ಸೆಲ್ಫಿಯಲ್ಲಿ ತಲ್ಲೀನರಾದ ಗೆಳೆಯರು…ಕಲ್ಯಾಣಿಯಲ್ಲಿ ಮುಳುಗಿ ಸ್ನೇಹಿತ ನೀರು ಪಾಲು

ಸೆಲ್ಫಿಯಲ್ಲಿ ತಲ್ಲೀನರಾದ ಗೆಳೆಯರು…ಕಲ್ಯಾಣಿಯಲ್ಲಿ ಮುಳುಗಿ ಸ್ನೇಹಿತ ನೀರು ಪಾಲು

ಬೆಂಗಳೂರು:  ಗೆಳೆಯನೊಬ್ಬ ಕಲ್ಯಾಣಿಯಲ್ಲಿ ನೀರು ಪಾಲಾಗುತ್ತಿದ್ದರು ರಕ್ಷಿಸದ ಗೆಳೆಯರು ಸೆಲ್ಪಿ ಕ್ಲಿಕ್ಕಿಸಿಕೊಳ್ಳುವುದರಲ್ಲಿ ನಿರತರಾಗಿ ಆತನ ಸಾವಿಗೆ ಕಾರಣರಾಗಿದ್ದಾರೆ. ವಿಶ್ವಾಸ್​ (19) ಕಲ್ಯಾಣಿಯಲ್ಲಿ ಮುಳುಗಿ ಸಾವನ್ನಪ್ಪಿದ  ಜಯನಗರ ನ್ಯಾಷನಲ್ ಕಾಲೇಜು ವಿದ್ಯಾರ್ಥಿ.  ಕನಕಪುರ ತಾಲೂಕಿನ ರಾಮಗೊಂಡ್ಲುವಿನಲ್ಲಿ ಈ ಘಟನೆ ಸಂಭವಿಸಿದೆ. ಜಯನಗರ ನ್ಯಾಷನಲ್ ಕಾಲೇಜು ವಿದ್ಯಾರ್ಥಿಗಳು ಸ್ವಚ್ಚ ಭಾರತ ಅಭಿಯಾನ ಅಡಿಯಲ್ಲಿ ಎನ್ ಸಿಸಿ ಕ್ಯಾಂಪ್ ಗೆ ತೆರಳಿದ್ದರು. ಕಾಲೇಜು ಉಪನ್ಯಾಸಕರು ವಿದ್ಯಾರ್ಥಿಗಳನ್ನು ತಲಾ 5 ವಿದ್ಯಾರ್ಥಿಗಳ ಒಂದೊಂದು ತಂಡವನ್ನು ರಚಿಸಿ  ಸ್ಥಳದಲ್ಲಿ ಬಿಟ್ಟು ಬಂದಿದ್ದರು.  ಯಾರ ಮಾರ್ಗದರ್ಶನವೂ […]

ನಾಲ್ವರು ಅಂತಾರಾಜ್ಯ ಕಳ್ಳರ ಬಂಧನ: 50 ಲಕ್ಷ ಮೌಲ್ಯದ ವಸ್ತುಗಳ ವಶ

ನಾಲ್ವರು ಅಂತಾರಾಜ್ಯ ಕಳ್ಳರ ಬಂಧನ: 50 ಲಕ್ಷ ಮೌಲ್ಯದ ವಸ್ತುಗಳ ವಶ

ಬೆಂಗಳೂರು: ದುಶ್ಚಟಗಳಿಗಾಗಿ ಹಣ ಸಂಪಾದನೆ ಮಾಡಲು ಸುಪಾರಿ ಪಡೆದು ಕೊಲೆ ದರೋಡೆ, ಮನೆಗಳ್ಳತನ ಮಾಡುತ್ತಿದ್ದ ನಾಲ್ವರನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿ ಅವರಿಂದ ಸುಮಾರು  50 ಲಕ್ಷ ರೂ. ಮೌಲ್ಯದ  ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರ ಪ್ರದೇಶ ಮೂಲದ ಹರೀಶ (32), ತಮಿಳುನಾಡಿನ ಶಂಕರ್‍ರಾಮ್ (21), ಸುಹೇಲ್ (22) ಮತ್ತು ಅಸ್ಗರ್ ಆಲಿ (21) ಬಂಧಿತರು. ಆರೋಪಿ ಹರೀಶ್ ಮತ್ತು ಶಂಕರರಾಮ್ ತಮ್ಮದೇ ಆದ ಗ್ಯಾಂಗ್ ಕಟ್ಟಿಕೊಂಡು ಗ್ಯಾಂಗ್ ನಿರ್ವಹಣೆಗಾಗಿ ಹಾಗೂ ದೈನಂದಿನ ಖರ್ಚು-ವೆಚ್ಚ ಮತ್ತು ದುಶ್ಚಟಗಳಿಗಾಗಿ ಹಣ ಸಂಪಾದನೆ ಮಾಡುವ […]

ಮಾಧ್ಯಮ ಅಕಾಡೆಮಿಗೆ ನಾಮನಿರ್ದೇಶನ ಸದಸ್ಯರ ಆಯ್ಕೆಮಾಡಿ ರಾಜ್ಯ ಸರ್ಕಾರ ಆದೇಶ

ಮಾಧ್ಯಮ ಅಕಾಡೆಮಿಗೆ ನಾಮನಿರ್ದೇಶನ ಸದಸ್ಯರ ಆಯ್ಕೆಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಗೆ ನಾಮನಿರ್ದೇಶನ ಸದಸ್ಯರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶಿವಮೊಗ್ಗ ಟೆಲೆಕ್ಸ್ ಕನ್ನಡ ದಿನಪತ್ರಿಕೆ ಸಂಪಾದಕರಾದ ಎನ್.ರವಿಕುಮಾರ್, ಆಂದೋಲನ ಪತ್ರಿಕೆಯ ರಾಜಶೇಖರಕೋಟಿ ಮೈಸೂರು, ಹಾಸನ ದ ಜನಮಿತ್ರ ಪತ್ರಿಕೆಯ ಹೆಚ್.ಬಿ ಮದನಗೌಡ ಅವರುಗಳು ಸೇರಿದಂತೆ ಹಿರಿಯ ಪತ್ರಕರ್ತರಾದ ಕಾರಾವಾರದ ಗಂಗಾಧರ ಹೀರೆಗುತ್ತಿ, ಕೋಲಾರದ ಕೆ.ಎಸ್ ಗಣೇಶ್, ಧಾರವಾಡದ ಗಣೇಶ್ ಕದಂ,ಬೆಂಗಳೂರಿನ ವೆಂಕಟೇಶಯ್ಯ, ಹಾವೇರಿಯ ನಿಂಗಪ್ಪ ಚಾವಡಿ, ರಾಯಚೂರಿನ ನಾಗರಾಜ್, ಬೆಂಗಳೂರಿನ ರವೀಶ್ ಅವರುಗಳನ್ನು ಮಾಧ್ಯಮ ಅಕಾಡೆಮಿಗೆ ನಾಮ ನಿರ್ದೇಶನಗೊಳಿಸಿ ಸರ್ಕಾರ […]

ಬೆಂಗಳೂರು: ಅಪರಿಚಿತ ಶವ ಪತ್ತೆ

ಬೆಂಗಳೂರು: ಅಪರಿಚಿತ ಶವ ಪತ್ತೆ

ಬೆಂಗಳೂರು: ನೆಲಮಂಗಲ ಸಮೀಪದ ಸೊಂಡೆಕೊಪ್ಪ ಗ್ರಾಮದ ಹೊರವಲಯದಲ್ಲಿ ರವಿವಾರ ಅಪರಿಚಿತ ವ್ಯಕ್ತಿಯ ಶವ ಪತ್ತೆ. ಸುಮಾರು 45 ವರ್ಷದ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ದೇಹದ ಮೇಲೆ ಗಾಯಗಳ ಗುರುತುಗಳಿವೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ  ನಡೆಸಿದ್ದು, ಕೊಲೆ ಬೀಸಾಡಲಾಗದೆ  ಎಂದು ಶಂಕಿಸಲಾಗಿದೆ. ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Views: 317

ಪತ್ನಿಯನ್ನು ಕೊಲೆಗೈದ ಪತಿಗೆ ಮರಣ ದಂಡನೆ ಶಿಕ್ಷೆ

ಪತ್ನಿಯನ್ನು ಕೊಲೆಗೈದ ಪತಿಗೆ ಮರಣ ದಂಡನೆ ಶಿಕ್ಷೆ

  ಮಧುಗಿರಿ: ಅನೈತಿಕ ಸಂಭಂಧ ಹೊಂದಿದ್ದಾಳೆಂದು ಭಾವಿಸಿ ಚೂರಿಯಿಂದ ಪತ್ನಿಯ ಕತ್ತು ಕತ್ತರಿಸಿ ಕೊಲೆಮಾಡಿದ್ದ ಪತಿಗೆ ನಾಲ್ಕನೇ ಅಧಿಕ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಎನ್. ಲಾವಣ್ಯ ಲತಾ ಮರಣ ದಂಡನೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪಾವಗಡ ತಾಲೂಕಿನ ತಿರುಮಣಿ ಪೋಲೀಸ್ ಠಾಣಾ ವ್ಯಾಪ್ತಿಯ ನಾಗಲ ಮಡಿಕೆ ಸಮೀಪವಿರುವ ವಳ್ಳೂರು  ಗ್ರಾಮದಲ್ಲಿ 2015 ಅಕ್ಟೋಬರ್ 15 ರಂದು ಮೃತ ಲಕ್ಷ್ಮೀದೇವಿಯು ತನ್ನ ಅಕ್ಕನ ಮನೆಯಲ್ಲಿದ್ದಾಗ ಆಂಧ್ರ ಮೂಲದ  ಮದ್ದಲಚೆರವು ಗ್ರಾಮದ ಪತಿ ನಂಜಪ್ಪ  […]

ಬೆಂಗಳೂರು: ಕಳಪೆ ಕಾಮಗಾರಿ ನಡುರಸ್ತೆಯಲ್ಲಿ ಲಾರಿ ಪಲ್ಟಿ

ಬೆಂಗಳೂರು: ಕಳಪೆ ಕಾಮಗಾರಿ ನಡುರಸ್ತೆಯಲ್ಲಿ ಲಾರಿ ಪಲ್ಟಿ

ಬೆಂಗಳೂರು:  ಮಾರುತಿ ಸೇವಾನಗರದ ಕಾಕ್ಸ್ ಟೌನ್ ಜೀವನಹಳ್ಳಿ ಪಾರ್ಕ್ ರೋಡ್‌‌ನಲ್ಲಿ ಬಿಬಿಎಂಪಿ ಕಳಪೆ ಕಾಮಗಾರಿಯಿಂದ ನಡು ರಸ್ತೆಯಲ್ಲಿ ಮರುಳು ತುಂಬಿದ ಲಾರಿಯೊಂದು ಪಲ್ಟಿಯಾದ  ಘಟನೆ ಶನಿವಾರ ನಡೆದಿದೆ. ಕಳೆದ  25 ದಿನಗಳ ಹಿಂದಷ್ಟೆ ರಸ್ತ ಕಾಮಗಾರಿಯನ್ನು ಹೊಸದಾಗಿ ಕಾಂಕ್ರಿಟ್ ಹಾಕಲಾಗಿತ್ತು. ಕಾಂಕ್ರಿಟ್ ಕಳಪೆ ಮಟ್ಟದಾಗಿರುವುದರಿಂದ ಒಡೆದು ಹೋಗಿದೆ.  ಈ ಅವಘಡದಿಂದ ಡ್ರೈನೇಜ್ ಪೈಪ್ ಒಡೆದು ಹೋಗಿದೆ. ಪಕ್ಕದ   ಮನೆಯ ಕಾಂಪೌಂಡ್‌ಗೂ ಹಾನಿಯಾಗಿದೆ.  ಘಟನೆ ನಡೆದು 3, 4 ಗಂಟೆಯಾದರು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲವೆಂದು […]

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿಗಳ ಬಂಧನ ಖಂಡನೀಯ:ಎಸ್‍ಡಿಪಿಐ

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿಗಳ ಬಂಧನ ಖಂಡನೀಯ:ಎಸ್‍ಡಿಪಿಐ

  ಬೆಂಗಳೂರು: ಎಐಐಎಂಎಸ್ ಪ್ರವೇಶಾತಿ ಪರೀಕ್ಷೆಗೆ ಜಾರಿಗೊಳಿಸಿದ ವಸ್ತ್ರ ಸಂಹಿತೆಯನ್ನು ವಿರೋಧಿಸಿ ಬುಧವಾರ ಬೆಂಗಳೂರಿನಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ-ಸಿ.ಎಫ್.ಐ ಸಂಘಟನೆಯ ಕಾರ್ಯಕರ್ತರು ಶಾಂತಿಯುತ ರಾಜಭವನ್ ಚಲೋ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಹತ್ತಿಕ್ಕುವ ದುರುದ್ದೇಶದಿಂದ ಬೆಂಗಳೂರು ಪೊಲೀಸರು ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಮಹಮ್ಮದ್ ತಫ್ಸೀರ್ ಸಹಿತ ಹಲವು ವಿದ್ಯಾರ್ಥಿಗಳನ್ನು ಬಂಧಿಸಿರುವುದು ಖಂಡನೀಯ.ಇಂತಹ ಕೃತ್ಯಗಳ ಮೂಲಕ ಪೊಲೀಸರು ಸಂವಿಧಾನ ಬದ್ಧವಾದ ಪ್ರತಿಭಟನೆಯ ಹಕ್ಕನ್ನು ಕಸಿದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಎಸ್ ಡಿ ಪಿ […]

ಬೆಂಗಳೂರು: ಕುಖ್ಯಾತ ಸರಗಳ್ಳನ ಬಂಧನ

ಬೆಂಗಳೂರು: ಕುಖ್ಯಾತ ಸರಗಳ್ಳನ ಬಂಧನ

ಬೆಂಗಳೂರು: ನಗರದ ವಿವಿಧ ಕಡೆ ಸಂಚರಿಸಿ ಒಂಟಿ ಮಹಿಳೆಯ ಸರ ಕಿತ್ತು ಪಾರಾರಿಯಾಗುತ್ತಿದ್ದ, ಕುಖ್ಯಾತ ಸರಗಳ್ಳ ಒಬ್ಬನನ್ನು ಕುಪ್ಪಾರಪೇಟೆ ಪೊಲೀಸರು ಸೋಮವಾರ ಬೆಳಿಗ್ಗೆ ಬಂಧಿಸಿದ್ದಾರೆ. ಬಾಬು ಅಲಿಯಾಸ್ ಪಲ್ಸರ್ ಬಾಬು (36) ಬಂಧಿತ ಸರಗಳ್ಳ.  ಈತನಿಂದ 17 ಲಕ್ಷ 70 ಸಾವಿರ ರೂ ಮಲ್ಯದ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ. ಕಪ್ಪುಬಣ್ಣದ ಹೋಂಡಾ ಆಕ್ಟೀವಾ ಸ್ಕೂಟರ್‌ನಲ್ಲಿ  ನಂಬರ್ ಪ್ಲೇಟ್ ಬದಲಾಸಿಕೊಂಡು  ನಗರದ ವಿವಿಧ  ಕಡೆಗಳಲ್ಲಿ  ಒಂಟಿಯಾಗಿ ಓಡಾಡುವ ಮಹಿಳೆಯರ ಚಲನವಲನ ಗಮನಿಸಿ  ಸರವನ್ನು ಕಿತ್ತು ಪರಾರಿಯಾಗುತ್ತಿದ್ದ. ಇತ್ತೀಚಿಗೆ ಉಪ್ಪಾರಪೇಟೆಯಲ್ಲಿ […]

ಕತ್ತು ಸೀಳಿ ರೌಡಿ ಶೀಟರ್‍ ಒಬ್ಬನ ಹತ್ಯೆ

ಕತ್ತು ಸೀಳಿ ರೌಡಿ ಶೀಟರ್‍ ಒಬ್ಬನ ಹತ್ಯೆ

ಬೆಂಗಳೂರು: ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್ ಒಬ್ಬನನ್ನು  ಕತ್ತು ಕತ್ತರಿಸಿ ಕೊಲೆ ಮಾಡಿರುವ ಘಟನೆ ಕೊತ್ತನೂರಿನ ಬಳಿ ರವಿವಾರ ತಡರಾತ್ರಿ ನಡೆದಿದೆ. ಮೃತ ವ್ಯಕ್ತಿ ಅಯೂಬ್ (35) ಎಂದು ತಿಳಿದುಬಂದಿದೆ. ಅಪರಚಿತರ ಗುಂಪೊಂದು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ಕೊತ್ತನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. Views: 257

ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಕೂಲಿ ಕಾರ್ಮಿಕ: ಮುಂದುವರೆದ ಶೋಧ ಕಾರ್ಯ

ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಕೂಲಿ ಕಾರ್ಮಿಕ: ಮುಂದುವರೆದ ಶೋಧ ಕಾರ್ಯ

ಬೆಂಗಳೂರು: ಕುರುಬರಹಳ್ಳಿಯ ಜೆ.ಸಿ.ನಗರದ ಸಮೀಪ ರಾಜಕಾಲುವೆಯಲ್ಲಿ ಕಳೆದ ರಾತ್ರಿ ಸುರಿದ ಮಳೆಯಿಂದ ಕೂಲಿ ಕಾರ್ಮಿಕನೊಬ್ಬ ಕೊಚ್ಚಿ ಹೋದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಶರತ್‍ಕುಮಾರ್ (24) ರಾಜಕಾಲುವೆಯಲ್ಲಿ ಕೊಚ್ಚಿ ಹೋದ ವ್ಯಕ್ತಿ. ಧಾರಾಕಾರ ಸುರಿಯುತ್ತಿದ್ದ  ಮಳೆಯಲ್ಲಿ ಶರತ್‍ಕುಮಾರ ಜೆಸಿಬಿಯಲ್ಲಿ ಕಲಸ ಮಾಡುತ್ತಿದ್ದರು. ಕಾಲುವೆ ಪಕ್ಕದಲ್ಲಿದ್ದ ಗೋಡೆ ಕುಸಿದು ಜೆಸಿಬಿ ಮೇಲೆ ಬಿದ್ದಿದ್ದರಿಂದ  ಆಯ ತಪ್ಪಿ ರಾಜಕಾಲುವೆಯಲ್ಲಿ ಬಿದ್ದಿದ್ದರು. ಈತನಿಗಾಗಿ ತಡರಾತ್ರಿಯವರೆಗೂ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಶೋಧನಾ ಕಾರ್ಯ ನಡೆಸಿದ್ದು ವಿಫಲವಾಗಿ ಕಾರ್ಯಾಚರಣೆ ನಿಲ್ಲಿಸಿದ್ದರು. ರವಿವಾರ ಬೆಳಿಗ್ಗೆ […]