ಲಾರಿ-ಝೈರೋ ಕಾರು ಮಧ್ಯೆ ಭೀಕರ ಅಪಘಾತ: 9 ಜನ ದುರ್ಮರಣ

ಲಾರಿ-ಝೈರೋ ಕಾರು ಮಧ್ಯೆ ಭೀಕರ ಅಪಘಾತ: 9 ಜನ ದುರ್ಮರಣ

ಮಾಜಿ ಶಾಸಕ ಶಾಮರಾವ ಘಾಟಗೆ ಸೋದರ ಸಂಬಂಧಿಕರ ಸಾವು ಕಾರವಾರ: ಲಾರಿ, ಝೈಲೋ ಕಾರು ನಡುವೆ ಭೀಕರ  ಅಪಘಾತ ಸಂಭವಿಸಿ ಕಾರಿನಲ್ಲಿದ್ದ 9 ಜನ ಸ್ಥಳದಲ್ಲಿಯೇ ದಾರುಣ ಸಾವನ್ನಪ್ಪಿದ ಘಟನೆ ಕಾರವಾರ ತಾಲೂಕಿನ ಅರೆಬೈಲುಘಟ್ಟ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಮಂಗಳವಾರ ರಾತ್ರಿ  ನಡೆದಿದೆ. ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಕ್ಕೆ ತೆರಳಿದ್ದ ಬೆಳಗಾವಿ ಜಿಲ್ಲೆಯ ರಾಯಬಾಗ್ ಮೂಲದ ಕುಡುಚಿ ಕ್ಷೇತ್ರದ ಮಾಜಿ ಶಾಸಕ ಶಾಮರಾವ ಘಾಟಗೆ ಸೋದರ ಸಂಭಂದಿಕರು ಎಂದು ತಿಳಿದು ಬಂದಿದೆ. ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ 63 […]

ಕಾರವಾರ: ಕಾಡಿನಿಂದ ನಾಡಿಗೆ ಬಂದ 15 ಅಡಿ ಕಾಳಿಂಗ ಸರ್ಪ ಮರಳಿ ಕಾಡಿಗೆ

ಕಾರವಾರ: ತಾಲೂಕಿನ ಕೆಡಿಯಾ ಗ್ರಾಮದ ಮನೆಯೊಂದರಲ್ಲಿ ಸೇರಿದ  15 ಅಡಿ ಉದ್ದ ಕಾಳಿಂಗ್ ಸರ್ಪವನ್ನು ಗೋಪಿಶಿಟ್ಟಾ ಅರಣ್ಯ ಇಲಾಖೆ ಸಿಬ್ಬಂದಿ ರಮೇಶ್ ಬಡಿಗೇರ್ ಸೆರೆ ಹಿಡಿದರು. ಕೆಡಿಯಾ ಗ್ರಾಮದ ಕೃಷ್ಣಾ ಗುನಗಿ ಎಂಬುವವರ ಮನೆಯಲ್ಲಿ ಈ ಹಾವು ಕಾಣಿಸಿಕೊಂಡಿದ್ದು, ಇದರಿಂದ ಭಯಗೊಂಡ ಮನೆ ಸದಸ್ಯರು ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ರಮೇಶ್ ಬಡಿಗೇರ್ ಹಾಗೂ ಅವರ ಸಿಬ್ಬಂದಿಗಳು ಸತತ ಒಂದು ಗಂಟೆ ಕಾರ್ಯಾಚರಣೆ ನಡೆಸಿ ಹಾವು […]

ಕಾರವಾರ: ಅರಣ್ಯ ಇಲಾಖೆ ಸಿಬ್ಬಂದಿಗಳಿದ್ದ ವಾಹನ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ

ಕಾರವಾರ: ಅರಣ್ಯ ಇಲಾಖೆ ಸಿಬ್ಬಂದಿಗಳಿದ್ದ ವಾಹನ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ

ಕಾರವಾರ: ಉತ್ತರ ಕನ್ನಡ‌ ಜಿಲ್ಲೆಯ ಅಂಕೋಲಾ ತಾಲೂಕಿನ ಸುಂಕಸಾಳ ಬಳಿ ಅರಣ್ಯ ಇಲಾಖೆ ಸಿಬ್ಬಂದಿಯಿಂದ ವಾಹನದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾದ ಘಟನೆ ನಡೆದಿದೆ. ಮಾಸ್ತಿಕಟ್ಟ ಅರಣ್ಯ ವಿಭಾಗಕ್ಕೆ ಸೇರಿದ ವಾಹನದಲ್ಲಿ ನಾಲ್ವರು ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.  ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ. ಈ ಸಂಬಂಧ ಅಂಕೋಲಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಸಾಗವಾನಿ ಸಾಗಾಟ: ಲಾರಿ ಸಮೇತ ಇಬ್ಬರ ಬಂಧನ

ಅಕ್ರಮ ಸಾಗವಾನಿ ಸಾಗಾಟ: ಲಾರಿ ಸಮೇತ ಇಬ್ಬರ ಬಂಧನ

ಕುಮಟಾ: ಇಲ್ಲಿನ ಸಿದ್ದಾಪೂರ ರಸ್ತೆಯ ಮದನಿ ಕ್ರಾಸ್‍ ಬಳಿ ಅಕ್ರಮವಾಗಿ ಸಾಗವಾನಿ ತುಂಡುಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಬಂಧಿಸಿ ಲಾರಿ ಸಮೇತ 1.20 ಲಕ್ಷ ಮೌಲ್ಯದ ಸಾಗವಾನಿ ವಶಪಡಿಸಿಕೊಂಡಿದ್ದಾರೆ. ಪಾರ್ಶ್ವನಾಥ, ಸಿದ್ದರಾಜು ಬಂಧಿತರು.  ಬಡಾಳದ ಅರಣ್ಯ ಪ್ರದೇಶದಲ್ಲಿ ಎರಡು ದಿನಗಳ ಹಿಂದೆ ಸಾಗವಾನಿ ಮರಗಳನ್ನು ಕಡೆದಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಕೂಡಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಕಡಿದಿಟ್ಟ ತುಂಡುಗಳ ಮೇಲೆ ನಿರಂತರ ನಿಗಾವಹಿಸಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವಾಹನ ವಾಹನ ಸಮೇತ […]

ಮುಂಡಗೋಡ: ಬಿಜೆಪಿ ವಿಸ್ತಾರಕರಿಂದ ಮನೆ-ಮನೆಗೆ ತೆರಳಿ ಕೇಂದ್ರ ಯೋಜನೆಗಳ ಮಾಹಿತಿ

ಮುಂಡಗೋಡ: ಬಿಜೆಪಿ ವಿಸ್ತಾರಕರಿಂದ ಮನೆ-ಮನೆಗೆ ತೆರಳಿ ಕೇಂದ್ರ ಯೋಜನೆಗಳ ಮಾಹಿತಿ

ಮುಂಡಗೋಡ:  ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಇಂದೂರ ಗ್ರಾಮದ ಮನೆ ಮನೆಗೆ ಬೇಟಿ ನೀಡಿ ಕೇಂದ್ರ ಸರ್ಕಾರದ ಸಾಧನೆ ಮತ್ತು  ಕೇಂದ್ರ ಸರ್ಕಾರ ಯೋಜನೆಗಳ ಬಗ್ಗೆ ವಿಧಾನ ಪರಿಷತ್ ಸದಸ್ಯ ಮತ್ತು  ಬಿಜೆಪಿ ರಾಜ್ಯ ವಿಸ್ತಾರಕರಾದ ಸೋಮಣ್ಣ ಬೇವಿನಮರದ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಇಂದೂರ ಗ್ರಾಮದಲ್ಲಿ ಪಕ್ಷ ಸಂಘಟನೆಗಾಗಿ  ರಾಜ್ಯ ವಿಸ್ತಾರಕರಾದ ಸೋಮಣ್ಣ  ಬೇವಿನಮರದ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಯೋಜನೆಗಳ  ಪ್ರಚಾರದಲ್ಲಿ ಮಾಜಿ ಶಾಸಕರು ವ್ಹಿ ಎಸ್ ಪಾಟೀಲ, ಅಧ್ಯಕ್ಷರು […]

ನಿಧನ ವಾರ್ತೆ

ನಿಧನ ವಾರ್ತೆ

ಬೆಳಗಾವಿ: ವಿಜಯವಾಣಿ ಪತ್ರಿಕೆಯ ಬೆಳಗಾವಿ ಹಿರಿಯ ವರದಿಗಾರ ರಾಜೇಶ ವೈದ್ಯ ಅವರ ತಾಯಿ ರಾಧಾ ಗೋಪಾಲ ವೈದ್ಯ (82) ಅವರು ಗುರುವಾರದಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸ್ವ ಗ್ರಹದಲ್ಲಿ ನಿಧನರಾದರು. ಮೃತರು  5 ಪುತ್ರರು, ಇಬ್ಬರು ಪುತ್ರಿ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಮರಿ ಮಕ್ಕಳು, ಆರು ಜನ ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮನೆ ಮೇಲೆ ಗುಡ್ಡ ಕುಸಿದು ಮಗು ಸೇರಿ ಮೂವರ ದುರ್ಮರಣ, 10 ಮಹಿಳೆಯರಿಗೆ ಗಾಯ

ಮನೆ ಮೇಲೆ ಗುಡ್ಡ ಕುಸಿದು ಮಗು ಸೇರಿ ಮೂವರ ದುರ್ಮರಣ, 10 ಮಹಿಳೆಯರಿಗೆ ಗಾಯ

ಕಾರವಾರ: ಕರಾವಳಿ ಭಾಗದಲ್ಲಿ ಎರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ  ಕುಮುಟಾ ತಾಲೂಕಿನ ತಂಡ್ರಕುಳಿ ಗ್ರಾಮದಲ್ಲಿ ಮನೆ ಮೇಲೆ ಗುಡ್ಡ ಕುಸಿದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ. ಯತಿನ್ ಅಂಬಿಗ, ಭವ್ಯಾ  ಅಂಬಿಗ, ಮಗು ಧನುಷ್  ಅಂಬಿಗ ಮೃತ ದುರ್ದೈವಿಗಳು.  ಈ ಘಟನೆಯಲ್ಲಿ 10 ಮಹಿಳೆಯರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಹೆದ್ದಾರಿಯಲ್ಲಿ ಮಿರ್ಜಾನವರೆಗೂ ವಾಹನಗಳು ನಿಂತಿದ್ದು, ಸ್ಥಳೀಯರು ಮತ್ತು ಕುಮಟಾ ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ವಿದ್ಯುತ್ ತಂತಿ ತಗುಲಿ ಇಬ್ಬರು ರೈತರ ಸಾವು: ಹೆಸ್ಕಾಂ ಕಚೇರಿ ಸುಟ್ಟು ಪ್ರತಿಭಟನೆ

ವಿದ್ಯುತ್ ತಂತಿ ತಗುಲಿ ಇಬ್ಬರು ರೈತರ ಸಾವು: ಹೆಸ್ಕಾಂ ಕಚೇರಿ ಸುಟ್ಟು ಪ್ರತಿಭಟನೆ

ಹುಬ್ಬಳ್ಳಿ:  ದೇವಿಕೊಪ್ಪದ  ಇಬ್ಬರು ರೈತರು ವಿದ್ಯುತ್ ತಂತಿ ತಗುಲಿ ಶುಕ್ರವಾರ ಸಾವನ್ನಪ್ಪಲು ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಆರೋಪಿಸಿ ದೇವಿಕೊಪ್ಪದ ನೂರಾರು ರೈತರು, ಮೃತರ ಸಂಬಂಧಿಗಳು ಕಲಘಟಗಿಯಲ್ಲಿ ಹೆಸ್ಕಾಂನ ಎರಡು ಕಚೇರಿಗಳಿಗೆ ಶನಿವಾರ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ದೇವಿಕೊಪ್ಪ ಗ್ರಾಮದ ಬಸವರಾಜ ಕ್ಯಾರಕೊಪ್ಪ(42) ಹಾಗೂ ಚನ್ನಪ್ಪ ಧೂಳಿಕೊಪ್ಪ(45) ಕಬ್ಬಿನ‌ ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ವಿದ್ಯುತ್ ತಂತಿ ತಗುಲಿ ಶುಕ್ರವಾರ ಮೃತಪಟ್ಟಿದ್ದರು. ರೈತರು ಮತ್ತು ಸಂಬಂಧಿಗಳು ಕಚೇರಿಯಲ್ಲಿನ ಪೀಠೋಪಕರಣಗಳನ್ನು ಧ್ವಂಸ ಮಾಡಿ ದಾಖಲೆಗಳನ್ನು ಸುಟ್ಟು  ಹಾಕಿದ್ದು, […]