ಟೋಲ್ ಹಣ ಕೇಳಿದ್ದಕ್ಕೆ ಆಕ್ರೋಶಗೊಂಡ ರೈತರು: NH4 ತಡೆದು ಪ್ರತಿಭಟನೆ

ಟೋಲ್ ಹಣ ಕೇಳಿದ್ದಕ್ಕೆ ಆಕ್ರೋಶಗೊಂಡ ರೈತರು: NH4 ತಡೆದು ಪ್ರತಿಭಟನೆ

ಯಮಕನಮರಡಿ: ರೈತರ ವಾಹನಗಳಿಗೆ ಟೋಲ್ ಹಣ ಕೇಳಿದ್ದಕ್ಕೆ ಆಕ್ರೋಶಗೊಂಡ ರೈತರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಡೆದು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ  ಹತ್ತರಗಿ ಟೋಲ್ ನಾಕಾದಲ್ಲಿ ನಡೆದಿದೆ. ಕಬ್ಬಿನ ಬಿಲ್ ನಿಗದಿಗಾಗಿ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಭಾಗಿಯಾಗಲು ರೈತರು ಆಗಮಿಸುತ್ತಿದ್ದರು.   ಹಣ ನೀಡದಕ್ಕೆ ಟೋಲ್ ಸಿಬ್ಬಂದಿ ರೈತರ ವಾಹನಗಳನ್ನು ತಡೆದಕ್ಕೆ ಆಕ್ರೋಶಗೊಂಡ ರೈತರು ಹೆದ್ದಾರಿಯಲ್ಲಿ ವಾಹನ ತಡೆದು ದಿಢೀರ್ ಪ್ರತಿಭಟನ ನಡೆದಸಿದರು. ಇದರಿಂದ ಸುಮಾರು 2 ಕಿ.ಮೀ ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತ ಪ್ರಸಂಗ […]

ಗೋಕಾಕ: ಸಹಸ್ರಾರ್ಜುನ ಜಯಂತಿ ಆಚರಣೆ

ಗೋಕಾಕ: ಸಹಸ್ರಾರ್ಜುನ ಜಯಂತಿ ಆಚರಣೆ

ಗೋಕಾಕ: ಎಸ್. ಎಸ್. ಕೆ. ಸಮಾಜ ಗೋಕಾಕ ವತಿಯಿಂದ ಸಹಸ್ರಾರ್ಜುನ ಜಯಂತಿಯನ್ನು ಬುಧವಾರ ಅದ್ದೂರಿಯಾಗಿ  ಆಚರಿಸಲಾಯಿತು. ಸಹಸ್ರಾರ್ಜುನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಈ ಸಂಧರ್ಭದಲ್ಲಿ ಸಮಾಜ ಅಧ್ಯಕ್ಷ ಜವಾಹರ ಸಾತಪುತೆ,ರಂಗನಾಥ ಸಾತಪುತೆ,ಕಿರಣ ಡಮಾಮಗರ,ಅರ್ಜುನ ಸಾತಪುತೆ,ರವಿ ಕೋಸಂದಲ,ಸಂಜು ಸಾತಪುತೆ,ಸುನಿಲ ರತನ,ವಿಜಯ ರತನ, ನವೀನ ಜರತಾರಘರ ಸೇರಿದಂತೆ ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು. udayanadu2016

ಗೋಕಾಕ ತಹಸೀಲ್ದಾರ್ ಕಚೇರಿಯಲ್ಲಿ ಮತದಾರರ ಯಾದಿ ಪರಿಶೀಲಿಸಿದ ಆರ್ ಸಿ ಮೇಘನ್ನವರ್

ಗೋಕಾಕ: ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಲೋಪ ರಹಿತ ಮತದಾರರ ಯಾದಿಯ ಪರಿಶೀಲನೆ ಕಾರ್ಯವು ಭರದಿಂದ ಜರುಗಿದ್ದು ಅಧಿಕಾರಿಗಳು ಸಕ್ರೀಯವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಪ್ರಾದೇಶಿಕ ಆಯುಕ್ತ ಹಾಗೂ ಲೋಕಸಭಾ ಚುನಾವಣಾ ಜಿಲ್ಲಾ ಉಸ್ತುವಾರಿ ಪಿ.ಎ.ಮೇಘಣ್ಣವರ ಹೇಳಿದರು. ಅವರು ಬುಧವಾರದಂದು ನಗರದ ತಹಸೀಲ್ದಾರ್ ಕಚೇರಿಯಲ್ಲಿ  ಮತದಾರರ ಯಾದಿ ಪರಿಷ್ಕರಣೆ ಕಾರ್ಯದ ಕುರಿತು ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈಗಾಗಲೇ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ಮತದಾರರ ಪಟ್ಟಿಯ ಕುರಿತು ಪರಿಶೀಲನೆ ನಡೆಸಿದ್ದೇನೆ. ಬಿಎಲ್‍ಓ […]

ಕೆಎಲ್ಇ ಸಂಸ್ಥೆಗೂ ರಾಜಮನೆತನಕ್ಕೂ ಅವಿನಾಭಾವ ಸಂಬಂಧವಿದೆ: ರಾಜಮಾತೆ ಪ್ರಮೋದಾದೇವಿ

ಕೆಎಲ್ಇ ಸಂಸ್ಥೆಗೂ ರಾಜಮನೆತನಕ್ಕೂ ಅವಿನಾಭಾವ ಸಂಬಂಧವಿದೆ: ರಾಜಮಾತೆ ಪ್ರಮೋದಾದೇವಿ

ಬೆಳಗಾವಿ: ಕೆಎಲ್‍ಇ ಸಂಸ್ಥೆಗೆ ಮತ್ತು ರಾಜಮನೆತನಕ್ಕೆ ಅವಿನಾಭಾವ ಸಂಬಂಧವಿದ್ದು, ಸಂಸ್ಥೆಯ ಮಾಡುತ್ತಿರುವ ಕಾರ್ಯಗಳು ಅತ್ಯಂತ ಶ್ಲಾಘನೀಯ ಎಂದು ರಾಜಮಾತೆ  ಪ್ರಮೋದಾದೇವಿ ಒಡೆಯರ ಹೇಳಿದರು. ಇಲ್ಲಿನ ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ  ಉತ್ತರ ಕರ್ನಾಟಕದಲ್ಲಿಯೇ ಪ್ರಥಮವಾಗಿ ಅತ್ಯಾಧುನಿಕ ಸಲಕರಣೆ ಹೊಂದಿರುವ (ಭೌತಿಕ ಚಿಕಿತ್ಸಾ) ಫಿಸಿಯೊಥೆರಪಿ ಕೇಂದ್ರಕ್ಕೆ ಚಾಲನೆ ನೀಡಿ ಬಳಿಕ ಅವರು ಮಾತನಾಡಿದರು. 1951ರಲ್ಲಿಯೇ ಶ್ರೀ ಜಯಚಾಮರಾಜೇಂದ್ರ ಒಡೆಯರ ಅವರು ಲಿಂಗರಾಜ ಮಹಾವಿದ್ಯಾಲಯ ಮತ್ತು ಸವದತ್ತಿಯಲ್ಲಿರುವ ಮಹಾವಿದ್ಯಾಲಯವನ್ನು ಜನಸೇವೆಗೆ ಅರ್ಪಿಸುವದರ […]

ಕಬ್ಬಿನ ಬಿಲ್ ಬಾಕಿ: ರೈತ ಮುಖಂಡರ ಸಭೆ: ಮಹಾರಾಷ್ಟ್ರ ಮಾದರಿ ದರ ನಿಗದಿ- ಉಪ ಉತ್ಪನ್ನಗಳ ಲಾಭಾಂಶ ನೀಡಲು ರೈತರ ಒತ್ತಾಯ

ಕಬ್ಬಿನ ಬಿಲ್ ಬಾಕಿ: ರೈತ ಮುಖಂಡರ ಸಭೆ: ಮಹಾರಾಷ್ಟ್ರ ಮಾದರಿ ದರ ನಿಗದಿ- ಉಪ ಉತ್ಪನ್ನಗಳ ಲಾಭಾಂಶ ನೀಡಲು ರೈತರ ಒತ್ತಾಯ

ಎಫ್ ಆರ್ ಪಿ ದರ ನೀಡಲು ಮತ್ತು ಬಾಕಿ ಪಾವತಿಸಲು ಕಾರ್ಖಾನೆಗಳಿಗೆ ಸೂಚನೆ: ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಬೆಳಗಾವಿ: ಸರ್ಕಾರ ಪ್ರಕಟಿಸಿರುವ ಎಫ್‍ಆರ್ ಪಿ ದರ ಕಡ್ಡಾಯವಾಗಿ ನೀಡಬೇಕು; ಸಕ್ಕರೆ ಕಾರ್ಖಾನೆಗಳು ಕಳೆದ ಬಾರಿ ತಾವೇ ಘೋಷಿಸಿದ ದರದ ಪ್ರಕಾರ ಬಿಲ್ ಪಾವತಿಸದೇ ಕಡಿಮೆ ಹಣ ಪಾವತಿಸಿರುವ ಪ್ರಕರಣಗಳಲ್ಲಿ ತಕ್ಷಣ ಬಾಕಿ ಬಿಲ್ ಪಾವತಿಸಲು ಕಾರ್ಖಾನೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ರೈತ ಮುಖಂಡರ ಸಭೆಯ ಅಧ್ಯಕ್ಷತೆ […]

ಕಾರ್ಖಾನೆ ಪ್ರಕಟಿಸಿದ ದರದ ಪ್ರಕಾರ ಬಿಲ್ ಪಾವತಿಗೆ ಜಿಲ್ಲಾಧಿಕಾರಿ ಸೂಚನೆ

ಕಾರ್ಖಾನೆ ಪ್ರಕಟಿಸಿದ ದರದ ಪ್ರಕಾರ ಬಿಲ್ ಪಾವತಿಗೆ ಜಿಲ್ಲಾಧಿಕಾರಿ ಸೂಚನೆ

ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಪ್ರತಿನಿಧಿಗಳ ಸಭೆ ಬೆಳಗಾವಿ: ಸಕ್ಕರೆ ಕಾರ್ಖಾನೆಗಳು ಕಳೆದ ಬಾರಿ ಘೋಷಿಸಿರುವ ದರದ ಪ್ರಕಾರವೇ ರೈತರ ಬಿಲ್ ಹದಿನೈದು ದಿನಗಳಲ್ಲಿ ಕಡ್ಡಾಯವಾಗಿ ಪಾವತಿಸಬೇಕು ಹಾಗೂ ಈ ವರ್ಷ ಕಬ್ಬು ನುರಿಸುವ ಸಂದರ್ಭದಲ್ಲಿಯೇ ಎಫ್. ಆರ್.ಪಿ. ಪ್ರಕಾರ ದರ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಯ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಫ್ ಆರ್ […]

ಕಬ್ಬಿನ ಬಿಲ್ ನಿಗದಿಗೆ ಒತ್ತಾಯಿಸಿ ಅಥಣಿಯಲ್ಲಿ ರೈತರಿಂದ ಬೃಹತ್ ಪ್ರತಿಭಟನೆ

ಮುಖ್ಯಮಂತ್ರಿ ಕುಮಾರಸ್ವಾಮಿ ಮಧ್ಯಸ್ಥಿಕೆ ವಹಿಸಲು ರೈತರ ಆಗ್ರಹ  ಅಥಣಿ: ಪ್ರಸಕ್ತ ಸಾಲಿನ ಕಬ್ಬಿನ ಬಿಲ್ ನಿಗದಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘಟನೆ ನೇತೃತ್ವದಲ್ಲಿ ರೈತರು    ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು. ಇಲ್ಲಿನ ಶಿವಯೋಗಿ ವೃತ್ತದಲ್ಲಿ ಸೇರಿದ ರೈತ ಸಂಘಟನೆ ಮುಖಂಡರು ರಸ್ತೆ ತಡೆದು ಮಾನವ ಸರಪಳಿ ನಿರ್ಮಿಸಿ ಕಾರ್ಖಾನೆ ಮಾಲೀಕರ ವಿರುದ್ದ ಘೋಷಣೆ ಕೂಗಿ ಆಕ್ರೋಶ  ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ರೈತ  ಸಂಘಟನೆ ಜಿಲ್ಲಾಧ್ಯಕ್ಷ ಚಿನ್ನಪ್ಪ […]

ಅಂಗನವಾಡಿ ಶಿಕ್ಷಕರ ಹುದ್ದೆ ತಕ್ಷಣ ಭರ್ತಿಗೆ ಸಚಿವೆ ಜಯಮಾಲಾ ಸೂಚನೆ

ಅಂಗನವಾಡಿ ಶಿಕ್ಷಕರ ಹುದ್ದೆ ತಕ್ಷಣ ಭರ್ತಿಗೆ ಸಚಿವೆ ಜಯಮಾಲಾ ಸೂಚನೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನೆ ಬೆಳಗಾವಿ:ಮುಂಬರುವ ದಿನಗಳಲ್ಲಿ ಖಾಲಿಯಾಗುವ ಅಂಗನವಾಡಿ ಕೇಂದ್ರದ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಲು ಮುಂಚಿತವಾಗಿಯೇ ಕ್ರಮ ವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಡಾ.ಜಯಮಾಲಾ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೆರಿಗೆ ರಜೆ, ನಿವೃತ್ತಿ, ಅಕಾಲಿಕ ಮರಣ ಹಾಗೂ ಇತರೆ ಕಾರಣಗಳಿಂದ ಜಿಲ್ಲೆಯಲ್ಲಿ ಖಾಲಿ ಇರುವ […]

ಕಬ್ಬಿಗೆ ದರ ಘೋಷಣೆ ಮಾಡಿ ಕಾರ್ಖಾನೆ ಆರಂಭಿಸಿ: ಶೇತಕರಿ ಸಂಘಟನೆ ಆಗ್ರಹ

ಕಬ್ಬಿಗೆ ದರ ಘೋಷಣೆ ಮಾಡಿ ಕಾರ್ಖಾನೆ ಆರಂಭಿಸಿ: ಶೇತಕರಿ ಸಂಘಟನೆ ಆಗ್ರಹ

ಚಿಕ್ಕೋಡಿ : ಕಳೆದ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಎಫ್‍ಆರ್‍ಪಿ ಪ್ರಕಾರ ದರ ಕೊಡಬೇಕು. ಪ್ರಸಕ್ತ ವರ್ಷ ಕಬ್ಬಿಗೆ ದರ ಘೋಷಣೆ ಮಾಡಿ ಕಾರ್ಖಾನೆ ಆರಂಭಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಚಿಕ್ಕೋಡಿ ತಾಲೂಕಾ ಸ್ವಾಭಿಮಾನಿ ಶೇತಕರಿ ಸಂಘಟನೆ ಕಾರ್ಯಕರ್ತರು ತಹಸೀಲ್ದಾರ ಶ್ರೀನಿವಾಸಗೌಡ ಅವರಿಗೆ ಮನವಿ ಸಲ್ಲಿಸಿದರು. ಇಲ್ಲಿನ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಮಿನಿವಿಧಾನ ಸೌದಕ್ಕೆ ತೆರಳಿ ಮಿನಿವಿಧಾನ ಸೌದ ಎದುರು ಪ್ರತಿಭಟನೆ ನಡೆಸಿದರು. ಸಂಘಟನೆ ಮುಖಂಡರಾ ರಾಜು ಖಿಚಡೆ ಮತ್ತು ರಮೇಶ ಪಾಟೀಲ ಮಾತನಾಡಿ, […]

ಅಥಣಿ: ಸಮಾವೇಶದಲ್ಲಿ ರೈತನಿಗೆ ಕಲ್ಲೆಸೆತ

ಅಥಣಿ: ಕಬ್ಬಿನ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ಉಗಾರ ಖುರ್ದನಲ್ಲಿ  ಪ್ರತಿಭಟನೆ ಮುಂದುವರೆಸಿದ್ದು, ಈ ವೇಳೆ ರೈತರೊಬ್ಬರ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ರೈತ ಅಜಿತ ಅಕ್ಕಿವಾಟೆ ಎಂಬುವವರು ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೂಕ್ತ ಕಬ್ಬಿನ ಬಿಲ್ ನಿಗದಿ ಮಾಡುವಂತೆ ಸಮಾವೇಶ ನಡೆಸುತ್ತಿದ್ದರು. ಸಮಾವೇಶದಲ್ಲಿ ರೈತರ ಮುಖಂಡ ಶೀತಲ ಮಾತನಾಡುತ್ತಿರುವ ವೇಳೆ ಕಿಡಿಗೇಡಿಗಳು ರೈತನ ಮೇಲೆ ಕಲ್ಲೆಸೆದಿದ್ದಾರೆ. ಕಬ್ಬಿಗೆ ಸೂಕ್ತ ದರ ನಿಗದಿ ಮಾಡುವಂತೆ ಆಗ್ರಹಿಸಿದ ಕಳೆದ 15 ದಿನಗಳಿಂದ […]