ಧಾರಾಕಾರ ಮಳೆ ಧರೆಗುರುಳಿದ ಬೃಹದಾಕಾರದ ಮರಗಳು: ಕಲ್ಲೂರು ರಸ್ತೆ ಸಂಪೂರ್ಣ ಬಂದ್

ಧಾರಾಕಾರ ಮಳೆ ಧರೆಗುರುಳಿದ ಬೃಹದಾಕಾರದ ಮರಗಳು: ಕಲ್ಲೂರು ರಸ್ತೆ ಸಂಪೂರ್ಣ ಬಂದ್

ಧಾರವಾಡ: ಶುಕ್ರವಾರ ಸಂಜೆ ಬಿರುಗಾಳಿ ಸಮೇತ ಸುರಿದ ಭಾರೀ ಮಳೆಯಿಂದಾಗಿ ಜನ ಜೀವನ ಅಕ್ಷರಶಃ ಅಸ್ತವ್ಯಸ್ಥಗೊಂಡಿದೆ. ತಾಲೂಕಿನ ಕಲ್ಲೂರು ರಸ್ತೆಯಲ್ಲಿ ಬೃಹದಾಕಾರದ ಸುಮಾರು 15 ರಿಂದ 20 ಮರಗಳು ಸಂಪೂರ್ಣ ನೆಲಕಚ್ಚಿದ್ದು, ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಶುಕ್ರವಾರ ಸಂಜೆ ವೇಳೆಗೆ ಭಾರೀ ಪ್ರಮಾಣದ ಗಾಳಿಯೊಂದಿಗೆ ಪ್ರಾರಂಭವಾದ ಮಳೆ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಸುರಿದಿದ್ದರಿಂದ ಈ ಅನಾಹುತ ಉಂಟಾಗಿದೆ. ಅದೃಷ್ಟವಶಾತ್ ಮರದ ಕೆಳಗೆ ಯಾವುದೇ ವಾಹನಗಳು ಸಿಲುಕಿಕೊಂಡಿಲ್ಲ. ರಸ್ತೆಯ ಮೇಲೆಯೇ ಮರಗಳು ಬಿದ್ದಿದ್ದು, […]

ಶಾಸಕರಾದ ಬಳಿಕ ಅಮೃತ ದೇಸಾಯಿ ಮೊದಲ ಪತ್ರಿಕಾಗೋಷ್ಠಿ: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಒತ್ತು

ಶಾಸಕರಾದ ಬಳಿಕ ಅಮೃತ ದೇಸಾಯಿ ಮೊದಲ ಪತ್ರಿಕಾಗೋಷ್ಠಿ: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಒತ್ತು

ಧಾರವಾಡ: ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಚುನಾಯಿತರಾಗಿರುವ ಬಿಜೆಪಿ ಶಾಸಕ ಅಮೃತ ದೇಸಾಯಿ ಅವರು ತಾವು ಶಾಸಕರಾದ ಬಳಿಕ ಮೊದಲ ಪತ್ರಿಕಾಗೋಷ್ಠಿ ನಡೆಸಿದರು. ಪತ್ರಿಕಾಗೋಷ್ಠಿ ಮೂಲಕ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಧನ್ಯವಾದ ಸಲ್ಲಿಸಿದ ಅವರು, ಒಂದು ಪ್ರತಿಷ್ಠೆಯ ಕಣವಾಗಿದ್ದ ಕ್ಷೇತ್ರದಿಂದ ಜನ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿ ಕಳುಹಿಸಿದ್ದಾರೆ. 85 ಸಾವಿರ ಮತಗಳನ್ನು ನನಗೆ ನೀಡಿದ್ದಾರೆ. ಅದರ ಅರ್ಥ ನನ್ನ ಜವಾಬ್ದಾರಿ ಹೆಚ್ಚಾಗಿದೆ ಎಂದರು. ಗ್ರಾಮೀಣ ಮತಕ್ಷೇತ್ರದ ಇತಿಹಾಸದಲ್ಲೇ ಯಾರೂ 85 ಸಾವಿರ ಮತಗಳನ್ನು ಪಡೆದಿರಲಿಲ್ಲ. ಹಾಗೂ […]

ಮರು ಸಮೀಕ್ಷೆ ಮಾಡಿ, ಬಾಲಕಾರ್ಮಿಕರನ್ನು ಗುರುತಿಸಿ: ಅಧಿಕಾರಿಗಳಿಗೆ ಡಿಸಿ ಸೂಚನೆ

ಮರು ಸಮೀಕ್ಷೆ ಮಾಡಿ, ಬಾಲಕಾರ್ಮಿಕರನ್ನು ಗುರುತಿಸಿ: ಅಧಿಕಾರಿಗಳಿಗೆ ಡಿಸಿ ಸೂಚನೆ

ಧಾರವಾಡ: ಜಿಲ್ಲೆಯಲ್ಲಿ ಸಮೀಕ್ಷೆ ಮೂಲಕ ಗುರುತಿಸಿರುವ ಬಾಲಕಾರ್ಮಿಕರು ಸರಿಯಾದ ವಿಳಾಸ ಮತ್ತು ಗುರುತು ಇಲ್ಲದೇ ನಿರ್ಧಿಷ್ಟವಾದ ಕಾರ್ಯಕ್ರಮ ರೂಪಿಸಲು ಅನಾನುಕೂಲವಾಗುತ್ತಿದ್ದು, ಹಿಂದುಳಿದ ವರ್ಗಗಳ ಇಲಾಖೆ ಮತ್ತು ಸಮಾಜ ಕಲ್ಯಾಣ, ಶಿಕ್ಷಣ ಮತ್ತು ಕಾರ್ಮಿಕ ಇಲಾಖೆ ಜಂಟಿಯಾಗಿ ಮರು ಸಮೀಕ್ಷೆ ಮೂಲಕ ನಿಜವಾದ ಬಾಲಕಾರ್ಮಿಕರನ್ನು ಗುರುತಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಿಂದಿನ ಸಮೀಕ್ಷೆಯಲ್ಲಿ 400ಕ್ಕೂ ಅಧಿಕ ಮಕ್ಕಳನ್ನು […]

ಜೂನ್ 1ರಿಂದ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ: ಜಾನುವಾರು ಸಂಪತ್ತು ಉಳಿಸಲು ಡಿಸಿ ಕರೆ

ಜೂನ್ 1ರಿಂದ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ: ಜಾನುವಾರು ಸಂಪತ್ತು ಉಳಿಸಲು ಡಿಸಿ ಕರೆ

ಧಾರವಾಡ: ಕೇಂದ್ರ ಪುರಸ್ಕೃತ ಕಾಲುಬಾಯಿ ರೋಗ ನಿಯಂತ್ರಣ ಕಾರ್ಯಕ್ರಮದಡಿ 14ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಜಿಲ್ಲೆಯಾದ್ಯಂತ ಜೂನ್ 1 ರಿಂದ 30 ರವರೆಗೆ ನಡೆಯಲಿದೆ. 2.3 ಲಕ್ಷ ದನ, ಕರುಗಳಿಗೆ ಲಸಿಕೆ ಹಾಕಲು 39 ತಂಡಗಳನ್ನು ರಚಿಸಲಾಗಿದೆ. ಪ್ರತಿಯೊಂದು ಗ್ರಾಮಗಳಲ್ಲಿ ಲಸಿಕೆ ಕಾರ್ಯಕ್ರಮಗಳು ನಡೆಯಲಿವೆ. ದೇಶದಿಂದ ಈ ವೈರಾಣುವನ್ನು ನಿರ್ಮೂಲನೆ ಮಾಡಲು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಸರ್ಕಾರದ ಇತರ ಇಲಾಖೆಗಳ ಸಹಕಾರದೊಂದಿಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು. […]

ಅಕ್ಷರಬಂಡಿ, ವರ್ಣಮಾಲೆಗಳ ತೋರಣಗಳೊಂದಿಗೆ ಶೈಕ್ಷಣಿಕ ವರ್ಷಕ್ಕೆ ಸ್ವಾಗತ

ಅಕ್ಷರಬಂಡಿ, ವರ್ಣಮಾಲೆಗಳ ತೋರಣಗಳೊಂದಿಗೆ ಶೈಕ್ಷಣಿಕ ವರ್ಷಕ್ಕೆ ಸ್ವಾಗತ

ಧಾರವಾಡ: ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು ವರ್ಣಮಾಲೆಗಳು, ಅಕ್ಷರದ ಕುಂಭಗಳು, ಅಕ್ಷರ ವೃಕ್ಷ, ಅಕ್ಷರದ ಕಿರೀಟಗಳು, ಅಂಕಿ-ಸಂಖ್ಯೆ, ಗಣಿತದ ಲೆಕ್ಕಗಳನ್ನು ಸಾರುವ ತೋರಣಗಳು, ಭಿತ್ತಿ ಚಿತ್ರಗಳು, ಹೂ ಕುಂಡಗಳಿಂದ ಇಲ್ಲಿನ ಗುಲಗಂಜಿಕೊಪ್ಪದ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಆವರಣ ಕಂಗೊಳಿಸುತ್ತಿತ್ತು. 2018-19 ರ ಹೊಸ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವನ್ನು ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಸಡಗರದಿಂದ ಆಚರಿಸಿ, ಹೊಸ ಕಲಿಕಾ ವರ್ಷವನ್ನು ಬರಮಾಡಿಕೊಂಡರು. ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ […]

ಧಾರವಾಡ: ಮೊಬೈಲ್ ನಲ್ಲಿ ಸೆರೆಯಾಯ್ತು ಸಿಡಿಲಿನ ಹೊಡೆತ

ಧಾರವಾಡ: ಮೊಬೈಲ್ ನಲ್ಲಿ ಸೆರೆಯಾಯ್ತು ಸಿಡಿಲಿನ ಹೊಡೆತ

ಧಾರವಾಡ:ನಿನ್ನೆ ಧಾರವಾಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದ್ದು, ಹೊಲ ಗದ್ದೆಗಳಲ್ಲಿನ ಒಡ್ಡುಗಳು ಸಂಪೂರ್ಣ ಕೊಚ್ಚಿಕೊಂಡು ಹೋಗಿವೆ. ಕೆಲವೊಂದಿಷ್ಟು ಕಡೆಗಳಲ್ಲಿ ಮನೆಯ ಗೋಡೆಗಳು ಕೂಡ ಕುಸಿದು ಬಿದ್ದಿವೆ. ಇತ್ತ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಮೊಬೈಲ್ ಟವರ್ ಗೆ ಸಿಡಿಲು ಬಡಿದಿದ್ದು, ಆ ದೃಶ್ಯದ ಒಂದು ಫೋಟೋ ಮೊಬೈಲ್ ನಲ್ಲಿ ಸೆರೆಯಾಗಿದೆ. ಧಾರವಾಡ ಜಿಲ್ಲೆಯಾದ್ಯಂತವೂ ಈ ಮಳೆ ಧಾರಾಕಾರವಾಗಿ ಸುರಿದಿದ್ದು, ಕೆಲವು ಕಡೆಗಳಲ್ಲಿ ಅನಾಹುತಗಳನ್ನೂ ಸೃಷ್ಟಿ ಮಾಡಿದೆ. ಕೆರೆ,ಕಟ್ಟೆಗಳು ತುಂಬಿದ್ದು, ಅಲ್ಲಲ್ಲಿ ಕೆಲವೊಂದಿಷ್ಟು ಮರಗಳೂ ನೆಲಕಚ್ಚಿವೆ.

ಧಾರವಾಡದಲ್ಲಿ ಮಧ್ಯಾಹ್ನದ ನಂತರ ಬಿರುಸು ಪಡೆದುಕೊಂಡ ಬಂದ್

ಧಾರವಾಡದಲ್ಲಿ ಮಧ್ಯಾಹ್ನದ ನಂತರ ಬಿರುಸು ಪಡೆದುಕೊಂಡ ಬಂದ್

ಧಾರವಾಡ: ರೈತರ ಸಾಲ ಮನ್ನಾ ಮಾಡುವಂತೆ ಕರೆ ನೀಡಾಗಿದ್ದ ಬಂದ್ ಧಾರವಾಡದಲ್ಲಿ ಮಧ್ಯಾಹ್ನದ ನಂತರ ಬಿರುಸಿನ ಸ್ವರೂಪ ಪಡೆದುಕೊಂಡಿತು. ಬೆಳಿಗ್ಗೆ ಜ್ಯುಬಿಲಿ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಮಧ್ಯಾಹ್ನ ಬಿಜೆಪಿ ಶಾಸಕರಾದ ಅರವಿಂದ ಬೆಲ್ಲದ ಹಾಗೂ ಅಮೃತ ದೇಸಾಯಿ ಅವರು ಬೈಕ್ ರ್ಯಾಲಿ ಮಾಡುವ ಮೂಲಕ ಪ್ರತಿಭಟನೆಗೆ ಹೆಚ್ಚಿನ ತೀವ್ರತೆ ತಂದುಕೊಟ್ಟರು. ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಮೇಲೆಯೇ ಸಂಚರಿಸಿದ ಶಾಸಕರು ತಮ್ಮ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿದರು.ಇದಕ್ಕೆ ಬಿಜೆಪಿ ರೈತಮೋರ್ಚಾ ಕಾರ್ಯಕರ್ತರೂ […]

ಹುಬ್ಬಳ್ಳಿಯಲ್ಲಿ ಕರ್ನಾಟಕ ಬಂದ್ ಗೆ ಉತ್ತಮ ಪ್ರತಿಕ್ರಿಯೆ 

ಹುಬ್ಬಳ್ಳಿಯಲ್ಲಿ ಕರ್ನಾಟಕ ಬಂದ್ ಗೆ ಉತ್ತಮ ಪ್ರತಿಕ್ರಿಯೆ 

ಹುಬ್ಬಳ್ಳಿ: ರೈತರ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ  ಭಾರತಿಯ ಜನತಾ ಪಾರ್ಟಿ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಹುಬ್ಬಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋಮವಾರ ಮುಂಜಾನೆ ನಗರದ ಚೆನ್ನಮ್ಮ ಸರ್ಕಲ್ ನಲ್ಲಿ ಜಮಾಯಿಸಿದ ನೂರಾರು ಬಿಜೆಪಿ ಕಾರ್ಯಕರ್ತರು ಟೈರ್ ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ಹೊರಹಾಕಿದರು.ಪೆಟ್ರೋಲ್ ಬಂಕ್, ಹೋಟೆಲ್ ಹಾಗೂ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಮನವಿ ಮಾಡಿದರು.   ಬಂದ್ ಗೆ ಒತ್ತಾಯಿಸದಂತೆ ಪ್ರತಿಭಟನಾಕಾರನ್ನು ಪೊಲೀಸರು ತಡೆದ ಪರಿಣಾಮ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ […]

ಉಪ್ಪಿನ ಬೆಟಗೇರಿಯಲ್ಲೂ ತೀವ್ರ ಸ್ವರೂಪ ಪಡೆದ ಬಂದ್

ಉಪ್ಪಿನ ಬೆಟಗೇರಿಯಲ್ಲೂ ತೀವ್ರ ಸ್ವರೂಪ ಪಡೆದ ಬಂದ್

ಧಾರವಾಡ: ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಬಿಜೆಪಿ  ಕರ್ನಾಟಕ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಈ ಬಂದ್ ಗ್ರಾಮಾಂತರ ಪ್ರದೇಶಗಳಲ್ಲೂ ತೀವ್ರತೆ ಪಡೆದುಕೊಂಡಿದೆ. ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ರೈತರು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿದರು. ಬೆಳಿಗ್ಗೆಯಿಂದಲೇ ಸಾರಿಗೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಿಲ್ಲ. ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಲಾಗಿತ್ತು. ಖಾಸಗಿ ವಾಹನಗಳನ್ನು ಹೊರತುಪಡಿಸಿ ಆ ಮಾರ್ಗವಾಗಿ ಸಂಚರಿಸುವ ಸಾರಿಗೆ ವಾಹನಗಳನ್ನು ಪ್ರತಿಭಟನಾಕಾರರು ತಡೆದರು. ನಂತರ ರಸ್ತೆಯಲ್ಲೇ […]

ಹಿಂದೂ ಧರ್ಮ ಈ ಮೊದಲು ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರಲಿಲ್ಲ: ಸಾಹಿತಿ ಶಿವಪ್ರಕಾಶ

ಹಿಂದೂ ಧರ್ಮ ಈ ಮೊದಲು ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರಲಿಲ್ಲ: ಸಾಹಿತಿ ಶಿವಪ್ರಕಾಶ

ಧಾರವಾಡ: ಎರಡು ಸಾವಿರ ವರ್ಷಗಳಿಂದ ಧರ್ಮದ ಬಗ್ಗೆ ಚರ್ಚೆ ನಡೆದಿದೆ. ಹಿಂದೂ ಧರ್ಮ ಎನ್ನುವುದು ಈ ಮೊದಲು ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರಲಿಲ್ಲ. ಬ್ರಿಟಿಷರು ಇಲ್ಲಿಗೆ ಬಂದಾಗ ಅವರಿಗೆ ಕ್ರಿಶ್ಚಿಯನ್ ಧರ್ಮ ಇದ್ದಂತೆ ನಮಗೂ ಧರ್ಮ ಇರಲಿ ಎಂದು ಹಿಂದೂ ಧರ್ಮವನ್ನು ಚಾಲ್ತಿಗೆ ತರಲಾಯಿತು. ಈ ಮೊದಲು ಹಿಂದೂ ಎನ್ನುವುದು ಧಾರ್ಮಿಕ ಹಿನ್ನೆಲೆಯಲ್ಲಿ ಬಳಸಲಾಗುತ್ತಿರಲಿಲ್ಲ. ಪ್ರದೇಶಕ್ಕೆ ಸಂಬಂಧಪಟ್ಟಂತೆ ಬಳಕೆಯಾಗುತ್ತಿತ್ತು ಎಂದು ಹಿರಿಯ ಸಾಹಿತಿ ಎಚ್.ಎಸ್.ಶಿವಪ್ರಕಾಶ ಹೇಳಿದರು. ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹಮ್ಮಿಕೊಂಡಿದ್ದ ಮೇ ಸಾಹಿತ್ಯ ಮೇಳದ ಎರಡನೇ […]