ಮಹಿಳೆಯೊಂದಿಗೆ ಅಸಭ್ಯ ವರ್ತನೆ, ಸಾರ್ವಜನಿಕರಿಂದ ಯುವಕನಿಗೆ ಗೂಸಾ

ಮಹಿಳೆಯೊಂದಿಗೆ ಅಸಭ್ಯ ವರ್ತನೆ, ಸಾರ್ವಜನಿಕರಿಂದ ಯುವಕನಿಗೆ ಗೂಸಾ

ಧಾರವಾಡ: ನಗರದ ಆಲೂರು ವೆಂಕಟರಾವ್ ಬಸ್‍ ನಿಲ್ದಾಣದಲ್ಲಿ  ಯುವಕನೊಬ್ಬ ಮಹಿಳೆಯೊಂದಿಗೆ ಅಸಭ್ಯ ವರ್ತನೆ ಮಾಡುತ್ತಿದ್ದನ್ನು ಕಂಡ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಕುಡಿದ ಅಮಲಿನಲ್ಲಿದ್ದ ಯುವಕ ಬಸ್‍ಗಾಗಿ ಕಾಯುತ್ತಿರುವ ಒಂಟಿ ಮಹಿಳೆ ಬಳಿ ಬಂದು ಅನುಚಿತವಾಗಿ ವರ್ತಿಸುತ್ತಿದ್ದ ಇದನ್ನು  ಕಂಡ ಸಾರ್ವಜನಿಕರು  ಆತನಿಗೆ ಗೂಸಾ ನೀಡಿ ನಂತರ  ಪೊಲೀಸರಿಗೆ ಒಪ್ಪಿಸಿದ್ದಾರೆ. Views: 181

ಕಳಪೆ ಕಾಮಗಾರಿ: ಬಿಆರ್‍ಟಿಎಸ್ ಸಂಸ್ಥೆ ವಿರುದ್ಧ ಪ್ರತಿಭಟನೆ

ಕಳಪೆ ಕಾಮಗಾರಿ: ಬಿಆರ್‍ಟಿಎಸ್ ಸಂಸ್ಥೆ ವಿರುದ್ಧ ಪ್ರತಿಭಟನೆ

ಧಾರವಾಡ: ನಗರದ ವಿವಿಧ ಬಡಾವನೆಗಳಲ್ಲಿ ಒಳಚರಂಡಿ ನೀರು ರಸ್ತೆ ಹರಿದಾಡುತ್ತಿದೆ ಎಂದು ಆರೋಪಿಸಿ  ವಿರುದ್ದ ನಿವಾಸಿಗಳು ಮಂಗಳವಾರ  ಜೆಎಸ್‍ಎಸ್ ಕಾಲೇಜಿನ ಹತ್ತಿರ ಇರುವ ಮಧು ಅಪಾರ್ಟ್‍ಮೆಂಟ್ ಎದುರುಗಡೆ ಬಿಆರ್‍ಟಿಎಸ್ ಸಂಸ್ಥೆ ವಿರುದ್ಧ ಪ್ರತಿಭಟನೆ ನಡೆಸಿದರು. ನಗರದ ವಿವೇಕಾನಂದನಗರ, ಲಕ್ಷ್ಮೀನಗರ, ವಿದ್ಯಾಗಿರಿ, ರಜತಗಿರಿ, ಸತ್ತೂರ ಕಾಲೊನಿ ಹಾಗೂ ಶೆಟ್ಟರ ಕಾಲೊನಿಗಳಲ್ಲಿ ವಿವಿಧ ಕಾಮಗಾರಿ ನಿರ್ವಹಿಸಿದ ಬಿಆರ್‍ಟಿಎಸ್ ಸಂಸ್ಥೆ ಕಳಪೆ ಕಾಮಗಾರಿ ಮಾಡಿದೆ.   ರಸ್ತೆ ಅಗಲೀಕರಣದ ನೆಪದಲ್ಲಿ ಕೆಲವು ಒಳಚರಂಡಿ ಮುಚಿದ್ದರಿಂದ ಕೊಳಚೆ ನೀರು ರಸ್ತೆ ಮೇಲೆ ಹರಿದಾಡುತ್ತಿದೆ. ಇರಿಂ‍ದ […]

ಅಪಘಾತ: ಒಬ್ಬನಿಗೆ ಗಂಭೀರ ಗಾಯ

ಅಪಘಾತ: ಒಬ್ಬನಿಗೆ ಗಂಭೀರ ಗಾಯ

ಧಾರವಾಡ: ಸ್ಕೂಟಿ ಮತ್ತು ಅಶೋಕ ಲೈಲಾಂಡ್ ವಾಹನದ ಮುಖಾಮುಖಿ ಡಿಕ್ಕಿ ಹೊಡೆದ ಪರಣಾಮ  ಸ್ಕೂಟಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ  ಹೊಸ ಬಸ್ ನಿಲ್ದಾಣದ ಬಳಿ  ನಡೆದಿದೆ. ಹೊಸ ಬಸ್ ನಿಲ್ದಾಣದ ಕಡೆಯಿಂದ ಬರುತ್ತಿದ್ದ ಸ್ಕೂಟಿಗೆ ಎದುರಿಗೆ ಬಂದ ಅಶೋಕ ಲೈಲ್ಯಾಂಡ್ ವಾಹನ ಚಾಲಕ ನಿರ್ಲಕ್ಷ್ಯದಿಂದ  ಘಟನೆ ಸಂಭವಿಸಿದೆ. ಸ್ಕೂಟಿ ಚಾಲಕನ ಹೆಸರು ತಿಳಿದು ಬಂದಿಲ್ಲ, ಆತನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು,  ಅಶೋಕ ಲೈಲ್ಯಾಂಡ್ ವಾಹನದ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಭೇಟಿ […]

ರೈತರು ಸತ್ತರೆ ನಾವ್ಯಾರೂ ಬದುಕುವುದಿಲ್ಲ: ಡಾ.ಜಿ ಎನ್ ದೇವಿ

ರೈತರು ಸತ್ತರೆ ನಾವ್ಯಾರೂ ಬದುಕುವುದಿಲ್ಲ: ಡಾ.ಜಿ ಎನ್ ದೇವಿ

  ಧಾರವಾಡ:  ರೈತರು ಸತ್ತರೆ ನಾವ್ಯಾರೂ ಬದುಕುವುದಿಲ್ಲ ಎಂಬ ಸಾಮಾನ್ಯ  ವಿವೇಕವನ್ನೂ ನಾಗರಿಕ ಸಮಾಜ ಕಳೆದುಕೊಂಡಿದೆೆ ಎಂದು ಚಿಂತಕ ಡಾ. ಜಿ ಎನ್ ದೇವಿಯವರು ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸೋಮವಾರ ನಡೆದ ಧಾರವಾಡದ ಪ್ರಗತಿಪರ ಸಂಘಟನೆಗಳು ವತಿಯಿಂದ ಹಮ್ಮಿಕೊಳ್ಳಲಾದ  ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ರೈತ ಸಮುದಾಯ ನಾಶವಾದರೆ ದೇಶವಾಗಲೀ ಸಮಾಜವಾಗಲೀ ಬದುಕುಳಿಯಲು ಸಾಧ್ಯವಿಲ್ಲ. ರೈತ ಸಮುದಾಯದ ಅಸ್ಥಿತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರ ಸಂಕಷ್ಟಗಳಿಗೆ ಸ್ಪಂದಿಸುವ ಅವರ ಹೋರಾಟವನ್ನು ಬೆಂಬಲಿಸುವ ಸಂವೇದನಾಶೀಲತೆಯನ್ನು ನಾಗರಿಕ […]

ಕರ್ನಾಟಕ ಬಂದ್: ಧಾರವಾಡಕ್ಕೆ ತಟ್ಟದ ಬಂದ್ ಬಿಸಿ

ಕರ್ನಾಟಕ ಬಂದ್:  ಧಾರವಾಡಕ್ಕೆ ತಟ್ಟದ ಬಂದ್ ಬಿಸಿ

ಧಾರವಾಡ: ಕಳಾಸ ಬಂಡೂರಿ ಮಹಾದಾಯಿ ಯೋಜನೆಯನ್ನು ಜಾರಿಗೋಳಿಸಬೇಕು,ಹಾಗೂ ಬಯಲು ಸೀಮೆಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು ಎಂದು ಇಂದು ಇಡಿ ರಾಜ್ಯದ್ಯಂತ ಪ್ರತಿಭಟನೆ ಮಾಡಲು ವಿವಿಧ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದಗೆ ಕರೆ ನೀಡಿದ್ದವು. ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಕಾವು ಬೆಳಗ್ಗೆಯಿಂದಲೆ ಶುರುವಾಗಿತ್ತು,ಮಹದಾಯಿ ಹಾಗೂ ಕಳಸಾಬಂಡೊರಿ ಹೋರಾಟದಲ್ಲಿ ಪ್ರಮುಖವಾದ ಪಾತ್ರವಹಿಸಿದಂತಹ ಧಾರವಾಡದಲ್ಲಿ ಪ್ರತಿಭಟನೆಗೆ ನೀರಸ ಪ್ರಕ್ರಿಯೆ ಉಂಟಾಯಿತು,ಪ್ರತಿನಿತ್ಯದಂತ್ಯೆ ಬಸ್ಸ್ ಗಳ ಸಂಚಾರ ಸಹ ಸುಗಮವಾಗಿ ಸಾಗಿತ್ತು. ನಗರದಲ್ಲಿರುವ ಶಾಲಾ ಕಾಲೇಜುಗಳಿಗೆ ರಜೇ ಗೋಷಣೆ ಮಾಡಿರಲಿಲ್ಲ […]

ಖಾನಾಪುರ ಸಮೀಪ ಉರುಳಿದ ಕ್ರೂಸರ್ ವಾಹನ: ಐವರ ಸ್ಥಿತಿ ಗಂಭೀರ

ಖಾನಾಪುರ ಸಮೀಪ ಉರುಳಿದ ಕ್ರೂಸರ್ ವಾಹನ: ಐವರ ಸ್ಥಿತಿ ಗಂಭೀರ

ಬೆಳಗಾವಿ:  ಹುಬ್ಬಳ್ಳಿಯಿಂದ ಗೋವಾಕ್ಕೆ ಹೊರಟಿದ್ದ  ಕ್ರೂಸರ್ ವಾಹನ ಖಾನಾಪುರ ತಾಲೂಕಿನ ರಾಮನಗರ ಬಳಿ ರವಿವಾರ ಮಧ್ಯಾಹ್ನ  ಉರುಳಿ 12 ಪ್ರಯಾಣಿಕರು ಗಾಯಗೊಂಡಿದ್ದು, ಅವರಲ್ಲಿ ಐದು ಜನರ ಸ್ಥಿತಿ ಚಿಂತಾಜನಕವಾಗಿದೆ. ಭಾರಿ ವೇಗದಲ್ಲಿದ್ದ ವಾಹನ ಬ್ರೇಕ್ ಫೇಲ್ ಆಗಿದ್ದು ಗೊತ್ತಾಗುತ್ತಿದ್ದಂತೆ ಚಾಲಕ ವೇಗ ನಿಯಂತ್ರಣಕ್ಕೆ ಪ್ರಯತ್ನಿಸಿದ್ದಾನೆ. ಚಾಲಕನ ನಿಯಂತ್ರಣ ಕಳೆದುಕೊಂಡು ವಾಹನ ಉರುಳಿಬಿದ್ದಿದೆ ಎಂದು ಗಾಯಾಳುಗಳು ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ.ಗಾಯಗೊಂಡವರನನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನಂದಗಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Views: 262

ಚಟುವಟಿಕೆ ಕುರಿತು ಸಲಹೆ ಸೂಚನೆ ಪಡೆದ ಕಸಾಪ ಅಧ್ಯಕ್ಷ ಮನು ಬಳಿಗಾರ

ಚಟುವಟಿಕೆ ಕುರಿತು ಸಲಹೆ ಸೂಚನೆ ಪಡೆದ ಕಸಾಪ ಅಧ್ಯಕ್ಷ ಮನು ಬಳಿಗಾರ

ಧಾರವಾಡ : ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮನು ಬಳಿಗಾರ ಅವರು ಶನಿವಾರ ಸಂಜೆ ನಾಡಿನ ಹಿರಿಯ ಸಂಸ್ಥೆಯಾದ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಆಗಮಿಸಿ, ಸಾಹಿತಿಗಳು, ಕಲಾವಿದರು, ಸಂಘದ ಪದಾಧಿಕಾರಿಗಳೊಂದಿಗೆ ಕನ್ನಡ ನಾಡು, ನುಡಿ ಹಾಗೂ ಸಾಹಿತ್ಯಿಕ, ಸಾಂಸ್ಕøತಿಕ ಚಟುವಟಿಕೆಗಳ ಕುರಿತು ತಮ್ಮ ಅಧಿಕಾರಾವಧಿಯಲ್ಲಿ ನಾಡಿನ ವಿವಿಧೆಡೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ಆಪ್ತ ಸಮಾಲೋಚನೆ ನಡೆಸಿದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಕಾರ್ಯಾಧ್ಯಕ್ಷರಾದ ಡಾ. ಡಿ. ಎಂ. ಹಿರೇಮಠ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶಿವಣ್ಣ […]

ಮಕ್ಕಳ ಅಭಿರುಚಿ ಗುರುತಿಸಿ ಅವರನ್ನು ಪ್ರೋತ್ಸಾಹಿಸಬೇಕು: ಸಿಎಂ

ಮಕ್ಕಳ ಅಭಿರುಚಿ ಗುರುತಿಸಿ ಅವರನ್ನು ಪ್ರೋತ್ಸಾಹಿಸಬೇಕು: ಸಿಎಂ

ಧಾರವಾಡ: ಪ್ರತಿಯೊಂದು ಮಗುವೂ ನಾಳಿನ ಕನಸು, ಪ್ರತಿ ಮಗುವಿನಲ್ಲಿಯೂ ಸುಪ್ತವಾದ ಪ್ರತಿಭೆ ಇದ್ದೇ ಇರುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ನೋಡು ಎನ್ನುವಂತೆ ಬಾಲ್ಯದಲ್ಲಿಯೇ ಮಕ್ಕಳ ಅಭಿರುಚಿ, ಆಸಕ್ತಿಗಳನ್ನು ಗುರುತಿಸಿ ಪೂರಕ ವಾತಾವರಣ ಕಲ್ಪಿಸಿ ಪ್ರೋತ್ಸಾಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇಲ್ಲಿನ ಮಲ್ಲಿಕಾರ್ಜುನ ಮನಸೂರು ಕಲಾಭವನದಲ್ಲಿ ಶನಿವಾರ ಸಂಜೆ ಕರ್ನಾಟಕ ಬಾಲವಿಕಾಸ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ 2011-12 ರಿಂದ 2015-16 ನೇ ಸಾಲಿನವರೆಗೆ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕøತರಿಗೆ, 2013 ಹಾಗೂ 2014 ನೇ […]

ಹುಬ್ಬಳ್ಳಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಯತ್ನ ಪ್ರಕರಣ:ವೈರಲ್ ಆದ ಸಿಸಿಟಿವಿ ದೃಶ್ಯಗಳು

ಹುಬ್ಬಳ್ಳಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಯತ್ನ ಪ್ರಕರಣ:ವೈರಲ್ ಆದ ಸಿಸಿಟಿವಿ ದೃಶ್ಯಗಳು

ಹುಬ್ಬಳ್ಳಿ: ತನ್ನ ಅಜ್ಜಿ ಜೊತೆ ಹುಬ್ಬಳ್ಳಿಗೆ ಬಂದಿದ್ದ 8 ವರ್ಷದ ಬಾಲಕಿಯನ್ನು, ಅಜ್ಜಿಯ ಕಣ್ತಪ್ಪಿಸಿ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ ಈಗ ಪೊಲೀಸರ ವಶದಲ್ಲಿದ್ದು,  ಸಿಸಿ ಟಿವಿಯಲ್ಲಿ ಸೆರೆಯಾದ ಕಾಮುಕನ ಚಲನವಲನದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಜೂನ್ 8ರಂದು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡುತ್ತಿದ್ದ ಕಾಮುಕನೊಬ್ಬನನ್ನು ಉಪನಗರ ಠಾಣೆಯ ಪೊಲೀಸರು ಬಂಧಿಸಿದ್ದರು. ಗಣೇಶ ನಾಗಪ್ಪ ಸುತ್ತಗಟ್ಟಿ (28) ಎಂಬಾತನನ್ನು ಬಂಧಿಸಿರುವ ಪೊಲೀಸರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಸ್ ನಿಲ್ದಾಣದ ಬಳಿಯ […]

ಧಾರವಾಡ: ಮೊಬೈಲ್ ಕಳ್ಳತನ, ಒಬ್ಬನ ಬಂಧನ

ಧಾರವಾಡ: ಮೊಬೈಲ್ ಕಳ್ಳತನ, ಒಬ್ಬನ ಬಂಧನ

ಧಾರವಾಡ: ಇಲ್ಲಿನ ಉಪನಗರ ಠಾಣೆಯ ಪೊಲೀಸರು ಕಳ್ಳತನ ಮಾಡಿದ ಮೊಬೈಲ್‍ಗಳನ್ನು ಮಾರಾಟ ಮಾಡುತ್ತಿದ್ದ ಒಬ್ಬನನ್ನು ಬುಧವಾರ ಬಂಧಿಸಿದ್ದಾರೆ. ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ನಿವಾಸಿ ಮುಂಜುನಾಥ ನೂಕಾಪೂರ ಬಂಧಿತ. ಹೊಸ ಬಸ್ ನಿಲ್ದಾಣದ ಬಳಿ ಸಂಶಯಾಸ್ಪದ ರೀತಿ ತಿರುಗಾಡುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈತನಿಂದ 1 ಲಕ್ಷ ಮೌಲ್ಯದ 10 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಪನಗರದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. Views: 232