ಕೇಂದ್ರ ಸರಕಾರದ ಕಿಸಾನ ಸಮ್ಮಾನ ಯೋಜನೆ ಸದುಪಯೋಗ ಪಡೆದುಕೊಳ್ಳಿ: ರೂಡಗಿ

ಕೇಂದ್ರ ಸರಕಾರದ ಕಿಸಾನ ಸಮ್ಮಾನ ಯೋಜನೆ ಸದುಪಯೋಗ ಪಡೆದುಕೊಳ್ಳಿ: ರೂಡಗಿ

ಜಮಖಂಡಿ: ಸಣ್ಣ, ಅತೀ ಸಣ್ಣ ರೈತರ ಆದಾಯ ವೃದ್ಧಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಕಿಸಾನ ಸಮ್ಮಾನ ನಿಧಿ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದು  ಉಪ ಕೃಷಿ ನಿರ್ದೇಶಕರಾದ ಎಲ್.ಐ. ರೂಡಗಿ ಹಾಗೂ ಸಹಾಯಕ ಕೃಷಿ ನಿರ್ದೇಶಕರಾದ ಬಿ.ಜಿ. ಮಾಳೆದ ತಿಳಿಸಿದರು. ಪಟ್ಟಣದಲ್ಲಿ  ಕೃಷಿ ಇಲಾಖೆಯಲ್ಲಿ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಮಾತಾನಾಡಿದ ಅವರು, ವಿನೂತನವಾಗಿ ಘೋಷಿಸಿದ ಯೋಜನೆಯ 6 ಸಾವಿ ರೂಗಳ ಸಹಾಯ ಸಹಾಯ ಧನಕ್ಕಾಗಿ ತಮ್ಮ ಆಧಾರ್ ನೊಂದಿಗೆ ಜೋಡಣೆಯಾದ ಬ್ಯಾಂಕ್ ಖಾತೆಯ ಪಾಸ್ […]

ಜಮಖಂಡಿ: ರಾಜಾರೋಷವಾಗಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ವ್ಯಕ್ತಿ ಬಂಧನ

ಜಮಖಂಡಿ: ರಾಜಾರೋಷವಾಗಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ವ್ಯಕ್ತಿ ಬಂಧನ

ಜಮಖಂಡಿ: ರಾಜಾರೋಷವಾಗಿ  ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ವ್ಯಕ್ತಿ ಮನೆ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಹಣ ಹಾಗೂ ವತ್ತಿಯಾಗಿರಿಸಿಕೊಂಡ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸಂತೋಷ ಸುತಾರ ಎನ್ನುವ ವ್ಯಕ್ತಿ ನಗರದಲ್ಲಿ ಮಿಟರ್ ಬಡ್ಡಿ ದಂಧೆ ರಾಜಾರೋಶವಾಗಿ ನಡೆಸುತ್ತಿದ್ದಾನೆ ಎಂಬ ದೂರಿನನ್ವಯ ಬಾಗಲಕೋಟ ಜಿಲ್ಲಾ ಎಸ್ ಪಿ ಸಿ.ಬಿ.ರಿಷಂತ ಅವರ ಮಾರ್ಗದರ್ಶನದ ಮೇರೆಗೆ ಸಿಪಿಐ ಜಯವಂತ ದುಲಾರೆ, ಎಸ್.ಎಮ್. ತಹಶೀಲದಾರ, ಜಮಖಂಡಿ ಸಿಪಿಐ ಮಹಾಂತೇಶ ಹೊಸಪೆಟ, ಪಿಎಸ್ ಐ ದಿನೇಶ ಜವಳಕರ ಹಾಗೂ ಸಿಬ್ಬಂದಿ […]

ಕಾರ್ಮಿಕ ವೃತ್ತ ನಿರೀಕ್ಷಕ ಗೋಪಾಲ ಧೂಪದ ಎಸಿಬಿ ಬಲೆಗೆ!

ಕಾರ್ಮಿಕ ವೃತ್ತ ನಿರೀಕ್ಷಕ ಗೋಪಾಲ ಧೂಪದ ಎಸಿಬಿ ಬಲೆಗೆ!

ಜಮಖಂಡಿ:  ಲಂಚ  ಪಡೆಯುತ್ತಿದ್ದ ವೃತ್ತ ನಿರೀಕ್ಷಕ ಅಧಿಕಾರಿ ಗೋಪಾಲ ದೂಪದ ಎಸಿಬಿ ಬಲೆಗೆ ಬಿದ್ದ ಘಟನೆ ಶನಿವಾರ ನಗರದಲ್ಲಿ ನಡೆದಿದೆ. ನಗರ ನಿವಾಸಿ ಪ್ರದೀಪ್ ಹಂಚಿನಾಳ ಅವರ ಸಾದ್ವಿ ಮ್ಯಾನ್ ಪವರ್ ಏಜೆನ್ಸಿ ಸಂಸ್ಥೆ ನೋಂದಣಿ ಪ್ರಮಾಣ ಪತ್ರ ನೀಡಲು 45 ಸಾವಿರ ರೂ ಲಂಚ ಬೇಡಿಕೆ ಇಟ್ಟಿದ್ದ. ಮುಂಗಡವಾಗಿ 2500 ರೂ. ಲಂಚ ಪಡೆದಿದ್ದ. ಇಂದು ಕಚೇರಿಯಲ್ಲಿ ಮತ್ತೆ 25 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಡಿಎಸ್ ಪಿ ಎಮ್.ವ್ಹಿ. ಮಲ್ಲಾಪೂರ, ರಾಘವೇಂದ್ರ […]

ಜಮಖಂಡಿ: ಚಾಲಕನನ್ನು ಕೊಲೆ ಮಾಡಿದ ಆರೋಪಿಗೆ ಗಲ್ಲು, ಇಬ್ಬರಿಗೆ ಜೀವಾವಧಿ ಶಿಕ್ಷೆ

ಜಮಖಂಡಿ: ಚಾಲಕನನ್ನು ಕೊಲೆ ಮಾಡಿದ ಆರೋಪಿಗೆ ಗಲ್ಲು, ಇಬ್ಬರಿಗೆ ಜೀವಾವಧಿ ಶಿಕ್ಷೆ

ಜಮಖಂಡಿ: ಕಾರಿನ ಚಾಲಕನನ್ನು ಕಾರಿನೊಂದಿಗೆ ಅಪಹರಿಸಿ ಕೊಲೆ ಮಾಡಿದ ಅಪರಾಧಕ್ಕಾಗಿ ಓರ್ವನಿಗೆ ಗಲ್ಲು ಇಬ್ಬರಿಗೆ ಜೀವಾವಧಿ ಶಿಕ್ಷೆ ನೀಡಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎ.ಕೆ. ನವೀನ ಕುಮಾರಿಯವರು ತೀರ್ಪು ನೀಡಿದ್ದಾರೆ. ಕಾರು ಕದಿಯಲು ಚಾಲಕರಿಗೆ ಬಾಡಿಗೆಯ ಆಸೆಯನ್ನು ಹುಟ್ಟಿಸಿ ಮಾರ್ಗಮಧ್ಯದಲ್ಲಿ ಚಾಲಕನನ್ನು ಕೊಲೆ ಮಾಡಿ ವಾಹನವನ್ನು ಮಾರಾಟ ಮಾಡುತ್ತಿದ್ದ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಂದಗಿ ಗ್ರಾಮದ ಆರೋಪಿಗಳಾದ ಶರಣಬಸವ ದೇಗಿನಾಳ(ಗಲ್ಲು ಶಿಕ್ಷೆ), ರೇಬಣ್ಣ ಬೀರಪ್ಪ ಸೀತಿಮನಿ(ಜೀವಾವಧಿ), ಅಯಾಳಸಿದ್ಧ ದೊಡಮನಿ( ಜೀವಾವಧಿ) ಹಾಗೂ ತಲಾ 2ಲಕ್ಷ […]

ಕಲಾದಗಿ ಇಸ್ತಿಮಾ ವಿರೋಧಿಸಿ ಮತಿಯ ಭಾವನೆ ಹರಡಿಸುತ್ತಿರವರಿಗೆ ಧಿಕ್ಕಾರ ಎಂದ್ರು ಡಿಎಸ್ಎಸ್ ಮುಖಂಡರು

ಕಲಾದಗಿ ಇಸ್ತಿಮಾ ವಿರೋಧಿಸಿ ಮತಿಯ ಭಾವನೆ ಹರಡಿಸುತ್ತಿರವರಿಗೆ ಧಿಕ್ಕಾರ ಎಂದ್ರು ಡಿಎಸ್ಎಸ್ ಮುಖಂಡರು

ಜಮಖಂಡಿ: ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ಫೆ. 16 ರಿಂದ ನಡೆಯುವ ಮೂರು ದಿನದ ಮುಸ್ಲಿಂ ಧಾರ್ಮಿಕ ಸಮ್ಮೇಳನಕ್ಕೆ ವಿರೋಧ ಮಾಡುತ್ತಿರುವದು ಸರಿಯಾದ ಕ್ರಮವಲ್ಲ ಕೆಲವೆ ಕೆಲವು ವ್ಯಕ್ತಿಗಳು ಈ ಸಮ್ಮೇಳನ ಕುರಿತು ತಪ್ಪು ಮಾಹಿತಿಗಳನ್ನು ನೀಡಿ ಮುಗ್ದ ಜನರಿಗೆ ಮತಿಯ ಭಾವಣೆ ಮೂಡಿಸುತ್ತಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ ರಾಜ್ಯ ಸಂಚಾಲಕ ರಾಜು ಮೇಲಿನಕೆರಿ ಹೇಳಿದ್ದಾರೆ. ಜಿಲ್ಲೆಯಲ್ಲಿ ಹಿಂದೂ ಸಮ್ಮೇಳನ ಮತ್ತು ಆರ್ ಎಸ್ ಎಸ್ ಪಥಸಂಚಲನಕ್ಕೆ ಮುಸ್ಲಿಂ ಬಾಂಧವರು ಪೂಶ್ಪಾರ್ಪಣೆ ಮಾಡುವ […]

ಶಾಸಕನಾಗುತ್ತೇನೆ ಎಂದು ಕನಸಿನಲ್ಲು ಅಂದುಕೊಂಡಿರಲಿಲ್ಲ:ಆನಂದ ನ್ಯಾಮಗೌಡ

ಶಾಸಕನಾಗುತ್ತೇನೆ ಎಂದು ಕನಸಿನಲ್ಲು ಅಂದುಕೊಂಡಿರಲಿಲ್ಲ:ಆನಂದ ನ್ಯಾಮಗೌಡ

ಜಮಖಂಡಿ:ಕ್ಷೆತ್ರದಲ್ಲಿ ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡುವ ಮೂಲಕ ಜನತೆಗೆ ಕೃತಜ್ಞತೆ ಸಲ್ಲಿಸುತ್ತೆನೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು. ತಾಲೂಕಿನ ಮರೆಗುದ್ದಿ ಗ್ರಾಮದಲ್ಲಿ ಲೋಕೊಪಯೋಗಿ ಇಲಾಖೆಯಿಂದ 2018-19ರ ಟಿ.ಎಸ್.ಪಿ ಯೋಜನೆಯಡಿಯಲ್ಲಿ ಎಸ್.ಟಿ ಕಾಲನಿಯಲ್ಲಿ ಅಂದಾಜು 24ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ನಾನು ಶಾಸಕನಾಗುತ್ತೇನೆ ಎಂದು ಕನಸಿನಲ್ಲು ಅಂದುಕೊಂಡಿರಲಿಲ್ಲ? ಆದರೇ ವಿಧಿಯಾಟಕ್ಕೆ ನಮ್ಮ ತಂದೆ ಹಿಂದಿನ ಶಾಸಕ ದಿ. ಸಿದ್ದು ನ್ಯಾಮಗೌಡರ ಅಕಾಲಿಕ ನಿಧನದಿಂದ ಮತ್ತೆ ಉಪಚುನಾವನೆ ನಡೆಯುವಾಗ ಪಕ್ಷದ ವರಿಷ್ಠರು […]

ಸಮಾಜದ ಸಂಬಂಧಗಳ ಗಟ್ಟಿಗೊಳಿಸುವ ಕಾರ್ಯದಲ್ಲಿ ರೋಟರಿ ಸಂಸ್ಥೆ: ಶಾಸಕ ಆನಂದ

ಸಮಾಜದ ಸಂಬಂಧಗಳ ಗಟ್ಟಿಗೊಳಿಸುವ ಕಾರ್ಯದಲ್ಲಿ ರೋಟರಿ ಸಂಸ್ಥೆ: ಶಾಸಕ ಆನಂದ

ಜಮಖಂಡಿ: ಮಧುಮೇಹಿಗಳ ಶಿಬಿರ ಆಯೋಜನೆ, ಸಾರ್ವಜನಿಕರ ವೈದ್ಯಕೀಯ ತಪಾಸಣೆ ಹಾಗೂ ಶಿಕ್ಷಣದ ಮಹತ್ವ ಕುರಿತು ಜಾಗೃತಿ ಮೂಡಿಸುವ ಸಾಮಾಜಿಕ ಸೇವಾ ಕಾರ್ಯಗಳನ್ನು ಆಯೋಜಿಸುವ ಮೂಲಕ ಸಮಾಜದ ಸಂಬಂಧಗಳನ್ನು ಗಟ್ಟಿಗೊಳಿಸುವ ಕಾರ್ಯದಲ್ಲಿ ರೋಟರಿ ಸಂಸ್ಥೆ ತೊಡಗಿದೆ ಎಂದು ಶಾಸಕ ಆನಂದ ನ್ಯಾಮಗೌಡ ಬಣ್ಣಿಸಿದರು. ರೋಟರಿ ಸಂಸ್ಥೆಯ ಸ್ಥಳೀಯ ಘಟಕದ ಆಶ್ರಯದಲ್ಲಿ ಇಲ್ಲಿನ ಎಸ್‍ಆರ್‍ಎ ಕ್ಲಬ್‍ನಲ್ಲಿ ನಡೆದ ವಾರದ ಸಭೆಯಲ್ಲಿ ಸಂಸ್ಥೆಯ ಪರವಾಗಿ ನೀಡಿದ ಸನ್ಮಾನ ಮತ್ತು ಸಮುದಾಯ ಭವನಕ್ಕೆ ಅನುದಾನ ಕೋರಿ ಸಲ್ಲಿಸಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು. […]

ಅಕ್ಷರ ಕ್ರಾಂತಿ ಮಾಡಿ ಮೂಡನಂಬಿಕೆ ವಿರುದ್ಧ ಹೋರಾಟ ಮಾಡಿದ ಪ್ರಪ್ರಥಮ ಮಹಿಳೆ ಸಾವಿತ್ರಿಬಾಯಿ: ಅಕ್ಷತಾ ನ್ಯಾಮಗೌಡ

ಅಕ್ಷರ ಕ್ರಾಂತಿ ಮಾಡಿ ಮೂಡನಂಬಿಕೆ ವಿರುದ್ಧ ಹೋರಾಟ ಮಾಡಿದ ಪ್ರಪ್ರಥಮ ಮಹಿಳೆ ಸಾವಿತ್ರಿಬಾಯಿ: ಅಕ್ಷತಾ ನ್ಯಾಮಗೌಡ

ಜಮಖಂಡಿ: ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆಯವರು ಜೀವಿಸಿದಂತಹ ಕಾಲಮಾನದಲ್ಲಿ ಹಕ್ಕು ಅವಕಾಶಗಳು ಇರದೇ ಇದ್ದರೂ ಕೂಡ ಹೋರಾಟದ ಮೂಲಕ ಅಕ್ಷರ ಕ್ರಾಂತಿಯನ್ನು ಮಾಡಿ ಮೂಡನಂಬಿಕೆಗಳನ್ನು ಹೋಗಲಾಡಿಸಿ ಹೋರಾಟ ಮಾಡಿದ ಪ್ರಪ್ರಥಮ ಮಹಿಳೆ ಎಂದು ಹುಬ್ಬಳ್ಳಿಯ ದೇಶಪಾಂಡೆ ಪೌಂಡೇಶನ್‍ನ ಪ್ರೊಗ್ರಾಂ ಆಫೀಸರ್ ಕುಮಾರಿ. ಅಕ್ಷತಾ. ನ್ಯಾಮಗೌಡ ಹೇಳಿದರು. ಸಮೀಪದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಹುನ್ನೂರಿನಲ್ಲಿ ಗುರುವಾರ ನಡೆದ ಮಹಿಳಾ ಸಬಲೀಕರಣದ ಘಟಕದಡಿಯಲ್ಲಿ ಹಮ್ಮಿಕೊಂಡಿದ್ದ ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆಯವರ 188ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾವಿತ್ರಿಬಾಯಿ […]

ಬಾಯ್ಲರ್ ಸ್ಪೋಟದಲ್ಲಿ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ಪರಿಹಾರ ಮಾಜಿ ಸಚಿವ ಮುರುಗೇಶ್ ನಿರಾಣಿ

ಬಾಯ್ಲರ್ ಸ್ಪೋಟದಲ್ಲಿ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ಪರಿಹಾರ ಮಾಜಿ ಸಚಿವ ಮುರುಗೇಶ್ ನಿರಾಣಿ

ಬಾಗಲಕೋಟೆ : ಮುಧೋಳ ತಾಲೂಕಿನ ಕುಳಲಿ ಬಳಿ ಇರುವ ಸಕ್ಕರೆ ಕಾರ್ಖಾನೆಯ ಡಿಸ್ಟಿಲರಿ ಸಂಸ್ಕರಣಾ ಘಟಕದಲ್ಲಿ ಸ್ಪೋಟ ಸಂಭವಿಸಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದು, ದುರ್ಘಟನೆ ಬಳಿಕ ಫ್ಯಾಕ್ಟರಿ ಮಾಲೀಕ, ಮಾಜಿ ಸಚಿವ ಮುರುಗೇಶ್ ನಿರಾಣಿ ಮೃತರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಿಸಿದ್ದೇನೆ. ಮೃತಪಟ್ಟವರ ಕುಟುಂಬದಲ್ಲಿ ಯಾರಾದರೂ ನಮ್ಮ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಮನಸ್ಸಿದ್ದರೆ ಅವರ ವಿದ್ಯಾರ್ಹತೆ ಅನುಗುಣವಾಗಿ […]

ಬೆಳಗಾವಿಯಲ್ಲಿ 5 ನೇ ಪರಿವರ್ತನಾ ದಿನಾಚರಣೆಗೆ ವೇದಿಕೆ ಸಜ್ಜು: ಶ್ರೀಶೈಲ ಅಂಟಿನ್

ಬೆಳಗಾವಿಯಲ್ಲಿ 5 ನೇ ಪರಿವರ್ತನಾ ದಿನಾಚರಣೆಗೆ ವೇದಿಕೆ ಸಜ್ಜು: ಶ್ರೀಶೈಲ ಅಂಟಿನ್

ಬಾಗಲಕೋಟೆ:  ಮಾನವ ಬಂಧುತ್ವ ವೇದಿಕೆಯು  ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವಾದ ಡಿಸೆಂಬರ್ 6 ರಂದು ಬೆಳಗಾವಿ ಸದಾಶಿವನಗರದ ಬುದ್ಧ, ಬಸವ, ಅಂಬೇಡ್ಕರ ಶಾಂತಿಧಾಮ (ಸ್ಮಶಾನ)ದಲ್ಲಿ 5 ನೇ ಮೌಢ್ಯ ವಿರೋಧಿ ಪರಿವರ್ತನಾ ದಿನ ಆಚರಣೆ ನಡೆಸಲಿದೆ ಎಂದು ಬಾಗಲಕೋಟೆ ಜಿಲ್ಲಾ ಸಂಚಾಲಕ ಶ್ರೀಶೈಲ ಅಂಟಿನ್ ಹೇಳಿದರು. ಇಂದು ಇಲ್ಲಿನ ಪರ್ತಕರ್ತರ ಭವನದಲ್ಲಿ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ  ನಡೆಯಲಿದ್ದು  […]

1 2 3 29