ಗೃಹಿಣಿ ಸಾವು: ಮಹಿಳೆಯ ಕುಟುಂಬಸ್ಥರಿಂದ ಪತಿಯ ಮೇಲೆ ಕೊಲೆ ಆರೋಪ

ಗೃಹಿಣಿ ಸಾವು: ಮಹಿಳೆಯ ಕುಟುಂಬಸ್ಥರಿಂದ ಪತಿಯ ಮೇಲೆ ಕೊಲೆ ಆರೋಪ

ಮಧುಗಿರಿ:ಪತ್ನಿಯನ್ನು ಪತಿಯೇ ಕುತ್ತಿಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾರೆಂದು ಆರೋಪಿಸಿ ಪತಿಯ ಮನೆಯ ಮುಂದೆ ಮೃತ ಮಹಿಳೆಯ ಕುಟುಂಬಸ್ಥರು ನ್ಯಾಯ ದೊರಕಿಸಿ ಕೊಡುವಂತೆ ಪೋಲೀಸರನ್ನು ಒತ್ತಾಯಿಸಿದರು. ಪಟ್ಟಣದ ದೊಡ್ಡಪೇಟೆಯ ವಾಸಿ ಜಮೀರ್ ಸಿರಾ ಪಟ್ಟಣದ ವಾಸಿ ಜಿಲಾನಿ ಬಾನು (28) ಳ ಜೊತೆ 9 ವರ್ಷಗಳ ಹಿಂದೆಯೆ ವಿವಾಹವಾಗಿದ್ದ. ಆಗಾಗ ಇಬ್ಬರ ನಡುವೆ ಗಲಾಟೆ ನಡೆದು ಹಣ ತರುವಂತೆ ಪತಿ ಮತ್ತು ಆತನ ಕುಟುಂಬದವರು ಒತ್ತಾಯಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಮೂರು ದಿನಗಳ ಹಿಂದಯಷ್ಟೆ ತನ್ನ ತವರು ಮನೆ […]

ಫೆ. 1 ರಿಂದ ಮಧುಗಿರಿಯಲ್ಲಿ ನಂದಿನಿ ಹಾಲಿನ ದರ 1.5 ರೂ ಹೆಚ್ಚಳ: ಚಂದ್ರಶೇಖರ್ ಕೊಂಡವಾಡಿ

ಫೆ. 1 ರಿಂದ ಮಧುಗಿರಿಯಲ್ಲಿ ನಂದಿನಿ ಹಾಲಿನ ದರ 1.5 ರೂ ಹೆಚ್ಚಳ: ಚಂದ್ರಶೇಖರ್ ಕೊಂಡವಾಡಿ

ಮಧುಗಿರಿ: ಫೆ.1 ರಿಂದ ನಂದಿನಿ ಹಾಲಿನ ದರವನ್ನು 1.5 ರೂಗಳಿಗೆ ಏರಿಕೆ ಮಾಡಲಾಗಿದೆ ಈಗ ನೀಡುತ್ತಿರುವ ಲೀ.ಒಂದಕ್ಕೆ 22 ರೂಗಳ ಬದಲಾಗಿ ಲೀ.ಗೆ 23.5 ರೂಗಳಿಗೆ ಹೆಚ್ಚಿಸಿರುವುದರಿಂದ ಹಾಲು ಉತ್ಪಾದಕರಿಗೆ ಅನೂಕೂಲವಾಗುವುದು ಎಂದು ತುಮಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು. ಪಟ್ಟಣದ ತುಮುಲ್ ಕಚೇರಿಯಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಸಭೆಯಲ್ಲಿ ನೂತನ ವರ್ಷದ ಕ್ಯಾಲೆಂಡರ್ ವಿತರಣೆ ಹಾಗೂ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ನಂದಿನ ಹಾಲಿನ ದರವು ಈಗ ಲೀ. 22 […]

ಹೊಸಕರೆ ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಅಭ್ಯರ್ಥಿ ದೇವರಾಜು ಅವಿರೋಧ ಆಯ್ಕೆ

ಹೊಸಕರೆ ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಅಭ್ಯರ್ಥಿ ದೇವರಾಜು ಅವಿರೋಧ ಆಯ್ಕೆ

ಮಧುಗಿರಿ:  ತಾಲೂಕಿನ ಮಿಡಿಗೇಶಿ ಹೋಬಳಿಯ ಹೊಸಕೆರೆ ಗ್ರಾಪಂನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಹೆಚ್. ಜಿ ದೇವರಾಜು,  ಉಪಾಧ್ಯಕ್ಷರಾಗಿ ಗಂಗಮ್ಮ ಅವಿರೋಧವಾಗಿ ಆಯ್ಕೆಯಾದರು. ಪರಿಶಿಷ್ಟ ಸಮುದಾಯದ ಸಾಮಾನ್ಯ, ಹಿಂದುಳಿದ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನ ಗಳಿಗೆ ಗುರುವಾರ ನಡೆದ  ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗಳು ಅವಿರೋಧವಾಗಿ ಆಯ್ಕೆಯಾದರು. ತಹಸೀಲ್ದಾರ್,  ಚುನಾವಣಾಧಿಕಾರಿ ನಂದೀಶ್ ಮಾತನಾಡಿ , 2019 ಜ. 7 ರಿಂದ  ಅಧ್ಯಕ್ಷ ಸ್ಥಾನ ಹಾಗೂ 2018 ಡಿ. 18 ರಿಂದ  ಉಪಾಧ್ಯಕ್ಷ ಸ್ಥಾನ ಖಾಲಿಯಿದ್ದ […]

ಮೂಢನಂಬಿಕೆ ಧಿಕ್ಕರಿಸಿ, ವೈಚಾರಿಕತೆಯಿಂದ ಜೀವನ ನಡೆಸಿ: ಪವಾಡ ಬಯಲು ತಜ್ಞ ಹುಲಿಕಲ್ ನಟರಾಜ್

ಮೂಢನಂಬಿಕೆ ಧಿಕ್ಕರಿಸಿ, ವೈಚಾರಿಕತೆಯಿಂದ ಜೀವನ ನಡೆಸಿ: ಪವಾಡ ಬಯಲು ತಜ್ಞ ಹುಲಿಕಲ್ ನಟರಾಜ್

ಮಧುಗಿರಿ: ವೈಚಾರಿಕತೆಯಿಂದ ಜೀವನ ನಡೆಸಿದರೆ ಮೂಢನಂಬಿಕೆಗಳನ್ನು ಹೋಗಲಾಡಿಸ ಬಹುದು ಎಂದು ಪವಾಡ ರಹಸ್ಯ ಬಯಲು ತಜ್ಞ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹುಲಿಕಲ್ ನಟರಾಜ್ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೆ.ಎನ್.ಆರ್. ಸಭಾಂಗಣದಲ್ಲಿ ಏರ್ಪಡಿಸಿದ್ದ ಪವಾಡ ರಹಸ್ಯ ಬಯಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ದುರ್ದೈವದ ಸಂಗತಿ ಏನೆಂದರೆ ವೈಜ್ಞಾನಿಕವಾಗಿ ಹಲವು ಸಂಶೋಧನೆಗಳು ನಡೆಸಿದರು ಕೂಡ, ನಮ್ಮ ಜನರು ಇನ್ನೂ ಕೂಡ ಮೂಢನಂಬಿಕೆಗಳ ಪರವಾಗಿಯೇ ನಿಂತಿದ್ದಾರೆ.  ಕೆಲವೊಂದು ವಿಧಿ ವಿಧಾನಗಳನ್ನು ಬಳಸಿಕೊಂಡು ಕೆಲವು ಡೋಂಗಿ  […]

ಜಗಳೂರು: ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ 188 ನೇ ಜಯಂತಿ

ಜಗಳೂರು: ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ 188 ನೇ ಜಯಂತಿ

ಜಗಳೂರು:  ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ 188 ನೇ ಜಯಂತಿ ಕಾರ್ಯಕ್ರಮವನ್ನು   ಮಾನವ ಬಂಧುತ್ವ ವೇದಿಕೆ ಜಗಳೂರು ತಾಲೂಕಾ ವತಿಯಿಂದ ಇಂದು ಹಮ್ಮಿಕೊಳಲಾಯಿತು.  ಪೋಲಿಸ್ ವೃತ್ತ ನಿರೀಕ್ಷರಾದ ಬಿ.ಕೆ.ಲತಾ ಪ್ರಗತಿಪರ ಚಿಂತಕ ಉಪನ್ಯಾಸಕ ಮಂಜಪ್ಪ ಎಸ್.ಎಪ್ ಐ ಜಿಲ್ಲಾದ್ಯಕ್ಷ ಮಹಾಲಿಂಗಪ್ಪ ಪಟ್ಟಣ ಪಂಚಾಯಿತಿ ಸದಸ್ಯೆ ನಿರ್ಮಲಾ ಕುಮಾರಿ . ವಕೀಲರಾದ ಹೆಚ್.ಹನುಮಂತಪ್ಪ ವೇದಿಕೆ ಸಂಚಾಲಕ ಧನ್ಯಕುಮಾರ್ ಪ್ರಾಂಶುಪಾಲರಾದ ಜಗದೀಶ್ ಉಪನ್ಯಾಸಕ ರಮೇಶ್ ಸೇರಿದಂತೆ ಇತರರು ಇದ್ದರು udayanadu2016

ಕಾಂಗ್ರೆಸ್ ಹಿಂದುಳಿದ ವರ್ಗ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಗೀತಾ ಕದರಮಂಡಲಗಿ ನೇಮಕ

ಕಾಂಗ್ರೆಸ್ ಹಿಂದುಳಿದ ವರ್ಗ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಗೀತಾ ಕದರಮಂಡಲಗಿ ನೇಮಕ

ದಾವಣಗೆರೆ: ಹರಿಹರ ನಗರದ ಗೀತಾ ಕದರಮಂಡಲಗಿ ಅವರನ್ನು  ಕಾಂಗ್ರೆಸ್  ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಹರಿಹರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆಯಾಗಿ ಗೀತಾ ಕದರಮಂಡಲಗಿ ಕಾರ್ಯ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ  ದಾವಣಗೆರೆ ಜಿಲ್ಲಾ ಕಾಂಗ್ರೆಸ್  ಪರಿಶಿಷ್ಟ ಪಂಗಡಗಳ ವಿಭಾಗದ ಕಾರ್ಯದರ್ಶಿ ಮಾರುತಿ ದಾಸರ್, ಡಿ.ವೈ. ಇಂದಿರಾ, ಗುತ್ತಿಗೆದಾರರಾದ ಟಿ.ಆರ್. ಪ್ರಶಾಂತ್ ಇತರರು ಇದ್ದರು. ಅಮೀತhttp://udayanadu.com

ಮಾನವ ಬಂಧುತ್ವ ವೇದಿಕೆಯಿಂದ ರಾಷ್ಟ್ರಕವಿ ಕುವೆಂಪು ಜನ್ಮ ದಿನಚಾರಣೆ

ಮಾನವ ಬಂಧುತ್ವ ವೇದಿಕೆಯಿಂದ ರಾಷ್ಟ್ರಕವಿ ಕುವೆಂಪು ಜನ್ಮ ದಿನಚಾರಣೆ

ಬೆಂಗಳೂರು: ಮಾನವ ಬಂಧುತ್ವ ವೇದಿಕೆ ಸಂಘಟನೆ ಪದಾಧಿಕಾರಿಗಳು ಇಲ್ಲಿನ ಪ್ರೀಡಂ ಪಾರ್ಕ್ ನಲ್ಲಿ ವಿಶ್ವ ಮಾನವ, ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ ಆಚರಿಸಿದರು. ನಟ ಚೇತನ, ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ಅನಂತ ನಾಯ್ಕ ಅವರು ವಿಶ್ವ ಮಾನವ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಿದರು. ವಿದ್ಯಾರ್ಥಿ ಬಂಧುತ್ವ ವೇದಿಕೆಯ ತೋಳಿ ಭರಮಣ್ಣ, ಯುವ ಕರ್ನಾಟಕ  ವೇದಿಕೆ ಸಂಪತ್, ಅರುಣಗೌಡ, ರಾಖಶೇಖರ್,  ಕಾಡುಗೊಲ್ಲ ಹೋರಾಟ ಸಮಿತಿಯ ನಾಗಣ್ಣ ಇತರರು ಇದ್ದರು. udayanadu2016

ದೋಸ್ತಿ ಸರಕಾರದ ಮೇಲೆ ನನಗೆ ವಿಶ್ವಾಸವಿಲ್ಲ: ಮಾಜಿ ಶಾಸಕ ರಾಜಣ್ಣ

ದೋಸ್ತಿ ಸರಕಾರದ ಮೇಲೆ ನನಗೆ ವಿಶ್ವಾಸವಿಲ್ಲ: ಮಾಜಿ ಶಾಸಕ ರಾಜಣ್ಣ

ಮಧುಗಿರಿ: ಉಪ ಮುಖ್ಯಮಂತ್ರಿಗಳ ಒಳ್ಳೆಯ ತನವನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಕೆಲ ಘಟನೆಗಳಿಂದಾಗಿ ನನಗೆ ದೋಸ್ತಿ ಸರಕಾರದ ಮೇಲೆ ನನಗೆ ವಿಶ್ವಾಸ ವಿಲ್ಲಾದಂತಾಗಿದೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಪಟ್ಟಣದ ಎಂ.ಎನ್.ಕೆ ಸಮುದಾಯ ಭವನದಲ್ಲಿ ತಾಲ್ಲೂಕು ಕಾಂಗ್ರೇಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶಕ್ತಿ ಅಭಿಯಾನ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರದ ಶಾಸಕನಾಗಿ ನಾನು ಶಕ್ತಿ ಮೀರಿ ಹಲವಾರು ಅಭಿವೃದ್ದಿ ಕೆಲಸ ಮಾಡಿರುವುದು ನನಗೆ ತೃಪ್ತಿ ತಂದಿದೆ. ನನ್ನ ಅವಧಿಯಲ್ಲಿ ಕುಡಿಯುವ ನೀರಿಗಾಗಿ ಯಾವುದೇ ರೀತಿ  ತೊಂದರೆಯಾಗದಂತೆ […]

ಹೊಟ್ಟೆನೋವು ತಾಳದೆ ವ್ಯಕ್ತಿ ಆತ್ಮಹತ್ಯೆ

ಹೊಟ್ಟೆನೋವು ತಾಳದೆ ವ್ಯಕ್ತಿ ಆತ್ಮಹತ್ಯೆ

ಮಧುಗಿರಿ: ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ  ವ್ಯಕ್ತಿಯೊಬ್ಬ ಮನನೊಂದು  ಮನೆಯಲ್ಲಿಯೇ ನೇಣಿಗೆ ಶರಣಾಗಿರುವ ಘಟನೆ ಶನಿವಾರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ದೊಡ್ಡಪೇಟೆಯ ನಿವಾಸಿ ಹರ್ಷಕುಮಾರ್(40)  ನೇಣಿಗೆ ಶರಣಾದವ.ಕಳೆದ ಕೆಲವು ದಿನಗಳಿಂದ ಹರರಷಕುಮಾರ್ ನಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಇದರಿಂದ ಖಿನ್ನತೆಗೆ ಒಳಗಾಗಿ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಧುಗಿರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿ.ಎಸ್.ಐ. ರವೀಂದ್ರ ತಿಳಿಸಿದ್ದಾರೆ. ಅಮೀತhttp://udayanadu.com

ತುಮಕೂರು ಜಿಲ್ಲೆಗೆ ಶೀಘ್ರ ಹೇಮಾವತಿ ನೀರು : ಡಿ.ಕೆ.ಶಿವಕುಮಾರ್

ತುಮಕೂರು ಜಿಲ್ಲೆಗೆ ಶೀಘ್ರ ಹೇಮಾವತಿ ನೀರು : ಡಿ.ಕೆ.ಶಿವಕುಮಾರ್

ಬೆಳಗಾವಿ: ತಮಕೂರು ಜಿಲ್ಲೆಯಲ್ಲಿನ ಹೇಮಾವತಿ ನಾಲೆಗೆ ಶೀಘ್ರವೇ ನೀರು ಹರಿಸುವತ್ತ ಕ್ರಮ ವಹಿಸುವುದಾಗಿ ಜಲಸಂಪನ್ಮೂಲ ಹಾಗೂ ವೈದ್ಯಕೀಯ ಸಚಿವ ಡಿ. ಕೆ. ಶಿವಕುಮಾರ್ ತಿಳಿಸಿದರು. ಹೇಮಾವತಿ ನಾಲೆಗೆ 24 ಟಿ ಎಂ ಸಿ ನೀರು ಹರಿಸಬೇಕಿದೆ. ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಪ್ರವಾಹ ಹಿನ್ನೆಲೆಯಲ್ಲಿ ಹೇಮಾವತಿ ನಾಲೆಗೆ ನೀರು ಹರಿಸಲಾಗಿತ್ತು. ಆದರೆ, ನಿಗದಿಯಾಗಿರುವ ನೀರು ಈ ಪ್ರದೇಶಕ್ಕೆ ಹರಿಸಿರುವುದಿಲ್ಲ. ಈ ನಡುವೆ ಏಕಾಏಕಿ ನಾಲೆಯಲ್ಲಿ ನೀರು ನಿಲ್ಲಿಸಿರುವುದರಿಂದ ತುಮಕೂರು ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರವಾಗಿದೆ. ಕನಿಷ್ಠ ಕರೆ-ಕಟ್ಟೆಗಳನ್ನು ತುಂಬಿಸಿದರೆ […]

1 2 3 100