ಬೆಳಗಾವಿ ಜಿಲ್ಲಾದ್ಯಂತ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಬೆಳಗಾವಿ ಜಿಲ್ಲಾದ್ಯಂತ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಬೆಳಗಾವಿ: ವಿಶ್ವಾಸಮತ ಯಾಚಿಸಲು ವಿಫಲವಾಗಿ ಬಿಎಸ್ ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಂತೆ ಬೆಳಗಾವಿ ಜಿಲ್ಲಾದ್ಯಂತ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಬೆಳಗಾವಿ, ಅಥಣಿ, ರಾಯಬಾಗ, ಚಿಕ್ಕೋಡಿ ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ಜೆಡಿಎಸ್ , ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಹಿ ಹಂಚಿ ಕಾರ್ಯಕರ್ತರು ಸಂಭ್ರಮಿಸಿದರು.  ಕುಮಾರಸ್ವಾಮಿ, ಸಿದ್ದರಾಮಯ್ಯ ಹಾಗೂ ಸತೀಶ ಜಾರಕಿಹೊಳಿ ಅವರ ಪರ ಘೋಷಣೆ ಕೂಗಿ ಸಂಭ್ರಮ ವ್ಯಕ್ತಪಡಿಸಿದರು. Ameet ingalganvihttp://udayanadu.com

ಹಿರಣ್ಯಕೇಶಿ ನದಿ ಹೂಳೆತ್ತುವ ಕಾಮಗಾರಿ ಶೀಘ್ರ: ಸಿಇಒ ರಾಮಚಂದ್ರನ್

ಹಿರಣ್ಯಕೇಶಿ ನದಿ ಹೂಳೆತ್ತುವ ಕಾಮಗಾರಿ ಶೀಘ್ರ: ಸಿಇಒ ರಾಮಚಂದ್ರನ್

ಬೆಳಗಾವಿ: ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿಯಿಂದ ನರೇಗಾ ಯೋಜನೆಯಡಿ ಶೀಘ್ರದಲ್ಲೇ 2.5 ಕಿ.ಮೀ ವರೆಗೆ ಹೂಳೆತ್ತುವ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್.ಆರ್ ಅವರು ತಿಳಿಸಿದರು. ಇಲ್ಲಿನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ  ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹಿರಣ್ಯಕೇಶಿ ನದಿಯು ಹುಕ್ಕೇರಿ ತಾಲೂಕಿನಲ್ಲಿ 22 ಕಿ.ಮೀ. ವರೆಗೆ ಹರಿಯುತ್ತಿದ್ದು ಸದ್ಯಕ್ಕೆ ಪ್ರಥಮ ಹಂತದಲ್ಲಿ 2.5 ಕಿ.ಮೀ.ವರೆಗೆ ಮಾತ್ರ ಹೂಲೆತ್ತಲು ನಿರ್ಧರಿಸಲಾಗಿದೆ. ಎರಡು, ಮೂರು ದಿನಗಳಲ್ಲಿಯೇ ಕಾಮಗಾರಿ ನಡೆಯಲಿದ್ದು, ಅದಕ್ಕೆ ಅಗತ್ಯ ಸಿದ್ಧತೆಯನ್ನು […]

ರಮೇಶ ಜಾರಕಿಹೊಳಿ ಇನ್ನಾದರೂ ದಮನಕಾರಿ ಪ್ರವೃತ್ತಿ ಬಿಡಲಿ: ಅಶೋಕ ಪೂಜಾರಿ

ರಮೇಶ ಜಾರಕಿಹೊಳಿ ಇನ್ನಾದರೂ ದಮನಕಾರಿ ಪ್ರವೃತ್ತಿ ಬಿಡಲಿ: ಅಶೋಕ ಪೂಜಾರಿ

ಗೋಕಾಕ: ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಜನತಾ ಜನಾರ್ಧನರು ನೀಡಿರುವ ತೀರ್ಪನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ.  ಶಾಸಕರಾಗಿ ಆಯ್ಕೆಯಾಗಿರುವ ರಮೇಶ ಜಾರಕಿಹೊಳಿ ಅವರನ್ನು ಅಭಿನಂದಿಸುತ್ತೇನೆ ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದರು.  ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಶಾಸಕರಾಗಿ ಆಯ್ಕೆಯಾಗಿರುವ ರಮೇಶ ಜಾರಕಿಹೊಳಿ ಅವರು ಮುಂದಿನ ದಿನಗಳಲ್ಲಿ ಕೈಗೊಳ್ಳುವ ಜನಪರ ಕಾರ್ಯಗಳಿಗೆ ಸಹಕಾರ ನೀಡುತ್ತೇವೆ. ಆದರೆ ಸರ್ವಾಧಿಕಾರ ಮನೋಭಾವನೆಯ ದಮನಕಾರಿ ನೀತಿಯನ್ನು ಅನುಸರಿಸಿದರೆ ಇನ್ನುಮುಂದೆ ಸಹಿಸುವುದಿಲ್ಲ. ಅಂತಹ ವ್ಯವಸ್ಥೆಯನ್ನು ಉಗ್ರವಾಗಿ ಪ್ರತಿಭಟಿಸುತ್ತೇವೆ ಎಂದು ತಿಳಿಸಿದರು. ಗೋಕಾಕ ಕ್ಷೇತ್ರದಲ್ಲಿ ಕಾಂಗ್ರೇಸ್ […]

ರಾಜ್ಯಪಾಲರ ಕ್ರಮ ಖಂಡಿಸಿ ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ರಾಜ್ಯಪಾಲರ ಕ್ರಮ ಖಂಡಿಸಿ ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಬೆಳಗಾವಿ: ರಾಜ್ಯಪಾಲರು ತಗೆದುಕೊಂಡಿರುವ ಅಸಂವಿಧಾನಿಕ ಕ್ರಮ ಖಂಡಿಸಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇಲ್ಲಿನ ಕ್ಲಬ್ ರಸ್ತೆಯ ಕಾಂಗ್ರೆಸ್ ಕಚೇರಿ ರಸ್ತೆಯಲ್ಲಿ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿ ಕರ್ನಾಟಕ ಉಳಿಸಿ…. ಪ್ರಜಾಪ್ರಭುತ್ವ ಉಳಿಸಿ ಎಂಬ ಘೋಷಣೆ ಕೂಗಿ ಕೇಂದ್ರ ಸರಕಾರ, ಹಾಗೂ ರಾಜ್ಯಪಾಲರ ನಡೆಯನ್ನು ತೀವ್ರವಾಗಿ ಖಂಡಿಸಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಒಟ್ಟು 117 ಶಾಸಕರ ಬಹುಮತ ವಿದ್ದರೂ ಕೂಡ ಅಧಿಕಾರ ಬಿಟ್ಟುಕೊಡದೆ ಕುತಂತ್ರದಿಂದ ಬಿಜೆಪಿಯವರು ಗದ್ದುಗೆ ಏರಿದ್ದಾರೆ ಎಂದು ಆರೋಪಿಸಿದರು. […]

ಬೈಲಹೊಂಗಲದಲ್ಲಿ ಕೈ ಅಭ್ಯರ್ಥಿ ಮಹಾಂತೇಶ ಕೌಜಲಗಿ ಜಯ: ಸಂಭ್ರಮಾಚರಣೆ

ಬೈಲಹೊಂಗಲದಲ್ಲಿ  ಕೈ ಅಭ್ಯರ್ಥಿ ಮಹಾಂತೇಶ ಕೌಜಲಗಿ ಜಯ: ಸಂಭ್ರಮಾಚರಣೆ

ಬೈಲಹೊಂಗಲ: ಬೈಲಹೊಂಗಲ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ ಕೌಜಲಗಿ ಗೆಲುವು ಸಾಧಿಸಿಸುತ್ತಿದ್ದಂತೆ  ಅವರ ಬೆಂಬಲಿಗರು  ಪಟ್ಟಣದಲ್ಲಿ ಮಂಗಳವಾರ ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಟಾಕಿ ಸಿಡಿಸಿ ಜಯಘೋಷ ಮೊಳಗಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಗುಲಾಲು  ಎರಚಿ ಕುಣಿದಾಡಿದರು. ಕಾಂಗ್ರೆಸ್ ಪಕ್ಷದ ಧ್ವಜಗಳು ರಾರಾಜಿಸಿದವು. ಮಹಾಂತೇಶ ಕೌಜಲಗಿ ಅವರ ಪತ್ನಿ ಗಿರಿಜಾ ಕೌಜಲಗಿ ಆರತಿ ಬೆಳಗಿ ಭರಮಾಡಿಕೊಂಡರು. ಯುವಕರು ಕೇಕೆ ಹೊಡೆಯುತ್ತಾ ಗೆಲುವಿನ ನಗೆ ಬೀರಿದರು. ಹಲವಾರು ವರ್ಷಗಳ ನಂತರ […]

ಅಪಪ್ರಚಾರಕ್ಕೆ ನಂಬದ ಜನ, ಅಭಿವೃದ್ಧಿಗೆ ಸಂದ ಜಯ: ಶಾಸಕ ಬಾಲಚಂದ್ರ

ಅಪಪ್ರಚಾರಕ್ಕೆ ನಂಬದ ಜನ, ಅಭಿವೃದ್ಧಿಗೆ ಸಂದ ಜಯ: ಶಾಸಕ ಬಾಲಚಂದ್ರ

ಗೋಕಾಕ ಎನ್ಎಸ್ಎಫ್ ಕಚೇರಿಯಲ್ಲಿ ವಿಜಯೋತ್ಸವ ಗೋಕಾಕ : ಅರಭಾವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಾಲಚಂದ್ರ ಜಾರಕಿಹೊಳಿ ಅವರು ಭರ್ಜರಿ ಜಯ ಗಳಿಸಿದ್ದಾರೆ. ಸತತ ಐದನೇ ಬಾರಿಗೆ ಸ್ಪರ್ಧಿಸಿದ್ದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‍ನ ಭೀಮಪ್ಪ ಗುಂಡಪ್ಪ ಗಡಾದ ಅವರನ್ನು 47328 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ. ಈ ಗೆಲುವಿನೊಂದಿಗೆ ಬಾಲಚಂದ್ರ ಜಾರಕಿಹೊಳಿ ಅವರು ಐದನೇ ಬಾರಿಗೆ ವಿಧಾನಸಭೆಗೆ ಪ್ರವೇಶ ಮಾಡಿದಂತಾಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ಈ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಮಾಹಿತಿ […]

ಸತತ 5 ನೇ ಬಾರಿ ಗೆಲುವು ಸಾಧಿಸಿದ ಬಾಲಚಂದ್ರ ಜಾರಕಿಹೊಳಿ

ಸತತ 5 ನೇ ಬಾರಿ ಗೆಲುವು ಸಾಧಿಸಿದ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ: ಪ್ರತಿಷ್ಠಿತ ಅರಭಾವಿ ಕ್ಷೇತ್ರದಲ್ಲಿ ಹಾಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಭರ್ಜರಿ ಗೆಲುವು ಸಾಧಿಸಿದ್ದಾರೆ.  ತೀವ್ರ ಪೈಪೋಟಿಯಿಂದ ಕೂಡಿದ್ದ ಅರಭಾವಿ ಕ್ಷೇತ್ರದಲ್ಲಿ ಕೇವಲ  ಕಾರ್ಯಕರ್ತರ ಸಹಕಾರದೊಂದಿಗೆ ಹಾಲಿ ಶಾಸಕ ಬಾಲಚಂದ್ರ ಅವರು 47,328 ಮತಗಳ ಅಂತರದಿಂದ  ಜೆಡಿಎಸ್ ಅಭ್ಯರ್ಥಿ ಭೀಮಶಿ ಗಡಾದ ಅವರನ್ನು  ಸೋಲಿಸಿದ್ದಾರೆ.  ಸತತ 5 ನೇ ಬಾರಿ ಗೆಲುವು ಸಾಧಿಸಿರುವ ಹಾಲಿ ಶಾಸಕ ಬಾಲಚಂದ್ರ ಅವರು 96144 ಮತಗಳನ್ನು ಪಡೆದಿದ್ದಾರೆ.  udayanadu2016

ಕುಡಚಿ, ಹುಕ್ಕೇರಿಯಲ್ಲಿ ಅರಳಿದ ಕಮಲ

ಕುಡಚಿ, ಹುಕ್ಕೇರಿಯಲ್ಲಿ ಅರಳಿದ ಕಮಲ

ಬೆಳಗಾವಿ: ಪ್ರತಿಶ್ಠಿತ ಕುಡಚಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲು ಕಂಡಿದ್ದು ಹಾಲಿ ಶಾಸಕ ಬಿಜೆಪಿ ಅಭ್ಯರ್ಥಿ  ಪಿ. ರಾಜೀವ ಕ್ಷೇತ್ರದಲ್ಲಿ ತಮ್ಮ ಹಿಡಿತವನ್ನು ಮತ್ತೆ ಸಾಧಿಸಿದ್ದಾರೆ.  12000 ಅಂತರದಿಂದ ಪಿ. ರಾಜೀವ ಗೆಲುವು ಸಾಧಿಸಿದ್ದಾರೆ. ತೀವ್ರ ಪೈಪೋಟಿ ನೀಡೀದ್ದ ಕಾಂಗ್ರೆಸ್ ಅಭ್ಯರ್ಥಿ ಅಮಿತ ಘಾಟಗೆ   ಗೆ ಬಂಡಾಯ ಅಭ್ಯರ್ಥಿ  ಮುಳುವಾಗಿದ್ದಾರೆ.   ಹುಕ್ಕೇರಿಯಲ್ಲಿ ಹಾಲಿ ಶಾಸಕ ಉಮೇಶ ಕತ್ತಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಎ.ಬಿ.ಪಾಟೀಲ ಸೋಲು ಅನುಭವಿಸಿದ್ದಾರೆ. udayanadu2016

ಚಿಕ್ಕೋಡಿಯಲ್ಲಿ ಕಾಂಗ್ರೆಸ್, ಸವದತ್ತಿಯಲ್ಲಿ ಬಿಜೆಪಿ ಗೆಲುವು

ಚಿಕ್ಕೋಡಿಯಲ್ಲಿ ಕಾಂಗ್ರೆಸ್, ಸವದತ್ತಿಯಲ್ಲಿ ಬಿಜೆಪಿ ಗೆಲುವು

ಬೆಳಗಾವಿ: ಜಿಲ್ಲೆಯ 18 ವಿಧಾನ ಸಭಾ ಕ್ಷೇತ್ರಗಳ ಪೈಕಿ ಚಿಕ್ಕೋಡಿ-ಸದಲಗಾ ಮತ್ತು ಸವದತ್ತಿ ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದು ಕ್ಷೇತ್ರಗಳಲ್ಲಿ  ಗೆಲುವು ಸಾಧಿಸಿದೆ.  ಚಿಕ್ಕೋಡಿಯಲ್ಲಿ ಹಾಲಿ ಶಾಸಕ  ಗಣೇಶ ಹುಕ್ಕೇರಿ 10456 ಮತಗಳ ಅಂತರದಿಂದ ಗೆಲುವು ಸಾಧಿಸಿಸುವುದರ ಮೂಲಕ ತಮ್ಮ ಭದ್ರಕೋಟೆಯನ್ನು ಉಳಿಸಿಕೊಂಡಿದ್ದಾರೆ.  ಸವದತ್ತಿ ಕ್ಷೇತ್ರದಲ್ಲಿ ಹಾಲಿ ಶಾಸಕ್ ಆನಂದ ಮಾಮನಿ  ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. 5000 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈಧ್ಯ ಸೋಲನ್ನು ಕಂಡಿದ್ದಾರೆ.  udayanadu2016

ಅರಭಾವಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಭಾರಿ ಮುನ್ನಡೆ

ಅರಭಾವಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಭಾರಿ ಮುನ್ನಡೆ

ಬೆಳಗಾವಿ: ಜಿಲ್ಲೆಯ ಅರಭಾವಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಭಾರಿ ಮುನ್ನಡೆ ಸಾಧಿಸಿದ್ದಾರೆ.  8 ಸುತ್ತಿನ ಎಣಿಕೆ ಮುಗಿದಿದ್ದು ಹಾಲಿ ಶಾಸಕ ಬಾಲಚಂದ್ರ್ 38163 ಮತಗಳನ್ನು ಪಡೆದಿದ್ದು ಜೆಡಿಎಸ್ ಗಡಾದ 28679 ಮತಗಳನ್ನು ಪಡೆದಿದ್ದಾರೆ.  9484 ಮತಗಳ ಅಂತರದಿಂದ ಶಾಸಕ ಬಾಲಚಂದ್ರ ಗೆಲುವಿನತ್ತ ದಾಪುಗಾಲು ಹಾಕುತ್ತಿದ್ದಾರೆ.  udayanadu2016

1 2 3 255