ಅನಂತ ಅಗಲಿಕೆಗೆ ಅಂಗಡಿ ಸಂತಾಪ

ಅನಂತ ಅಗಲಿಕೆಗೆ ಅಂಗಡಿ ಸಂತಾಪ

ಬೆಳಗಾವಿ: ಕೇಂದ್ರ ಸಚಿವ ಅನಂತಕುಮಾರ್ ಅಕಾಲಿಕ ನಿಧನಕ್ಕೆ ಸಂಸದ ಸುರೇಶ ಅಂಗಡಿಯವರು ಸಂತಾಪ ಸೂಚಿಸಿದ್ದಾರೆ.  ಅನಂತಕುಮಾರ್ ಅವರು ನನಗೆ ಉತ್ತಮ ಸ್ನೇಹಿತ, ಮಾರ್ಗದರ್ಶಕರಾಗಿದ್ದರು. ಅವರ ಅಗಲಿಕೆಯಿಂದ ತೀವ್ರ ಆಘಾತವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಆ ದೇವರು ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ. ಅಮೀತ ಇಂಗಳಗಾಂವಿhttp://udayanadu.com

ಅನಂತಕುಮಾರ್ ನಮಗೆ ಮಾರ್ಗದರ್ಶಕರಾಗಿದ್ದರು: ಶ್ರೀಕಾಂತ ಕುಲಕರ್ಣಿ

ಅನಂತಕುಮಾರ್ ನಮಗೆ ಮಾರ್ಗದರ್ಶಕರಾಗಿದ್ದರು: ಶ್ರೀಕಾಂತ ಕುಲಕರ್ಣಿ

ಜಮಖಂಡಿ: ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನಕ್ಕೆ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಅನಂತಕುಮಾರ್ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರು ನಮಗೆಲ್ಲ ಮಾರ್ಗದರ್ಶಕರಾಗಿದ್ದರು ಎಂದು ಹೇಳಿದರು. ನಗರದ ಎಪಿಎಂಸಿ ಮಂಗಲ ಕಾರ್ಯಾಲಯದಲ್ಲಿ ಇಂದು ಮಧ್ಯಾಹ್ನ 3 ಘಂಟೆಗೆ ಸಾರ್ವಜನಿಕ ಶ್ರಧ್ಧಾಂಜಲಿ ಸಭೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಆದರ್ಶ ರೂಗಿಮಠ, ಅಜಯ್ ಕಡಪಟ್ಟಿ, ಪ್ರವೀಣ ಕಲ್ಯಾಣಿ, ನಾಗರಾಜ ತಂಗಡಗಿ ಸೇರಿ ಬಿಜೆಪಿಯ ಕಾರ್ಯಕರ್ತರು ಇದ್ದರು. Munna Bagwanhttp://udayanadu.com

ಅನಂತಕುಮಾರ ನಿಧನ: ಕರವೇ ಪ್ರತಿಭಟನೆ ಮುಂದೂಡಿಕೆ

ಅನಂತಕುಮಾರ ನಿಧನ:  ಕರವೇ ಪ್ರತಿಭಟನೆ ಮುಂದೂಡಿಕೆ

ಖಾನಾಪುರ: ಕೇಂದ್ರ  ಸಚಿವ ಅನಂತಕುಮಾರ ನಿಧನದ ಹಿನ್ನೆಲೆ ಖಾನಾಪುರ ಪಟ್ಟಣದಲ್ಲಿ ಇಂದು ಕರವೇ  ವತಿಯಿಂದ ವಿವಿಧ ಬೇಡಿಕೆ ಈಡೇರಿಕೆಗಾಗಿ ಹಮ್ಮಿಕೊಳ್ಳಲಾಗಿದ್ದ ಅರೆಬೆತ್ತಲೆ ಮತ್ತು ತಮಟೆ ಮೆರವಣಿಗೆಯನ್ನು ಮುಂದೂಡಲಾಗಿದೆ ಎಂದು ಖಾನಾಪುರ ತಾಲೂಕಾ ಕರವೇ ಪ್ರಧಾನ ಕಾರ್ಯದರ್ಶಿ ದಶರಥ ಬನೋಶಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನಂತಕುಮಾರ ಅವರು ಕನ್ನಡ ಭಾಷೆಯ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಹಾಗೂ ಮೊಟ್ಟಮೊದಲ ಬಾರಿಗೆ ಸಂಸತ್ತಿನಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿ ಕನ್ನಡ ಭಾಷೆಯ ಹಿರಿಮೆ ಮತ್ತು ಅವರಿಗಿರುವ ಕನ್ನಡದ […]

ಅನಂತಕುಮಾರ್ ನಿಧನಕ್ಕೆ ಅಶೋಕ ಪೂಜಾರಿ ಶೋಕ

ಅನಂತಕುಮಾರ್ ನಿಧನಕ್ಕೆ ಅಶೋಕ ಪೂಜಾರಿ ಶೋಕ

ಗೋಕಾಕ: ರಾಷ್ಟ್ರದ ಹಿರಿಯ ರಾಜಕಾರಣಿ ಕೇಂದ್ರ ಸಚಿವ ಅನಂತಕುಮಾರ ಅವರ ನಿಧನದಿಂದ  ರಾಜ್ಯ, ರಾಷ್ಟ್ರದ ಜನತೆಗೆ ತುಂಬಲಾರದ ನಷ್ಟ ಉಂಟಾಗಿದೆ  ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ತೀವ್ರ ಸಂತಾಪ ಸೂಚಿಸಿದರು. ಅನಂತಕುಮಾರ ಅವರು ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರ ಘಟಕದ ಹಿರಿಯ ನಾಯಕರಾಗಿದ್ದರು. ತಮ್ಮ ವಿಶಿಷ್ಠ ಶೈಲಿಯ ಸಹೃದಯ ಮತ್ತು ಮಧುರ ಬಾಂಧವ್ಯವನ್ನು ಪಕ್ಷಾತೀತವಾಗಿ ಎಲ್ಲರೊಂದಿಗೂ ಹೊಂದಿದ್ದ ಅವರು ಸಾಮಾನ್ಯ ಕಾರ್ಯಕರ್ತರ ಆರಾಧಕರಾಗಿದ್ದರು. ತಮ್ಮ ಅನೇಕ ಹೊಸ ವಿಚಾರಧಾರೆಗಳ ಆಡಳಿತಾತ್ಮಕ ವೈಕರಿಯಿಂದ ಅನೇಕ ಹೊಸ ಯೋಜನೆಗಳಿಗೆ […]

ಅನಂತಕುಮಾರ್ ನಿಧನಕ್ಕೆ ಡಾ. ಪ್ರಭಾಕರ ಕೋರೆ ಸಂತಾಪ

ಅನಂತಕುಮಾರ್ ನಿಧನಕ್ಕೆ ಡಾ. ಪ್ರಭಾಕರ ಕೋರೆ ಸಂತಾಪ

ಬೆಳಗಾವಿ: ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ, ಸದೀಯ ವ್ಯವಹಾರಗಳ ಖಾತೆ ಸಚಿವ ಅನಂತಕುಮಾರ ಅವರ  ನಿಧನಕ್ಕೆ ಡಾ. ಪ್ರಭಾಕರ ಕೋರೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ದೇಶದ ಸಜ್ಜನರಾಜಕಾರಣಿಯಾಗಿ, ಧೀಮಂತ ನಾಯಕರಾಗಿದ್ದಅನಂತಕುಮಾರ ಅವರು ಜನಮಾನಸದಲ್ಲಿ ಹೆಸರುವಾಸಿಯಾಗಿದ್ದರು. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಸಂಘಟಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಅನಂತಕುಮಾರ ಕೆಎಲ್‍ಇ ಸಂಸ್ಥೆಯ ಹಳೆಯ ವಿದ್ಯಾರ್ಥಿಯಾಗಿದ್ದರೆಂಬುದು ನಮಗೆ ಹೆಮ್ಮೆಯ ಸಂಗತಿ. ಅಂತೆಯೇ ನಮ್ಮ ಸಂಸ್ಥೆಯ ಹಲವಾರು ಸಮಾರಂಭದಲ್ಲಿ ಪಾಲ್ಗೊಂಡು ಸಂಸ್ಥೆಯ ಪ್ರಗತಿಯನ್ನು ಹತ್ತಿರದಿಂದ ನೋಡಿ ಮುಕ್ತಕಂಠದಿಂದ ಪ್ರಶಂಸಿಸುತ್ತಿದ್ದರು. ಅವರ ಅಗಲಿಕೆ […]

40 ವರ್ಷದ ರಾಜಕೀಯದಲ್ಲಿ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿರುವೆ: ಸಂಸದ ಹುಕ್ಕೇರಿ

40 ವರ್ಷದ ರಾಜಕೀಯದಲ್ಲಿ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿರುವೆ: ಸಂಸದ  ಹುಕ್ಕೇರಿ

ಚಂದೂರು ಗ್ರಾಮದಲ್ಲಿ ಮರಾಠಾ ಸಮುದಾಯ ಭವನ ಉದ್ಘಾಟಿಸಿ ಹೇಳಿಕೆ ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿನ  ಮಂದಿರಗಳ ಜೀರ್ಣೋದ್ಧಾರಕ್ಕೆ ಅಗತ್ಯವಿರುವ ಅನುದಾನ ನೀಡುವುದಾಗಿ ಸಂಸದ ಪ್ರಕಾಶ ಹುಕ್ಕೇರಿ ಹೇಳಿದರು. ತಾಲೂಕಿನ ಚಂದೂರ ಗ್ರಾಮದಲ್ಲಿ ರವಿವಾರ ಚಂದ್ರೇಶ್ವರ ದೇವಸ್ಥಾನದ ಬಳಿ 42.80 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಮರಾಠಾ ಸಮುದಾಯ ಭವನ ಉದ್ಘಾಟಿಸಿ ಅವರು ಮಾತನಾಡಿ, ಕಳೆದ 40 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ನಾನು ಅಭಿವೃದ್ಧಿ ಕೆಲಸ ಬಿಟ್ಟರೆ ಪರ್ಯಾಯ ಆಲೋಚನೆ ಮಾಡಿಲ್ಲ. ನನ್ನ ಬೆಂಬಲಿಸಿರುವ ಜನ ನನ್ನ […]

ಚಿಕ್ಕೋಡಿಯಲ್ಲಿ ಹೋಟೆಲ್, ಕಿರಾಣಿ ಅಂಗಡಿಗೆ ಕನ್ನ

ಚಿಕ್ಕೋಡಿಯಲ್ಲಿ ಹೋಟೆಲ್, ಕಿರಾಣಿ ಅಂಗಡಿಗೆ ಕನ್ನ

ಚಿಕ್ಕೋಡಿ: ತಾಲೂಕಿನ ಬೆಳಕೂಡಗೇಟ್ ಬಳಿ ಕಿರಾಣಿ ಅಂಗಡಿ ಹಾಗೂ ಹೋಟೆಲ್ ಗೆ  ಕನ್ನ ಹಾಕಿದ ಖದೀಮರು ವಿವಿಧ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ಶನಿವಾರ ತಡ ರಾತ್ರಿ ನಡೆದಿದೆ. ಬೆಳಕೂಡಗೇಟ್‍ ಬಳಿ  ಲಕ್ಷ್ಮೀದೇವಿ ಮಂದಿರದ ಬಳಿ ಇರುವ ಒಂದು ಹೋಟೇಲ್ ನ ಮೇಲ್ಚಾವಣಿಯ ಹಂಚು ತೆಗೆದು ಅಂಗಡಿಯಲ್ಲಿ ನುಗ್ಗಿ ಅಂಗಡಿಯಲ್ಲಿ ಗುಟ್ಕಾ, ಸಿಗರೇಟ್  ಪಾಕೇಟ್‍, ತಂಪು ಪಾನಿಯಗಳನ್ನು ದೋಚಿದ್ದಾರೆ. ಬಸವರಾಜ ಹುರಳಿ ಮತ್ತು ಪಿಂಟು ಅಂಗಡಿ ಎಂಬುವವರಿಗೆ ಸೇರಿದ ಅಂಗಡಿಗಳಾಗಿದ್ದು, ಎರಡನೇ ಬಾರಿ ಕಳ್ಳತನ  ಮಾಡಲಾಗಿದೆ.  ಸ್ಥಳಕ್ಕೆ […]

ಚಿಕ್ಕೋಡಿ: ಅಪರಿಚಿತ ಶವ ಪತ್ತೆ

ಚಿಕ್ಕೋಡಿ: ಅಪರಿಚಿತ ಶವ ಪತ್ತೆ

ಚಿಕ್ಕೋಡಿ: ತಾಲೂಕಿನ ಕೆರೂರು ಗ್ರಾಮದ ಹೊರವಲಯದ ಬಾವಿಯೊಂದರಲ್ಲಿ ಅಪರಿಚಿತ ವ್ಯಕ್ತಿಯ ಪುರುಷ ಶವ ಪತ್ತೆಯಾಗಿದೆ. ಸುಮಾರು 42 ವರ್ಷ ವಯಸ್ಸಿನ ಅಪರಿಚಿತ ಪುರುಷ ಶವ ಪತ್ತೆಯಾಗಿದೆ. ಹೆಸರು,ವಿಳಾಸ ಗೊತ್ತಾಗಿಲ್ಲ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಪೊಲೀಸರಿಂದ ವ್ಯಕ್ತವಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಚಿಕ್ಕೋಡಿ ತಾಲೂಕಿನ ಅಂಕಲಿ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಮೀತ ಇಂಗಳಗಾಂವಿhttp://udayanadu.com

ಸೇತುವೆ ಕಾಮಗಾರಿ ವಿಳಂಬ: ಗುತ್ತಿಗೆಗಾರರ ಬೆವರಿಳಿಸಿದ ಸಂಸದ ಪ್ರಕಾಶ ಹುಕ್ಕೇರಿ

ಸೇತುವೆ ಕಾಮಗಾರಿ ವಿಳಂಬ: ಗುತ್ತಿಗೆಗಾರರ ಬೆವರಿಳಿಸಿದ ಸಂಸದ ಪ್ರಕಾಶ ಹುಕ್ಕೇರಿ

ಚಿಕ್ಕೋಡಿ: ಚಂದೂರ-ಸೈನಿಕ ಟಾಕಳಿ ಅಂತರಾಜ್ಯ ಸೇತುವೆ ನಿರ್ಮಾಣ ಕಾಮಗಾರಿಗೆ ವಿನಾಕಾರಣ ವಿಳಂಬ ಮಾಡುತ್ತಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಸಂಸದ ಪ್ರಕಾಶ ಹುಕ್ಕೇರಿ ತೀವ್ರ  ತರಾಟೆಗೆ ತೆಗೆದುಕೊಂಡು ಬರುವ ಮಾರ್ಚ ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು. ತಾಲೂಕಿನ ಚಂದೂರ ಗ್ರಾಮದ ಹತ್ತಿರ ಕೃಷ್ಣಾ ನದಿಗೆ ಅಡ್ಡಲಾಗಿ 18.10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಚಂದೂರ-ಸೈನಿಕ ಟಾಕಳಿ ಅಂತರಾಜ್ಯ ಸೇತುವೆ ನಿರ್ಮಾಣ ಕಾಮಗಾರಿಯನ್ನು ರವಿವಾರ ವೀಕ್ಷಿಸಿ ಗುತ್ತಿಗೆದಾರರಿಂದ ಮಾಹಿತಿ ಪಡೆಯುವ ಸಂದರ್ಭದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಇನ್ನೂ ವರ್ಷ ಕಾಲಾವಕಾಶಬೇಕೆಂದು ಗುತ್ತಿಗೆದಾರರರು […]

ಬುಡಾಗೆ ನಿಷ್ಟಾವಂತ ಕಾರ್ಯಕರ್ತರನ್ನೇ ನೇಮಿಸಿ: ಧರನಾಯಿಕ

ಬುಡಾಗೆ ನಿಷ್ಟಾವಂತ ಕಾರ್ಯಕರ್ತರನ್ನೇ ನೇಮಿಸಿ: ಧರನಾಯಿಕ

ಬೆಳಗಾವಿ: ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪಕ್ಷದ ನಿಷ್ಟಾವಂತ ಕಾರ್ಯಕತ್ರನ್ನೇ ನೇಮಕ ಮಾಡಬೇಕೆಂದು ಕಾಂಗ್ರೆಸ್ ಪರಿಶಿಷ್ಟ ಘಟಕದ ರಾಜ್ಯ ಸಂಚಾಲಕ ಗಜು ಧರನಾಯಿಕ ಆಗ್ರಹಿಸಿದ್ದಾರೆ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷ ಮತ್ತು ಸದಸ್ಯರ ನೇಮಕದ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ ಹಾಗೂ ಕಾಂಗ್ರೆಸ್ ಪರಿಶಿಷ್ಟ ಪರಿಶಿಷ್ಟ ಜಾತಿ ಇಲಾಖೆ ಅಧ್ಯಕ್ಷ ಎಫ್.ಎಚ್.ಜಕ್ಕಪ್ಪನವರ ಅವರಿಗೆ ಪತ್ರವೊಂದನ್ನು ಬರೆದಿರುವ ಅವರು ನೇಮಕಾತಿ ಸಂದರ್ಭದಲ್ಲಿ ಪಕ್ಷಕ್ಕೆ ನಿಷ್ಟರಾಗಿರುವವರನ್ನು ಪರಿಗಣಿಸಬೇಕು, ಇನ್ನುಳಿದ ನಿಗಮ ಮಂಡಳಿಗಳಲ್ಲಿನ ನೇಮಕದ ಸಂದರ್ಭದಲ್ಲಿಯೂ ಕಳೆದ ಚುನಾವಣೆಯಲ್ಲಿ ಪಕ್ಷದ […]