ರಾಜನಾಥ ಸಿಂಗ್ ಭೇಟಿ ಸಮಯದಲ್ಲಿ ಮಿಜೋರಾಂನಲ್ಲಿ ಬೀಫ್ ಪಾರ್ಟಿ

ರಾಜನಾಥ ಸಿಂಗ್ ಭೇಟಿ ಸಮಯದಲ್ಲಿ ಮಿಜೋರಾಂನಲ್ಲಿ ಬೀಫ್ ಪಾರ್ಟಿ

ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ಭದ್ರತೆ ಕುರಿತಂತೆ  ಮಿಜೋರಾಂಗೆ ಭೇಟಿ  ಐಝಾಲ್: ಕೇಂದ್ರ ಸರ್ಕಾರದ  ವಧೆಗಾಗಿ  ಮಾರುಕಟ್ಟೆಯಲ್ಲಿ ಜಾನುವಾರು ಮಾರಾಟ ನಿಷೇಧ ಕಾಯ್ದೆಗೆ ಮಿಜೋರಾಂನಲ್ಲಿ ತೀವ್ರ ಸ್ವರೂಪದ ಆಕ್ರೋಶ ವ್ಯಕ್ತವಾಗಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭೇಟಿ ನೀಡಿದ ಸಮಯದಲ್ಲಿ ಬೀಫ್ ಪಾರ್ಟಿ ನಡೆಸಿ ಕೇಂದ್ರದ ವಿರುದ್ಧ ಪ್ರತಿಭಟನೆ ಸೋಮವಾರ ನಡೆದಿದೆ .   ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ಭದ್ರತೆ ಕುರಿತಂತೆ ಸೇನೆಯ ಅಧಿಕಾರಿಗಳೊಂದಿಗೆ  ಚರ್ಚೆ ನಡೆಸಲು ಮಿಜೋರಾಂನಲ್ಲಿರುವ ರಾಜಭವನಕ್ಕೆ ಭೇಟಿ ನೀಡಿದ್ದ  ವೇಳೆ ಸಮೀಪದಲ್ಲಿರುವ ವನಪಾ ಹಾಲದಲ್ಲಿ ಕೂಡಿದ […]

ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಆಶಾ ಕಾರ್ಯಕರ್ತರಿಂದ ಪ್ರತಿಭಟನೆ

ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಆಶಾ ಕಾರ್ಯಕರ್ತರಿಂದ ಪ್ರತಿಭಟನೆ

ಮಾನ್ವಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ವೇತನ 10,000 ರೂ. ನಿಗದಿ ಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯಕ್ತ ಆಶಾ ಕಾರ್ಯಕರ್ತರ ಸಂಘದಿಂದ ವೈದ್ಯಾಧಿಕಾರಿ ಡಾ. ಚಂದ್ರಶೇಖರಯ್ಯ ಅವರಿಗೆ ಮನವಿ ಸಲ್ಲಿಸಿದರು. ಆಶಾ ಕಾರ್ಯಕರ್ತೆಯರ ಪ್ರತಿ ತಿಂಗಳ ವೇತನ ಸರಿಯಾಗಿ ಕೈ ಸೇರುತ್ತಿಲ್ಲ. ಕಳೆದ 3-4 ತಿಂಗಳಿಂದÉ ವೇತನವಿಲ್ಲ. ಕಳೆದ ವರ್ಷ ಕೆಲವರಿಗೆ ತಿಂಗಳಿಗೆ ರೂ.400ಗಳಿಂದ -1000 ಮಾತ್ರ ವೇತನ ಬಂದಿರುತ್ತದೆ. ಕೆಲವರಿಗೆ ಮ್ಯಾಚಿಂಗ್ ಗ್ರಾಂಟ್ ಬಂದಿರುವುದಿಲ್ಲ. ಹೀಗಾಗಿ ತುಂಬಾ ತೊಂದರೆಯಾಗುತ್ತಿದ್ದು, ಕೂಡಲೇ […]

ರೈತರ ಸಾಲ ಮನ್ನಾಕ್ಕೆ ಸಹಾಯವಿಲ್ಲ, ಬೇಕಿದ್ದರೆ ರಾಜ್ಯಗಳೇ ಹಣ ಹೊಂದಿಸಿಕೊಳ್ಳಲಿ: ಕೇಂದ್ರ ಸಚಿವ ಅರುಣ ಜೇಟ್ಲಿ

ರೈತರ ಸಾಲ ಮನ್ನಾಕ್ಕೆ ಸಹಾಯವಿಲ್ಲ, ಬೇಕಿದ್ದರೆ ರಾಜ್ಯಗಳೇ ಹಣ ಹೊಂದಿಸಿಕೊಳ್ಳಲಿ: ಕೇಂದ್ರ ಸಚಿವ ಅರುಣ ಜೇಟ್ಲಿ

ಹೊಸದಿಲ್ಲಿ: ಕೇಂದ್ರ ಸರ್ಕಾರ  ರೈತರ ಸಾಲ ಮನ್ನಾ ಮಾಡಲು ಯಾವುದೇ ರೀತಿಯ ಸಹಾಯ ಮಾಡುವುದಿಲ್ಲ. ಸಾಲ ಮನ್ನಾ ಬಯಸಿದರೆ ಆಯಾ ರಾಜ್ಯ ಸರ್ಕಾರಗಳೇ ಹಣ ಹೊಂದಿಸಿಕೊಳ್ಳಬೇಕು ಎಂದು ಕೇಂದ್ರ  ಹಣಕಾಸು ಸಚಿವ ಅರುಣ್‌‌ ಜೇಟ್ಲಿ ಖಡಕ್ ಆಗಿ ಹೇಳಿದ್ದಾರೆ. ಮಹಾರಾಷ್ಟ್ರ ಸರ್ಕಾರ ರೈತರ ಸಾಲ ಮನ್ನಾ ಘೋಷಣೆ ಮಾಡಿದ ಬೆಳವಣಿಗೆಗೆಗೆ ಹೊಸದಿಲ್ಲಿಯಲ್ಲಿ ಸೋಮವಾರ ಪ್ರತಿಕ್ರಿಯೆ ನೀಡಿದ ಕೇಂದ್ರ ಹಣಕಾಸು ಸಚಿವರು, ಕೇಂದ್ರ ಸರ್ಕಾರ ಸಾಲ ಮನ್ನಾ ವಿಚಾರದಲ್ಲಿ ನೆರವು ನೀಡುವುದಿಲ್ಲ. ರಾಜ್ಯ ಸರ್ಕಾರಗಳು ಬೇಕಾದರೆ ಹಣ ಹೊಂದಿಸಿಕೊಂಡು […]

ಪ್ರಧಾನಿ ಮೋದಿ ಅಮೆರಿಕ ಪ್ರವಾಸ: ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಮೊದಲ ಭೇಟಿ

ಪ್ರಧಾನಿ ಮೋದಿ ಅಮೆರಿಕ ಪ್ರವಾಸ: ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಮೊದಲ ಭೇಟಿ

ಜೂನ್ 25 ಮತ್ತು 26 ಕ್ಕೆ ಅಮೆರಿಕ ಪ್ರವಾಸಕ್ಕೆ ತೆರಳಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೊಸದಿಲ್ಲಿ:  ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಮಂತ್ರಣದ ಮೇರೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಾಷಿಂಗ್ಟನ್ ಡಿ.ಸಿ.ಗೆ ಜೂನ್ 25-26 ರಂದು ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ ಅವರು ಅಧ್ಯಕ್ಷ ಟ್ರಂಪ್ ಜತೆಗಿನ ಮೊದಲ ಸಭೆ ಇದಾಗಲಿದ್ದು, ಟ್ರಂಪ್ ಅಧಿಕಾರ ವಹಿಸಿಕೊಂಡ  ಬಳಿಕ ಕನಿಷ್ಠ ಮೂರು ಬಾರಿ ದೂರವಾಣಿ ಮುಖಾಂತರ  ಪ್ರಧಾನಿ ಮೋದಿ ಜೊತೆ ಮಾತನಾಡಿದ್ದಾರೆ. ಪ್ಯಾರಿಸ್ ಹವಾಮಾನ […]

ಮಹಾರಾಷ್ಟ್ರ ಸರ್ಕಾರದಿಂದ ರೈತರ ಸಂಪೂರ್ಣ ಸಾಲ ಮನ್ನಾ ಘೋಷಣೆ

ಮಹಾರಾಷ್ಟ್ರ ಸರ್ಕಾರದಿಂದ ರೈತರ ಸಂಪೂರ್ಣ ಸಾಲ ಮನ್ನಾ ಘೋಷಣೆ

ಮುಂಬೈ: ರೈತರ  ಪ್ರತಿಭಟನೆಗೆ ಮಣಿದಿರುವ ಮಹಾರಾಷ್ಟ್ರ ಸರ್ಕಾರ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಭಾನುವಾರ ನಿರ್ಧರಿಸಿದೆ. ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಕಳೆದ 13 ದಿನಗಳಿಂದ ಮಹಾರಾಷ್ಟ್ರದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆಯುವ ಮೊದಲೇ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ರೈತರ ಸಾಲ ಮನ್ನಾ ಘೋಷಿಸಿದರು.  ‘ಮಹಾರಾಷ್ಟ್ರದ ಇತಿಹಾಸದಲ್ಲಿ ಇದೊಂದು ಅತಿ ದೊಡ್ಡ ಸಾಲ ಮನ್ನಾ. ಈ ವಿಚಾರದಲ್ಲಿ ಕಾಂಗ್ರೆಸ್, ಎನ್‌ಸಿಪಿ ಮತ್ತು ಇತರ ಪಕ್ಷಗಳಿಗೆ ನನ್ನ ಸವಾಲಿದೆ’ ಎಂದು ಫಡಣವೀಸ್ ಹೇಳಿದ್ದಾರೆ. ಮಹಾರಾಷ್ಟ್ರದ […]

ಉತ್ತರ ಪ್ರದೇಶ: ಕಾಲುವೆೆಗೆ ಉರುಳಿದ ಇನ್ನೋವಾ ಕಾರು, 10 ಜನರ ದುರ್ಮರಣ

ಉತ್ತರ ಪ್ರದೇಶ: ಕಾಲುವೆೆಗೆ ಉರುಳಿದ ಇನ್ನೋವಾ ಕಾರು, 10 ಜನರ ದುರ್ಮರಣ

ಉತ್ತರ ಪ್ರದೇಶ: ಮುಥುರಾ, ಭರತ್‍ಪುರ ರಸ್ತೆಯ ಮಂಗೋರ್‍ ಸಮೀಪ ಕಾರು ಕಾಲುವಗೆ ಉರಳಿದ ಪರಿಣಾಮ 10 ಜನ ಸಾವನ್ನಪ್ಪಿದ ಘಟನೆ ನಡೆದಿದೆ. ಪೊಲೀಸರು ಮೃತ ದೇಹಗಳನ್ನು ಹೊರ ತೆಗೆದಿದ್ದು, ಮೃತರನ್ನು ಬರೇಲಿಯ ಸುಭಾಷ್ ನಗರದ ರಾಜೀವ್ ಕಾಲೊನಿ ನಿವಾಸಿಗಳಾದ ಮಹೇಶ್ ಶರ್ಮಾ, ದೀಪಿಕಾ ಶರ್ಮಾ, ಪೂನಂ, ಹಾರ್ದಿಕ, ರಿತಿಕ್, ರೋಹನ್, ಖುಷ್ಬೊ, ಹಿಮಾಂಶು ಮತ್ತು ಸುರಭಿ ಎಂದು ಗುರುತಿಸಲಾಗಿದೆ. ದೇವರ ದರ್ಶನ ಪಡೆದು ಉತ್ತರ ಪ್ರದೇಶ ಬರೇಲಿಗೆ ತೆರಳುತ್ತಿದ್ದರು. ಬೇರೆ ವಾಹನ ಓವರ್‍ಟೇಕ್ ಮಾಡಲು ಹೋಗಿ   ಚಾಲಕ […]

ಭೀಂಬರ್ ಗ್ಯಾಲಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕ್, ದಿಟ್ಟ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ

ಭೀಂಬರ್ ಗ್ಯಾಲಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕ್, ದಿಟ್ಟ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ

ರಜೌರಿ:  ಭಾನುವಾರ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಭೀಂಬರ್ ಗ್ಯಾಲಿ ಸೆಕ್ಟರ್ನಲ್ಲಿ ಪಾಕಿಸ್ತಾನವು ಮತ್ತೇ ಕದನ ವಿರಾಮ ಉಲ್ಲಂಘಿಸಿದ ಬಳಿಕ ಭಾರತೀಯ ಸೇನೆಯು ಬಲವಾದ ಪ್ರತಿಕ್ರಿಯೆ ನೀಡುವ ಮೂಲಕ ದಿಟ್ಟ ಪ್ರತ್ಯುತ್ತರ ನೀಡಿದೆ. ಭೀಂಬರ್ ಗ್ಯಾಲಿ ವಲಯದ ನಿಯಂತ್ರಣ ರೇಖೆಯ (LOC) ಉದ್ದಕ್ಕೂ 9.45 ಎ.ಎಂ.ನಿಂದ ಪಾಕಿಸ್ತಾನ್ ಸೈನ್ಯವು ಸಣ್ಣ ಶಸ್ತ್ರಾಸ್ತ್ರ ಮತ್ತು ಆಟೋಮ್ಯಾಟಿಕ್ಸ್ನ ಮೂಲಕ  ಗುಂಡು ಹಾರಿಸುತ್ತಿದೆ. ಭಾರತೀಯ ಸೇನೆ ಪಡೆಗಳು ಪಾಕಿಸ್ತಾನದ ಗುಂಡಿನ ದಾಳಿಗೆ   ಪರಿಣಾಮಕಾರಿಯಾದ ಪ್ರತೀಕಾರ ನೀಡುತ್ತಿದೆ.   Source: […]

ನಿತ್ಯ ತೈಲಬೆಲೆ ಪರಿಷ್ಕರಣೆ: ಜೂನ್ 24 ರಿಂದ ಪೆಟ್ರೋಲ್‌ ವರ್ತಕರ ಅನಿರ್ಧಿಷ್ಟ ಧರಣಿ

ನಿತ್ಯ ತೈಲಬೆಲೆ ಪರಿಷ್ಕರಣೆ: ಜೂನ್ 24 ರಿಂದ ಪೆಟ್ರೋಲ್‌ ವರ್ತಕರ ಅನಿರ್ಧಿಷ್ಟ ಧರಣಿ

ಜೂನ್‌ 16 ರಂದು  ಸಾಂಕೇತಿಕ ಮುಷ್ಕರ “ನೊ ಪರ್ಚೇಸ್ ನೋ ಸೆಲ್”  ಪ್ರತಿಭಟನೆ ನಡೆಸಲು  ಆಲ್ ಇಂಡಿಯಾ  ಪೆಟ್ರೋಲಿಯಂ ವರ್ತಕರ ಸಂಘ  ತೀರ್ಮಾನ  ಹೊಸದಿಲ್ಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲಬೆಲೆಗೆ ಅನುಗುಣವಾಗಿ ನಿತ್ಯವೂ ಬೆಲೆ ಪರಿಷ್ಕರಣೆ ಮಾಡುವ ಯೋಜನೆ ವಿರೋಧಿಸಿ ಜೂನ್‌ 24 ರಿಂದ ಅನಿರ್ಧಿಷ್ಟ ಧರಣಿ ನಡೆಸಲಾಗುವುದು ಎಂದು ಆಲ್ ಇಂಡಿಯಾ  ಪೆಟ್ರೋಲಿಯಂ  ವರ್ತಕರ ಫೆಡರೇಷನ್‌ ನಿರ್ಧರಿಸಿದೆ. “ಇಡೀ ದೇಶದ ವರ್ತಕರು ಪೆಟ್ರೋಲ್ ಬೆಲೆಗಳ ದಿನನಿತ್ಯದ ಪರಿಷ್ಕರಣೆ ನಿರ್ಧಾರವನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ  ಇಲ್ಲದಿದ್ದರೆ ಜೂನ್ 16 ರಂದು […]

ಭಯೋತ್ಪಾದಕರನ್ನು ಪತ್ತೆ ಹಚ್ಚಲು ವಾಲ್ ರಾಡಾರ್ ಬಳಕೆ

ಭಯೋತ್ಪಾದಕರನ್ನು ಪತ್ತೆ ಹಚ್ಚಲು ವಾಲ್ ರಾಡಾರ್  ಬಳಕೆ

ಹೊಸದಿಲ್ಲಿ: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ನಿರ್ನಾಮ ಮಾಡಲು ಪಣ ತೊಟ್ಟಿರುವ ಭಾರತೀಯ ಸೇನೆ ಅಡಗುದಾಣದಲ್ಲಿರುವ ಭಯೋತ್ಪಾದಕರನ್ನು ಪತ್ತೆ ಹಚ್ಚಲು ವಾಲ್ ರಾಡಾರ್ ಗಳನ್ನು ಬಳಕೆ ಮಾಡಲು ಗೋಷಿಸಿದೆ. ಭಯೋತ್ಪಾದರ ವಿರುದ್ಧ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ವಾಲ್ ರಾಡಾರ್ ಗಳನ್ನು ಬಳಕೆ ಮಾಡಲು ಪ್ರಾರಂಭಿಸಿರುವ ಸೇನೆ, ಈಗಾಗಲೇ ವಾಲ್ ರಾಡಾರ್ ಸಿಸ್ಟಮ್ ಗಳನ್ನು ಅಮೆರಿಕಾ ಹಾಗೂ ಇಸ್ರೇಲ್ ನಿಂದ ಮಾಡಿಕೊಂಡಿರುವುದಾಗಿ ಹೇಳಿದೆ. ವಾಲ್ ರಾಡಾರ್  ಉಗ್ರರನ್ನು ಪತ್ತೆ ಮಾಡಲು ಸೇನಾ ಪಡೆಗಳಿಗೆ ಸಹಕಾರಿಯಾಗಲಿದೆ. ಗುಪ್ತಚರ ಇಲಾಖೆಯ ಮಾಹಿತಿಯ ಹೊರತಾಗಿಯೂ ಜಮ್ಮು-ಕಾಶ್ಮೀರ ಪೊಲೀಸರು […]

ಖಾಸಗಿ ಸಂಸ್ಥೆ ಬಸ್ ಅಪಘಾತ: 13 ಜನ ಸ್ಥಳದಲ್ಲೇ ಸಾವು

ಖಾಸಗಿ ಸಂಸ್ಥೆ ಬಸ್ ಅಪಘಾತ: 13 ಜನ ಸ್ಥಳದಲ್ಲೇ ಸಾವು

ಭಿಡ(ಮಹಾರಾಷ್ಟ್ರದ): ಭೀಡ ಜಿಲ್ಲೆಯ ಅಷ್ಟಿ ತಾಲೂಕಿನ ಧಾನೋಯಾ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ನಡೆದಿದೆ. 13 ಜನ ಸ್ಥಳದಲ್ಲಿ ಸಾವನ್ನಪ್ಪಿದ್ದು ಹಲವರಿಗೆ ಗಂಭೀರ ಗಾಯಗಳಾಗಿವೆ. ಪುಣೆಯಿಂದ ಲಾತೂರಗೆ ಪ್ರಯಾಣಿಸುತ್ತಿದ್ದ  ಖಾಸಗಿ ಸಂಸ್ಥೆಗೆ ಸೇರಿದ ಬಸ್ ಚಾಲಕನ ನಿಯಂತ್ರಣ ತಪ್ಪಿ  ಅಪಘಾತವಾಗಿದೆ. ಹಲವು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಅನುಮಾನವಿದೆ. Views: 344