ಜಮಖಂಡಿ ಉಪಚುನಾವಣೆಯ ಫಲಿತಾಂಶದಿಂದ ಸಮ್ಮಿಶ್ರ ಸರ್ಕಾರ ಪತನ: ಮಹಾಂತೇಶ ಕವಟಗಿಮಠ

ಜಮಖಂಡಿ ಉಪಚುನಾವಣೆಯ ಫಲಿತಾಂಶದಿಂದ ಸಮ್ಮಿಶ್ರ ಸರ್ಕಾರ ಪತನ: ಮಹಾಂತೇಶ ಕವಟಗಿಮಠ

ಜಮಖಂಡಿ: ಜಮಖಂಡಿ ಉಪಚುನಾವಣೆಯ ಫಲಿತಾಂಶದಿಂದ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎಂದು ವಿಧಾನ ಪರಿಷತ್‍ನ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು. ನಗರದ ಮೈಗೂರ ರಸ್ತೆಯ ಸೋಳಂಕಿ ಕಟ್ಟಡದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿಯು ಉಪ ಚುನಾವಣೆಯನ್ನು ಪ್ರತಿಷ್ಠೆಗೆ ತೆಗೆದುಕೊಂಡಿದ್ದು 3 ಲೋಕಸಭಾ ಮತ್ತು 2ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಬಿಜೆಪಿಗೆ ಜಯ ಸಿಗಲಿದೆ ಎಂದರು. ಕಳೆದ ಬಾರಿ ಪಕ್ಷದಲ್ಲಿ ಭಿನ್ನಾಭಿಪ್ರಾಯದಿಂದ ಕೂದ¯ಳತೆಯ ಅಂತರದಿಂದ ಬಿಜೆಪಿಯಿಂದ ಶ್ರೀಕಾಂತ ಕುಲಕರ್ಣಿ ಸೋಲು ಅನುಭವಿಸಿದ್ದರು. ಈ ಬಾರಿ […]

ಜಮಖಂಡಿ ಉಪ ಚುನಾವಣೆ: ಮತದಾರರಿಗಾಗಿ ಜಾಗೃತಿ ಜಾಥಾ

ಜಮಖಂಡಿ ಉಪ ಚುನಾವಣೆ: ಮತದಾರರಿಗಾಗಿ ಜಾಗೃತಿ ಜಾಥಾ

ಜಮಖಂಡಿ: ಉಪ ಚುನಾವಣೆ ಹಿನ್ನೆಲೆ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ಮೂಲಕ  ಮತದಾರರಿಗೆ ಜಾಗೃತಿ ಮೂಡಿಸಲಾಯಿತು. ನಗರದ ಎಸ್ ಆರ್ ಎ ಕ್ಲಬ್ ನಲ್ಲಿ ಜಿ.ಪಂ ಸಿಇಒ ಹಾಗೂ ಸ್ವೀಪ್ ನೋಡಲ್ ಅಧಿಕಾರಿ  ಗಂಗೂಬಾಯಿ ಮಾನಕರ ಮತದಾರರ ಜಾಗೃತಿ ಜಾಥಾ ಗೆ  ಚಾಲನೆ ನೀಡಿದರು. ರ್ಯಾಲಿಯಲ್ಲಿ ಸರಕಾರಿ ಉದ್ಯೋಗಿಗಳು,  ವಿಶೇಷ ಚೇತನರು,  ಬೈಕ್ ಸವಾರರು ಹಾಗೂ ಪೋಲಿಸ್ ಸಿಬ್ಬಂದಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಬಾಗಲಕೋಟ ತಾಪಂ ಇಒ  ಎನ್ ವಾಯ್ ಬಸರಿಗಿಡದ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮಿಳಾ […]

ಜಮಖಂಡಿ ಉಪ ಚುನಾವಣೆ: 10 ಅಭ್ಯರ್ಥಿಗಳಿಂದ 14 ನಾಮಪತ್ರ ಸಲ್ಲಿಕೆ

ಜಮಖಂಡಿ ಉಪ ಚುನಾವಣೆ: 10 ಅಭ್ಯರ್ಥಿಗಳಿಂದ 14 ನಾಮಪತ್ರ ಸಲ್ಲಿಕೆ

ಜಮಖಂಡಿ:  ಉಪ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಸುವುದು ದಿನಾಂಕ ಮುಗಿದಿದ್ದು ಒಟ್ಟು 10 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯಾಗಿವೆ. ಬಿಜೆಪಿಯಿಂದ ಶ್ರೀಕಾಂತ ಕುಲಕರ್ಣಿ (2), ಕಾಂಗ್ರೆಸನಿಂದ ಆನಂದ ನ್ಯಾಮಗೌಡ(4), ಪ್ರಜಾ ಪರಿವರ್ತನಾ ಪಾರ್ಟಿಯಿಂದ ಪರಶುರಾಮ ಮಹಾರಾಜನವರ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕದಿಂದ ಯಮನಪ್ಪ ಗುಣದಾಳ, ಪಕ್ಷೇತರರಾಗಿ ಸಂಗಮೇಶ ಚಿಕ್ಕನರಗುಂದ, ಶ್ರೀಕಾಂತ ಮುಧೊಳೆ, ಮುಸ್ತಫಾ ಜಾಗೀರದಾರ,ಅಮರೋಜ ಡಿ ಮೆಲೊ, ರಾಜಾಸಾಬ ಬುರಾನಸಾಬ ಮಸಳಿ, ರವಿ ಶಿವಪ್ಪ ಪಡಸಲಗಿ ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟು 10 ಜನ ಅಭ್ಯರ್ಥಿಗಳು 14 ನಾಮಪತ್ರಗಳನ್ನು ಸ್ವೀಕೃತಿಯಾಗಿವೆ ಎಂದು ತಹಶೀಲ್ದಾರ ಪ್ರಶಾಂತ ಪಾಟೀಲ ತಿಳಿಸಿದರು. ಅಮೀತ ಇಂಗಳಗಾಂವಿhttp://udayanadu.com

ಮುಳಗಡೆ ಸಂತ್ರಸ್ತರಿಗೆ ಉದ್ಯೋಗಾವಕಾಶ ನೀಡಿ: ಸಾಹಿತಿ ಬಸವ ರಾಜಮಠ

ಮುಳಗಡೆ ಸಂತ್ರಸ್ತರಿಗೆ ಉದ್ಯೋಗಾವಕಾಶ ನೀಡಿ: ಸಾಹಿತಿ ಬಸವ ರಾಜಮಠ

6ನೇ ತಾಲೂಕಾ ಕಸಾಪ ಸಮ್ಮೇಳನ ಸರ್ವಾಧ್ಯಕ್ಷ ಬಸವರಾಜ ಮಠ ಆಗ್ರಹ ಬಾಗಲಕೋಟೆ: ಲಕ್ಷಾಂತರ ರೈತರಿಗೆ ಜೀವಕ್ಕೆ ಆಸರೆಯಾಗುವ ಆಲಮಟ್ಟಿ ಆಣೆಕಟ್ಟು ನಿರ್ಮಾಣದ ಹಿಂದೆ ಬಾಗಲಕೋಟೆ ನಗರ ಸೇರಿದಂತೆ ಅನೇಕ ಹಳ್ಳಿಗಳ ಸಂತ್ರಸ್ತರ ತ್ಯಾಗ ಅವಿಸ್ಮರಣೀಯವಾದುದು ಸಂತ್ರಸ್ತರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶವನ್ನು ಕಲ್ಪಿ ಸಬೇಕು ಎಂದು 6ನೇ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ಸರ್ವಾಧ್ಯಕ್ಷ ಬಸವ ರಾಜಮಠ ಆಗ್ರಹಿಸಿದರು. ತಾಲೂಕಿನ ಮುಚಖಂಡಿ ವೀರಭದ್ರೇಶ್ವರ ಸಭಾಭವನದಲ್ಲಿ ರವಿವಾರ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 6ನೇ […]

ಕನ್ನಡ ಮರೆಯುವ ಘಳಿಗೆ ಸೃಷ್ಠಿಯಾಗಬಾರದು: ಶಾಸಕ ಡಾ.ಚರಂತಿಮಠ

ಕನ್ನಡ ಮರೆಯುವ ಘಳಿಗೆ ಸೃಷ್ಠಿಯಾಗಬಾರದು: ಶಾಸಕ ಡಾ.ಚರಂತಿಮಠ

ಮುಚಖಂಡಿಯಲ್ಲಿ 6ನೇ ತಾಲೂಕಾ ಕಸಾಪ ಸಮ್ಮೇಳನ ಬಾಗಲಕೋಟೆ:  ಕನ್ನಡ ಭಾಷೆ ಉಳಿಯಬೇಕು, ಬೆಳೆಯ ಬೇಕು ಎಂದು  ಮಾತಿನಲ್ಲೇ ಹೇಳದೇ ಕಾರ್ಯರೂಪದಲ್ಲಿರಬೇಕು. ಕನ್ನಡವನ್ನು ಮರೆಯುವಂತಹ ವಾತಾವರಣ ಯಾವ ಕಾಲಕ್ಕೂ ಸೃಷ್ಠಿಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ಶಾಸಕ ಡಾ.ವೀರಣ್ಣ ಸಿ.ಚರಂತಿಮಠ ಹೇಳಿದರು. ತಾಲೂಕಿನ ಮುಚಖಂಡಿ ವೀರಭದ್ರೇಶ್ವರ ಸಭಾಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 6ನೇ ಬಾಗಲಕೋಟೆ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದೀಪಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾ ಡಿದರು. […]

ವೇಗವಾಗಿ ಬಂದ ಬೈಕ್: ಅಪಘಾತ ತಪ್ಪಿಸಲು ಹೋಗಿ ಲಾರಿ ಪಲ್ಟಿ

ವೇಗವಾಗಿ ಬಂದ ಬೈಕ್: ಅಪಘಾತ ತಪ್ಪಿಸಲು ಹೋಗಿ ಲಾರಿ ಪಲ್ಟಿ

ಬಾಗಲಕೋಟೆ:  ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಲಾರಿ ಪಲ್ಟಿಯಾಗಿದ್ದು, ಚಾಲಕ ಸುಮಾರು 2 ಗಂಟೆ ಗೂ ಹೆಚ್ಚು ಕಾಲ ವಾಹನದಲ್ಲಿಯೇ ಸಿಲುಕಿ ಒದ್ದಾಡಿದ್ದಾರೆ. ನಸುಕಿನ ಜಾವ  ಬದಾಮಿಯಿಂದ ಐಹೊಳೆ  ರಾಜ್ಯ ಹೆದ್ದಾರಿ ಕಾಮಗಾರಿಗಾಗಿ  ಲಾರಿಯಲ್ಲಿ ಕಾಂಕ್ರೀಟ್ ಸಾಗಿಸಲಾಗುತ್ತಿತ್ತು. ಎದುರಿಗೆ ವೇಗವಾಗಿ ಬರುತ್ತಿದ್ದ ಬೈಕ್ ನ್ನು ಕಂಡ ಚಾಲಕ ಬೈಕ್ ಸವಾರನನ್ನು ಅಪಘಾತದಿಂದ ಪಾರು ಮಾಡಲು ಹೋಗಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಸುಮಾರು 2 ಗಂಟೆಗೂ ಹೆಚ್ಚು ಕಾಲ ಚಾಲಕ ವಾಹನದಲ್ಲಿಯೇ ನರಳಾಡಿದ್ದರು. ಸ್ಥಳೀಯ ಕಾರ್ಮಿಕರು […]

ಜಮಖಂಡಿ ಉಪಚುನಾವಣೆ: ರಂಗೇರಿದ ಬಿಜೆಪಿ ಅಭ್ಯರ್ಥಿ ಪ್ರಚಾರ

ಜಮಖಂಡಿ ಉಪಚುನಾವಣೆ: ರಂಗೇರಿದ ಬಿಜೆಪಿ ಅಭ್ಯರ್ಥಿ ಪ್ರಚಾರ

ಜಮಖಂಡಿ: ಶಾಸಕ ಸಿದ್ದು ನ್ಯಾಮಗೌಡ ರಸ್ತೆ ಅಪಘಾತದಲ್ಲಿ ಅಕಾಲಿಕ ನಿಧನದ ನಂತರ ತೆರುವಾಗಿದ್ದ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆ ನ. 3ರಂದು ನಡೆಯಲಿದ್ದು, ಅಭ್ಯರ್ಥಿಗಳ  ಪ್ರಚಾರದ ಭರಾಟೆ ಶುರುವಾಗಿದೆ. ನಗರದಲ್ಲಿ  ಶನಿವಾರ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಮತ್ತು ಕಾರ್ಯಕರ್ತರು ಸೇರಿ ಪ್ರಚಾರ ನಡೆಸಿದರು. ನಗರದ ಅಶೋಕ ಸರ್ಕಲನಿಂದ ಉಮಾರಾಮೇಶ್ವರ ರಸ್ತೆಯ ಮೂಲಕ ಸರಾಪ ಬಜಾರ, ಹನುಮಾನ ಚೌಕ, ಸುವರ್ಣ ಚಿತ್ರಮಂದಿರದ ವರೆಗೆ ಎಲ್ಲ ನಗರದ ವ್ಯಾಪಾರಸ್ಥರಿಗೆ ಭೆಟ್ಟಿಯಾಗಿ ಮತಯಾಚಣೆ ಮಾಡುವ ಮೂಲಕ ಪ್ರಚಾರ ಕೈಗೊಂಡರು. […]

ಡಾ. ಅಭಿನವ ಕುಮಾರ ಚನ್ನಬಸವ ಶ್ರೀಗಳಿಗೆ ಸನ್ಮಾನ

ಡಾ. ಅಭಿನವ ಕುಮಾರ ಚನ್ನಬಸವ ಶ್ರೀಗಳಿಗೆ ಸನ್ಮಾನ

ಜಮಖಂಡಿ: ಕನ್ನಡ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜಿತರಾದ ಓಲೆಮಠ  ಡಾ.ಅಭಿನವ ಕುಮಾರ ಚನ್ನಬಸವ ಸ್ವಾಮೀಜಿ ಅವರನ್ನು  ಜಮಖಂಡಿ ಕನ್ನಡ ಸಂಘಟನೆ ಅಧ್ಯಕ್ಷ ಜಗದೀಶ ಗುಡಗುಂಟಿಮಠ ಶನಿವಾರ ನಗರದಲ್ಲಿ  ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕನ್ನಡ ಸಂಘಟನೆ ಪದಾಧಿಕಾರಿಗಳಾದ ಸಿ.ಎಸ್.ಭಾಂಗಿ, ಭೀಮು ಕಮರಡಗಿ, ಶಿವಲಿಂಗ ಮಾಳಿ, ಸಂಗಮೇಶ ಮುತ್ತಿನಕಂತಿಮಠ, ಮಲ್ಲೇಶ ಹೋಸಮನಿ, ಮಲ್ಲು ಮಠ, ಶ್ರೀಶೈಲ ಜಂಬಗಿ ಇತರರು ಇದ್ದರು. ಅಮೀತ ಇಂಗಳಗಾಂವಿhttp://udayanadu.com

ಬಾಗಲಕೋಟೆಯ ಮೂವರು ಗ್ರಾಮೀಣ ಮಹಿಳಾ ನೌಕರರಿಗೆ ರಾಷ್ಟ್ರೀಯ ಪುರಸ್ಕಾರ

ಬಾಗಲಕೋಟೆಯ ಮೂವರು ಗ್ರಾಮೀಣ ಮಹಿಳಾ ನೌಕರರಿಗೆ ರಾಷ್ಟ್ರೀಯ ಪುರಸ್ಕಾರ

ಬಾಗಲಕೋಟೆ: ಪ್ರಧಾನ ಮಂತ್ರಿ ರಾಷ್ಟ್ರೀಯ ಪೋಷಣಾ ಅಭಿಯಾನ ಯೋಜನೆಯಡಿ ಅತ್ಯುತ್ತಮ ಸಾಧನೆ ಮಾಡಿದ್ದ ಬಾಗಲಕೋಟೆ ಜಿಲ್ಲೆಯ ಮೂವರು ಗ್ರಾಮೀಣ ಮಹಿಳಾ ನೌಕರರು ದೆಹಲಿಯಲ್ಲಿ ನಿನ್ನೆ ಮಹಾ ಪೋಷಣಾ ರಾಷ್ಟ್ರೀಯ ಪ್ರಶಸ್ತಿ ಪಡೆಯುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ದೆಹಲಿಯ ಅಶೋಕ್ ಹೊಟೇಲ್ ಸಭಾಭವನದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಗಲಕೋಟೆ ಜಿಲ್ಲೆ ಮೂವರು ಗ್ರಾಮೀಣ ಮಹಿಳಾ ನೌಕರರು ಪ್ರಶಸ್ತಿ ಸ್ವೀಕರಿಸಿದರು. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಆರೋಗ್ಯ ರಕ್ಷಣೆ ಹಾಗೂ […]

ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪಣತೊಡಿ: ಜಗದೀಶ ಗುಡಗುಂಟಿಮಠ

ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪಣತೊಡಿ: ಜಗದೀಶ ಗುಡಗುಂಟಿಮಠ

ಜಮಖಂಡಿ: ಯುವಕರು ದುಶ್ಚಟಗಳಿಗೆ ಮಾರಹೋಗದೆ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಬೇಕಾಗಿದೆ ಎಂದು ಉದ್ಯಮಿ ಜಗದೀಶ ಗುಡಗುಂಟಿಮಠ ಹೇಳಿದರು. ನಗರದ ಕಲ್ಯಾಣ ಮಠದಲ್ಲಿ ನಡೆದ ತಾಲೂಕಾ ಸಂಘ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭವ್ಯ ಭಾರತದ ಭವಿಷ್ಯ ನಿರ್ಮಾಣ ಮಾಡಬೇಕಾದರೆ ನಾವು ನಿವೆಲ್ಲರು ಶೃಮಿಸಬೇಕಾಗಿದೆ ಎಂದರು. ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ಮನೆಯಲ್ಲಿ ಒಳ್ಳೆಯ ಸಂಸ್ಕಾರ ನೀಡಿ ಒಂದು ಉತ್ತಮ ಸಮಾಜ ನಿರ್ಮಾಣಮಾಡುವುದು ಜಂಗಮ ಧರ್ಮದ ಪದ್ದತಿಯಾಗಿದೆ. […]