ಕ್ಷೇತ್ರದ ಪರಿಸ್ಥಿತಿ ಆಧರಿಸಿ ಸ್ಥಳೀಯರಿಗೆ ಟಿಕೆಟ್:  ಸಚಿವ ರಮೇಶ ಜಾರಕಿಹೊಳಿ 

ಕ್ಷೇತ್ರದ ಪರಿಸ್ಥಿತಿ ಆಧರಿಸಿ ಸ್ಥಳೀಯರಿಗೆ ಟಿಕೆಟ್:  ಸಚಿವ ರಮೇಶ ಜಾರಕಿಹೊಳಿ 

ಬೆಳಗಾವಿ:  ಸ್ಥಳೀಯರಿಗೆ ಟಿಕೆಟ್ ನೀಡಿದರೆ ಗೆಲುವು ಸುಲಭ ಅನ್ನೋ ಅಭಿಪ್ರಾಯಗಳು ಕಾಂಗ್ರೆಸ್ ನಲ್ಲಿವೆ. ಖಾನಾಪುರ ವಿಧಾನಸಭೆ ಕ್ಷೇತ್ರದಲ್ಲೂ ಸ್ಥಳೀಯರಿಗೆ ಆದ್ಯತೆ ನೀಡಲಾಗುತ್ತದೆ. ಆದರೆ ಖಾನಾಪುರದಲ್ಲಿ ಮನೆ ಇರುವವರಿಗೆಲ್ಲ ಟಿಕೆಟ್ ಸಿಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಟಾಂಗ್ ನೀಡಿದರು. ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ  ಜೊತೆ ಗುರುವಾರ ಮಾತನಾಡಿದ ಅವರು,  ಖಾನಾಪುರದಲ್ಲಿ ಅಂಜಲಿ ನಿಂಬಾಳ್ಕರ್ ಮನೆ ಮಾಡಿಕೊಂಡಿದ್ದಾರೆ. ಆದರೆ ಅವರಿಗೇ ಟಿಕೆಟ್ ಸಿಗುತ್ತದೆ ಎಂದು ಹೇಳಲಿಕ್ಕಾಗದು. ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನಿರ್ಧರಿಸುತ್ತಿದ್ದು, ಆ ಕ್ಷೇತ್ರದ […]

ಅಂಬೇಡ್ಕರರವರ ನವಭಾರತ ನಿರ್ಮಾಣಕ್ಕೆ ಯುವ ಜನಾಂಗ ಶ್ರಮಿಸಬೇಕು-ಶಾಸಕ ಬಾಲಚಂದ್ರ ಜಾರಕಿಹೊಳಿ

ಅಂಬೇಡ್ಕರರವರ ನವಭಾರತ ನಿರ್ಮಾಣಕ್ಕೆ ಯುವ ಜನಾಂಗ ಶ್ರಮಿಸಬೇಕು-ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಡಾ.ಬಾಬಾಸಾಹೇಬ ಅಂಬೇಡ್ಕರ ಸಾರಿದ ಶಿಕ್ಷಣ, ಸಂಘಟನೆ ಹಾಗೂ ಹೋರಾಟಗಳ ಮೂಲಕ ನವಭಾರತದ ನಿರ್ಮಾಣಕ್ಕೆ ಯುವ ಜನಾಂಗ ಶ್ರಮಿಸಬೇಕಾದ ಅಗತ್ಯವಿದೆ ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಪ್ರತಿಪಾದಿಸಿದರು. ಇಲ್ಲಿಗೆ ಸಮೀಪದ ಅರಭಾವಿ ಪಟ್ಟಣದಲ್ಲಿ ಬುಧವಾರ ಸಂಜೆ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ ಪ್ರತಿಮೆಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು. ಡಾ.ಅಂಬೇಡ್ಕರ ಅವರು ಸಂವಿಧಾನ ರಚಿಸಿ ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅವರು ಸಂವಿಧಾನ ರಚಿಸಿದ್ದರಿಂದ ಎಲ್ಲರೂ ಸರ್ಕಾರದ ಮೀಸಲಾತಿ ಪಡೆಯುತ್ತಿದ್ದೇವೆ. ದಲಿತರಿಂದ ಹಿಡಿದು […]

ಸಾಲದ ಭಾದೆ, ವಿಷ ಸೇವಿಸಿ ರೈತ ಆತ್ಮಹತ್ಯೆ

ಸಾಲದ ಭಾದೆ, ವಿಷ ಸೇವಿಸಿ ರೈತ ಆತ್ಮಹತ್ಯೆ

ಬೆಳಗಾವಿ: ಸಾಲದ ಬಾಧೆಯಿಂದ ಬಳಲುತ್ತಿದ್ದ ರೈತನೊಬ್ಬ ಕ್ರಿಮಿನಾಶಕ ಔಷಧ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸವದತ್ತಿ ತಾಲೂಕಿನ ಹಂಚನಾಳ ಗ್ರಾಮದಲ್ಲಿ ಬುಧವಾರ ತಡ ರಾತ್ರಿ ಸಂಭವಿಸಿದೆ. ಹಂಚನಾಳ ಗ್ರಾಮದ ರೈತ  ಈರಪ್ಪ ರಾಮಚಂದ್ರ  ಕಂಬಾರ್ (55) ಎಂಬುವರೆ ಆತ್ಮಹತ್ಯ ಮಾಡಿಕೊಂಡಿದ್ದಾನೆ. ಮೂರು ಎಕರೆ ಜಮೀನ ಹೊಂದಿದ್ದರು. ಕೃಷಿ ವ್ಯವಸಾಯಕ್ಕಾಗಿ  2 ಲಕ್ಷ ರೂ ಸಾಲ ಮಾಡಿಕೊಂಡಿದ್ದರು. ಹಂಚನಾಳ ಗ್ರಾಮದಲ್ಲಿ ಇತ್ತಿಚೆಗೆ ನಡೆದ ಬೆಂಕಿ ಅವಘಡದಲ್ಲಿ ಆತ್ಮಹತ್ಯೆ ಮಾಡಿಕೊಂಡ  ಈರಪ್ಪ ಮನೆ ಕಳೆದುಕೊಂಡು ನಿರ್ಗತಿಕನಾಗಿದ್ದ,   ಬ್ಯಾಂಕ್ ಅಧಿಕಾರಿಗಳ […]

ಚಿಕ್ಕೋಡಿ: 12, 13ರಂದು ಕೆಎಲ್ಇ ತಾಂತ್ರಿಕ ಕಾಲೇಜಿನ ಸಂಭ್ರಮ ಕಾರ್ಯಕ್ರಮ

ಚಿಕ್ಕೋಡಿ: ಇಲ್ಲಿನ ಕೆ.ಎಲ್.ಇ. ಅಭಿಯಾಂತ್ರಿಕ ಹಾಗೂ ತಾಂತ್ರಿಕ ಮಹಾವಿದ್ಯಾಲಯದ ಸಂಭ್ರಮ-2017 ಕಾರ್ಯಕ್ರಮವನ್ನು ಮೇ. 12 ಮತ್ತು 13 ರಂದು ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಸಿದ್ರಾಮಪ್ಪಾ ಇಟ್ಟಿ ತಿಳಿಸಿದರು. ಇಲ್ಲಿನ ಕೆ.ಎಲ್.ಇ. ಅಭಿಯಾಂತ್ರಿಕ ಹಾಗೂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2016-17ನೇಯ ಶೈಕ್ಷಣಿಕ ಸಾಲಿನಲ್ಲಿ ಜರುಗಿದ ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದವರನ್ನು ಪುರಸ್ಕರಿಸಲು ಹಾಗೂ ವಿದ್ಯಾರ್ಥಿಗಳ ಕಲಾ ಪ್ರತಿಭೆ ಹೊರ ಹೊಮ್ಮಿಸಲು ವಾರ್ಷಿಕ ಸ್ನೇಹ ಸಮ್ಮೇಳನ ಸಂಭ್ರಮ ಎರಡು ದಿನಗಳವರೆಗೆ ಹಮ್ಮಿಕೊಳ್ಳಲಾಗಿದೆ. 12ರಂದು […]

ಬೆಂಕಿ ಆಕಸ್ಮಿಕದಲ್ಲಿ ಮನೆ ಭಸ್ಮ, ಸಾಲ ಬಾಧೆ: ರೈತ ಆತ್ಮಹತ್ಯೆ

ಬೆಳಗಾವಿ: ಸವದತ್ತಿ ತಾಲ್ಲೂಕಿನ ಹಂಚಿನಾಳ ಗ್ರಾಮದಲ್ಲಿ ಬೆಂಕಿ ಆಕಸ್ಮಿಕದಲ್ಲಿ ಮನೆ ಕಳೆದುಕೊಂಡ ರೈತ ಕೀಟನಾಶಕ ಸೇವಿಸಿ ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.   ಈರಪ್ಪ ರಾಮಚಂದ್ರ ಕಂಬಾರ್(55 ವರ್ಷ) ಆತ್ಮಹತ್ಯೆ ಮಾಡಿಕೊಂಡವರು.  ಮೂರು ಎಕರೆ ಜಮೀನು ಹೊಂದಿದ್ದ ಅವರು,  ಕೃಷಿ ಮಾಡಲು 2 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು. ಬರಗಾಲದಿಂದ ಬೆಳೆ ಕೂಡ ನಷ್ಟವಾಗಿತ್ತು. ಬೆಂಕಿಗೆ ಅವರ ಮನೆ ಕೂಡ ಸುಟ್ಟು ಹೋಗಿತ್ತು. ಸಾಲ ಹಿಂತಿರುಗಿಸುವಂತೆ ಬ್ಯಾಂಕ್ ಮತ್ತು ಸ್ಥಳೀಯ ಹಣಕಾಸು ಸಂಸ್ಥೆಗಳು ಕಂಬಾರ್ ಅವರ ಮೇಲೆ ತೀವ್ರ ಒತ್ತಡ ತರುತ್ತಿದ್ದರು […]

ಶಾಲೆ ದುರಸ್ತಿಗೆ ಒತ್ತಾಯಿಸಿ ಹಳೆ ವಿದ್ಯಾರ್ಥಿಗಳಿಂದ ಡಿ ಡಿ ಪಿ ಐ ಗೆ ಮನವಿ

ಶಾಲೆ ದುರಸ್ತಿಗೆ ಒತ್ತಾಯಿಸಿ ಹಳೆ ವಿದ್ಯಾರ್ಥಿಗಳಿಂದ ಡಿ ಡಿ ಪಿ ಐ ಗೆ ಮನವಿ

ಚಿಕ್ಕೋಡಿ: ನಮ್ಮೂರ ಶಾಸಕರ ಮತಕ್ಷೇತ್ರದ ಮಾದರಿ ಕನ್ನಡ ಪ್ರಾಥಮಿಕ ಶಾಲೆಗೆ ಮೂಲಭೂತ ಸೌಕರ್ಯ ಒದಗಿಸುವ ಜತೆಗೆ ಶಾಲೆ ದುರಸ್ಥಿ ಮಾಡುವಂತೆ ಒತ್ತಾಯಿಸಿ ಶಾಲೆಯ ಹಳೆ ವಿದ್ಯಾರ್ಥಿಗಳು ಬುಧುವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಜಾನನ ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿದ್ದರು. ಇಡೀ ಬೆಳಗಾವಿ ಜಿಲ್ಲೆಯಲ್ಲಿಯೇ ಅತ್ಯಂತ ಹಳೆ ಹಾಗೂ ಬ್ರಿಟೀಷ ಕಾಲದ ಶಾಲೆ ಇದಾಗಿದೆ. ಇದರ ಕಟ್ಟಡ ದುಸ್ಥಿತಿಯಲ್ಲಿದೆ. ಇದರಿಂದಾಗಿ ಇಲ್ಲಿ ಕಲಿಯುವ ವಿದ್ಯಾರ್ಥಿಗಳ ಕಲಿಕೆ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ದ್ವಿಶತಮಾನ ಆಚರಿಸಿಕೊಳ್ಳುವ ಶಾಲೆಯ ಕಿಟಕಿಗಳು […]

ನಿಪ್ಪಾಣಿ ಬಸ್ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು: ಕರವೇ ಒತ್ತಾಯ

ನಿಪ್ಪಾಣಿ ಬಸ್ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು: ಕರವೇ ಒತ್ತಾಯ

ಚಿಕ್ಕೋಡಿ : ತಾಲೂಕಿನ ನಿಪ್ಪಾಣಿ ಬಸ್ ನಿಲ್ದಾಣಕ್ಕೆ ಸಂಗೋಳ್ಳಿ ರಾಯಣ್ಣಾ ಬಸ್ ನಿಲ್ದಾಣ ಎಂದು ನಾಮಕರಣ ಮಾಡುವಂತೆ ಒತ್ತಾಯಿಸಿ ಬುಧುವಾರ ಕರವೇ ಕಾರ್ಯಕರ್ತರು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.                                                         ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ 2015-16ನೇ ಸಾಲಿನಲ್ಲಿ ನಾಲ್ಕೈದು ಬಾರಿ ವಿಭಾಗಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿ ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ನಿಪ್ಪಾಣಿ ನಗರದ ಕೆಲ ರಾಜಕೀಯ ಹಿತಾಸಕ್ತಿಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡಿ ಅನ್ಯ […]

7 ಜನ ಸರಗಳ್ಳರ ಬಂಧನ, 8.60 ಲಕ್ಷ ವಶ

7 ಜನ ಸರಗಳ್ಳರ ಬಂಧನ, 8.60 ಲಕ್ಷ ವಶ

ಬೆಳಗಾವಿ: ನಗರದಲ್ಲಿ ಸರಗಳ್ಳತನ ಹಾಗೂ ಜಬರಿ ಕಳ್ಳತನ ಮಾಡುತ್ತಿದ್ದ 7 ಜನ ಕಳ್ಳರನ್ನು ಎಪಿಎಮಸಿ ಮಾರ್ಕೆಟ್ ಪೋಲಿಸರು ಬುಧವಾರದಂದು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕಳೆದ ಹಲವಾರು ದಿನಗಳಿಂದ ನಗರದ ವಿವಿಧ ಬಡಾವಣೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಸಿಕಂದರ ಶಹಾಪುರ, ಸೈಫುಲ್ಲಾ ಬಾರಗೆರ, ಮುಹಮ್ಮದ ಧಜೆಯಾ, ಅಹ್ಮದ ಜಮಾದಾರ, ಫೈಸಲ್ ಶೇಕ, ಯುನುಸ ಮುಲ್ಲಾ, ಜಹೀರ ಮನಯಾರ ಎಂಬ ಕಳ್ಳರನ್ನು  ಬಂಧಿಸಿ ಅವರಿಂದ 7 ಲಕ್ಷ ರೂ. ಬೆಲೆಯ 250 ಗ್ರಾಂ ಬಂಗಾರದ ಆಭರಣಗಳು ಹಾಗೂ ಕಳ್ಳತನಕ್ಕೆ ಬಳಿಸಿದ 1.60 […]

ಬೆಳಗಾವಿಯ ಮನೆಯಲ್ಲಿ ಕೈ ಕಾಲು ಕಟ್ಟಿ ಡಿಎಫ್ಒ ಪತ್ನಿಯ ಕೊಲೆ

ಬೆಳಗಾವಿಯ ಮನೆಯಲ್ಲಿ ಕೈ ಕಾಲು ಕಟ್ಟಿ  ಡಿಎಫ್ಒ ಪತ್ನಿಯ ಕೊಲೆ

ಬೆಳಗಾವಿ: ಟಿಳಕವಾಡಿಯ ದ್ವಾರಕಾ ನಗರದ ಮನೆಯಲ್ಲಿ ಸಾಮಾಜಿಕ ವಲಯ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್ಒ) ಪತ್ನಿಯನ್ನು ಬುಧವಾರ ಮಧ್ಯಾಹ್ನ ಕೊಲೆ ಮಾಡಲಾಗಿದೆ. ಹಾಡಹಗಲೇ ಈ ಕೃತ್ಯ ನಡೆದಿದ್ದು,ಕೈಕಾಲು ಕಟ್ಟಿ ಹಾಕಿ ಬಾಯಲ್ಲಿ ಬಟ್ಟೆ ತುರುಕಿ ಕೊಲೆ ಮಾಡಲಾಗಿದೆ. ಭಾರ್ಗವಿ‌ ಮೋರಪ್ಪನವರ್ (58) ಕೊಲೆಯಾದವರು. ಇವರು ಡಿಎಫ್ಒ ಆನಂದ್ ಮೊರಪ್ಪನವರ್ ಅವರ ಪತ್ನಿ.  ದುಷ್ಕರ್ಮಿಗಳು ಮನೆಗೆ ನುಗ್ಗಿದಾಗ ಭಾರ್ಗವಿ‌ ಒಬ್ಬರೇ ಮನೆಯಲ್ಲಿದ್ದರು. ಆರೋಪಿಗಳು ಕೊಲೆ ಮಾಡಿ ಪರಾರಿಯಾಗಿದ್ದು, ಇವರು ಕಳ್ಳತನ ಉದ್ದೇಶದಿಂದ ಬಂದವರೇ ಹೇಗೆ ಎಂಬುದು ಗೊತ್ತಾಗಿಲ್ಲ. ಕೊಲೆಗೆ ಕಾರಣಗಳು ತಿಳಿದುಬಂದಿಲ್ಲ. […]

ಗೋ-ರಕ್ಷಕರ ವಿರುದ್ಧ ಅಪಪ್ರಚಾರ ಪ್ರಮೋದ ಮುತಾಲಿಕ ಖಂಡನೆ

ಗೋ-ರಕ್ಷಕರ ವಿರುದ್ಧ ಅಪಪ್ರಚಾರ ಪ್ರಮೋದ ಮುತಾಲಿಕ ಖಂಡನೆ

  ಬೆಳಗಾವಿ: ನರೇಂದ್ರ ಮೋದಿಯವರು ದೇಶದ ಪ್ರಧಾನ ಮಂತ್ರಿ ಆದ ಬಳಿಕ  ಗೋರಕ್ಷಣೆ ಸಂಬಂಧ ಚರ್ಚೆ ಆಗುತ್ತಿದ್ದು ಗೋರಕ್ಷಣೆ ಮಾಡುವವರ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆದಿದೆ ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು. ಬೆಳಗಾವಿ ನಗರದಲ್ಲಿ ಬುಧವಾರದಂದು ಸುದ್ದಿಗಾರರೊಂದಿಗೆ ಮಾತನಾಡುತ್ತ, ಗೋ ಅನ್ನು ಹಿಂದೂ ಸಮಾಜ ಪೂಜೆ ಸಲ್ಲಿಸುತ್ತಿದೆ. ಹಾಗಾಗಿ ಗೋ ರಕ್ಷಕರ ಮೇಲೆ ಅಪಪ್ರಚಾರ ನಡೆಸುತ್ತಿರುವುದುನ್ನು ಅವರು ತೀವ್ರವಾಗಿ ಖಂಡಿಸಿದರು. ಗೋವಂಶ ನಾಶವಾಗಲು ಸರ್ಕಾರಗಳೇ ಕಾರಣ ದೇಶದಲ್ಲಿ ಸುಮಾರು 40 ಸಾವಿರ […]