ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ: ಸಚಿವ ಆರ್.ವಿ.ದೇಶಪಾಂಡೆ

ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ: ಸಚಿವ ಆರ್.ವಿ.ದೇಶಪಾಂಡೆ

ಬಾಗಲಕೋಟೆ: ರಾಜ್ಯದಲ್ಲಿ ಕಳೆದೆರೆಡು ವರ್ಷಗಳಿಂದ ಭೀಕರ ಬರಗಾಲ ಆವರಿಸಿರುವುದರಿಂದ ಜಿಲ್ಲೆಯಲ್ಲಿ ಉದ್ಯೋಗ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ತೊಂದರೆಯಾಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ  ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು. ಸಚಿವ ಸಂಪುಟ ಉಪಸಮಿತಿ ನೇತೃತ್ವದಲ್ಲಿ ಶುಕ್ರವಾರ ಬೀಳಗಿ ತಾಲೂಕಿನ ಗಿರಿಸಾಗರದಲ್ಲಿ  ಉದ್ಯೋಗ ಖಾತ್ರಿ ಕಾಮಗಾರಿಯನ್ನು ವೀಕ್ಷಿಸಿದ ನಂತರ ಜಿ.ಪಂ ಸಭಾಭವನದಲ್ಲಿ ಅಧಿಕಾರಿಗಳೊಂದಿಗೆ  ಮಾತನಾಡಿದ ಅವರು,  ಅಧಿಕಾರಿಗಳು  ಬರ ಕಾಮಗಾರಿ, ಜನರ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು ಎಂದು ಎಚ್ಚರಿಕೆ […]

ಬಾಗಲಕೋಟ ಹಬ್ಬ ಕಾರ್ಯಕ್ರಮದಲ್ಲಿ ರಘು ದೀಕ್ಷಿತ್ ಸಂಗೀತ ಸಂಜೆ

ಬಾಗಲಕೋಟ ಹಬ್ಬ ಕಾರ್ಯಕ್ರಮದಲ್ಲಿ ರಘು ದೀಕ್ಷಿತ್ ಸಂಗೀತ ಸಂಜೆ

ಬಾಗಲಕೋಟೆ:ಇದೇ ದಿ.20 ರಂದು ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಜೆ 6 ಗಂಟೆಗೆ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಬಾಗಲಕೋಟ ಹಬ್ಬ ತಂಡದ ರವಿ ಕುಮಟಗಿ ಹೇಳಿದರು. ಅವರು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ,ಈ ಭಾರಿ ಹೆಸರಾಂತ ಗಾಯಕ ಸಂಗೀತ ನಿದೇಶಕ ಮತ್ತು ಉತ್ತರ ಕರ್ನಾಟಕ ಕಬೀರಂದೇ ಖ್ಯಾತ ರಾದ ಹೆಸರಾಂತ ತತ್ವಪದ ರಚನೆಕಾರ ಶಿಶುನಹಾಳ ಶರೀಫರ ಪದಗಳನ್ನು ವಿದೇಶಿ ಶೈಲಿಯಲ್ಲಿ ಹಾಡಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ರಘು ದೀಕ್ಷಿತ್ ಅವರ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆಂದು ತಿಳಿಸಿದರು. ಈ […]

ಏಪ್ರಿಲ್ 19 ಬಾಲ್ಯವಿವಾಹ ತಡೆ ಜಾಗೃತಿ ಆಂದೋಲನ

ಏಪ್ರಿಲ್ 19 ಬಾಲ್ಯವಿವಾಹ ತಡೆ ಜಾಗೃತಿ ಆಂದೋಲನ

ಬಾಗಲಕೋಟೆ: ಬಾಲ್ಯವಿವಾಹ ತಡೆಗಟ್ಟಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ  ಏಪ್ರಿಲ್ 19 ರಿಂದ 25 ವರೆಗೆ ಬಾಗಲಕೋಟೆ ಜಿಲ್ಲಾದ್ಯಂತ ಬೃಹತ್ ಜಾಗೃತಿ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ತೊರವಿ  ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಸಭೆಯಲ್ಲಿ ಮಾತನಾಡಿದ ಅವರು,  ಬಾಲ್ಯವಿವಾಹ ತಡೆಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರೂ ಕೆಲವಡೆ  ಪ್ರಕರಣಗಳು ಕಂಡು ಬರುತ್ತಿವೆ. ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಬೃಹತ್ ಜಾಗೃತಿ […]

ರಸ್ತೆ ಅಪಘಾತ ತಡೆಗಟ್ಟಲು ಸೂಕ್ತ ಕ್ರಮ: ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ

ರಸ್ತೆ ಅಪಘಾತ ತಡೆಗಟ್ಟಲು ಸೂಕ್ತ ಕ್ರಮ: ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ

ಬಾಗಲಕೋಟೆ: ಗದ್ದನಕೇರಿ ಕ್ರಾಸ್‍ನಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದ್ದು, ತಜ್ಞರಿಂದ ಸಲಹೆ ಸೂಚನೆ ಪಡೆದು ಅಪಘಾತ ತಡೆಗಟ್ಟುವಲ್ಲಿ ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣ ಜರುಗಿದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗದ್ದನಕೇರಿ ಕ್ರಾಸ್‍ನಲ್ಲಿ ಬಸ್ ನಿಲ್ದಾಣ ನಿರ್ಮಿಸುವಂತೆ ಕಳೆದ ಮೂರು ವರ್ಷಗಳಿಂದ ಬೇಡಿಕೆ ಇದ್ದರೂ ಈ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳು ಮುತುವರ್ಜಿವಹಿಸಿ ಕಾರ್ಯನಿರ್ವಸುತ್ತಿಲ್ಲವೆಂದ ಅಸಮಾಧಾನ ವ್ಯಕ್ತ ಪಡಿಸಿದರು. ಸುಪ್ರೀಂಕೋರ್ಟ್ ಆದೇಶದನ್ವಯ ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆ […]

ಸೂತಕದ ಮಡುವಿನಲ್ಲಿ ಮದುವೆ ಮಾಡಿದ ಸಂಬಂಧಿಗಳು

ಸೂತಕದ ಮಡುವಿನಲ್ಲಿ ಮದುವೆ ಮಾಡಿದ ಸಂಬಂಧಿಗಳು

ಬಾಗಲಕೋಟೆ: ಮದುವೆ ಕಾರ್ಯಕ್ಮದಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಕಾರ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ್ದರು ಸೂತಕದ ಮಡುವಿನಲ್ಲಿ  ಮದುವೆ ಮಾಡಿದ ಅಪರೂಪದ ಘಟನೆ ಹುನಗುಂದ ತಾಲೂಕಿನ ಇಳಕಲ್ ಗ್ರಾಮದಲ್ಲಿ ನಡೆದಿದೆ. ಕಮತಗಿ ಕ್ರಾಸ್ ಬಳಿ ಕಾರು ಪಲ್ಟಿಯಾಗಿ ಕಾರಲ್ಲಿದ್ದ ಮದುಮಗಳು ಕವಿತಾ ಅದೃಷ್ಟವಶಾತ್ ಪಾರಾಗಿದ್ದು ಕಾಳವ್ವ(70) ಅಶ್ವಿನಿ(22) ಮೃತ ಪಟ್ಟಿದ್ದಾರೆ. ಈ ವಿಷಯವನ್ನು ಮದುಮಗಳಿಗೆ  ಮೆರೆಮಾಚಿ ಮದುವೆ ನಿಲ್ಲದಂತೆ ಎಚ್ಚರಿಕೆವಹಿಸಿ ಅಕ್ಷತಾ ಕಾರ್ಯಕ್ರಮವನ್ನು ನಿರ್ವಹಿಸಿದ್ದಾರೆ. udayanadu2016

1 26 27 28