ವೈದ್ಯರ ಕೊರತೆ ಖಂಡಿಸಿ ರೋಗಿಗಳಿಂದ ದಿಢೀರ್ ಪ್ರತಿಭಟನೆ

ವೈದ್ಯರ ಕೊರತೆ ಖಂಡಿಸಿ ರೋಗಿಗಳಿಂದ ದಿಢೀರ್ ಪ್ರತಿಭಟನೆ

ಮುದ್ದೇಬಿಹಾಳ: ಪಟ್ಟಣದ 100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಖಂಡಿಸಿ ಅನಾರೋಗ್ಯ ಪೀಡಿತ ಮಕ್ಕಳು,ಮಹಿಳೆಯರು ಹಾಗೂ ಸಂಬಂಧಿಕರು ಶನಿವಾರ ಮಧ್ಯಾಹ್ನ ಆಸ್ಪತ್ರೆಗೆ ಬೀಗ ಜಡಿದು ದಿಢೀರ್ ಪ್ರತಿಭಟನೆ ನಡೆಸಿದರು. ಬೆಳಗ್ಗೆ 9 ಗಂಟೆಯಿಂದಲೇ ಆಸ್ಪತ್ರೆಗೆ  ನೂರಾರು ಜನರು ತಪಾಸಣೆಗೆ ಆಗಮಿಸಿದ್ದರೂ ಒಬ್ಬರು ವೈದ್ಯರು  ಕೂಡ ಲಭ್ಯರಿಲ್ಲ. ನಮ್ಮ ಮಕ್ಕಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ. ದೂರದಿಂದಲೇ ಅನಾರೋಗ್ಯ ಪೀಡಿತ ಮಕ್ಕಳನ್ನು ಇಲ್ಲಿನ ವೈದ್ಯರೊಬ್ಬರು ದೂರದಿಂದಲೇ ನಿಂತು ಪರೀಕ್ಷೆ ಮಾಡುತ್ತಾರೆ. ಮುಟ್ಟಲು ಹೋಗುವುದಿಲ್ಲ. ಇಂತಹ ವೈದ್ಯರು ನಮಗೆ ಬೇಡ […]

ದಲಿತರ ಮೇಲೆ ಹಲ್ಲೆ ಖಂಡಿಸಿ ಮುದ್ದೇಬಿಹಾಳದಲ್ಲಿ ಪ್ರತಿಭಟನೆ

ದಲಿತರ ಮೇಲೆ ಹಲ್ಲೆ ಖಂಡಿಸಿ ಮುದ್ದೇಬಿಹಾಳದಲ್ಲಿ ಪ್ರತಿಭಟನೆ

ಮುದ್ದೇಬಿಹಾಳ:  ಮಹಾರಾಷ್ಟ್ರ ರಾಜ್ಯದ ಲಾತೂರ್ ಜಿಲ್ಲೆಯಲ್ಲಿ ದಲಿತ ಕುಟುಂಬದವರು ಹನುಮಾನ ದೇವಾಲಯವೊಂದರಲ್ಲಿ ದೇವರ ದರ್ಶನ ಮಾಡಿಕೊಂಡಿದ್ದನ್ನೇ ಮುಂದಿಟ್ಟುಕೊಂಡು ದಲಿತ ಕುಟುಂಬದ ಮೇಲೆ ದೌರ್ಜನ್ಯ ನಡೆಸಿರುವ ಘಟನೆ ಖಂಡಿಸಿ ಪಟ್ಟಣದಲ್ಲಿ ವಿವಿಧ ದಲಿತಪರ ಸಂಘಟನೆಗಳು  ಗುರುವಾರ ಪ್ರತಿಭಟನೆ ನಡೆಸಿದರು. ದಲಿತರ ಮೇಲೆ ಹಲ್ಲೆ ನಡೆಸಿರುವ ಘಟನೆ ಖಂಡಿಸಿ ಮಾದಿಗ ದಂಡೋರ ಯುವ ಸೇನೆ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ವಿವಿಧ ದಲಿತಪರ ಸಂಘಟನೆ ವತಿಯಿಂದ ಪಟ್ಟಣದ ಅಂಬೇಡ್ಕರ್ ವೃತ ಹಾಗೂ ಬಸವೇಶ್ವರ ಸರ್ಕಲ್ ಪ್ರಮುಖ ಬೀದಿಗಳಲ್ಲಿ […]

ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ: ಶಾಸಕ ನಡಹಳ್ಳಿ ಅಧಿಕಾರಿಗಳಿಗೆ ಸೂಚನೆ

ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ:  ಶಾಸಕ ನಡಹಳ್ಳಿ ಅಧಿಕಾರಿಗಳಿಗೆ ಸೂಚನೆ

ಮುದ್ದೇಬಿಹಾಳ: ಮುಂಗಾರು ಹಂಗಾಮು ಆರಂಭಗೊಂಡಿದ್ದು, ಸಕಾಲಕ್ಕೆ ಮಳೆಯೂ ಆಗುತ್ತಿದೆ. ರೈತರಿಗೆ  ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಒದಗಿಸುವಂತೆ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಕೃಷಿ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,  ಕಳಪೆ ಗುಣಮಟ್ಟದ ಬೀಜ ರಸಗೊಬ್ಬರ ಪೂರೈಸಿದ್ದು, ನಿಗದಿತ ಬೆಲೆಗೆ ಬಿಟ್ಟು ಹೆಚ್ಚಿನ ಬೆಲೆ ಆಕರಿಸಿದ್ದೇ ಆದಲ್ಲಿ ಸಂಬಂಧಿಸಿದ ಅಂಗಡಿಕಾರರ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸಬೇಕು ಎಂದು ಶಾಸಕರು ತಿಳಿಸಿದರು. ರೈತರಿಗೆ ಕಾಲಕಾಲಕ್ಕೆ ಕೃಷಿ […]

ಮರಗಳನ್ನು ಮಕ್ಕಳಂತೆ ಬೆಳೆಸಿ, ಪೋಷಿಸಿ: ಶಾಸಕ ನಡಹಳ್ಳಿ

ಮರಗಳನ್ನು ಮಕ್ಕಳಂತೆ ಬೆಳೆಸಿ, ಪೋಷಿಸಿ:  ಶಾಸಕ ನಡಹಳ್ಳಿ

ಮುದ್ದೇಬಿಹಾಳ: ಪರಿಸರದ ಉಳಿವಿಗೆ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಸಲಹುವಂತೆ ಮರಗಳನ್ನು ಪೋಷಣೆ ಮಾಡಬೇಕು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು. ಪಟ್ಟಣದ ಹುಡ್ಕೋದ ಉದ್ಯಾನವನದಲ್ಲಿ ಮಂಗಳವಾರ ಹಸಿರು ತೋರಣ ಗೆಳೆಯರ ಬಳಗ,ಪುರಸಭೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ  ಹಮ್ಮಿಕೊಳ್ಳಲಾಗಿದ್ದ  ಪರಿಸರ ಮಿತ್ರ ಪ್ರಶಸ್ತಿ ಪ್ರದಾನ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಲೆಗಳಲ್ಲಿರುವ, ಮನೆಗಳಲ್ಲಿರುವ ಪ್ರತಿ ಮಕ್ಕಳು, ಶಿಕ್ಷಕರು ತಮ್ಮ ಹೆಸರಿನಲ್ಲಿ ಒಂದೊಂದು ಸಸಿಗಳನ್ನು ನೆಟ್ಟು ಬೆಳೆಸಬೇಕು. ಅರಣ್ಯ ಇಲಾಖೆಯವರು […]

ಸಿಂದಗಿ: ಬಾಲಕಿ ಜ್ಯೋತಿ ಹತ್ಯೆ ಖಂಡಿಸಿ ಎಬಿವಿಪಿ ಪ್ರತಿಭಟನೆ

ಸಿಂದಗಿ: ಬಾಲಕಿ ಜ್ಯೋತಿ ಹತ್ಯೆ ಖಂಡಿಸಿ ಎಬಿವಿಪಿ ಪ್ರತಿಭಟನೆ

ಸಿಂದಗಿ: ಬಾಲಕಿ ಜ್ಯೋತಿ ಕೋರಿ ಹತ್ಯೆಯನ್ನು  ಖಂಡಿಸಿ ಸಿಂದಗಿ ತಾಲೂಕು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ನೂರಾರು ವಿದ್ಯಾರ್ಥಿಗಳು ಬಸವೇಶ್ವರ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಕೆಲಕಾಲ ರಸ್ತೆ ತಡೆ ನಡೆಸಿ  ತಹಸೀಲ್ದಾರ ಡಿ.ಎಸ್.ಜಮಾದಾರ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಬಿವಿಪಿ ಮುಖಂಡ ಭಾಗಣ್ಣ ಹೂಗಾರ ಮಾತನಾಡಿ, ಇದೊಂದು ಕೆಟ್ಟ ಘಟನೆ.  ಜ್ಯೋತಿ ನಮ್ಮ ಸಹೋದರಿ. ಆಕೆಯ ಸಾವಿಗೆ ನ್ಯಾಯ ಕೇಳುತ್ತಿದ್ದೇವೆ. ಸರಕಾರ ಹಾಗೂ ಆಡಳಿತ ಮತ್ತು ಅಧಿಕಾರಿಗಳ ಅಪ್ರಾಮಾಣಿಕತೆಯಿಂದಾಗಿ ಸೂಕ್ತ ಭದ್ರತೆಗಳಿಲ್ಲದೇ ದುಷ್ಕರ್ಮಿಗಳ ಕೃತ್ಯಕ್ಕೆ ಈ ಹಿಂದೆ ದಾನಮ್ಮಳಂತೆ […]

ಕಾಣೆಯಾಗಿದ್ದ ಬಾಲಕಿ ಶವವಾಗಿ ಪತ್ತೆ: ಪೊಲೀಸರ ವಿರುದ್ಧ ಆಕ್ರೋಶ

ಕಾಣೆಯಾಗಿದ್ದ ಬಾಲಕಿ ಶವವಾಗಿ ಪತ್ತೆ: ಪೊಲೀಸರ ವಿರುದ್ಧ ಆಕ್ರೋಶ

ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ವಿದ್ಯಾನಗರದ ಬಳಿಯ ಕೈಗಾರಿಕಾ ವಲಯದ ಖಾಲಿ ನಿವೇಶನದಲ್ಲಿ ಕಾಣೆಯಾಗಿದ್ದ 8 ವರ್ಷದ ಬಾಲಕಿಯೊಬ್ಬಳು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ. ಮಂಗಳವಾರ ಮಧ್ಯಾಹ್ನ ತನ್ನ ಸಾಕು ಕುರಿಗಳನ್ನು ಕಾಯುತ್ತಿದ್ದ ಬಾಲಕಿ ಜ್ಯೋತಿ ಕೋರಿ(8) ಕಾಣೆಯಾಗಿದ್ದಳು ಎಂದು ಪಾಲಕರು ಸಿಂದಗಿ ಪೊಲೀಸರಿಗೆ ದೂರು ಕೊಡಲು ಹೋಗಿದ್ದರು. ಆದರೆ ಪಾಲಕರ ದೂರು ಪಡೆಯದ ಪೊಲೀಸರು ಕಳೆದು ಹೋದ ಬಾಲಕಿಯನ್ನು ಹುಡುಕುವುದಾಗಿ ಹೇಳಿ ಕಳುಹಿಸುವ ಮೂಲಕ ತಮ್ಮ ಪಿರ್ಯಾದಿಗೆ ಸ್ಪಂಧಿಸಲಿಲ್ಲ ಎಂಬುದು ಪಾಲಕರ […]

ಪರಿಸರಕ್ಕೆ ಮಾರಕ ಪ್ಲಾಸ್ಟಿಕ್ ಕ್ಯಾರಿ ಬ್ಯಾಗಗಳ ನಿಷೇಧಕ್ಕೆ ಆಗ್ರಹ

ಪರಿಸರಕ್ಕೆ ಮಾರಕ ಪ್ಲಾಸ್ಟಿಕ್ ಕ್ಯಾರಿ ಬ್ಯಾಗಗಳ ನಿಷೇಧಕ್ಕೆ ಆಗ್ರಹ

ಮುದ್ದೇಬಿಹಾಳ : ಪ್ಲಾಸ್ಟಿಕ್ ಕ್ಯಾರಿ ಬ್ಯಾಗಗಳನ್ನು ಕಡ್ಡಾಯವಾಗಿ ನಿಷೇಧಿಸಿ ಸ್ವಚ್ಛ ಹಾಗೂ ಸುಂದರ ಮುದ್ದೇಬಿಹಾಳಕ್ಕೆ ಆದ್ಯತೆ ನೀಡಬೇಕೆಂದು ಆಗ್ರಹಿಸಿ ಪಟ್ಟಣದ ಹಸಿರು ತೋರಣ ಗೆಳೆಯರ ಬಳಗದ ಸದಸ್ಯರು ಹಾಗೂ ಪರಿಸರ ಸ್ನೇಹಿ ಸಮಾನ ಮನಸ್ಕರು ಪುರಸಭೆ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ ಅವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು. ಪಟ್ಟಣದ ಪುರಸಭೆ ಕಛೇರಿಗೆ ಆಗಮಿಸಿದ ಬಳಗದ ಸದಸ್ಯರು ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಕೆ.ಆರ್.ಕಾಮಟೆ ಮಾತನಾಡಿ, ಪ್ಲಾಸ್ಟಿಕ್ ಕ್ಯಾರಿ ಬ್ಯಾಗಗಳನ್ನು ಜನತೆ […]

ಮತದಾರರ ನಿರ್ಧಾರಕ್ಕೆ ನೊಂದು ಕಣ್ಣೀರು ಸುರಿಸಿದ ಮಂಗಳಾದೇವಿ

ಮತದಾರರ ನಿರ್ಧಾರಕ್ಕೆ ನೊಂದು ಕಣ್ಣೀರು ಸುರಿಸಿದ ಮಂಗಳಾದೇವಿ

ಹಣದ ಹೊಳೆಯಿಂದ ಬಿಜೆಪಿ ಅಭ್ಯರ್ಥಿ ಗೆಲುವು ಮಂಗಳಾದೇವಿ ಆರೋಪ ಮುದ್ದೇಬಿಹಾಳ: ಒಂದು ತಿಂಗಳ ಅಂತರದಲ್ಲಿ ಹಣವನ್ನು ಚೆಲ್ಲಿ ಕ್ಷೇತ್ರವನ್ನು ಬಿಜೆಪಿ ಅಭ್ಯರ್ಥಿ ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾರೆ ಎಂದರೆ ಮತಕ್ಷೇತ್ರದ ಮತದಾರರ ನಿರ್ಧಾರ ಗಮನಿಸಿ ನನಗೆ ವಿಷಾಧವೆನಿಸಿದೆ ಎಂದು ಜೆಡಿಎಸ್ ಅಭ್ಯರ್ಥಿ ಮಂಗಳಾದೇವಿ ಬಿರಾದಾರ ಅಸಮಧಾನ ವ್ಯಕ್ತಪಡಿಸಿದ ಕಣ್ಣೀರು ಸುರಿಸಿದರು. ಪಟ್ಟಣದ ತಮ್ಮ ನಿವಾಸದಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಫಲಿತಾಂಶದ ಕುರಿತು ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಯುವ ಜನತೆ ದುಡ್ಡಿನ ಹೊಳೆಯಲ್ಲಿ ಮಿಂದಿದ್ದಾರೆ.ಈಗ ಆಯ್ಕೆಯಾಗಿರುವ ಅಭ್ಯರ್ಥಿಯಿಂದ […]

ಮುದ್ದೇಬಿಹಾಳ: ದಾಖಲೆಯಿಲ್ಲದ 3.96 ಲಕ್ಷ ಹಣ ಜಪ್ತಿ

ಮುದ್ದೇಬಿಹಾಳ: ದಾಖಲೆಯಿಲ್ಲದ 3.96 ಲಕ್ಷ ಹಣ ಜಪ್ತಿ

ಮುದ್ದೇಬಿಹಾಳ: ಇಲ್ಲಿನ ಮಾರುತಿ ನಗರದಲ್ಲಿ ದಾಖಲೆಯಿಲ್ಲದೇ 3.96 ಲಕ್ಷ ರೂ ಗಳನ್ನು ಶುಕ್ರವಾರ ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.  ಬಸವರಾಜ ಪಾಟೀಲ ಹಾಗೂ ಪ್ರವೀಣ ಚಿನಿವಾರ ಎಂಬಿಬ್ಬರು ಬೈಕ ಮೇಲೆ ಹಣ ಸಾಗಿಸುತ್ತಿದ್ದಾಗ ಪೊಲೀಸರು ಹಾಗೂ ಚುನಾವಣೆ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ತೆಗೆದುಕೊಂಡಿದ್ದಾರೆ.  ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.  Munna Bagwanhttp://udayanadu.com

ಅಂತಿಮ ತೀರ್ಪಿಗೆ ಮತದಾರರು ಸಜ್ಜು…ಮತಗಟ್ಟೆಯತ್ತ ಚುನಾವಣಾ ಸಿಬ್ಬಂದಿ ಪಯಣ

ಅಂತಿಮ ತೀರ್ಪಿಗೆ ಮತದಾರರು ಸಜ್ಜು…ಮತಗಟ್ಟೆಯತ್ತ ಚುನಾವಣಾ ಸಿಬ್ಬಂದಿ ಪಯಣ

ಮುದ್ದೇಬಿಹಾಳ : ವಿಧಾನಸಭಾ ಚುನಾವಣೆಯ ಅಂತಿಮ ಘಟ್ಟವಾದ ಮತದಾನ ಪ್ರಕ್ರಿಯೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುವ ಚುನಾವಣಾ ಅಧಿಕಾರಿಗಳು ಮತಗಟ್ಟೆಗಳಿಗೆ ನಿಯೋಜನೆಯಾದ ಸಿಬ್ಬಂದಿಗೆ ಮತದಾನ ಸಾಮಗ್ರಿಯನ್ನು ವಿತರಣೆ ಮಾಡುವ ಮೂಲಕ ಮತದಾನ ಪ್ರಕ್ರಿಯೆಗೆ ಸಿದ್ಧಗೊಂಡಿದ್ದಾರೆ. ಪಟ್ಟಣದ ಎಂಜಿವಿಸಿ ಕಾಲೇಜಿನಲ್ಲಿ ಸ್ಟ್ರಾಂಗ್ ರೂಂನಿಂದ ಮತಕ್ಷೇತ್ರದ 239 ಮತಗಟ್ಟೆಗಳಿಗೆ ಮತದಾನದ ಸಾಮಗ್ರಿಯಾದ ಇವಿಎಂ ಯಂತ್ರ,ವಿವಿ ಪ್ಯಾಟ್ ಮಷೀನ್ ಹಾಗೂ ಸ್ಟೇಷನರಿ ಸಾಮಗ್ರಿಯನ್ನು ಸೆಕ್ಟರ್ ಅಧಿಕಾರಿಗಳು ಆಯಾ ಮತಗಟ್ಟೆಯ ಸಾಮಗ್ರಿಯನ್ನು ವಿತರಿಸಿದರು. ಬೆಳಗ್ಗೆಯಿಂದಲೇ ಎಂಜಿವಿಸಿ ಕಾಲೇಜಿನಲ್ಲಿ ಚುನಾವಣೆಗೆ ನಿಯೋಜನೆಯಾದ ಸಿಬ್ಬಂದಿ ತಮ್ಮ ಮತಗಟ್ಟೆ […]