ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದು ವ್ಯಕ್ತಿ ಸಾವು:ಸಂಬಂಧಿಕರಿಂದ ಆಯೋಜಕರ ಮೇಲೆ ದೂರು

ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದು ವ್ಯಕ್ತಿ ಸಾವು:ಸಂಬಂಧಿಕರಿಂದ ಆಯೋಜಕರ ಮೇಲೆ ದೂರು

ಹಾವೇರಿ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದು ವ್ಯಕ್ತಿಯೊಬ್ಬ ಮೃತ ಪಟ್ಟ ಘಟನೆ ಕಳೆದ ಎರಡು ದಿನಗಳ ಹಿಂದೆ ಹಾವೇರಿ ತಾಲೂಕಿನ ದೇವಿಹೊಸೂರು ಗ್ರಾಮದಲ್ಲಿ ನಡೆದಿದೆ. ಸುರೇಶ್ ಹೊಂಬಳಿ (35) ಸಾವನ್ನಪ್ಪಿದ್ದ ದುರ್ದೈವಿಯಾಗಿದ್ದು, ಗ್ರಾಮದಲ್ಲಿ ಪೈಲ್ವಾನ್ ಎಂದು ಕರೆಯುತ್ತಿದ್ದರು. ಈತನ ತಲೆಗೆ ಹೋರಿ ಗುದ್ದುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಚಿನ್ನಾಟದ ಚಲುವ ಎಂಬ ಹೆಸರಿನ ಹೋರಿ ಗುದ್ದಿ ವ್ಯಕ್ತಿಯು ದುರ್ಮರಣವಾಗಿದ್ದಾನೆ. ತೀವ್ರ ಗಾಯಗೊಂಡ ಸುರೇಶನನ್ನು ಚಿಕಿತ್ಸೆಗೆಂದು ಹುಬ್ಬಳ್ಳಿಯ ಕೀಮ್ಸಗೆ ಕರೆತಂದರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ವ್ಯಕ್ತಿಯ […]

ಬಿಸಿಯೂಟ ತಯಾರಕರ ಅಹೋರಾತ್ರಿ ಧರಣಿ: ಗೌರವಧನ ಹೆಚ್ಚಳ ಮಾಡದ್ದಕ್ಕೆ ಖಂಡನೆ

ಬಿಸಿಯೂಟ ತಯಾರಕರ ಅಹೋರಾತ್ರಿ ಧರಣಿ: ಗೌರವಧನ ಹೆಚ್ಚಳ ಮಾಡದ್ದಕ್ಕೆ ಖಂಡನೆ

ಹಾವೇರಿ: ಕರ್ನಾಟಕ ರಾಜ್ಯ ಬಿಸಿಯೂಟ ತಯಾರಕರ ಫೆಡರೇಷನ್ ನೇತೃತ್ವದಲ್ಲಿ ನೂರಾರು ಬಿಸಿಯೂಟ ತಯಾರಕರು, ಬಜೆಟ್ ನಲ್ಲಿ ಕೊಟ್ಟ ಮಾತಿನಂತೆ ಗೌರವಧನ ಹೆಚ್ಚಳ ಮಾಡದಿರುವದನ್ನು ಖಂಡಿಸಿ ಅರೋರಾತ್ರಿ ಧರಣಿ ನಡೆಸಿದರು. ನಗರದ ಮೈಲಾರ ಮಹದೇಪ್ಪ ವೃತ್ತದಲ್ಲಿ ನೂರಾರು ಮಹಿಳೆಯರು ಧರಣಿ ನಡೆಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಧರಣಿ ನೇತೃತ್ವ ವಹಿಸಿದ್ದ, ಫೆಡರೇಷನ್ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಮಾತನಾಡಿ, ಬಜೆಟ್ ಪೂರ್ವದಲ್ಲಿ ಬೆಂಗಳೂರಿನಲ್ಲಿ ಸಾವಿರಾರು ಮಹಿಳೆಯರು ತಮ್ಮ ಗೌರವಧನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ಹೋರಾಟ ನಡೆಸಿ, […]

ಸಾಲದ ಸೂಲಕ್ಕೆ ಹೆದರಿ ರೈತ ಆತ್ಮಹತ್ಯೆ

ಸಾಲದ ಸೂಲಕ್ಕೆ ಹೆದರಿ ರೈತ ಆತ್ಮಹತ್ಯೆ

ಹಾವೇರಿ: ಸಾಲದ ಸೂಲಕ್ಕೆ ಹೆದರಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆ ಹಿರೆಕೆರೂರು ತಾಲೂಕು ಕಡುರು ಗ್ರಾಮದಲ್ಲಿ ಘಟನೆ. ಗ್ರಾಮದ ಬರಮಪ್ಪ ಕರಬಸಪ್ಪ ತುಮ್ಮಿನಕಟ್ಟಿ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದು, ಇತನು, ಸರ್ಕಾರಿ ಬ್ಯಾಂಕಿನಲ್ಲಿ 1.5 ಲಕ್ಷ ಮತ್ತು ಟ್ರಾಕ್ಟರ್ ಸಾಲ ಸೇರಿ ಸುಮಾರು 5 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಬೋರ್ ವೇಲ್ ನೀರು ಬತ್ತಿ ತೆಂಗಿನ ತೋಟ ಒಣಗಿದ್ದಕ್ಕೆ ಮನನೊಂದು ತೆಂಗಿನ ಗಿಡಕ್ಕೆ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು […]

ಕೆ.ಎಲ್.ಇ.ಶಾಲೆ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ: ಮಾನವೀಯತೆ ಮರೆತ ಆಡಳಿತ ಮಂಡಳಿ

ಕೆ.ಎಲ್.ಇ.ಶಾಲೆ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ: ಮಾನವೀಯತೆ ಮರೆತ ಆಡಳಿತ ಮಂಡಳಿ

ಹಾವೇರಿ: ಹಾವೇರಿ ನಗರದಲ್ಲಿ ಇರುವ ಕೆ.ಎಲ್.ಇ ಶಾಲಾ ಆವರಣದಲ್ಲಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಮೇಲೆ ಹೆಜ್ಜೆನು ದಾಳಿ ಮಾಡಿದ ಘಟನೆ ಗುರುವಾರ ನಡೆದಿದೆ. ಸುಮಾರು 30 ಕ್ಕೂ ಅಧಿಕ ವಿದ್ಯಾರ್ಥಿಗಳು ಜೇನು ಕಚ್ಚಿಸಿಕೊಂಡಿದ್ದರು, ಶಾಲೆಯ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ನಿರ್ಲಕ್ಷ ವಹಿಸಿದ್ದು, ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಹೆಜ್ಜೆಗಳ ದಾಳಿ 30 ಕ್ಕೂ ಹೆಚ್ಚು ಶಾಲಾ ಮಕ್ಕಳ ಅಸ್ತವ್ಯಸ್ತಗೊಂಡಿದ್ದಾರೆ. ಶಾಲಾ ಕಟ್ಟಡದಲ್ಲಿ ಕಟ್ಟಿದ ಹೆಜ್ಜೆನುಗಳಿಂದ ಮಕ್ಕಳ ಮೇಲೆ ದಾಳಿಯಾಗಿದ್ದನ್ನು ಕಂಡ ಸಾರ್ವಜನಿಕರು ಸ್ವಯಂಕೃತವಾಗಿ ಮಕ್ಕಳನ್ನು 108 ವಾಹನದ […]

ಮಾಜಿ ಸಭಾಪತಿ ಬಿ.ಜಿ.ಬಣಕಾರ ವಿಧಿವಶ

ಮಾಜಿ ಸಭಾಪತಿ ಬಿ.ಜಿ.ಬಣಕಾರ ವಿಧಿವಶ

ಹುಬ್ಬಳ್ಳಿ:  ಕರ್ನಾಟಕ ವಿಧಾನಸಭೆಯ ಮಾಜಿ ಸಭಾಪತಿ ಬಿ.ಜಿ. ಬಣಕಾರ(92) ಅವರು ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದಲ್ಲಿರುವ ಅವರ ನಿವಾಸದಲ್ಲಿ ಬುಧವಾರ ರಾತ್ರಿ ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಬಿ.ಜಿ. ಬಣಕಾರ ಅವರು 1972ರಲ್ಲಿ ಕಾಂಗ್ರೆಸ್,1983ರಲ್ಲಿ ಪಕ್ಷೇತರ ಮತ್ತು 1985ರಲ್ಲಿ ಜನತಾದಳದ ಶಾಸಕರಾಗಿ ಹಿರೇಕೆರೂರು ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಮುಖ್ಯಮಂತ್ರಿ ದೇವರಾಜ್ ಅರಸು ಅವರ ಸಂಪುಟದಲ್ಲಿ ಪಶುಸಂಗೋಪನೆ ಸಚಿವರಾಗಿದ್ದ ಅವರು ರಾಮಕೃಷ್ಣ ಹೆಗಡೆಯವರ ಅವಧಿಯಲ್ಲಿ ವಿಧಾನಸಭೆ ಸಭಾಪತಿಯಾಗಿದ್ದರು. ಅವರು ಹಿರೇಕೆರೂರು ಬಿಜೆಪಿ ಶಾಸಕ […]

ಹಾವೇರಿ: ಕಾಂಗ್ರೆಸ್ ಯುವ ಕಾರ್ಯಕರ್ತರ ಬಂಧನ

ಹಾವೇರಿ: ಕಾಂಗ್ರೆಸ್ ಯುವ ಕಾರ್ಯಕರ್ತರ ಬಂಧನ

ಹಾವೇರಿ: ಯುವಕರಿಗೆ ಉದ್ಯೋಗ ನೀಡುವಲ್ಲಿ ವಿಫಲವಾದ ಕೇಂದ್ರ ಸರ್ಕಾರ ಹಾಗೂ‌ ಮಹದಾಯಿ ವಿಚಾರದಲ್ಲಿ ಮೌನ ವಹಿಸಿದ ಸಂಸದರ ನಡೆ ಖಂಡಿಸಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ  ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಇಂದು ಪ್ರತಿಭಟನಾ ಮೆರವಣಿಗೆ ಮೂಲಕ ಸಂಸದರ ಕಚೇರಿಗೆ ಬರುವ ಮಾರ್ಗದಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಕೇಂದ್ರ ಹಾಗೂ ಸಂಸದರ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಯುವಕರಿಗೆ ಉದ್ಯೋಗ ‌ನೀಡುವದನ್ನು ಪಕೋಡ ಮಾರಲು […]

ಹಾವೇರಿ: ರೈಲ್ವೇ ಹಳಿಗೆ ಬಿದ್ದು ಅನಾಮಧೇಯ ವ್ಯಕ್ತಿ ಆತ್ಮಹತ್ಯೆ

ಹಾವೇರಿ: ರೈಲ್ವೇ ಹಳಿಗೆ ಬಿದ್ದು ಅನಾಮಧೇಯ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಹಾಗೂ ಬ್ಯಾಡಗಿ ಮಧ್ಯದಲ್ಲಿ ನಡೆದಿದೆ. ಸೋಮವಾರ ರಾತ್ರಿ ಹಳಿಗೆ ಬಿದ್ದಿರುವ ಶೆಂಕೆ ವ್ಯಕ್ತಪಡಿಸಿದ ರೈಲ್ವೇ ಪೊಲೀಸರು ಮೃತ ವ್ಯಕ್ತಿಯ ಕೈಯಲ್ಲಿ ಹನುಮಕ್ಕ-ಲಿಂಗವ್ವ ಹಾಗೂ ತ್ರಿಶೂಲ ಹಾಗೂ ಓಂ ಚಿತ್ರ ಇರುವ ಹಚ್ಚೇ ಎಂದು ತಿಳಿಸಿದ್ದಾರೆ. ಜೊತೆಗೆ ಮೃತನ ಶರ್ಟ್ ನಲ್ಲಿ ಯಲವಿಗಿ-ಲಕ್ಷ್ಮೇಸುರ ಬಸ್ ಟಿಕೆಟ್ ಲಭ್ಯವಾಗಿದೆ. ಹಾವೇರಿ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುವ ಮೃತನ ಶವ ಇಡಲಾಗಿದ್ದು, ಹುಬ್ಬಳ್ಳಿ ರೈಲ್ವೇ ಪೊಲೀಸ್ ಠಾಣೆ […]

2 ಬೈಕ್’ಗಳ ಮುಖಾ ಮುಖಿ ಡಿಕ್ಕಿ, ಮೂವರಿಗೆ ಗಂಭೀರ ಗಾಯ

2 ಬೈಕ್’ಗಳ ಮುಖಾ ಮುಖಿ ಡಿಕ್ಕಿ, ಮೂವರಿಗೆ ಗಂಭೀರ ಗಾಯ

ಗಾಯಾಳುಗಳನ್ನು ಸಾಗಿಸಲು ಬಾರದ ಡಿ ಗ್ರೂಪ್ ನೌಕರರು ಹಾವೇರಿ: ಎರಡು ಬೈಕ್ ಮಧ್ಯ ಮುಖಾ ಮುಖಿ ಡಿಕ್ಕಿಯಾಗಿ, ಮೂವರಿಗೆ ಗಂಭೀರ ಗಾಯವಾದ ಘಟನೆ ಜಿಲ್ಲೆಯ ಬ್ಯಾಡಗಿ ರೈಲ್ವೇ ಗೇಟ್ ಬಳಿ ಶನಿವಾರ ನಡೆದಿದೆ. ಗಾಯಾಳುಗಳು ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ ಜಗದೀಶ ಅಂಬರಗಟ್ಟಿ(40),ಶಖಪ್ಪ ನಾಗಣ್ಣನವರ (26) ಹಾಗೂ ಮತ್ತೋರ್ವನ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಡಿ.ಗ್ರೂಪ್ ನೌಕರರ ನಿರ್ಲಕ್ಷ: ಸಹಾಯಕ್ಕೆ ದಾವಿಸಿದ ಸಾರ್ವಜನಿಕರು: 108 ವಾಹನದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆತಂದರು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಯಾವುದೇ ಡಿ. […]

ಹಾವೇರಿ: ಪೊಲೀಸರಿಂದ ಭರ್ಜರಿ ಬೇಟೆ, ಅಂತರರಾಜ್ಯ ಕಳ್ಳರ ಬಂಧನ

ಹಾವೇರಿ: ಪೊಲೀಸರಿಂದ ಭರ್ಜರಿ ಬೇಟೆ, ಅಂತರರಾಜ್ಯ ಕಳ್ಳರ ಬಂಧನ

ಹಾವೇರಿ: ಪೊಲೀಸರು ಭರ್ಜರಿ ಕಾರ್ಯಾಚರಣೆ ಮೂಲಕ 7 ಜನ ಅಂತರರಾಜ್ಯ ಕಳ್ಳರನ್ನು ಬಂಧಿಸಿದ ಘಟನೆ ಜಿಲ್ಲೆಯ ಶಿಗ್ಗಾವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಗುರುವಾರ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ರಾಜೀವಗ್ರಾಮದ ಬಸ್ ನಿಲ್ದಾಣದಲ್ಲಿ  ಕಳ್ಳರನ್ನು ಬಂಧಿಸಲಾಗಿದೆ.‌ ಬಂಧಿತರೆಲ್ಲರೂ ದೆಹಲಿ,ಪಂಜಾಬ, ಉತ್ತರ ಪ್ರದೇಶದವರು ಎಂದು ತಿಳಿದು ಬಂದಿದ್ದು, ಜಾವೇದ 41, ತನ್ವೀರ 38, ಮೊಹಮ್ಮದ್ ತಾಹಿರ್ 44, ಇಮ್ರಾನ್ ಆಸಿಪ್ 32, ಅಲಿಮಹಮ್ಮದ 28, ಮಹಮ್ಮದ್ ಅರೀಪ್ 24, ಪಿರೋಜ್ ಅಹಮದ್ 44 ಬಂಧಿತ ಆರೋಪಿಗಳು ಎಂದು […]

ಅಂಬಿಕಾ ಜಾಲಗಾರ ಆರೋಪ ಸತ್ಯಕ್ಕೆ ದೂರ, ನನ್ನನ್ನು ಯಾರು ಕತ್ತಲಲ್ಲಿ ಇಟ್ಟಿಲ್ಲ: ಶಾಂತಭೀಷ್ಮ ಶ್ರೀ

ಅಂಬಿಕಾ ಜಾಲಗಾರ ಆರೋಪ ಸತ್ಯಕ್ಕೆ ದೂರ, ನನ್ನನ್ನು ಯಾರು ಕತ್ತಲಲ್ಲಿ ಇಟ್ಟಿಲ್ಲ: ಶಾಂತಭೀಷ್ಮ ಶ್ರೀ

ಹಾವೇರಿ: ಅಂಬಿಗರ ಚೌಡಯ್ಯನವರ ಗುರು ಪೀಠದ ಐಕ್ಯ ಮಂಟಪದ ಅಭಿವೃದ್ಧಿ ನೆಪದಲ್ಲಿ ಅಂಬಿಕಾ ಜಾಲಾಗಾರ ಸೇರಿದಂತೆ ಮತ್ತಿತರರು ಗೊಂದಲ ಶೃಷ್ಠಿಸಲು ಹೊರಟ್ಟಿದ್ದಾರೆ. ಪೀಠದ ಗುರುವಾಗಿರುವ ನನ್ನನ್ನು ಯಾರು ಕತ್ತಲಲ್ಲಿ ಇಟ್ಟಿಲ್ಲ ಈ ವಿಷಯದಲ್ಲಿ ಅಂಬಿಕಾ ಜಾಲಗಾರ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ನಿಜಶರಣ ಅಂಬಿಗರ ಚೌಡಯ್ಯ ನವರ ಗುರುಪೀಠದ ಶಾಂತಭೀಷ್ಮ ಸ್ವಾಮೀಜಿ ತಿಳಿಸಿದರು. ಭಾನುವಾರ ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಕರ್ನಾಟಕ ಅಂಬಿಗರ ಚೌಡಯ್ಯ ಮಹಾಸಭಾ ಎಂಬ ಸಂಘವನ್ನು […]

1 2 3 22