ಕುಂದಗೋಳ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ

ಕುಂದಗೋಳ ಉಪಚುನಾವಣೆ:  ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ

ಕುಂದಗೋಳ: ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಮುನ್ನಡೆ ಸಾಧಿಸಿದ್ದಾರೆ. ತೀವ್ರ ಜಿದ್ದಾಜಿದ್ದಿಗೆ ಕಾರಣವಾದ ಕುಂದಗೋಳ ಉಪಚುನಾವಣೆ ಫಲಿತಾಂಶದಲ್ಲಿ ದಿ. ಸಚಿವ ಶಿವಳ್ಳಿ ಧರ್ಮಪತ್ನಿ ಕುಸುಮಾ ಶಿವಳ್ಳಿ ಬಿಜೆಪಿ ಅಭ್ಯರ್ಥಿ ವಿರುದ್ಧ ಭಾರಿ ಮುನ್ನಡೆ ಸಾಧಿಸಿದ್ದಾರೆ. Views: 141

ಮಕ್ಕಳ ಸಹಾಯವಾಣಿ ಮೂಲಕ ಬಾಲ್ಯ ವಿವಾಹ ತಡೆದ ಅಧಿಕಾರಿಗಳು

ಮಕ್ಕಳ ಸಹಾಯವಾಣಿ ಮೂಲಕ ಬಾಲ್ಯ ವಿವಾಹ ತಡೆದ ಅಧಿಕಾರಿಗಳು

ಧಾರವಾಡ: 28 ವರ್ಷದ ಯುವಕನೊಂದಿಗೆ 16 ವರ್ಷದ ಅಪ್ರಾಪ್ತ ಬಾಲಕಿಯ ವಿವಾಹ ಮಾಡುತ್ತಿರುವ ಮಾಹಿತಿ ತಿಳಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಆ ವಿವಾಹವನ್ನು ತಡೆದ ಘಟನೆ ತಾಲೂಕಿನ ಸೋಮಾಪುರ ಗ್ರಾಮದಲ್ಲಿ ನಡೆದಿದೆ. ಬೋಗೂರು ಗ್ರಾಮದ ಬಾಲಕಿಯನ್ನು ಸೋಮಾಪುರ ಗ್ರಾಮದ ಶಂಕರ ಅಣ್ಣಿಗೇರಿ ಎಂಬುವವರಿಗೆ ಕೊಟ್ಟು ವಿವಾಹ ಮಾಡಲಾಗುತ್ತಿತ್ತು. ಮಕ್ಕಳ ಸಹಾಯವಾಣಿ ಮೂಲಕ ಈ ವಿಷಯ ಅರಿತ ಅಧಿಕಾರಿಗಳಾದ ಕರೆಪ್ಪ ಕೌಜಲಗಿ, ಮಹ್ಮದ ಅಲಿ, ವಿಶಾಲಾ ಕಾನಪೇಟ ಸೇರಿದಂತೆ ಅನೇಕರು ಪೊಲೀಸರ ಸಹಾಯದೊಂದಿಗೆ ವಿವಾಹ ನಡೆಯುತ್ತಿದ್ದ […]

ಬಾರ್ ಬಂದ್ ಮಾಡುವಂತೆ ಸಾರ್ವಜನಿಕರು ಪೊಲೀಸರ ಮಧ್ಯೆ ಜಟಾಪಟಿ

ಧಾರವಾಡ: ಇಲ್ಲಿನ ಹೆಬ್ಬಳ್ಳಿ ಅಗಸಿಯ ಮುರುಘರಾಜೇಂದ್ರನಗರದಲ್ಲಿ ತೆರೆಯಲಾಗುತ್ತಿರುವ ಮದ್ಯದ ಮಳಿಗೆಯನ್ನು ಬಂದ್ ಮಾಡುವಂತೆ ಆಗ್ರಹಿಸಿ ಸಾರ್ವಜನಿಕರು ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಪೊಲೀಸರು ಮತ್ತು ಸಾರ್ವಜನಿಕರು ಮಧ್ಯೆ ಜಟಾಪಟಿ ನಡೆದು ಪೊಲೀಸರು ಕೆಲ ಸಾರ್ವಜನಿಕರನ್ನು ವಶಕ್ಕೆ ಪಡೆದ ಘಟನೆ ಗುರುವಾರ ನಡೆದಿದೆ. ಈ ಹಿಂದೆಯೂ ಮದ್ಯದ ಮಳಿಗೆಯನ್ನು ಬಂದ್ ಮಾಡುವಂತೆ ಸಾರ್ವಜನಿಕರು ಪ್ರತಿಭಟನೆ ಮಾಡಿದ್ದರು. ಆದರೆ, ಮದ್ಯದ ಅಂಗಡಿ ಮಾಲೀಕರು ತಮ್ಮ ಮದ್ಯದ ಮಳಿಗೆ ತೆರೆಯಲು ಅಡೆತಡೆ ಉಂಟು ಮಾಡುತ್ತಿದ್ದಾರೆ ಎಂದು 16 ಮಂದಿ ಮೇಲೆ ದೂರು […]

ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್ ಮೇಲೆ ದಾಳಿ: ಇಬ್ಬರು ಯುವತಿಯರ ರಕ್ಷಣೆ!

ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್ ಮೇಲೆ ದಾಳಿ: ಇಬ್ಬರು ಯುವತಿಯರ ರಕ್ಷಣೆ!

ಹುಬ್ಬಳ್ಳಿ: ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್ ಮೇಲೆ ಕೇಶ್ವಾಪುರ ಠಾಣೆ ಪೊಲೀಸರು ದಾಳಿ ನಡೆಸಿ ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ. ಯುವತಿಯರಿಗೆ ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಮೆರೆಗೆ ದಾಳಿ ಭವಾನಿ ನಗರದಲ್ಲಿನ ರಾಮ ರೆಸಿಡೆನ್ಸಿ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರು ಯುವತಿಯರನ್ನು ರಕ್ಷಿಸಿದ್ದು, ಲಾಡ್ಜ್ ಮ್ಯಾನೇಜರ್ ರಾಘವೇಂದ್ರನನ್ನು ಬಂಧಿಸಿದ್ದಾರೆ. ಇನ್​​​​​​ಸ್ಪೆಕ್ಟರ್ ಯು.ಹೆಚ್. ಸಾತೇನಳ್ಳಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಈ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Views: 822

ಜೋಶಿ ಎಂಬ ದುಷ್ಠ ಶಕ್ತಿ ಮಣಿಸಲೆಂದೆ ಚುನಾವಣಾ ಅಖಾಡಕ್ಕೆ: ವಿನಯ ಕುಲಕರ್ಣಿ

ಜೋಶಿ ಎಂಬ ದುಷ್ಠ ಶಕ್ತಿ ಮಣಿಸಲೆಂದೆ ಚುನಾವಣಾ ಅಖಾಡಕ್ಕೆ: ವಿನಯ ಕುಲಕರ್ಣಿ

ಹುಬ್ಬಳ್ಳಿ: ಚುನಾವಣೆಯಲ್ಲಿ ಮತ್ತೆ ನಿಲ್ಲುವ ಮನಸ್ಸಿರಲಿಲ್ಲ, ಆದ್ರೆ ಇಲ್ಲಿನ ಪ್ರಲ್ಹಾದ ಜೋಶಿ ಎಂಬ ದುಷ್ಠ ಶಕ್ತಿಯನ್ನು ಮಣಿಸಲು ಕಣಕ್ಕಿಳಿದಿದ್ದೇನೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದ್ದಾರೆ. ಇಲ್ಲಿನ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಇಂದು ಮಾತನಾಡಿದ ಧಾರವಾಡ ಲೋಕಸಭೆ ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ್ ಕುಲಕರ್ಣಿ ಸಂಸದ ಜೋಶಿ ಹುಬ್ಬಳ್ಳಿ ರೈಲು ನಿಲ್ದಾಣ ಮಾಡಿದ್ದು ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಹೇಳಿಕೆ ನೀಡಿದ್ದಾರೆ. ಆದ್ರೆ ಹುಬ್ಬಳ್ಳಿ ರೈಲು‌ ನಿಲ್ದಾಣ ನಿರ್ಮಾಣಗೊಂಡಾಗ ಇನ್ನೂ ಜೋಶಿಯವರು ಹುಟ್ಟಿರಲೇ ಇಲ್ಲ […]

ಗುರುಗ್ರಾಮ ಬಹುಮಹಡಿ ಕಟ್ಟಡ ಕುಸಿತ: ಸತ್ತವರ ಸಂಖ್ಯೆ ಏಳಕ್ಕೇರಿಕೆ

ಗುರುಗ್ರಾಮ ಬಹುಮಹಡಿ ಕಟ್ಟಡ ಕುಸಿತ: ಸತ್ತವರ ಸಂಖ್ಯೆ ಏಳಕ್ಕೇರಿಕೆ

  ಗುರುಗ್ರಾಮ (ಹರಿಯಾಣ): ರಾಷ್ಟ್ರ ರಾಜಧಾನಿಗೆ ಸಮೀಪದಲ್ಲಿರುವ ಹರಿಯಾಣಾದ ಗುರುಗ್ರಾಮದ  ಉಲ್ಲಾವಾಸ ಪ್ರದೇಶದಲ್ಲಿ ನಾಲ್ಕು ಮಹಡಿ ಕಟ್ಟಡವೊಂದು ಕುಸಿದು ಸಂಭವಿಸಿದ ದುರಂತದಲ್ಲಿ ಸತ್ತವರ ಸಂಖ್ಯೆ ಏಳಕ್ಕೇರಿದೆ. ಗುರುವಾರ ಬೆಳಗಿನ ಜಾವ ಸಂಭವಿಸಿರುವ ಈ ದುರಂತದಲ್ಲಿ ಅವಶೇಷಗಳಡಿ ಇನ್ನೂ ಕೆಲವು ಮಂದಿ ಸಿಕ್ಕಿಕೊಂಡಿರುವ ಶಂಕೆ ಇದೆ. ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ. ಏತನ್ಮಧ್ಯೆ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಹರಿಯಾಣಾ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು ತಲಾ 3 ಲಕ್ಷ ರೂ. ಗಳ ಪರಿಹಾರ ಘೋಷಿಸಿದ್ದಾರೆ. Views: 124

ಸಾಹಿತಿ ಮೋಹನ್ ನಾಗಮ್ಮನವರ್ ನಿಧನ

ಸಾಹಿತಿ ಮೋಹನ್ ನಾಗಮ್ಮನವರ್ ನಿಧನ

ಧಾರವಾಡ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಮೋಹನ್ ನಾಗಮ್ಮನವರ್( 58) ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಇಲ್ಲಿನ ಎಸ್ ಡಿಎಂ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಬೆಳಗಿನ ಜಾವ 6 ಗಂಟೆಗೆ ವಿಧಿವಶರಾಗಿದ್ದಾರೆ. ಸಾಹಿತಿ ನಾಗಮ್ಮನವರ ಹಲವಾರು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಧಾರವಾಡದಲ್ಲಿ ಇಂದು ಅಂತ್ಯಸ್ಕಾರ ನಡೆಯಲಿದೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ. Views: 144

ಜಿಲ್ಲಾಧಿಕಾರಿ ದೀಪಾ ಚೋಳನ್ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ವಾಸ್ತವ್ಯ

ಜಿಲ್ಲಾಧಿಕಾರಿ ದೀಪಾ ಚೋಳನ್ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ವಾಸ್ತವ್ಯ

ಧಾರವಾಡ: ಇದೇ ಮೊದಲ ಭಾರಿಗೆ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಮಹಿಳಾ ಜಿಲ್ಲಾಧಿಕಾರಿಯೊಬ್ಬರು ಗ್ರಾಮ ವಾಸ್ತವ್ಯ ಮಾಡಿದ್ದು, ಶನಿವಾರ ರಾತ್ರಿ ಅವರಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ ದೊರೆಯಿತು. ಗ್ರಾಮದ ಮೊದಲ ಬಸ್ ನಿಲ್ದಾಣದ ಬಳಿ ಇಡೀ ಜಿಲ್ಲಾಡಳಿತವೇ ಜಿಲ್ಲಾಧಿಕಾರಿಯೊಂದಿಗೆ ಬಂದಿಳಿದ ನಂತರ ಗ್ರಾಮಸ್ಥರು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರನ್ನು ಅದ್ಧೂರಿಯಿಂದ ಬರಮಾಡಿಕೊಂಡರು. ಗ್ರಾಮದಲ್ಲಿನ ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಜಿಲ್ಲಾಧಿಕಾರಿ ದೀಪಾ ಅವರು ಗ್ರಾಮ ವಾಸ್ತವ್ಯ ಮಾಡುತ್ತಿದ್ದು, ಈಗಾಗಲೇ ನೂಲ್ವಿ ಹಾಗೂ ಹಿರೇಹೊನ್ನಳ್ಳಿ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಅಲ್ಲಿ […]

ರೈತನಿಗೆ ಪರಿಹಾರ ನೀಡಲು ಹಿಂದೇಟು: ಎಸಿ ಕಚೇರಿ ವಾಹನ, ಪಿಠೋಪಕರಣ ಜಪ್ತಿ 

ರೈತನಿಗೆ ಪರಿಹಾರ ನೀಡಲು ಹಿಂದೇಟು: ಎಸಿ ಕಚೇರಿ ವಾಹನ, ಪಿಠೋಪಕರಣ ಜಪ್ತಿ 

ಧಾರವಾಡ: ಜಮೀನು ಸ್ವಾಧೀನ ಪಡೆಸಿಕೊಂಡು ರೈತನಿಗೆ ಪರಿಹಾರ ಹಣ ನೀಡದ ಹಿನ್ನಲೆ ನಯ್ಯಾಲಯದ ಆದೇಶದ ಮೇರೆಗೆ ಉಪವಿಭಾಗಾಧಿಕಾರಿ ಕಚೇರಿಯ  ಪೀಠೋಪಕರಣ, ಎಸಿ ವಾಹನ ಜಪ್ತಿ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿನ ನವನಗರದ ಸುತಗಟ್ಟಿ ಬಡಾವಣೆ ನಿವಾಸಿ ಬಸಯ್ಯ ಮೂಗ ಶಿವಯ್ಯನವರ ಎಂಬುವವರ ಒಂದು ಎಕರೆ ಇಪ್ಪತ್ತೈದು ಗುಂಟೆ ಜಮೀನನ್ನು 1992 ರಲ್ಲಿ ವಸತಿ ಯೋಜನೆಗಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. 14 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿತ್ತು. ಆದರೆ ಹಣ ನೀಡದ ಹಿನ್ನಲೆ ಎರಡನೇ ಹೆಚ್ಚುವರಿ ದಿವಾಣಿ […]

ಸಂವಿಧಾನ ಸುಟ್ಟು ಉದ್ಧಟತನ: ಡಿಎಸ್‌ಎಸ್‌ನಿಂದ ಪ್ರತಿಭಟನೆ

ಸಂವಿಧಾನ ಸುಟ್ಟು ಉದ್ಧಟತನ: ಡಿಎಸ್‌ಎಸ್‌ನಿಂದ ಪ್ರತಿಭಟನೆ

ಧಾರವಾಡ: ದೆಹಲಿಯ ಜಂತರ್ ಮಂತರ್‌ನಲ್ಲಿ ಭಾರತದ ಶ್ರೇಷ್ಠ ಸಂವಿಧಾನವನ್ನು ಸುಟ್ಟು, ಡಾ.ಬಿ.ಆರ್.ಅಂಬೇಡ್ಕರ ಹಾಗೂ ಪರಿಶಿಷ್ಟ ಜಾತಿ, ಪಂಗಡಗಳ ಕಾಯ್ದೆ ವಿರುದ್ಧ ಘೋಷಣೆ ಕೂಗಿ ದಲಿತರ ಸ್ವಾಭಿಮಾನಕ್ಕೆ ಧಕ್ಕೆ ತಂದ ಜಾತಿವಾದಿ ಹಾಗೂ ರಾಷ್ಟ್ರದ್ರೋಹಿಗಳ ಮೇಲೆ ಪ್ರಕರಣ ದಾಖಲಿಸಿ, ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಸಂವಿಧಾನ ವಿರೋಧಿಗಳ ಪ್ರತಿಕೃತಿ ದಹನ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಪವಿತ್ರ ಗ್ರಂಥವೆಂದೇ […]

1 2 3 103