ಕಿತ್ತೂರು ಉತ್ಸವಕ್ಕೆ ಕ್ಷಣಗಣನೆ: ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ

ಕಿತ್ತೂರು ಉತ್ಸವಕ್ಕೆ ಕ್ಷಣಗಣನೆ: ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ

ಬೆಳಗಾವಿ: ಕಿತ್ತೂರು ಉತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಅವರು ಸೋಮವಾರ ಸಂಜೆ ಕೋಟೆ ಆವರಣಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು. ಉತ್ಸವದ ಮುಖ್ಯ ವೇದಿಕೆ, ಆಸನ ವ್ಯವಸ್ಥೆ, ಊಟದ ವ್ಯವಸ್ಥೆಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಯಾವುದೇ ಅನಾನುಕೂಲ ಆಗದಂತೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಕ್ಟೋಬರ್ 23 ರಂದು ಬೆಳಿಗ್ಗೆ10 ಗಂಟೆಗೆ ವೀರಜ್ಯೋತಿಯನ್ನು ಸ್ವಾಗತಿಸಲಾಗುವುದು. ಮೆರವಣಿಗೆಯಲ್ಲಿ 35 ಕಲಾತಂಡಗಳು ಭಾಗವಹಿಸಲಿವೆ. ಜ್ಯೋತಿ ಸ್ವಾಗತದ ಬಳಿಕ ಮಹಾದ್ವಾರದ ಬಳಿ ಇರುವ ಸಂಗೊಳ್ಳಿ ರಾಯಣ್ಣ ಮತ್ತು ಅಮಟೂರ […]

ಪ್ರಧಾನ ಮಂತ್ರಿಯನ್ನು ರೂಪಿಸುವ ಶಕ್ತಿ ಶಿಕ್ಷಕರಿಗಿದೆ: ಸಿದ್ದಶ್ವರ ಶ್ರೀ

ಪ್ರಧಾನ ಮಂತ್ರಿಯನ್ನು ರೂಪಿಸುವ ಶಕ್ತಿ ಶಿಕ್ಷಕರಿಗಿದೆ: ಸಿದ್ದಶ್ವರ ಶ್ರೀ

ಸರಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಉದ್ಘಾಟನಾ ಸಮಾರಂಭ… ಇಂಡಿ : ದೇಶದ ಪ್ರಧಾನ ಮಂತ್ರಿಯನ್ನು ರೂಪಿಸುವ ಸಾಮರ್ಥ್ಯ ಶಾಲೆಗಿದೆ.  ಶಾಲೆಯಲ್ಲಿ ಶಿಕ್ಷಕರು ಇಲ್ಲದಿದ್ದರೆ ಪ್ರಧಾನ ಮಂತ್ರಿಯು ಇಲ್ಲ, ಅಧ್ಯಕರು ಇಲ್ಲ, ಎಲ್ಲರನ್ನು ರೂಪಿಸುವವರು ಶಿಕ್ಷಕರು, ಇಂಥಹ ಕಾರ್ಯವನ್ನು ನೂರು ವರ್ಷದಿಂದ ಮಾಡುತ್ತಾ ಬಂದ ಲಚ್ಯಾಣದ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯ ಕಾರ್ಯ ಅದ್ಭುತವಾದುದು ಎಂದು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು. ಇಂಡಿ ತಾಲೂಕಿನ  ಲಚ್ಯಾಣ ಗ್ರಾಮದಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ, […]

ಹದಗೆಟ್ಟ ಬೆಟಗೇರಿ-ಕೌಜಲಗಿ ರಸ್ತೆ ಶೀಘ್ರದಲ್ಲಿ ಅಭಿವೃದ್ಧಿ: ಶಾಸಕ ಬಾಲಚಂದ್ರ ಜಾರಕಿಹೊಳಿ

ಹದಗೆಟ್ಟ ಬೆಟಗೇರಿ-ಕೌಜಲಗಿ ರಸ್ತೆ ಶೀಘ್ರದಲ್ಲಿ ಅಭಿವೃದ್ಧಿ: ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಹದಗೆಟ್ಟಿರುವ ಬೆಟಗೇರಿ-ಕೌಜಲಗಿ ರಸ್ತೆಯನ್ನು ಶೀಘ್ರದಲ್ಲಿಯೇ ಅಭಿವೃದ್ಧಿಪಡಿಸಲಾಗುವುದು ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಭರವಸೆಯಿತ್ತರು. ತಾಲೂಕಿನ ಗೋಸಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇತ್ತಿಚೀಗೆ ಜರುಗಿದ 2.53 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ಥಿತ್ವದಲ್ಲಿರುವದರಿಂದ ಅಭಿವೃದ್ಧಿ ಕಾರ್ಯಗಳು ಆಮೆಗತಿಯಲ್ಲಿ ಸಾಗುತ್ತಿವೆ. ರೈತರ ಸಾಲ ಮನ್ನಾ ಮಾಡಿರುವುದರಿಂದ ಗುತ್ತಿಗೆದಾರರಿಗೆ ಬಾಕಿ ಬಿಲ್ ಸಂದಾಯ ಮಾಡಲಿಕ್ಕೂ ಸರ್ಕಾರದ ಬಳಿ ಹಣವಿಲ್ಲ. ಹೇಗಾದರೂ ಮಾಡಿ […]

ಮಣ್ಣಿನಲ್ಲಿ ಮರೆಯಾದ ಗೋಕಾಕ ವೀರಯೋಧ ಉಮೇಶ ಹೆಳವರ್

ಮಣ್ಣಿನಲ್ಲಿ ಮರೆಯಾದ  ಗೋಕಾಕ ವೀರಯೋಧ ಉಮೇಶ ಹೆಳವರ್

ಗೋಕಾಕ: ಮಣಿಪುರದಲ್ಲಿ ಹುತಾತ್ಮನಾದ ಗೋಕಾಕ ವೀರಯೋಧನ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ಮಧ್ಯಾಹ್ನ  ನೆರವೇರಿತು. ಇಲ್ಲಿನ ಅಂಬೇಡ್ಕರ್ ನಗರದಲ್ಲಿರುವ  ಮೃತ ಯೋಧ ಉಮೇಶ ಹಳವೇರ್ ಮನೆಯಲ್ಲಿ  ಮೃತ ದೇಹವನ್ನು ಬೆಳಿಗ್ಗೆ ತರಲಾಯಿತು. ನಂತರ ಮೆರವಣಿಗೆ ಮೂಲಕ ಇಲ್ಲಿನ ವಾಲ್ಮೀಕಿ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.  ಶೂನ್ಯ ಸಂಪಾದನಾ ಮಠದ ಮುರುಘರಾಜೇಂದ್ರ ಶ್ರೀಗಳು,   ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಮತ್ತು  ಎಸ್ ಪಿ ಸುಧೀರಕುಮಾರ ರೆಡ್ಡಿ ಸೇರಿದಂತೆ ಗಣ್ಯಾತಿಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದರು.  ಇಲ್ಲಿನ ಎನ್ ಎಸ್ ಎಫ್ ಶಾಲೆ ಹತ್ತಿರವಿರುವ […]

ನೊಂದವರ ಸಮಸ್ಯೆಗೆ ಸ್ಪಂಧಿಸುವುದು ಸಂಘಟನೆಯ ಗುಣ: ಮಲ್ಲಿಕಾರ್ಜುನ ಕ್ರಾಂತಿ

ನೊಂದವರ ಸಮಸ್ಯೆಗೆ ಸ್ಪಂಧಿಸುವುದು ಸಂಘಟನೆಯ ಗುಣ: ಮಲ್ಲಿಕಾರ್ಜುನ ಕ್ರಾಂತಿ

ಸುರಪುರ: ದಲಿತ, ಹಿಂದುಳಿದ ಅಲ್ಪಸಂಖ್ಯಾತ ಮತ್ತಿತರೆ ಯಾರೆ ಆಗಲಿ ಶೋಷಣೆಗೊಳಗಾದವರು, ನೊಂದವರು ಬಂದರೆ ಅಂತವರ ಸಮಸ್ಯೆಗೆ ಸ್ಪಂಧಿಸುವ ಜವಬ್ದಾರಿ ಸಂಘಟನೆಗಳದು, ಅದನ್ನು ತಾವೆಲ್ಲರು ಮಾಡುವಂತೆ ಕೆಎಸ್‍ಡಿಎಸ್‍ಎಸ್ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ತಿಳಿಸಿದರು. ನಗರದ ಬುದ್ಧ ವಿವಾರದಲ್ಲಿ ನಡೆಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ನಂತರ ಎಲ್ಲರ ಅಭಿಪ್ರಾಯದ ಮೇರೆಗೆ ತಾಲೂ ಕು ಪದಾಧಿಕಾರಿಗಳನ್ನು ನೇಮಕಗೊಳಿಸಿ ಘೋಷಿಸಿದರು. ಪದಾಧಿಕಾರಿಗಳು ತಾಲೂಕು ಸಂಚಾಲಕ […]

ಸುರಪುರ ಐತಿಹಾಸಿಕ ಟೈಲರ್ ಮಂಜಿಲಿಗೆ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ ಭೇಟಿ

ಸುರಪುರ ಐತಿಹಾಸಿಕ ಟೈಲರ್ ಮಂಜಿಲಿಗೆ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ ಭೇಟಿ

ಸುರಪುರ: ಈಗಾಗಲೇ ಜಿಲ್ಲೆಯಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಯಾದಗಿರಿ ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸಿ ಪ್ರತಿ ತಾಲ್ಲೂಕಿಗೆ ತಾತ್ಕಾಲಿಕವಾಗಿ ಐವತ್ತು ಲಕ್ಷ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗು ಜಿಲ್ಲಾ ಉಸ್ತುವಾರಿ ಮಂತ್ರಿ ರಾಜಶೇಖರ ಪಾಟೀಲ ಹುಮನಾಬಾದ ಮಾತನಾಡಿದರು. ಉಸ್ತುವಾರಿ ಸಚಿವರಾದ ಬಳಿಕ  ಪ್ರಥಮ ಬಾರಿಗೆ ಸುರಪುರಕ್ಕೆ ಭೇಟಿ ನೀಡಿ ಟೈಲರ್ ಮಂಜಿಲನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಕ್ಕೆ ಕುಡಿಯುವ ನೀರಿನ ದೊಡ್ಡ ಸಮಸ್ಯೆ ಇರುವದನ್ನು ಅಧಿಕಾರಿಗಳು […]

ಸರಕಾರ ನಾಡದ್ರೋಹಿ ಎಂಇಎಸ್ ಪರ ಕೆಲಸ ಮಾಡ್ತಿದೆ ಭೀಮಪ್ಪ ಗಡಾದ ಆರೋಪ

ಸರಕಾರ ನಾಡದ್ರೋಹಿ ಎಂಇಎಸ್ ಪರ ಕೆಲಸ ಮಾಡ್ತಿದೆ ಭೀಮಪ್ಪ ಗಡಾದ ಆರೋಪ

ಬೆಳಗಾವಿ: ಪ್ರತಿ ವರ್ಷ ಕೊನೆ ಕ್ಷಣದಲ್ಲಿ  ಕರಾಳ ದಿನಾಚರಣೆಗೆ ಅವಕಾಶ ನೀಡುವ ಸರಕಾರ ಎಂಇಎಸ್ ಪರ ಕೆಲಸ ಮಾಡುತ್ತಿದೆ ಅಂತಾ ಸಾಮಾಜಿಕ ಹೋರಾಟಗಾರ ಭೀಮಪ್ಪ ಗಡಾದ ಆರೋಪಿಸಿದರು.  ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕನ್ನಡ ಸಂಘಟನೆಗಳು ಪ್ರತಿ ವರ್ಷ ಕರಾಳ ದಿನಾಚರಣೆಯನ್ನು ವಿರೋಧಿಸಿಕೊಂಡು ಬರುತ್ತಿವೆ.  ಆದರೆ ಜಿಲ್ಲಾಡಳಿತ ಕೊನೆ ಕ್ಷಣದಲ್ಲಿ ಎಂಇಎಸ್ ಗೆ ಕರಾಳ ದಿನಾಚರಣೆಗೆ ಅವಕಾಶ ನೀಡತ್ತೆ. ಸರಕಾರ ಎಂಇಎಸ್ ಪರವಾಗಿ ಕೆಲಸ ಮಾಡುತ್ತಿದೆ ಎಂಬ ಅನುಮಾನ ಶುರುವಾಗಿದೆ ಎಂದರು. […]

ವೇತನ ಬಿಡುಗಡೆಗೊಳಿಸಲು ಮೆಡಿಕಲ್ ವಿದ್ಯಾರ್ಥಿಗಳ ಪ್ರತಿಭಟನೆ

ವೇತನ ಬಿಡುಗಡೆಗೊಳಿಸಲು ಮೆಡಿಕಲ್ ವಿದ್ಯಾರ್ಥಿಗಳ ಪ್ರತಿಭಟನೆ

ದಾವಣಗೆರೆ: ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರ ವಿದ್ಯಾರ್ಥಿ ವೇತನ ಬಿಡುಗಡೆ ಮಾಡದಿರುವುದನ್ನು ಖಂಡಿಸಿ ದಾವಣಗೆರೆಯಲ್ಲಿ ವೈದ್ಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು ಜಿಲ್ಲಾಸ್ಪತ್ರೆಯ ಮುಂಭಾಗದಲ್ಲಿ  ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳು 8 ತಿಂಗಳಿನಿಂದ ವೇತನ ವಿಲ್ಲದೆ ಕೆಲಸ ಮಾಡುತ್ತಿದ್ದು ಕಿಂಚಿತ್ತು ಸರ್ಕಾರ ಕಾಳಜಿ ವಹಿಸುತ್ತಿಲ್ಲ ಅಂತ ಆರೋಪಿಸಿದರು. ಸರ್ಕಾರಿ ಕೋಟದಲ್ಲಿ ಆಯ್ಕೆಯಾದ ಜಿಲ್ಲೆಯ 230 ವಿದ್ಯಾರ್ಥಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವೇತನ ವಿಲ್ಲದಿದ್ದರು ರೋಗಿಗಳ ಆರೈಕೆ ಮಾಡ್ತಿದ್ದಾರೆ. ರೋಗಿಗಳಿಗೆ ತೊಂದರೆ ಯಾಗದಂತೆ ಕೆಲಸ ಮಾಡಿದ್ರು ಸರ್ಕಾರ ಸ್ಪಂದಿಸಿಲ್ಲ‌. […]

ಚನ್ನಮ್ಮ ಉತ್ಸವ ದೇಶ್ಯಾದ್ಯಂತ ಪ್ರಚಲಿತ ಪಡೆಯಲಿ: ಮಾಜಿ ಸಂಸದ ಸಿದ್ನಾಳ

ಚನ್ನಮ್ಮ ಉತ್ಸವ ದೇಶ್ಯಾದ್ಯಂತ ಪ್ರಚಲಿತ ಪಡೆಯಲಿ: ಮಾಜಿ ಸಂಸದ ಸಿದ್ನಾಳ

ಬೈಲಹೊಂಗಲ: ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿ, ಪ್ರಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ಚನ್ನಮ್ಮ ಬ್ರಿಟಿಷರಿಗೆ ಸೋಲುಣ್ಣೀಸಿದ ವಿಜಯದ ಸಂಕೇತವಾಗಿ ಅ.23 ರಿಂದ ಆಚರಿಸುವ ಕಿತ್ತೂರು ಉತ್ಸವದ ಮೂಲಕ ಚನ್ನಮ್ಮಾಜೀ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಯಂತೆ ದೇಶಾದ್ಯಂತ ಪ್ರಚಲಿತ ಆಗುವ ನಿಟ್ಟಿನಲ್ಲಿ ಕಿತ್ತೂರು ಉತ್ಸವ ಆಚರಿಸುವಂತೆ ಮಾಜಿ ಲೋಕಸಬಾ ಸದಸ್ಯ ಎಸ್.ಬಿ.ಸಿದ್ನಾಳ ಸರಕಾರವನ್ನು ಒತ್ತಾಯಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವೀರರಾಣಿ ಕಿತ್ತೂರು ಚನ್ನಮ್ಮನ ಪ್ರಾಧಿಕಾರ ಹಲ್ಲಿಲ್ಲದ ಹಾವಾಗಿದೆ. ಅದನ್ನು ಸುಕ್ಷೇತ್ರ ಕೂಡಲಸಂಗಮ ಪ್ರಾಧಿಕಾರ ಮಾದರಿಯಲ್ಲಿ […]

ಜಮಖಂಡಿಯಲ್ಲಿ ಆನಂದ ನ್ಯಾಮಗೌಡ ಅಬ್ಬರ: ರಂಗೇರುತ್ತಿರುವ ಪ್ರಚಾರ

ಜಮಖಂಡಿಯಲ್ಲಿ ಆನಂದ ನ್ಯಾಮಗೌಡ ಅಬ್ಬರ: ರಂಗೇರುತ್ತಿರುವ ಪ್ರಚಾರ

ಜಮಖಂಡಿ:  ಉಪ ಚುನಾವಣೆ ಪ್ರಚಾರ ರಂಗೇರುತ್ತಿದ್ದು ಇಂದು ಕಾಂಗ್ರೆಸ್ ಅಭ್ಯರ್ಥಿ ಆನಂದ ಸಿದ್ಧು ನ್ಯಾಮಗೌಡರಿಂದ ನಗರದ ವಿವಿದೆಡೆ ಬಿರುಸಿನ ಪ್ರಚಾರ ನಡೆಸಿದರು. ಉಪಚುನಾವಣಾ ಪ್ರಚಾರಾರ್ಥವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದ ಸಿದ್ಧು ನ್ಯಾಮಗೌಡ ನಗರದ ಪೋಲೊ ಮೈದಾನಕ್ಕೆ ಭೇಟಿ ನೀಡಿ ಬಹು ಸಂಖ್ಯೆಯಲ್ಲಿ ಸೇರಿದ ಯುವ ಕ್ರೀಡಾಪಟುಗಳನ್ನು ಭೇಟಿ ಮಾಡಿ ದಿ.ಸಿದ್ಧು ನ್ಯಾಮಗೌಡರು ಕ್ರೀಡಾಪಟುಗಳಿಗೆ ಯುವಕರಿಗಾಗಿ ಕೈಗೊಂಡ ಯೋಜನೆಗಳ ಕುರಿತು ಮತ್ತು ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮನವರಿಕೆ ಮಾಡುತ್ತಾ ಪ್ರಸ್ತುತ ಉಪಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿ ಎನ್ನುವ […]

1 2 3 816