ಹೆಚ್ಚುವರಿ ಬಸ್ ಗಾಗಿ ವಿದ್ಯಾರ್ಥಿಗಳ ಆಗ್ರಹ: ವ್ಯವಸ್ಥಾಪಕರಿಗೆ ಮನವಿ

ಹೆಚ್ಚುವರಿ ಬಸ್ ಗಾಗಿ ವಿದ್ಯಾರ್ಥಿಗಳ ಆಗ್ರಹ: ವ್ಯವಸ್ಥಾಪಕರಿಗೆ ಮನವಿ

ಮುದ್ದೇಬಿಹಾಳ: ತಾಲೂಕಿನ ಆಲೂರ-ನೆರಬೆಂಚಿ ಗ್ರಾಮದ ಮೂಲಕ ಹೆಚ್ಚುವರಿ ಬಸ್ ಓಡಿಸಬೇಕೆಂದು ಆಗ್ರಹಿಸಿ ಬುಧವಾರ ವಿದ್ಯಾರ್ಥಿಗಳು ಘಟಕ ವ್ಯವಸ್ಥಾಪಕರಿಗೆ ಮನವಿ  ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ಶೇಖಪ್ಪ ಆಲೂರ, ಮಲ್ಲಿಕಾರ್ಜುನ ಬಿರಾದಾರ, ಪ್ರತಿದಿನ ಆಲೂರ ಗ್ರಾಮದಿಂದ ಮುಂಜಾನೆ 8 ಗಂಟೆಗೆ ಬಿಡುವ ಬಸ್ ಆಲೂರ,ಕೇಸಾಪೂರ ಗ್ರಾಮದಲ್ಲಿಯೇ ವಿದ್ಯಾರ್ಥಿಗಳನ್ನು ತುಂಬಿಕೊಂಡು ನೆರಬೆಂಚಿಗೆ ಬರುವಷ್ಟರಲ್ಲಿಯೇ ಬಸ್‍ನಲ್ಲಿ ಕಾಲಿಡಲು ಜಾಗೆ ಇರುವುದಿಲ್ಲ.ಅಲ್ಲದೇ ಟಾಪ್‍ನಲ್ಲೂ ಪ್ರಯಾಣ ಮಾಡಿರುತ್ತಾರೆ. ಇದರಿಂದ ನಾವು ಚಾಲಕರು,ನಿರ್ವಾಹಕರ ಜೊತೆಗೆ ನಿತ್ಯವೂ ವಾದಕ್ಕಿಳಿಯುತ್ತಿದ್ದೇವೆ.ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಇಲ್ಲದ ಕಾರಣ […]

ಮುದ್ದೇಬಿಹಾಳ: ಸಮ್ಮೇಳನ ಯಶಸ್ವಿ, ಗಣ್ಯರಿಗೆ ಹೃದಯಪೂರ್ವಕ ಸನ್ಮಾನ

ಮುದ್ದೇಬಿಹಾಳ: ಸಮ್ಮೇಳನ ಯಶಸ್ವಿ, ಗಣ್ಯರಿಗೆ ಹೃದಯಪೂರ್ವಕ ಸನ್ಮಾನ

ಪತ್ರಕರ್ತರು,ಸಾಹಿತಿಗಳು,ಸಾಧಕರಿಗೆ ಅಭಿನಂದನೆ ಮುದ್ದೇಬಿಹಾಳ : ತಾಲೂಕಿನ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಶ್ರಮಿಸಿದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಸಾಧಕರನ್ನು ಸಮ್ಮೇಳನದ ಸಂಘಟಕರು ಸನ್ಮಾನಿಸಿ ಅಭಿನಂದಿಸಿದರು. ಕುಸ್ತಿಪಟು ರವಿಚಂದ್ರ ಹಡಲಗೇರಿ,ಪ್ರಸೂತಿ ವಿಭಾಗದಲ್ಲಿ ಮಹಾದೇವಿ ಕಾಮನಕೇರಿ,ಕಲಾವಿದ ಎಸ್.ಎಮ್.ನಾಯ್ಕೋಡಿ ,ಮಲ್ಲಿಕಾರ್ಜುನ ಶೆಟ್ಟರ,ಚಂದ್ರಶೇಖರ ಪತ್ತಾರ,ಕುಸ್ತಿ ವಿಭಾಗದಿಂದ ಮಹೇಶ ಪಾಚಂಗೆ,ಕರಾಟೆಯಲ್ಲಿ ಅಪೂರ್ವಾ ಡಮನಾಳ,ಸಮಾಜ ಸೇವೆಯಲ್ಲಿ ಶ್ರೀನಿವಾಸ ಇಲ್ಲೂರ,ಮಲ್ಲಣ್ಣ ಹಡಪದ,ಆಧ್ಯಾತ್ಮ ಕ್ಷೇತ್ರದಲ್ಲಿ ಪರಶುರಾಮ ಚೌಡಕೇರ,ಮಾಧ್ಯಮ ಕ್ಷೇತ್ರದಲ್ಲಿ ಬಸವರಾಜ ಈ. ಕುಂಬಾರ,ಡಿ.ಬಿ.ವಡವಡಗಿ,ಹಣಮಂತ ಬೆಳಗಲ್ಲ,ಸಂಗೀತ ಕ್ಷೇತ್ರದಲ್ಲಿ ವೀರೇಶ ನವಲಿ,ಬಸಯ್ಯ ಮಠಪತಿ,ದೇಶಸೇವೆಯಲ್ಲಿ ಎಸ್.ಆರ್.ಕುಲಕರ್ಣಿ,ಎನ್.ಎ.ಬಿರಾಜ್ದಾರ,ಸಮಾಜ ಸೇವೆಯಲ್ಲಿ ಮಹಾವೀರ […]

ಬೀಜ, ಗೊಬ್ಬರ ನೀಡಲು ಹಿಂದೇಟು: ಕೃಷಿ ಇಲಾಖೆ ಮುತ್ತಿಗೆ ಹಾಕಿದ ರೈತರು

ಬೀಜ, ಗೊಬ್ಬರ ನೀಡಲು ಹಿಂದೇಟು: ಕೃಷಿ ಇಲಾಖೆ ಮುತ್ತಿಗೆ ಹಾಕಿದ ರೈತರು

ಇಂಡಿ: ಪಟ್ಟಣದ ಕೃಷಿ ಇಲಾಖೆ ಅಧಿಕಾರಿಗಳು ಸಕಾಲಕ್ಕೆ  ರೈತರಿಗೆ ಬೀಜ, ಗೊಬ್ಬರ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಕೃಷಿ ಇಲಾಖೆಯಲ್ಲಿ ಏಜೆಂಟ್ ಹಾವಳಿ ಹೆಚ್ಚಿದೆ ಇದರಿಂದ ರೈತರಿಗೆ ಸೌಲಭ್ಯ ದೊರೆಯುತ್ತಿಲ್ಲ ಎಂಬ ಎಂಬ ಆರೋಪ ಕೇಳಿಬಂದಿದೆ. ಕಳೆದ ತಿಂಗಳು ತಾಲೂಕಿನಾದ್ಯಂತ ಉತ್ತಮ ಮೆಳೆಯಾಗಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಬೀಜ ಹಾಗೂ ಗೊಬ್ಬರ ಮುಂತಾದ ಪರಿಕರಗಳನ್ನು ಪಡೆಯಲು ಎಲ್ಲ ಕೆಲಸ ಬಿಟ್ಟು ಕೃಷಿ ಇಲಾಖೆ ಮುಂದೆ ಹಾಜರಿದ್ದರು ಕೂಡ ಸಮಯಕ್ಕೆ ಸರಿಯಾಗಿ ಅಧಿಕಾರಿಗಳು  ಸ್ಪಂದಿಸುತ್ತಿಲ್ಲ. ಬೀಜ, ಗೊಬ್ಬರ […]

ಗುತ್ತಿ ಬಸವಣ್ಣ ನೀರಾವರಿ ಯೋಜನೆ ಕಳಪೆ ಕಾಮಗಾರಿ: ಕೇಳುವವರಿಲ್ಲ ರೈತರ ಗೋಳು..!

ಗುತ್ತಿ ಬಸವಣ್ಣ ನೀರಾವರಿ ಯೋಜನೆ ಕಳಪೆ ಕಾಮಗಾರಿ: ಕೇಳುವವರಿಲ್ಲ ರೈತರ ಗೋಳು..!

ಇಂಡಿ: ಈ ಭಾಗದ ರೈತಾಪಿ ಸಮುದಾಯದ ಜೀವನಾಡಿಯಂತಿರುವ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಕಾಮಗಾರಿಯು ಬಹುತೇಕ ಕೆಳಪೆಯಿಂದ ಕೂಡಿದ್ದು. ಇದಕ್ಕೆ ಉಸ್ತುವಾರರಿಲ್ಲದೇ ನಡೆಯುವ ಕಾಮಗಾರಿಯನ್ನು ಕೃಷ್ಣಾ ಮೇಲ್ದಂಡೆ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದಾ ಮೇಘರಾಜನ ಅವಕೃಪೆ. ಕೈ ಕೊಡುವ ಮುಂಗಾರು, ಹೀಗೆ ಹತ್ತು ಹಲವಾರು ಸಮಸ್ಯೆಗಳ ಮಧ್ಯೆ ಸಂಕಷ್ಟಮಯ ಬದುಕನನು  ಒಡಲಿಗಂಟಿಸಿಕೊಂಡು ಸಂಕಷ್ಟದಲ್ಲಿ ಬದುಕುತ್ತಿರುವ ರೈತರು ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಬಗ್ಗೆ ನೂರಾರು ಹೊಂಗನುಸಗಳನ್ನು ಹೆಣೆದುಕೊಂಡಿದ್ದಾರೆ. ಆದರೆ ಮಂದ […]

ಲಚ್ಯಾಣ ಸಿದ್ಧಲಿಂಗ ಮಹಾರಾಜರ ಚಲನಚಿತ್ರ ನಿರ್ಮಾಣಕ್ಕೆ ಸಂಕಲ್ಪ: ಶಿವಾನಂದ ಶ್ರೀ

ಲಚ್ಯಾಣ ಸಿದ್ಧಲಿಂಗ ಮಹಾರಾಜರ ಚಲನಚಿತ್ರ ನಿರ್ಮಾಣಕ್ಕೆ ಸಂಕಲ್ಪ: ಶಿವಾನಂದ ಶ್ರೀ

ಇಂಡಿ: ಪವಾಡ ಪುರುಷ ಲಿಂಗೈಕ್ಯ ಸಿದ್ಧಲಿಂಗ ಮಹಾರಾಜರ ಜೀವನ ಚರಿತ್ರೆ ಕುರಿತು  ಚಲನಚಿತ್ರ ನಿರ್ಮಿಸಬೇಕು ಎಂಬ,  ಬಹುದಿನಗಳ ಬೇಡಿಕೆ ಈಗ ಸಾಕಾರಗೊಳ್ಳುವ ಕಾಲ ಕೂಡಿಬಂದಿದೆ ಇದೊಂದು ಯೋಗಾಯೋಗ ಎಂದು ಹಳಿಂಗಳಿಯ ಶಿವಾನಂದ ಮಹಾಸ್ವಾಮೀಜಿ ಹೇಳಿದರು. ಇಂಡಿ ತಾಲೂಕಿನ ಸುಕ್ಷೇತ್ರ ಲಚ್ಯಾಣ ಸಿದ್ಧಲಿಂಗ ಮಹಾರಾಜರ ಕಮರಿಮಠದಲ್ಲಿ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು,  ಸಿದ್ಧಲಿಂಗ ಮಹಾರಾಜರ ಜೀವನ ಚರಿತ್ರೆಯ ಕುರಿತು, ಚಲನಚಿತ್ರ ನಿರ್ಮಿಸಲು ಜಮಖಂಡಿಯ ಚಲನಚಿತ್ರ ತಂಡದವರು ಒಪ್ಪಿಗೆ ಸೂಚಿಸಿದ್ದಾರೆ. ಈ ಕಾರ್ಯಕ್ಕೆ ಅತ್ಯಗತ್ಯವಾದ ಆರ್ಥಿಕ ಸಹಾಯಕ್ಕೆ ದಾನಿಗಳು […]

ಅಭಿವೃದ್ದಿ ಕಾಣದ ಇಂಡಿ ರೈಲು ನಿಲ್ದಾಣ: ಪ್ರಯಾಣಿಕರಿಗೆ ಬಯಲೇ ಆಸರೆ

ಅಭಿವೃದ್ದಿ ಕಾಣದ ಇಂಡಿ ರೈಲು ನಿಲ್ದಾಣ: ಪ್ರಯಾಣಿಕರಿಗೆ ಬಯಲೇ ಆಸರೆ

ಇಂಡಿ: ಪಟ್ಟಣದಿಂದ ಆರು ಕಿ.ಮೀ ದೂರದಲ್ಲಿರುವ ಇಂಡಿ ರೈಲು ನಿಲ್ದಾಣ ಗೇಜ್ ಪರಿವರ್ತನೆಯಾಗಿ ಸುಮಾರು ಏಳೆಂಟು ವರ್ಷಗಳು ಗತಿಸಿದರೂ ಇಲ್ಲಿಯವರೆಗೆ ಯಾವುದೇ ಅಭಿವೃದ್ಧಿ ಕಂಡಿಲ್ಲ. ಪ್ರಯಾಣಿಕರಿಗೆ ಬಯಲೇ ಆಸರೆಯಾಗಿದೆ. ಬ್ರಾಡ್‍ಗೇಜ್ ಹೋರಾಟಕ್ಕೆ ಮೂಲ ಪ್ರೇರಣೆ ಆರಂಭವಾಗಿದ್ದೇ. ಇಂಡಿ ರೈಲು ನಿಲ್ದಾಣದಿಂದ ಇಲ್ಲಿನ ಮಾರ್ಗವನ್ನು ಬ್ರಾಡ್ ಗೇಜ್‍ಗೆ ಪರಿವರ್ತಿಸಬೇಕೆಂದು ಹಲವು ಹೊರಾಟದ ಪ್ರತಿಫಲವಾಗಿ  ಸದ್ಯ ಡಬಲ್ ಲೈನವಾಗುತ್ತಿದೆ.  ಆದರೆ ಈಗ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಆಸರೆಗಾಗಿ ಚಾವಣೆಯೇ ಇಲ್ಲ. ಮಳೆಗಾಲವಿರಲಿ, ಬಿಸಿಲಿರಲಿ ಪ್ರಯಾಣಿಕರಿಗೆ ತೊಂದರೆ ತಪ್ಪಿದ್ದಲ್ಲ. ಕಳೆದ ಒಂದು […]

ನೀರಾವರಿ ಇಲಾಖೆ ನಿರ್ಲಕ್ಷ್ಯ: ವಿನಾಶದ ಅಂಚಿನಲ್ಲಿರುವ ಐತಿಹಾಸಿಕ ಕೆರೆ

ನೀರಾವರಿ ಇಲಾಖೆ ನಿರ್ಲಕ್ಷ್ಯ: ವಿನಾಶದ ಅಂಚಿನಲ್ಲಿರುವ ಐತಿಹಾಸಿಕ ಕೆರೆ

ಇಂಡಿ: ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ 60 ವರ್ಷ ಇತಿಹಾಸವಿರುವ ಬಬಲಾದ ಗ್ರಾಮದ ಕೆರೆ ನೀರಿಲ್ಲದೇ ಬೀಕೋ ಎನ್ನುತ್ತಿದ್ದು,  ಜನರು ಹನಿ ನೀರಿಗಾಗಿ ಪರದಾಡುವಂತಾಗಿದೆ. ದಿನನಿತ್ಯ ಗ್ರಾಮಸ್ಥರು ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ. ಕರೆ ಹೊಳೆತ್ತಲು ಅನುದಾನ ಮಂಜೂರಾದರು ಹಣ ದುರುಪಯೋಗ ಪಡೆಸಿಕೊಂಡು ಕೆರೆ ಹೊಳೆತ್ತಲಾಗಿದೆ ಎಂದು ಕಾಗದದಲ್ಲಿ ಮಾತ್ರ ತೋರಿಸಲಾಗಿದೆ. ಕೆರೆ ಸ್ವಚ್ಚತೆ ಕಾಣದೇ ಹಲವಾರು ವರ್ಷಗಳೇ ಕಳೆದಿದೆ. ಹಿಂದೆ ಆರಂಭಗೊಂಡು ಪೂರ್ಣಗೊಳ್ಳದಿರುವ ಕೆರೆಯ ಬಗ್ಗೆ ಇಲ್ಲಿಯವರೆಗೆ ಯಾರೊಬ್ಬರು ಗಮನ ನೀಡಿಲ್ಲ. ಅಲ್ಲದೆ ಕೆರೆಯಲ್ಲಿ ಕನಿಷ್ಟ ಸ್ವಚ್ಚತೆ ಕಾರ್ಯಗಳನ್ನುದ […]

ಪ್ರಸ್ತಕ್ತ ಸಾಲಿನ ಬೆಳೆಗಳ ಸಮೀಕ್ಷೆ ನಡೆಸಿ: ಜಿ ಎಂ ಕುಲಕರ್ಣಿ

ಪ್ರಸ್ತಕ್ತ ಸಾಲಿನ ಬೆಳೆಗಳ ಸಮೀಕ್ಷೆ ನಡೆಸಿ:  ಜಿ ಎಂ ಕುಲಕರ್ಣಿ

ಮುದ್ದೇಬಿಹಾಳ: ತಾಲೂಕಿನ ಪ್ರಸ್ತಕ್ತ ಸಾಲಿನ ಬೆಳೆ ಅಂದಾಜು ಸಮೀಕ್ಷೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆ ಜನನ ಮರಣ ದಾಖಲಾತಿಗಳನ್ನು ಆಯಾ ವ್ಯಾಪ್ತಿಯಲ್ಲಿನ ಅಧಿಕಾರಿಗಳು ನಿಗದಿತ ಅವಧಿಯೊಳಗಾಗಿ ನೊಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಜಿ ಎಂ ಕುಲಕರ್ಣಿ ಅವರು ಹೇಳಿದರು. ಪಟ್ಟಣದ ಇಲ್ಲಿನ ಮಿನಿ ವಿಧಾಣ ಸೌಧ ಸಭಾಭವನದಲ್ಲಿ ಬುಧುವಾರ ಬೆಳೆ ಕಟಾವು ಪ್ರಯೋಗಗಳು, ಜನನ ಮರಣ, ಬೆಳೆ ಕ್ಷೇತ್ರ ಮರು ಬೆಳೆ ಅಂಗಾಜು ಸಮೀಕ್ಷೇ ಕುರಿತು ಕೃಷಿ ಇಲಾಖೆ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳ […]

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಎಲ್‍ಓಗಳ ಒತ್ತಾಯ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಎಲ್‍ಓಗಳ ಒತ್ತಾಯ

ಮುದ್ದೇಬಿಹಾಳ: ಮತದಾರರಿಗೆ ಕೊಡುವ ಗುರುತಿನ ಚೀಟಿಯನ್ನು ವಿತರಿಸುವ ವ್ಯವಸ್ಥೆಯನ್ನು ಸರಳೀಕರಣಗೊಳಿಸಬೇಕು, ಹೊಸದಾಗಿ ಸೇರ್ಪಡೆಯಾದ ಮತದಾರರಿಗೆ ಗುರುತಿನ ಚೀಟಿ ವಿತರಿಸಬೇಕು ಎಂದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ತಾಲೂಕಿನ ಬಿ.ಎಲ್.ಓಗಳು ಶನಿವಾರ ತಹಸೀಲ್ದರ್ ಗೆ ಮನವಿ ಪತ್ರ ಸಲ್ಲಿಸಿದರು. ಬಿಎಲ್ಓ ಎಂ.ಎಸ್.ಗಡೇದ, ಎಂ.ಡಿ.ಅಮರವಾಡಗಿ  ಮಾತನಾಡಿ,  ಬಿಎಲ್‍ಓಗಳಿಗೆ ಸಭೆ ಕರೆದು ಕಾಲಕಾಲಕ್ಕೆ ಬದಲಾದ ಮಾಹಿತಿಯನ್ನು ಒದಗಿಸುವುದು. ಸೇರ್ಪಡೆ ಸಂದರ್ಭದಲ್ಲಿಯೇ ಹೆಸರು ತಪ್ಪಾಗಿ ಸೇರ್ಪಡೆಯಾಗದಂತೆ ನೋಡಿಕೊಳ್ಳುವುದು. ತಿದ್ದುಪಡಿಗೆ ಬಂದ ಅರ್ಜಿಗಳನ್ನು ಸಂಪೂರ್ಣ ದಾಖಲಿಸಿ ಮತದಾರರಿಂದ ಆಗುವ ತೊಂದರೆಯನ್ನು ತಪ್ಪಿಸಬೇಕು. ನಮೂನೆ […]

ಮುದ್ದೇಬಿಹಾಳ: ವ್ಯಕ್ತಿ ಕಾಣೆ

ಮುದ್ದೇಬಿಹಾಳ: ವ್ಯಕ್ತಿ ಕಾಣೆ

ಮುದ್ದೇಬಿಹಾಳ: ಸಂತೆ ಮಾಡಿಕೊಂಡು ಬರುತ್ತೇನೆ ಎಂದು ತಾಲೂಕಿನ ಕಾಳಗಿ ಗ್ರಾಮದಿಂದ ಮುದ್ದೇಬಿಹಾಳ ನಗರಕ್ಕೆ ಬಂದ ವ್ಯಕ್ತಿಯೊಬ್ಬ ಮರಳಿ ಮನೆಗೆ ಬರದೇ ಎಲ್ಲೋ ಕಾಣೆಯಾಗಿದ್ದಾನೆ ಎಂದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಂಗಯ್ಯ ರಾಚಯ್ಯ ಹಿರೇಮಠ(55) ಎಂಬಾತನೇ ಕಾಣೆಯಾದ ವ್ಯಕ್ತಿ. ಮಾ.13 ರಂದೇ ಮನೆ ಬಿಟ್ಟು ಹೋದವ ಇಲ್ಲಿಯವರೆಗೆ ಮನೆಗೆ ಬಂದಿಲ್ಲ ಎಂದು ಕಾಣೆಯಾದ ವ್ಯಕ್ತಿಯ ಪತ್ನಿ ನೀಲಮ್ಮ ಹಿರೇಮಠ ಬುಧವಾರ ಮುದ್ದೇಬಿಹಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಮೀತ ಇಂಗಳಗಾಂವಿhttp://udayanadu.com