ಬಸವನ ಬಾಗೇವಾಡಿ: ವಾಹನ ಪಲ್ಟಿ 30 ಕುರಿಗಳು ಸಾವು, ಇಬ್ಬರಿಗೆ ಗಾಯ

ಬಸವನ ಬಾಗೇವಾಡಿ: ವಾಹನ ಪಲ್ಟಿ 30 ಕುರಿಗಳು ಸಾವು, ಇಬ್ಬರಿಗೆ ಗಾಯ

ವಿಜಯಪುರ: ಬಸವನ ಬಾಗೇವಾಡಿ ಸಮೀಪದ ಯರನಾಳ ಗ್ರಾಮ ಬಳಿ ವಾಹನವೊಂದು ಪಲ್ಟಿಯಾಗಿ ಮುವತ್ತು ಕುರಿಗಳು ಮೃತಪಟ್ಟು  ವಾಹನದಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ.  ಮಹಿಂದ್ರ 407 ವಾಹನದಲ್ಲಿ ಕುರಿಗಳು ಸಾಗಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಬಾಲು ಬಂಡಿವಡ್ಡರಗೆ ಸೇರಿದ ಈ ಕುರಿಗಳನ್ನು  ಅಥಣಿಯಿಂದ ನಾಗೂರಕ್ಕೆ ವ್ಯಾಪಾರಕ್ಕಾಗಿ ಸಾಗಾಟ ಮಾಡುವ ವೇಳೆ ಈ  ಘಟನೆ ನಡೆದಿದೆ. ಗಾಯಾಳುಗಳಿಗೆ ಮನಗೂಳಿ ಪ್ರಾಥಮಿಕ ಆರೊಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಮನಗೂಳಿ ಠಾಣೆ ಪೊಲೀಸರ ಪ್ರಕರಣ ದಾಖಲಿಸಿಕೊಂಡಿದ್ದಾರೆ. udayanadu2016

ಮೌಲ್ಯಮಾಪಕರ ಅವಾಂತರ, ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗೆ ಕಡಿಮೆ ಅಂಕ

ಮೌಲ್ಯಮಾಪಕರ ಅವಾಂತರ, ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗೆ ಕಡಿಮೆ ಅಂಕ

  ಮುದ್ದೇಬಿಹಾಳ: ಇತ್ತೀಚಿಗೆ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮುದ್ದೇಬಿಹಾಳ ಪಟ್ಟಣದ  ವಿದ್ಯಾರ್ಥಿ ಯೊಬ್ಬನಿಗೆ ಮೌಲ್ಯಮಾಪಕರು ಉತ್ತರ ಪತ್ರಿಕೆಯನ್ನು ಸರಿಯಾಗಿ ಮೌಲ್ಯಮಾಪನ ಮಾಡದೇ ಕಡಿಮೆ ಅಂಕ ನೀಡಿದ ಘಟನೆ ತಡವಾಗಿ ಬಳಕಿಗೆ ಬಂದಿದೆ. ಸಂಗಮೇಶ್ವರ ನಗರದ ನಿವಾಸಿ ಮಹಾವೀರ ದೊಡಮನಿ ಕಲಬುರಗಿ ಜಿಲ್ಲೆಯ ನವನಿಹಾಳ ಗ್ರಾಮದ ಸತ್ಯಸಾಯಿ ಸರಸ್ವತಿ ಬಾಯ್ಸ್ ಹೈಸ್ಕೂಲ್‍ನಲ್ಲಿ ಈ ಸಾಲಿನ ಎಸ್‍ಎಸ್‍ಎಲ್‍ಸಿಯಲ್ಲಿ ಪರೀಕ್ಷೆ ಬರೆದಿದ್ದ. ಈತನ ನೋಂದಣಿ ಸಂಖ್ಯೆ 20170796260 ಆಗಿದ್ದು,  ಒಟ್ಟು 577 ಅಂಕ ಲಭಿಸಿ ಡಿಸಿಂಕ್ಷನ್‍ನಲ್ಲಿ ಪಾಸಾಗಿದ್ದಾನೆ.ಆದರೆ ಈತ ತಾನು ಬರೆದಿರುವ ಉತ್ತರಕ್ಕೆ ಸರಿಯಾದ […]

ಹೊಸ ಚಿತ್ರಪ್ರದರ್ಶನ : ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ

ಹೊಸ ಚಿತ್ರಪ್ರದರ್ಶನ : ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ

ಮುದ್ದೇಬಿಹಾಳ : ವಿಭಿನ್ನ ಆಲೋಚನೆಯನ್ನು ಹೊಂದಿರುವ ವಿಶೇಷ ಚಿತ್ರವನ್ನು ಮಕ್ಕಳಿಗಾಗಿಯೇ ನಿರ್ಮಿಸಿರುವ ಚಿತ್ರ ಎಳೆಯರು ನಾವು ಗೆಳೆಯರು ಚಿತ್ರವಾಗಿದ್ದು ಹಿರಿಯರು ಮಹಿಳೆಯರು ಸೇರಿಕೊಂಡು ಕೂತು ನೋಡಬಹುದಾದ ಚಿತ್ರವಾಗಿದೆ ಎಂದು ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು. ಪಟ್ಟಣದ ಗಿರಿಜಾ ಶಂಕರ ಚಿತ್ರಮಂದಿರದಲ್ಲಿ ನಿರ್ದೇಶಕ ವಿಕ್ರಂ ಸೂರಿ ಹಾಗೂ ನಿರ್ಮಾಕರಾದ ನಾಗರಾಜ ಗೋಪಾಲ ನೇತೃತ್ವದಲ್ಲಿ ಡ್ರಾಮಾ ಜ್ಯೂನಿಯರ್ಸ್ ಕಲಾವಿದರನ್ನು ಒಳಗೊಂಡು ನಿರ್ಮಿಸಲಾದ ‘ಎಳೆಯರು ನಾವು ಗೆಳೆಯರು ಚಿತ್ರದ ಬಿಡುಗಡೆ ನಿಮಿತ್ಯ ಬಡ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಹಾಗೂ ನೋಟ್‍ಪುಸ್ತಕ […]

ಮುದ್ದೇಬಿಹಾಳ: ಶುದ್ದ ಕುಡಿಯುವ ನೀರು ಪೂರೈಕೆಗೆ ಆಗ್ರಹ

ಮುದ್ದೇಬಿಹಾಳ: ಶುದ್ದ ಕುಡಿಯುವ ನೀರು ಪೂರೈಕೆಗೆ ಆಗ್ರಹ

ಮುದ್ದೇಬಿಹಾಳ: ಪಟ್ಟಣಕ್ಕೆ ಸರಬರಾಜು ಮಾಡುವ ಕುಡಿವ ನೀರು ಕೆಲವು ಕಡೆ ಕುಡಿಯಲು ಯೋಗ್ಯವಲ್ಲ ಎಂದು ವೈದ್ಯರು ತಿಳಿಸಿದ್ದರು ಪುರಸಭೆಯ ಅಧಿಕಾರಿಗಳು ಯೋಗ್ಯವಲ್ಲದ ನೀರನ್ನು ಪೂರೈಸುತ್ತಿದ್ದಾರೆ ಎಂದು ಪುರಸಭೆ ಸ್ಥಾಯಿ ಸಮಿತಿ  ಸದಸ್ಯ ಮಹಿಬೂಬ ಗೊಳಸಂಗಿ ಆರೋಪಿಸಿದರು. ಪುರಸಭೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ತಾಲೂಕಾ ಆರೋಗ್ಯ ಇಲಾಖೆಯಿಂದ ಪಟ್ಟಣದ ವಿವಿಧ ಕಡೆಗಳಲ್ಲಿನ ಮಿನಿ ವಾಟರ್ ಟ್ಯಾಂಕ್‍ನ ನೀರನ್ನು ಸಂಗ್ರಹಿಸಿ ತಪಾಸಣೆಗೆ ಕಳುಹಿಸಿಲಾಗಿದ್ದು,  ಕುಡಿಯಲು ಯೋಗ್ಯವಲ್ಲ  ಎಂದು ಅಧಿಕಾರಿಗಳು ತಿಳಿಸಿದರು. ಅದರಂತೆ ಮೇ 24 ರಂದು ಆರೋಗ್ಯ ಇಲಾಖೆಯಿಂದ ಪುರಸಭೆಯ ಆರೋಗ್ಯ […]

ಮುದ್ದೇಬಿಹಾಳ: ಬಿಜೆಪಿ ಕಾರ್ಯಕರ್ತರಿಂದ ಸ್ವಚ್ಚತಾ ಅಭಿಯಾನ

ಮುದ್ದೇಬಿಹಾಳ: ಬಿಜೆಪಿ ಕಾರ್ಯಕರ್ತರಿಂದ ಸ್ವಚ್ಚತಾ ಅಭಿಯಾನ

ಮುದ್ದೇಬಿಹಾಳ:  ಪಟ್ಟಣದ ಬಸವೇಶ್ವರ ವೃತ್ತದಿಂದ ಗ್ರಾಮದೇವತೆ ದ್ಯಾನವ್ವನ ದೇವಸ್ಥಾನದವರೆ ಸ್ವಚ್ಚ ಭಾರತ ಅಭಿಯಾನದಡಿ ರವಿವಾರ ಬಿಜೆಪಿ ಕಾರ್ಯಕರ್ತರಿಂದ ಸ್ವಚ್ಚತಾ ಅಭಿಯಾನ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುದ್ದೇಬ್ಬಿಹಾಳ ಘಟಕದ ಅಧ್ಯಕ್ಷ ಎಮ್ ಡಿ ಕುಂಬಾರ,   ಹಿರಿಯ ಮುಖಂಡ ಶಿವಶಂಕರಗೌಡ ಹಿರೇಗೌಡ, ಪರಶುರಾಮಜೀ ಪವಾರ, ಶಾಂತಗೌಡ ಬಿರಾದಾರ, ಇಕ್ಬಾಲ್ ಮುಲಿಮನಿ, ನದಿಮ ಕಡು, ದೇವೇಂದ್ರ ವಾಲೀಕಾರ, ಮಹೇಶ ವಿಸ್ತಾರಕ ಇತರರು ಇದ್ದರು. udayanadu2016

ವಿಜಯಪುರ: ಮುಸುಕುಧಾರಿ ಯುವಕರಿಂದ ಮಹಿಳೆ ಮೇಲೆ ಫೈರಿಂಗ್

ವಿಜಯಪುರ: ಮುಸುಕುಧಾರಿ ಯುವಕರಿಂದ ಮಹಿಳೆ ಮೇಲೆ ಫೈರಿಂಗ್

ವಿಜಯಪುರ:  ಇಂಡಿ ತಾಲೂಕಿನ ಮಣಂಕಲಗಿ‌ ಗ್ರಾಮದಲ್ಲಿ  ಮುಸುಕುಧಾರಿ ಯುವಕರು ಒಂಟಿ ಮಹಿಳೆ ಮೇಲೆ  ಗುಂಡು ಹಾರಿಸಿದ ಪರಾರಿಯಾದ ಘಟನೆ  ಶನಿವಾರ ತಡರಾತ್ರಿ ನಡೆದಿದೆ. ಶೀಲವಂತಬಾಯಿ  ಕೋಳಿ(58) ಗಾಯಾಳು. ಮನೆಯಲ್ಲಿ ಏಕಾಂಗಿಯಾಗಿದ್ದಾಗ ಘಟನೆ ನಡೆದಿದ್ದು, ಮಹಿಳೆ ಕಾಲಿಗೆ ಎರಡು ಗುಂಡು ತಗಲಿದ್ದು,ಅಪಾಯದಿಂದ ಪಾರಾಗಿದ್ದಾರೆ.  ಗಾಯಳವನ್ನು ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗದೆ. ಪೊಲೀಸರು ತನಿಖಾ ಕಾರ್ಯ ಕೈಗೊಂಡಿದ್ದಾರೆ. udayanadu2016

ಮಾಜಿ ಶಾಸಕ ರಾಮಣ್ಣ ಕಲೂತಿ ಇನ್ನಿಲ್ಲ

ಬಾಗಲಕೋಟೆ: ಜಮಖಂಡಿ ಕ್ಷೇತ್ರದ ಮಾಜಿ ಶಾಸಕ ರಾಮಣ್ಣ ಕಲೂತಿ (75) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 1989 ರಿಂದ 2004 ರವರೆಗೆ ಮೂರು ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದ ರಾಮಣ್ಣ, ಸಾಮಾಜಿಕ ಕೆಲಸಗಳಿಂದ ಜನಾನುರಾಗಿಯಾಗಿದ್ದರು.  ರಾಮಣ್ಣ ಅವರು ಪತ್ನಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ. ಮಂಗಳವಾರ ಸಂಜೆ ಜಮಖಂಡಿ ಪಟ್ಟಣದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. udayanadu2016

1 39 40 41