ಮಾನವ ಬಂಧುತ್ವ ವೇದಿಕೆಯಿಂದ ರಾಷ್ಟ್ರಕವಿ ಕುವೆಂಪು ಜನ್ಮ ದಿನಚಾರಣೆ

ಮಾನವ ಬಂಧುತ್ವ ವೇದಿಕೆಯಿಂದ ರಾಷ್ಟ್ರಕವಿ ಕುವೆಂಪು ಜನ್ಮ ದಿನಚಾರಣೆ

ಬೆಂಗಳೂರು: ಮಾನವ ಬಂಧುತ್ವ ವೇದಿಕೆ ಸಂಘಟನೆ ಪದಾಧಿಕಾರಿಗಳು ಇಲ್ಲಿನ ಪ್ರೀಡಂ ಪಾರ್ಕ್ ನಲ್ಲಿ ವಿಶ್ವ ಮಾನವ, ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ ಆಚರಿಸಿದರು. ನಟ ಚೇತನ, ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ಅನಂತ ನಾಯ್ಕ ಅವರು ವಿಶ್ವ ಮಾನವ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಿದರು. ವಿದ್ಯಾರ್ಥಿ ಬಂಧುತ್ವ ವೇದಿಕೆಯ ತೋಳಿ ಭರಮಣ್ಣ, ಯುವ ಕರ್ನಾಟಕ  ವೇದಿಕೆ ಸಂಪತ್, ಅರುಣಗೌಡ, ರಾಖಶೇಖರ್,  ಕಾಡುಗೊಲ್ಲ ಹೋರಾಟ ಸಮಿತಿಯ ನಾಗಣ್ಣ ಇತರರು ಇದ್ದರು. Views: 296

ಅಂತಾರಾಜ್ಯ ಕಳ್ಳನ ಬಂಧನ: 25 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಬೆಂಗಳೂರು: ಬೀಗ ಹಾಕಿದ ಮನೆ ಹಾಗೂ ಅಂಗಡಿಗಳಲ್ಲಿ ದರೋಡೆ ಮಾಡುತ್ತಿದ್ದ ಒಬ್ಬನನ್ನು ಅಗ್ರಹಾರ ಪೊಲೀಸರು ಕುಖ್ಯಾತ ಅಂತಾರಾಜ್ಯ ಕಳ್ಳನನ್ನು ಬಂಧಿಸಿ 25 ಲಕ್ಷ ಮೌಲ್ಯದ ಚಿನ್ನಧ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಸಿಕೆ ಪಾಲ್ಯದ ಆನಂದ್ (33) ಬಂಧಿತ. ಈತ ಕಳೆದ ಹಲವು ದಿನಗಳಿಂದ ನಗರದ ವಿವಿಧೆಡೆ ಮನೆ- ಅಂಗಡಿಗಳಿಗೆ ಕನ್ನಹಾಕಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಬಾಗಲಗುಂಟೆಯ ಬಟ್ಟೆ ಅಂಗಿಯಲ್ಲಿ 10 ಲಕ್ಷ ಹಾಗೂ ವಿವಿಧೆಡೆ ಸೇರಿ 25 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ, ಆಭರಣಗಳನ್ನು […]

ಸೆಲ್ಫಿಯಲ್ಲಿ ತಲ್ಲೀನರಾದ ಗೆಳೆಯರು…ಕಲ್ಯಾಣಿಯಲ್ಲಿ ಮುಳುಗಿ ಸ್ನೇಹಿತ ನೀರು ಪಾಲು

ಸೆಲ್ಫಿಯಲ್ಲಿ ತಲ್ಲೀನರಾದ ಗೆಳೆಯರು…ಕಲ್ಯಾಣಿಯಲ್ಲಿ ಮುಳುಗಿ ಸ್ನೇಹಿತ ನೀರು ಪಾಲು

ಬೆಂಗಳೂರು:  ಗೆಳೆಯನೊಬ್ಬ ಕಲ್ಯಾಣಿಯಲ್ಲಿ ನೀರು ಪಾಲಾಗುತ್ತಿದ್ದರು ರಕ್ಷಿಸದ ಗೆಳೆಯರು ಸೆಲ್ಪಿ ಕ್ಲಿಕ್ಕಿಸಿಕೊಳ್ಳುವುದರಲ್ಲಿ ನಿರತರಾಗಿ ಆತನ ಸಾವಿಗೆ ಕಾರಣರಾಗಿದ್ದಾರೆ. ವಿಶ್ವಾಸ್​ (19) ಕಲ್ಯಾಣಿಯಲ್ಲಿ ಮುಳುಗಿ ಸಾವನ್ನಪ್ಪಿದ  ಜಯನಗರ ನ್ಯಾಷನಲ್ ಕಾಲೇಜು ವಿದ್ಯಾರ್ಥಿ.  ಕನಕಪುರ ತಾಲೂಕಿನ ರಾಮಗೊಂಡ್ಲುವಿನಲ್ಲಿ ಈ ಘಟನೆ ಸಂಭವಿಸಿದೆ. ಜಯನಗರ ನ್ಯಾಷನಲ್ ಕಾಲೇಜು ವಿದ್ಯಾರ್ಥಿಗಳು ಸ್ವಚ್ಚ ಭಾರತ ಅಭಿಯಾನ ಅಡಿಯಲ್ಲಿ ಎನ್ ಸಿಸಿ ಕ್ಯಾಂಪ್ ಗೆ ತೆರಳಿದ್ದರು. ಕಾಲೇಜು ಉಪನ್ಯಾಸಕರು ವಿದ್ಯಾರ್ಥಿಗಳನ್ನು ತಲಾ 5 ವಿದ್ಯಾರ್ಥಿಗಳ ಒಂದೊಂದು ತಂಡವನ್ನು ರಚಿಸಿ  ಸ್ಥಳದಲ್ಲಿ ಬಿಟ್ಟು ಬಂದಿದ್ದರು.  ಯಾರ ಮಾರ್ಗದರ್ಶನವೂ […]

ಗುಪ್ತಾಂಗ ತೋರಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ನಕಲಿ ಪತ್ರಕರ್ತನಿಗೆ ವಿದ್ಯಾರ್ಥಿನಿಯರಿಂದ ಗೂಸಾ

ಗುಪ್ತಾಂಗ ತೋರಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ನಕಲಿ ಪತ್ರಕರ್ತನಿಗೆ ವಿದ್ಯಾರ್ಥಿನಿಯರಿಂದ ಗೂಸಾ

ಬೆಂಗಳೂರು: ಶಾಲಾ ವಿದ್ಯಾರ್ಥಿನಿಯರಿಗೆ ಗುಪ್ತಾಂಗ ತೋರಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ವಿದ್ಯಾರ್ಥಿನಿಯರೇ ಹಿಡಿದು ಧರ್ಮಧೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಇಲ್ಲಿನ ಮೌಂಟ್ ಕಾರ್ಮೆಲ್ ಶಾಲೆಯ ಬಳಿ ನಡೆದಿದೆ. ವಿಜೇಶ್ ಎಂಬಾತನೇ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ ಗೂಸಾ ತಿಂದು ಪೊಲೀಸ ಅತಿಥಿಯಾದವನು. ಈತ ತನ್ನ ಬೈಕ್ ಪ್ರೇಸ್ ಎಂದು ಬರೆಸಿದ್ದು, ನಾನು ಪತ್ರಕರ್ತನೆಂದು ಬಿಂಬಿಸಿಕೊಳ್ಳುತ್ತಿದ್ದ. ಅಲ್ಲದೇ ಈತ ದಿನ ಬಳಗ್ಗೆ ಮತ್ತು ಸಂಜೆ ಕಾರ್ಮೆಲ್ ಶಾಲೆ ಬಳಿ ಬೈಕ್ ಮೇಲೆ ಬಂದು ವಿದ್ಯಾರ್ಥಿನಿಯರಿಗೆ ಗುಪ್ತಾಂಗ ತೋರಿಸಿ ಅಸಹ್ಯವಾಗಿ […]

ರಾಹುಲ್ ಗಾಂಧಿಗೆ ದಲಿತ ಕುಟುಂಬದ ಹೆಣ್ಣು ಕೊಡಲು ನಾವ್ ರೆಡಿ: ಮಾಜಿ ಸಚಿವ ಕಾರಜೋಳ

ರಾಹುಲ್ ಗಾಂಧಿಗೆ ದಲಿತ ಕುಟುಂಬದ ಹೆಣ್ಣು ಕೊಡಲು ನಾವ್ ರೆಡಿ: ಮಾಜಿ ಸಚಿವ ಕಾರಜೋಳ

ಬೆಂಗಳೂರು: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಅವರಿಗೆ ದಲಿತ ಕುಟುಂಬದ ಹೆಣ್ಣು ಕೊಡಲು ನಾವ್ ರೆಡಿಯಾಗಿದ್ದೇವೆ ಸಂಬಂಧ ಬೆಳೆಸಲು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಸಮ್ಮತಿ ಇದೆಯೇ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಸವಾಲು ಹಾಕಿದರು. ಮಲ್ಲೇಶ್ವರಂನಲ್ಲಿನ ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆದ ಸ್ಲಂ ಮೋರ್ಚಾ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಇನ್ನೂ ಬಾಚುಲರ್ ಆಗಿದ್ದು,  ಸೋನಿಯಾ ಗಾಂಧಿ ಅವರು ದಲಿತರ ಜೊತೆ ಸಂಬಂಧ ಬೆಳಸಿ ಮೇಲ್ ಪಂಕ್ತಿ […]

ಯುವತಿ ಕಿಡ್ನಾಪ್ ಮಾಡಿ ಮಧ್ಯರಾತ್ರಿ ತಾಳಿ ಕಟ್ಟಿ, ರೇಪ್ ಮಾಡಿದ 2 ಮಕ್ಕಳ ತಂದೆ

ಯುವತಿ ಕಿಡ್ನಾಪ್ ಮಾಡಿ ಮಧ್ಯರಾತ್ರಿ ತಾಳಿ ಕಟ್ಟಿ, ರೇಪ್ ಮಾಡಿದ 2 ಮಕ್ಕಳ ತಂದೆ

ಬೆಂಗಳೂರು: ಎರಡು ಮಕ್ಕಳ ತಂದೆಯೊಬ್ಬ ಯುವತಿಯೊಬ್ಬಳನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಕೊಂಡು ಅತ್ಯಾಚಾರ ಎಸಗಿದ ಘಟನೆ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಗಡಿ ನಿವಾಸಿ ಸಂತೋಷ್ ಎಂಬಾತ ಈಗಾಗಲೇ ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿದ್ದು ಆತನ ಹೆಂಡತಿ ತವರು ಮನೆ ಸೇರಿದ್ದಳು. ಈತ ಒಂಬ್ಬಂಟಿಯಾಗಿದ್ದು, ತನ್ನ ಎದರು ಮನೆಯ ಯುವತಿ ಮೇಲೆ ಕಣ್ಣು ಹಾಕಿದ್ದ ಆಕೆಯನ್ನು ಮದುವೆಯಾಗಿವುದಾಗಿ ಯುವತಿ ಮನೆಯಲ್ಲಿ ತಿಳಿಸಿದ್ದ. ಈಗಾಗಲೇ ಮದುವೆಯಾಗಿದ್ದ ಸಂತೋಷ್‌ಗೆ ಯುವತಿಯನ್ನು ಮದುವೆ ಮಾಡಲು ಯುವತಿಯ ಮನೆಯವರು ಒಪ್ಪಿರಲಿಲ್ಲ. ಯುವತಿ […]

ನಾಲ್ವರು ಅಂತಾರಾಜ್ಯ ಕಳ್ಳರ ಬಂಧನ: 50 ಲಕ್ಷ ಮೌಲ್ಯದ ವಸ್ತುಗಳ ವಶ

ನಾಲ್ವರು ಅಂತಾರಾಜ್ಯ ಕಳ್ಳರ ಬಂಧನ: 50 ಲಕ್ಷ ಮೌಲ್ಯದ ವಸ್ತುಗಳ ವಶ

ಬೆಂಗಳೂರು: ದುಶ್ಚಟಗಳಿಗಾಗಿ ಹಣ ಸಂಪಾದನೆ ಮಾಡಲು ಸುಪಾರಿ ಪಡೆದು ಕೊಲೆ ದರೋಡೆ, ಮನೆಗಳ್ಳತನ ಮಾಡುತ್ತಿದ್ದ ನಾಲ್ವರನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿ ಅವರಿಂದ ಸುಮಾರು  50 ಲಕ್ಷ ರೂ. ಮೌಲ್ಯದ  ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರ ಪ್ರದೇಶ ಮೂಲದ ಹರೀಶ (32), ತಮಿಳುನಾಡಿನ ಶಂಕರ್‍ರಾಮ್ (21), ಸುಹೇಲ್ (22) ಮತ್ತು ಅಸ್ಗರ್ ಆಲಿ (21) ಬಂಧಿತರು. ಆರೋಪಿ ಹರೀಶ್ ಮತ್ತು ಶಂಕರರಾಮ್ ತಮ್ಮದೇ ಆದ ಗ್ಯಾಂಗ್ ಕಟ್ಟಿಕೊಂಡು ಗ್ಯಾಂಗ್ ನಿರ್ವಹಣೆಗಾಗಿ ಹಾಗೂ ದೈನಂದಿನ ಖರ್ಚು-ವೆಚ್ಚ ಮತ್ತು ದುಶ್ಚಟಗಳಿಗಾಗಿ ಹಣ ಸಂಪಾದನೆ ಮಾಡುವ […]

ಮಾಧ್ಯಮ ಅಕಾಡೆಮಿಗೆ ನಾಮನಿರ್ದೇಶನ ಸದಸ್ಯರ ಆಯ್ಕೆಮಾಡಿ ರಾಜ್ಯ ಸರ್ಕಾರ ಆದೇಶ

ಮಾಧ್ಯಮ ಅಕಾಡೆಮಿಗೆ ನಾಮನಿರ್ದೇಶನ ಸದಸ್ಯರ ಆಯ್ಕೆಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಗೆ ನಾಮನಿರ್ದೇಶನ ಸದಸ್ಯರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶಿವಮೊಗ್ಗ ಟೆಲೆಕ್ಸ್ ಕನ್ನಡ ದಿನಪತ್ರಿಕೆ ಸಂಪಾದಕರಾದ ಎನ್.ರವಿಕುಮಾರ್, ಆಂದೋಲನ ಪತ್ರಿಕೆಯ ರಾಜಶೇಖರಕೋಟಿ ಮೈಸೂರು, ಹಾಸನ ದ ಜನಮಿತ್ರ ಪತ್ರಿಕೆಯ ಹೆಚ್.ಬಿ ಮದನಗೌಡ ಅವರುಗಳು ಸೇರಿದಂತೆ ಹಿರಿಯ ಪತ್ರಕರ್ತರಾದ ಕಾರಾವಾರದ ಗಂಗಾಧರ ಹೀರೆಗುತ್ತಿ, ಕೋಲಾರದ ಕೆ.ಎಸ್ ಗಣೇಶ್, ಧಾರವಾಡದ ಗಣೇಶ್ ಕದಂ,ಬೆಂಗಳೂರಿನ ವೆಂಕಟೇಶಯ್ಯ, ಹಾವೇರಿಯ ನಿಂಗಪ್ಪ ಚಾವಡಿ, ರಾಯಚೂರಿನ ನಾಗರಾಜ್, ಬೆಂಗಳೂರಿನ ರವೀಶ್ ಅವರುಗಳನ್ನು ಮಾಧ್ಯಮ ಅಕಾಡೆಮಿಗೆ ನಾಮ ನಿರ್ದೇಶನಗೊಳಿಸಿ ಸರ್ಕಾರ […]

ಡೆತ್‍ನೋಟ್ ಬರೆದಿಟ್ಟು ಕಾಫಿ ಡೇ ಸಿಬ್ಬಂದಿ ಆತ್ಮಹತ್ಯೆ

ಡೆತ್‍ನೋಟ್ ಬರೆದಿಟ್ಟು ಕಾಫಿ ಡೇ ಸಿಬ್ಬಂದಿ ಆತ್ಮಹತ್ಯೆ

ಬೆಂಗಳೂರು: ಉದ್ಯೋಗದಲ್ಲಿ ಬಡ್ತಿ ಸಿಗದ ಹಿನ್ನೆಲೆ ಮನನೊಂದು ಕಾಫಿಡೇ ಸಿಬ್ಬಂದಿಯೊಬ್ಬ ಡೆತ್ ನೋಟ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಚಿಕ್ಕಮಗಳೂರ ಜಿಲ್ಲೆಯ ನಾರಾಯಣಪುರ ನಿವಾಸಿ ಪ್ರಮೋದ ನೇಣಿಗೆ ಶರಣಾದ ವ್ಯಕ್ತಿ. ಉದ್ಯೋಗ ಅರಸಿ ಕಳೆದ 11 ವರ್ಷದ ಹಿಂದೆ ಬೆಂಗಳೂರಿಗೆ ಆಗಮಿಸಿ ಫಿನಿಕ್ಸ್ ಮಾಲ್‍ನ ಕಾಫಿಡೇನಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಪ್ರಸ್ತುತ ಸಂಬಳದಲ್ಲಿ ಕುಟುಂಬ ನಿರ್ವಹಣೆಗೆ ಕಷ್ಟವಾಗುತ್ತಿದೆ . 11 ವರ್ಷಗಳ ಸೇವಾ ಅನುಭವದ ಆಧಾರದ ಮೇಲೆ ಉದ್ಯೋಗದಲ್ಲಿ ಬಡ್ತಿ ನೀಡಿ ಸಂಬಳ  ಏರಿಕೆ ಮಾಡಿ […]

ಉಸಿರಾಟದ ತೊಂದರೆ: ಮಾಜಿ ಸಚಿವ, ನಟ ಅಂಬರೀಷ ಆಸ್ಪತ್ರೆಗೆ ದಾಖಲು

ಉಸಿರಾಟದ ತೊಂದರೆ: ಮಾಜಿ ಸಚಿವ, ನಟ ಅಂಬರೀಷ ಆಸ್ಪತ್ರೆಗೆ ದಾಖಲು

ಬೆಂಗಳೂರು:ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಮಾಜಿ ಸಚಿವ ಹಾಗೂ ನಟ ಅಂಬರೀಶ್ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಗುರುವಾರ ಬೆಳಗ್ಗೆ ದಾಖಲಾಗಿದ್ದಾರೆ. ವಿಕ್ರಂ ಆಸ್ಪತ್ರೆಯ ತಜ್ಞ ವೈದ್ಯ ಡಾ.ಸತೀಶ್ ನೇತೃತ್ವದ ತಂಡ ಅಂಬರೀಷ ಅವರ ಆರೋಗ್ಯ ತಪಾಸಣೆ ಕೈಗೊಂಡಿದೆ. ಈಗಾಗಲೇ ಅಂಬರೀಶ್ ಅವರ ಬ್ಲಡ್, ಶುಗರ್, ಬಿಪಿ, ಹೃದಯ ಬಡಿತ ಸೇರಿದಂತೆ ಅಗತ್ಯ ದೇಹ ಪರೀಕ್ಷೆ ನಡೆಸಲಾಗಿದೆ. ಅಂಬರೀಶ್ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಆತಂಕ ಪಡುವ ವಿಚಾರ ಇಲ್ಲ ಎಂದು ವಿಕ್ರಂ ಆಸ್ಪತ್ರೆಯ ವೈದ್ಯ ಡಾ.ಸತೀಶ್ ಹೇಳಿದ್ದಾರೆ. ವರ್ಷಕ್ಕೊಮ್ಮೆ ಆರೋಗ್ಯದ […]