ತಾಳಿಕೋಟೆ ಪುರಸಭೆ ಚುನಾವಣೆ: ಅಣಕು ಮತದಾನ

ತಾಳಿಕೋಟೆ ಪುರಸಭೆ ಚುನಾವಣೆ: ಅಣಕು ಮತದಾನ

ತಾಳಿಕೋಟೆ: ಪಟ್ಟಣದ ಪುರಸಭೆಯ ಚುನಾವಣೆಗೆ ಸಂಬಂದಿಸಿ ಬರಲಿರುವ ದಿ. 29 ರಂದು ಮತದಾನ ಪ್ರಕ್ರೀಯೇಗೆ ಸಂಬಂದಿಸಿ ರವಿವಾರರಂದು ಇವ್ಹಿಎಂ ಮಶಿನಗಳಲ್ಲಿ ಅಭ್ಯರ್ಥಿಗಳ ಭಾವ ಚಿತ್ರ ಮತ್ತು ಚಿನ್ಹೆಗಳನ್ನು ಅಳವಡಿಸುವದರೊಂದಿಗೆ ಅಭ್ಯರ್ಥಿಗಳಿಂದ ಅಣಕು ಮತದಾನ ಮಾಡಲಾಯಿತು. ಪಟ್ಟಣದ ಎಸ್.ಕೆ.ಕಾಲೇಜ್‍ನಲ್ಲಿ ಚುನಾವಣಾಧಿಕಾರಿ ತಾಲೂಕಾ ತಹಸೀಲ್ದಾರ್ ನಿಂಗಪ್ಪ ಬಿರಾದಾರ ಅವರು ಪುರಸಭೆಯ ಚುನಾವಣೆಯಲ್ಲಿ 23 ವಾರ್ಡುಗಳಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಸಭೆಯನ್ನು ನಡೆಸಿದ ಅವರು ಅಭ್ಯರ್ಥಿಗಳ ಸಮ್ಮುಖದಲ್ಲಿ ಇವ್ಹಿಎಂ ಮಷಿನ್ ನಲ್ಲಿ ಅಭ್ಯರ್ಥಿಗಳ ಭಾವಚಿತ್ರ ಮತ್ತು ಚಿನ್ಹೆ ಅಳವಡಿಸಿ ಅವರಿಂದಲೇ ಅಣಕು ಮತದಾನ […]

ಕಂಟ್ರಿ ಪಿಸ್ತೂಲ್ ಸಾಗಾಟ : ವ್ಯಕ್ತಿ ಬಂಧನ

ಕಂಟ್ರಿ ಪಿಸ್ತೂಲ್ ಸಾಗಾಟ : ವ್ಯಕ್ತಿ ಬಂಧನ

ಸಿಂದಗಿ : ಪಟ್ಟಣದಲ್ಲಿ ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಸಾಗಿಸುತ್ತಿದ ತಾಲೂಕಿನ ಚಾಂದಕವಠೆ ಗ್ರಾಮದ ನಿವಾಸಿ ರಮೇಶ ಮೇತ್ರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ತಾಲೂಕಿನ ಆಲಮೇಲ ಮಾರ್ಗವಾಗಿ ಅಕ್ರಮವಾಗಿ ಸಾಗಿಸುತ್ತಿದ್ದ ಬಂಧಿತನಿಂದ ಕಂಟ್ರಿ ಪಿಸ್ತೂಲ್ ಹಾಗು ಎರಡು ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಮಹಾಂತೇಶ ದಾಮಣ್ಣವರ ಮಾರ್ಗದರ್ಶನದಲ್ಲಿ ಪಿಎಸ್ಐ ವೀರಪ್ಪ ಲಟ್ಟಿ ಹಾಗು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. Views: 292

ಪುರಸಭೆ ಮುಖ್ಯಾಧಿಕಾರಿ ಮೇಲೆ ಜೆಡಿಎಸ್ ಮುಖಂಡನಿಂದ ಹಲ್ಲೆ ಆರೋಪ

ಪುರಸಭೆ ಮುಖ್ಯಾಧಿಕಾರಿ ಮೇಲೆ ಜೆಡಿಎಸ್ ಮುಖಂಡನಿಂದ ಹಲ್ಲೆ ಆರೋಪ

ಸಿಂದಗಿ : ತಾಲುಕು ಜೆಡಿಎಸ್ ಮುಖಂಡ ಸಲಿಂ ಜುಮನಾಳ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಸಯ್ಯೀದ್ ಅಹ್ಮದ್ ಶನಿವಾರ ತಹಸೀಲ್ದಾರ ಚನಮಲ್ಲಪ್ಪ ಘಂಟಿ ಅವರಿಗೆ ಮನವಿ ಸಲ್ಲಿಸಿದ ಘಟನೆ ನಡೆದಿದೆ. ಈ ವೇಳೆ ಮುಖ್ಯಾಧಿಕಾರಿ ಸಯ್ಯೀದ್ ಮಾತನಾಡಿ, ಪಟ್ಟಣದ ಬಸವೇಶ್ವರ ಬ್ಯಾಂಕಿನಲ್ಲಿ ಸಚಿವ ಎಂ.ಸಿ.ಮನಗೂಳಿ ಪುತ್ರ ಅಶೋಕ ಮನಗೂಳಿ ಅವರೊಂದಿಗೆ ಸ್ಥಳಿಈಯ ನೀರಿನ ಸಮಸ್ಯೆ ಹಾಗು ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸುತ್ತಿದ್ದ ವೇಳೆ, ಬ್ಯಾಂಕಿಗೆ ಬಂದ ಸ್ಥಳೀಯ ಜೆಡಿಎಸ್ ಮುಖಂಡ, […]

ಮುಳ್ಳುಕಂಟಿ ಹಾಕಿ ಗ್ರಾ.ಪಂ. ಕಚೇರಿಗೆ ಬೀಗ ಜಡಿದ ಗ್ರಾಮಸ್ಥರು

ಮುಳ್ಳುಕಂಟಿ ಹಾಕಿ ಗ್ರಾ.ಪಂ. ಕಚೇರಿಗೆ ಬೀಗ ಜಡಿದ ಗ್ರಾಮಸ್ಥರು

ಸಿಂದಗಿ: ಸಮರ್ಪಕ ಕುಡಿಯುವ ನೀರು ಪೂರೈಸುವ ವಿಚಾರದಲ್ಲಿ ಗ್ರಾಪಂ ಆಡಳಿತ ನಿರ್ಲಕ್ಷ ವಹಿಸಿದೆ ಎಂದು ಆರೋಪಿಸಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕರೂಗಿ ಗ್ರಾಮಸ್ಥರು ಗ್ರಾ. ಪಂ ಗೆ ಮುಳ್ಳುಕಂಟಿ ಹಚ್ಚಿ ಬೀಗ ಜಡಿದು ಪ್ರತಿಭಟಿಸಿದರು. ಚಿಕ್ಕರೂಗಿ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದ್ದರೂ ಗ್ರಾ. ಪಂ ಸದಸ್ಯರು ದಿವ್ಯ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಗ್ರಾಮದ ನಿವಾಸಿಗಳು ಅನೇಕ ಬಾರಿ ಗ್ರಾ. ಪಂ ಸದಸ್ಯರಿಗೆ ಮನವಿ ಮಾಡಿದ್ದರೂ ಯಾವುದೇ ‌ಕ್ರಮಕೈಗೊಳ್ಳುತ್ತಿಲ್ಲ. ಬದಲಾಗಿ ನಾಳೆ…ನಾಡಿದ್ದು ನೀರು ಬರುತ್ತದೆ ಎಂದು ಹಾರಿಕೆ ಉತ್ತರ […]

ಚಡಚಣ ಪಟ್ಟಣದ ಪ್ರಸಿದ್ಧ ಬಟ್ಟೆ ವ್ಯಾಪಾರಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ 80 ಲಕ್ಷ ದೋಚಿದ ಖದಿಮರು

ಚಡಚಣ ಪಟ್ಟಣದ ಪ್ರಸಿದ್ಧ ಬಟ್ಟೆ ವ್ಯಾಪಾರಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ 80 ಲಕ್ಷ  ದೋಚಿದ ಖದಿಮರು

ವಿಜಯಪುರ: ಜಿಲ್ಲೆಯ ಚಡಚಣದ ಪ್ರತಿಷ್ಠಿತ ಜವಳಿ ವ್ಯಾಪಾರಿ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಚಡಚಣ ಪಟ್ಟಣದ ಪ್ರಸಿದ್ಧ ಬಟ್ಟೆ ವ್ಯಾಪಾರಿಯಾದ ಬಾಹುಬಲಿ ಅಜಿತ್ ಕುಮಾರ್ ಮುತ್ತಿನ ಮೇಲೆ ಗುರುವಾರ ತಡ ರಾತ್ರಿ ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ಮಾಡಿದ್ದು ಸ್ಥಿತಿ ಗಂಭೀರವಾಗಿದೆ. ವ್ಯಾಪಾರ ಮುಗಿಸಿಕೊಂಡು ಹಣ ತೆಗೆದುಕೊಂಡು ಬೈಕ್ ಮೇಲೆ ಸಿಬ್ಬಂದಿ ಜೊತೆ ಹೋರಟಾಗ ಮುಖಕ್ಕೆ ಮುಸುಕು ಹಾಕಿಕೊಂಡು ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿ 80 ಲಕ್ಷ ರೂ. ದೋಚಿಗಿ ಪರಾರಿಯಾಗಿದ್ದಾರೆ. ಈ ಕೃತ್ಶ ಕುರಿತು ಚಡಚಣ […]

SSLC ಪರೀಕ್ಷೆಯಲ್ಲಿ ಸರ್ವಜ್ಞ ವಿದ್ಯಾಪೀಠ ಪ್ರೌಢಶಾಲೆ ನೂರಕ್ಕೆ ನೂರರಷ್ಟು ಫಲಿತಾಂಶ

SSLC ಪರೀಕ್ಷೆಯಲ್ಲಿ  ಸರ್ವಜ್ಞ ವಿದ್ಯಾಪೀಠ ಪ್ರೌಢಶಾಲೆ ನೂರಕ್ಕೆ ನೂರರಷ್ಟು ಫಲಿತಾಂಶ

ತಾಳಿಕೋಟೆ:,ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮಾಧ್ಯಮ ಪ್ರೌಢಶಾಲೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸತತ 6ನೇ ಬಾರಿ ಶೇಕಡಾ 100 ಕ್ಕೆ 100 ರಷ್ಟು ಫಲಿತಾಂಶ ಮಾಡಿ ಸಾಧನೆ ಮಾಡಿದೆ. ಪರೀಕ್ಷೆಗೆ ಕುಳಿತ 114 ವಿದ್ಯಾರ್ಥಿಗಳಲ್ಲಿ 114 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 90 ಕಿಂತ ಹೆಚ್ಚು ಅಂಕಗಳನ್ನು 25 ವಿದ್ಯಾರ್ಥಿಗಳು 80 ಕಿಂತ ಹೆಚ್ಚು ಅಂಕಗಳನ್ನು 60 ವಿದ್ಯಾರ್ಥಿಗಳು ಮತ್ತು ಪ್ರಥಮ ಶ್ರೇಣಿಯಲ್ಲಿ 27 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ 2 ಉತ್ತೀರ್ಣರಾಗಿದ್ದಾರೆ. ಚನ್ನಪ್ಪಗೌಡ ಪಾಟೀಲ್ 615 (98.4%),ಪ್ರಥಮ, ಪ್ರಶಾಂತ ಪರಿಟ 611 […]

ಕಳ್ಳನ ಬಂಧನ: ಟ್ರ್ಯಾಕ್ಟರ್, ಬೈಕ್ ಜಪ್ತಿ

ಕಳ್ಳನ ಬಂಧನ: ಟ್ರ್ಯಾಕ್ಟರ್, ಬೈಕ್ ಜಪ್ತಿ

ಇಂಡಿ: ಟ್ರ್ಯಾಕ್ಟರ್, ಬೈಕ್ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಇಂಡಿ ಪೊಲೀಸರು ಬಂಧಿಸಿದ್ದಾರೆ. ಲೋಣಿ ಕೆಡಿ ಗ್ರಾಮದ ಮಹಾದೇವ ಪಾಂಡ್ರೆ(36) ಬಂಧಿತ. ಇಂಡಿ ರೈಲ್ವೆ ನಿಲ್ದಾಣ ಬಳಿ ಪೊಲೀಸರನ್ನು ಕಂಡು ಓಡಿ ಹೋರಟಿದ್ದ ವೇಳೆ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಈತ ಕದ್ದಿದ್ದ ಟ್ಯಾಕ್ಟರ್, ಬೈಕ್ ಹಾಗೂ ಪಂಪ್ ಸೆಟ್ ಮೋಟರ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಇಂಡಿ ಠಾಣೆಯಲ್ಲಿ ದೂರು ದಾಖಲಾಗಿದೆ. Views: 102

ಬಿಜೆಪಿ ಅಭ್ಯರ್ಥಿ ಜಿಗಜಿಣಗಿ ಪರ ಶಾಸಕ ಎ.ಎಸ್.ಪಾಟೀಲ ಮತಯಾಚನೆ

ಬಿಜೆಪಿ ಅಭ್ಯರ್ಥಿ ಜಿಗಜಿಣಗಿ ಪರ  ಶಾಸಕ ಎ.ಎಸ್.ಪಾಟೀಲ ಮತಯಾಚನೆ

ಮುದ್ದೇಬೀಹಾಳ: ವಿಜಯಪುರ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಶಾಸಕ ಎ ಎಸ್ ಪಾಟೀಲ್ (ನಡಹಳ್ಳಿ) ಅವರು ಮುದ್ದೇಬ್ಬಿಹಾಳ ಪಟ್ಟಣದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ನಗರದಲ್ಲಿ ದುರ್ಗಾದೇವಿ ದೇವಸ್ಥಾನ ದಿಂದ ಕುಂಬಾರ ಗಲ್ಲಿ. ವಿರೇಶ ನಗರ ಕಿಲ್ಲಾಗಲ್ಲಿ ವಿವಿಧ ವಾರ್ಡಗಳಲ್ಲಿ ಮನೆ, ಮನೆ ತೆರಳಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರನ್ನು ಹೆಚ್ಚಿನ ಮತಗಳನ್ನು ನೀಡಿ ಆರಿಸಿ ತರುವಂತೆ ಮನವಿ ಮಾಡಿದರು. ಹಾಗೂ ವ್ಯಾಪರಸ್ಥರನ್ನು ಬಿಜೆಪಿಗೆ ಮತ ನೀಡಿ ಮತ್ತೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಿ […]

ಅಕ್ರಮ ಮದ್ಯ ಸಾಗಾಟ: ಒಬ್ಬನ ಬಂಧನ

ಅಕ್ರಮ ಮದ್ಯ ಸಾಗಾಟ: ಒಬ್ಬನ ಬಂಧನ

ಇಂಡಿ: ಬೈಕ್ ಮೇಲೆ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, 34 ಸಾವಿರ ಮೌಲ್ಯದ ಮದ್ಯ ಜಪ್ತಿಮಾಡಿದ್ದಾರೆ. ಇಂಡಿ ತಾಲೂಕಿನ ಅಣಚಿ ಗ್ರಾಮದ ನಿವಾಸಿ ಶಿವಾನಂದ ಖಾನಾಪೂರ ಬಂಧಿತ. ಬೈಕ್ ಮೇಲೆ ಮದ್ಯ ಸಾಗಾಟ ಮಾಡುತ್ತಿದ್ದ ವೇಳೆ ವಿಜಯಪುರ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ವಾಹನ ತಪಾಸಣೆ ವೇಳೆ ಸಿಕ್ಕಿ ಬಿದ್ದಿದ್ದಾನೆ. ಸುಮಾರು 34 ಸಾವಿರ ರೂ. ಮೌಲ್ಯದ 23. 760 ಲೀಟರ್ ಮದ್ಯವನ್ನು ಜಪ್ತಿ ಮಾಡಿದ ಅಧಿಕಾರಿಗಳು ಕೃತ್ಯಕ್ಕೆ ಬಳಸಲಾದ ಬೈಕ್ ವಶಪಡಿಸಿಕೊಂಡಿದ್ದಾರೆ. ಇಂಡಿ […]

1 2 3 48