ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದ ಕಾರು ಸುಟ್ಟು ಭಸ್ಮ

ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದ ಕಾರು ಸುಟ್ಟು ಭಸ್ಮ

ಧಾರವಾಡ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಕಾರು ಸುಟ್ಟು ಕರಕಲಾದ ಘಟನೆ ಭಾನುವಾರ ನಡೆದಿದೆ.   ಧಾರವಾಡದಿಂದ ಬೆಳಗಾವಿ ಕಡೆಗೆ ಹೊರಟಿದ್ದ ಕಾರು, ಧಾರವಾಡ ತಾಲೂಕಿನ ಕೋಟೂರ ಕ್ರಾಸ್ ಬಳಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಕ್ಷದಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಇಲ್ಲ: ಮೋಟಮ್ಮ ಎದುರು ಕಾರ್ಯಕರ್ತೆ ಅಳಲು

ಪಕ್ಷದಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಇಲ್ಲ: ಮೋಟಮ್ಮ ಎದುರು ಕಾರ್ಯಕರ್ತೆ ಅಳಲು

ಧಾರವಾಡ: ಕಾಂಗ್ರೆಸ್ ನಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಇಲ್ಲ. ಪಕ್ಷದಲ್ಲಿ ಮಹಿಳೆಯರನ್ನು ತುಚ್ಛವಾಗಿ ಕಾಣುತ್ತಾರೆ ಎಂದು ಕಾ ಮಾಜಿ ಸಚಿವೆ ಮೋಟಮ್ಮ ಎದುರು ಕೈ ಕಾರ್ಯಕರ್ತೆಯೊಬ್ಬರ ಅಳಲು ತೊಡಿಕೊಂಡಿದ್ದಾರೆ. ನಗರದ ವಿದ್ಯಾವರ್ಧಕ‌ ಸಂಘದಲ್ಲಿ  ಭಾನುವಾರ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಆಯೋಜಿಸಿರುವ ‘ಚುನಾವಣೆ: ಒಳ ಹೊರಗೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.  ಕಾಂಗ್ರೆಸ್ ಕಾರ್ಯಕರ್ತೆ ಪಕ್ಷದಲ್ಲಿ ನಮ್ಮ ನಾಯಕರ ಪರವಾಗಿ ಕೆಲಸ ಮಾಡುವಾಗ ಕೀಳಾಗಿ ನೋಡುತ್ತಾರೆ. ನಮ್ಮ ಕಷ್ಟ ಕೇಳೋರಾರು? ಎಂದು  ಕಾಂಗ್ರೆಸ್ ನಾಯಕಿ ಮೋಟಮ್ಮಗೆ ಕಾರ್ಯಕರ್ತೆ ಅನಿತಾ ಗುಂಜಾಳ ಪ್ರಶ್ನಿಸಿದ್ದಾರೆ. […]

ಧಾರವಾಡದಲ್ಲಿ ಮತ್ತೆ ಕಳ್ಳರ ಹಾವಳಿ: ಸ್ಥಳೀಯರ ಆಕ್ರೋಶ

ಧಾರವಾಡದಲ್ಲಿ ಮತ್ತೆ ಕಳ್ಳರ ಹಾವಳಿ: ಸ್ಥಳೀಯರ ಆಕ್ರೋಶ

ಧಾರವಾಡ: ಇತ್ತಿಚೀಗೆ ನಗರದಲ್ಲಿ ದಿನ-ದಿನ ಕಳ್ಳರ ಹಾವಳಿ ಹೆಚ್ಚಾಗಿದ್ದು ಶನಿವಾರ ಬೆಳ್ಳಂ ಬೆಳಿಗ್ಗೆ ಕಳ್ಳರು ಮತ್ತೆ  ತಮ್ಮ ಕೈ ಚಳಕ ತೋರಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿನ ಶ್ರೀನಗರ ಸರ್ಕಲ್ ಬಳಿಯ ಕೃಷ್ಣ ಜನರಲ್ ಸ್ಟೋರ್ ನ ಶೆಲ್ಟರ್ ನ ಕೀಲಿ ಮುರಿದು ಕಳ್ಳತನ ಮಾಡಲಾಗಿದ್ದು,  ಗಲ್ಲಾ ಪೆಟ್ಟಿಗೆಯನ್ನು ಮುರಿದು 65 ಸಾವಿರ ರೂಪಾಯಿ ನಗದು ಕಳ್ಳತನ ಮಾಡಿದ್ದಾರೆ.  ಅಲ್ಲದೆ ಕೆಲವು ಕಿರಾಣಿ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದಾರೆ. ಸುದ್ದಿ ತಿಳಿದ ಪೊಲೀಸ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ […]

ಗೋವಾದ ಮಣಿಪಾಲ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಗೆ ವಿಕಿರಣ ಚಿಕಿತ್ಸೆ

ಗೋವಾದ ಮಣಿಪಾಲ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಗೆ ವಿಕಿರಣ ಚಿಕಿತ್ಸೆ

ಹುಬ್ಬಳ್ಳಿ: ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪ್ರತ್ಯೇಕ ಮಾನದಂಡವನ್ನು ಸ್ಥಾಪಿಸುವ ದೃಷ್ಟಿಯಿಂದ ಗೋವಾದ ಮಣಿಪಾಲ ಆಸ್ಪತ್ರೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಸದುದ್ದೇಶದಿಂದ ವಿಕಿರಣ ಚಿಕಿತ್ಸೆ ನೀಡಲು ಮುಂದಾಗಿದೆ ಎಂದು ಗೋವಾ ಮಣಿಪಾಲ ಆಸ್ಪತ್ರೆ ಮಾಧ್ಯಮ ಸಂಯೋಜಕ ಅರುಣ ಚಕ್ರವರ್ತಿ ತಿಳಿಸಿದರು. ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಶುಶ್ರೂಷೆಗೆ ವೈದ್ಯಕೀಯ ಉತ್ಕೃಷ್ಟತೆ ಮತ್ತು ರೋಗಿ ಕೇಂದ್ರಿಕೃತ ಮಾರ್ಗದ ಮೇಲೆ ಒತ್ತು ನೀಡುವ ಉದ್ದೇಶದಿಂದ ಗೋವಾದ ಮಣಿಪಾಲ ಆಸ್ಪತ್ರೆ ಅತ್ಯಾಧುನಿಕ ಮತ್ತು ಉನ್ನತ ತಂತ್ರಜ್ಞಾನದಿಂದ ಗುಣಾತ್ಮಕ ಚಿಕಿತ್ಸೆಯನ್ನು ನೀಡಲು ಮುಂದಾಗಿದೆ ಅಲ್ಲದೇ […]

ಹೋದ ವರ್ಷ ಮಳೆ ಹೋಗಿ ಕೆಡಿಸಿತು, ಈ ವರ್ಷ ಆಗಿ ಕೆಡಿಸುತ್ತೋ ಏನೋ?

ಹೋದ ವರ್ಷ ಮಳೆ ಹೋಗಿ ಕೆಡಿಸಿತು, ಈ ವರ್ಷ ಆಗಿ ಕೆಡಿಸುತ್ತೋ ಏನೋ?

ಧಾರವಾಡ: ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತ ಸಾಕಷ್ಟು ತೊಂದರೆ ಅನುಭವಿಸಿದ್ದ. ಆದರೆ, ಈ ವರ್ಷ ಸುರಿಯುತ್ತಿರುವ ವರ್ಷಧಾರೆಯಿಂದಾಗಿ ರೈತನ ಮೊಗದಲ್ಲಿ ಮಂದಹಾಸವೇನೋ ಮೂಡಿದೆ. ಆದರೆ, ಇದರ ಜೊತೆಗೆ ಎಲ್ಲಿ ಅತೀವೃಷ್ಟಿಯಾಗುತ್ತದೆಯೋ ಏನೋ ಎಂಬ ಹೆದರಿಕೆ ಕೂಡ ರೈತನಲ್ಲಿ ಮೂಡಿದೆ. ಹೌದು! ಮೇ ತಿಂಗಳು ಮುಗಿದು ಜೂನ್ ತಿಂಗಳು ಆರಂಭವಾಗಿದೆ. ಈ ಕಾಲ ಬಿತ್ತನೆಗೆ ಪೂರಕವಾದ ಕಾಲ. ಈಗಾಗಲೇ ಕೆಲವು ಕಡೆಗಳಲ್ಲಿ ಬಿತ್ತನೆ ಕಾರ್ಯ ಆರಂಭವಾಗಿದೆ. ಆದರೆ, ಧಾರವಾಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಇನ್ನೂ […]

ಮುಂದುವರೆದ ಮಳೆಯ ರೌಧ್ರನರ್ತನ: ಸೇತುವೆ ಮೇಲೆ ಹರಿಯುತ್ತಿರುವ ಹಳ್ಳ

ಮುಂದುವರೆದ ಮಳೆಯ ರೌಧ್ರನರ್ತನ: ಸೇತುವೆ ಮೇಲೆ ಹರಿಯುತ್ತಿರುವ ಹಳ್ಳ

ಧಾರವಾಡ: ಭಾನುವಾರವೂ ಜಿಲ್ಲೆಯ ಕೆಲವೆಡೆ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ತಾಲೂಕಿನ ಉಪ್ಪಿನ ಬೆಟಗೇರಿ, ಲಕಮಾಪುರ, ಯಾದವಾಡ ಸೇರಿದಂತೆ ಅನೇಕ ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ಕೆಲವೆಡೆ ನೆರೆ ಕೂಡ ಬಂದಿದೆ. ತಾಲೂಕಿನ ಉಪ್ಪಿನ ಬೆಟಗೇರಿಯಿಂದ ಹನುಮನಹಾಳಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ನೀರು ತುಂಬಿ ಬಂದಿದ್ದು, ಆ ಮಾರ್ಗ ಸಂಪೂರ್ಣ ಬಂದ್ ಆಗಿದೆ. ಚಿಕ್ಕ ಹಳ್ಳ ಇದಾಗಿದ್ದು, ಹಳ್ಳ ತುಂಬಿ ಮೇಲೆ ಬಂದಿದೆ. ಸೇತುವೆ ಕೂಡ ಜಲಾವೃತಗೊಂಡಿದ್ದು, ಬೈಕ್ ಸವಾರರು ಧೈರ್ಯ ಮಾಡಿ ಅದರಲ್ಲೇ ದಾಟಿ […]

ಪ್ರತಿಭಟನಾಕಾರರಿಗೆ ತರಾಟೆ ತಗೆದುಕೊಂಡ ಪೊಲೀಸರು: ನಮ್ಮ ಗೋಳು ಕೇಳೋರ್ಯಾರು?

ಪ್ರತಿಭಟನಾಕಾರರಿಗೆ ತರಾಟೆ ತಗೆದುಕೊಂಡ ಪೊಲೀಸರು: ನಮ್ಮ ಗೋಳು ಕೇಳೋರ್ಯಾರು?

ಧಾರವಾಡ: ಶನಿವಾರ ರಾತ್ರಿ ಧಾರವಾಡದಲ್ಲಿ ಧಾರಾಕಾರ ಮಳೆ ಸುರಿದಿದ್ದು, ನಗರದ ಕೆಲ ಅಂಗಡಿ, ಮುಂಗಟ್ಟುಗಳಿಗೆ ನೀರು ನುಗ್ಗಿದೆ. ಈ ಅವಾಂತರ ಬಿಆರ್ ಟಿಎಸ್ ಕಾಮಗಾರಿ ವಿಳಂಬವಾಗಿದ್ದಕ್ಕೆ ಉಂಟಾಗಿದೆ ಎಂದು ಆರೋಪಿಸಿದ ಕೆಲ ಅಂಗಡಿ ವ್ಯಾಪಾರಸ್ಥರು ಇಲ್ಲಿನ ಜ್ಯುಬಿಲಿ ಸರ್ಕಲ್ ಬಂದ್ ಮಾಡಿ ಪ್ರತಿಭಟನೆ ನಡೆಸಲು ಮುಂದಾದ ವೇಳೆ ಪೊಲೀಸರು ಹಾಗೂ ಅಂಗಡಿ ವ್ಯಾಪಾರಸ್ಥರ ಮಧ್ಯೆ ತೀವ್ರ ಮಾತಿನ ಚಕಮಕಿ ಉಂಟಾದ ಘಟನೆ ನಡೆದಿದೆ. ಹುಬ್ಬಳ್ಳಿ, ಧಾರವಾಡ ಮಧ್ಯೆ ಬಿಆರ್ ಟಿಎಸ್ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಇದರಿಂದಾಗಿ ಅಂಗಡಿಗಳಿಗೆ […]

ತೈಲ ಬೆಲೆ ಏರಿಕೆ ಖಂಡಿಸಿ ಜೆಡಿಎಸ್  ಪ್ರತಿಭಟನೆ

ಧಾರವಾಡ: ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ ಸಿಲಿಂಡರ್ ಬೆಲೆ ಏರಿಕೆಯಾಗಿರುವುದನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಜೆಡಿಎಸ್ ನ ಸೇವಾದಳ ಘಟಕದ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅಚ್ಛೇ ದಿನ ಎಂದು ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಿದ ನರೇಂದ್ರ ಮೋದಿ ಅವರು ನಾಲ್ಕು ವರ್ಷ ಗತಿಸಿದರೂ ಹೇಳಿಕೊಳ್ಳುವಂತ ಸಾಧನೆಗಳನ್ನೇನೂ ಮಾಡಿಲ್ಲ. ದಿನದಿಂದ ದಿನಕ್ಕೆ ತೈಲ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಇದರತ್ತ ಕೇಂದ್ರ ಸರ್ಕಾರ ಗಮನಹರಿಸುತ್ತಿಲ್ಲ ಎಂದು ಪ್ರತಿಭಟನಾಕಾರರು […]

ಸಂಸದ, ಶಾಸಕರಿಂದ ಧಾರವಾಡದಲ್ಲಿ ಸಿಆರ್’ಎಫ್ ಯೋಜನೆಯಡಿಯ ಕಾಮಗಾರಿಗಳ ವೀಕ್ಷಣೆ

ಸಂಸದ, ಶಾಸಕರಿಂದ ಧಾರವಾಡದಲ್ಲಿ ಸಿಆರ್’ಎಫ್ ಯೋಜನೆಯಡಿಯ ಕಾಮಗಾರಿಗಳ ವೀಕ್ಷಣೆ

ಧಾರವಾಡ: ಇಲ್ಲಿನ ರಜತಗಿರಿ ಹಾಗೂ ವಿದ್ಯಾಗಿರಿ ಸೇರಿದಂತೆ ಅನೇಕ ಕಡೆಗಳಲ್ಲಿ ಸಿಆರ್ ಎಫ್ ಯೋಜನೆಯಡಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಸಂಸದ ಪ್ರಹ್ಲಾದ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ ಅವರು ಪರಿಶೀಲನೆ ನಡೆಸಿದರು. ರಜತಗಿರಿ ಹಾಗೂ ವಿದ್ಯಾಗಿರಿ ಕೆಲವು ಕಡೆಗಳಲ್ಲಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣವಾಗುತ್ತಿದ್ದು,ಇನ್ನೂ ಅವುಗಳು ಪೂರ್ಣಗೊಂಡಿಲ್ಲ. ರಸ್ತೆಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸಂಸದರು ಹಾಗೂ ಶಾಸಕರು ಸೂಚನೆ ನೀಡಿದರು. ಅದೂ ಅಲ್ಲದೇ ಶಾಸಕ ಅರವಿಂದ ಬೆಲ್ಲದ ಅವರು ರಸ್ತೆಗಳ ಗುಣಮಟ್ಟವನ್ನು ಪರಿಶೀಲಿಸಿದರು. ಸಂಸದರು ಹಾಗೂ ಶಾಸಕರು ಜಂಟಿಯಾಗಿ […]

ನೆಲಕಚ್ಚಿದ ಕೋಳಿ ಫಾರ್ಮ: 2500 ಕೋಳಿಗಳು ಸಾವು

ಧಾರವಾಡ: ಶುಕ್ರವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಇಲ್ಲಿನ ಕಲ್ಲೂರು ರಸ್ತೆಯಲ್ಲಿರುವ ಕೋಳಿ ಫಾರ್ಮ ಒಂದು ಸಂಪೂರ್ಣ ನೆಲಕಚ್ಚಿದ್ದು, ಫಾರ್ಮನಲ್ಲಿದ್ದ ಸುಮಾರು 2500 ಕೋಳಿಗಳು ಸತ್ತಿವೆ.   ಉಪ್ಪಿನ ಬೆಟಗೇರಿಯ ತನ್ವೀರ್ ಹಾದಿಮನಿ ಎಂಬುವವರಿಗೆ ಸೇರಿದ ಕೋಳಿ ಫಾರ್ಮ ಇದಾಗಿದ್ದು, ಫಾರ್ಮ ಸಂಪೂರ್ಣ ನೆಲಕಚ್ಚಿದೆ. ಶೆಡ್ ಸಂಪೂರ್ಣ ಮುರಿದು ಬಿದ್ದಿದ್ದು, ತಗಡುಗಳು ಗಾಳಿಗೆ ಹಾರಿ ರಸ್ತೆಗೆ ಬಂದು ಬಿದ್ದಿವೆ.    ಮಳೆಯ ಈ ಅವಾಂತರದಿಂದಾಗಿ ತನ್ವೀರ್ ಅವರು ಅಪಾರ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ.