ಜಮ್ಮು ಕಾಶ್ಮೀರ:ಅನಂತನಾಗ ಜಿಲ್ಲೆಯಲ್ಲಿ ಅಮರನಾಥ ಯಾತ್ರಿಗಳ ಬಸ್ ಮೇಲೆ ಉಗ್ರರ ದಾಳಿ, 7 ಜನರ ಹತ್ಯೆ

ಜಮ್ಮು ಕಾಶ್ಮೀರ:ಅನಂತನಾಗ ಜಿಲ್ಲೆಯಲ್ಲಿ ಅಮರನಾಥ ಯಾತ್ರಿಗಳ ಬಸ್ ಮೇಲೆ ಉಗ್ರರ ದಾಳಿ,  7 ಜನರ ಹತ್ಯೆ

  ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ 3 ಪ್ರತ್ಯೇಕ ‌ಸ್ಥಳಗಳಲ್ಲಿ  ಭಯೋತ್ಪಾದಕರ ದಾಳಿ ನಡೆದಿದ್ದು, 7 ಯಾತ್ರಾರ್ಥಿಗಳು ಮೃತಪಟ್ಟಿದ್ದರೆ, 12 ಯಾತ್ರಿಗಳು ಗಾಯಗೊಂಡಿದ್ದಾರೆ.    ಬ್ಯಾಟೆಂಗೂ ಹಾಗೂ  ಖಾನಾಬಾಲ್ ಗಳಲ್ಲಿ ಶಸ್ತ್ರಸಜ್ಜಿದ ಭಯೋತ್ಪಾದಕರ ಗುಂಪು ಪೊಲೀಸ್ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿದ್ದು, ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಯಾತ್ರಾರ್ಥಿಗಳಿದ್ದ ಬಸ್ ಸಿಲುಕಿದ್ದು 7 ಯಾತ್ರಿಗಳು ಭಯೋತ್ಪಾದಕರ ದಾಳಿಗೆ ಗುರಿಯಾಗಿದ್ದಾರೆ ಎಂದು ಕಾಶ್ಮೀರದ ಐಜಿಪಿ ಮುನೀರ್ ಖಾನ್ ತಿಳಿಸಿದ್ದಾರೆ.    ಇಬ್ಬರು ಯಾತ್ರಿಗಳು ಸ್ಥಳದಲ್ಲೇ ಮೃತಪಟ್ಟಿದ್ದರೆ, […]

ಮೂವರು ಕೇಂದ್ರ ಸಚಿವರು ಚೀನಾ ಪ್ರವಾಸ ಮಾಡಿದ್ದೇಕೆ?: ರಾಹುಲ್ ಗಾಂಧಿ ಪ್ರಶ್ನೆ

ಮೂವರು ಕೇಂದ್ರ ಸಚಿವರು ಚೀನಾ ಪ್ರವಾಸ ಮಾಡಿದ್ದೇಕೆ?: ರಾಹುಲ್ ಗಾಂಧಿ ಪ್ರಶ್ನೆ

    ಹೊಸದಿಲ್ಲಿ: “ಸಾವಿರಾರು ಚೀನಿ ಸೈನಿಕರು ಭಾರತದ ಗಡಿಯೊಳಗೆ ನುಸುಳಿರುವಾಗ ತಂತಿಯ ಮೇಲೆ ಕುಳಿತು ಅತ್ತಿತ್ತ ನೋಡುವ ವ್ಯಕ್ತಿಯಾಗಲಾರೆ” ಎಂದು ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಟ್ವೀಟ್ ಮಾಡಿದ್ದಾರೆ. ಚೀನಾ ರಾಯಭಾರಿ ಭೇಟಿ ವಿಚಾರವಾಗಿ ಚರ್ಚೆಗಳು ಭುಗಿಲ್ಲೆದ್ದಸಮಯದಲ್ಲಿ ರಾಹುಲ್ ಗಾಂಧಿ ಅವರು ಸ್ಪಷ್ಟನೆ ನೀಡಿದ್ದು, ಗಂಭೀರ ಸಮಸ್ಯೆಗಳ ಕುರಿತು ಚರ್ಚಿಸುವುದು ನನ್ನ ಜವಾಬ್ದಾರಿ ಎಂದು ಹೇಳಿದ್ದಾರೆ. ಜರ್ಮನ್ ನಲ್ಲಿ ಜಿ-20 ದೇಶಗಳ ಶೃಂಗಸಭೆಯ ಸಂದರ್ಭ ಬ್ರಿಕ್ಸ್ ನಾಯಕರ ಅನೌಪಚಾರಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ […]

ರಾಹುಲಗಾಂಧಿ- ಚೀನಾ ರಾಯಭಾರಿ ಭೇಟಿ: ಕಾಂಗ್ರೆಸ್ ಸ್ಪಷ್ಟೀಕರಣ

ರಾಹುಲಗಾಂಧಿ- ಚೀನಾ ರಾಯಭಾರಿ ಭೇಟಿ:  ಕಾಂಗ್ರೆಸ್ ಸ್ಪಷ್ಟೀಕರಣ

ಹೊಸದಿಲ್ಲಿ: ಕಾಂಗ್ರೆಸ್ ಉಪಾಧ್ಯಕ್ಷ  ರಾಹುಲ್ ಗಾಂಧಿ ಅವರು ಚೀನಾದ ರಾಯಭಾರಿ ಲುವೊ ಝಾಹೋಯಿ ಅವರನ್ನಷ್ಟೇ ಅಲ್ಲ, ಭೂತಾನ್ ರಾಯಭಾರಿ ಮತ್ತು ಮಾಜಿ ಭದ್ರತಾ ಸಲಹೆಗಾರ ಶಿವಶಂಕರ ಮೆನನ್ ಅವರನ್ನೂ ಭೇಟಿಯಾಗಿದ್ದಾರೆ  ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಈ ಕುರಿತು ಹೇಳಿಕೆ ನೀಡಿದ್ದಾರೆ. ಚೀನಾದ ರಾಯಭಾರಿ ಲುವೊ ಝಾಹೋಯಿ ಅವರಷ್ಟೇ ಅಲ್ಲ, ಬೇರೆ ಬೇರೆ ರಾಷ್ಟ್ರಗಳ ರಾಯಭಾರಿಗಳು ಕಾಂಗ್ರೆಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಕಾಲಕಾಲಕ್ಕೆ ಸೌಜನ್ಯಕ್ಕಾಗಿ ಭೇಟಿಯಾಗುತ್ತಾರೆ.  ಜಿ 5 ರಾಷ್ಟ್ರಗಳು ಮತ್ತು ನೆರೆಯ […]

ಚೆನ್ನೈ ಕಡಲ ತೀರದಲ್ಲಿ ಭಾರತ, ಜಪಾನ, ಅಮೆರಿಕ ನೌಕಾ ಸೇನೆಗಳ ಜಂಟಿ ಸಮರಾಭ್ಯಾಸ ಆರಂಭ

ಚೆನ್ನೈ ಕಡಲ ತೀರದಲ್ಲಿ ಭಾರತ, ಜಪಾನ, ಅಮೆರಿಕ ನೌಕಾ ಸೇನೆಗಳ ಜಂಟಿ ಸಮರಾಭ್ಯಾಸ ಆರಂಭ

1992ರಿಂದ 2017ರವರೆಗೆ ಸಾಗಿದ ಮಲಬಾರ್ ಸರಣಿಯ ಸಮರಾಭ್ಯಾಸ ಚೆನ್ನೈ: ಮಲಬಾರ – 2017 ರ 21 ನೇ ಆವೃತ್ತಿಯ ನೌಕಾ ಸೇನೆಗಳ ಜಂಟಿ ಸಮರಾಭ್ಯಾಸ  ಚೆನ್ನೈನ ಬಂಗಾಳ ಕೊಲ್ಲಿಯಲ್ಲಿ ಸೋಮವಾರ ಪ್ರಾರಂಭವಾಗಿದೆ. ಭಾರತ, ಅಮೇರಿಕ ಮತ್ತು ಜಪಾನ್ ನ ಮೂರು ನೌಕಾಪಡೆಗಳ ಕಾರ್ಯಸಾಮರ್ಥ್ಯ ಹೆಚ್ಚಿಸುವುದು, ಕಡಲ ಭದ್ರತೆಯ ಕಾರ್ಯಾಚರಣೆಗಳು ಸೇರಿ  ಅನೇಕ ವಿಭಾಗಗಳಲ್ಲಿ ಈ ನೌಕಾಪಡೆಗಳ ಸಾಮರ್ಥ್ಯ  ಮತ್ತು ಚೈತನ್ಯದ  ಸಂಬಂಧವನ್ನು ಗಟ್ಟಿಗೊಳಿಸುವುದು ಈ ಅಭ್ಯಾಸದ ಉದ್ದೇಶವಾಗಿದೆ. ಮಾಲಾಬಾರ್-2017  ಚಟುವಟಿಕೆಗಳು ಚೆನ್ನೈನ ಕಡಲತೀರದಲ್ಲಿ 10 ರಿಂದ 13 […]

ಪ್ರತಿಪಕ್ಷಗಳ ಮಹಾಮೈತ್ರಿ ಮುರಿಯಲು ಬಿಜೆಪಿಯಿಂದ ಅಸಾಧ್ಯ: ಶರದ ಯಾದವ

ಪ್ರತಿಪಕ್ಷಗಳ ಮಹಾಮೈತ್ರಿ  ಮುರಿಯಲು ಬಿಜೆಪಿಯಿಂದ ಅಸಾಧ್ಯ: ಶರದ ಯಾದವ

  ಹೊಸದಿಲ್ಲಿ: ಬಿಹಾರ ರಾಜ್ಯದಲ್ಲಿರುವ   ಆರ್ ಜೆಡಿ ಪಕ್ಷದ ಜೊತೆ ಮೈತ್ರಿಯನ್ನು ಬೆಂಬಲಿಸುತ್ತ, ಜೆಡಿಯು ಹಿರಿಯ ನಾಯಕ  ಹಿರಿಯ ನಾಯಕ ಶರದ ಯಾದವ ಒಂದಾಗಿರುವ ಪ್ರತಿಪಕ್ಷಗಳ  ಒಕ್ಕೂಟವನ್ನು ಬಿಜೆಪಿಯಿಂದ ಮುರಿಯಲು ಅಸಾಧ್ಯ ಎಂದು ಹೇಳಿದ್ದಾರೆ.   ಆರ್ ಜೆಡಿ ಅಧ್ಯಕ್ಷ ಲಾಲೂ ಪ್ರಸಾದ ಯಾದವ ಪ್ರತಿಪಕ್ಷಗಳ ಮಹಾಮೈತ್ರಿಯ ಅವಿಭಾಜ್ಯ ಅಂಗ ಎಂದು ಪ್ರಪಾದಿಸುತ್ತ, ಲಾಲೂ ಯಾದವ ಮತ್ತು ಅವರ ಕುಟುಂಬದ ವಿರುದ್ಧದ ತಂತ್ರಗಾರಿಕೆ ನಡೆಸಿ  ಬಿಜೆಪಿ ಪ್ರತಿಪಕ್ಷಗಳ ಮಹಾಮೈತ್ರಿಯನ್ನು ಮುರಿಯಲು ಬಯಸಿದೆ, ಆದರೆ ಅದು ಅಸಾಧ್ಯವೆಂದು ಶರದ ಯಾದವ […]

ಭಾರಿ ಮಳೆಗೆ ಉತ್ತರ, ಪೂರ್ವ ಭಾರತ ತತ್ತರ: 45 ಬಲಿ, ನಿರಾಶ್ರಿತರಾದ ಲಕ್ಷಾಂತರ ಜನ

ಭಾರಿ ಮಳೆಗೆ ಉತ್ತರ, ಪೂರ್ವ ಭಾರತ ತತ್ತರ: 45 ಬಲಿ,  ನಿರಾಶ್ರಿತರಾದ ಲಕ್ಷಾಂತರ ಜನ

ಹೊಸದಿಲ್ಲಿ: ಉತ್ತರ ಮತ್ತು ಪೂರ್ವ ಭಾರತದ ರಾಜ್ಯಗಳಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಪ್ರವಾಹ ಸ್ಥಿತಿ ತಲೆದೋರಿದ್ದು, ಜನಜೀವನ ತೀವ್ರ ಅಸ್ತವ್ಯಸ್ತಗೊಂಡಿದೆ. ಆಸ್ಸಾಂನಲ್ಲಿ ಪ್ರವಾಹಕ್ಕೆ 26 ಮಂದಿ, ಉತ್ತರ ಪ್ರದೇಶ ಹಾಗೂ ಬಿಹಾರದ ಹಲವೆಡೆ  ಸಿಡಿಲು ಬಡಿದು 19 ಜನ ಮೃತಪಟ್ಟಿದ್ದಾರೆ. ಆಸ್ಸಾಂನಲ್ಲಿ ನಾನಾ ಕಡೆ ಉಂಟಾಗಿರುವ ಪ್ರವಾಹ ಸ್ಥಿತಿಯಿಂದ 5 ಲಕ್ಷಕ್ಕೂ ಹೆಚ್ಚು ಜನ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.  ಬಿಹಾರದಲ್ಲಿ 16 ಜನ ಮತ್ತು ಉತ್ತರ ಪ್ರದೇಶದಲ್ಲಿ 3 ಜನ  ಸಿಡಿಲು […]

ನಾಗ್ಪುರ್‍: ದೋಣಿ ಮುಗುಚಿ 8 ಯುವಕರು ನೀರುಪಾಲು

ನಾಗ್ಪುರ್‍: ದೋಣಿ ಮುಗುಚಿ 8 ಯುವಕರು ನೀರುಪಾಲು

ನಾಗ್ಪುರ್‌: ದೋಣಿ ಮುಗುಚಿ ಬಿದ್ದ ಪರಿಣಾಮ 8 ಮಂದಿ ಯುವಕರು ನೀರು ಪಾಲಾದ ಘಟನೆ  ಮಹಾರಾಷ್ಟ್ರದ ನಾಗ್ಪುರ್‌ ಸಮೀಪದ ವೇನಾ ಜಲಾಶಯದಲ್ಲಿ ನಡೆದಿದೆ. ಯುವಕರ ತಮಡ ಜಾಲಿ ರೈಡ್‍ಗೆ ಇಲ್ಲಿನ ಜಲಾಶಯಕ್ಕೆ ರವಿವಾರ ಸಂಜೆ ಆಗಮಿಸಿದ್ದರು. ಈ ವೇಳೆ ನೀರಿನಲ್ಲಿ ಇವರಿದ್ದ ದೋಣಿ ಮಗುಚಿ ಬಿದ್ದಿದೆ. 11 ಯುವಕರಲ್ಲಿ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದು, 8 ಯುವಕರು ಸಾವನ್ನಪ್ಪಿದ್ದಾರೆ. ಒಬ್ಬನ ಮೃತ ದೇಹ ಪತ್ತೆಯಾಗಿದ್ದು, ಉಳಿದ 7 ಯುವಕರಿಗಾಗಿ ಶೋಧ ನಡೆದಿದೆ. ಈ ದೋಣಿ ದುರಂತ ಸಂಭವಿಸುವ ಮುನ್ನ […]

ಉಗ್ರ ವಾನಿ ಕೊಂಡಾಡುವಿಕೆ: ಪಾಕಿಸ್ತಾನ ವಿರುದ್ಧ ಕಿಡಿಕಾರಿದ ಕಾರ್ಯದರ್ಶಿ ಗೋಪಾಲ್ ಬಾಗ್ಲೆ

ಉಗ್ರ ವಾನಿ ಕೊಂಡಾಡುವಿಕೆ: ಪಾಕಿಸ್ತಾನ ವಿರುದ್ಧ ಕಿಡಿಕಾರಿದ ಕಾರ್ಯದರ್ಶಿ ಗೋಪಾಲ್ ಬಾಗ್ಲೆ

  ಹೊಸದಿಲ್ಲಿ: ಕಳೆದ ವರ್ಷ ಜು 8 ರಂದು ಭಾರತೀಯ ಸೇನೆಯಿಂದ ಹತ್ಯೆಗೀಡಾದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಮುಖಂಡ ಬುರ್ಹಾನ್ ವಾನಿಯನ್ನು ಪಾಕಿಸ್ತಾನ ಕೊಂಡಾಡುವಿಕೆಯನ್ನು ಕಿಡಿಕಾರಿದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಗೋಪಾಲ್ ಬಾಗ್ಲೆ   ಇಸ್ಲಾಮಾಬಾದ್ ಪ್ರಾಯೋಜಕತ್ವದ ಭಯೋತ್ಪಾದನೆಯನ್ನು ಇಡೀ ವಿಶ್ವ ಖಂಡಿಸಬೇಕಿದೆ ಎಂದು ಭಾನುವಾರ ಹೇಳಿದ್ದಾರೆ.   ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ನಿಷೇಧಿತ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಕೈಪಿಡಿಗಳನ್ನು ಓದುತ್ತಿದ್ದಾರೆ. ಇದೀಗ ಪಾಕಿಸ್ತಾನದ ಸಿಒಎಎಸ್ ಗಳು ಬುರ್ಹಾನ್ ವಾನಿಯನ್ನು  ಕೊಂಡಾಡುತ್ತಿದ್ದಾರೆ.  ವಾನಿಯನ್ನು ಹೊಗಳುವ ಮೂಲಕ […]

ಪಶ್ಚಿಮ ಬಂಗಾಲ ಹಿಂಸಾಚಾರ: ಸಿಕ್ಕಿಂಗೆ ಗೃಹ ಸಚಿವರಿಂದ ಭದ್ರತೆ ಭರವಸೆ

ಪಶ್ಚಿಮ ಬಂಗಾಲ ಹಿಂಸಾಚಾರ:  ಸಿಕ್ಕಿಂಗೆ ಗೃಹ ಸಚಿವರಿಂದ ಭದ್ರತೆ ಭರವಸೆ

ಹೊಸದಿಲ್ಲಿ:  ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಉಂಟಾದ ಹಿನ್ನೆಲೆಯಲ್ಲಿ, ನೆರೆ ರಾಜ್ಯ ಸಿಕ್ಕಿಂ ಮುಖ್ಯಮಂತ್ರಿಗೆ  ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್  ಸಂಪೂರ್ಣ ಭದ್ರತೆ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.  ಸಿಕ್ಕಿಂ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗರೊಂದಿಗೆ ಮಾತನಾಡಿದ್ದು, ರಾಷ್ಟ್ರೀಯ ಹೆದ್ದಾರಿ 10 ರ ಸುರಕ್ಷತೆ ಮತ್ತು ಭದ್ರತೆಯನ್ನು  ಖಾತ್ರಿಪಡಿಸಿದ್ದೇನೆ ಎಂದು ತಿಳಿಸಿದ ಸಿಂಗ್, ರಾಜ್ಯದ ಜನರನ್ನು ಯಾವುದೇ ವಿಫತ್ತುಗಳಿಂದ  ರಕ್ಷಿಸಲು ಸಾಧ್ಯವಾಗುವಂತೆ ಎಲ್ಲ ರೀತಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.   “ರಾಜ್ಯದ ಭದ್ರತಾ ಪರಿಸ್ಥಿತಿ ಮತ್ತು ಪಶ್ಚಿಮ ಬಂಗಾಲದ […]

‘ಹಿಂದಿ ಮೀಡಿಯಂ’ ಚಿತ್ರದ ಪ್ರೇರಣೆ: ಸರ್ಕಾರಿ ಶಾಲೆಗೆ ಮಗಳನ್ನು ಸೇರಿಸಿದ ಐಎಎಸ್ ಅಧಿಕಾರಿ !

‘ಹಿಂದಿ ಮೀಡಿಯಂ’  ಚಿತ್ರದ ಪ್ರೇರಣೆ: ಸರ್ಕಾರಿ ಶಾಲೆಗೆ ಮಗಳನ್ನು ಸೇರಿಸಿದ ಐಎಎಸ್ ಅಧಿಕಾರಿ !

ಬಲರಾಂಪುರ (ಛತ್ತೀಸ್‌ಗಢ್‌):  ‘ಹಿಂದಿ ಮೀಡಿಯಂ’ ಚಿತ್ರದಿಂದ ಪ್ರೇರಣೆ ಪಡೆದು ಬಲರಾಂಪುರ ಜಿಲ್ಲಾಧಿಕಾರಿ ಅವಿನಾಶ್‌ ಕುಮಾರ್‌  ತಮ್ಮ ಐದು ವರ್ಷದ ಮಗಳನ್ನು ಸರ್ಕಾರಿ ಪ್ರಾಥಮಿಕ ಶಾಲೆಗೆ  ಸೇರಿಸಿದ ಸುದ್ದಿ ವಾಟ್ಸಪ್ ನಲ್ಲಿ ಈಗ ವೈರಲ್ ಆಗಿದೆ.  ಐಎಎಸ್ ಅಧಿಕಾರಿಯ ಈ ಮಾದರಿ ಶೈಕ್ಷಣಿಕ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ‘ಹಿಂದಿ ಮೀಡಿಯಂ’  ಚಿತ್ರದಲ್ಲಿ ಬಾಲಿವುಡ್ ನಟ ಇರ್ಫಾನ್‌ ಖಾನ್‌ ಉನ್ನತ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಅಧಿಕಾರಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸುತ್ತಾರೆ. ಪ್ರತಿಷ್ಠಿತ ಶಾಲೆಗಳ ಬೆನ್ನಿಗೆ ಬಿದ್ದು,  […]