ಅಂಗಡಿ ಆಯ್ಕೆಯಾದರೆ ಕೇಂದ್ರದಲ್ಲಿ ಸಚಿವರಾಗುವ ಯೋಗ: ಶಾಸಕ ಬಾಲಚಂದ್ರ ಜಾರಕಿಹೊಳಿ

ಅಂಗಡಿ ಆಯ್ಕೆಯಾದರೆ ಕೇಂದ್ರದಲ್ಲಿ ಸಚಿವರಾಗುವ ಯೋಗ: ಶಾಸಕ ಬಾಲಚಂದ್ರ ಜಾರಕಿಹೊಳಿ

ಸುರೇಶ ಅಂಗಡಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಆಯ್ಕೆ ಮಾಡಿ. ಘಟಪ್ರಭಾ: ಬಲಿಷ್ಠ ಭಾರತ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈಗಳನ್ನು ಬಲಪಡಿಸಲು ಸುರೇಶ ಅಂಗಡಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿಕೊಂಡರು. ಬುಧವಾರದಂದು ಅರಭಾಂವಿ ಪಟ್ಟಣದಲ್ಲಿ ಜರುಗಿದ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಂಗಡಿ ಅವರು ಕಳೆದ 15 ವರ್ಷಗಳಿಂದ ಬೆಳಗಾವಿ […]

ಸಂಸದ ಅಂಗಡಿ ಮೋಸದಿಂದ ಬೆಳಗಾವಿಗೆ ಐಐಐಟಿ, ಉಢಾನ ಯೋಜನೆ ತಪ್ಪಿದೆ: ಶಾಸಕಿ ಹೆಬ್ಬಾಳ್ಕರ್

ಸಂಸದ ಅಂಗಡಿ ಮೋಸದಿಂದ ಬೆಳಗಾವಿಗೆ ಐಐಐಟಿ, ಉಢಾನ ಯೋಜನೆ  ತಪ್ಪಿದೆ: ಶಾಸಕಿ ಹೆಬ್ಬಾಳ್ಕರ್

ಬೆಳಗಾವಿ: ಗ್ರಾಮೀಣ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೇನೆ,ಲೋಕಸಭಾ ಚುನಾವಣೆ ನನ್ನ ಗೌರವದ ಪ್ರಶ್ನೆಯಾಗಿದೆ ಕಾಂಗ್ರೆಸ್ ಅಭ್ಯರ್ಥಿ ಡಾ ವ್ಹಿ ಎಸ್ ಸಾಧುನವರ ಅವರನ್ನು ಗೆಲ್ಲಿಸಿ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸಲು ಶಕ್ತಿ ಕೊಡಿ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮತದಾರರಲ್ಲಿ ಮನವಿ ಮಾಡಿಕೊಂಡರು. ಬೆಳಗಾವಿ ಗ್ರಾಮೀಣ ಕ್ಷೇತ್ರದ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಂಚರಿಸಿ ಪಾದಯಾತ್ರೆಯ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಸಾಧುನವರ ಅವರ ಪರವಾಗಿ ಮತಯಾಚಿಸಿ ಮಾತನಾಡಿದ ಅವರು ಸಂಸದ ಸುರೇಶ […]

ವಿಜಯಪುರ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಭರ್ಜರಿ ಪ್ರಚಾರ

ವಿಜಯಪುರ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಭರ್ಜರಿ ಪ್ರಚಾರ

ಇಂಡಿ: ಸಚಿವ, ವಿಜಯಪುರ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ತಾಲೂಕಿನ ನಾದಬಿಕೆ, ನಾದಕೆಡಿ ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ನಡೆಸಿ ಮತಯಾಚಿಸಿದರು. ಈ ವೇಳೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಲವಾರು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮತ್ತೆ ನಿಮ್ಮ ಸೇವೆ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದ ಅವರು, ದೇಶದ ಅಭಿವೃದ್ಧಿಗೆ ಮೋದಿ ಮತ್ತೊಮ್ಮೆ ಪ್ರಧಾನಿಯಾಬೇಕಿದೆ ಎಂದರು. ಇಂಡಿ ಬಿಜೆಪಿ ಮಂಡಲದ ಆಧ್ಯಕ್ಷ ಕಾಶುಗೌಡ ಬಿರಾದಾರ, ಶೀಲವಂತ ಉಮರಾಣಿ, ಬಾಳು ಮುಳಜಿ, ಧರೇಣ್ಣನವರ, ಹಾಗೂ ನೂರಾರು […]

ನಾಳೆ ಅರಭಾವಿ ಕ್ಷೇತ್ರದಲ್ಲಿ ಸುರೇಶ ಅಂಗಡಿ, ಬಾಲಚಂದ್ರ ಜಾರಕಿಹೊಳಿ ಪ್ರಚಾರ

ನಾಳೆ ಅರಭಾವಿ ಕ್ಷೇತ್ರದಲ್ಲಿ ಸುರೇಶ ಅಂಗಡಿ, ಬಾಲಚಂದ್ರ ಜಾರಕಿಹೊಳಿ ಪ್ರಚಾರ

ಗೋಕಾಕ : ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಅವರ ಪ್ರಚಾರಾರ್ಥವಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಾಳೆ ಬುಧವಾರದಂದು ಅರಭಾವಿ ಕ್ಷೇತ್ರದ ವಿವಿಧೆಡೆ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ನಾಳೆ ದಿ. 17 ರಂದು ಮುಂಜಾನೆ 10 ಗಂಟೆಗೆ ಅರಭಾವಿ, 11 ಗಂಟೆಗೆ ರಾಜಾಪೂರ, ಮ. 12 ಗಂಟೆಗೆ ಕಲ್ಲೋಳಿ, 1 ಗಂಟೆಗೆ ನಾಗನೂರ, 2 ಗಂಟೆಗೆ ಹಳ್ಳೂರ, 3 ಗಂಟೆಗೆ ಯಾದವಾಡ, ಸಂಜೆ 4 ಗಂಟೆಗೆ ಕೌಜಲಗಿ, 5 ಗಂಟೆಗೆ ಕುಲಗೋಡ, 6 […]

ಮೋದಿ ಮತ್ತೆ ಪ್ರಧಾನಿಯಾದರೆ ರೈತರಿಗೆ ಗಂಡಾಂತರ: ಬಾಬಾಗೌಡಾ ಪಾಟೀಲ

ಮೋದಿ ಮತ್ತೆ ಪ್ರಧಾನಿಯಾದರೆ ರೈತರಿಗೆ ಗಂಡಾಂತರ: ಬಾಬಾಗೌಡಾ ಪಾಟೀಲ

ಬೈಲಹೊಂಗಲ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ರೈತರು ಬೆಳೆದ ಬೆಳೆಗೆ ಸರಿಯಾದ ದರ ನೀಡುತ್ತಿಲ್ಲ. ರೈತರ ಸಮಸ್ಯೆಗಳಿಗೆ ಸರಕಾರದಿಂದ ಸೂಕ್ತ ಸ್ಪಂದನೆ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಹೇಳಿದರು. ಮಂಗಳವಾರ ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಆಶ್ರಯದಲ್ಲಿ ನಡೆದ ರೈತರ ಸಮಸ್ಯೆಗಳ ಕುರಿತು ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಳೆದ […]

ಸೋಲಿನ ಭೀತಿಯಿಂದ ಬಿಜೆಪಿಯವರು ಪ್ರಕಾಶ ಹುಕ್ಕೇರಿ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ: ರವಿ ಮಿರ್ಜೆ

ಸೋಲಿನ ಭೀತಿಯಿಂದ ಬಿಜೆಪಿಯವರು ಪ್ರಕಾಶ ಹುಕ್ಕೇರಿ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ: ರವಿ ಮಿರ್ಜೆ

ಚಿಕ್ಕೋಡಿ: ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಸೋಲು ಭೀತಿಯಿಂದ ಬಿಜೆಪಿಯವರು ಹತಾಶರಾಗಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ದ್ರಾಕ್ಷಾ ರಸ ಮಹಾಮಂಡಳಿ ಮಾಜಿ ಅಧ್ಯಕ್ಷ ರವಿ ಮಿರ್ಜೆ ಬಿಜೆಪಿ ವಾಗ್ದಾಳಿ ನಡೆಸಿದರು. ಚಿಕ್ಕೋಡಿ ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೀರಿಲ್ಲದೆ ಕೃಷ್ಣಾ ನದಿ ಬತ್ತಿ ಹೋಗಿದೆ. ಇಂತಹ ಸಂದರ್ಭದಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆ ಬಂದ್ ಇದೆ. ಆದರೆ ಕಾಡಾಪೂರ ಕೆರೆಗೆ ನೀರು ಬರುತ್ತಿಲ್ಲವೆಂದು ಬಿಜೆಪಿ […]

ಎಸ್ ಬಿಐ ಸಿಬ್ಬಂದಿ ರವೀಂದ್ರ ಬೆಟಸೂರಗೆ ಉತ್ತಮ ಕಾರ್ಯನಿರ್ವಹಣೆ ಪ್ರಶಸ್ತಿ

ಎಸ್ ಬಿಐ ಸಿಬ್ಬಂದಿ ರವೀಂದ್ರ ಬೆಟಸೂರಗೆ ಉತ್ತಮ ಕಾರ್ಯನಿರ್ವಹಣೆ ಪ್ರಶಸ್ತಿ

ಗೋಕಾಕ: ಪಟ್ಟಣದ ಎಸ್ ಬಿಐ ಸಿಬ್ಬಂದಿ ರವೀಂದ್ರ ವಾಸುದೇವ ಬೆಟಸೂರು ಅವರು 2018-19ರ ಉತ್ತಮ ಕಾರ್ಯನಿರ್ವಹಣೆಗಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರ ಸಾಧನೆಗೆ ಎಸ್ ಬಿ ಐ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ. Views: 45

ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲೆಸಿದ್ದಾರೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲೆಸಿದ್ದಾರೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲೆಸಿದ್ದಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ತಾಲೂಕಿನ ಸುಣಧೋಳಿ ಗ್ರಾಮದ ಅಂಬೇಡ್ಕರ ಭವನದಲ್ಲಿ ಸೋಮವಾರ ಸಂಜೆ ಜರುಗಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ ಅವರ 128ನೇ ಜಯಂತಿ ನಿಮಿತ್ಯ ಹಮ್ಮಿಕೊಂಡಿದ್ದ ಚಿಂತನ ಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಬೇಡ್ಕರ ಅವರನ್ನು ಒಂದೇ ಸಮುದಾಯಕ್ಕೆ ಸೀಮಿತ ಮಾಡಬೇಡಿ. ಅವರು ಎಲ್ಲ ವರ್ಗಗಳಿಗೆ ಸ್ವಾತಂತ್ರ್ಯ ನೀಡಿದ ಮಹಾನುಭಾವ. ಅಂಬೇಡ್ಕರ ಅವರು ಈ ಭೂಮಿಯಲ್ಲಿ ಜನ್ಮ […]

ಮನ್ನಿಕೇರಿ ಮಹಾಂತೇಶ್ವರನ ಮಹಿಮೆ ಅಪಾರ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮನ್ನಿಕೇರಿ ಮಹಾಂತೇಶ್ವರನ ಮಹಿಮೆ ಅಪಾರ : ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಕೋಮು ಸಾಮರಸ್ಯಕ್ಕೆ ನಮ್ಮ ದೇಶವೇ ಜಗತ್ತಿಗೆ ಮಾದರಿಯಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳೀದರು. ಸೋಮವಾರ ಸಂಜೆ ತಾಲೂಕಿನ ಮನ್ನಿಕೇರಿ ಗ್ರಾಮದ ಮಹಾಂತೇಶ್ವರ ದೇವಸ್ಥಾನದ ದರ್ಶನ ಪಡೆದು ಮಾತನಾಡಿದ ಅವರು, ಇಡೀ ಜಗತ್ತಿನಲ್ಲಿ ಭಾರತ ಜಾತ್ಯಾತೀತ ದೇಶ. ಎಲ್ಲ ಜಾತಿ ಜನಾಂಗದವರು ಪರಸ್ಪರ ಅಣ್ಣ-ತಮ್ಮಂದಿರರಂತೆ ಜೀವನ ಸಾಗಿಸುತ್ತಿದ್ದಾರೆ. ಎಲ್ಲ ಧರ್ಮಿಯರು ಕೂಡ ವಿವಿಧತೆಯಲ್ಲಿ ಏಕತೆಯನ್ನು ಮೆರೆಯುತ್ತಿದ್ದಾರೆ. ಈ ಮೂಲಕ ಪ್ರಪಂಚಕ್ಕೆ ನಮ್ಮದು ಸೌಹಾರ್ದಯುತ ರಾಷ್ಟ್ರವೆಂದು ಸಾರುತ್ತಿದ್ದಾರೆ ಎಂದರು. ಮಹಾಂತೇಶ್ವರ ಎಲ್ಲ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಅದ್ಭುತ […]

ಅರಭಾಂವಿ ಮತಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿ ಪ್ರಚಾರ: ಗಡಾದ, ದಳವಾಯಿ ಸೇರಿ ಹಲವರು ಭಾಗಿ

ಅರಭಾಂವಿ ಮತಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿ ಪ್ರಚಾರ: ಗಡಾದ, ದಳವಾಯಿ ಸೇರಿ ಹಲವರು ಭಾಗಿ

ಅರಭಾಂವಿ: ಅರಭಾಂವಿ ಮತಕ್ಷೇತ್ರದ ಶಿವಾಪೂರ (ಹಳ್ಳೂರ) ಮತ್ತು ಖಾನಟ್ಟಿ ಗ್ರಾಮಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ವ್ಹಿ.ಎಸ್. ಸಾಧುನವರ ಪರ ಪ್ರಚಾರ ನಡೆಸಿದರು. ಮನೆಗೆ ಮನೆಗೆ ತೆರಳಿ ಮೈತ್ರಿ ಅಭ್ಯರ್ಥಿ ಪರ ಮತಯಾಚಿಸಿದರು. ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಜೆಡಿಎಸ್ ಮುಖಂಡ ಬಿ. ಜಿ. ಗಡಾದ, ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ, ಪ್ರಕಾಶ ಬಾಗೇವಾಡಿ ಸೇರಿದಂತೆ ಕಾರ್ಯಕರ್ತರು ಇದ್ದರು. Views: 281