ಗಜೇಂದ್ರಗಡದಲ್ಲಿ ರೇಷ್ಮೆ ಬೆಳೆ ನಾಶ: ಅಧಿಕಾರಿ ಭೇಟಿ, ಪರಿಶೀಲನೆ

ಗಜೇಂದ್ರಗಡದಲ್ಲಿ ರೇಷ್ಮೆ ಬೆಳೆ ನಾಶ: ಅಧಿಕಾರಿ ಭೇಟಿ, ಪರಿಶೀಲನೆ

ಗಜೇಂದ್ರಗಡ:  ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಸುರಿದ ಗಾಳಿ ಮಳೆಯಿಂದಾಗಿ ರೇಷ್ಮೆ ಕೃಷಿ ಹುಳು ಸಾಕಾಣಿಕೆ ಮನೆಗಳು ಹಾಗೂ ರೇಷ್ಮೆ ಬೆಳೆ ನಾಶವಾದ ಸ್ಥಳಕ್ಕೆ  ರೇಷ್ಮೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ರೇಷ್ಮೆ ಹುಳುಗಳ ಸಾಕಾಣಿಕೆ ಹಾಗೂ ರೇಷ್ಮೆ ಬೆಳೆಯನ್ನು ಬೆಳೆಯಲು ಮುಂದಾಗಿದ್ದ ಗಜೇಂದ್ರಗಡ ತಾಲೂಕಿನ ರೈತರಿಗೆ ಮೂರು ದಿನಗಳಿಂದ ಗಾಳಿ ಸಹಿತ ಸುರಿದ ಮಳೆಯಿಂದಾಗಿ ಸಮೀಪದ ಮ್ಯಾಕಲಝರಿ, ಬೆಣಚಮಟ್ಟಿ, ಕುಂಟೊಂಜಿ, ಮಾಟರಂಗಿ ಹಾಗೂ ಶಾಂತಗೇರಿ ಗ್ರಾಮದಲ್ಲಿನ ರೇಷ್ಮೆ ಹುಳುಗಳ ಸಾಕಾಣಿಕೆಗಾಗಿ ನಿರ್ಮಿಸಲಾಗಿದ್ದ 8ಕ್ಕೂ ಅಧಿಕ […]

ರೋಣದಲ್ಲಿ ಬಿಜೆಪಿ ಗೆಲವು: ಕುಣಿದು ಕುಪ್ಪಳಿಸಿದ ಮಹಿಳಾ ಮಣಿಗಳು

ರೋಣದಲ್ಲಿ ಬಿಜೆಪಿ ಗೆಲವು: ಕುಣಿದು ಕುಪ್ಪಳಿಸಿದ ಮಹಿಳಾ ಮಣಿಗಳು

ಗಜೇಂದ್ರಗಡ: ರೋಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಗೆಲುವಿನ ಸುದ್ದಿ ಪಟ್ಟಣದಲ್ಲಿ ಹರಡುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪಟಾಕಿ ಸಿಡಿಸಿ, ಸಿಹಿ ಹಂಚಿ ಭರ್ಜರಿಯಾಗಿ ವಿಜಯೋತ್ಸವ ಆಚರಿಸಿದರು. ಪಟ್ಟಣದ ಕಳಕಪ್ಪ ಬಂಡಿ ಅವರ ನಿವಾಸದಲ್ಲಿ ಸಹಸ್ರಾರು ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಪರಸ್ಪರ ಗುಲಾಲು ಎರಚಿಕೊಂಡರು. ಟ್ರಾಕ್ಟರ್, ಮತ್ತು ತೆರೆದ ವಾಹನಗಳು, ಬೈಕ್‍ಗಳ ಮೂಲಕ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ಪಟ್ಟಣದೆಲ್ಲೆಡೆ ಬಿಜೆಪಿ ಧ್ವಜ ರಾರಾಜಿಸಿದವು. ಅಭಿಮಾನಿಗಳ ಜಯಘೋಷ ಮುಗಿಲು ಮುಟ್ಟಿತು. ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಅವರ […]

ಗಜೇಂದ್ರಗಡದಲ್ಲಿ ವರುಣನ ಅಬ್ಬರ

ಗಜೇಂದ್ರಗಡದಲ್ಲಿ ವರುಣನ ಅಬ್ಬರ

ಗಜೇಂದ್ರಗಡ: ಕಳೆದೊಂದು ತಿಂಗಳಿಂದ ವಿಧಾನಸಭೆ ಚುನಾವಣಾ ಕಾವು ಜತೆ ಬಿಸಿಲಿನ ಪ್ರಖರತೆ ಸಹ ಜನತೆಯನ್ನು ಕಂಗೆಡಿಸಿತ್ತು. ಆದರೆ ಸೋಮವಾರ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ  ಸುರಿದ ಗುಡುಗು ಸಿಡಿಲು ಸಹಿತ ಮಳೆಯಿಂದಾಗಿ  ತಂಪಿನ ವಾತಾವರಣ ನಿರ್ಮಾಣವಾಯಿತು. ಸೋಮವಾರ ಸಂಜೆ ಗಾಳಿ, ಗುಡುಗು ಸಹಿತ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಗಬ್ಬೆದ್ದು ನಾರುತ್ತಿದ್ದ ಚರಂಡಿಗಳು ತುಂಬಿ ಹರಿಯಲಾರಂಭಿಸಿದವು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ತಂಪನೆಯ ವಾತಾವರಣ ನಿರ್ಮಾಣವಾಯಿತು. ತಗ್ಗು ಪ್ರದೇಶದ ಮನೆ, ಅಂಗಡಿಗಳಲ್ಲಿ ನೀರು ನುಗ್ಗಿ ಜನರು, […]

ಗಜೇಂದ್ರಗಡ ಪಟ್ಟಣದಲ್ಲಿ ಶಾಂತಿಯುತ ಮತದಾನ

ಗಜೇಂದ್ರಗಡ ಪಟ್ಟಣದಲ್ಲಿ ಶಾಂತಿಯುತ ಮತದಾನ

ಗಜೇಂದ್ರಗಡ: ವಿಧಾನಸಭೆಗೆ ಶನಿವಾರ ನಡೆದ ಚುನಾವಣೆ ಸಂದರ್ಭ ಪಟ್ಟಣದಲ್ಲಿ ಕೆಲ ಸಣ್ಣ ಪುಟ್ಟ ಘಟನೆ ಹೊರತುಪಡಿಸಿ ಶಾಂತಿಯುತ ಮತದಾನ ನಡೆಯಿತು.  ಮತದಾರ ಪ್ರಭುಗಳು ವಿದ್ಯುನ್ಮಾನ ಮತ ಪೆಟ್ಟಿಗೆಯಲ್ಲಿ ಅಭ್ಯರ್ಥಿಗಳ ಭವಿಷ್ಯವನ್ನು ಭದ್ರವಾಗಿಡುವ ಮೂಲಕ ಕಳೆದೊಂದು ತಿಂಗಳಿಂದ ನಡೆದ ಚುನಾವಣೆ ಗದ್ದಲ್ಲಕ್ಕೆ ತೆರೆಎಳೆದಿದ್ದಾರೆ. ಇನ್ನೇನಿದ್ದರೂ ಮೇ. 15 ರತ್ತ ಎಲ್ಲರ ಚಿತ್ತ. ಬೆಳಗ್ಗೆ 7 ಗಂಟೆಗೆ ಪ್ರಾರಂಭವಾದ ಮತದಾನವು ನಿಧಾನವಾಗಿ ರಂಗೇರತೊಡಗಿತು. 80, 90ರ ವಯಸ್ಸಿನ ವೃದ್ದರು ಉತ್ಸುಕತೆಯಿಂದ ಮತದಾನ ಆರಂಭವಾಗುತ್ತಿದ್ದತೆ ಮತಗಟ್ಟೆಗೆ ಆಗಮಿಸಿ ಮತಚಲಾಯಿಸಿದರು. ಕೆಲವೆಡೆ ಜೀವಂತವಿರುವ […]

ಗಜೇಂದ್ರಗಡನಲ್ಲಿ 9 ಅತೀ ಸೂಕ್ಷ್ಮ ಮತಗಟ್ಟೆಗಳು

ಗಜೇಂದ್ರಗಡನಲ್ಲಿ 9 ಅತೀ ಸೂಕ್ಷ್ಮ ಮತಗಟ್ಟೆಗಳು

ಗಜೇಂದ್ರಗಡ: ಪಟ್ಟಣದಲ್ಲಿ ಒಟ್ಟು 26 ಮತಕೇಂದ್ರಗಳಿದ್ದು, ಇದರಲ್ಲಿ 9 ಅತೀ ಸೂಕ್ಷ್ಮ, 7 ಸೂಕ್ಷ್ಮ 10 ಸಾಮಾನ್ಯ ಮತಗಟ್ಟೆಗಳೆಂದು ಗುರ್ತಿಸಲಾಗಿದೆ. ಮೇ 12 ರಂದು  ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗುವ ಮತದಾನ ಪ್ರಕ್ರೀಯೇ ಸಂಜೆ 6-30 ರವರೆಗೆ ನಡೆಯಲಿದೆ. ಸೂಕ್ಷ್ಮ ಮತಕೇಂದ್ರಗಳು, 65,68,80,81,82,83,86,89, ಅತಿಸೂಕ್ಷ್ಮ 70,71,73,74,75,76,77,84,85 ಸೇರಿದಂತೆ 64,66,67,69,72,78,79,87,88 ಕೇಂದ್ರಗಳನ್ನು ಸಾಮಾನ್ಯ ಎಂದು ಪರಿಗಣಿಸಲಾಗಿದೆ. ಮತದಾನ ನಡೆಯುವ ಸ್ಥಳ: 1ನೇ ವಾರ್ಡ: ಸರಕಾರಿ ಉರ್ದು ಪ್ರಾಥಮಿಕ ಶಾಲೆ ಅಡೇಕಾರ ಓಣಿ, 2ನೇ ವಾರ್ಡ: ಸರಕಾರಿ ಕನ್ನಡ ಗಂಡು ಮಕ್ಕಳ […]

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ: ಶಾಸಕ ಪಾಟೀಲ್

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ: ಶಾಸಕ ಪಾಟೀಲ್

ಗಜೇಂದ್ರಗಡ: ರಾಜ್ಯದಲ್ಲಿ 5 ವರ್ಷ ಕಳಂಕ ರಹಿತ ಆಡಳಿತ ನೀಡಿದ ಕಾಂಗ್ರೆಸ್ ಸರಕಾರ ಮತ್ತೊಮ್ಮೆ ಅಧಿಕಾರ ಗದ್ದುಗೆ ಹಿಡಿಯಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಶಾಸಕ ಜಿ.ಎಸ್ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದಲ್ಲಿ  ಗುರುವಾರ ಬೃಹತ್ ರೋಡ ಶೋ ನಡೆಸಿ ಮತಯಾಚಿಸಿ ಬಳಿಕ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಸಮಗ್ರ ಕರ್ನಾಟಕದ ಅಭಿವೃದ್ಧಿಗಾಗಿ 5 ವರ್ಷ ಯಾವುದೇ ಹಗರಣ, ಭ್ರಷ್ಟಾಚಾರ ನಡೆಸದೇ ಜನಪರ ಯೋಜನೆಗಳನ್ನು ಜಾರಿಗೊಳಿಸಿ ಆಡಳಿತ ನೀಡಿದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಗದ್ದುಗೆ ಹಿಡಿಯುವುದರಲ್ಲಿ ಯಾವುದೇ […]

ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಬೈಕ್ ರ್ಯಾಲಿ

ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಬೈಕ್ ರ್ಯಾಲಿ

ಗಜೇಂದ್ರಗಡ: ರೋಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಜಿ.ಎಸ್ ಪಾಟೀಲ ಪರ ನೂರಾರು ಕಾರ್ಯಕರ್ತರು ಬೃಹತ್ ಬೈಕ್ ರ್ಯಾಲಿ ನಡೆಸುವ ಮೂಲಕ ಬುಧವಾರ ಸಂಜೆ ಪಟ್ಟಣದಲ್ಲಿ ಮತಯಾಚನೆ ಮಾಡಿದರು. ಕುಷ್ಟಗಿ ರಸ್ತೆಯಿಂದ ಆರಂಭವಾದ ಬೈಕ್ ರ್ಯಾಲಿಯು ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ಅಂಬೇಡ್ಕರ ವೃತ್ತ, ದುರ್ಗಾ ವೃತ್ತ, ಹಿರೇ ಬಜಾರ್, ಶ್ರೀ ಕಟ್ಟಿಬಸವೇಶ್ವರ ರಂಗ ಮಂದಿರ, ಕೊಳ್ಳಿಯವರ ಕತ್ರಿ, ಭಜರಂಗದಳ ವೃತ್ತ, ಬಸವೇಶ್ವರ ವೃತ್ತ, ಮೈಸೂರು ಮಠ ರಸ್ತೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಕಾಂಗ್ರೆಸ್ […]

ಗಜೇಂದ್ರಗಡದಲ್ಲಿ ಬಿಎಸ್ಎಫ್ ಯೋಧರಿಂದ ಪಥಸಂಚಲನ

ಗಜೇಂದ್ರಗಡದಲ್ಲಿ ಬಿಎಸ್ಎಫ್ ಯೋಧರಿಂದ ಪಥಸಂಚಲನ

ಗಜೇಂದ್ರಗಡ: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಯೋಧರು ಸೇರಿದಂತೆ ಪೂಲೀಸ್ ಪಡೆ ಸಿಬ್ಬಂದಿ ಬುಧವಾರ ಪಟ್ಟಣದಲ್ಲಿ ಪಥ ಸಂಚಲನ ನಡೆಸಿದರು. ಪಟ್ಟಣದ ಅಂಬೇಡ್ಕರ ವೃತ್ತ, ದುರ್ಗಾ ವೃತ್ತ, ಹಿರೇ ಬಜಾರ, ಶ್ರೀ ಕಟ್ಟಿ ಬಸವೇಶ್ವರ ರಂಗ ಮಂದಿರ, ಕೊಳ್ಳಿಯವರ ಕತ್ರಿ, ಶ್ರೀ ಬಸವೇಶ್ವರ ಸರ್ಕಲ್, ಜೋಡು ರಸ್ತೆ, ಶ್ರೀ ಕಾಲಕಾಲೇಶ್ವರ ವೃತ್ತ, ಜನತಾ ಪ್ಲಾಟ್ ಕಾಲೋನಿ, ಕಿತ್ತೂರ ಚನ್ನಮ್ಮ […]

ಗಜೇಂದ್ರಗಡ:ಜೆಡಿಎಸ್ ಅಭ್ಯರ್ಥಿ ಪರ ಪೂಜಾ ಗಾಂಧಿ ರೋಡ್ ಶೋ

ಗಜೇಂದ್ರಗಡ:ಜೆಡಿಎಸ್ ಅಭ್ಯರ್ಥಿ ಪರ ಪೂಜಾ ಗಾಂಧಿ ರೋಡ್ ಶೋ

ಗಜೇಂದ್ರಗಡ: ರೋಣ ಮತಕ್ಷೇತ್ರದ ಜಾತ್ಯಾತೀತ ಜನತಾದಳ ಅಭ್ಯರ್ಥಿ ರವೀಂದ್ರನಾಥ ದೊಡ್ಡಮೇಟಿ ಪರ ಚಿತ್ರನಟಿ ಪೂಜಾ ಗಾಂಧಿ ತೆರೆದ ವಾಹನದಲ್ಲಿ ಜನರತ್ತ ಕೈ ಬಿಸುತ್ತಾ ರೋಡ ಶೋ ನಡೆಸಿ ರವಿವಾರ ಮತಯಾಚನೆ ಮಾಡಿದರು. ಜೆಡಿಎಸ್ ಕಚೇರಿಯಿಂದ ಆರಂಭವಾದ ಮೆರವಣಿಗೆಯು ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ಅಂಬೇಡ್ಕರ ವೃತ್ತ, ದುರ್ಗಾ ವೃತ್ತ, ಬಸವೇಶ್ವರ ವೃತ್ತದ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಮೆ ರವಣಿಗೆಯಲ್ಲಿ ಜಾಂಝ ಮೇಳೆ, ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ರೋಡ ಶೋ ಉದ್ದಕ್ಕೂ, ಅಭಿಮಾನಿಗಳತ್ತ ಕೈ […]

ನಾಳೆ ರೋಣದಲ್ಲಿ ನಟಿ ಪೂಜಾ ಗಾಂಧಿ ರೋಡ್ ಶೋ

ನಾಳೆ ರೋಣದಲ್ಲಿ ನಟಿ ಪೂಜಾ ಗಾಂಧಿ ರೋಡ್ ಶೋ

ಗಜೇಂದ್ರಗಡ: ಮೇ 6 ರಂದು ರೋಣ ಪಟ್ಟಣಕ್ಕೆ ನಟಿ ಪೂಜಾ ಗಾಂಧಿ ಆಗಮಿಸಲಿದ್ದಾರೆ. ಅಂದು ಮಧ್ಯಾಹ್ನ 1 ಕ್ಕ ಪಟ್ಟಣಕ್ಕೆ ಆಗಮಿಸಿ ನಗರದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಿ ರೋಣ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರವೀಂದ್ರನಾಥ ದೊಡ್ಡಮೇಟಿ ಪರ ಪ್ರಚಾರ ನಡೆಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಅಭ್ಯರ್ಥಿ ರವೀಂದ್ರನಾಥ ದೊಡ್ಡಮೇಟಿ ಸೇರಿ ಇತರ ಮುಖಂಡರು ಸಾಥ್  ನೀಡಲಿದ್ದಾರೆಂದು ತಾಲೂಕಾಧ್ಯಕ್ಷ ಮಕ್ತುಂಸಾಬ ಮುಧೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   Ameet ingalganvihttp://udayanadu.com

1 2 3 11