ಶಿಡ್ಲಘಟ್ಟ: ಗೋಮಾಳ, ಸ್ಮಶಾನ ಜಾಗ ಒತ್ತುವರಿ ತೆರವು ಕಾರ್ಯಾಚರಣೆ

ಶಿಡ್ಲಘಟ್ಟ: ಗೋಮಾಳ, ಸ್ಮಶಾನ ಜಾಗ ಒತ್ತುವರಿ ತೆರವು ಕಾರ್ಯಾಚರಣೆ

ಶಿಡ್ಲಘಟ್ಟ: ಒತ್ತುವರಿಯಾಗಿದ್ದ ಸರ್ಕಾರಿ ಗೋಮಾಳ ಸೇರಿದಂತೆ ಸ್ಮಶಾನದ ಜಾಗವನ್ನು ತಹಸೀಲ್ದಾರ್ ಎಸ್. ಅಜಿತ್‍ಕುಮಾರ್ ರೈ ನೇತೃತ್ವದ ಅಧಿಕಾರಿಗಳ ತಂಡ  ಮಂಗಳವಾರ ತೆರವುಗೊಳಿಸಿದರು. ತಾಲೂಕಿನ ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಂಟೂರು ಗ್ರಾಮದ ಸರ್ಕಾರಿ ಗೋಮಾಳ ಹಾಗೂ ಸ್ಮಶಾನದ ಜಾಗವನ್ನು ಗ್ರಾಮದ ಕೆಲವರು ಒತ್ತುವರಿ ಮಾಡಿಕೊಂಡಿದ್ದರು ಎನ್ನಲಾಗಿದ್ದು, ತಹಸೀಲ್ದಾರ್ ಎಸ್.ಅಜಿತ್‍ಕುಮಾರ್ ರೈ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ, ಸರ್ಕಾರಿ ಜಾಗದ ಅಳತೆ ಮಾಡಿಸುವ ಮೂಲಕ ಟ್ರಂಚ್ ಹೊಡೆದು ಗ್ರಾಮದ ಸ್ಮಶಾನಕ್ಕೆ ಮೀಸಲಿಟ್ಟಿದ್ದ ಜಾಗದ ಒತ್ತುವರಿಯನ್ನು ತೆರವುಗೊಳಿಸಿದ್ದಾರೆ. […]

ಸಧೃಡ ರಾಷ್ಟ್ರ ನಿರ್ಮಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಿದೆ: ಮಾಜಿ ಸಚಿವ ಮುನಿಯಪ್ಪ

ಸಧೃಡ ರಾಷ್ಟ್ರ ನಿರ್ಮಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಿದೆ: ಮಾಜಿ ಸಚಿವ ಮುನಿಯಪ್ಪ

ಶಿಡ್ಲಘಟ್ಟ: ಸಮಾಜದಲ್ಲಿರುವ ಎಲ್ಲಾ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿ ಶಾಂತಿ, ಸಮಾನತೆ, ಸೌರ್ಹಾದತೆಯ ಮೂಲಕ ಸಧೃಡ ರಾಷ್ಟ್ರವನ್ನು ನಿರ್ಮಿಸುವ ಶಕ್ತಿ ಹೊಂದಿರುವ ಏಕೈಕ ಜಾತ್ಯಾತೀತ ಪಕ್ಷ ಅದು ಕಾಂಗ್ರೆಸ್ ಪಕ್ಷವೆಂದು ಮಾಜಿ ಸಚಿವ ವಿ.ಮುನಿಯಪ್ಪ ಬಣ್ಣಿಸಿದರು. ತಾಲೂಕಿನ ಬೆಳ್ಳೂಟಿ ಗ್ರಾಮದಲ್ಲಿ ಜೆ.ಡಿ.ಎಸ್ ಪಕ್ಷವನ್ನು ತ್ಯಜಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರನ್ನು ಸ್ವಾಗತಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಕೇವಲ ಮತಗಳನ್ನು ಪಡೆಯಲು ಆಸೆ ಆಮಿಷಗಳನ್ನು ತೋರಿಸಿ ಮುಗ್ದ ಮತದಾರರನ್ನು ದಿಕ್ಕುತಪ್ಪಿಸುವ ರಾಜಕಾರಣದಲ್ಲಿ ಕೆಲವು ಪಕ್ಷಗಳು ತಲ್ಲೀನರಾಗಿದ್ದಾರೆ ಎಂದು ಟೀಕಿಸಿದ […]

ಶಿಡ್ಲಘಟ್ಟ ಪಿಎಲ್ ಡಿ ಬ್ಯಾಂಕನ ಅಧ್ಯಕ್ಷರಾಗಿ ಭೀಮೇಶ್ ಅವಿರೋಧವಾಗಿ ಆಯ್ಕೆ

ಶಿಡ್ಲಘಟ್ಟ: ನಗರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕಿನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಕಾಳನಾಯಕನಹಳ್ಳಿಯ ಭೀಮೇಶ್ ಅವಿರೋಧವಾಗಿ ಆಯ್ಕೆಯಾದರು. ಪಿಎಲ್‍ಡಿ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಚೀಮನಹಳ್ಳಿ ಗೋಪಾಲ್ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಕಾಳನಾಯಕನಹಳ್ಳಿ ಭೀಮೇಶ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಿದರು. ಸಾಲಗಾರರ 12 ಹಾಗೂ ಸಾಲಗಾರರಲ್ಲದ ಕ್ಷೇತ್ರದ ಒಂದು ನಿರ್ದೇಶಕರು ಸೇರಿದಂತೆ (ಒರ್ವ ಸರಕಾರದಿಂದ ನಾಮ ನಿರ್ದೇಶಿತ ಸಹಿತ) 13 ಮಂದಿ ನಿರ್ದೇಶಕರನ್ನು ಹೊಂದಿರುವ ಪಿಎಲ್‍ಡಿ […]

ಶಿಡ್ಲಘಟ್ಟ: ಕಾಂಗ್ರೆಸ್ ಕಾರ್ಯಕರ್ತರಿಂದ ಕರಾಳ ದಿನ ಆಚರಣೆ

ಶಿಡ್ಲಘಟ್ಟ: ಐದನೂರು ಮತ್ತು ಸಾವಿರ ಮುಖಬೆಲೆಯ ನೋಟುಗಳನ್ನು ನಿಷೇಧಗೊಳಿಸಿದ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ ಕಾಂಗ್ರೇಸ್ ಕಾರ್ಯಕರ್ತರು ತೋಳಿಗೆ ಕಪ್ಪುಪಟ್ಟಿ ಧರಿಸುವ ಮೂಲಕ ಕರಾಳ ದಿನಾಚರಣೆ ಆಚರಿಸಿ ಕೇಂದ್ರ ಸರಕಾರದ ವಿರುಧ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೆಪಿಸಿಸಿ ಮಾಜಿ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವ ವಿ.ಮುನಿಯಪ್ಪನವರ ನೇತೃತ್ವದಲ್ಲಿ ನಗರದ ಸಾರಿಗೆ ಬಸ್ ನಿಲ್ದಾಣದಿಂದ ಮೆರವಣಿಗೆ ನಡೆಸಿದ ಕಾಂಗ್ರೇಸ್ ಕಾರ್ಯಕರ್ತರು ಭ್ರಷ್ಟಚಾರ ನಿಯಂತ್ರಣ,ಭಯೋತ್ಪಾದನೆ ತಡೆಗಟ್ಟಲು ಹಾಗೂ ಕಪ್ಪುಹಣ ವಾಪಸ್ಸು ತರುವ ನೆಪದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ […]

ನಗರಸಭೆ ಅಧಿಕಾರಿಗಳ ಆಲಸ್ಯ: ಚಂದಾ ವಸೂಲಿ ಮಾಡಿ ಚರಂಡಿ ನಿರ್ಮಿಸಿಕೊಂಡ ಸ್ಥಳೀಯರು

ಶಿಡ್ಲಘಟ್ಟ: ಚರಂಡಿ ನಿರ್ಮಾಣಕ್ಕಾಗಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಸುಸ್ತಾದ  ಪಟ್ಟಣದ ಜನತೆ ಯಾವುದೇ ಪ್ರಯೋಜನವಾಗದ ಹಿನ್ನಲೆ  ಸ್ಥಳೀಯರೇ ಚಂದಾ ವಸೂಲಿ ಮಾಡಿ ಚರಂಡಿ ನಿರ್ಮಿಸಿಕೊಂಡು ನಗರಸಭೆ ಅಧಿಕಾರಿಗಳನ್ನು ಮುಜುಗರಕ್ಕೆ ಇಡುಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ನಗರದ ವಾರ್ಡ್ ಸಂಖ್ಯೆ 18 ರ ಫಿರ್ದೋಸ್ ಮಸೀದಿಯ ಬಳಿ ಚರಂಡಿಯ ವ್ಯವಸ್ಥೆ ಇಲ್ಲದೇ ಪ್ರಾರ್ಥನೆ ಸಲ್ಲಿಸಲು ಬರುವ ನಾಗರಿಕರು ಮತ್ತು ಇದೇ ಮಾರ್ಗದಲ್ಲಿರುವ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ನಗರಸಭೆಯ ಪೌರಾಯುಕ್ತ ಜಿ.ಎನ್.ಚಲಪತಿ ಅವರಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. ಮಳೆ […]

ಶಿಡ್ಲಘಟ್ಟ: ಅರಣ್ಯ ಪ್ರದೇಶದಲ್ಲಿ ಜಿಂಕೆ ಶವ ಪತ್ತೆ

ಶಿಡ್ಲಘಟ್ಟ: ತಾಲೂಕಿನ ಕೆ.ಮುತ್ತುಕದಹಳ್ಳಿಯ ಅರಣ್ಯದಲ್ಲಿ ಪ್ರಾಣಿಗಳ ದಾಳಿಗೆ ಒಳಗಾಗಿ ಜಿಂಕೆಯೊಂದು ಮೃತಪಟ್ಟು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಾಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಕೆ.ಮುತ್ತುಕದಹಳ್ಳಿಯ ಅರಣ್ಯದಲ್ಲಿ ಜಿಂಕೆಯೊಂದು ಕೊಳೆತ ಸ್ಥಿತಿಯಲ್ಲಿ ಗೋಚರಿಸಿದೆ ಕಾಡಿನಲ್ಲಿನ ಕಾಡು ಹಂದಿ, ತೋಳ ಅಥವಾ ನಾಯಿಗಳಿದ್ದು, ಈ ಯಾವುದೋ ಪ್ರಾಣಿಗಳ ದಾಳಿಗೆ ತುತ್ತಾಗಿರಬಹದು ಇಲ್ಲವೇ ಜಿಂಕೆ ಜಿಂಕೆಗಳ ನಡುವೆಯೂ ಗುದ್ದಾಟ, ತಿವಿತ ನಡೆದಿದ್ದು ಅದೂ ಸಹ ಜಿಂಕೆಯ ಸಾವಿಗೆ ಕಾರಣ ಆಗಿರಬಹುದು ಎಂದು ಅರಣ್ಯ ಇಲಾಖೆಯ ಅಕಾರಿಗಳು ಶಂಕಿಸಿದ್ದಾರೆ. ಮೃತ ಜಿಂಕೆಯ ಕಾಲು ಸೇರಿದಂತೆ […]

ಹಿರಿಯ ನಾಗರಿಕರನ್ನು ಗೌರವಿಸುವ ಮೂಲಕ ಆದರ್ಶ ಸಮಾಜ ನಿರ್ಮಿಸಲು ಮುಂದಾಗಿ: ನಾರಾಯಣಸ್ವಾಮಿ

ಶಿಡ್ಲಘಟ್ಟ:  ಸಮಾಜದಲ್ಲಿ ಹಿರಿಯ ನಾಗರಿಕರನ್ನು ಗೌರವಿಸುವ ಮೂಲಕ ಆದರ್ಶ ಸಮಾಜವನ್ನು ನಿರ್ಮಿಸಬೇಕು ಎಂದು ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ತಾಲೂಕಿನ ಬಶೆಟ್ಟಹಳ್ಳಿ ಗೇಟ್ ಸಮೀಪದ ಸಾಯಿ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಕ್ರೀಡಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಸಮಾಜದಲ್ಲಿ ಜನ್ಮ ನೀಡಿದ ಪೋಷಕರನ್ನು ಕಡೆಗಣಿಸುವ ಸಂಸ್ಕೃತಿ ಬೆಳೆಯುತ್ತಿರುವುದು ನೋವಿನ ಸಂಗತಿ ಎಂದು ವಿಷಾಧ ವ್ಯಕ್ತಪಡಿಸಿದ ಅವರು, ಮಕ್ಕಳು ಹೆತ್ತವರನ್ನು ಗೌರವಿಸುವ ಮನೋಭಾವ […]

ಶಿಡ್ಲಘಟ್ಟ: ಜಾಲತಾಣಗಳ ಮೂಲಕ ದೇಶದ ಶಾಂತಿಗೆ ಧಕ್ಕೆ ತರುವ ಜನರನ್ನು ಗಲ್ಲಿಗೇರಿಸಿ

ಶಿಡ್ಲಘಟ್ಟ: ಸಾಮಾಜಿಕ ಜಾಲತಾಣಗಳ ಮತ್ತು ಇತರೆ ಮಾಧ್ಯಮಗಳ ಮೂಲಕ ಧರ್ಮಗಳ ಅವಹೇಳನ ಮಾಡುವ ಮೂಲಕ ದೇಶದ ಶಾಂತಿಗೆ ಧಕ್ಕೆಯನ್ನುಂಟು ಮಾಡುವವರನ್ನು  ಗಲ್ಲಿಗೇರಿಸಬೇಕು ಎಂದು ಶುಕ್ರವಾರ ಮುಸ್ಲಿಂ ಬಾಂಧವರು ಆಗ್ರಹಿಸಿದರು. ಇತ್ತಿಚೀಗೆ ಇಸ್ಲಾಂ ಧರ್ಮ ಮತ್ತು ಪ್ರವಾದಿ ಮುಹಮ್ಮದ ಪೈಗಂಬರ್ ವಿರುಧ್ಧ ಅವಹೇಳನಕಾರಿಯಾಗಿ ನಿಂದಿಸಿರುವ ಗುಜರಾತಿನ ಸೋನು ಡ್ಯಾಂಗೂರ್ ಎಂಬಾಕೆಯನ್ನು ಮರಣದಂಡಣೆ ವಿಧಿಸಬೇಕೆಂದು ಪ್ರತಿಭಟನೆ ನಡೆಸಿದರು. ನಗರದ ಜಾಮೀಯಾ ಮಸೀದಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಮುಸ್ಲಿಂ ಬಾಂಧವರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಹಮ್ಮದ ಪೈಗಂಬರ್  ಅವರನ್ನು ಅವಹೇಳನೆ […]

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಪಾರ: ಶಾಸಕ ರಾಜಣ್ಣ

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಪಾರ: ಶಾಸಕ ರಾಜಣ್ಣ

ಶಿಡ್ಲಘಟ್ಟ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತೆಗೆಯಲು ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು ಪೋಷಕರು ಸಹ ಸಹಕಾರ ನೀಡಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು. ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಒಂದೆಲ್ಲಾ ಒಂದು ರೀತಿಯ ಪ್ರತಿಭೆ ಅಡಗಿರುತ್ತದೆ ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಶಿಕ್ಷಕರು ಮತ್ತು ಪೋಷಕರು ಸಮನ್ವಯದಿಂದ ಮಾಡಬೇಕೆಂದು ಸಲಹೆ ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕಾರ್ಯಕ್ರಮಗಳಿಗೆ ಸಂಪೂರ್ಣವಾಗಿ ಸಹಕಾರ ನೀಡುತ್ತೇನೆ […]

7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ, ಚಿಂತಾಮಣಿಯಲ್ಲಿ ಹೇಯ ಕೃತ್ಯ

7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ, ಚಿಂತಾಮಣಿಯಲ್ಲಿ ಹೇಯ ಕೃತ್ಯ

ಚಿಕ್ಕಬಳ್ಳಾಪುರ: ಮನೆಯಲ್ಲಿ ಮಲಗಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ದುಷ್ಕರ್ಮಿಗಳು ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ  ಘಟನೆ ಚಿಂತಾಮಣಿ ತಾಲೂಕಿನ ದ್ವಾರಪಲ್ಲಿ ಗ್ರಾಮದಲ್ಲಿ ನಡೆದಿದೆ. ರಾತ್ರಿ ಮನೆಯಲ್ಲಿ ಮಲಗಿದ್ದ 7 ವರ್ಷದ ಬಾಲಕಿಯನ್ನು ಅಪಹರಿದಸಿದ ದುಷ್ಕರ್ಮಿಗಳು ಗ್ರಾಮದ ಹೊರವಲಯದಲ್ಲಿ ಅತ್ಯಾಚಾರ ಎಸಗಿ ಕೊಲೆಮಾಡಿ ರಸ್ತೆ ಪಕ್ಕದಲ್ಲಿ ಬಿಸಾಡಿ ಪರಾರಿಯಾಗಿದ್ದಾರೆ. ಬಾಲಕಿ ಕಾಣದಿದ್ದರಿಂದ ಗಾಬರಿಗೊಂಡ ಪೋಷಕರು ಗ್ರಾಮದಲ್ಲಿ ಹುಡುಕಾಟ ನಡೆಸಿದ್ದಾರೆ. ಬೆಳಗ್ಗೆ  ಗ್ರಾಮದ ಹೊರವಲಯದಲ್ಲಿ ಬಾಲಕಿಯ ಶವ ದೊರೆತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ […]

1 2 3