ಸ್ವಾತಂತ್ರ್ಯಕ್ಕೆ ಹೋರಾಡಿದ ಮಹನೀಯರು ನಮಗೆ ದಾರಿ ದೀಪ: ಸಚಿವ ರಮೇಶ ಜಾರಕಿಹೊಳಿ

ಸ್ವಾತಂತ್ರ್ಯಕ್ಕೆ ಹೋರಾಡಿದ ಮಹನೀಯರು ನಮಗೆ ದಾರಿ ದೀಪ: ಸಚಿವ ರಮೇಶ ಜಾರಕಿಹೊಳಿ

  ಬೆಳಗಾವಿ:  ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ-ಬಲಿದಾನ ಮಾಡಿದ ಹಾಗೂ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ನೆನಪಿಸಿಕೊಳ್ಳಬೇಕಿದೆ.ಸ್ವಾತಂತ್ರ್ಯ ಹೋರಾಟದ ಹಿಂದೆ ಒಂದು ದೊಡ್ಡ ಇತಿಹಾಸ ಮತ್ತು ಪರಂಪರೆಯಿದೆ ಎಂದು ಪೌರಾಡಳಿತ, ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಇಲ್ಲಿನ ಜಿಲ್ಲಾಕ್ರೀಡಾಂಗಣದಲ್ಲಿ 72ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಮ್ಮ ಹಿರಿಯರ ತ್ಯಾಗ, ಬಲಿದಾನಗಳ ಮೂಲಕ ನಮಗೆ ಸ್ವಾತಂತ್ರ್ಯ ದೊರೆತಿದ್ದು, ನಾವೆಂದೂ ಅದನ್ನು ಮರೆಯಬಾರದು. ಅವರ ತತ್ವ ಆದರ್ಶಗಳನ್ನು ನಮ್ಮ […]

ಗೋಕಾಕ: ಹಿಲ್ ಗಾರ್ಡನ ಕಚೇರಿಯಲ್ಲಿ 72 ನೇ ಸ್ವಾತಂತ್ರ್ಯೋತ್ಸವ ಆಚರಣೆ

ಗೋಕಾಕ: ಹಿಲ್ ಗಾರ್ಡನ ಕಚೇರಿಯಲ್ಲಿ 72 ನೇ ಸ್ವಾತಂತ್ರ್ಯೋತ್ಸವ ಆಚರಣೆ

ಗೋಕಾಕ:  ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರ ಇಲ್ಲಿನ ಹಿಲ್ ಗಾರ್ಡನ್ ಕಚೇರಿಯಲ್ಲಿ  72 ನೇಯ ಸ್ವಾತಂತ್ರ್ಯೋತ್ಸವ ನಿಮಿತ್ಯವಾಗಿ ಧ್ವಜಾರೋಹನವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ವಿಠ್ಠಲ ಪರಸಣ್ಣವರ, ಪ್ರಕಾಶ ಬಸ್ಸಾಪುರೆ, ದಯನ್ನವರ್, ನಾಡಿಗೇರ್, ಎ.ಬಿ.ಖಾಜಿ,  ಸುರೇಶ ಮುಡ್ಡೆ ಪ್ಪಗೋಳ, ರಾಜು ಶಿಂಧೆ, ರಾಜು ಅಂಕಲಗಿ, ಮುತ್ತೆಪ್ಪಾ ತಳವಾರ, ಮಂಜು ಸನದಿ, ಸಂಜು ಶಿಂಧೆ, ತಿಪ್ಪಣ್ಣ ಗೊರಗುದ್ದಿ, ಸೇರಿದಂತೆ   ಇತರರು ಇದ್ದರು. udayanadu2016

ಮಹದಾಯಿ ತೀರ್ಪು ವಿರೋಧಿಸಿ ಬೆಳಗಾವಿಯಲ್ಲಿ ಪ್ರತಿಭಟನೆ

ಮಹದಾಯಿ ತೀರ್ಪು ವಿರೋಧಿಸಿ ಬೆಳಗಾವಿಯಲ್ಲಿ ಪ್ರತಿಭಟನೆ

ಬೆಳಗಾವಿ:  ಮಹದಾಯಿ ತೀರ್ಪು ವಿರೋಧಿಸಿ ಹಸಿರು ಕಾಂತ್ರಿ, ರೈತ ಸಂಘಟನೆ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು. ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಸೇರಿದ ಪದಾಧಿಕಾರಿಗಳು ತುಂತೂರು ಮಳೆಯಲ್ಲಿಯೂ ಟೈರ್ ಗೆ ಬೆಂಕಿ ಹಚ್ಚಿ  ಕೇಂದ್ರ ಸರಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಮೀತ ಇಂಗಳಗಾಂವಿhttp://udayanadu.com

ಮಹದಾಯಿ ತೀರ್ಪು ರಾಜ್ಯ ಪರ: ಗಜೇಂದ್ರಗಡದಲ್ಲಿ ಸಂಭ್ರಮಾಚರಣೆ

ಮಹದಾಯಿ ತೀರ್ಪು ರಾಜ್ಯ ಪರ: ಗಜೇಂದ್ರಗಡದಲ್ಲಿ ಸಂಭ್ರಮಾಚರಣೆ

ಗಜೇಂದ್ರಗಡ: ಮಹದಾಯಿ ತೀರ್ಪು ಕರ್ನಾಟಕದ ಪರವಾದ ಹಿನ್ನಲೆಯಲ್ಲಿ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಮಂಗಳವಾರ ಸಂಭ್ರಮಿಸಿದರು. ಸಂಘಟನೆ ತಾಲೂಕಾಧ್ಯಕ್ಷ ಭೀಮಣ್ಣ ಇಂಗಳೆ ಮಾತನಾಡಿ, ಮಹದಾಯಿ ನೀರು ಹಂಚಿಕೆ ತೀರ್ಪು ರಾಜ್ಯ ಪರವಾಗಿದ್ದು ಸಂತಸ ತರಿಸಿದೆ. ರಾಜ್ಯಕ್ಕೆ  ಒಟ್ಟು 13.70 ಟಿಎಂಸಿ ನೀರು ಹಂಚಿಕೆ ಮಾಡಿರುವುದು ಉತ್ತರ ಕರ್ನಾಟಕ ಭಾಗದ ಜನರ ನಿರಂತರ ಹೋರಾಟಕ್ಕೆ ಸಿಕ್ಕ ಬಹುದೊಡ್ಡ ಗೆಲುವಾಗಿದೆ. ಕಳೆದ ಮೂರು ವರ್ಷಕ್ಕೂ ಅಧಿಕ ದಿನಗಳ ಕಾಲ ನರಗುಂದದಲ್ಲಿ […]

ಬಂಡವಾಳಶಾಹಿ ಕಂಪನಿಗಳಿಂದ ನಮ್ಮ ಭಾಷೆಗೂ ಕತ್ತು ಬಂದಿದೆ: ಪ್ರೊ ಮಳಗಿ ವಿಷಾದ

ಗೋಕಾಕ: ಬಂಡವಾಳಶಾಹಿ ಕಂಪನಿಗಳು ನಮ್ಮ ಭೂಮಿಯನ್ನಷ್ಟೇ ಒತ್ತುವರಿ ಮಾಡಿಕೊಂಡಿಲ್ಲ ನಮ್ಮ ಭಾಷೆ, ಸಂಸ್ಕೃತಿಯನ್ನು ಒತ್ತುವರಿ ಮಾಡಿಕೊಂಡಿವೆ ಇದರಿಂದ ನಮ್ಮ ಭಾಷೆಗೆ ಕುತ್ತು ಬಂದೊದಗಿದೆ ಎಂದು ನಿವೃತ್ತ ಪ್ರಾಧ್ಯಾಪಕ, ಚಿಂತಕ ಪ್ರೊ. ಗಂಗಾಧರ ಮಳಗಿ ವಿಷಾದ ವ್ಯಕ್ತಪಡಿಸಿದರು. ನಗರದಲ್ಲಿ ಇತ್ತೀಚಿಗೆ ಚುಟುಕು ಸಾಹಿತ್ಯ ಪರಿಷತ್ ಹಾಗೂ ಸಿರಿಗನ್ನಡ ಮಹಿಳಾ ವೇದಿಕೆ ಹಮ್ಮಿಕೊಂಡಿದ್ದ ‘ತಿಂಗಳ ಕವಿ ಸಮಯದ’ ಕವಿ ಕಾವ್ಯ ದರ್ಶನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಆನಂದ ಗೋಟಡಕಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾವ್ಯ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ […]

ಗೋಕಾಕ:ಮಮದಾಪೂರ ಸಹಕಾರಿ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ ಕೊಣ್ಣೂರ ಆಯ್ಕೆ

ಗೋಕಾಕ:ಮಮದಾಪೂರ ಸಹಕಾರಿ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ ಕೊಣ್ಣೂರ ಆಯ್ಕೆ

ಗೋಕಾಕ: ತಾಲೂಕಿನ ಮಮದಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ  ಜರುಗಿದ ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚಂದ್ರಶೇಖರ ಕೊಣ್ಣೂರ ಹಾಗೂ ಉಪಾಧ್ಯಕ್ಷರಾಗಿ ಸಿದ್ರಾಮಪ್ಪ ಲಂಗೋಟಿ ಅವರು ಅವಿರೋಧವಾಗಿ ಆಯ್ಕೆಗೊಂಡರು. ಈ ಸಂದರ್ಭದಲ್ಲಿ ಸದಸ್ಯರುಗಳಾದ ಚನ್ನಪ್ಪ ಗಾಣಗಿ, ಬಸವರಾಜ ಕಮತ, ಸೂರ್ಯಕಾಂತ ಗುದಗನವರ, ರವೀಂದ್ರ ಕಟಕೋಳ, ಲಕ್ಷ್ಮಣ ಮುರಕುಂಬಿ, ಶಾರದಾ ಮುರಗೋಡ, ಮಹಾದೇವಿ ವಾಲಿ, ಸಿದ್ದಪ್ಪ ಮಾಳಗಿ, ಕೆಂಚಪ್ಪ ಭಜಂತ್ರಿ, ರಮೇಶ ಬನ್ನೂರ ಗ್ರಾಮದ ಮುಖಂಡರಾದ ಶಂಕರಗೌಡ ಪಾಟೀಲ, ಈರಣ್ಣಾ ಕಮತ, ನಾಗೇಶ ಶಿದ್ನಾಳ, ಈರಣ್ಣಾ ಜನ್ಮಟ್ಟಿ, […]

ಇಂಡಿ: 9 ಕುರಿಗಳನ್ನು ಕೊಂದು ಹಾಕಿದ ತೋಳಗಳು

ಇಂಡಿ: 9 ಕುರಿಗಳನ್ನು ಕೊಂದು ಹಾಕಿದ ತೋಳಗಳು

ಇಂಡಿ: ಕುರಿ ಹಿಂಡಿನ ಮೇಲೆ ತೋಳಗಳು ದಾಳಿ ನಡೆಸಿ 9 ಕುರಿಗಳನ್ನು ಬಲಿ ಪಡೆದ ಘಟನೆ ಸೋಮವಾರ ಬೆಳಗ್ಗೆ ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ನಡೆದಿದೆ. ಹಿರೇರೂಗಿ  ಗ್ರಾಮದ ನಿವಾಸಿ  ಕರ್ಣಪ್ಪ ದಳವಾಯಿ ಎಂಬುವರರು ತಮ್ಮದೇ ತೋಟದಲ್ಲಿ ಕುರಿಗಳನ್ನು ಮೇಯಿಸಲು ಕರೆದೊಯ್ದಾಗ ತೋಳಗಳು ದಾಳಿ ಮಾಡಿ 9 ಕುರಿಗಳನ್ನು ಕೊಂದು ಹಾಕಿವೆ.  ಸುಮಾರು 70 ಸಾವಿರಕ್ಕೂ ಹೆಚ್ಚು ನಷ್ಟವಾಗಿದ್ದು, ಜೀವನಕ್ಕೆ ಮೂಲ ಆಸರೆಯಾಗಿದ್ದ ಕುರಿಗಳನ್ನು ಕಳೆದುಕೊಂಡ ಕರ್ಣಪ್ಪ ಕಂಗಾಲಾಗಿದ್ದಾರೆ.   ಅಮೀತ ಇಂಗಳಗಾಂವಿhttp://udayanadu.com

ಒಂಟೆ-ಗೋವು ಅಕ್ರಮ ಸಾಗಾಟಕ್ಕೆ ಬ್ರೇಕ್ ಹಾಕಿ: ಜಿಲ್ಲಾಧಿಕಾರಿ ಜಿಯಾವುಲ್ಲಾ ಸೂಚನೆ

ಒಂಟೆ-ಗೋವು ಅಕ್ರಮ ಸಾಗಾಟಕ್ಕೆ ಬ್ರೇಕ್ ಹಾಕಿ: ಜಿಲ್ಲಾಧಿಕಾರಿ ಜಿಯಾವುಲ್ಲಾ ಸೂಚನೆ

ಬೆಳಗಾವಿ:  ಒಂಟೆ ಹಾಗೂ ಗೋವುಗಳ ವಧೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಒಂಟೆ ಹಾಗೂ ಗೋವುಗಳ ಅನಧಿಕೃತ ಸಾಗಾಣಿಕೆ ಮತ್ತು ವಧೆಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಒಂಟೆ ಹಾಗೂ ಗೋವುಗಳ ಅನಧಿಕೃತ ಸಾಗಾಣಿಕೆ ಹಾಗೂ ವಧೆ ತಡೆಗಟ್ಟುವ ಸಂಬಂಧ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಬ್ಬದ ಸಂದರ್ಭದಲ್ಲಿ ಒಂಟೆ ಹಾಗೂ ಗೋವುಗಳ ವಧೆ ನಡೆಯುವ […]

ಜೀವದ ಹಂಗು ತೊರೆದು ಕೆಲಸ ಮಾಡುವ ಪತ್ರಕರ್ತರಿಗೂ ಸವಲತ್ತುಗಳು ಬೇಕು: ಡಾ:ಸಿದ್ಧರಾಮ ಶ್ರೀ

ಜೀವದ ಹಂಗು ತೊರೆದು ಕೆಲಸ ಮಾಡುವ ಪತ್ರಕರ್ತರಿಗೂ ಸವಲತ್ತುಗಳು ಬೇಕು: ಡಾ:ಸಿದ್ಧರಾಮ ಶ್ರೀ

ಬೆಳಗಾವಿ ಪತ್ರಕರ್ತರಿಗೆ ನಿವೇಶನ ಶಾಸಕ ಅನೀಲ ಬೆನಕೆ ಭರವಸೆ ಬೆಳಗಾವಿ:-ಜೀವದ ಹಂಗು ತೊರೆದು ಕೆಲಸ ಮಾಡುವ ಪತ್ರಕರ್ತರಿಗೂ ಸರ್ಕಾರದಿಂದ ಅಗತ್ಯ ಸೌಕರ್ಯಗಳು ದೊರಕಬೇಕು ಪತ್ರಕರ್ತರದ್ದು ನಿಜಕ್ಕೂ ಅಪಾಯಕಾರಿ ಮತ್ತು ಪ್ರತಿನಿತ್ಯ ಸವಾಲಿನ ಕೆಲಸ ಎಂದು ಡಾ.ಸಿದ್ಧರಾಮ ಸ್ವಾಮೀಜಿ ಹೇಳಿದರು. ಬೆಳಗಾವಿಯ ನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಕರ್ತರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಗಿಲ್ ಯುದ್ಧ ನಡೆದಲ್ಲೂ ಸಹ ವರದಿಗೆ ಪತ್ರಕರ್ತರು ಹೋಗಿದ್ದನ್ನು ಕಂಡಿದ್ದೇನೆ. ಪ್ರವಾಹದ ಪರಿಸ್ತಿತಿಯಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಗಲಾಟೆಗಳು […]

ನೇಣಿಗೆ ಯುವಕ ಶರಣು

ನೇಣಿಗೆ ಯುವಕ ಶರಣು

ಸಿಂದಗಿ: ಪಟ್ಟಣದ ಮೋರಟಗಿ ರಸ್ತೆಯಲ್ಲಿನ ಶಿವಶಂಕರ ಬಡಾವಣೆಯಲ್ಲಿನ ಮನೆಯೊಂದರಲ್ಲಿ ಯುವಕನೊಬ್ಬ ನೇಣಿಗೆ ಶರಣಾಗಿದ್ದಾನೆ. ಮೋರಟಗಿ ಗ್ರಾಮದ  ಸಚಿನ್ ಮಲ್ಲಿಕಾರ್ಜುನ ಒಣಗಾನ (17)  ಎಂಬಾತನೇ ಮೃತ ಯುವಕನಾಗಿದ್ದು, ನೇಣಿಗೆ ಶರಣಾಗಲು ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಮೃತ ಯುವಕನ ತಾಯಿ ಜೈಲಿನಲ್ಲಿನ ತನ್ನಇನ್ನೊಬ್ಬ ಮಗನನ್ನು ಭೇಟಿ ಮಾಡಲು ತೆರಳಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪಿಎಸ್ಐ ನಿಂಗಪ್ಪ ಪೂಜಾರಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  udayanadu2016

1 2 3 484