೇಲೆ ದಾಳಿ: ಉಗ್ರರು ಗೋಮಾಂಸವನ್ನು ಸಾಗಿಸುತ್ತಿದ್ದರೆ, ಜೀವಂತವಾಗಿ ಉಳಿಯುತ್ತಿರಲ್ಲಿಲ್ಲ- ಠಾಕ್ರೆ

ಯಾತ್ರಿಗಳ ಮೇಲೆ ದಾಳಿ: ಉಗ್ರರು ಗೋಮಾಂಸವನ್ನು ಸಾಗಿಸುತ್ತಿದ್ದರೆ, ಜೀವಂತವಾಗಿ ಉಳಿಯುತ್ತಿರಲ್ಲಿಲ್ಲ- ಠಾಕ್ರೆ

ಮುಂಬೈ: ಇತ್ತಿಚೀಗೆ ನಡೆದ  ಗೋರಕ್ಷಣೆ ನೆಪದಲ್ಲಿ ನಡೆದ ಹತ್ಯೆಗಳನ್ನು ವಿರೋಧಿಸುತ್ತ, ಅಮರನಾಥ ಯಾತ್ರಿಗಳ ಮೇಲೆ ನಡೆದ ಭಯೋತ್ಪಾದಕರ ದಾಳಿಯನ್ನು ಖಂಡಿಸುತ್ತ  ಶಿವಸೇನಾ ಮುಖ್ಯಸ್ಥ ಉದ್ಧವ ಠಾಕ್ರೆ  ಉಗ್ರವಾದಿಗಳು ಗೋಮಾಂಸವನ್ನು ಸಾಗಿಸುತ್ತಿದ್ದರೆ,  ಜೀವಂತವಾಗಿ ಉಳಿಯುತ್ತಿರಲ್ಲಿಲ್ಲ ಎಂದು ಕೇಂದ್ರ ಸಾರ್ಕಾರ ಮೇಲೆ ವಾಗ್ದಾಳಿ ನಡೆಸಿದರು.   ಭಯೋತ್ಪಾದಕರ ಚೀಲಗಳಲ್ಲಿ ಗೋಮಾಂಸ ಇದ್ದಿದ್ದರೆ, ಅವರಲ್ಲಿ ಯಾರೂ ಜೀವಂತವಾಗಿ ಉಳಿಯುತ್ತಿರಲಿಲ್ಲ. ಗೋವಿನ ಕಾವಲುಗಾರರು ಈಗ  ಎಲ್ಲಿದ್ದಾರೆ? ಎಂದು ಉದ್ಧವ ಠಾಕ್ರೆ ಹೇಳಿದ್ದಾರೆ.  ಸುದ್ದಿವಾಹಿನಿಯೊಂದಿಗೆ ಮಂಗಳವಾರ  ನೀಡಿದ ಸಂದರ್ಶನದಲ್ಲಿ ಅವರು ಮಾತನಾಡುತ್ತಿದ್ದರು.  ಯಾತ್ರಿಗಳ ಮೇಲೆ […]

ಉಪರಾಷ್ಟ್ರಪತಿ ಚುನಾವಣೆ: ಗೋಪಾಲಕೃಷ್ಣ ಗಾಂಧಿ ಕಣಕ್ಕಿಳಿಸಲು ವಿಪಕ್ಷಗಳ ತಯಾರಿ

ಉಪರಾಷ್ಟ್ರಪತಿ ಚುನಾವಣೆ: ಗೋಪಾಲಕೃಷ್ಣ ಗಾಂಧಿ ಕಣಕ್ಕಿಳಿಸಲು ವಿಪಕ್ಷಗಳ ತಯಾರಿ

ಹೊಸದಿಲ್ಲಿ: ಮಾಜಿ ಪಶ್ಚಿಮ ಬಂಗಾಳ ಗವರ್ನರ್  ಗೋಪಾಲಕೃಷ್ಣ ಗಾಂಧಿ ಅವರನ್ನು  ಉಪರಾಷ್ಟ್ರಪತಿ  ಅಭ್ಯರ್ಥಿಯಾಗಿ ಕಣಕ್ಕಿಳಿಸಲು ವಿಪಕ್ಷದ ಮುಖಂಡರು ಮಂಗಳವಾರ ನಿರ್ಧರಿಸಿದ್ದಾರೆ.  18 ವಿಪಕ್ಷಗಳು  ಮಂಗಳವಾರ ಸಭೆ ಸೇರಿ  ಚರ್ಚಿಸಿದ  ಏಕೈಕ ಹೆಸರು ಗಾಂಧಿಯವರದು ಎಂದು ಮೂಲಗಳು ತಿಳಿಸಿವೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿಯವರ ಮೊಮ್ಮಗರಾದ ಗೋಪಾಲಕೃಷ್ಣ ಗಾಂಧಿ ಅವರು 1968-1992ರ ಅವಧಿಯಲ್ಲಿ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗಿದ್ದರು. 2004 ರಿಂದ 2009 ರವರೆಗೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನ ಮಂತ್ರಿ […]

ಜಾನುವಾರು ಹತ್ಯೆ ನಿಷೇಧ ಅಧಿಸೂಚನೆಗೆ ಸುಪ್ರೀಂ ತಡೆಯಾಜ್ಞೆ

ಜಾನುವಾರು ಹತ್ಯೆ ನಿಷೇಧ ಅಧಿಸೂಚನೆಗೆ ಸುಪ್ರೀಂ ತಡೆಯಾಜ್ಞೆ

ಹೊಸದಿಲ್ಲಿ: ಜಾನುವಾರು ಹತ್ಯೆ ನಿಷೇಧ ಅಧಿಸೂಚನೆಗೆ ಸುಪ್ರೀಂಕೋರ್ಟ್‌ ಮಂಗಳವಾರ ತಡೆಯಾಜ್ಞೆ ನೀಡಿದೆ. ಈ ಕುರಿತು ಮದ್ರಾಸ್ ಹೈಕೋರ್ಟ್‌ ಈ ಹಿಂದೆ ನೀಡಿದ ತೀರ್ಪನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದೆ. ಜಾನುವಾರುಗಳ ಮಾರಾಟಕ್ಕೆ ನಿಷೇಧ ಹೇರಿ ಕೇಂದ್ರ ಸರ್ಕಾರ  ಮೇ 25ರಂದು ಅಧಿಸೂಚನೆ ಹೊರಡಿಸಿತ್ತು. ದೇಶದ ಹಲವು ರಾಜ್ಯಗಳಲ್ಲಿ ಅಧಿಸೂಚನೆಗೆ ವಿರೋಧ ವ್ಯಕ್ತವಾಗಿತ್ತು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕುರಿತು ತೀಕ್ಷ್ಣ ಪ್ರತಿಕ್ರಿಯೆ ನೀಡಿ, ಕೇಂದ್ರ ಸರ್ಕಾರಕ್ಕೆ ಇಂತಹ ಅಧಿಸೂಚನೆ ಹೊರಡಿಸುವ ಅಧಿಕಾರ ಇಲ್ಲ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ […]

ಸಕ್ಕರೆ ಮೇಲಿನ ಆಮದು ಸುಂಕ ಹೆಚ್ಚಿಸಲು ಅಧಿಸೂಚನೆ ಹೊರಡಿಸಿದ ಕೇಂದ್ರ

ಸಕ್ಕರೆ ಮೇಲಿನ ಆಮದು ಸುಂಕ ಹೆಚ್ಚಿಸಲು ಅಧಿಸೂಚನೆ ಹೊರಡಿಸಿದ ಕೇಂದ್ರ

  ಹೊಸದಿಲ್ಲಿ: ಸಕ್ಕರೆ ಮೇಲಿನ ಆಮದು ಸುಂಕವನ್ನು 40 ಪ್ರತಿಶತದಿಂದ 50 ಪ್ರತಿಶತದಷ್ಟು ಹೆಚ್ಚಿಸಲು ಕೇಂದ್ರ ಸರಕಾರವು ಅಧಿಸೂಚನೆ ನೀಡಿದೆ ಎಂದು ಕೇಂದ್ರ ಆಹಾರ  ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ. “ಸಕ್ಕರೆಯ ಮೇಲೆ ಆಮದು ಸುಂಕವನ್ನು 40% ರಿಂದ 50% ಗೆ ಹೆಚ್ಚಿಸಲು, ಅಗ್ಗದ ಆಂತರಿಕ ಸಾಗಣೆಗಳನ್ನು ನಿರ್ಬಂಧಿಸಲು ಮತ್ತು ರೈತರನ್ನು ರಕ್ಷಿಸಲು ಸರಕಾರವು ಅಧಿಸೂಚನೆಯನ್ನು ಜಾರಿ ಮಾಡಿದೆ” ಎಂದು ಅವರು ತಮ್ಮ ಟ್ವೀಟರ್ ಖಾತೆ ಮೂಲಕ ತಿಳಿಸಿದ್ದಾರೆ.  Govt has issued notification to […]

ಅಮರನಾಥ್ ಯಾತ್ರಿಗಳ ಮೇಲೆ ದಾಳಿ: ಲಷ್ಕರ್‍ ಉಗ್ರರ ಕೈವಾಡ, ಒಬ್ಬನ ಗುರುತು ಪತ್ತೆ

ಅಮರನಾಥ್ ಯಾತ್ರಿಗಳ ಮೇಲೆ ದಾಳಿ: ಲಷ್ಕರ್‍ ಉಗ್ರರ ಕೈವಾಡ, ಒಬ್ಬನ ಗುರುತು ಪತ್ತೆ

ಹೊಸದಿಲ್ಲಿ: ಜಮ್ಮು-ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯ ಬಂಟಿಗು ಬಳಿ   ಅಮರನಾಥ್ ಯಾತ್ರಿಗಳ ಮೇಲೆ ದಾಳಿ ನಡೆಸಿದ ಉಗ್ರರ ಪೈಕಿ ಒಬ್ಬನ ಗುರುತು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಅಮರನಾಥ್ ಯಾತ್ರಿಗಳ ಬಸ್‌ ಮೇಲೆ  ಸೋಮವಾರ ಉಗ್ರರು ದಾಳಿ ನಡೆಸಿದ್ದರು. ಈ ಘಟನೆಯಲ್ಲಿ 7 ಜನ ಯಾತ್ರಿಕರು ಸಾವನ್ನಪ್ಪಿದ್ದು,  ಇಬ್ಬರು ಪೊಲೀಸರು ಸೇರಿ 19 ಜನ  ಗಾಯಗೊಂಡಿದ್ದರು. ಮೂವರಿಂದ ಐವರು ಲಷ್ಕರ್‌ ಉಗ್ರರು ಈ ದಾಳಿ ನಡೆಸಿದ್ದು, ಲಷ್ಕರ್‌ ಉಗ್ರ ಇಸ್ಮಾಯಿಲ್ ನೇತೃತ್ವದಲ್ಲೇ ದಾಳಿ ನಡೆದಿದೆ. ಈತ ಲಷ್ಕರ್‌ […]

ಮುಖೇಶ ಅಂಬಾನಿಯ ‘ಅಂಟಿಲಿನಾ’ ಮನೆಯಲ್ಲಿ ಅಗ್ನಿ ಅವಘಡ

ಮುಖೇಶ ಅಂಬಾನಿಯ ‘ಅಂಟಿಲಿನಾ’ ಮನೆಯಲ್ಲಿ ಅಗ್ನಿ ಅವಘಡ

ಮುಂಬೈ: ರಿಲಯನ್ಸ್‌ ಇಂಡಸ್ಟ್ರೀ ಚೇರಮನ್‌ ಮುಖೇಶ್‌ ಅಂಬಾನಿ ಅವರ ಮುಂಬೈನಲ್ಲಿರುವ ವಿಶ್ವದ ಅತಿ ದುಬಾರಿ ಮನೆಯಾದ  ‘ಅಂಟಿಲಿಯಾ’ ದಲ್ಲಿ ಸೋಮವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. 27 ಅಂತಸ್ತಿನ್ನು ಹೊಂದಿರುವ ಈ ಕಟ್ಟಡದ 9ನೇ ಮಹಡಿಯಲ್ಲಿ  4 ಜಿ ಆಂಟೆನಾದಲ್ಲಿ ರಾತ್ರಿ 9ಕ್ಕೆ ಬೆಂಕಿ ಹತ್ತಿಕೊಂಡಿದೆ. ತಕ್ಷಣ ಅಗ್ನಿಯನ್ನು ನಂದಿಸಲಾಗಿದ್ದು, ಹಾವುದೇ ಆಸ್ತಿ-ಪಾಸ್ತಿಗೆ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಅಂಟಿಲಿಯಾ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಮಾಹಿತಿ ರಾತ್ರಿ 9. 4ಕ್ಕೆ ಸಿಕ್ಕಿತು ಕೂಡಲೇ ಅಗ್ನಿ ಶಾಮಕ ಸಿಬ್ಬಂದಿ  ಸ್ಥಳಕ್ಕೆ […]

ಯಾತ್ರಿಗರ ಮೇಲೆ ಉಗ್ರರ ದಾಳಿ: ಭದ್ರತೆ ಕುರಿತು ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದ ಗೃಹ ಸಚಿವ

ಯಾತ್ರಿಗರ ಮೇಲೆ ಉಗ್ರರ ದಾಳಿ: ಭದ್ರತೆ ಕುರಿತು ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದ ಗೃಹ ಸಚಿವ

ಹೊಸದಿಲ್ಲಿ: ಅಮರನಾಥ್ ಯಾತ್ರಿಗರ ಮೇಲೆ ನಡೆದ ಉಗ್ರರ ದಾಳಿ ಹಿನ್ನೆಲೆಯಲ್ಲಿ ಗೃಹ ಸಚಿವ ರಾಜನಾಥ  ಸಿಂಗ್ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಪರಿಶೀಲಿಸಲು  ಇಂದು ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್, ಗೃಹ ಸಚಿವಾಲಯದ ಉನ್ನತ ಅಧಿಕಾರಿಗಳು, ಗುಪ್ತಚರ ಸಂಸ್ಥೆಗಳು ಮತ್ತು ಕೇಂದ್ರ ಅರೆಸೈನಿಕ ಪಡೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮೂಲಗಳ ಪ್ರಕಾರ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ, ಅಮರನಾಥ್ ಯಾತ್ರಿಗಳ ಭದ್ರತೆ ಮತ್ತು ಭವಿಷ್ಯದಲ್ಲಿ ಇಂತಹ ಸಂಭವನೀಯ ದಾಳಿಯನ್ನು ತಡೆಗಟ್ಟುವುದು […]

ಉಪರಾಷ್ಟ್ರಪತಿ ಚುನಾವಣೆ: ವಿಪಕ್ಷಗಳ ಮಹತ್ವದ ಸಭೆ, ನಿತೀಶ ಗೈರು

ಉಪರಾಷ್ಟ್ರಪತಿ ಚುನಾವಣೆ: ವಿಪಕ್ಷಗಳ ಮಹತ್ವದ ಸಭೆ, ನಿತೀಶ ಗೈರು

ಹೊಸದಿಲ್ಲಿ:  ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಹಿನ್ನಲೆಯಲ್ಲಿ  ಇಂದು ಹೊಸದಿಲ್ಲಿಯಲ್ಲಿ ಯುಪಿಎ ಮಿತ್ರಪಕ್ಷಗಳ ಸಭೆ ನಡೆಯಲಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಮಂಗಳವಾರ ಸಭೆ ನಡೆಯಲಿದ್ದು, ಅಭ್ಯರ್ಥಿ ಘೋಷಣೆ ಇಂದೇ ಮಾಡುವ ಸಾಧ್ಯತೆಗಳಿವೆ.  ಕಾಂಗ್ರೆಸ್ ಸೇರಿದಂತೆ ಆರ್ಜೆಡಿ, ಟಿಎಂಸಿ, ಸಿಪಿಎಮ್, ಡಿಎಂಕೆ, ಎನ್ಸಿಪಿ, ಎಸ್ಪಿ ಮತ್ತು ಬಿಎಸ್ಪಿ ಸೇರಿದಂತೆ ಇತರ ಪಕ್ಷಗಳ ನಾಯಕರು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಬಿಹಾರದ ಮೈತ್ರಿ ಕೂಟದಲ್ಲಿ ಗುರುತಿಸಿಕೊಂಡಿರುವ ನಿತೀಶ್ ಕುಮಾರ್ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯಲಿರುವ ಸಭೆಗೆ ಗೈರಾಗಲಿದ್ದು,. ಕೆಸಿ ತ್ಯಾಗಿ ಹಾಗೂ […]