ಮಧ್ಯಪ್ರದೇಶದಲ್ಲಿ ಬಿಜೆಪಿ ಹವಾ ಟೈಟ್: ಮತ್ತೆ ಮುನ್ನಡೆ ಸಾಧಿಸಿದ ಕಾಂಗ್ರೆಸ್

ಮಧ್ಯಪ್ರದೇಶದಲ್ಲಿ ಬಿಜೆಪಿ ಹವಾ ಟೈಟ್: ಮತ್ತೆ ಮುನ್ನಡೆ ಸಾಧಿಸಿದ ಕಾಂಗ್ರೆಸ್

ಭೋಪಾಲ: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಹಾವು ಏಣಿ ಆಟ ನಡೆಯುತ್ತಿದ್ದು ಕಾಂಗ್ರೆಸ್ ಪಕ್ಷ ಮತ್ತೆ ಮುನ್ನಡೆ ಸಾಧಿಸಿದೆ.  230 ವಿಧಾನಸಭಾ  ಕ್ಷೇತ್ರಗಳ ಪೈಕಿ ಕಾಂಗ್ರೆಸ್ 114 ರಲ್ಲಿ ಮುನ್ನಡೆ ಸಾಧಿಸಿದ್ದುಬಿಜೆಪಿ 104 ಕ್ಕೆ ಬಂದು  ನಿಂತಿದೆ.  ಮಧ್ಯಪ್ರದೇಶದಲ್ಲಿ ಪಕ್ಷೇತರರ ಸಹಾಯವಿಲ್ಲದೇ ಕಾಂಗ್ರೆಸ್ ಸರ್ಕಾರ ರಚಿಸುವುದು ಕಷ್ಟ ಎನ್ನಲಾಗುತ್ತಿದ್ದು ಸಂಪೂರ್ಣ ಫಲಿತಾಂಶ ಬಂದ ಮೇಲೆ ಪೂರ್ಣ ಚಿತ್ರ ತಿಳಿಯಲಿದೆ.  udayanadu2016

ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ಸಿನ ಗೆಲುವು ರಾಹುಲ ಗಾಂಧಿಗೆ ಉಡುಗೊರೆ- ಸಚಿನ ಪೈಲಟ್

ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ಸಿನ ಗೆಲುವು ರಾಹುಲ ಗಾಂಧಿಗೆ ಉಡುಗೊರೆ- ಸಚಿನ ಪೈಲಟ್

ಜೋಧಪುರ: ಕಳೆದ ಇದೇ ದಿನದಂದು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ರಾಹುಲ ಗಾಂಧಿ ಅವರಿಗೆ ಈ ಗೆಲುವು  ಉಡುಗೊರೆ ಎಂದು ಸಚಿನ್ ಪೈಲಟ್ ಹೇಳಿದ್ದಾರೆ.  ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ರಾಜಸ್ಥಾನದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಸರ್ಕಾರ ರಚಿಸುತ್ತದೆ. ಕಳೆದ ಬಾರಿ ಕೇವಲ 21 ಸ್ಥಾನಗಳನ್ನು ನಾವು ಪಡೆದಿದ್ದವು. ಕಾಂಗ್ರೆಸ್ ಶಾಸಕರು ಮತ್ತು ನಾಯಕರು ಯಾರು ಸರ್ಕಾರದ ನೇತೃತ್ವ ವಹಿಸಲಿದ್ದಾರೆ ಎಂದು ತೀರ್ಮಾನಿಸಲಿದ್ದಾರೆ ಎಂದು ಹೇಳಿದರು.  udayanadu2016

ತೆಲಂಗಾಣ: ಅಕ್ಬರುದ್ದೀನ ಓವೈಸಿಗೆ ಜಯ

ತೆಲಂಗಾಣ: ಅಕ್ಬರುದ್ದೀನ ಓವೈಸಿಗೆ ಜಯ

ಹೈದರಾಬಾದ : ತೆಲಂಗಾಣದ ಚಂದ್ರಾಯನಗುಟ್ಟದಲ್ಲಿ ಎಐಎಂಐಎ ಪಕ್ಷದ ಅಕ್ಬರುದ್ದೀನ ಓವೈಸಿ ಜಯ ಗಳಿಸಿದ್ದಾರೆ. ಉಳಿದಂತೆ ರಾಜ್ಯದಲ್ಲಿ ಟಿಆರ್ ಎಸ್ 92, ಕಾಂಗ್ರೆಸ್ 19 ಹಾಗೂ 9 ಇತರರು ಮುನ್ನಡೆ ಸಾಧಿಸಿದ್ದಾರೆ. ಅಕ್ಬರುದ್ದೀನ ಎಐಎಂಐಎಂ ನ ಮುಖ್ಯಸ್ಥ ಅಸಾದುದ್ದೀನ ಓವೈಸಿಯ ಕಿರಿಯ  ಸಹೋದರ. Mahantesh Yallapurmathhttp://Udayanadu.com

ಕಾಂಗ್ರೆಸ್ ಮುಕ್ತ ಭಾರತದ ಮೋದಿ ಕನಸು ನುಚ್ಚು ನೂರಾಯ್ತಾ?

ಕಾಂಗ್ರೆಸ್ ಮುಕ್ತ ಭಾರತದ ಮೋದಿ ಕನಸು ನುಚ್ಚು ನೂರಾಯ್ತಾ?

ಹೊಸದಿಲ್ಲಿ: ತೀವ್ರ ಕುತೂಹಲ ಮೂಡಿಸಿದ್ದ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಬಹುತೇಕ ನಿಚ್ಚಳವಾಗಿದ್ದು, ಮೂರು ರಾಜ್ಯಗಳಲ್ಲಿ ಕೈ ಪಡೆ ಮೇಲುಗೈ ಸಾಧಿಸಿದೆ. ಮಧ್ಯಪ್ರದೇಶ, ಛತ್ತೀಸಘಡ ಮತ್ತು ರಾಜಸ್ತಾನಗಳಲ್ಲಿ ಕೈ ಅಧಿಕಾರ ಹಿಡಿಯುವ ಸಾಧ್ಯತೆಗಳು ನಿಚ್ಚಳವಾಗಿದ್ದು, ತೆಲಂಗಾಣದಲ್ಲಿ ಟಿಆರ್ ಎಸ್ ಹಾಗೂ ಮಿಜೋರಾಂನಲ್ಲಿ ಎಂಎನ್ ಎಫ್ ಸ್ಪಷ್ಟ ಬಹುಮತದತ್ತ ಹೆಜ್ಜೆ ಹಾಕಿದೆ. ಈ ಫಲಿತಾಂಶವನ್ನು ಗಮನಿಸಿದರೆ ಎಲ್ಲೆಡೆಯೂ ಬಿಜೆಪಿಗೆ ಸಂಪೂರ್ಣ ಹಿನ್ನಡೆ ಉಂಟಾಗಿದ್ದು, ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದ ಪ್ರಧಾನಿ ಮೋದಿ ಕನಸು ನುಚ್ಚು ನೂರಾಗಿದೆ. ಚುನಾವಣೆ ಫಲಿತಾಂಶದ […]

ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಭಾರಿ ಮುನ್ನಡೆ

ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಭಾರಿ ಮುನ್ನಡೆ

ಹೊಸದಿಲ್ಲಿ: ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ‌ಪಕ್ಷ ಭಾರಿ ಮುನ್ನಡೆ ಸಾಧಿಸಿದೆ. ರಾಜಸ್ಥಾನ, ಮಧ್ಯ ಪ್ರದೇಶ, ಛತ್ತಿಸಘರ್  ರಾಜ್ಯಗಳಲ್ಲಿ ಭಾರಿ ಮುನ್ನಡೆ ಕಾಯ್ದುಕೊಂಡು ಕಾಂಗ್ರೆಸ್ ಸ್ಪಷ್ಟ ಬಹುಮತದತ್ತ ದಾಪುಗಾಲು ಹಾಕುತ್ತಿದೆ. ಮ.ಪ್ರದೇಶದಲ್ಲಿನ 230 ವಿಧಾನಸಭೆ ಕ್ಷೇತ್ರ ಗಳಲ್ಲಿ ಕಾಂಗ್ರೆಸ್ ಪಕ್ಷ 104 ಕ್ಷೇತ್ರ ಗಳಲ್ಲಿ ಮುನ್ನಡೆ ಕಾಯ್ದಕೊಂಡಿದೆ. ರಾಜಸ್ಥಾನದ 199  ವಿಧಾನಸಭೆ ಕ್ಷೇತ್ರ ಗಳಲ್ಲಿ ಕಾಂಗ್ರೆಸ್ ಪಕ್ಷ 99 ಕ್ಷೇತ್ರ ಗಳಲ್ಲಿ ಮುನ್ನಡೆ ಕಾಯ್ದಕೊಂಡಿದೆ. ಛತ್ತಿಸಘರ್ ರಾಜ್ಯ ದಲ್ಲಿಯೂ ಕಾಂಗ್ರೆಸ್ ಬಹುಮತ ದತ್ತದಾಪುಗಾಲು ಹಾಕುತ್ತಿದೆ. ತೆಲಂಗಾಣ ರಾಜ್ಯದ ಪ್ರಾದೇಶಿಕ […]

ಮದ್ಯ ದೊರೆ ಭಾರತಕ್ಕೆ ಹಸ್ತಾಂತರ: ಲಂಡನ್ ಕೋರ್ಟ್ ಆದೇಶ

ಮದ್ಯ ದೊರೆ ಭಾರತಕ್ಕೆ ಹಸ್ತಾಂತರ: ಲಂಡನ್ ಕೋರ್ಟ್ ಆದೇಶ

ಹೊಸದಿಲ್ಲಿ: ಸಾಲ ಮರು ಪಾವತಿ ಮಾಡದೇ ದೇಶ ಬಿಟ್ಟು ಪಾಲಾಯನ ಮಾಡಿದ್ದ ಮದ್ಯ ದೊರೆ ವಿಜಯ ಮಲ್ಯಗೆ ಗಡಿಪಾರು ಮಾಡಿ ಇಂಗ್ಲೆಂಡ್ ನ ವೆಸ್ಟ್​ಮಿನ್ಸ್ಟರ್​ ಕೋರ್ಟ್​ ಆದೇಶ ನೀಡಿದೆ. ವೆಸ್ಟ್​ಮಿನ್ಸ್ಟರ್​ ಕೋರ್ಟ್​ನ ನ್ಯಾಯಾಧೀಶರು ಇಂದು ವಿಚಾರಣೆಗೆ ಹಾಜರಾದ ಮರುಕ್ಷಣವೇ ತೀರ್ಪು ನೀಡಿದ್ದಾರೆ. “ಈ ನ್ಯಾಯಾಲಯ ವಿಜಯ್​ ಮಲ್ಯಾರನ್ನು ಭಾರತಕ್ಕೆ ಹಸ್ತಾಂತರಿಸುವ ತೀರ್ಪನ್ನು ನೀಡುತ್ತಿದೆ,” ಎಂದು ನ್ಯಾಯಾಧೀಶರು ಆದೇಶಿಸಿದರು. ವಿಜಯ್​ ಮಲ್ಯಾರಿಗೆ ಮೇಲ್ಮನವಿ ಅರ್ಜಿ ಸಲ್ಲಿಸಲು 14 ದಿನಗಳ ಕಾಲಾವಕಾಶವಿದ್ದು, ಅರ್ಜಿ ಸಲ್ಲಿಸದಿದ್ದಲ್ಲಿ 28 ದಿನಗಳ ಅಂತರದಲ್ಲಿ ಹಸ್ತಾಂತರ […]

ತಾರಕಕ್ಕೇರಿದ ಕೇಂದ್ರ-ಆರ್’ಬಿಐ ತಿಕ್ಕಾಟ: ಗವರ್ನರ್ ಉರ್ಜಿತ್ ಪಟೇಲ ಹಠಾತ್ ರಾಜೀನಾಮೆ

ತಾರಕಕ್ಕೇರಿದ ಕೇಂದ್ರ-ಆರ್’ಬಿಐ ತಿಕ್ಕಾಟ: ಗವರ್ನರ್ ಉರ್ಜಿತ್ ಪಟೇಲ ಹಠಾತ್ ರಾಜೀನಾಮೆ

ಹೊಸದಿಲ್ಲಿ: ಆರ್ ಬಿ ಐ ಮತ್ತು ಕೇಂದ್ರ ಸರ್ಕಾರ ನಡುವಿನ ತಿಕ್ಕಾಟ ತಾರಕಕ್ಕೇರಿದ್ದು ಗವರ್ನರ್ ಉರ್ಜಿತ್ ಪಟೇಲ ರಾಜೀನಾಮೆ ನೀಡಿದ್ದಾರೆ. ಇಂದು ವ್ಯಯಕ್ತಿಕ ಕಾರಣಗಳನ್ನು ನೀಡಿದ ಗವರ್ನರ್ ಉರ್ಜಿತ್  ಪಟೇಲ್ ತಕ್ಷಣ ಜಾರಿಯಾಗುವಂತೆ ರಾಜೀನಾಮೆ ನೀಡಿದ್ದಾರೆ.  ದೇಶದ ಆರ್ಥಿಕ ವ್ಯವಸ್ಥೆಯನ್ನು ನಿಯಂತ್ರಿಸುವ ಆರ್ ಬಿಐ ಗವರ್ನರ್ ಹಠಾತ್ ರಾಜೀನಾಮೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.  ಕಳೆದ್ ಮೂರು ತಿಂಗಳುಗಳಿಂದ ಕೇಂದ್ರ ಮತ್ತು ಆರ್ ಬಿಐ ನಡುವೆ ಹಲವು ವಿಷಯಗಳಿಗೆ ಸಂಬಧ ತಿಕ್ಕಾಟ ನಡೆಯುತ್ತಿದೆ.  udayanadu2016

ಮೋದಿ ಕ್ಯಾಬಿನೆಟ್ ನಿಂದ ಹೊರಬಂದ್ರು ಉಪೇಂದ್ರ ಕುಶವಾಹಾ: ಮೈತ್ರಿಕೂಟದಿಂದಲೂ ಹೊರಕ್ಕೆ

ಮೋದಿ ಕ್ಯಾಬಿನೆಟ್ ನಿಂದ ಹೊರಬಂದ್ರು ಉಪೇಂದ್ರ ಕುಶವಾಹಾ: ಮೈತ್ರಿಕೂಟದಿಂದಲೂ ಹೊರಕ್ಕೆ

ಹೊಸದಿಲ್ಲಿ: ಎನ್ ಡಿಎ ಮೈತ್ರಿಕೂಟದಿಂದ ಹೊರಬಿಳುವ ಘೋಷಣೆಯೊಂದಿಗೆ ಆರ್ ಎಲ್ ಎಸ್ ಪಿ ಪಕ್ಷದ ಮುಖ್ಯಸ್ಥ ಉಪೇಂದ್ರ ಕುಶವಾಹಾ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.  ಪ್ರಧಾನಿ ಮೋದಿ ನೇತೃತ್ವದಲ್ಲಿ ಇಂದು ನಡೆಯುತ್ತಿರುವ ಸರ್ವ ಪಕ್ಷಗಳ ಸಭೆಗೂ ಕುಶವಾಹಾ ಗೈರಾಗಲಿದ್ದಾರೆ.  ಲೋಕಸಭೆಯಲ್ಲಿ ಮೂರು ಸ್ಥಾನಗಳನ್ನು ಹೊಂದಿರುವ ಆರ್ ಎಲ್ ಎಸ್ ಪಿ ಪಕ್ಷ ಕಳೆದ ಹಲವು ದಿನಗಳಿಂದ ಮೋದಿ ಸರ್ಕಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. udayanadu2016

ಪ್ರತ್ಯೇಕ ಲಿಂಗಾಯತ ಧರ್ಮ ರಚನೆ: ರಾಜ್ಯ ಸರ್ಕಾರ ಪ್ರಸ್ತಾವನೆ ತಿರಸ್ಕರಿಸಿದ ಕೇಂದ್ರ

ಪ್ರತ್ಯೇಕ ಲಿಂಗಾಯತ ಧರ್ಮ ರಚನೆ: ರಾಜ್ಯ ಸರ್ಕಾರ ಪ್ರಸ್ತಾವನೆ ತಿರಸ್ಕರಿಸಿದ ಕೇಂದ್ರ

ಹೊಸದಿಲ್ಲಿ: ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಹಿಂದೆ ಕಳಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ರಾಷ್ಟ್ರೀಯ ಅಲ್ಪಸಂಖ್ಯಾತ  ಮತ್ತು ಗೃಹ ಇಲಾಖೆಗಳು ಅರ್ಜಿಯನ್ನು ತಿರಸ್ಕರಿಸಿದೆ ಎಂದು  ಕೇಂದ್ರ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿರುವ ಎ ಎಸ್ ಜಿ ಪ್ರಭುಲಿಂಗ್  ನಾವಡ್ಗಿ ಹೈಕೋರ್ಟ್ ಗೆ ತಿಳಿಸಿದ್ದಾರೆ. ನ. 13ರಂದೇ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಲಾಗಿತ್ತು ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರ ಪರ ಹಿರಿಯ ವಕೀಲ ಗುರುಮಠ  ಪಿಐಎಲ್ […]

ಕಂದಕಕ್ಕೆ ಬಿದ್ದ ಬಸ್: ಮೃತರ ಸಂಖ್ಯೆ 13 ಕ್ಕೆ

ಕಂದಕಕ್ಕೆ ಬಿದ್ದ ಬಸ್: ಮೃತರ ಸಂಖ್ಯೆ 13 ಕ್ಕೆ

ಪೂಂಚ್ (ಜಮ್ಮು ಕಾಶ್ಮೀರ): ಪೂಂಚ್ ನಲ್ಲಿ ನಿನ್ನೆ ಸಂಭವಿಸಿದ್ದ ಬಸ್ ಅಪಘಾತದಲ್ಲಿ ಸಾವಿಗೀಡಾದವರ ಸಂಖ್ಯೆ 13 ಕ್ಖೇರಿದೆ. ಈ ದುರ್ಘಟನೆಯಲ್ಲಿ 13 ಮಂದಿ ಸಾವಿಗೀಡಾಗಿದ್ದು, ಮತ್ತೆ 13 ಮಂದಿ ಗಾಯಗೊಂಡಿದ್ದಾರೆ. ಆ ಪೈಕಿ ಮೂವರನ್ನು ಜಮ್ಮುಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೂಂಚ್ ಜಿಲ್ಲೆಯ ಮಂಡಿ ತೆಹ್ಸಿಲ್ ನ ಪ್ಲೇರಾದಲ್ಲಿ ಬಸ್ಸು ಕಂದಕಕ್ಕೆ ಬಿದ್ದು ಈ ದುರಂತ ಸಂಭವಿಸಿತ್ತು. ಲೋರಾನ್ ನಿಂದ ಪೂಂಚ್ ಗೆ ಹೊರಟಿದ್ದ ಈ ಬಸ್ಸಿನಲ್ಲಿ 25 ಕ್ಕೂ ಹೆಚ್ಚು ಮಂದಿ […]